ತಿಂಡಿ ಪುರಾಣ
ಇಂದು ನಮ್ಮಲ್ಲಿ ಮಸಾಲೆ ದೋಸೆ .ಈ ತಿಂಡಿಯನ್ನು ಪ್ರಚುರ ಪಡಿಸಿದವರು ಮದ್ರಾಸ್ ವುಡ್ ಲ್ಯಾಂಡ್ಸ್ ಹೋಟೆಲ್ ನ ಕೃಷ್ಣ ಭಟ್ಟರು ಎಂಬ ಪ್ರತೀತಿ . ಉದ್ದಿನ ದೋಸೆಗೆ ಆಲೂ ಪಲ್ಯ .ಮುಂದೆ ಇದು ರವಾ ದೋಸೆಗೂ ಬಂತು .ಮಸಾಲೆ ಕೂಡಾ ಪಾಲಕ್ ,ಮೈಸೂರು ಇತ್ಯಾದಿ ಹುಟ್ಟಿಕೊಂಡವು . ಈರುಳ್ಳಿ ತುಟ್ಟಿಯಾದಾಗ ಆಲೂ ಗಡ್ಡೆ ಹೆಚ್ಚು ಇರುವುದು ಮತ್ತು ವೈಸ್ ವರ್ಸಾ . ಕೆಲವು ಕಡೆ ಆಲೂ ಬದಲಿಗೆ ಬೀಟ್ ರೂಟ್ ಇತ್ಯಾದಿ ಬರುವುದು . ಚೆನ್ನೈ ವಿ ಜಿ ಪಿ ಬೀಚ್ ನ ಬೃಹತ್ ಮಸಾಲೆ ದೋಸೆ ಬಗ್ಗೆ ಹಿಂದೆ ಬರೆದಿರುವೆನು .ಮಸಾಲಾ ದೋಸಾ ಮೆಷಿನ್ ಕೂಡಾ ಬಂದಿದೆ .
ಎರಡನೇ ಮಹಾಯುದ್ಧ ಸಮಯದಲ್ಲಿ ಅಕ್ಕಿ ಅಭಾವ ಆದಾಗ ಬೆಂಗಳೂರಿನ ಹೆಸರಾಂತ ಎಂ ಟಿ ಆರ್ ಹೋಟೆಲ್ ನ ಮೈಯ್ಯರು ಅದರ ಬದಲಿಗೆ ರವೆ (ಸಜ್ಜಿಗೆ )ಉಪಯೋಗಿಸಿ ಪ್ರಯೋಗ ಮಾಡಿದರು .ಈಗ ಅವರ ರವಾ ಇಡ್ಲಿಯೇ ಸ್ವಲ್ಪ ಹೆಚ್ಚು ಮುಂದೆ .
ಎಮರ್ಜೆನ್ಸಿ ಸಮಯದಲ್ಲಿ ಹೋಟೆಲ್ ದರ ನಿಗದಿ ಪಡಿಸಿ ಸರಕಾರ ಆಜ್ಞೆ ಹೊರಡಿಸಿತು . ಗುಣಮಟ್ಟಕ್ಕೆ ಹೆಸರಾದ ಎಂ ಟಿ ಆರ್ ಹೋಟೆಲ್ ,ತಮಗೆ ಆ ರೇಟ್ ನಲ್ಲಿ ನಡೆಸಲು ಅಸಾಧ್ಯ ಎಂದು ಮುಚ್ಚಿದರು . ಪ್ರಜಾವಾಣಿ ಸಂಪಾದಕ ರಾಗಿದ್ದ ಟಿ ಎಸ ಆರ್ ತಮ್ಮ ಜನಪ್ರಿಯ ಛೂಬಾಣ ದಲ್ಲಿ ಬಾಗಿಲನು ತೆರೆದು ಸೇವೆಯನು ಕೊಡು ಹರಿ (ಶ್ಚಂದ್ರ ಮೈಯ್ಯ )ಯೇ ಎಂದು ಬರೆದರು .ಈ ಕಾಲದಲ್ಲಿ ಯೇ ಅವರು ಎಂ ಟಿ ಆರ್ ಕೊಂಡಿಮೆಂಟ್ಸ್ ಆರಂಭ ಮಾಡಿ ಯಶಸ್ವಿ ಆದರು.ಮುಂದೆ ಹೊಟೇಲ್ ಆರಂಭ ಆಯಿತು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ