ಇಲಿ ಜ್ವರ
ನೀವು ಇಲಿ ಜ್ವರ ಎಂದು ಕೇಳಿರ ಬಹುದು . ಈ ಅಪಾಯಕಾರಿ ಸೋಂಕು ಗಣಪತಿ ವಾಹನ ಉಂಟು ಮಾಡುವುದಲ್ಲ . ಲೆಪ್ಟಾಸೈರಾ ಎಂಬ ಬ್ಯಾಕ್ಟೀರಿಯಾ ಇದಕ್ಕೆ ಕಾರಣ . ಇಲಿ ಹೆಗ್ಗಣ ,ಪಶುಗಳು ,ಹಕ್ಕಿಗಳು ಮತ್ತು ಸರೀಸೃಪಗಳೂ ಈ ರೋಗಾಣುಗಳ ದಾಸ್ತಾನು ಕೇಂದ್ರಗಳು ಮತ್ತು ಕೆಲವೊಮ್ಮೆ ಸಂತ್ರಸ್ತರು .
ಮೇಲೆ ಹೇಳಿದ ಸೋಂಕಿತ ಪ್ರಾಣಿಗಳ ಮಲ ಮೂತ್ರ ,ಮಾಂಸ ,ಸ್ರಾವಗಳಿಂದ ರೋಗಾಣುಗಳು ಮನುಷ್ಯನ ದೇಹದ ಒಳಗೆ ಹೇಗೆ ಪ್ರವೇಶಿವವು ? ಗಾಯ ಗಳಿರುವ ಚರ್ಮ ,ನೀರು ಮತ್ತು ಆಹಾರ .ಮಾಂಸ ಮತ್ತು ಕೆಲವೊಮ್ಮೆ ಪ್ರಾಣಿಗಳ ಕಡಿತದ ಮೂಲಕ . ಮಳೆ ಗಾಲದಲ್ಲಿ ಮತ್ತು ಚರಂಡಿ ನೀರು ಹರಿಯುವಲ್ಲಿ ಈ ಕಾರ್ಯ ಸುಲಭ ಆಗುವುದು .
ಮಾನವ ಶರೀರದಲ್ಲಿ ಸೇರಿ ಕೊಂಡ ರೋಗಾಣು ತನ್ನ ರೋಗ ಕಾರಕ ಪ್ರತಿಭೆ ಪ್ರದರ್ಶನ ಮಾಡುವುದು . ಜ್ವರ ,ಚಳಿ ನಡುಗುವುದು ,ತಲೆ ನೋವು ,ತೀವ್ರ ತರ ಮಾಂಸ ಖಂಡಗಳ ಸೆಳೆತ ,ಕೆಂಗಣ್ಣು ಸಾಮಾನ್ಯ ರೋಗ ಲಕ್ಷಣಗಳಾದರೆ ಕಾಮಾಲೆ ,ಕೆಮ್ಮು ,ಮೂತ್ರ ಪಿಂಡಗಳ ವೈಫಲ್ಯ ,ಮೆದುಳು ,ಹೃದಯ ಕಾರ್ಯಗಳ ಏರು ಪೇರು ಗಂಭೀರ ಪರಿಣಾಮಗಳು .
ರೋಗ ಪತ್ತೆ ಮಾಡಲು ರಕ್ತ ಪರೀಕ್ಷೆಗಳು ಇವೆ .ಮತ್ತು ಆರಂಭದ ಹಂತದಲ್ಲಿ ಪತ್ತೆ ಹಚ್ಚಿದರೆ ಕಡಿಮೆ ವೆಚ್ಚದ ಆಂಟಿಬಯೋಟಿಕ್ ಗಳಾದ ಡಾಕ್ಸಿಸೈಕ್ಲಿನ್ , ಸೇಫ್ಟ್ರಿಯಾಕ್ಸೋನ್ ಗಳು ಉಪಯೋಗಕ್ಕೆ ಬರುವವು.ಮೂತ್ರ ಪಿಂಡಗಳ ವೈಫಲ್ಯ ಆದರೆ ತಾತ್ಕಾಲಿಕ ಡಯಾಲಿಸಿಸ್ ಮಾಡುವರು .ಪ್ರಾಣಾಪಾಯ ಆಗುವುದೂ ಇದೆ . ಮತ್ತೊಮ್ಮೆ ಗಮನಿಸಿ ಚಿಕಿತ್ಸೆ ಇರುವ ಕಾಮಾಲೆಗೆ ಇದೂ ಒಂದು ಕಾರಣ . ಹಳದಿ ರೋಗ ಹಳ್ಳಿ ಮದ್ದು ಎಂದು ಕೂರದಿರಿ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ