ನಿನ್ನೆ ೧೫. ೧. ೨೩ ಮುಂಜಾನೆ ಪುತ್ತೂರು ಹುಬ್ಬಳ್ಳಿ ಬಸ್ ನಲ್ಲಿ ಮಂಗಳೂರಿಗೆ ಪ್ರಯಾಣ . ಮಾಣಿ ಕಲ್ಲಡ್ಕ ನಡುವೆ ಅಲ್ಲಲ್ಲಿ ಹೊಸ ಕಾಂಕ್ರೀಟ್ ರಸ್ತೆ ಬಿಟ್ಟು ಕೊಟ್ಟಿರುವರು :ಉಳಿದಂತೆ ಧೂಳು ಮಯ . ಒಂದು ಗಂಟೆಯಲ್ಲಿ ಎಂದರೆ ೮. ೪೫ ಕ್ಕೆಲ್ಲಾ ಬಿಜೈ ಕೆ ಎಸ ಆರ್ ಟಿ ಸಿ ಬಸ್ ಸ್ಟ್ಯಾಂಡ್ ನಲ್ಲಿ . ರಸ್ತೆ ಬದಿ ಹೊಸತಾದ ರಸ್ತೆ ಬದಿ ಫುಟ್ ಪಾತ್ ನಲ್ಲಿ ಕದ್ರಿ ಪಾರ್ಕ್ ನತ್ತ ನಡಿಗೆ .ಚಳಿಗಾಲದ ಹಿತವಾದ ಸಮುದ್ರ ಮಾರುತ ;ಭಾನುವಾರ ವಾದುದರಿಂದ ಆಲಸ್ಯದಿಂದ ಹೊರ ಬರುತ್ತಿರುವ ಜನರು . ಬಿಜೈ ಚರ್ಚ್ ಬಳಿ ಮಾತ್ರ ಸ್ವಲ್ಪ ಸಂದಣಿ .
ಕದ್ರಿ ಪಾರ್ಕ್ ಈಗ ತಕ್ಕ ಮಟ್ಟಿಗೆ ಸುಂದರ ವಾಗಿದೆ .ಹಳೆಯ ಜಿಂಕೆ ಪಾರ್ಕ್ ನಲ್ಲಿ ಈಗ ಪ್ರಾಣಿಗಳು ಇಲ್ಲ .ಗಿಡ ಮರಗಳು ಹೆಚ್ಚು ಕಾಣಿಸುತ್ತವೆ . ಒಳಗೆ ಮತ್ತು ಹೊರಗೆ ಕೂಡಲು ಒಳ್ಳೆಯ ಆಸನ ವ್ಯವಸ್ಥೆ ಇದೆ .ಹೊರಗಡೆ ಟೇಬಲ್ ಕೂಡಾ ಇದ್ದು ಯುವಕ ಯುವತಿಯರು ಲ್ಯಾಪ್ ಟಾಪ್ ಇಟ್ಟು ಕೊಂಡು ವರ್ಕ್ ಫ್ರಮ್ ಗಾರ್ಡನ್ ನಲ್ಲಿ ಮಗ್ನ ರಾದರೆ ,ಇನ್ನು ಕೆಲವರು ಚೆಸ್ ಆಟದಲ್ಲಿ .
ಗುಡ್ಡದ ಪಶ್ಚಿಮ ಗಡಿಯಲ್ಲಿ ಸರ್ಕ್ಯೂಟ್ ಹೌಸ್ ಗೆ ತಾಗಿ ಕೊಂಡು ಇರುವ ಲಯನ್ಸ್ ಸಭಾ ಭವನದಲ್ಲಿ ಗಾಂಧಿ ವಿಚಾರ ವೇದಿಕೆ ಯ ಕಾರ್ಯಕ್ರಮ . ಗಾಂಧಿ ಟೊಪ್ಪಿ ಹಾಕಿಕೊಂಡು ಓಡಾಡುತ್ತಲಿರುವ ಕಾರ್ಯಕರ್ತರು . ದೂರದ ಕೊಪ್ಪಳ ,ಬೆಂಗಳೂರು ,ಬೆಳಗಾವಿ ಮತ್ತು ಕಲಬುರ್ಗಿ ಯಿಂದಲೂ ಆಗಮಿಸಿದ್ದ ಪ್ರತಿನಿಧಿಗಳು . ಮಿತ್ರರಾದ ಕ್ಸೆವಿಯರ್ ಡಿ ಸೋಜಾ ,ಗೋಪಾಲಕೃಷ್ಣ ಉಪಾಧ್ಯಾಯ ಮತ್ತು ಶಿವಪ್ರಸಾದ್ ಭಟ್ ಸಿಕ್ಕಿದರು .ಶಿವಪ್ರಸಾದ್ ದೂರದ ನೆಟ್ಟಣ ಕೊಂಬಾರಿನಿಂದ ಆಗಮಿಸಿಸಿದ್ದರು .
ಕಾರ್ಯಕ್ರಮ ಶ್ರೀ ಎಂ ಜಿ ಹೆಗ್ಡೆ ಅವರ ಕೃತಿ 'ಮಿನುಗು ನೋಟ'ದ ಬಿಡುಗಡೆ . ಗಾಂಧಿಯವರ ಬಗ್ಗೆ ನಡೆಯುತ್ತಿದೆ ಎನ್ನಲಾದ ತಪ್ಪು ಮಾಹಿತಿಗಳ ಪ್ರಚಾರಕ್ಕೆ ಅಧ್ಯಯನ ಮತ್ತು ಆಧಾರ ಸಹಿತ ಉತ್ತರ ಕೊಡುವ ಪ್ರಯತ್ನ .
ಶ್ರೀ ಸುಧೀಂದ್ರ ಕುಲಕರ್ಣಿ ಯವರು ಮಹಾತ್ಮಾ ಗಾಂಧಿ ಬಗ್ಗೆ ಅಧ್ಯಯನಕ್ಕಾಗಿ ದಕ್ಷಿಣ ಆಫ್ರಿಕಾ ದಲ್ಲಿನ ಅವರ ಟಾಲ್ಸ್ಟಾಯ್ ಮತ್ತು ಫೀನಿಕ್ಸ್ ಆಶ್ರಮ ,ಆಫ್ರಿಕಾ ಇತರ ದೇಶಗಳು ಮತ್ತು ಭಾರತದಲ್ಲಿ ಸಾಬರಮತಿ ಮತ್ತು ಸೇವಾಗ್ರಾಮ ಅಧ್ಯಯನ ಸಂದರ್ಶನ ಮತ್ತು ಅವರ ಕುರಿತ ಕೃತಿಗಳ ಆಳವಾದ ಅಧ್ಯಯನ ಮಾಡಿದವರು .ತಮ್ಮ ಮಾತಿನ ಆರಂಭದಲ್ಲಿಯೇ ಗಾಂಧಿಯವರ ಬಗ್ಗೆ ವಿಮರ್ಶೆ ಟೀಕೆ ಯನ್ನು ಸ್ವೀಕರಿಸ ಬೇಕು ಆದರೆ ಆಧಾರ ರಹಿತ ಆರೋಪಗಳನ್ನು ದ್ವೇಷ ಕೋಪ ರಹಿತವಾಗಿ ಉತ್ತರಿಸ ಬೇಕು ;ಗಾಂಧೀಜಿ ಮಡುತ್ತಿದ್ದುದೂ ಹಾಗೆಯೆ ಎಂದರು .
ಮುಖ್ಯ ಕಾರ್ಯಕ್ರಮ ಬಳಿಕ ಸಂವಾದ ಕಾರ್ಯಕ್ರಮ ಕೂಡಾ ಇತ್ತು . ಆರೋಗ್ಯಕರ ತೆರೆದ ಮನಸಿನ ವಿಚಾರ ವಿನಿಮಯ ಇಂದಿನ ತುರ್ತು ಅವಶ್ಯ .
ಸಭಯಲ್ಲಿ ಲೇಖಕಿ ಶ್ರೀಮತಿ ಭುವನೇಶ್ವರಿ ಹೆಗ್ಡೆ ಯವರನ್ನು ಭೇಟಿಯಾದದ್ದು ಬಹಳ ಸಂತೋಷ . ನನ್ನ ಬರಹಗಳನ್ನು ಓದಿ ಪ್ರೋತ್ಸಾಹಿಸಿದವರು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ