ಬೆಂಬಲಿಗರು

ಮಂಗಳವಾರ, ಮಾರ್ಚ್ 29, 2022

ಜ್ಯೋತ್ಸ್ನಾಕಾಮತ್ ಅವರ ಕಲ್ಕತ್ತಾ ದಿನಗಳು


 

                                                      

ಕೃಷ್ಣಾನಂದ ಕಾಮತ್ ಮತ್ತು ಜ್ಯೋತ್ಸ್ನಾ ಕಾಮತ್  ನನ್ನ ಮೆಚ್ಚಿನ ಬರಹಗಾರ ದಂಪತಿಗಳು .

1977 ರಿಂದ 1980 ರ ವರೆಗೆ ಕಲ್ಕತ್ತಾ ಆಕಾಶವಾಣಿಯಲ್ಲಿ ಇದ್ಗಾಗಿನ ಅನುಭವ ಮತ್ತು ನೆನಪುಗಳ ಹೊತ್ತಿಗೆ "ಕಲ್ಕತ್ತಾ ದಿನಗಳು :ಡಾ ಜ್ಯೋತ್ಸ್ನಾ ಕಾಮತ್ ಅವರ ಇತ್ತೀಚೆಗೆ ಬಿಡುಗಡೆ ಆದ ಕೃತಿ . ಎರಡೇ ದಿನಗಳಲ್ಲಿ ಓದಿ ಮುಗಿಸಿದೆ . ಇವರ ಪತಿ ದಿ.ಕೃಷ್ಣಾನಂದ ಕಾಮತ್ ಅವರ "ವಂಗ ದರ್ಶನ' ಓದಿ ಮೆಚ್ಚಿ ಕೊಂಡಿದ್ದೆ . ದಂಪತಿಗಳ  ಜೀವ ಕುತೂಹಲ ,ಸಾಂಸ್ಕೃತಿಕ ಪರಿಸರ ಪ್ರಜ್ನೆ ,ಇತಿಹಾಸದ ಅಧ್ಯಯನ ಮತ್ತು ನವಿರಾದ ಹಾಸ್ಯ ಪಜ್ನೆ  ಎಲ್ಲಾ ಕೃತಿಗಳಲ್ಲಿ  ಎದ್ದು ಕಾಣುತ್ತವೆ . ಕಾಮತ್ ದಂಪತಿಗಳ ಮಗ ಕಾಮತ್ ಪೌ ಪುರಿ ಎಂಬ ಬ್ಲಾಗ್ ನಡೆಸುತ್ತಿದ್ದು ಅಮೂಲ್ಯ ವಿಷಯಗಳ ಆಕರ ವಾಗಿದೆ .ಅದರಲ್ಲಿಯೇ ಅಮ್ಮಾಸ್ ಕಾಲಂ ಎಂದು ಜ್ಯೋತ್ಸ್ನಾ ಕಾಮತ್ ಕೂಡಾ ಬರೆಯುತ್ತಿದ್ದು ನಾನು ಓದಿ ಸಂತೋಷ ಪಟ್ಟಿದ್ದೇನೆ.

ಕಲ್ಕತ್ತಾ ದಿನಗಳು ಪುಸ್ತಕಕ್ಕೆ ಲೇಖಕಿ ಶ್ರೀಮತಿ ನೇಮಿಚಂದ್ರ  ಒಪ್ಪವಾದ ಮುನ್ನುಡಿ ಬರೆದಿದ್ದು ,ಈ ಪುಸ್ತಕ ಪ್ರಕಟವಾಗಲು ಅವರ ಪ್ರಚೋದನೆ ಕಾರಣ . 

ಜ್ಯೋತ್ಸ್ನಾ ಕುಟುಂಬವನ್ನು ಬಿಟ್ಟು ಒಬ್ಬರೇ ಕಲ್ಕತ್ತಾ  ಇದ್ದು ,ಈ ಅವಧಿ ಪೂರ್ಣ ಮಹಾರಾಷ್ಟ್ರ ನಿವಾಸದಲ್ಲಿ ವಾಸ .ಅಲ್ಲಿ ವಿಭಿನ್ನ ಸಂಸ್ಕೃತಿ ,ಭಾಷೆಯ ,ಅಭಿರುಚಿಯ ಸಂಗಾತಿಗಳ ಒಡನಾಟ . ಆಕಾಶವಾಣಿ ಯ ಮುಖ್ಯವಾಗಿ ಆಗಿನ ಕಮ್ಯೂನಿಸ್ಟ್ ಆಡಳಿತದ ಸಮಯದ ಕೆಲಸ ಸಂಸ್ಕೃತಿ ಯ ಪಕ್ಷಿನೋಟ ಇದೆ. ಅವರು ಅಲ್ಲಿ ಇದ್ದ ಅವಧಿಯಲ್ಲಿ ರವಿದ್ರನಾಥ ಠಾಗೋರ್ ,ರಾಮಕೃಷ್ಣ ಪರಮ ಹಂಸ ರ ಜನ್ಮ ಭೂಮಿಗಳಗೆ ಭೇಟಿ ನೀಡಿ ಸಂತೋಷ ಪಡುತ್ತಾರೆ .ಇತಿಹಾಸ ಪ್ರಸಿದ್ದ ವ್ಯಕ್ತಿಗಳ ಗೋರಿ ಸ್ಮಾರಕಗಳನ್ನು ಸಂದರ್ಶಿಸುತ್ತಾರೆ .

'ಮಹಿಳೆಯರಿಗೆ ಬಂಗಾಳದಲ್ಲಿ ಬಹಳ ಗೌರವ ಸ್ಥಾನ ಇದ್ದು ,ಅತ್ಯಂತ ಸುರಕ್ಷಿತ . ದಕ್ಷಿಣ ಭಾರತದ ಜಾತಿ ವಿಷಮತೆ ಬಂಗಾಳದಲ್ಲಿ ಇಲ್ಲ . ಬೆಂಗಾಲಿಗಳ ಪುಸ್ತಕ ಪ್ರೇಮ ಅದ್ಭುತ .' ಎಂಬುದು ಅವರಿಗೆ ಎದ್ದು ಕಾಣುವ ಅಂಶಗಳು ಕಲ್ಕತ್ತಾ ಪುಸ್ತಕ ಮೇಳದ ಅನುಭವ ಚೆನ್ನಾಗಿ ಕೊಟ್ಟಿದ್ದಾರೆ .ಸ್ಥಳೀಯ ಆಹಾರ ಪ್ರಕಾರಗಳು ,ಉಡುಗೆ ತೊಡುಗೆ ಮತ್ತು ಸಾರಿಗೆ ಬಗ್ಗೆ ಅನ್ವ್ಶೇಶಕ ಕಣ್ಣು .

ಪ್ರಸಿದ್ದ ಚರಿತ್ರಕಾರ ಆರ್ ಸಿ ಮುಜುಂದಾರ್ ಅವರನ್ನು ,ಖ್ಯಾತ ವಂಗೀಯ ಭಾಗಿನಿಯರಾದ ಲೇಡಿ ರಾಣಿ ಮುಖರ್ಜಿ ,ಮೈತ್ರೇಯಿ ದೇವಿ ಮತ್ತು ಅಶಪೂರ್ಣಾ ದೇವಿ ಅವರ ಅಮೂಲ್ಯ ಸಂದರ್ಶನ ಗಳು ಪುಸ್ತಕದ ತೂಕ ಹೆಚ್ಚಿಸಿವೆ . 

ದೇಶದ ವಿವಿದೆಡೆ ಆಕಾಶವಾಣಿಯಲ್ಲಿ ಕಾರ್ಯ ನಿರ್ವಹಿಸಿದ ಜ್ಯೋತ್ಸ್ನಾ ಅವರ ಅನುಭವದ ಜೋಳಿಗೆಯಲ್ಲಿ ಇನ್ನೂ ಅಮೂಲ್ಯ ಸಂಗ್ರಹಗಳು ಇರ ಬಹುದು . ಅವರ ಬ್ಲಾಗ್ ಕೊಂಡಿ ವಿಳಾಸ ಕೆಳಗೆ ಕೊಟ್ಟಿರುವೆನು .ವರ್ಷಗಳ ಹಿಂದೆ ಪುತ್ತೂರಿಗೆ ಅವರನ್ನು ಕರೆಯಿಸಿ ಸಂವಾದ ಕಾರ್ಯಕ್ರಮ ಏರ್ಪಡಿಸುವ ಉದ್ದೇಶದಿಂದ ಸಂಪರ್ಕಿಸಿದಾಗ ಅನಾರೋಗ್ಯ ಕಾರಣದಿಂದ  ಬರುವುದು ಕಷ್ಟ ಎಂದಿದ್ದರು .


 https://www.kamat.com/jyotsna/blog/

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ