ಬೆಂಬಲಿಗರು

ಮಂಗಳವಾರ, ಮಾರ್ಚ್ 29, 2022

ಆಟಕ್ಕಿಲ್ಲದ ಫೂಟ್ ಬಾಲ್

 

 

 

 

  

 

 

 

   Foot Valve – Perfect Engine & Perfect PumpsKirloskar 5HP Diesel Engine Pump Set, Domestic, Air Cooled, | ID:  16412124355Word Duniya                                                                                               ಬಾಲ್ಯದಲ್ಲಿ ನಮ್ಮಲ್ಲಿ ತೋಟಕ್ಕೆ ಹಾಯಿಸಲು ಒಂದು ೫ ಅಶ್ವಶಕ್ತಿಯ ಡೀಸೆಲ್ ಪಂಪ್ ಇತ್ತು . ಪೆಟ್ಟರ್ ಕಂಪನಿ ಯ ಅದನ್ನು ಕಾಸರಗೋಡಿನ  ಆಟೋ ಸರ್ವಿಸ್ ಅವರ ಮೂಲಕ ಖರಿಸಿದ್ದು ,ಅದರ ಪಾಲುದಾರ ನಮ್ಮ ಕಣಿಯೂರು ಪಟೇಲರ ಮನೆತನದವರು ಇದ್ದರು . ಮೋಟಾರ್ ಅಥವಾ ಪಂಪ್ ಏನಾದರೂ ತೊಂದರೆ ಕೊಟ್ಟರೆ ಕಾಸರಗೋಡಿನಿಂದ  ಕು೦ಞರಾಮ   ಎಂಬ ಫಿಟ್ಟರ್ ಬರುತ್ತಿದ್ದು ಅವರ ಮಲಯಾಳ ಮಿಶ್ರಿತ ಕನ್ನಡ ಕೇಳಲು ತಮಾಷೆ ಎನಿಸುತ್ತಿತ್ತು .ನಿರ್ಜೀವಿಯನ್ನು ಬದುಕಿಸ ಬಲ್ಲ ಮಾಂತ್ರಿಕನಂತೆ ಅವರು ಕಾಣಿಸುತ್ತಿದ್ದರು . ಡೀಸೆಲ್ ಪಂಪ್ ಸ್ಟಾರ್ಟ್ ಮಾಡಲು ಒಂದು ಹ್ಯಾಂಡಲ್ ತಿರುಗಿಸಿ ವೇಗ ಪಡೆದೊಡನೆ ಒಂದು ಕುಟ್ಟಿ ಅದುಮಬೇಕು .ಆಗ ಅದು ಲಯಭದ್ದವಾಗಿ ವೇಗೋತ್ಪರ್ಷ ಪಡೆದು ಕೊಂಡು ತಾನೇ ನಡೆಯುವುದು . ರೈಲು ಎಂಜಿನ್ ಸ್ಟಾರ್ಟ್ ಆದಂತೆ .ಮುಂದೆ ನಿಲ್ಲಿಸುವಾಗಲೂ ಅದೇ ಲಯದಲ್ಲಿ ಹಿಂದೆ ಹೋಗುವುದು . 

ನೀರನ್ನು ಕಣಿ ಅಥವಾ ನಾಲೆಗೆ ಹಾಯಿಸಿ ಅಲ್ಲಲ್ಲಿ ಬಾಳೆ  ಎಲೆ ಚಾಂಬಾರಿನ ಕಟ್ಟ ಕಟ್ಟ ಹಾಕಿ ಶೇಖರವಾದ ನೀರನ್ನು ಅಡಿಕೆ ಹಾಳೆಯ ಚಿಳ್ಳಿಯಲ್ಲಿ ಚೇಪುವುದು . ಈಗಿನವರಿಗೆ ಗೊತ್ತಿರಲಿಕ್ಕಿಲ್ಲ ;ಅದಕ್ಕೆ ವಿವರಣೆ . 

ಪಂಪ್ ಗೆ ಪೈಪ್ ಹೊಂದಿಸಿ ಕೆರೆಯ ನೀರಿಗೆ ಇಳಿಸುವದು . ನೀರಿನ ತುದಿಯಲ್ಲಿ ಒಂದು ಪಾತ್ರೆಯಂತಹ ಸಾಧನ ಇದೆ .ಅದನ್ನು ನಾವು ಫುಟ್ ಬಾಲ್ ಎಂದು ಕರೆಯುತ್ತಿದ್ದೆವು .ವಾಸ್ತವದಲ್ಲಿ ಅದು ಫುಟ್ ವಾಲ್ವ್ ಎಂದು ತಿಳಿದದ್ದು ಈಚೆಗೆ . ಪೈಪ್ನಲ್ಲಿ ಇರುವ ನೀರಿನ ಕಾಲಂ ಹಿಂದೆ ಹೋಗದಂತೆ ತಡೆಗಟ್ಟಲು ಇರುವ ಏಕ ಮುಖ ವಾಲ್ವ್ ,. ಪೈಪ್ ನಲ್ಲಿ ನೀರು ತುಂಬಿರದಿದ್ದರೆ ಮೋಟಾರ್ ನೀರು ಎಳೆದು ಪಂಪ್ ಮಾಡದು . ನೀರು ಇದೆಯೇ ಎಂದು ನೋಡಲು ಒಂದು ಸಣ್ಣ ಟ್ಯಾಪ್ ಪಂಪ್ ನಲ್ಲಿ ಇದೆ .ನೀರು ಇಲ್ಲದಿದ್ದರೆ ಪೈಪ್ ಮೂಲಕ ನೀರು ತುಂಬಿಸುವುದು ,ಗೊರಂ ಗೊರಂ ಎಂದು ಅದು ನೀರು ಕುಡಿದು ಫುಲ್ ಆದಾಗ ಮೋಟಾರ್ ಸ್ಟಾರ್ಟ್ ಮಾಡುವದು . ಕೆಲವೊಮ್ಮೆ ಫುಟ್ ಬಾಲ್ ಗೆ ಭೇದಿ ಹಿಡಿದು ಎಷ್ಟು ನೀರು ತುಂಬಿಸಿದರೂ ಸಾಲದು .ಆಗ ಸೆಗಣಿ ನೀರಿನಲ್ಲಿ ಕರಡಿ ಪಂಪ್ ಗೆ ಇಳಿಸುತ್ತಿದ್ದು ಸ್ವಲ್ಪ ಮಟ್ಟಿಗೆ ಪರಿಣಾಮಕಾರಿ ಆಗಿರುತ್ತಿತ್ತು ;ಸೆಗಣಿ ಪ್ರೋಕ್ಷಣೆ ಮಾಡಿ ಶುದ್ಧವಾದ ನೀರು ಮೇಲೆ ಬರುವುದು . 

ನಮ್ಮ ಸುತ್ತ ಮುತ್ತ ನಮ್ಮಲ್ಲಿ ಮಾತ್ರ ಮೋಟಾರ್ ಪಂಪ್ ಇದ್ದು ಇಡೀ ಬಯಲಿಗೇ ಅದರ ಸದ್ದು ಕೇಳುವುದು .ಪೆಟ್ಟರ್ ಪಂಪ್ ಗೆ ವಯಸ್ಸಾದಾಗ ಕೂಪರ್ ಪಂಪ್ ಬಂತು . ಕಂಪನಿ ಯವರು ಹೊಸಾ ಪಂಪಿನ ಪೆಟ್ಟಿಗೆಯೊಳಗೆ ಇಸ್ಪೇಟು ಎಲೆಯ ಸೆಟ್ ಗಳನ್ನು ಉಚಿತವಾಗಿ ಕೊಡುತ್ತಿದ್ದರು .ಅಡಿಕೆಯವರಿಗೆ ಇಸ್ಪೇಟು ಚಟ ಇದೆ ಎಂದುದು ಅವರಿಗೆ ತಿಳಿದಿತ್ತು . 

ನಮ್ಮ ತೋಟದ ಬದಿಯಲ್ಲಿ ನರೆಕರೆಯವರ ಗದ್ದೆಗೆ ಜೊಟ್ಟೆ (ಏತ )ದಿಂದ ನೀರು ಹಾಯಿಸುತ್ತಿದ್ದರು . ಒಂದು ಕಡೆ ನೀರ ಮರಿಗೆ ಮೊಗೆಯುವವರು ,ಇನ್ನೊಂದು ಕಡೆ ಒಂದೋ ಎರಡೋ ಮಂದಿ ಹಗ್ಗ ಹಿಡಿದು ನೇತಾಡುವವರು . ಅದು ಕೂಡಾ ಲಯಬದ್ಧವಾಗಿ ಶಬ್ದ ಮಾಡುತ್ತ್ತಿತ್ತು .ನಮಗೆ ಮಕ್ಕಳಿಗೆ ಮನಸ್ಸಿನಲ್ಲಿಯೇ ಏತ ದಲ್ಲಿ ನೇತಾಡುವ ಅಸೆ ಆಗುತ್ತಿತ್ತು . ಆಮೇಲೆ ಅದು ಮರೆಯಾಗಿ ಹಗ್ಗ ಹಾಕಿ ಎಳೆದು ಸ್ಟಾರ್ಟ್ ಮಾಡುವ ವಿಲಿಯರ್ಸ್ ಚಿಮಿಣಿ ಎಣ್ಣೆ ಪಂಪ್ ಗಳು ಬಂದವು  

(ಚಿತ್ರಗಳ ಮೂಲಗಳಿಗೆ ಆಭಾರಿ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ