ಬಹುಮುಖ ಪ್ರತಿಭೆಯ ಕಲಾವಿದ ಶ್ರೀನಿವಾಸನ್
ಮಲಯಾಳ ಭಾಷೆಯ ಪ್ರತಿಭಾವಂತ ಕಲಾವಿದ ಶ್ರೀನಿವಾಸನ್ . ನಟ , ಚಿತ್ರ ಕತೆ ಬರಹಗಾರ ,ನಿರ್ದೇಶಕ ,ತಯಾರಕ ಎಲ್ಲಾ ಸಮ್ಮಿಳಿತ . ತಮ್ಮ ಸುಂದರವಲ್ಲ ಎನ್ನುವ ರೂಪ ,ಕಪ್ಪು ಮೈ ಬಣ್ಣವನ್ನೇ ಬಂಡವಾಳ ಮಾಡಿ ಯಶಸ್ಸು ಕಂಡ ಅಪರೂಪದ ಪ್ರತಿಭೆ .ಇವರು ಬರೆದ ಸಂಭಾಷಣೆಗಳು ಒಳ್ಳೆಯ ಪಂಚ್ ಹೊಂದಿದ್ದು ಜನಪ್ರಿಯ .
ಮೊನ್ನೆ ಟಿ ವಿ ಯಲ್ಲಿ ನಿರ್ದೇಶಕರು ಒಂದು ವಿಷಯ ಜ್ಞಾಪಿಸಿ ಕೊಳ್ಳುತ್ತಿದ್ದರು . ಚಿತ್ರವೊಂದರಲ್ಲಿ ಶ್ರೀನಿವಾಸನ್ ಅಲ್ಪ ಆದಾಯ ಇರುವ ಗಂಡ ,ಊರ್ವಶಿ ಕೊಳ್ಳುಬಾಕಿ ಹೆಂಡತಿ . ಕಂತಿನಲ್ಲಿ ಬೇಕಾದ್ದು ಬೇಡದ್ದು ಎಲ್ಲಾ ಕೊಂಡು ,ಕಂತು ಕಟ್ಟಿಲ್ಲಾ ಎಂದು ಅಂಗಡಿಯವನು ಫೋನ್ ಮಾಡಿ ದಬಾಯಿಸಿದ್ದನ್ನು ಗಂಡ ಬರುವಾಗ ಹೇಳಿ ಅಳುವಳು .ಅದಕ್ಕೆ ಶ್ರೀನಿವಾಸನ್ ಹೆಂಡತಿಗೆ "ಇಷ್ಟು ಸಣ್ಣ ವಿಷಯಕ್ಕೆ ಬೈದನೇ .ನಮ್ಮ ದೇಶ ಅಮೆರಿಕಾ ದಿಂದ ಸಾಲ ತೆಗೆದು ಕೊಂಡು ಕಟ್ಟುವುದು ತಡವಾದರೆ ಅಲ್ಲಿನ ಅಧ್ಯಕ್ಷರು ನಮ್ಮ ಪ್ರಧಾನಿಗೆ ಫೋನ್ ಮಾಡಿ ಬಯ್ಯುತ್ತಾರೆಯೇ ?"ಎಂದು ಸಮಾಧಾನ ಮಾಡುವರು .ಈ ಡಯಲಾಗ್ ಶ್ರೀನಿವಾಸನ್ ಅವರೇ ಸೂಚಿಸಿದ್ದು ಬಹಳ ಜನಪ್ರಿಯ ಆಯಿತು .
ನಾಡೋಡಿ ಕಾಟ್ ಎಂಬ ಚಿತ್ರದಲ್ಲಿ ಮೋಹನಲಾಲ್ ಮತ್ತು ಶ್ರೀನಿವಾಸನ್ ನಿರುದ್ಯೋಗಿ ಯುವಕರು . ಇತರರ ಮಾತು ಕೇಳಿ ಬ್ಯಾಂಕ್ ನಿಂದ ಸಾಲ ತೆಗೆದು ಹೈನು ಉದ್ಯಮಕ್ಕೆ ಒಂದು ಹಸು ಕೊಂಡು ,ರಾತ್ರಿ ಮಲಗಿರುವಾಗ ತಮ್ಮ ಮುಂದಿನ ಅಭ್ಯುದಯದ ಕನಸು ಕಾಣುತ್ತಾರೆ . ಆಗ ದನ ಅಂಬಾ ಎಂದು ಹಸಿವಿನಿಂದ ಕೂಗಲು ಮೋಹನಲಾಲ್ "ಐಶ್ವರ್ಯದ ಸೈರನ್ ನಂತೆ ಕೇಳುತ್ತಿದೆ "ಎನ್ನುವ ಡೈಲಾಗು ಬರೆದವರು .
ವಿಡಂನಾತ್ಮಕ ಚಿತ್ರ ಸಂದೇಶಂ ನ' ಪೋಲೆಂಡ್ ನಿನ್ನ ಅಪ್ಪನ ಆಸ್ತಿಯೇ (ತರವಾಡು ಸೊತ್ತೋ ?"ಡಯಲಾಗ್ ಮತ್ತು ಅದೇ ಚಿತ್ರದ ಶ್ರೀನಿವಾಸನ್ ಮದುವೆಗೆ ಹೆಣ್ಣು ನೋಡಲು ಹೋದ ಸೀನ್ ಬಹು ಜನಪ್ರಿಯ .ವಡಕ್ಕ್ ನೋಕಿ ಯಂತ್ರಂ ನಲ್ಲಿ ಸುಂದರಿ ಹುಡುಗಿಯನ್ನು ಮದುವೆಯಾದ ಚೆಲುವನಲ್ಲದ ಹುಡುಗದ ವಿಚಿತ್ರ ಭಾವನೆಗಳು ,ವಿಕೃತಿಗಳು ಶ್ರೀನಿವಾಸನ್ ನಟಿಸಿದ ಪರಿ ಅಪೂರ್ವ .
ಚಿಂತಾ ವಿಷ್ಟಯಾಯಯ ಶಾಮಲಾ ಹಲವು ಅವಾರ್ಡ್ಗಳನ್ನು ಬಾಚಿಕೊಂಡ ಉತ್ತಮ ಚಿತ್ರ .ಬೇಜವಾಬ್ದಾರ ಆದರೆ ಎಲ್ಲಾ ರಂಗಗಳಲ್ಲಿ ಪ್ರವೀಣ ಎಂದು ತಿಳಿಕೊಂಡ ಶಾಲಾ ಅಧ್ಯಾಪಕನ ಕತೆ . ವಿಶ್ವ ಆರ್ಥಿಕ ನೀತಿ ಇತ್ಯಾದಿ ಗಳ ಬಗ್ಗೆ ಹೆಂಡತಿಗೆ ಲೆಕ್ಚರ್ ಕೊಡುವಾಗ ಆಕೆ ತಣ್ಣನೆ ತಿಂಗಳುಗಳಿಂದ ಕಟ್ಟಿರದ ವಿದ್ಯುತ್ ಬಿಲ್ ಮುಂದಿಟ್ಟು ಅದೆಲ್ಲಾ ನನಗೆ ಗೊತ್ತಿಲ್ಲ ಇದನ್ನು ಕಟ್ಟಿ ಬನ್ನಿರಿ ಎನ್ನುವಳು .
ಇವರ ಮಗ ವಿನೀತ್ ಕೂಡಾ ಒಳ್ಳೆಯ ನಟ ಮತ್ತು ಹಾಡುಗಾರ ..
ವಡಕ್ಕ್ ನೋಕಿ ಯಂತ್ರಂ ಚಿತ್ರದಲ್ಲಿ ವಿವಾಹ ಮೊದಲ ರಾತ್ರಿಯ ಹಾಸ್ಯ ಪ್ರಸಂಗ ದಲ್ಲಿ ಶ್ರೀನಿವಾಸನ್ ಆಗಮಿಸಲಿರುವ ತನ್ನ ಪತ್ನಿಯ ಸ್ವಾಗತದ ರಿಹರ್ಸಲ್ ಮತ್ತು ಮತ್ತೆ ನಡೆದುದು ನೋಡಲು ಕೆಳಗಿನ ಲಿಂಕ್ ಅದುಮಿರಿ .
https://youtu.be/JuK_E7bk2jg
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ