ನಿನ್ನೆ ಬಂಧುಗಳ ಮದುವೆ ಸಮಾರಂಭಕ್ಕೆ ಬದಿಯಡ್ಕ ಸಮೀಪ ನಾರಂಪಾಡಿ ಗೆ ಹೋಗಿದ್ದೆ . ದಾರಿಯಲ್ಲಿ ಒಂದು ಕಡೆ ವರ್ಣ ವರ್ಣದ ಬಲಿತ ಹಣ್ಣುಗಳ ಗೇರು ಮರಗಳ ತೋಟ . ನನ್ನ ಶ್ರೀಮತಿಯವರಿಗೆ ಗೇರು ಹಣ್ಣು ತಿನ್ನುವ ಆಸೆಯಾಯಿತು . ಬಾಲ್ಯದಲ್ಲಿ ಗೇರು ಹಣ್ಣು ಕೊಯ್ಯುವುದು ತಿನ್ನುವುದು .ಸಾಕ್ಷಿಯಾಗಿ ಉಟ್ಟ ಬಟ್ಟೆಯಲ್ಲಿ ಕಲೆಗಳು .ಗೇರು ಬೀಜ ಸಂಗ್ರಹಿಸಿ ,ಅದರಲ್ಲಿ ಒಡ್ಡಿ ಲೆಕ್ಕ ಆಟ ಇತ್ಯಾದಿ ನೆನಪಿಸಿ ಕೊಂಡರು .,
ಸರಿ ಯಾರೂ ಇಲ್ಲದ ಕಡೆ ವಾಹನ ನಿಲ್ಲಿಸಿ ಕೊಯ್ದರೆ ಅದು ಕಳ್ಳತನ ವಾದೀತು . ಒಂದು ಕತೆ ವೃದ್ಧ ರೈತರೊಬ್ಬರು ಒಂದು ದೋಟಿ ಹಿಡಿದು ರಾಶಿ ಹಾಕಿದ ಕೊಯ್ದ ಹಣ್ಣುಗಳಿಂದ ಬೀಜ ಬೇರ್ಪಡಿಸುತ್ತಿದ್ದರು . ನಾವು ಕಾರ್ ನಿಲ್ಲಿಸಿದೆವು .ನನ್ನ ಪತ್ನಿ ಇಳಿದು ಅವರೊಡನೆ ತುಳಿವಿನಲ್ಲಿ ನಾಲ್ಕು ಹಣ್ಣು ತೆಗೊಳ್ಳಲೇ ? ಎಂದಾದ ಧಾರಾಳ ತೆಗೆದು ಕೊಳ್ಳಿ .ನಿಮಗೆ ನಾನು ಒಳ್ಳೆಯ ಹಣ್ಣು ಕೊಯ್ದೇ ಕೊಡುತ್ತೇನೆ ಎಂದು ಕೊಟ್ಟಾಗ ಮನೆಯವರು ಬೀಜ ತೆಗೆದು ಕೊಡ ಹೋದರು .ಅದಕ್ಕೆ ಆತ "ಅಮ್ಮ ಬೀಜ ಸಹಿತ ಕೊಂಡು ಹೋಗಿ ,ಇಲ್ಲದಿದ್ದರೆ ಹಣ್ಣು ಬಾಡುವುದು ,ಎಂದು ಕೈತುಂಬಾ ಹಣ್ಣುಗಳನ್ನು ಕೊಟ್ಟಾಗ ಅವರ ಮೊಗದಲ್ಲಿ ಒಂದು ಸಂತೃಪ್ತ ಭಾವ .ಅವರು ಬೀಜ ಕೊಯ್ದು ಮಾರಾಟ ಮಾಡುವವರು .ಆದರೂ ಹಳ್ಳಿಯ ದೊಡ್ಡ ಮನಸು ;ಇನ್ನೊಬ್ಗರೊಂದಿಗೆ ಹಂಚಿ ಕೊಂಡು ಸಂತಹ ಪಡುವ ಮರೆಯಾಗುತ್ತಿರುವ ಹಳೆಯ ಸಂಸ್ಕೃತಿ ಅವರ ನಡೆ ನುಡಿ ಮೊಗದಲ್ಲಿ ಕಂಡೆವು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ