ಬೆಂಬಲಿಗರು

ಗುರುವಾರ, ಮಾರ್ಚ್ 24, 2022

ಮುರಿದ ಕವಿ ಕನಸು

 ರಾಷ್ಟ್ರಕವಿ ಕುವೆಂಪು ಬಯಸಿದರು

ನಮ್ಮ ನಾಡು ಆಗಲಿ

ಸರ್ವ ಜನಾಂಗದ ಶಾಂತಿಯ ತೋಟ 

ಅಡಿಗರು ಪ್ರತಿಜ್ನೆ ಮಾಡಿದರು

ಕಟ್ಟುವೆವು ನಾವು ಹೊಸ ನಾಡೊಂದನು,
                - ರಸದ ಬೀಡೊಂದನು.
ಹೊಸ ನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರೆಯದೀ ಮಾಂತ್ರಿಕನ ಮಾಟ ಮಸುಳುವ ಮುನ್ನ,
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು!

 

ಜಾತಿಮತ ಭೇದಗಳ ಕಂದಕವು ಸುತ್ತಲೂ,
ದುರ್ಭೇದ್ಯವೆನೆ ಕೋಟೆ ಕೊತ್ತಲಗಳು;
ರೂಢಿ ರಾಕ್ಷಸನರಸುಗೈಯುವನು, ತೊಳ್ತಟ್ಟಿ 
ತೊಡೆತಟ್ಟಿ ಕರೆಯುವನು ಸಂಗ್ರಾಮಕೆ!
 
ಅಂತೂ ಕಟ್ಟಿದೆವು ಕಟ್ಟಿ ಹಾಡಿದೆವು ಠಾಗೋರ್ ಆಶಯ ಪದ್ಯ 
 ಎಲ್ಲಿ ಮನಕಳುಕಿರದೋ ಎಲ್ಲಿ ತಲೆ ಬಾಗಿರದೋ
ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ
ಎಲ್ಲಿ ಮನೆಯೊಕ್ಕಟ್ಟು ಸಂಸಾರ ನೆಲೆಗಟ್ಟು
ಧೂಳೊಡೆಯದಿಹುದೋ ತಾನಾನಾಡಿನಲ್ಲಿ
ಎಲ್ಲಿ ಸತ್ಯದಗಾಧ ನೆಲೆಯಿಂದ ಸವಿವಾತು
ಸಲ್ಲಲಿತ ನಡೆಯಿಂದ ಮುಂಬರಿವುದಲ್ಲಿ
ಎಲ್ಲಿ ದಣಿವಿರದ ಸಾಧನೆಯು ಸಫಲತೆಗೆಡೆಗೆ
ತೋಳ ನೀಡಿಹುದೋ ತಾನಾನಾಡಿನಲ್ಲಿ
ಎಲ್ಲಿ ಸುವಿಚಾರ ನಿರ್ಮಲ ಜಲದೊಸರು ಹರಿದು
ಕಾಳರೂಢಿಯ ಮರಳೊಳಿಂಗಿ ಕೆಡದಲ್ಲಿ
ಎಲ್ಲಿ ನೀನೆಮ್ಮ ಚಿಂತನವನುದ್ಯಮವ ಸುವಿ-
-ಶಾಲತೆಯ ಪೂರ್ಣತೆಗೆ ಮುಂಬರಿಸುವಲ್ಲಿ
ಅಲ್ಲಿಯಾ ಬಂಧನ ರಹಿತ ಸುಖದ ಸ್ವರ್ಗದಲಿ
ಪಾಲಿಸೈ ಪಿತ ನಮ್ಮ ನಾಡೆಚ್ಚರಿರಲಿ !
 
 
ಕಟ್ಟುವುದು ಎಂದರೆ ಕೈಗಳು ಬೇಕು ಸಾವಿರ
ಮೇಲಾಗಿ ಸನ್ಮನಸು
 ಚಿಗುರಿತು ಎನ್ನುವಷ್ಟರಲ್ಲಿ ಶಾಂತಿಯ ಮಾಮರ .
 
 ಎಲ್ಲಿಂದ ಬಂದವೋಮನೆಮುರುಕ ಬುಲ್ ದೋಜರ್ ಗಳು
 ಯಂತ್ರಗಳಲ್ಲವೇ ಎಲ್ಲಿ ಅವಕ್ಕೆ  ಮನಸು 
ಅರಿವು ಹೇಗೆ ಇದ್ದೀತು ಪಿತೃಗಳು ನಾವು ಕಂಡ ಕನಸು 
ಭಯ ಯಂತ್ರದ್ದಲ್ಲ    ಹಿಂಡು  ಹಿಂಡಾಗಿ ಹಿಂದು ಮುಂದು ನೋಡದೇ                                                             ಕೇಳಿ ಬರುತ್ತಿರುವ ಜಯ ಘೋಷ , ಮುರಿಯುವ ತವಕ
                                                                                                   



 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ