ಕಾಲಿಗೆ ನೀರು ಬರುವುದು
ನೆಂಟರು ಮನೆಗೆ ಬಂದಾಗ ಕಾಲಿಗೆ ನೀರು ಬಂತೋ ಎಂದು ಕೇಳುತ್ತಿದ್ದರು . ಕಾಯಿಲೆ ಶರೀರಕ್ಕೆ ನೆಂಟನಾಗಿ ಬಂದಾಗ ಕಾಲಿಗೆ ಕೆಲವೊಮ್ಮೆ ನೀರು ಬರುವುದು .ಇದರಿಂದ ಕಾಲು ಭಾರ ಭಾರ ಆಗುವುದು .ಚಪ್ಪಲಿ ಟೈಟ್ ಆಗಿ ಹಿಂಸೆ ಆಗುವುದು . ದೂರದ ಪ್ರಯಾಣ (ಕು ಳಿತು ಕೊಂಡು ),ಗರ್ಭಿಣಿ ಯರಲ್ಲಿ ಮತ್ತು ಸ್ತ್ರೀಯರಲ್ಲಿ ಮುಟ್ಟಿನ ಸಮಯ ಸ್ವಲ್ಪ ನೀರು ಹಾಗೆಯೇ ಬಂದು ಹೋಗುವುದು ಕಾಯಿಲೆ ಇರಲಿಕ್ಕಿಲ್ಲ .
ಇನ್ನು ಕೆಲವು ಔಷಧಿಗಳನ್ನು ತೆಗೆದು ಕೊಳ್ಳುವಾಗ ಸ್ವಲ್ಪ ನೀರು ಬರಬಹುದು .ಉದಾ ರಕ್ತದ ಒತ್ತಡಕ್ಕೆ ಕೊಡುವ ಆಮ್ಲೋ ಡಿಪಿನ್ , ನಿಫೆ ಡೆಫಿನ್ ,ಸಕ್ಕರೆ ಕಾಯಿಲೆಗೆ ಕೊಡುವ ಪೆಯೋ ಗ್ಲಿಟಝೋನ್ ,ಇನ್ನು ಕೆಲ ನೋವು ನಿವಾರಕಗಳು ಮತ್ತು ಸ್ಟ್ರೆರೋಯಿಡ್ .ಇದು ಔಷಧಿ ನಿಲ್ಲಿಸಿದಾಗ ನಿವಾರಣೆ ಆಗುವುದು . ಕೆಲವೊಮ್ಮೆ ವೈದ್ಯರು ಸ್ವಲ್ಪ ಬಾವು ಇದ್ದರೆ ಪರವಾಗಿಲ್ಲ ,ಔಷಧಿ ಮುಂದು ವರಿಸಲು ಸಲಹೆ ಮಾಡುವರು
ಎರಡು ಕಾಲುಗಳಲ್ಲಿ ಏಕಕಾಲಕ್ಕೆ ನೀರು ಬರುವ ಕಾಯಿಲೆಗಳು :
೧.ಕಾಯಿಲೆಯಿಂದ ಸೋತ ಹೃದಯ
ಹೃದಯದ ಕಾರ್ಯ ಕ್ಷಮತೆ ಕುಂದಿದರೆ ರಕ್ತದ ಚಲನೆ ಕುಂಠಿತ ವಾಗಿ ಕಾಲುಗಳಲ್ಲಿ ನೀರು ತುಂಬುವುದು .ಈ ರೋಗಿಗಳಲ್ಲಿ ಹೃದಯ ರೋಗ ಲಕ್ಷಣ ವಾದ ಉಸಿರು ಕಟ್ಟುವುದು ,ಆಯಾಸ ಕೂಡ ಇರುವದು . ಇಲ್ಲಿ ಕುಳಿತು ಕೊಂಡಾಗ ರೋಗಿಯ ಆಯಾಸ ಮತ್ತು ದಮ್ಮು ಕಡಿಮೆ ಯಾಗಿ ಮಲಗಿದಾಗ ಹೆಚ್ಚಾಗ ಬಹುದು
೨. ಮೂತ್ರ ಪಿಂಡದ ಕಾಯಿಲೆಗಳು
ಮೂತ್ರ ಪಿಂಡಗಳ ವೈಫಲ್ಯ ಮತ್ತು ನೆಫ್ರೈಟಿಸ್ ,ನೆಫ್ರೋಟಿಕ್ ಸಿಂಡ್ರೋಮ್ ಕಾಯಿಲೆಗಳಲ್ಲಿ ಕಾಲಲ್ಲಿ ನೀರು ಬರ ಬಹುದು .ಶರೀರದಿಂದ ನೀರು ಮತ್ತು ಉಪ್ಪು ಹೊರ ಹಾಕುವ ಅಂಗ ಕಿಡ್ನಿ ಅಲ್ಲವೇ .ಕಿಡ್ನಿ ಕಾಯಿಲೆಗಳಲ್ಲಿ ಮಖದಲ್ಲಿ ಕಣ್ಣಿನ ಸುತ್ತ ನೀರು ಮೊದಲು ಬರುವುದು ,ಆಮೇಲೆ ಕಾಲಿನಲ್ಲಿ .
೩. ಲಿವರ್ ಅಥವಾ ಯಕೃತ್ ಕಾಯಿಲೆ .
ಮದ್ಯಪಾನ ಅಥವಾ ವೈರಸ್ ಸೋಂಕಿನಿಂದ ಲಿವರ್ ನಲ್ಲಿ ಸಿರೋಸಿಸ್ ಎಂಬ ಕಾಯಿಲೆ ಬರುವುದು .ಇದರಿಂದ ಹೊಟ್ಟೆ ಮತ್ತು ಕಾಲಿನಲ್ಲಿ ನೀರು ಬರುವುದು ;ಹೆಚ್ಚಾಗಿ ಹೊಟ್ಟೆಯಲ್ಲಿ ಮೊದಲು ಆಮೇಲೆ ಕಾಲಿಗೆ .,ಲಿವರ್ ಸಸಾರ ಜನಕ ಉತ್ಪತ್ತಿ ಮಾಡುವ ಕಾರ್ಖಾನೆ .ಅದು ಸ್ಟ್ರೈಕ್ ಮಾಡಿದರೆ ರಕ್ತದಲ್ಲಿ ಆಲ್ಬುಮಿನ್ ಎಂಬ ಸಸಾರಜನಕ ಕಡಿಮೆ ಆಗುವುದು .ಈ ಪ್ರೊಟೀನ್ ರಕ್ತದೊಳಗೆ ನೀರು ಹಿಡಿದು ಇಟ್ಟು ಕೊಳ್ಳಲು ಅವಶ್ಯಕ
೪ . ಅಪೌಷ್ಟಿಕತೆ
ಸಸಾರಜನಕ ಕಡಿಮೆ ಇರುವ ಆಹಾರ ಸೇವನೆ ಮತ್ತು ಕಾಯಿಲೆಗಳಿಂದ ಅದರ ಜೀರ್ಣ ಕ್ರಿಯೆಯಲ್ಲಿ ಲೋಪ ಆದರೂ ಕಾಲಿನಲ್ಲಿ ನೀರು ಬರಬಹುದು .ನಾವು ಪ್ರಾಥಮಿಕ ಶಾಲೆಯಲ್ಲಿ ವಿಟಮಿನ್ ಬಿ ೧ ಅಥವಾ ಥಯಾಮಿನ್ ಕೊರತೆಯಿಂದ ಬೆರಿ ಬೆರಿ ಎಂಬ ರೋಗ ಬರುವುದು ಎಂದು ಕಲಿತಿದ್ದೇವೆ .ಈ ರೋಗ ಅಲ್ಲಲ್ಲಿ ಕಾಣಿಸಿ ಕೊಳ್ಳುತ್ತಿದೆ .
ಇನ್ನು ಒಂದೇ ಕಾಲಿನಲ್ಲಿ ನೀರು ಬಂದರೆ ಅದು ಫೈಲೇರಿಯಾ (ಆನೆಕಾಲು )ರೋಗ ಇರ ಬಹುದು ,ಇಲ್ಲಿ ದುಗ್ಧ ನಾಳಗಳು ಬ್ಲಾಕ್ ಆಗುವುವು .ಇನ್ನು ಕಾಲಿನ ಅಭಿಧಮನಿಯಲ್ಲಿ ರಕ್ತ ಹೆಪ್ಪುಗಟ್ಟಿದರೆ ,ಅಭಿಧಮನಿಗಳು ಅಶಕ್ತವಾಗಿ ಉಬ್ಬಿಕೊಂಡಾಗ (Varicose Veins ) ನೀರು ಬರುವುದುಂಟು .ನೋವು ಸಹಿತ ಚರ್ಮ ಕೆಂಪಾಗಿ ನೀರು ತುಂಬಿ ಕೊಂಡರೆ ಚರ್ಮ ಮತ್ತು ಕಾಲಿನ ಸೋಂಕು (Infection )ಇರಬಹುದು .
ನೋಡಿದಿರಾ ಕಾಲಿನ ನೀರಿಗೆ ಎಷ್ಟು ಕಾರಣಗಳು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ