ವರ್ಷಗಳ ಹಿಂದೆ ನಾನು ಕೆ ಎಸ ಹೆಗ್ಡೆ ಮೆಡಿಕಲ್ ಕಾಲೇಜು ನಲ್ಲಿ ಕೆಲಸ ಮಾಡುತ್ತಿರುವ ಸಮಯ ;ಒಂದು ದಿನ ಓ ಪಿ ಡಿ ಯಲ್ಲಿ ಇರುವಾಗ ಓರ್ವ ಬಡ ಕೃಷಣ ಕಾಯರು ಖಾದಿ ದಿರಿಸು ಮತ್ತು ಹಳೇ ಹವಾಯಿ ಚಪ್ಪಲಿ ಧಾರಿ ಯಾಗಿ ತಮ್ಮ ಊರಿನ ಯಾರೋ ಬಡ ರೋಗಿಗೆ ಉಚಿತ ಚಿಕೆತ್ಸೆ ಕೊಡಿಸಲು ಓಡಾಡುತ್ತಿದ್ದರು . ಅವರು ಹೋದ ಮೇಲೆ ಅವರನ್ನು ಪರಿಚಯ ಇದ್ದ ನನ್ನ ಸಹೋದ್ಯೋಗಿ 'ಸರ್ ಅವರು ಮಾಜಿ ಎಂ ಎಲ್ ಈ ಸಂಜೀವ ನಾಥ ಐಕಳ ಅವರು ಸರ್ ,ಶುದ್ಧ ಗಾಂಧಿವಾದಿ 'ಎಂದರು . ಐಕಳರು ಕಾರ್ನಾಡು ಸದಾಶಿವ ರಾಯರ ಅನುಯಾಯಿ ಆಗಿ ಸ್ವಾತಂತ್ರ್ಯ ಸಮರದಲ್ಲಿ ಭಾಗಿ ಆದವರು ,ಮುಂದೆ ಜಯಪ್ರಕಾಶ ನಾರಾಯಣ ಅವರಿಂದ ಪ್ರಭಾವಿತ ರಾಗಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ ಸೇರಿ , ಎಂ ಎಲ್ ಎ ಆಗಿದ್ದು ಸೇವೆ ಮಾಡಿದವರು . ಸರಳ ಪರಿಶುದ್ಧ ಜೀವನ ನಡೆಸಿ ೬.೨ ೨೦೧೪ ರಂದು ತೀರಿ ಕೊಂಡರು ..
ನಾನು ಚೆನ್ನೈ ಪೆರಂಬೂರು ರೈಲ್ವೆ ಆಸ್ಪತ್ರೆಯಲ್ಲಿ ಇದ್ದಾಗ ಒಂದು ದಿನ ಮುಖ್ಯ ವೈದ್ಯಾಧಿಕಾರಿ ಮತ್ತು ಕಾರ್ಡಿಯೋಲಾಜಿಸ್ಟ್ ಆಗಿದ್ದ ಡಾ ಅಬ್ರಹಾಂ ಅವರನ್ನು ಕಾಣಲು ಹೋಗಿದ್ದೆ ..ರೂಮಿನ ಹೊರಗೆ ಅವರನ್ನು ಕಾಣಲು ಹಲವು ರೋಗಿಗಳ ಕ್ಯೂ ಇತ್ತು . ನನ್ನೊಡನೆ ಮಾತನಾಡುತ್ತಾ "ಅಲ್ಲಿ ಹೊರಗೆ ಧೋತಿ ಉಟ್ಟುಗೊಂಡು ನಿಂತಿದ್ದಾರಲ್ಲಾ ಅವರು ಕೇರಳದ ಮಾಜಿ ಮುಖ್ಯ ಮಂತ್ರಿ ಸಿ ಅಚ್ಚುತ ಮೆನನ್ ಅವರ ಮುಖ್ಯ ಕಾರ್ಯದರ್ಶಿ ಆಗಿದ್ದ ಐ ಎ ಎಸ ಅಧಿಕಾರಿ . ರಾಜನಂತೆ ಮಂತ್ರಿ ;ಎಷ್ಟು ಸರಳರು ನೋಡಿ "ಎಂದರು . ಅಚ್ಚುತ ಮೆನನ್ ಎರಡು ಭಾರಿ ಕೇರಳದ ಮುಖ್ಯ ಮಂತ್ರಿ ಆಗಿದ್ದವರು . ಆಮೇಲೆ ತಮ್ಮ ಊರು ತ್ರಿಚೂರಿನಲ್ಲಿ ಸಾಮಾನ್ಯರಂತೆ ಬದುಕಿದರು .ಒಂದು ದಿನ ಮಾಮೂಲಿನಂತೆ ವಾಕಿಂಗ್ ಮಾಡಿ ರೈಲ್ವೆ ಸ್ಟೇಷನ್ ಪುಸ್ತಕ ಅಂಗಡಿಯಿಂದ ಪತ್ರಿಕೆ ಕೊಂಡು ಹೊರ ಬರುವ ವೇಳೆ ಇವರ ಪರಿಚಯ ಇಲ್ಲದ ಟಿ ಟಿ ಇವರನ್ನು ನಿಲ್ಲಿಸಿ ಟಿಕೆಟ್ ಕೇಳಿ ದಬಾಯಿಸಿದರಂತೆ . ಸಾಮಾನ್ಯರಂತೆ ಸಭೆ ಸಮಾರಂಭ ಗಳಲ್ಲಿ ಭಾಗವಿಸುತ್ತಿದ್ದ ಇವರು ,ಪರವೂರಿಗೆ ಬಸ್ ,ಟ್ರೈನಿನ ಎರಡನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದರು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ