ಸ್ಕ್ರಬ್ ಟೈಫಸ್ ಕಾಯಿಲೆ
ನೀವು ಟೈಪೋಯ್ಡ್ ಅಥವಾ ವಿಷಮ ಶೀತ ಜ್ವರದ ಬಗ್ಗೆ ಕೇಳಿರುತ್ತೀರಿ .ಈ ಕಾಯಿಲೆ ಇತ್ತೀಚಿಗೆ ಅಪರೂಪಕ್ಕೆ ಕಾಣಿಸಿ ಕೊಳ್ಳುತ್ತದೆ .ಬಹಳ ಮಂದಿಗೆ ಶುದ್ಧ ನೀರು ಸಿಗುವುದರಿಂದ ಅದರ ಪ್ರಸರಣ ಕಡಿಮೆ ಆಗಿದೆ . ಆದರೆ ಡೆಂಗು ಇಲಿ ಜ್ವರ ಮತ್ತು ಸ್ಕ್ರಬ್ ಟೈಫಸ್ ಅಲ್ಲಲ್ಲಿ ಎಗ್ಗಿಲ್ಲದೆ ತಲೆಯೆತ್ತಿ ಹಾವಳಿ ನಡೆಸುತ್ತಿವೆ .
ಏನಿದು ಸ್ಕ್ರಬ್ ಟೈಫಸ್ ?
ಇದು ಓರಿಯೆಂಟ ಸುಸುಗಾಮುಷಿ ಎಂಬ ಬ್ಯಾಕ್ಟೀರಿಯಾ ದಿಂದ ಬರುವ ರೋಗ . ಇದನ್ನು ಹರಡುವದು ಚಿಗಟಗಳು . ರೋಗಾಣು ಶೇಖರಣಾ ಪ್ರಾಣಿಗಳು ಇಲಿ ಹೆಗ್ಗಣ ಇತ್ಯಾದಿ . ಸ್ಕ್ರಬ್ ಎಂದರೆ ಪೊದೆ ಪ್ರದೇಶ .ಕಾಡಿಗೆ ಸೌದೆಗೆ ಅಥವಾ ಚಾರಣಕ್ಕೆ ಹೋದವರಿಗೆ ಈ ಚಿಗಟಗಳು ಹೆಚ್ಚು ನೋವಿಲ್ಲದೇ ಕಚ್ಚುವವು .ಅದರ ಮೂಲಕ ಮಾನವ ಶರೀರಕ್ಕೆ ಸೇರಿದ ರೋಗಾಣು ಟೈಫಸ್ ಕಾಯಿಲೆ ಉಂಟು ಮಾಡುವುದು
ಜ್ವರ ತಲೆನೋವು,ಮೈಕೈ ನೋವು ,ಚಿಗಟ ಕಚ್ಚಿದ ಜಾಗದಲ್ಲಿ ಸತ್ತ ಜೀವ ಕೋಶಗಳಿಂದ ಆವೃತ್ತವಾದ ಹುಣ್ಣು ,(Eschar ),ಮತ್ತು ಅದರ ಹತ್ತಿರದ ದುಗ್ಧ ಗ್ರಂಥಿಗಳ ಉರಿಯೂತ (ಗಣಲೆ ಅಥವಾ ಕರಳೆ ),ಮೈಯಲ್ಲಿ ಕೆಂಪು ಬೀಳುವುದು ಇತ್ಯಾದಿ ಲಕ್ಷಣಗಳು ಇರುತ್ತವೆ . ಇದು ಕೂಡ ಜಾಂಡಿಸ್ ಮತ್ತು ರಕ್ತದಲ್ಲಿ ಪ್ಲೇಟಿಲೆಟ್ ಕೊರತೆ ಉಂಟು ಮಾಡಬಹುದು .
ಈ ಕಾಯಿಲೆ ಭಾರತ ದೇಶ ದಲ್ಲಿಯೂ ವ್ಯಾಪಕ ವಾಗಿದ್ದು ,ನಮ್ಮ ರಾಜ್ಯದ ಮಲೆನಾಡು ಪ್ರದೇಶಗಲ್ಲಿ ಹೆಚ್ಚಾಗಿ ಉಪಟಳ ಕೊಡುತ್ತಿರುತ್ತದೆ .
ಇದರ ರೋಗ ಲಕ್ಷಣಗಳು ಡೆಂಗಿ ಮತ್ತು ಇಲಿ ಜ್ವರದ ಚಿನ್ಹೆ ಗಳಿಗೂ ಸಾಮ್ಯತೆ ಇರುವುದರಿಂದ ಇವುಗಳಿಂದ ಇದನ್ನು ಬೇರ್ಪಡಿಸಿ ಚಿಕಿತ್ಸೆ ಮಾಡ ಬೇಕಾಗುವುದು .
ಈ ರೋಗವನ್ನು ರಕ್ತ ಪರೀಕ್ಷೆ ಮತ್ತು ರೋಗ ಲಕ್ಷಣಗಳಿಂದ ಪತ್ತೆ ಹಚ್ಚುವರು .ಮತ್ತು ಕಡಿಮೆ ವೆಚ್ಚದ ಆಂಟಿಬಯೋಟಿಕ್ ಔಷಧಿ ಗಳಾದ ಡಾಕ್ಸಿ ಸೈಕ್ಲಿನ್ , ಅಜಿತ್ರೊ ಮೈಸಿನ್ ಮತ್ತು ಕ್ಲೋರಿನೆಂಪೆನಿಕೋಲ್ ಗಳು ಈ ರೋಗಕ್ಕೆ ಪರಿಣಾಮ ಕಾರಿ .
ಈ ರೋಗದ ಇರುವಿಕೆಯೇ ಜನರಿಗೆ ಇನ್ನೂ ತಿಳಿಯದಿರುವುದು ಖೇದ ಕರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ