ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಕೇಂದ್ರದ ಕನ್ನಡ ಸಂಘ ಒಂದು ಸಜೀವ ಸಕ್ರಿಯ ಆಗಿದ್ದರೆ ಅದು ಕಾರ್ಕಳ ಸಾಹಿತ್ಯ ಸಂಘ .ಅದರ ರೂವಾರಿ ದಿ .ರಾಮಚಂದ್ರ .ಅವರ ಬಗ್ಗೆ ಹಿಂದೆಯೇ ಒಮ್ಮೆ ಬರೆದಿದ್ದೇನೆ .
ಇಂದಿಗೆ ಸರೀ ಎರಡು ವರ್ಷ ಮೊದಲು (26.10.2019) ಅದರ ವೇದಿಕೆಯಲ್ಲಿ ಆರೋಗ್ಯ ವಿಚಾರ ಬಗ್ಗೆ ಮಾತನಾಡುವ ಅವಕಾಶ ನನಗೆ ದೊರಕಿತ್ತು . ಅಲ್ಲಿಯ ಕೆಲವು ಸಭೆಗಳಿಗೆ ನಾನು ಹಾಜರಾಗಿದ್ದೇನೆ. ಸಮಯ ಪಾಲನೆ ಮತ್ತು ಒಳ್ಳೆಯ ಸಂಖ್ಯೆಯ ಆಸಕ್ತ ಕೇಳುಗರು ಅಲ್ಲಿಯ ವಿಶೇಷ .ಬಂದ ಅತಿಥಿಗಳನ್ನು ಚೆನ್ನಾಗಿ ನೋಡಿ ಕೊಳ್ಳುವರು .
ನನ್ನ ಜತೆ ಡಾ ವರದರಾಜ ಚಂದ್ರಗಿರಿ ಬಂದಿದ್ದರು.ಹಿಂತಿರುಗುವಾಗ ರಾತ್ರಿ ಆಗುವುದರಿಂದ ಟ್ಯಾಕ್ಸಿ ಮಾಡಿಕೊಂಡು ಹೋಗಿದ್ದೆವು . ರಾಮ ಚಂದ್ರರು ಕಾರ್ಯಕ್ರಮ ಮುಗಿದು ವಾಪಾಸು ತೆರಳುವಾಗ ನನ್ನ ಪತ್ನಿಗೆ ಎಂದು ತಿಂಡಿ ಕಟ್ಟಿ ಕೊಟ್ಟುದಲ್ಲದೆ ಗಂಟೆಗೆ ಒಮ್ಮೆ ನಾವು ಮನೆಗೆ ತಲುಪಿದೆವೋ ಎಂದು ಫೋನ್ ಮಾಡಿ ವಿಚಾರಿಸುವರು .ನಾವು ಮನೆಗೆ ತಲುಪದೆ ಅವರು ನಿದ್ದೆ ಮಾಡರು.ನನ್ನ ಭಾಷಣ ಕಾರ್ಯಕ್ರಮಕ್ಕೆ ನನಗೆ ಕೊಟ್ಟ ಸಂಭಾವನೆ ಅವರ ಸಂಗ್ರಹದಲ್ಲಿ ಇದ್ದ ಅಮೂಲ್ಯ ಪತ್ರಗಳ ಪ್ರಕಟನಾ ಕಾರ್ಯಕ್ಕಾಗಿ ಕೊಟ್ಟಿದ್ದೆ . ಸ್ವಲ್ಪವಾದರೂ ತೆಗೆದು ಕೊಳ್ಳ ಬೇಕಿತ್ತು ಎಂದು ಪುನಃ ಪುನಃ ಹೇಳಿದರು .ಪುತ್ತೂರಿನ ನಮ್ಮ ಮನೆಗೆ ಬಂದು ಆತಿಥ್ಯ ಸೀಕರಿಸುವ ಆಶ್ವಾಸನೆ ಕೊಟ್ಟಿದ್ದರು .ಆದರೆ ಅದು ನೆನಸು ಆಗಲಿಲ್ಲ .ಎರಡು ತಿಂಗಳಲ್ಲಿ ಹಠಾತ್ ತೀರಿ ಕೊಂಡರು .ಸಾಯುವ ಮುನ್ನಾ ದಿನ ಹತ್ತು ನಿಮಿಷ ನನ್ನೊಡನೆ ಫೋನಿನಲ್ಲಿ ಮಾತನಾಡಿದ್ದರು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ