ನಿನ್ನೆ ಮುಂಜಾನೆ ಪುತ್ತೂರಿನ ವಿವಿದೋದ್ಧೇಶ ತರಬೇತಿ ಸಂಸ್ಥೆ ಐ ಅರ ಸಿ ಎಂ ಡಿ ಯ ಆಶ್ರಯದಲ್ಲಿ ಅಬಾಕಸ್ ಸ್ಪರ್ಧೆಯಲ್ಲಿ ಬಾ ಜಯಶಾಲಿಯಾದ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ . ಈ ಸಂಸ್ಥೆಯನ್ನು ನಡೆಸುವವರು ಉತ್ಸಾಹಿ ಯುವ ದಂಪತಿಗಳಾದ ಪ್ರಫುಲ್ಲ ಮತ್ತು ಗಣೇಶ್ . ಹೆಚ್ಚಾಗಿ ನನಗೆ ಸಂಬಂಧ ಪಡದ ಸಭೆಗಳಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತೇನೆ . ಆದರೆ ಈ ದಂಪತಿಗಳು ದಶಕದಿಂದ ನನ್ನ ಆತ್ಮೀಯ ವಲಯದಲ್ಲಿ ಇರುವ ಕಾರಣ ಕೇಳಿದ ಒಡನೇ ಒಪ್ಪಿಕೊಂಡೆ .
ನಮಗೆ ಅಬಾಕಸ್ ನಂತಹ ಬೌದ್ಧಿಕ ಮೌಲ್ಯ ವರ್ಧನೋಪಾಯ ಶಿಕ್ಷಣ ಇರಲಿಲ್ಲ .ತಾಯಿ ಯವರ ಮಾರ್ಗದರ್ಶನ ದಲ್ಲಿ ಇಪ್ಪತ್ತು ಇಪ್ಪಾತ್ಲಿ (೨೦X ೨೦)ವರೆಗೆ ಮೇಲಿಂದ ಕೆಳಗೆ ಮತ್ತು ಕೆಳಗಿಂದ ಮೇಲಿನ ವರೆಗೆ ಬಾಯಿಪಾಠ ಆಗಿದ್ದು ,ಈಗ ಕೂಡಾ ಕ್ಯಾಲ್ಕುಲೇಟರ್ ಇಲ್ಲದೇ ಸಣ್ಣ ಪುಟ್ಟ ಕೂಡು ಕಳೆ ಗುಣಿಸು ಮಾಡಬಲ್ಲೆ . ಕ್ಯಾಲ್ಕುಲೇಟರ್ ಈಗ ಸುದ್ದಿ ಮಾಡುತ್ತಿರುವ ಕೃತಕ ಬುದ್ಧಿಮತ್ತೆಯ ಪ್ರಾಚೀನ ರೂಪ . ಕೃತಕ ಬುದ್ದಿಮತ್ತೆ ಯ ಮೇಲೆ ಪೂರ್ಣ ಅವಲಂಬಿಸಿದರೆ ನೈಸರ್ಗಿಕ ಬುದ್ದಿ ಕುಂಠಿತ ವಾಗ ಬಹುದು .
ನಿನ್ನೆಯ ಸಭೆಯಲ್ಲಿ ಮದ್ರಾಸ್ ಐ ಐ ಟಿ ಯ ಶ್ರೀ ಸಾಯಿ ಗಣೇಶ್ ಮತ್ತು ಬೆಂಗಳೂರು ಜಿ ಕೆ ವಿ ಕೆ ಯ ಡಾ ಅಶೋಕ್ ಕುಮಾರ್ ಅವರ ಪರಿಚಯ ಆಯಿತು . ಈ ಯುವ ಪ್ರತಿಭಾವಂತರು ಪುಟ್ಟ ಮಕ್ಕಳಿಗೆ ಸ್ವಯಂ ಆಸಕ್ತಿಯಿಂದ ಗಣಿತ ದಂತಹ ವಿಷಯ ಹೇಳಿಕೊಡುತ್ತದ್ದರು ಎಂದು ತಿಳಿಯಿತು .ಸಣ್ಣ ಮಕ್ಕಳಿಗೆ ಕಳಿಸುವುದು ಕಷ್ಟ ಮತ್ತು ತಾಳ್ಮೆ ಬೇಕು . ತಮ್ಮ ಆತ್ಮ ತೃಪ್ತಿಗಾಗಿ ವಿದ್ಯರ್ಥಿಗಳನ್ನು ಹುಡುಕಿ ಕಲಿಸುವುದು ಮೆಚ್ಚ ಬೇಕಾದದ್ದು .