ಡಾ ಎಂ ಕೆ ಭಂಡಿ
ಹಿಂದೆ ನಾನು ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಹತ್ತಿರ ದ ಮಂಗಳೂರು ವಿಶ್ವ ವಿದ್ಯಾಲಯದಿಂದ ಅಧ್ಯಾಪಕರು,ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಚಿಕಿತ್ಸೆಗೆ ಬರುತ್ತಿದ್ದರು . ಇವರಲ್ಲಿ ಓರ್ವ ಹಿರಿಯರು ಬಹುಪಾಲು ಎಲ್ಲರಿಗೂ ಸಂಗಾತಿಯಾಗಿ ಸಹಾಯಕ್ಕೆ ಬರುತ್ತಿದ್ದರು . ಹಾಗೆ ಪರಿಚಯ ಆದವರು ಡಾ ಎಂ ಕೆ ಭಂಡಿ .ಅವರು ವಿಶ್ವ ವಿದ್ಯಾಲಯದ ಮುಖ್ಯ ಲೈಬ್ರರಿಯನ್ ಆಗಿದ್ದರು .
ಮೊದಲೇ ನಾನು ಪುಸ್ತಕ ಪ್ರಿಯ ಮತ್ತು ಅದರ ಬೇಟೆ ಆಡುವವನು . ನಾನು ಅತ್ಯಂತ ಗೌರವಿಸುವ ಮತ್ತು ಕರ್ನಾಟಕದ ವಿದ್ಯಾಕ್ಷೇತ್ರದ ಧ್ರುವ ತಾರೆ ಡಾ ಡಿ ಸಿ ಪಾವಟೆಯವರು ಅನೇಕ ಗಣಿತ ಪಠ್ಯ ಪುಸ್ತಕಗಳ ಜೊತೆ ಆತ್ಮ ಚರಿತಾತ್ಮಕವಾದ ಎರಡು ಕೃತಿಗಳನ್ನು ಬರೆದಿದ್ದು ನಾನು ಅವುಗಳನ್ನು ವಾಚನಾಲಯದಿಂದ ತಂದು ಓದಿದ್ದೆ .ಅವುಗಳನ್ನು ಪುನಃ ಓದಬೇಕೆನಿಸಿದಾಗ ಸಿಗಲಿಲ್ಲ . ಔಟ್ ಒಫ್ ಪ್ರಿಂಟ್ . ನಾನು ಶ್ರೀ ಭಂಡಿಯವವನ್ನು ಕೇಳಿಕೊಳ್ಳಲು 'ಸಾರ್ ನೀವು ಚಿಂತಿಸ ಬೇಡಿ "ಎಂದು ಕರ್ನಾಟಕ ವಿಶ್ವವಿದ್ಯಾಲಯದ ಲೈಬ್ರರಿಯಲ್ಲಿ ಇದ್ದ ಎರಡೂ ಕೃತಿಗಳನ್ನು ಜೆರಾಕ್ಸ್ ಮಾಡಿ ಬೈಂಡ್ ಹಾಕಿಸಿ ಕೊಟ್ಟರು .ನನ್ನಿಂದ ಯಾವುದೇ ಪ್ರತಿಫಲ ತೆಗೆದು ಕೊಳ್ಳಲಿಲ್ಲ .ಮುಂದೆ ಕರ್ನಾಟಕದ ರಾಜ್ಯಪಾಲರಾಗಿ ಒಳ್ಳೆಯ ಹೆಸರು ಪಡೆದಿದ್ದ ಶ್ರೀ ಧರ್ಮವೀರ ಅವರ ಆತ್ಮ ಚರಿತ್ರೆಯನ್ನೂ ಅದೇ ಪ್ರಕಾರ ತೆಗೆಸಿ ಕೊಟ್ಟರು .
ಇವರ ಮಾರ್ಗದರ್ಶನದಲ್ಲಿ ಅನೇಕ ವಿದ್ಯಾರ್ಥಿಗಳು ಪಿ ಎಚ್ ಡಿ ಮಾಡಿದ್ದಾರೆ .ಫುಲ್ ಬ್ರೈಟ್ ಸ್ಕಾಲರ್ ಆಗಿದ್ದ ಇವರಿಗೆ ಅನೇಕ ಗೌರವಗಳು ಸಂದಿವೆ .
ನಾಳೆ ನನ್ನ ಪುಸ್ತಕ ಬಿಡುಗಡೆ ಸಂದರ್ಭ ತಟ್ಟನೆ ಅವರ ನೆನಪಾಗಿ ಫೋನ್ ಮಾಡಿ ಸಂಪರ್ಕಿಸಿದೆ .ಈಗ ಬೆಂಗಳೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ . ಅವರಿಗೆ ಅರೋಗ್ಯ ,ಮನಶಾಂತಿ ಕೋರಿದಾಗ ತುಂಬಾ ಸಂತೋಷ ಪಟ್ಟರು .ಅವರ ಫೋನ್ ಡೈರೆಕ್ಟರಿ ಯಲ್ಲಿ ನನ್ನ ಹೆಸರು ಇನ್ನೂ ಇಟ್ಟು ಕೊಂಡಿರುವರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ