ಹೋದ ವರ್ಷವೇ ಪ್ರಕಟವಾದ ಲೇಖಕಿ ಡಾ ಪಾರ್ವತಿ ಜಿ ಐತಾಳ ಅವರ ಆತ್ಮ ಚರಿತ್ರೆ ಅನಂತರಂಗದ ಸ್ವಗತ ಸ್ವಲ್ಪ ತಡವಾಗಿಯಾದರೂ ಓದಿದೆ . ಕಾಸರಗೋಡು ತಾಲೂಕು ಧರ್ಮತಡ್ಕ ಸಮೀಪ ಜನನ ,ಅಲ್ಲೇ ಪ್ರಾಥಮಿಕ ಶಾಲೆ ,ಮುಂದೆ ವಿಟ್ಲದಲ್ಲಿ ಹೈ ಸ್ಕೂಲ್ ,ಪದವಿ ಕಾಸರಗೋಡು ಸರಕಾರಿ ಕಾಲೇಜು . ಮುಂದೆ ಇಂಗ್ಲಿಷ್ ನಲ್ಲಿ ಎಂಎ ಮೈಸೂರು ವಿಶ್ವ ವಿದ್ಯಾಲಯದಿಂದ .ಡಾ ಅನಂತ ಮೂರ್ತಿ ,ದಾಮೋದರ ರಾವ್ ಅಂತಹ ಖ್ಯಾತ ನಾಮರು ಗುರುಗಳು . ಪ್ರಾಧ್ಯಾಪಕ ವೃತ್ತಿ ಮಂಗಳೂರು ,ಮುಲ್ಕಿ ಮತ್ತು ಕುಂದಾಪುರಗಳಲ್ಲಿ .
ಬಾಲ್ಯದ ಜೀವನ ಚಿತ್ರಣ ನಮ್ಮ ಪ್ರದೇಶ ದ್ದೇ ಆಗಿದ್ದು ಓದುತ್ತಿದ್ದಾಗ ನಮ್ಮ ಜೀವನ ಅನುಭವಗಳಿಗೆ ಹೋಲುವಂತಹ ಘಟನೆಗಳ ಚಿತ್ರಣ ಇದೆ . ಮುಂದೆ ವೃತ್ತಿ ಜೀವನ ಸುಗಮವಾದರೂ ವೈಯುಕ್ತಿಕ ಜೀವ ನೆಲೆ ನಿಲ್ಲಲು ಅಡೆ ತಡೆಗಳು .
ನಾವು ಲೇಖಕಿಗೆ ಅಭಾರಿಯಾಗ ಬೇಕಾಗಿ ಇರುವುದು ಅವರ ಅನುವಾದ ಸಾಹಿತ್ಯ ಕೃಷಿಗೆ . ಇಲ್ಲಿಯ ವರೆಗೆ ೪೧ ಕ್ಕೂ ಮಿಕ್ಕ ಕೃತಿಗಳನ್ನು ಅನುವಾದಿಸಿದ್ದಾರೆ .ಮುಖ್ಯವಾಗಿ ತುಳು ಸಂಸ್ಕೃತಿಗೆ ಸಾಮ್ಯತೆ ಇರುವ ಮಲಯಾಳ ದ ಶೇಷ್ಠ ಕೃತಿಗಳ ಅನುವಾದ . ಎಂಟಿವಿ ,ಕಮಲಾ ದಾಸ್ ,ಪಾರಕ್ಕಡವು ,ಸುಕುಮಾರ ಅಳಿಕೋಡ್ ,ಏನ್ ಪಿ ಮೊಹಮ್ಮದ್ ಮುಂತಾದ ಪ್ರಸಿದ್ಧ ಲೇಖಕರ ಕೃತಿಗನ್ನು ಕನ್ನಡ ಕ್ಕೆ ಅನುವಾದಿಸಿದರೆ ,ಕವಿ ಕೆ ವಿ ತಿರುಮಲೇಶ್ ಅವರ ಕವಿತೆಗಳನ್ನು ಮಲಯಾಳಿಗಳಿಗೆ ಪರಿಚಯಿಸಿದ್ದಾರೆ .ಇನ್ನು ಪರ್ಲ್ ಎಸ ಬಕ್ ಅವರ ಜನಪ್ರಿಯ ಕಾದಂಬರಿ ಗುಡ್ ಅರ್ಥ್ ಮತ್ತು ಹಲವು ಮೌಲಿಕ ಹಿಂದಿ ಕೃತಿಗಳನ್ನು ಕನ್ನ್ನಡಕ್ಕೆ ಅನುವಾದ ಮಾಡಿ ಪ್ರಕಟಿಸಿದ್ದಾರೆ .
ಈ ಸಾಧಕಿಗೆ ಓರ್ವ ಕನ್ನಡದ ಓದುಗನಾಗಿ ಆಭಾರಿ .

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ