ಪೆಟ್ರೋಮ್ಯಾಕ್ಸ್
ಹಿಂದೆ ಸಮಾರಂಭಗಳಿಗೆ ಕಳೆ ತರಲು ಪೆಟ್ರೋಮ್ಯಾಕ್ಸ್ ಒಂದು ಅವಶ್ಯ ಸಾಧನ ಆಗಿತ್ತು . ಇದನ್ನು ೧೯೧೦ ರಲ್ಲಿ ಜರ್ಮನಿಯ ಮ್ಯಾಕ್ಸ್ ಗ್ರೆಟ್ಜ್ ಕಂಡು ಹಿಡಿದನು . ಪೆಟ್ರೋಲಿಯಂ ಜನಿತ ಸೀಮೆ ಎಣ್ಣೆ ಯನ್ನು ಪಂಪ್ ಮೂಲಕ ಒತ್ತಡ ಹಾಕಿ ಆವಿ ಯನ್ನಾಗಿಸಿ ಮೆಂಟ್ಲ್ ಉರಿಸಿದಾಗ ವಿದ್ಯುತ್ ಬೆಳಕಿನ ವಾತಾವರಣ ಉಂಟಾಗಾಗುವುದು . ಪೆಟ್ರೋ ಮತ್ತು ಇದನ್ನು ಕಂಡು ಹಿಡಿದ ಮ್ಯಾಕ್ಸ್ ಸೇರಿ ಪೆಟ್ರೋಮ್ಯಾಕ್ಸ್ ಆಯಿತು ..ಇದರ ಒಳಗೆ ಮೆಂಟ್ಲ್ ಸಣ್ಣ ತಟ್ಟೆ ಇದ್ದು ಅದಕ್ಕೆ ಸ್ಪಿರಿಟ್ ಹಾಕಿ ಉರಿಸುವರು .ಆಮೇಲೆ ಸೀಮೆ ಎಣ್ಣೆ ಪಂಪ್ ಮಾಡುವರು . ಕೆಲವೊಮ್ಮೆ ಸ್ಪಿರಿಟ್ ಇಲ್ಲದೆಯೇ ಎಣ್ಣೆ ಪಂಪ್ ಮಾಡಿ ಗ್ಯಾಸ್ ಜೆಟ್ ಗೆ ಉರಿ ಹಚ್ಚುವರು .
ಮದುವೆ ಇತ್ಯಾದಿ ಸಮಾರಂಭಗಳಿಗೆ ಗ್ಯಾಸ್ ಲೈಟ್ ಹಚ್ಚಿದಾಗಲೇ ಕಳೆ ಬರುವುದು .ಇದನ್ನು ಬಾಡಿಗೆಗೆ ಕೊಡುವ ಅಂಗಡಿಗಳು ಇದ್ದವು .ಅದರ ಬೆಳಕಿನಲ್ಲಿ ನೆಂಟರು ಮತ್ತು ಅಕ್ಕ ಪಕ್ಕದ ಮನೆಯವರು ಕುಳಿತು ತರಕಾರಿ ಹಚ್ಚುವರು. . ಆಮೇಲೆ ಇಸ್ಪೇಟು ಆಟ . ಮಕ್ಕಳಿಗೆ ತಮಾಷೆ ,ನಗು ,ನಲಿದಾಟ . ಪಂಪ್ ಮಾಡಿದ ಒತ್ತಡ ಕಮ್ಮಿ ಆದಾಗ ಲೈಟ್ ಮಂಕಾಗುವುದು . ಆಗ ಪುನಃ ಗಾಳಿ ಹಾಕುವರು ...ಸಾಂಪತ್ತಿಕವಾಗಿ ಬಡ ಯಕ್ಷಗಾನ ಮೇಳಗಳೂ ಜನರೇಟರ್ ವಿದ್ಯುತ್ ಬದಲಿಗೆ ಗ್ಯಾಸ್ ಲೈಟ್ ಉಪಯೋಗಿಸುತ್ತಿದ್ದರು . ಮೆರವಣಿಗೆ ಯಲ್ಲಿ ಪೆಟ್ರೋಮ್ಯಾಕ್ಸ್ ಹೊರುವವರು ಇರುತ್ತಿದ್ದರು .
ಪೆಟ್ರೋಮ್ಯಾಕ್ಸ್ ನ ಮೆಂಟ್ಲ್ ಪೆಟ್ಟಿಗೆ ಎಲ್ಲರ ಮನೆಯಲ್ಲಿ ರಾರಾಜಿಸುವುದು .ಎಲೆ ಅಡಿಕೆ ಹೊಗೆಸೊಪ್ಪು ಸುಣ್ಣ ಪೆಟ್ಟಿಗೆ ಯಾಗಿ ಇದರ ಉಪಯೋಗ ವ್ಯಾಪಕ ಆದರೂ ಮನೆಯಲ್ಲಿ ಚಿಲ್ಲರೆ ಹಣ ಇಡಲು ,ಸಮಾರಂಭಗಳಲ್ಲಿ ದಕ್ಷಿಣೆ ,ಕಾರ್ಮಿಕರಿಗೆ ಸಂಬಳ ಬಟವಾಡೆ ಇತ್ಯಾದಿಗಳಿಗೆ ಎಟಿ ಎಂ ಆಗಿ ಉಪಯೋಗ ಆಗುವದು . ನೆಂಟರ ಮನೆಗೆ ಹೋಗುವಾಗ ಸಂಚಾರಿ ವೀಳ್ಯದ ಸಂಚಿಯೂ ಇದೆ . ಇದು ಹೊರ ಬಂದೊಡನೆ ನಾಲ್ಕಾರು ಮಂದಿ ದಿಡೀರನೆ ಸುತ್ತ ಕುಳಿತು ಧಾಳಿ ಮಾಡುವರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ