ಅಪಾಯಕಾರಿ ಗೊರಕೆ ರೋಗದ( Obstructive Sleep Apnea )ಚಿಕಿತ್ಸೆ
ಗಂಟಲ ಸುತ್ತ ಮುತ್ತ ಇರುವ ಶ್ವಾಸ ನಾಳ ಉಸಿರಾಟ ವೇಳೆ ಸಂಕುಚಿತ ಗೊಳ್ಳುವುದೇ ಈ ರೋಗದ ಮೂಲ .ನಿದ್ರೆಯ ವೇಳೆ ಗಂಟಲ ಮಾಂಸ ಖಂಡಗಳು ವಿಶ್ರಾಂತಿ ಯಲ್ಲಿ ಇದ್ದು ಹೊರಗಿನ ಒತ್ತಡ ಜಾಸ್ತಿ ಆದರೆ( ಉದಾ ಸ್ಥೂಲ ಕಾಯದವರಲ್ಲಿ ಕೊಬ್ಬು ) ಮತ್ತು ಗಂಟಲಿನ ಒಳಗೇ ಟಾನ್ಸಿಲ್ ಮತ್ತು ಸ್ವಲ್ಪ ಮುಂದೆ ದೊಡ್ಡ ಗಾತ್ರದ ನಾಲಿಗೆ ಇತ್ಯಾದಿ ಅಡ್ಡ ಬಂದು ಉಸಿರಾಟಕ್ಕೆ ಅಡಚಣೆ ಆಗುವುದು .
ಅದಕ್ಕೆ ಮೊದಲು ತೂಕ ಇಳಿಸಲು ಆದ್ಯತೆ ಕೊಡಬೇಕು .ಅವಶ್ಯವಿದ್ದರೆ ತೂಕ ಇಳಿಸಲು ಇರುವ ಶಸ್ತ್ರ ಚಿಕಿತ್ಸೆಗೂ ಮೊರೆ ಹೋಗ ಬೇಕಾಗ ಬಹುದು (Bariatric Surgery ). ಮದ್ಯಪಾನ ಮತ್ತು ಮಂಪರು ಬರುವ ಔಷಧಿಗಳಿಗೆ ವಿದಾಯ ಹೇಳಬೇಕು .ಇವುಗಳಿಂದ ಶ್ವಾಸ ನಾಳ ದ ಮಾಂಸ ಖಂಡಗಳು ಇನ್ನೂ ದುರ್ಬಲವಾಗಿ ಅದನ್ನು ಅದನ್ನು ತೆರೆದು ಇಡಲು ಅಸಾಧ್ಯವಾಗಿ ಮುಚ್ಚಿ ಕೊಂಡಾಗ ಉಸಿರು ತತ್ಕಾಲ ಸ್ಥಬ್ಧ ಆಗುವುದು . ನೇರ ಅಥವಾ ಬೋರಲು ಬದಲಿಗೆ ಒಂದು ಮಗ್ಗುಲಿಗೆ ಮಲಗಿದರೆ ಕೆಲವರಿಗೆ ಆಶ್ವಾಸ ಸಿಗುವುದು
ಇನ್ನು ಕೆಲವು ವಿಶಿಷ್ಟ ಉಪಕರಣಗಳ ಮೂಲಕ ಧನಾತ್ಮಕ ಒತ್ತಡ ದಲ್ಲಿ ಶ್ವಾಸ ನಾಳಕ್ಕೆ ಗಾಳಿ ಯನ್ನು ಪಂಪ್ ಮಾಡುವುದು .ಇದರಲ್ಲಿ ಮೋಟಾರ್ ಇರುವ ಮೆಷಿನ್ ಗಾಳಿಯನ್ನು ಮೂಗು ಅಥವಾ ಬಾಯಿ ಮೂಲಕ ಒತ್ತಡದಲ್ಲಿ ಬಿಡುವುದು. ಇದರಲ್ಲಿ ಸಿ ಪೇಪ್ ಮತ್ತು ಬಿ ಪೇಪ್ ಎಂಬ ಎರಡು ವಿಧದ ಯಂತ್ರಗಳು ಇವೆ .ಮೊದಲನೆಯದು ಸದಾ ಹೆಚ್ಚಿನ ಒತ್ತಡದಲ್ಲಿ ವಾಯು ಸರಬರಾಜು ಮಾಡಿದರೆ ಇನ್ನೊಂದು ಅವಶ್ಯ ನೋಡಿಕೊಂಡು ಪಂಪ್ ಮಾಡುವುದು ಇದರಿಂದ ಶ್ವಾಸ ನಾಳ ಸಂಕುಚನ ಗೊಳ್ಳುವುದನ್ನು ತಡೆಗಟ್ಟಲಾಗುತ್ತದೆ .ಇದನ್ನು ಇಟ್ಟು ಕೊಂಡೆ ಮಲಗ ಬೇಕಾಗುವುದು .
ಇನ್ನು ಬಾಯಲ್ಲಿ ಕೆಲವು ಕೃತಕ ಸಾಧನಗಳನ್ನು ಇಟ್ಟು ಮಲಗುವುದು ,ಇದರಿಂದ ನಾಲಿಗೆ ಅಡ್ಡ ಬರುವುದನ್ನು ತಡೆಗಟ್ಟ ಬಹುದು .,
ಇವು ಯಾವುವೂ ಉಪಯೋಗಕ್ಕೆ ಬರದಿದ್ದರೆ ಗಂಟಲು ,ದವಡೆ ,ಶ್ವಾಸ ನಾಳದ ಸುತ್ತ ಶಸ್ತ್ರ ಚಿಕಿತ್ಸೆ ಮಾಡಿ ಸರಿ ಪಡಿಸಲು ಯತ್ನಿಸುವರು .ಅದರ ಯಶಸ್ಸು ಒಂದೇ ತರಹ ಇರಲಾರದು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ