ಜೋಕೆ! ನಾನು ಬಳ್ಳಿಯ ಮಿಂಚು
ಇತ್ತೀಚಿಗೆ ಸಿಡಿಲು ಬಡಿದು ಆಗುವ ಅನಾಹುತಗಳು ಹೆಚ್ಚಿವೆ .ಏರುತ್ತಿರುವ ಭೂಮಿಯ ತಾಪಮಾನ ಇದಕ್ಕೆ ಕಾರಣ ಎಂಬ ವಾದ ಇದೆ. ಸಿಡಿಲಿನ ಬಗ್ಗೆ ಜನರಲ್ಲಿ ಕೆಲವು ಕಲ್ಪನೆಗಳು ಇವೆ .
ನಮ್ಮಲ್ಲಿ ಮಿಂಚು ಸಿಡಿಲು ಬಂದಾಗ ಕಬ್ಬಿಣದ ಕತ್ತಿ (ಮಚ್ಚು ) ಮನೆಯಿಂದ ಹೊರಗೆ ಎಸೆಯುವರು .ಅದು ಮಿಂಚನ್ನು ಆಕರ್ಷಿಸಿ ಮನೆಗೆ ಬಡಿಯದಂತೆ ಮಾಡುವುದು ಎಂಬ ನಂಬಿಕೆ .ಒಂದು ವೇಳೆ ಆ ಆಯುಧಕ್ಕೆ ಮಿಂಚು ಬಡಿದರೆ ಅದು ಚಿನ್ನವಾಗುವುದು ಎಂದೂ ಹೇಳುತ್ತಿದ್ದರು . ಸಂಕಷ್ಟದ ಸಮಯವೂ ಒಂದು ಸದಾಶಯ .ಆದರೆ ಇವು ಮೂಢನಂಬಿಕಗಳು . ಸಿಡಿಲು ಬಡಿಯುವುದನ್ನು ಯಾವ ರೀತಿಯೂ ತಪ್ಪಿಸಲು ಆಗದು .
ಇನ್ನು ಗುಡುಗು ಮಿಂಚು ಇರುವಾಗ ದೊಡ್ಡ ಮರದ ಅಡಿಯಲ್ಲಿ ನಿಂತರೆ ಅಪಾಯ ಜಾಸ್ತಿ .ಕೂಡಲೇ ಯಾವುದಾದರೂ ಕಟ್ಟಡದ ಒಳಗೆ ಆಶ್ರಯ ಪಡೆಯುವುದು ಉತ್ತಮ .ಮನೆಯ ಒಳಗೆ ಕೂಡ ತಂತಿ ,ಪೈಪ್ ,ಸ್ವಿಚ್ ಮತ್ತು ಫೋನ್ ಇತ್ಯಾದಿಗಳಿಂದ ದೂರ ಇರ ಬೇಕು ..ಸ್ನಾನ ಗೃಹದ ಶವರ್ ನಿಂದಲೂ .ಮನೆಗೆ ಸಿಡಿಲು ಬಡಿದಾಗ ಅದು ಮೇಲೆ ಹೇಳಿದ ಮಾರ್ಗಗಳ ಮೂಲಕ ಪ್ರವಹಿಸುವ ಸಾಧ್ಯತೆ ಹೆಚ್ಚು .ಮೊಬೈಲ್ ಫೋನ್ ಸಿಡಿಲನ್ನು ಆಕರ್ಷಿಸದು ,ಲ್ಯಾಂಡ್ ಲೈನ್ ನಿಂದ ದೂರ ಇರ ಬೇಕು .ಟಿ ವಿ ಕೇಬಲ್ ಕೂಡಾ ಅಪಾಯ .
ಕಾರಿನ ಒಳಗೆ ಕುಳಿತಾಗ ಅಪಾಯ ಕಡಿಮೆ .ಯಾಕೆಂದರೆ ಲೋಹದ ಬಾಡಿ ಮಿಂಚನ್ನು ತನ್ನ ಮೂಲಕ ನೆಲಕ್ಕೆ ಒಯ್ಯುವುದು .ಆದರೆ ಲೋಹದ ಬಾಗಿಲುಗಳಿಂದ ದೂರ ಇರ ಬೇಕು
ಮನೆ ಕಟ್ಟಡಗಳನ್ನು ಮಿಂಚು ವಾಹಕ ಗಳನ್ನು ಅಳವಡಿಸುವುದರಿಂದ ಆಗ ಬಹುದಾದ ಹಾನಿ ಕಡಿಮೆ ಮಾಡ ಬಹುದು . ಜನರು ತಿಳಿದಂತೆ ಇವು ಸಿಡಿಲನ್ನು ತಮ್ಮ ಕಡೆ ಆಕರ್ಷಿಸುವುದಿಲ್ಲ .ತಮ್ಮ ಸನಿಹ ಬಡಿದರೆ ಸಾಧ್ಯವಾದಷ್ಟು ಭೂಮಿಗೆ ಅದನ್ನು ಒಯ್ಯುವ ಕೆಲಸ ಮಾಡುವವು .
ಸಿಡಿಲು ಅಗಾಧ ಶಕ್ತಿಯ ನೇರ ವಿದ್ಯುತ್ .ಇದರ ಶಕ್ತಿ ಮತ್ತು ದೂರ ಹೊಂದಿ ಕೊಂಡು ಮನುಷ್ಯನಿಗೆ ಅಪಾಯ ಬರುವುದು .ಸಾಮಾನ್ಯ ವಿದ್ಯುತ್ ಶಾಕ್ ಬಡಿದಾಗ ಆಗುವ ಗಾಯಗಳಿಗಿಂತ ಹಲವು ಪಟ್ಟು ಅಧಿಕ ತೀವ್ರತೆ .ಹೃದಯ ಕ್ರಿಯೆ ನಿಲುಗಡೆ ,ಮೆದುಳಿನ ಮೇಲೆ ವಿದ್ಯುತ್ ಪ್ರವಾಹ ,ಮಾಂಸ ಖಂಡಗಳ ಹನನ ಮತ್ತು ಸುಟ್ಟ ಗಾಯ ,ಬಹು ಅಂಗಾಂಗ ವೈಫಲ್ಯ ಇತ್ಯಾದಿ ಗಳು ಪ್ರಾಣಾಂತಕ ಆಗ ಬಹುದು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ