ಸರಳ ಸಂಕೀರ್ಣತೆ
ನಾನು ಮಂಗಳೂರಿನಲ್ಲಿ ಇದ್ದಾಗ ಉಪ್ಪಳದ ಕೆ ಎನ್ ಎಚ್ ಆಸ್ಪತ್ರೆಗೆ ನಿಯಮಿತ ಭೇಟಿ ನೀಡುತ್ತಿದ್ದೆ .ಸುತ್ತ ಮುತ್ತಲಿನ ಹಳ್ಳಿಯವರಿಗೆ ಇದರಿಂದ ಪ್ರಯೋಜನ ಆಗುತ್ತಿತ್ತು .
ಒಂದು ಬಾರಿ ಓರ್ವ ತಾಯಿ ಯಾವುದೊ ಕಾಯಿಲೆಗೆ ದಾಖಲು ಆಗಿದ್ದರು . ಡಿಸ್ಚಾರ್ಜ್ ಆಗಿ ಹೋಗುವಾಗ ನನ್ನಲ್ಲಿ ರಹಸ್ಯವಾಗಿ ಒಂದು ವಿನಂತಿ ಮಾಡಿದರು . ತನ್ನ ಬಿಲ್ ಸ್ವಲ್ಪ ಏರಿಸಿ ಬರೆದು ಕೊಡಬಹುದೋ ?ಎಂಬುದೇ ಅವರ ಬೇಡಿಕೆ .ನನಗೆ ಆಶ್ಚರ್ಯ ಆಯಿತು . ಸರಕಾರಿ ಕಂಟ್ರಾಕ್ಟರ್ ಗಳು ಏರಿಸಿ ಬಿಲ್ ಬರೆಯುವರು ಎಂದು ಕೇಳಿದ್ದೆ .ತನ್ನ ಮನೆಯವರೇ ಪಾವತಿ ಮಾಡುವ ಬಿಲ್ ಗೆ ಹೀಗೆ ಏಕೆ ಮಾಡುವರು?
ವಿಚಾರಿಸಿದಾಗ ತಿಳಿಯಿತು . ಆ ಪ್ರದೇಶದಲ್ಲಿ ಸಾಮಾನ್ಯವಾಗಿ ಇರುವಂತೆ ಇವರ ಮಗ ಕೂಡಾ ಗಲ್ಫ್ ಉದ್ಯೋಗಿ .ಆತನ ತಾಯಿ ಹೆಂಡತಿ ಮಕ್ಕಳು ಊರಿನಲ್ಲಿ ಇದ್ದಾರೆ . ಮಗ ಅಲ್ಲಿ ಕಷ್ಟ ಪಟ್ಟು ದುಡಿಯುತ್ತಿದ್ದಾನೆ .ತಾನು ಸೊಸೆ ಮೊಮ್ಮಗುವಿಗೆ ಪ್ರೀತಿಯಲ್ಲಿ ಏನಾದರೂ ಕೊಂಡು ಕೊಡಲು ಕಾಸು ಕೇಳಲು ಸಂಕೋಚ .ಆದರೆ ಔಷಧೋಪಚಾರಕ್ಕೆ ಎಂದರೆ ಮಗನಿಗೆ ಬೇಸರ ಆಗದು .ಆದ್ದರಿಂದ ಆ ಬಾಬತ್ತಿನಲ್ಲಿ ಸ್ವಲ್ಪ ದುಡ್ಡು ಶೇಖರಿಸುವ ಆಲೋಚನೆ .ನನಗೆ ತಿಳಿದಂತೆ ಈ ತಾಯಿಯೂ ಒಳ್ಳೆಯವರು . ನಾನು ಏನೋ ಸಮಾಧಾನ ಮಾಡಿ ಕಳುಹಿಸಿದೆ . ಮೇಲ್ನೋಟಕ್ಕೆ ಸರಳವಾಗಿ ಕಾಣುವ ಜೀವ ಜೀವನಗಳಲ್ಲಿ ಕೂಡಾ ಎಷ್ಟು ಸಂಕೀರ್ಣತೆ ಅಡಗಿದೆ ಎಂದು ಯೋಚಿಸ ತೊಡಗಿದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ