ಅಮೇರಿಕಾದಲ್ಲಿ ನಡೆದ ಸ್ವಾಮಿ ರಂಗನಾಥಾನಂದ ಅವರ ಒಂದು ಸಂದರ್ಶನದಲ್ಲಿ " ಸ್ವಾಮೀಜಿ ನೈಜ ಧರ್ಮ ಗುರು (ಸ್ವಾಮಿ)ಮತ್ತು ಕಪಟ ಗುರು (ಸ್ವಾಮಿ)ವಿಗೆ ಏನು ವ್ಯತ್ಯಾಸ .ನಿಜ ಗುರುವನ್ನು ಕಂಡು ಕೊಳ್ಳುವುದು ಹೇಗೆ?"ಎಂದು ಕೇಳಿದಾಗ ಅವರು ಕೊಟ್ಟ ಸರಳ ಉತ್ತರ .
ನಿಜ ತಾನು ಗುರು ಅಧ್ಯಯನ ಶೀಲನಾಗಿ ತಾನು ಕೂಡಾ ಸದಾ ವಿದ್ಯಾರ್ಥಿ ಆಗಿರುತ್ತಾನೆ (ನನ್ನ ಟಿಪ್ಪಣಿ :ನಮ್ಮಲ್ಲಿ ಬಹುತೇಕ ಗುರುಗಳು ತಾವು ಸರ್ವಜ್ಞಾನಿ ಎಂದು ತಿಳಿದು ಕೊಂಡು ಯಾವುದೇ ವಿಷಯ ಗೊತ್ತಿಲ್ಲ ,ಅಧ್ಯಯನ ಮಾಡಿ ಅಥವಾ ಯೋಚಿಸಿ ಹೇಳುತ್ತೇನೆ ಎಂದು ಹೇಳುವುದು ಕಡಿಮೆ ). ತಾನು ಬೋಧಿಸಿದ್ದನ್ನು ಸ್ವಯಂ ಪಾಲಿಸುತ್ತಾನೆ . (ಟಿಪ್ಪಣಿ :ಇದು ಬಹಳ ಮುಖ್ಯ ಇಲ್ಲಿ ಇತರರಿಗೆ ಸರಳ ಜೀವನ ಮಾಡಿ ಎಂದು ತಮ್ಮ ಜೇವನದಲ್ಲಿ ಐಷಾರಾಮಿ ಸಾಧನಗಳನ್ನು ಬಳಸುವುದು ,ಅರಿ ಷಡ್ವೈರಿ ಗಳನ್ನು ದೂರ ಮಾಡಿ ಎಂದು ಕ್ರೋಧ ಮೋಹ ಗಳನ್ನು ಬಿಡದಿರುವುದು ಕಾಣುತ್ತೇವೆ ).
ಬಹಳ ಮುಖ್ಯವಾಗಿ ನಿಜ ಗುರುವು ಧರ್ಮವನ್ನು ಮಾರಾಟದ ಸರಕಾಗಿ ಮಾಡುವದಿಲ್ಲ .(ಟಿಪ್ಪಣಿ ; ಒಂದು ಸಾವಿರ ರುಪಾಯಿಗೆ ಬದುಕುವ ಕಲೆ ,ಎರಡು ಸಾವಿರ ರುಪಾಯಿಗೆ ಸಾಕ್ಷಾತ್ಕಾರ ಇತ್ಯಾದಿ ). ಚುನಾವಣಾ ಕಾಲದಲ್ಲಿ ರಾಜಕಾರಿಣಿಗಳು ಕೊಡುವಂತೆ ದಿಢೀರ್ ಪರಿಹಾರದ ಆಶ್ವಾಸನೆ ಕೊಡುವುದಿಲ್ಲ .
ಗುರುವನ್ನು ಸ್ವೀಕಾರ ಮಾಡುವ ಮೊದಲು ಶಿಷ್ಯನು ಹಗಲಿರುಳು ಹಲವು ದಿನ ಅವರ ಆಚಾರ ವಿಚಾರಗಳನ್ನು ಕೂಲಂಕುಷ ವಾಗಿ ಪರಿಶೀಲಿಸ ಬೇಕು ಎಂದು ರಾಮಕೃಷ್ಣ ಪರಮ ಹಂಸ ರು ಹೇಳಿದ್ದಾರೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ