ತಿಂಗಳ ಹಿಂದೆ ನನ್ನ ದೊಡ್ಡ ಅಕ್ಕ ಹಠಾತ್ ನಮ್ಮನ್ನು ಬಿಟ್ಟು ಹೋದ ಬಗ್ಗೆ ಬರೆದಿದ್ದೆ . ನೆನಪು ಮಾಸುವ ಮುನ್ನ ನಿನ್ನೆ ನಮ್ಮ ಹಿರಿಯಣ್ಣ ಕೆಲ ಕಲ ಆಸೌಖ್ಯ ದಿಂದ ಇದ್ದವರು ಇಹಲೋಕ ತ್ಯಜಿಸಿದರು .
ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಕನ್ಯಾನ ದಲ್ಲಿ ,ಮುಂದೆ ಪೆರ್ಲದಲ್ಲಿ ಹೈ ಸ್ಕೂಲ್ (ಅಜ್ಜನ ಮನೆಯಿಂದ )ಮುಗಿಸಿ ಪಿ ಯು ಸಿ ಉಡುಪಿ ಎಂ ಜಿ ಎಂ ಕಾಲೇಜ್ ನಲ್ಲಿ ಪಡೆದು ,ಗುಜರಾತ್ ನವಸಾರಿಯಲ್ಲಿ ಮೈಕ್ರೋ ಬಯಾಲಜೀ ಬಿ ಎಸ್ ಸಿ ,ಕೆ ಎಂ ಸಿ ಹುಬ್ಬಳ್ಳಿ ಯಿಂದ ಅದೇ ವಿಷಯದಲ್ಲಿ ಎಂ ಎಸ್ ಸಿ ,ಮುಂದೆ ಮಂಗಳೂರು ವಿಶ್ವ ವಿದ್ಯಾಲಯ ದಿಂದ ಪಿ ಎಚ್ ಡಿ ಗಳಿಸಿದರು . ಚಿತ್ರಕಲೆ ಮತ್ತು ಫೋಟೋ ಗ್ರಫಿ ಅವರ ಹವ್ಯಾಸವಾಗಿದ್ದು ,ಆರ್ಟಿಸ್ಟ್ ಮಹಾಬಲ ಎಂದು ಗುರುತಿಸಲ್ಪ ಟ್ಟಿದ್ದರು .
ಅಡಿ ಚುಂಚನ ಗಿರಿ ಮೆಡಿಕಲ್ ಕಾಲೇಜ್ ,ಆಂಧ್ರದ ನೆಲ್ಲೂರು ಮೆಡಿಕಲ್ ಕಾಲೇಜ್ ಮತ್ತು ಕೊನೆಗೆ ಮಂಗಳೂರಿನ ಎ ಜೆ ಮೆಡಿಕಲ್ ಕಾಲೇಜ್ ನಲ್ಲಿ ಪ್ರಾಧ್ಯಾಪಕ ರಾಗಿ ದುಡಿದು ವಿಶ್ರಾಂತ ಜೀವನ ನಡೆಸುತ್ತಿದ್ದರು .
ಒಳ್ಳೆಯ ಹಾಸ್ಯ ಪ್ರಜ್ನೆ ,ಕಿರಿಯರ ಮೇಲೆ ಪ್ರೀತಿ . ಅದೇ ರೀತಿ ತಮಗೆ ಆಗದೆ ಕಂಡರೆ ಶೀಘ್ರ ಕೋಪ .
ನನಗೆ ಮೊದಲ ಕೈಗಡಿಯಾರ ಜನತಾ ಬಜಾರ್ ನಲ್ಲಿ ಕ್ಯೂ ನಿಂತು ತಂದು ಕೊಟ್ಟಿದ್ದರು ,ನನಗೆ ಮೆಡಿಕಲ್ ಸೇರಲು ಒತ್ತಾಸೆ ಮಾಡಿ ಮೊದಲ ಫೀಜ್ ಕೊಟ್ಟು ಆಶೀರ್ವದಿಸಿದ್ದರು .ನಮ್ಮ ದೊಡ್ಡಕ್ಕ ಹೋದ ವಿಷಯ ಆಘಾತ ಉಂಟು ಮಾಡಿದಂತೆ ಇತ್ತು .
ಅವರ ಏಕಮಾತ್ರ ಪುತ್ರಿ ಗ್ಲಾಸ್ಗೋ ದಲ್ಲಿ ದಂತ ವೈದ್ಯೆ ,ಅಳಿಯ ಡಾ ಹರೀಶ್ ಅಲ್ಲೇ ಎಲುಬು ತಜ್ನ ;ಮೊಮ್ಮಗಳು ಒಬ್ಬಾಕೆ ವೈದ್ಯೆ ,ಇನ್ನೊಬ್ಬಳು ವೈದ್ಯಕೀಯ ವಿದ್ಯಾರ್ಥಿನಿ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ