ಬೆಂಬಲಿಗರು

ಬುಧವಾರ, ಫೆಬ್ರವರಿ 8, 2023

ತಿರುವನಂತ ಪುರ ಪ್ರವಾಸ 2

 


2.2.23 ಮುಂಜಾನೆ ರೈಲ್ವೆ ರೆಟೈರಿಂಗ್ ರೂಮ್ ನಿಂದ ಕನಕಕುನ್ನು ಅರಮನೆ ಗೆ ಆಟೋ ದಲ್ಲಿ ಪಯಣ . ಇದು ವಲಿಯಂಬಲ ರಸ್ತೆ ಯಲ್ಲಿ ಇದ್ದು ಪ್ರಶಾಂತ ಪರಿಸರ . ಪಕ್ಕದಲ್ಲಿಯೇ ವಸ್ತು ಸಂಗ್ರಹಾಲಯ ಮತ್ತು ಮೃಗಾ ಲಯ ಇವೆ . ಎದುರುಗಡೆ ಇನ್ಸ್ಟಿಟ್ಯೂಟ್ ಓಫ್ ಎಂಜಿನೀರ್ಸ್ ಇಂಡಿಯಾ ದ ಕಟ್ಟಡದ ಅವರಣದಲ್ಲಿ ಸರ್ ವಿಶ್ವೇಶ್ವರಯ್ಯ ಅವರ ಪ್ರತಿಮೆ ಕಂಡು ಹೆಮ್ಮೆ ಭರಿತ ಸಂತೋಷ ಆಯಿತು .
ಕಾರ್ಯಕ್ರಮ ಉದ್ಘಾಟನಾ ಭಾಷಣ  ಶ್ರೀ ಎಂ ಟಿ ವಾಸುದೇವನ್ ನಾಯರ್ ಅವರಿಂದ .ಕಾಲು ಗಂಟೆ ಮುಂಚಿತವಾಗಿಯೇ ಬಂದಿದ್ದರು . ಇಳಿ ವ ಯಸ್ಸು ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದರೂ ಮನ ಶಕ್ತಿ ಕುಂದಿಲ್ಲ . ಅವರು ಆಗಮಿಸಿದ ಕೂಡಲೇ ಪತ್ರಿಕಾ ಛಾಯಾಗ್ರಾಹಕರ ದಂಡೇ ಸೇರಿತು .ರಾಜಕಾರಿಣಿ ಮತ್ತು ಸಿನೆಮಾ ನಟ ರಲ್ಲದ ಓರ್ವ ಲೇಖಕನಿಗೆ ಇಂತಹ ಸ್ಟಾರ್ ವ್ಯಾಲ್ಯೂ ಕಂಡು ಸಂತೋಷ ಆಯಿತು . ತೆಂಗಿನ ಗರಿಗಳಿಂದ ನಿರ್ಮಿಸಿದ ಸಭಾಂಗಣ ತುಂಬಿ ತುಳುಕುತ್ತಿತ್ತು . ಹಣ ತೆತ್ತು ಸಾಹಿತ್ಯ ಸಮ್ಮೇಳನ ಕ್ಕೆ ಬರುವವರು ;ಇದರಲ್ಲಿ ಊಟ ತಿಂಡಿ ಸೇರಿಲ್ಲ ಎಂಬುದು ಗಮನಾರ್ಹ .

ವೇದಿಕೆಯಲ್ಲಿ ವಾಸುದೇವನ್ ನಾಯರ್ ಮಾತ್ರ.ಅಧ್ಯಕ್ಷ ,ಮುಖ್ಯ ಅತಿಥಿ ಮತ್ತು ಇತರರು ಇಲ್ಲ  . ಅವರನ್ನು  ಪರಿಚಯಿಸುವ  ಸಾಕ್ಷ್ಯ  ಚಿತ್ರ ಒಂದು ತೋರಿಸಿದರು . 

ನಮ್ಮ ಭಾಷೆ ಬಳಕೆ  ಉಳಿವು  ಸಂಸ್ಕೃತಿ ಉಳಿವಿಗೆ ಬಹಳ ಮುಖ್ಯ .ಕೊಡವ ತುಳು ಇತ್ಯಾದಿ ಭಾಷೆಗಳು ಅಳಿವಿನ ಅಂಚಿನಲ್ಲಿ ಸಾಗುತ್ತಿರುವ ಬಗ್ಗೆ ಬೇಸರ ವ್ಯಕ್ತ ಪಡಿಸಿದರು . (ಕೇರಳ ರಾಜಧಾನಿ ಯಲ್ಲಿ ಯುವಕ ಯುವತಿಯರಲ್ಲಿ ಹಲವರು ಆಧುನಿಕ ಉಡುಗೆ ತೊಡುಗೆಗೆ ಮಾರು ಹೋದರೂ ಮಾತೃಭಾಷೆಯಲ್ಲಿಯೇ  ಮಾತನಾಡುವುದ ಕಂಡೆ )

ಎಂ ಟಿ ಯವರು ತಮ್ಮಬಾಲ್ಯದಲ್ಲಿ  ಅಕ್ಷರ ದಾಹ ಹುಟ್ಟಿಸಿದ ಗುರುಗಳನ್ನು ನೆನಪಿಸಿ ಕೊಂಡರು .ಮಕ್ಕಳಲ್ಲಿ ಆರೋಗ್ಯಕರ ಸ್ಪರ್ಧೆ ಅವರ ಬೌದ್ಧಿಕ ಏಳಿಗೆಗೆ ಅವಶ್ಯ .ಪರೀಕ್ಷೆಯಿಲ್ಲದೇ ಸಾರಾಸಗಟು ಪಾಸ್ ಮಾಡುವುದೂ ಒಳ್ಳೆಯದಲ್ಲ .ಹಿಂದೆ ಆರ್ ಕೆ ನಾರಾಯಣನ್ ರಾಜ್ಯಸಭೆಯಲ್ಲಿ ಮಕ್ಕಳ ಬೆನ್ನಲ್ಲಿ ಮಣ ಭಾರ ಹೊರಿಸುವುದನ್ನು ವಿರೋಧಿಸಿದ್ದನ್ನು ಜ್ಞಾಪಿಸಿ ತಾನೂ ಅದನ್ನು ಅನುಮೋದಿಸುವುದಾಗಿ ಹೇಳಿದರು . ಮಕ್ಕಳು ಹೇಗೆ ಶಬ್ದ ಜ್ಞಾನವನ್ನು ಉಪಯೋಗಿಸುವರು ಎಂಬುದಕ್ಕೆ ತಮ್ಮ ಮನೆಯ ಮಕ್ಕಳ ಉದಾಹರಣೆ ಕೊಟ್ಟರು . ಒಮ್ಮೆ ಮಕ್ಕಳು ಮನೆಯ ಬೆಕ್ಕನ್ನು ಕೀಟಲೆ ಮಾಡುವುದನ್ನು ಕಂಡು ತಾವು ವಿಚಾರಿಸಲು ನಾವು ಅದರ 'ತೇಜೋ ವಧೆ 'ಮಾಡುತ್ತಿರುವುದಾಗಿ ಮಕ್ಕಳು ಕೊಟ್ಟ ಉತ್ತರ ವನ್ನು   ಉದಾಹರಿಸಿ ಎಲ್ಲೋ ಸಿಕ್ಕಿದ ಹೊಸ ಶಬ್ದದ ಪ್ರಯೋಗ ಎಂದರು . 

ಆದರೆ ಇಂದು ವ್ಯಾಕರಣ ಜ್ಞಾನದ ಕೊರತೆ ಮತ್ತು ಸಣ್ಣ  ಲೆಕ್ಕ ಮಾಡಲೂ  ಕ್ಯಾಲ್ಕುಲೇಟರ್   ಅವಲಂಬನೆ  ಬಗ್ಗೆ ಚಿಂತೆ ವ್ಯಕ್ತ ಪಡಿಸಿದ ಅವರು ಅಕಾಡೆಮಿಕ್ ಹೊರತಾದ ಸಾಹಿತ್ಯ ಸೃಷ್ಠಿ ಅವಶ್ಯ ಎಂದರು

ಇಂದಿನ ಸಮಾಜದಲ್ಲಿ ಕಂಡು ಬರುತ್ತಿರುವ ಅಸಹಿಷ್ಟುತೆ ಮತ್ತು ನಶಿಸುತ್ತಿರುವ ಕೋಮು ಸೌಹಾರ್ದತೆ ಬಗ್ಗೆ ಕಳವಳ ವ್ಯಕ್ತ ಪಡಿಸಿದ ಎಂ ಟಿ ಇದ್ದಕ್ಕೆ ಬೇಗನೇ ಪರಿಹಾರ ಒದಗುವದು ಎಂಬ ಆಶಾಭಾವನೆ ವ್ಯಕ್ತ ಪಡಿಸಿದರು . 

ನಿಶ್ಶಬ್ದ ವಾಗಿ ಅವರ ಭಾಷಣ ತುಂಬು ಸಭೆ ಆಲಿಸಿದ್ದು ಒಂದು  ಒಳ್ಳೆಯ ಅನುಭವ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ