ಬೆಂಬಲಿಗರು

ಮಂಗಳವಾರ, ಫೆಬ್ರವರಿ 14, 2023

ನಿಜವಾದ ಪೂಜೆ

ನಿಜವಾದ ಪೂಜೆ

 ಸ್ವಾಮಿ ವಿವೇಕಾನಂದ ರು ರಾಮೇಶ್ವರದಲ್ಲಿ ಮಾಡಿದ ಭಾಷಣದಿಂದ ಆಯ್ದ ಭಾಗ

ಧರ್ಮ ಇರುವುದು ಪ್ರೀತಿಯಲ್ಲಿ,ಬಾಹ್ಯಾಚಾರ ದಲ್ಲಿ ಅಲ್ಲ .ಧರ್ಮಕ್ಕೆ ಶುದ್ಧ ನಿಷ್ಕಪಟ ಹೃದಯವೇ ಮುಖ್ಯ .ಒಬ್ಬನ ದೇಹ ಮತ್ತು ಮನಸ್ಸು ಪರಿಶುದ್ದವಿಲ್ಲದೇ ಇದ್ದರೆ ಅವನು ದೇವಸ್ಥಾನಕ್ಕೆ ಬಂದು ಪ್ರಾರ್ಥಿಸಿದರೆ ಪ್ರಯೋಜನ ಇಲ್ಲ .ಬಾಹ್ಯ ಪೂಜೆ ಆಂತರಿಕ ಪೂಜೆಯ ಸಂಕೇತ ಮಾತ್ರ .ಆಂತರಿಕ ಪೂಜೆಗೆ ಅಂತರಂಗ ಶುದ್ದಿಯೇ ಮುಖ್ಯ .ಇದಿಲ್ಲದೆ ಬರಿಯ ಬಾಹ್ಯ ಪೂಜೆಯಿಂದ ಪ್ರಯೋಜನ ಇಲ್ಲ .

ಕಲಿಯುಗದಲ್ಲಿ ಜನರು ಬಹಳ ಕುಲಗೆಟ್ಟು ಹೋಗಿರುವರು .ಎಂತಹ ಮಹಾಪಾತಕ ಮಾಡಿದರೂ ಪುಣ್ಯ ಕ್ಷೇತ್ರಕ್ಕೆ ಹೋದರೆ ದೇವರು ತಮ್ಮ ಪಾತಕವನ್ನು ಕ್ಷಮಿಸುವನು ಎಂದು ಭಾವಿಸುವರು  .ಅಶುದ್ಧ ಮನಸಿನಿಂದ ದೇವಸ್ಥಾನಕ್ಕೆ ಹೋದರೆ ,ತನ್ನಲ್ಲಿರುವ ಪಾಪದ ಮೊತ್ತಕ್ಕೆ ಮತ್ತಷ್ಟನ್ನು ಸೇರಿಸಿಕೊಳ್ಳುವನು .ಮನೆಗೆ ಹೋಗುವಾಗ ಹಿಂದೆ ಇದ್ದುದಕ್ಕಿಂತ ಹೆಚ್ಚು ಹೀನನಾಗಿರುತ್ತಾನೆ .ಅಪವಿತ್ರರು ಇರುವಲ್ಲಿ ನೂರು ದೇವಸ್ಥಾನ ಗಳು ಇದ್ದರೂ ,ತೀರ್ಥವು ಮಾಯವಾಗಿ ಹೋಗುತ್ತದೆ .ತೀರ್ಥ ಕ್ಷೇತ್ರದಶ್ಲ್ಲಿ ವಾಸಿಸುವುದು ಕಷ್ಟ ,ಸಾಧಾರಣ ಸ್ಥಳಗಳಲ್ಲಿ ಮಾಡಿದ ಪಾಪವನ್ನು ಸುಲಭವಾಗಿ ಕಳೆದು ಕೊಳ್ಳ ಬಹುದು .ತೀರ್ಥ ಕ್ಷೇತ್ರದಲ್ಲಿ ಮಾಡಿದ ಪಾಪದಿಂದ ಪಾರಾಗಲು ಆಗುವುದಿಲ್ಲ .ನಾವು ಪರಿಶುದ್ಧ ರಾಗುವುದು ,ಇತರರಿಗೆ ಒಳ್ಳೆಯದನ್ನು ಮಾಡುವುದು ಎಲ್ಲ ಪೂಜೆಯ ಸಾರ.ಯಾರು ದೀನರಲ್ಲಿ ,ರೋಗಿಗಳಲ್ಲಿ ಶಿವನನ್ನು ನೋಡುವರೋ ಅವರೇ ನಿಜವಾಗಿ ಶಿವನನ್ನು ಪೂಜಿಸುವವರು .ಒಬ್ಬನು ಕೇವಲ ವಿಗ್ರಹದಲ್ಲಿ  ಮಾತ್ರ ಶಿವನನ್ನು ನೋಡಿದರೆ ಅವನ ಪೂಜೆ ಗೌಣ .ಜಾತಿ -ಕುಲ-ಗೋತ್ರಗಳನ್ನು ಲೆಕ್ಕಿಸದೆ ಯಾರು ಬಡವನಲ್ಲಿ ಶಿವನನ್ನು ನೋಡಿ ಅವನಿಗೆ ಸೇವೆ ಸಲ್ಲಿಸುವರೋ ,ಅವನಿಗೆ ಸಹಾಯ ಮಾಡುವರೋ ,ಅವರ ಮೇಲೆ ಶಿವನಿಗೆ ತನ್ನನ್ನು ಕೇವಲ ವಿಗ್ರಹದಲ್ಲಿ ನೋಡುವವರಿಗಿಂತ  ಹೆಚ್ಚು ಪ್ರೀತಿ .

ಪುರಂಧರ ದಾಸರು ಹಾಡಿದ್ದು 

 ಮನ ಶುದ್ಧಿಯಿಲ್ಲದವಗೆ ಮಂತ್ರದ ಫಲವೇನು

ತನು ಶುದ್ಧಿಯಿಲ್ಲದವಗೆ ತೀರ್ಥದ ಫಲವೇನು
ಮಿಂದಲ್ಲಿ ಫಲವೇನು ಮೀನುಮೊಸಳೆಯಂತೆ
ನಿಂದಲ್ಲಿ ಫಲವೇನು ಶ್ರೀಶೈಲದ ಕಾಗೆಯಂತೆ
ಹೊರಗೆ ಮಿಂದು ಒಳಗೆ ಮೀಯದವರ ಕಂಡು
ಬೆರಗಾಗಿ ನಗುತಿದ್ದ ಪುರಂದರವಿಠಲ.
ಅಕ್ಕಮಹಾದೇವಿ ವಚನ 
   ತನು ಕರಗದವರಲ್ಲಿ

ಮಜ್ಜನವನೊಲ್ಲೆಯಯ್ಯಾ ನೀನು.

ಮನ ಕರಗದವರಲ್ಲಿ

ಪುಷ್ಪವನೊಲ್ಲೆಯಯ್ಯಾ ನೀನು.

ಹದುಳಿಗರಲ್ಲದವರಲ್ಲಿ

ಗಂಧಾಕ್ಷತೆಯನೊಲ್ಲೆಯಯ್ಯಾ ನೀನು.

ಅರಿವು ಕಣ್ದೆರೆಯದವರಲ್ಲಿ

ಆರತಿಯನೊಲ್ಲೆಯಯ್ಯಾ ನೀನು.

ಭಾವ ಶುದ್ಭವಿಲ್ಲದವರಲ್ಲಿ

ಧೂಪನೊಲ್ಲೆಯಯ್ಯಾ ನೀನು.

ಪರಿಣಾಮಿಗಳಲ್ಲದವರಲ್ಲಿ

ನೈವೇದ್ಯವನೊಲ್ಲೆಯಯ್ಯಾ ನೀನು.

ತ್ರಿಕರಣ ಶುದ್ಧವಿಲ್ಲದವರಲ್ಲಿ

ತಾಂಬೂಲವನೊಲ್ಲೆಯಯ್ಯಾನೀನು.

ಹೃದಯಕಮಲ ಅರಳದವರಲ್ಲಿ

ಇರಲೊಲ್ಲೆಯಯ್ಯಾ ನೀನು.

ಎನ್ನಲ್ಲಿ ಏನುಂಟೆಂದು

ಕರಸ್ಥಲವನಿಂಬುಗೊಂಡೆ ಹೇಳಾ

ಚೆನ್ನಮಲ್ಲಿಕಾರ್ಜುನಯ್ಯಾ .
 

ಸೋಮವಾರ, ಫೆಬ್ರವರಿ 13, 2023

ಮಾತೃಭೂಮಿ ಅಕ್ಷರ ಜಾತ್ರೆಯಲ್ಲಿ ಮಿಂಚಿದ ಕನ್ನಡಿಗರು


 ಶ್ರೀಮತಿ ಸುಧಾ ಮೂರ್ತಿ ದೇಶದ ಎಲ್ಲಾ ಸಾಹಿತ್ಯ ಕೂಟಗಳಲ್ಲಿ ಬೇಡಿಕೆ ಉಳ್ಳ ಲೇಖಕಿ ಮತ್ತು ಸಮಾಜ ಸೇವಕಿ . ಅವರ ಪುಸ್ತಕಗಳು ಜಗತ್ತಿನ ಹಲವು ಭಾಷೆಗಳಿಗೆ ಅನುವಾದ ಗೊಂಡಿವೆ .ಮಕ್ಕಳಿಗಾಗಿ ಸಚಿತ್ರ ಕತೆ ಪುಸ್ತಕಗಳನ್ನೂ ಬರೆದಿರುವರು . ಪ್ರವಾಸ ಪ್ರಿಯರಾದ ಅವರು ಜಗತ್ತಿನ ವಿವಿಧ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಆಚಾರ ವಿಚಾರಗಳನ್ನು ಕುತೂಹಲದಿಂದ ನೋಡಿರುವರು . 

ಮೊನ್ನೆ ತಿರುವನಂತ ಪುರದ ಲ್ಲಿ ನಡೆದ ಮಾತೃಭೂಮೀ ಅಕ್ಷರ ಜಾತ್ರೆಯಲ್ಲಿ ಕೂಡಾ ಅವರು ಒಂದು ಸ್ಟಾರ್ ಅತಿಥಿ .ಅವರ ಟ್ರೇಡ್ ಮಾರ್ಕ್ ನಗೆ ಮತ್ತು ಸರಳ ಸೀರೆಯ ಉಡುಗೆ ,ಅಂತೆಯೇ ಅವರ ಭಾಷೆ ,ಅಲ್ಲಿ ಸರಳ ಇಂಗ್ಲಿಷ್ ನಲ್ಲಿ ಮಾತು . ಅವರದು ಎರಡು ಮೂರು ಸೆಷನ್ ಇತ್ತು . ಪ್ರೇಕ್ಷಕರ ಪ್ರಶ್ನೆಗೆ ಸರಳ ಉತ್ತರ .

ಅವರು ಹೆತ್ತವರಿಗೆ ಒಂದು ಸಲಹೆ ಕೊಟ್ಟರು .ಮಕ್ಕಳಿಗೆ ಧಾರಳವಾಗಿ ಪಾಕೆಟ್ ಮನೀ ಕೊಡ ಬೇಡಿ. ಆಗಾಗ ಉಡುಗೊರೆ ಬಹುಮಾನ,ಸಿಹಿತಿಂಡಿ ಇತ್ಯಾದಿ ಕೊಡುವ ಪ್ರವೃತ್ತಿ ಸಲ್ಲ . ಮಕ್ಕಳು ಹಬ್ಬ ಹರಿದಿನಗಳಿಗಾಗಿ ಕಾಯ ಬೇಕು . ದೀಪಾವಳಿಗೋ ಯುಗಾದಿಗೋ ಸಿಹಿತಿಂಡಿ ಮಾಡಿ ಕೊಡಿರಿ .ತಮ್ಮ ಮಕ್ಕಳನ್ನು ಇತರರ ಸಾಧನೆಗೆ ಹೋಲಿಸಿ ಅವರ ಮೇಲೆ ಒತ್ತಡ ಹೇರ ಬೇಡಿ . 

ಅಕ್ಷರ ಜಾತ್ರೆಯಲ್ಲಿ ಇನ್ನಿಬ್ಬರು ಕನ್ನಡಿಗರು ಜನಾಕರ್ಷಣೆಯ ಕೇಂದ್ರ ಆಗಿದ್ದರು . ಕ್ಯಾಪ್ಟನ್ ಗೋಪಿನಾಥ್ ಅವರೊಡನೆ ಎರಡು ಸೆಷನ್ ಇತ್ತು .ತಮ್ಮ ಮಾತಿನಲ್ಲಿ ಹಲವು ಕನ್ನಡ ಕವಿತೆಗಳನ್ನು ಗಾದೆಗಳನ್ನು ಉಲ್ಲೇಖಿಸಿದ್ದು ವಿಶೇಷ .ಅವರ ಆತ್ಮ ಚರಿತ್ರೆಯನ್ನು ಆಧರಿಸಿ ತಯಾರಾದ ಚಿತ್ರ ಸೂರೈ ಪೊಟ್ರು (ಶೂರನ ಪೊಗಳು )ದ ನಾಯಕ ನಟಿ ಅಪರ್ಣಾ ಬಾಲಮುರಳಿ ಅವರ ಜತೆಗೆ ಒಂದು ಕಾರ್ಯಕ್ರಮ . ಮಲಯಾಳಂ ನಟ ನಟಿಯರು ಬಹುಶ್ರುತರು ಮತ್ತು ಸಾಹಿತ್ಯ ಸಂಗೀತ ರಾಜಕೀಯ ಇತ್ಯಾದಿ ಜ್ಞಾನ ಉಳ್ಳವರು . 



ಮತ್ತೊಬ್ಬಬ್ಬರು ನಟ ಪ್ರಕಾಶ್ ರಾಜ್ . ಇವರ ಕಾರ್ಯಕ್ರಮ ದಲ್ಲಿಯೂ ಹಾಲ್ ತುಂಬಿ ತುಳುಕುತ್ತಿತ್ತು . ಪ್ರಕಾಶ್ ರಾಜ್ ದಕ್ಷಿಣದ ಎಲ್ಲಾ ಭಾಷೆಗಳನ್ನೂ ಚೆನ್ನಾಗಿ ಬಲ್ಲವರು . ಪ್ರೇಕ್ಷಕರ ಪ್ರಶ್ನೆಗಳಿಗೆ  ನೇರ ದಿಟ್ಟ ಉತ್ತರ . 

                             

                 ಲೇಖಕ ವಸುದೇಂದ್ರ ಅವರು ಒಮ್ಮೆ ಕಾಣ ಸಿಕ್ಕಿದರು . ಅವರ ಕತೆಗಳ ಇಂಗ್ಲಿಷ್ ಆವೃತ್ತಿ ಮಾರಾಟಕ್ಕೆ ಇಟ್ಟಿದ್ದರು .ಕನ್ನಡದ ಪ್ರಸಿದ್ಧ ಲೇಖಕರಾದ  ಶಿವರಾಮ ಕಾರಂತ ,ಭೈರಪ್ಪ ,ಜಯಂತ ಕಾಯ್ಕಿಣಿ ಮುಂತಾದವರ ಕೃತಿಗಳ ಇಂಗ್ಲಿಷ್ ಆವೃತ್ತಿ ,ಸುಧಾ ಮೂರ್ತಿ ಮತ್ತು ಕ್ಯಾಪ್ಟನ್ ಗೋಪಿನಾಥ್ ಅವರ ಪುಸ್ತಕಗಳು ಗಮನ ಸೆಳೆದವು . ಮಲಯಾಳಂ ಭಾಷೆಗೆ ಅನುವಾದ ಆದ ಕನ್ನಡ ಕೃತಿಗಳೂ ಇದ್ದವು . ಮಲಯಾಳಿಗಳ ಪುಸ್ತಕ ಪ್ರೇಮ ಕಂಡು ಸಂತೋಷ ಮತ್ತು ಅಸೂಯೆ ಆಯಿತು . ಎಲ್ಲರ ಕೈಯಲ್ಲೂ ಖರೀದಿಸಿದ ಪುಸ್ತಕ ಗಂಟುಗಳು . 

ಬಾಲಂಗೋಚಿ :  ಹೆತ್ತವರು ಮಕ್ಕಳಿಗೆ (ಅಥವಾ ಗಂಡ ಹೆಂಡತಿಗೆ ,ವೈಸ್ ವೆರ್ಸಾ ) ಎಷ್ಟು ಮತ್ತು ಹೇಗೆ ಪ್ರೀತಿ ತೋರಿಸ ಬೇಕು ಎಂಬುದು ಚರ್ಚಾರ್ಹ ವಿಷಯ . ಹಿಂದೆ ನಮ್ಮ ಬಾಲ್ಯದಲ್ಲಿ ಹೆಚ್ಚಿನ ಪ್ರೀತಿ ಮನಸಿನಲ್ಲಿ ಇದ್ದು ಅದರ ಒಂದು ಅಂಶ ಮಾತ್ರ ಆಗೊಮ್ಮೆ ಈಗೊಮ್ಮೆ ಪ್ರಕಟ ಆಗುತ್ತಿತ್ತು . ಕಂಡ ಕಂಡಲ್ಲಿ ಅಪ್ಪಿ ಕೊಳ್ಳುವುದು ,ಚುಂಬಿಸುವದು ,ಕೇಳಿದ್ದನ್ನೆಲ್ಲಾ ಕೊಡುವುದು ಇರಲಿಲ್ಲ . ಕೂಡು ಕುಟುಂಬದ ಮನೆಗಳಲ್ಲಿ ಎಲ್ಲರ ಅಲ್ಪ ಸ್ವಲ್ಪ ಪ್ರೀತಿ ಸೇರಿ ಮೊತ್ತ ದೊಡ್ಡ ದು ಆಗುತ್ತಿತ್ತು . ಸಿನಿಮಾ ಮತ್ತು ಧಾರವಾಹಿ ಗಳಲ್ಲಿ ಪ್ರೀತಿ ನಟಿಸಲು ಸಂಭಾವನೆ ಕೊಡುತ್ತಾರೆ .ಈಗಿನ ಮಕ್ಕಳು ಮತ್ತು ಯುವಕ ಯುವತಿಯರು ಅದನ್ನು ತಮ್ಮ ಜೀವನದಲ್ಲಿ ಕೂಡಾ ಕಾಣ ಬಯಸುವುದು ವಿಪರ್ಯಾಸ . ನನ್ನ ತಿಳುವಳಿಕೆ ಪ್ರಕಾರ ಬಹಿರಂಗ ಪ್ರೀತಿ  ಅತಿ ಪ್ರಕಟಿಸುವ ವರ ಹೃದಯ ಮತ್ತು ಮನದಲ್ಲಿ ಅದು ವಿಲೋಮ ಅನುಪಾತದಲ್ಲಿ (inverse proportion)ನಲ್ಲಿ ಇರುವುದು

ಶನಿವಾರ, ಫೆಬ್ರವರಿ 11, 2023

ಅಕ್ಷರ ಜಾತ್ರೆಯಲ್ಲಿ ಕಂಡ ಇಬ್ಬರು ಅಪರೂಪದ ರಾಜಕಾರಿಣಿಗಳು

 ಮಾತೃಭೂಮಿ ಅಕ್ಷರ ಜಾತ್ರೆ ೨೩ ರಲ್ಲಿ ನಾವು ಹಾಜರಾದ ಒಂದು ಒಳ್ಳೆಯ ಕಾರ್ಯಕ್ರಮ ಶಶಿ ತರೂರ್ ಮತ್ತು ಪಳನಿವೇಲ್ ತ್ಯಾಗರಾಜನ್ ಭಾಗವಹಿಸಿದ "ಭಾರತ -ಒಕ್ಕೂಟ ವ್ಯವಸ್ಥೆಯ ಪುನರಾವಲೋಕನ " ಎಂಬ ವಿಷಯದ ಮೇಲಿನ ಸಂವಾದ . ಪಳನಿವೇಲು ತ್ಯಾಗರಾಜನ್ ತಿರುಚಿ ಏನ್ ಐ ಟಿಕೆ ಪದವೀಧರ ,ಅಮೇರಿಕಾದ ಬಫೆಲೋ ವಿಶ್ವ ವಿದ್ಯಾಲಯದಿಂದ  (ಇಲ್ಲಿ ನಮ್ಮವರೇ ಆದ ಶಂಭು ಉಪಾಧ್ಯಾಯರು  ಪ್ರಾಧ್ಯಾಪಕರು )ಪಿ ಎಚ್ ಡಿ ಪದವಿ ಪಡೆದವರು . ಅಲ್ಲದೆ ಹಣಕಾಸು ವಿಷಯದಲ್ಲಿಯೂ ತಜ್ಞ . ಬಹುರಾಷ್ಟ್ರೀಯ ಹಣಕಾಸು ಸಂಸ್ಥೆಗಳಲ್ಲಿಯೂ ಸೇವೆ ಮಾಡಿದ ಅನುಭವ .ಪ್ರಸ್ತುತ ತಮಿಳುನಾಡು ರಾಜ್ಯದ ಹಣಕಾಸು ಸಚಿವ .

ಶಶಿ ತರೂರು ತಿರುವನಂತಪುರದ ಸಂಸದ .ಇವರು ತಮ್ಮ ೨೨ ನೇ ವಯಸ್ಸಿನಲ್ಲಿಯೇ ಪಿ ಎಚ್ ಡಿ ಗಳಿಸಿದವರು .ಅನೇಕ ವರ್ಷ ವಿಶ್ವ ಸಂಸ್ಥೆಯಲ್ಲಿ ಸೇವೆ . ಒಳ್ಳೆಯ ಲೇಖಕ ,ಚಿಂತಕ ಮತ್ತು ಭಾಷಣ ಕಾರ . 

ಸಂಶೋಧನೆ ಮಾಡಿ ಪ್ರಸಿದ್ಧ ವಿಶ್ವ ವಿದ್ಯಾಲಯ ಗಳಿಂದ ಡಾಕ್ಟರೇಟ್ ಪಡೆದರೂ ಇವರುಗಳು ಡಾಕ್ಟರ್ ಎಂಬ ಉಪಾಧಿ ತಮ್ಮ ಹೆಸರಿನೊಡನೆ ಸೇರಿಸಿಕೊಳ್ಳುವುದು ಕಡಿಮೆ ಎಂಬುದನ್ನು ಗಮನಿಸಿ . 

ಇಬ್ಬರೂ ಬೇರೆ ಬೇರೆ ರಾಜಕೀಯ ಪಕ್ಷವನ್ನು ಪ್ರತಿನಿಧಿಸುವವರು .ಆದರೂ ರಾಜಕೀಯವನ್ನು ಮೀರಿ ಹೇಗೆ ಒಂದು ಜ್ವಲಂತ ವಿಷಯವನ್ನು ಗಂಭೀರವಾಗಿ ಚರ್ಚಿಸ ಬಹುದು ಎಂದು ತೋರಿಸಿ ಕೊಟ್ಟಿದ್ದಾರೆ . ಇಲ್ಲಿ ಆವೇಶ ವಿಲ್ಲಾ ,ಆಕ್ರೋಶವಿಲ್ಲ ,ತಾನೇ ಎಲ್ಲಾ ತಿಳಿದವನು ಎಂಬ ಜಂಬವಿಲ್ಲ .ನಿಶಾಗಂಧಿ ಸಭಾಗೃಹದಲ್ಲಿ  ತುಂಬಿದ ಸಂಭಾಂಗಣ . ಚರ್ಚೆ ಇಂಗ್ಲಿಷ್ ಭಾಷೆಯಲ್ಲಿ ಇದೆ . . 

https://youtu.be/WU0WALEzDFk

ಪಯಣಿಗರ ಗಮನಕ್ಕೆ ,(ಯಾತ್ರಾಕ್ಕಾರ್ ಶ್ರದ್ಧಿಕ್ಕುಗ )



 

ತಿರುವನಂತಪುರ ಕ್ಕೆ ನಮ್ಮ ಮೋದನಲೇ ಭೇಟಿ ಆದುದರಿಂದ ನಗರದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಕೊಡುವ ಅಭಿಲಾಷೆ ಇದ್ದಿತು . ಇಂಟರ್ನೆಟ್ ಜಾಲಾಡಿದಾಗ ಕೇರಳ ರಾಜ್ಯ ಪ್ರವಾಸ ನಿಗಮದ ನಗರ ವೀಕ್ಷಣೆ ಬಸ್ ಇದೆ ಎಂದು ತಿಳಿದು ಅವರು ನಡೆಸುವ ಹೋಟೆಲ್ ಚೈತ್ರಂ ನಲ್ಲಿ ವಿಚಾರಿಸಲು ಕೋವಿಡ್ ಕಾಲದಲ್ಲಿ ಅದನ್ನು ನಿಲ್ಲಿಸಲಾಗಿದೆ ಎಂದು ತಿಳಿದು ಬಂತು . ಅಲ್ಲೇ ಎದುರುಗಡೆ ಟ್ಯಾಕ್ಸಿ ಯವರು ತಾವು ಕರೆದು ಕೊಂಡು ಹೋಗುತ್ತೇವೆ ಎಂದು ದುಂಬಾಲು ಬಿದ್ದರು . ಇಲ್ಲಿಯ ಟ್ಯಾಕ್ಸಿ ಮತ್ತು ಆಟೋ ಚಾಲಕರಲ್ಲಿ ತಮಿಳು ಭಾಷಿಗರು ಅಧಿಕ ಕಾಣ ಸಿಗುತ್ತಾರೆ . ಪ್ರವಾಸಿಗರನ್ನು ದೋಚುವ ಮನೋಭಾವದವರು ಕಡಿಮೆ . ಅವರ ಸೇವಾ ದರಗಳೂ ನಮ್ಮ ರಾಜ್ಯದ ನಗರಗಳಿಗೆ ಹೋಲಿಸಿದರೆ ಕಡಿಮೆ . 

ಎರಡನೇ ದಿನ ಮುಂಜಾನೆ ಆರುಗಂಟೆಗೆಲ್ಲಾ ಧೋತಿ ಸೀರೆ ಉಟ್ಟು ರೆಡಿ ಆಗಿ  ಹೋಟೆಲ್  ನಿಂದ  ಆಟೋ ಹಿಡಿದು ಪ್ರಸಿದ್ಧ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಭೇಟಿ . ಇಲ್ಲಿ  ಡ್ರೆಸ್ ಕೋಡ್ ಇದೆ . ದಕ್ಷಿಣ ಮತ್ತು ಪೂರ್ವ ದಿಕ್ಕಿನಿಂದ ಪ್ರವೇಶ ಸಾಲುಗಳು ಇದ್ದು ತುಂಬಾ ಜನಸಂದಣಿ ಇರಲಿಲ್ಲ .ದೇವಳದ ಕೆರೆ ದೊಡ್ಡದಾಗಿ ಇದ್ದು ನೀರು ನಿರ್ಮಲವಾಗಿದೆ . ಎತ್ತರದ ಸ್ವಾಗತ ಗೋಪುರ ಗಾಂಭೀರ್ಯ ಮೆರಿದಿದೆ.ಒಳಗಡೆ ಪ್ರಾಂಗಣ ವಿಶಾಲವಾಗಿದ್ದು ಗಾಳಿ ಬೆಳಕು ಚೆನ್ನಾಗಿ ಇದೆ . ಗರ್ಭ ಗುಡಿಯ ಆವರಣ ಮಾತ್ರ ಇಕ್ಕಟ್ಟಾಗಿದ್ದು ಅಲ್ಲಿ ದೊಡ್ಡ ಸೇವೆ ಸಲ್ಲಿಸುವವರು ತುಂಬಿ ಸಾಮಾನ್ಯ ಭಕ್ತರ ನೂಕು ನುಗ್ಗಲು ಭಾಸ ವಾಯಿತು .

ನಮ್ಮನ್ನು ಒಯ್ದ ಆಟೋ ಚಾಲಕ ನಗರ ವೀಕ್ಷಣೆ ತಾನೇ ಮಾಡಿಸುವೆನು ,ಮೀಟರ್ ಚಾರ್ಜ್ ಕೊಡಿ ಎಂದು ವಿನಂತಿ ಮಾಡಿದ . ಒಳ್ಳೆಯವನಂತೆ ಕಂಡುದರಿಂದ ಒಪ್ಪಿ ಅವನ ರಿಕ್ಷಾ ದಲ್ಲಿಯೇ ಅರ್ಧ ದಿನದ  ನಗರ ಪ್ರದಕ್ಷಿಣೆ ಮಾಡಿದೆವು .ಮೊದಲಿಗೆ ಅಟ್ಟುಕಳ್ ಭಗವತಿ  ಕ್ಷೇತ್ರ .ಇದು ಬಹಳ ಪ್ರಸಿದ್ದ ಕ್ಷೇತ್ರ . ವೈದಿಕೇತರ ಆರಾಧನೆ ;ವಿಶಾಲವಾಗಿ,ನಿರ್ಮಲವಾಗಿಯೂ ಇದೆ .ಪೊಂಗಲ್ ದಿನ ಇಲ್ಲಿ ಮಹಿಳೆಯರು ಮೈಲು ಗಟ್ಟಲೆ ಸಾಲಿನಲ್ಲಿ ಕುಳಿತು ಸಾಮೂಹಿಕವಾಗಿ ಹಬ್ಬ ಅಚ್ಚರಿಸುವುದು ವಿಶೇಷ .ಇಲ್ಲಿ ಬೆಡಿ ಸೇವೆ ಎಂದು ಇದ್ದು ಅದಕ್ಕೆ ಕಾಣಿಕೆ ಹಾಕ ಬಹುದು .

ಮುಂದೆ ಶ್ರೀ ಪರಶುರಾಮ ಕ್ಷೇತ್ರ . ಇಲ್ಲಿ ಪಿತೃಗಳಿಗೆ ಸಾಮೂಹಿಕ ತರ್ಪಣ ಬಿಡುವ ವ್ಯವಸ್ಥೆ ಇದ್ದು ಪಿಂಡ ಅನ್ನ ತಿನ್ನಲು ಬರುವ ಪರಿವಾಳಗಳು ಗುಂಪು ಗುಂಪಾಗಿ ಕಾಣಿಸುತ್ತವೆ .

ಆಮೇಲೆ  ಪೂವಾರ್ ದ್ವೀಪದ ಬಳಿ ಹಿನ್ನೀರಿನಲ್ಲಿ  ಒಂದು ಗಂಟೆ ಹೊತ್ತು ಬೋಟಿಂಗ್ . ನೀರಿಗೆ ಬಾಗಿದ ಮತ್ತು ನೀರಿನಲ್ಲೇ ಬೇರೂರಿದ ವೃಕ್ಷ ರಾಜಿಗಳ ನಯನ ಮನೋಹರ ದೃಶ್ಯ ,ಅವುಗಳ ನೆರಳಿನ ತಂಪು ಆಪ್ಯಾಯಮಾನ. ಬೋಟ್ ನಡೆಸುವ ವ್ಯಕ್ತಿ ಗೆ ಸ್ಥಳ ದ ಇತಿಹಾಸ ಮತ್ತು ಭೂಗೋಳ ಜ್ನಾನ ಚೆನ್ನಾಗಿ ಇದ್ದು ,ಒಳ್ಳೆಯ ವೀಕ್ಷಕ ವಿವರಣೆ . ಹಿನ್ನೀರಿಗೆ ತಾಗಿ ಹಲವು ರಿಸಾರ್ಟ್ ಗಳು ಮತ್ತು ಸುಂದರ ಹೌಸ್ ಬೋಟ್ ಗಳು ಇವೆ .ಬೋಟ್ ಸಂಚಾರಕ್ಕೆ ಸಾವಿರದ ಐದು ನೂರು ರೂಪಾಯಿ ತೆತ್ತರೂ ಬೇಸರ ಆಗಲಿಲ್ಲ .

ಅಲ್ಲಿಂದ ಕೊವಲಮ್ ಬೀಚ್ ;ಇಲ್ಲಿ ನಮ್ಮೂರಿನ ಬೀಚ್ ನಂತೆಯೇ ಇದ್ದು ,ತಾಗಿ ಕೊಂಡು ಕೆಲವು ಐಷಾರಾಮಿ ಹೊಟೇಲ್ ಗಳು ಇವೆ .ಮರಳುವಾಗ ಪಕ್ಕದಲ್ಲಿಯೇ ಇರುವ ಕಸವು ಕೈಮಗ್ಗದ  ಬಟ್ಟೆ ಅಂಗಡಿ ಭೇಟಿ . ಶ್ರೀಮತಿಯವರು ಕೇರಳ ಸೀರೆ ಕೊಂಡು ಕೊಂಡರು. ಈ ಅಂಗಡಿ ಚೆನ್ನಾಗಿದೆ ಮತ್ತು ನಗರದ ಗಜಿಬಿಜಿಯಿಂದ ದೂರ ಇದೆ .

 ಮರಳಿ ಹೊಟೇಲ್ ಸೇರಿದಾಗ ಒಂದು ಗಂಟೆ , ಆಟೋ ಮೀಟರ್ ಒಂದು ಸಾವಿರ  ತೋರಿಸುತ್ತಿತ್ತು . ಅದಕ್ಕೆ ನಮ್ಮ ಪ್ರೀತಿಯ ಮೊತ್ತವೂ ಸೇರಿಸಿ ಕೊಟ್ಟೆವು . ಒಳ್ಳೆಯ ವ್ಯಕ್ತಿ .ಅವನ ಹೆಸರು ಅನಿಲ್ ಕುಮಾರ್ ,ಅರುವತ್ತರ ಆಸು ಪಾಸಿನವ, ಹೊರಗಿನಿಂದ ಬಂದವರಿಗೆ ಸೇವೆ ಒದಗಿಸುವ ಮನೋಭಾವ ಹೆಚ್ಚು ಇದ್ದಂತೆ ತೋರಿತು . ತಮಿಳ್  ಮಿಶ್ರಿತ ಮಲಯಾಳಂ ಮಾತು . ನಮ್ಮ ಸಂಚಾರದಲ್ಲಿ ಚೆನ್ನಾಗಿ ವಿವರಣೆ ನೀಡುವ ಗೈಡ್ ಕೂಡಾ .

ನಾವು ತಂಗಿದ್ದ ಹೊಟೇಲ್ ಆರ್ಯ ನಿವಾಸ್ ನಲ್ಲಿ ಪುಷ್ಕಳ ಕೇರಳ ಊಟ (ಆವಿಯಲ್ ,ಅಡೆ ಪಾಯಸಂ ,ರಸಂ ,ಸಾಂಬಾರ್ ,ಕುಚ್ಚಲು ಅಕ್ಕಿ ಅನ್ನ )ಮಾಡಿ ಮಧ್ಯಾಹ್ನ ಕನಕ ಕುನ್ನು ಅರಮನೆಗೆ ಮಾತೃ ಭೂಮಿ ಅಕ್ಷರ ಜಾತ್ರೆಗೆ .

 






Attukal Bhagavathy Temple Guide | Timings, Dress Code, Phone Number

ಬುಧವಾರ, ಫೆಬ್ರವರಿ 8, 2023

ತಿರುವನಂತಪುರ ಪ್ರವಾಸ 3

 ಮಾತೃಭೂಮಿ ಅಕ್ಷರ ಹಬ್ಬದಲ್ಲಿ ನಾನು ಮೆಚ್ಚಿದ ಒಂದು ಸೆಷನ್ ಮಲಯಾಳ ಸಿನೆಮಾ ದಲ್ಲಿ  ಕವಿ ಗಳಾದ 'ಭಾಸ್ಕರನ್ ಮಾಸ್ಟರ್ ಮತ್ತು ವಯಲಾರ್ ರಾಮ ವರ್ಮ ಅವರ ಕಾಲ' ಎಂಬ ವಿಷಯದ ಬಗ್ಗೆ . ಪ್ರಸ್ತುತ ಪಡಿಸಿದವರು ಸ್ವಯಂ ಪ್ರಸಿದ್ಧ ಕವಿ ,ಸಂಗೀತ ನಿರ್ದೇಶಕ ,ನಿರ್ದೇಶಕ ,ನಿರ್ಮಾಪಕ  ವೆಲ್ಲವೂ ಆದ ಶ್ರೀಕುಮಾರನ್ ತಂಬಿ . ಇವರು ಕಲಿತದ್ದು ಸಿವಿಲ್ ಇಂಜಿನಿಯರಿಂಗ್ . ಹಿಡಿದ ವೃತ್ತ್ತಿ ಬೇರೆ . ಒಳ್ಳೆಯ ಮಾತುಗಾರ ಮತ್ತು ಹಾಡುಗಾರ ಕೂಡಾಇದರ ಪ್ರತ್ಯಕ್ಷ ಅನುಭವ ನನಗೆ ಆಯಿತು. .ನಮ್ಮ ಅಂಬರೀಷ್ ಅವರನ್ನು ನಾಯಕನಾಗಿ ನಟಿಸಿದ ಸಂಗೀತ ಪ್ರಧಾನ ಚಿತ್ರ ಗಾನಂ ಇವರ ನಿರ್ಮಾಣ .ಮೊದ ಮೊದಲು ನಟರು ನಟಿಸುವಾಗ ತಾವೇ ಹಾಡುತ್ತಿದ್ದು ಹಿನ್ನಲೆ ವಾದ್ಯದವರು ಅವರ ಹಿಂದೆ ಕ್ಯಾಮೆರಾ ಕ್ಕೆ ಕಾಣದಂತೆ ಬರುತ್ತಿದ್ದರು ಎಂಬ ವಿಚಾರ ಈಗ ತಮಾಷೆಯಾಗಿ ಕಾಣುತ್ತದೆ .  ಮಲಯಾಳಂ ನ ಮೊದಲನೇ ಹಿನ್ನಲೆ ಗಾಯಕ ಕನ್ನಡಿಗರೇ ಆದ ಶ್ರೀ ಟಿ ಕೆ ಗೋವಿಂದ ರಾವ್ ಎಂದು ತಿಳಿಸಿದರು .

No animosity towards Mammootty, no special affection for ...

ಕವಿ ವಯಲಾರ್ ರಾಮ ವರ್ಮಾ ರಚಿಸಿದ ಪ್ರಸಿದ್ದ ಗೀತೆ ಮನುಷನ್ ಮತಂಗಳೆ ಸೃಷ್ಟಿ ಚ್ಚು ಎಂಬ ಗೀತೆಯ ಬಗ್ಗೆ ಕೂಡಾ ಪ್ರಸ್ತಾಪ ಬಂತು . ಇದರ ಭಾವಾರ್ಥ ಹೀಗಿದೆ .

" ಮನುಷ್ಯನು ಮತಗಳನ್ನು ಸೃಷ್ಟಿಸಿದನು 

ಮತಗಳು ದೇವರ ಸೃಷ್ಟಿಸಿದವು .

ಮನುಷ್ಯನು ,ಮತಗಳು ಮತ್ತು ದೇವರುಗಳು 

ಕೂಡಿ ಮನಸು ಮತ್ತು ಮಣ್ಣು ಹಂಚಿಕೊಂಡವು .

ಹಿಂದೂ ಅದೆವು ಮುಸ್ಲಿಂ ಅದೆವು ಕ್ರಿಶ್ಚಿಯನ್ ಅದೆವು 

ನಮ್ಮೊಳಗೇ  ನಾವು  ಅಪರಿಚಿತ ವಾದೆವು;

ಇಂಡಿಯಾ ಭಾರತವಾಯಿತು ಭ್ರಾಂತರ ಆಲಯ 

ಸಾವಿರ ಸಾವಿರ ಮಾನವ ಹೃದಯಗಳು ಆಯುಧಾಗಾರ ವಾಗಲು 

ಓಣಿಯಲ್ಲಿ ದೈವ ಸತ್ತಾಗ ದೆವ್ವ ಗಹಗಹಿಸುತ್ತಿತ್ತು . 

ಸತ್ಯವೆಲ್ಲಿ? ಸೌಂದರ್ಯವೆಲ್ಲಿ ?ಸ್ವಾತಂತ್ರ್ಯವಲ್ಲಿ ?

ರಕ್ತ ಬಂಧವೆಲ್ಲಿ ?ನಿತ್ಯ ಸ್ನೇಹವೆಲ್ಲಿ ?

ಸಾವಿರ ವರುಷಗಳಿಗೊಮ್ಮೆ ಎತ್ತಿ ಬರುವ ಅವತಾರವೆಲ್ಲಿ ?

ಮಾನವ ಓಣಿಯಲ್ಲಿ ಸಾಯುತ್ತಿರೆ 

ಮತಗಳು ಗಹ ಗಹಿಸುತ್ತಿವೆ .. 

 https://youtu.be/q_xZ7rq2Y0s



ತಿರುವನಂತ ಪುರ ಪ್ರವಾಸ 2

 


2.2.23 ಮುಂಜಾನೆ ರೈಲ್ವೆ ರೆಟೈರಿಂಗ್ ರೂಮ್ ನಿಂದ ಕನಕಕುನ್ನು ಅರಮನೆ ಗೆ ಆಟೋ ದಲ್ಲಿ ಪಯಣ . ಇದು ವಲಿಯಂಬಲ ರಸ್ತೆ ಯಲ್ಲಿ ಇದ್ದು ಪ್ರಶಾಂತ ಪರಿಸರ . ಪಕ್ಕದಲ್ಲಿಯೇ ವಸ್ತು ಸಂಗ್ರಹಾಲಯ ಮತ್ತು ಮೃಗಾ ಲಯ ಇವೆ . ಎದುರುಗಡೆ ಇನ್ಸ್ಟಿಟ್ಯೂಟ್ ಓಫ್ ಎಂಜಿನೀರ್ಸ್ ಇಂಡಿಯಾ ದ ಕಟ್ಟಡದ ಅವರಣದಲ್ಲಿ ಸರ್ ವಿಶ್ವೇಶ್ವರಯ್ಯ ಅವರ ಪ್ರತಿಮೆ ಕಂಡು ಹೆಮ್ಮೆ ಭರಿತ ಸಂತೋಷ ಆಯಿತು .
ಕಾರ್ಯಕ್ರಮ ಉದ್ಘಾಟನಾ ಭಾಷಣ  ಶ್ರೀ ಎಂ ಟಿ ವಾಸುದೇವನ್ ನಾಯರ್ ಅವರಿಂದ .ಕಾಲು ಗಂಟೆ ಮುಂಚಿತವಾಗಿಯೇ ಬಂದಿದ್ದರು . ಇಳಿ ವ ಯಸ್ಸು ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದರೂ ಮನ ಶಕ್ತಿ ಕುಂದಿಲ್ಲ . ಅವರು ಆಗಮಿಸಿದ ಕೂಡಲೇ ಪತ್ರಿಕಾ ಛಾಯಾಗ್ರಾಹಕರ ದಂಡೇ ಸೇರಿತು .ರಾಜಕಾರಿಣಿ ಮತ್ತು ಸಿನೆಮಾ ನಟ ರಲ್ಲದ ಓರ್ವ ಲೇಖಕನಿಗೆ ಇಂತಹ ಸ್ಟಾರ್ ವ್ಯಾಲ್ಯೂ ಕಂಡು ಸಂತೋಷ ಆಯಿತು . ತೆಂಗಿನ ಗರಿಗಳಿಂದ ನಿರ್ಮಿಸಿದ ಸಭಾಂಗಣ ತುಂಬಿ ತುಳುಕುತ್ತಿತ್ತು . ಹಣ ತೆತ್ತು ಸಾಹಿತ್ಯ ಸಮ್ಮೇಳನ ಕ್ಕೆ ಬರುವವರು ;ಇದರಲ್ಲಿ ಊಟ ತಿಂಡಿ ಸೇರಿಲ್ಲ ಎಂಬುದು ಗಮನಾರ್ಹ .

ವೇದಿಕೆಯಲ್ಲಿ ವಾಸುದೇವನ್ ನಾಯರ್ ಮಾತ್ರ.ಅಧ್ಯಕ್ಷ ,ಮುಖ್ಯ ಅತಿಥಿ ಮತ್ತು ಇತರರು ಇಲ್ಲ  . ಅವರನ್ನು  ಪರಿಚಯಿಸುವ  ಸಾಕ್ಷ್ಯ  ಚಿತ್ರ ಒಂದು ತೋರಿಸಿದರು . 

ನಮ್ಮ ಭಾಷೆ ಬಳಕೆ  ಉಳಿವು  ಸಂಸ್ಕೃತಿ ಉಳಿವಿಗೆ ಬಹಳ ಮುಖ್ಯ .ಕೊಡವ ತುಳು ಇತ್ಯಾದಿ ಭಾಷೆಗಳು ಅಳಿವಿನ ಅಂಚಿನಲ್ಲಿ ಸಾಗುತ್ತಿರುವ ಬಗ್ಗೆ ಬೇಸರ ವ್ಯಕ್ತ ಪಡಿಸಿದರು . (ಕೇರಳ ರಾಜಧಾನಿ ಯಲ್ಲಿ ಯುವಕ ಯುವತಿಯರಲ್ಲಿ ಹಲವರು ಆಧುನಿಕ ಉಡುಗೆ ತೊಡುಗೆಗೆ ಮಾರು ಹೋದರೂ ಮಾತೃಭಾಷೆಯಲ್ಲಿಯೇ  ಮಾತನಾಡುವುದ ಕಂಡೆ )

ಎಂ ಟಿ ಯವರು ತಮ್ಮಬಾಲ್ಯದಲ್ಲಿ  ಅಕ್ಷರ ದಾಹ ಹುಟ್ಟಿಸಿದ ಗುರುಗಳನ್ನು ನೆನಪಿಸಿ ಕೊಂಡರು .ಮಕ್ಕಳಲ್ಲಿ ಆರೋಗ್ಯಕರ ಸ್ಪರ್ಧೆ ಅವರ ಬೌದ್ಧಿಕ ಏಳಿಗೆಗೆ ಅವಶ್ಯ .ಪರೀಕ್ಷೆಯಿಲ್ಲದೇ ಸಾರಾಸಗಟು ಪಾಸ್ ಮಾಡುವುದೂ ಒಳ್ಳೆಯದಲ್ಲ .ಹಿಂದೆ ಆರ್ ಕೆ ನಾರಾಯಣನ್ ರಾಜ್ಯಸಭೆಯಲ್ಲಿ ಮಕ್ಕಳ ಬೆನ್ನಲ್ಲಿ ಮಣ ಭಾರ ಹೊರಿಸುವುದನ್ನು ವಿರೋಧಿಸಿದ್ದನ್ನು ಜ್ಞಾಪಿಸಿ ತಾನೂ ಅದನ್ನು ಅನುಮೋದಿಸುವುದಾಗಿ ಹೇಳಿದರು . ಮಕ್ಕಳು ಹೇಗೆ ಶಬ್ದ ಜ್ಞಾನವನ್ನು ಉಪಯೋಗಿಸುವರು ಎಂಬುದಕ್ಕೆ ತಮ್ಮ ಮನೆಯ ಮಕ್ಕಳ ಉದಾಹರಣೆ ಕೊಟ್ಟರು . ಒಮ್ಮೆ ಮಕ್ಕಳು ಮನೆಯ ಬೆಕ್ಕನ್ನು ಕೀಟಲೆ ಮಾಡುವುದನ್ನು ಕಂಡು ತಾವು ವಿಚಾರಿಸಲು ನಾವು ಅದರ 'ತೇಜೋ ವಧೆ 'ಮಾಡುತ್ತಿರುವುದಾಗಿ ಮಕ್ಕಳು ಕೊಟ್ಟ ಉತ್ತರ ವನ್ನು   ಉದಾಹರಿಸಿ ಎಲ್ಲೋ ಸಿಕ್ಕಿದ ಹೊಸ ಶಬ್ದದ ಪ್ರಯೋಗ ಎಂದರು . 

ಆದರೆ ಇಂದು ವ್ಯಾಕರಣ ಜ್ಞಾನದ ಕೊರತೆ ಮತ್ತು ಸಣ್ಣ  ಲೆಕ್ಕ ಮಾಡಲೂ  ಕ್ಯಾಲ್ಕುಲೇಟರ್   ಅವಲಂಬನೆ  ಬಗ್ಗೆ ಚಿಂತೆ ವ್ಯಕ್ತ ಪಡಿಸಿದ ಅವರು ಅಕಾಡೆಮಿಕ್ ಹೊರತಾದ ಸಾಹಿತ್ಯ ಸೃಷ್ಠಿ ಅವಶ್ಯ ಎಂದರು

ಇಂದಿನ ಸಮಾಜದಲ್ಲಿ ಕಂಡು ಬರುತ್ತಿರುವ ಅಸಹಿಷ್ಟುತೆ ಮತ್ತು ನಶಿಸುತ್ತಿರುವ ಕೋಮು ಸೌಹಾರ್ದತೆ ಬಗ್ಗೆ ಕಳವಳ ವ್ಯಕ್ತ ಪಡಿಸಿದ ಎಂ ಟಿ ಇದ್ದಕ್ಕೆ ಬೇಗನೇ ಪರಿಹಾರ ಒದಗುವದು ಎಂಬ ಆಶಾಭಾವನೆ ವ್ಯಕ್ತ ಪಡಿಸಿದರು . 

ನಿಶ್ಶಬ್ದ ವಾಗಿ ಅವರ ಭಾಷಣ ತುಂಬು ಸಭೆ ಆಲಿಸಿದ್ದು ಒಂದು  ಒಳ್ಳೆಯ ಅನುಭವ



ಮಂಗಳವಾರ, ಫೆಬ್ರವರಿ 7, 2023

ತಿರುವನಂತ ಪುರ ಪ್ರವಾಸ 1

ಮಾತೃಭೂಮಿ ಎಂಬ ಮಲಯಾಳ ದಿನ ಪತ್ರಿಕೆ ಇದೆ . ಸ್ವಾತಂತ್ರ್ಯ ಹೋರಾಟಗಾರ ದಿ ಕೇಶವ ಮೆನನ್ ಆರಂಭಿಸಿದ ಪತ್ರಿಕೆ .ಈಗಲೂ ಪತ್ರಿಕಾ ಧರ್ಮ ಪಾಲಿಸಿಕೊಂಡು ಬರುತ್ತಿರುವುದು ಗಮನಾರ್ಹ . ದಶಕಗಳಿಂದ ಪ್ರತ್ಯೇಕ  ವಾರ ಪತ್ರಿಕೆ  ನಡೆಸಿಕೊಂಡು ಬರುತ್ತಿದ್ದು ಜ್ಞಾನ ಪೀಠ ಪ್ರಶಸ್ತಿ ವಿಜೇತ ಶ್ರೀ ಎಂ ಟಿ  ವಾಸು ದೇವನ್ ನಾಯರ್ ಇದರ ಸಂಪಾದಕ ರಾಗಿ ಇದ್ದರು ಎಂಬುದು ಇದರ ಹಿರಿಮೆ . ಪತ್ರಾಧಿಪ ರು ಎಂದು ಸಂಪಾದಕರಿಗೆ ಕರೆಯುವರು . ಮೌಲ್ಯಯುತ ಸಾಹಿತ್ಯ ಜನರಿಗೆ ಉಣಿಸಿದ ಪತ್ರಿಕೆ . ಕನ್ನಡವೂ ಸೇರಿದಂತೆ ಜಗತ್ತಿನ ಹಲವು ಭಾಷೆಯ ಕೃತಿಗಳ ಅನುವಾದದ ಮೂಲಕ ಸಾಹಿತ್ಯ ಪ್ರಿಯ ಮಲಯಾಳಿಗಳಿಗೆ ಪರಿಚಯಿದೆ . ಉದಾ ಶ್ರೀಕೃಷ್ಣ ಅಲನಹಳ್ಳಿಯವರ ಭುಜಂಗಯ್ಯನ ದಶಾವತಾರಗಳು ಮಾತೃಭೂಮಿ ವಾರ ಪತ್ರಿಕೆಯಲ್ಲಿ ಭುಜಂಗಯ್ಯಂದೆ ದಶಾವತಾರಂಗಳ್ ಎಂಬ ಹೆಸರಿನಲ್ಲಿ ಧಾರಾವಾಹಿ ಯಾಗಿ ಬಹು ಜನಪ್ರಿಯ ಆಗಿದ್ದ ಕೃತಿ ,ಕನ್ನಡಿಗರಿಂದ ಅಧಿಕ ಮಲಯಾಳಿ ಗಳು ಅದನ್ನು ಓದಿರಬಹುದು ಎಂದು ನನ್ನ ಊಹೆ . 

ಈ ಪತ್ರಿಕೆಯವರು ಕೆಲ ವರ್ಷಗಳಿಂದ ಅಂತರರಾಷ್ಟ್ರೀಯ ಅಕ್ಷರ ಉತ್ಸವ ಎಂಬ ಸಾಹಿತ್ಯ ಸಮ್ಮೇಳನ ಜಯಪುರ ಲಿಟರರಿ ಫೆಸ್ಟಿವಲ್ ಮಾದರಿಯಲ್ಲಿ ನಡೆಸಿ ಕೊಂಡು ಬರುತ್ತಿದ್ದು  ಈ ಬಾರಿ ಭಾಗವಹಿಸುವ ಅವಕಾಶ ಸಿಕ್ಕಿತು . ಕೇರಳದ ರಾಜಧಾನಿ ತಿರುವನಂತ ಪುರಂ ನ ಕನಕ ಕುನ್ನು ಅರಮನೆ (ಕೊಟ್ಟಾರಂ )ಆವರಣದಲ್ಲಿ  2.2.23 ರಿಂದ 5.2.23 ರ ವರೆಗೆ . ತಮಿಳು ಭಾಷೆಯಲ್ಲಿ ಶ್ರೀ ಎಂಬ ಉಪಾಧಿ ತಿರು ಎಂದು  ಎಂದು ಆಗುತ್ತದೆ .ಶ್ರೀ ಅನಂತ ಪುರ ತಿರುವನಂತ ಪುರ .ಹಿಂದೆ ತಿರುವಾಂಕೂರು ಮಹಾರಾಜ ರ  ರಾಜಧಾನಿ ಆಗಿದ್ದು ತಮಿಳರು ಕೂಡಾ ಗಮನಾರ್ಹ ಸಂಖ್ಯೆಯಲ್ಲಿ ಇರುವ ಊರು . 

ದಕ್ಷಿಣದ ರಾಜ್ಯಗಳ ಎಲ್ಲಾ ರಾಜಧಾನಿ ಗಳನ್ನು ಮತ್ತು ಕೇರಳದಮಿಕ್ಕ ಎಲ್ಲಾ ಮಹಾನಗರ ಗಳನ್ನು ಹಿಂದೆ ಕಂಡಿದ್ದು ತಿರುವ ನಂತ ಪುರಕ್ಕೆ ಇದು ಮೊದಲ ಭೇಟಿ