ಪಾಸ್ ಫೈಲ್
ನಾವು ಪ್ರಾಥಮಿಕ ವಿದ್ಯಾಭ್ಯಾಸ ಮಾಡುವ ಸಮಯ; ದೊಡ್ಡ ರಜೆ ಕಳೆದು ತರಗತಿ ಆರಂಭವಾಗುವ ದಿನ ಈಗಿನಂತೆ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಪರಿಪಾಡಿ ಇರಲಿಲ್ಲ . ಕ್ಲಾಸ್ ಅಧ್ಯಾಪಕರು ಹಾಜರಿ ಪಟ್ಟಿಯಿಂದ ಹೆಸರು ಕೂಗಿ ಕರೆಯುವರು .ಅವರೆಲ್ಲಾ ಪಾಸ್ .ತಮ್ಮ ಸ್ಲೇಟು ಕಡ್ಡಿ ಸರಂಜಾಮು ಹೊತ್ತುಕೊಂಡು ಮೇಲಿನ ಕ್ಲಾಸ್ ಇರುವ ಕೊಠಡಿಗೆ ಹೋಗಬೇಕು . ಹೆಸರು ಕರೆಯದೇ ಇದ್ದವರು ಫೈಲು . ಯಾರೆಲ್ಲ ಫೈಲು ಕೊನೆಗೇ ತಿಳಿಯುವುದು .ನಮ್ಮ ಮಿತ್ರರು ಪಾಸ್ ಆಗದಿದ್ದರೆ ಅವರ ಜತೆ ತಪ್ಪುವುದು ಎಂಬ ಬೇಸರ . ಆ ದಿನ ಕ್ಲಾಸ್ ಇಲ್ಲ . ಮರಳುವ ದಾರಿಯಲ್ಲಿ ಹೊಲಗದ್ದೆಯಲ್ಲಿ ಕೆಲಸ ಮಾಡುವವರು ಎಲ್ಯಣ್ಣೇರ್ ಪಾಸಾ ಎಂದು ಕೇಳುವರು . ಪಾಸಾಗಲಿ ಫೈಲು ಅಗಲೀ ಈಗಿನ ಹಾಗೆ ಹೊಗಳಿ ಏರಿಸುವ ಅಥವಾ ಹೀಗೆಳೆಯುವ ಪದ್ಧತಿ ಇರಲಿಲ್ಲ . ಫಲಿತಾಂಶ ದಿಂದ ಹತಾಶೆ ಗೊಂಡು ಆತ್ಮ ಹತ್ಯೆ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆ ಇತ್ತು .ಈಗಿನ ಸರಕಾರಿ ಶಾಲೆಗಳಂತೆ ಕಡ್ಡಾಯ ಹೋಲ್ ಸೇಲ್ ಪಾಸ್ ಮಾಡುವ ಪದ್ಧತಿ ಇರಲಿಲ್ಲ .
ಪಾಸ್ ಆದರೆ ಮೇಲ್ತರಗತಿಯಲ್ಲಿ ಇರುವ ನಮ್ಮ ಮಿತ್ರರ ಬಳಿ ಅವರ ಉಪಯೋಗಿಸಿದ ಟೆಕ್ಸ್ಟ್ ಬುಕ್ ಅರ್ಧ ಬೆಲೆಗೆ ಖರೀದಿಸುತ್ತಿದ್ದೆವು . ನಮ್ಮ ದುರಾದೃಷ್ಟಕ್ಕೆ ಕೆಲವೊಮ್ಮೆ ಪಠ್ಯ ಪುಸ್ತಕ ಬದಲಾಗುತ್ತಿದ್ದವು . ನಾನು ನನ್ನ ಸೀನಿಯರ್ ಮುದ್ಕುಂಜ ದಿವಾಕರ ಪ್ರಭುಗಳ ಬಳಿ ಪುಸ್ತಕ ಕೊಳ್ಳುತ್ತಿದ್ದೆ .ಅವರು ಪಠ್ಯ ಪುಸ್ತಕಗಳನ್ನು ಚೆನ್ನಾಗಿ ಇಟ್ಟು ಕೊಳ್ಳುತ್ತಿದ್ದರು
ಹೈ ಸ್ಕೂಲ್ ನಲ್ಲಿ ಕೂಡಾ ಇದೇ ರೀತಿ ಇತ್ತು . ಎಸ ಎಸ ಎಲ್ ಸಿ ಪರೀಕ್ಷೆ ಫಲಿತಾಂಶ ನವಭಾರತ ದಿನ ಪತ್ರಿಕೆಯಲ್ಲಿ ಮೊದಲು ಪ್ರಕಟವಾಗುತ್ತಿತ್ತು .ಶಾಲೆಗೆ ಆಮೇಲೆ ಬರುತ್ತಿತ್ತು ಎಂದು ನೆನಪು . ಪೇಪರ್ ನಲ್ಲಿ ಮೊದಲು ಫಸ್ಟ್ ಕ್ಲಾಸ್ ನ ಅಡಿಯಲ್ಲಿ ,ಆಮೇಲೆ ಸೆಕೆಂಡ್ ಮತ್ತು ಥರ್ಡ್ ಕ್ಲಾಸ್ ಕೆಳಗೆ ನಮ್ಮ ನಂಬರ್ ಇದೆಯೇ ಎಂದು ಹುಡುಕುತ್ತಿದ್ದೆವು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ