ಬೆಂಬಲಿಗರು

ಸೋಮವಾರ, ನವೆಂಬರ್ 23, 2020

ರಕ್ತದ ಒತ್ತಡ

                           ರಕ್ತದ ಒತ್ತಡ 

ರಕ್ತಕ್ಕೆ ಒತ್ತಡ ಯಾಕೆ ಬೇಕು?ಯಾಕೆಂದರೆ ಇದು ರಕ್ತನಾಳದೊಳಗೆ ರಕ್ತ ಹರಿವಿನ ಒತ್ತಡ .ಒತ್ತಡ ಇದ್ದರೇನೆ ನಾಳದಿಂದ ರಕ್ತ ಅಂಗಗಳಿಗೆ ಜೀವ ಕೋಶಗಳಿಗೆ ಹರಿವುದು .,ಅವುಗಳಿಗೆ ಆಹಾರ ಮತ್ತು ಪ್ರಾಣ ವಾಯು ಸಿಗುವುದು .ನೀರು ಹರಿಸುವ ಪೈಪ್ ನಲ್ಲಿ  ಪ್ರೆಷರ್ ಇದ್ದರೆ ಮಾತ್ರ ಅದು ಸಸಿಗಳಿಗೆ ತಲುಪಿಸುವುದು .ಈ ಒತ್ತಡ ಪಂಪ್ ನ  ಅಶ್ವ ಶಕ್ತಿ  ಮತ್ತು  ಯಾವ ಪೈಪ್ ಎಂಬುದರ ಮೇಲೆ ನಿರ್ಧಾರ ಆಗುವುದು .ಹೆಚ್ಚು ಎಚ್ ಪಿ ,ಹೆಚ್ಚು ಪ್ರೆಷರ್ .ಅದೇ ರೀತಿ ರಬ್ಬರ್ ಪೈಪ್ ಗಿಂತ ಕಬ್ಬಿಣ ಪೈಪ್ ನಲ್ಲಿ ಜಾಸ್ತಿ .

ನಮ್ಮ ಶರೀರದಲ್ಲಿ ಹೃದಯ ಮುಖ್ಯ ಪಂಪ್ ,ಅಪದಮನಿ ರಕ್ತನಾಳಗಳು ರಕ್ತ ಸರಬರಾಜಿನ ಪೈಪ್ ಗಳು .ಅಭಿ ದಮನಿ ವಾಪಸು ಆಶುದ್ದ ರಕ್ತ ತರುವುದು .   ಹೃದಯಕ್ಕೆಬಲ ಬದಿಯ ಶೇಖರಣಾ ತೊಟ್ಟಿಗೆ ಬಂದು ಅಲ್ಲಿಂದ ಶ್ವಾಶ ಕೋಶಕ್ಕೆ ,ಅಲ್ಲಿ ಪ್ರಾಣವಾಯು ತುಂಬಿಸಿಕೊಂಡು ಎಡದ ತೊಟ್ಟಿಗೆ ಬಂದು ಅಪಧಮನಿ ಗಳೆಂಬ ಪೈಪ್ ಮೂಲಕ ನಖ ಶಿಖಾಂತ ಸರಬರಾಜು ಆಗುವುದು .ಇದರಲ್ಲಿ ಹೃದಯ ಹೆಚ್ಚು ಶಕ್ತಿಯಿಂದ ಪಂಪ್ ಮಾಡಿದರೆ ಅಥವಾ ಪೈಪ್ ನ  ಇಲಾಸ್ಟಿಸಿಟಿ ಕಡಿಮೆಯಾಗಿ ಗಡುಸು ಆದರೆ ರಕ್ತದ ಒತ್ತಡ ಹೆಚ್ಚು ಆಗುವುದು .

 ರಕ್ತದ ಒತ್ತಡವನ್ನು 120/80 ,150/90 ಮಿಲಿ ಮೀಟರ್ ಎಂದೆಲ್ಲಾ ಬರೆಯುವರಷ್ಟೇ.ಇದರಲ್ಲಿ ಮೇಲಿನ ಸಂಖ್ಯೆ  ಹೃದಯ ಸಂಕುಚನ (contract)ಆಗುವಾಗಿನ ಒತ್ತಡ(systolic ಬಿ ಪಿ ) ,ಕೆಳಗಿನದು ಹೃದಯ ವಿಕಸಿತವಾಗುವಾಗಿನ ಒತ್ತಡ(ಡಯಾಸ್ಟೊಲಿಕ್ ಬಿ ಪಿ ) .ನಮ್ಮ ಬಾವಿಯ ಪಂಪ್ ನಿರಂತರ ಪಂಪ್ ಮಾಡುತ್ತಿದ್ದರೆ ,ಹೃದಯ ಒಮ್ಮೆ ಪಂಪ್ ಮಾಡುವುದು ,ಒಮ್ಮೆ ಮರು ಪೂರಣ ಮಾಡಿಕೊಳ್ಳುವುದಕ್ಕೆ ವಿಕಸನ ಗೊಳ್ಳುವುದು .ಹಾಗೆ ನಾಲದಲ್ಲಿ ಎರಡು ಒತ್ತಡ ಗಳು .

ರಕ್ತದ ಒತ್ತಡ ಸರಿಯಾದ ಪ್ರಮಾಣದಲ್ಲಿ ಇದೆಯೋ ಎಂದು ಅಪಧಮನಿ ಮತ್ತು ಅಭಿದಮನಿ ಗಳಲ್ಲಿ ಕೆಲವು ಕಡೆ ಸೆನ್ಸಾರ್ ಗಳು ಇವೆ .ಅಪಧಮನಿಯ ಸೆನ್ಸಾರ್ ಕಡಿಮೆ ಒತ್ತಡ ತೋರಿಸಿದರೆ ಹೃದಯದ ಪಂಪಿಂಗ್ ಜಾಸ್ತಿ ಆಗಿ ರಕ್ತನಾಳಗಳು ಗಡುಸಾಗುತ್ತವೆ ,ಅಭಿದಮನಿ ಯ ಸೆನ್ಸಾರ್ ಸಂದೇಶದಿಂದ ಕೆಲವು ಹಾರ್ಮೋನ್ ಗಳು ಸ್ರವಿಸಿ ಕಡಿಮೆ ಮೂತ್ರ ಉತ್ಪತ್ತಿ (ನೀರು ಉಳಿಸುವುಕೆ )ಮತ್ತು ಹೆಚ್ಚು ಪಂಪಿಂಗ್ ಮತ್ತು ರಕ್ತ ನಾಲಗಳ ಗಡುಸು ತನ ಹೆಚ್ಚುವುದು .ಇದರಿಂದ ರಕ್ತದ ಒತ್ತಡ ಜಾಸ್ತಿ ಆಗುವುದು .

ನಾರ್ಮಲ್ ಬಿ ಪಿ 120/80 ರ ಒಳಗೆ ಇರಬೇಕು .ಅಮೆರಿಕಾದ ಹೃದ್ರೋಗ ಸಂಸ್ಥೆಯ ಪ್ರಕಾರ ೧೩೦/೮೦ ಕ್ಕಿಂತ ಜಾಸ್ತಿ ಇದ್ದರೆ ಅಧಿಕ ರಕ್ತದ ಒತ್ತಡ ಎಂದು ಹೇಳುವರು .ಜಾಗತಿಕ ಅರೋಗ್ಯ ಸಂಸ್ಥೆಯ ಪ್ರಕಾರ ೧೪೦/೯೦ ಮಿ ಮೀ ಗಿಂತ ಜಾಸ್ತಿ ಇದ್ದಾರೆ ಹೈ ಬಿ ಪಿ ಇದೆ ಎನ್ನುವರು .  

                                             



 

 

                                                                  ..ರಕ್ತದ ಒತ್ತಡ ಬಹಳ ಕಾಲ ಜಾಸ್ತಿ ಇದ್ದರೆ ಹೃದಯ ,ಮೆದುಳು ಮತ್ತು ಮೂತ್ರ ಪಿಂಡಗಳ ಮೇಲೆ ದುಷ್ಪರಿಣಾಮ ಬೀರುವುದು .

ಅಧಿಕ ರಕ್ತದ ಒತ್ತಡ ಸಾಮಾನ್ಯ ವೈದ್ಯಕೀಯ ಪರೀಕ್ಷೆಯಲ್ಲಿ ಕಂಡು ಹಿಡಿಯಲ್ಪಡುವ ಕಾಯಿಲೆ .ಸಾಮಾನ್ಯವಾಗಿ ಅವರಲ್ಲಿ ರೋಗ ಲಕ್ಷಣಗಳು ಇರುವುದಿಲ್ಲ .ತಲೆ ನೋವು ಮತ್ತೆ ತಲೆ ತಿರುಗುವಿಕೆಗೆ ರಕ್ತದ ಒತ್ತಡ ಸಾಮಾನ್ಯವಾದ ಕಾರಣ ಅಲ್ಲ .ತಲೆ ನೋವಿನ ಮುಖ್ಯ ಕಾರಣಗಳನ್ನು ಕೆಳಗಿನ ಪಟ್ಟಿಯಲ್ಲಿ ಕೊಡಲಾಗಿದೆ .ಇದರಲ್ಲಿ ದೃಷ್ಟಿ ದೋಷವೂ ಇಲ್ಲ ಎಂಬುದನ್ನು ಗಮನಿಸಿ

                  

 ಆಸ್ಪತ್ರೆಗೆ ಮೊದಲು ಬರುವಾಗ ಹೆಚ್ಕಿನವರ ಬಿ ಪಿ ಸ್ವಲ್ಪ ಹೆಚ್ಚು ತೋರಿಸುವುದು .ಕೂಡಲೇ ನಾವು ಅಧಿಕ ಒತ್ತಡ ಎಂದು ಹೇಳುವುದಿಲ್ಲ .ಸ್ವಲ್ಪ ಹೊತ್ತು ಬಿಟ್ಟು ಪುನಃ ಪರೀಕ್ಷೆ ಮಾಡಿ ನೋಡುವೆವು .ಆಗಲೂ ಸ್ವಲ್ಪ ಹೆಚ್ಚು ಇದ್ದರೆ ಇನ್ನೊಂದು ದಿನ ಬರ ಹೇಳುವೆವು .ಮುಂದುವರಿದ ದೇಶಗಳಲ್ಲಿ ಮನೆಯಲ್ಲಿಯೇ ಬಿ ಪಿ ರೆಕಾರ್ಡ್ ಸ್ವಯಂ ಮಾಡ ಹೇಳಿ ಕೆಲ ದಿನಗಳ ನಂತರ ಬರ ಹೇಳುವರು .ಆಗಲೂ ಜಾಸ್ತಿ ಇದ್ದರೆ ಚಿಕಿತ್ಸೆ .

ಅಧಿಕ ಬಿ ಪಿ ಇರುವವರು ಉಪ್ಪು ಸೇವನೆ ಕಡಿಮೆ ಮಾಡಬೇಕು ,ಹಣ್ಣು ತರಕಾರಿ ಹೆಚ್ಚ್ಕು ,ಮದ್ಯಪಾನ ನಿಲ್ಲಿಸ ಬೇಕು .ನಿಯಮಿತ ವ್ಯಾಯಾಮ ಅವಶ್ಯ .ಇದರ ಮೇಲೆ ವೈದ್ಯರು ಕೊಡುವ ಔಷಧಿ ನಿಯಮಿತ ವಾಗಿ ಸೇವಿಸ ಬೇಕು .ತಲೆ ತಿರುಗಿದರೆ ಮತ್ತು ತಲೆನೋವು ಇದ್ದರೆ ಮಾತ್ರ ಗುಳಿಗೆ ಸೇವಿಸುವರು .ಇದು ಅಪಾಯಕಾರಿ .

 ಇನ್ನು ರಕ್ತದ ಒತ್ತಡ ಕಡಿಮೆ ಆಗುವುದು ಯಾವಾಗ ಎಂದು ನೋಡುವಾ ?

ಪಂಪ್ ಮಾಡಲು ರಕ್ತ ಕಮ್ಮಿ ಆದರೆ .ಉದಾ ತೀವ್ರ ರಕ್ತ ಸ್ರಾವ ,ವಾಂತಿ ಭೇದಿ .ಇನ್ನು ಪಂಪ್ ಹಾಳಾದರೆ ಉದಾ ಹೃದಯಾಘಾತ .ಕೆಲವೊಮ್ಮೆ ಸೋಂಕು ರೋಗಗಳಲ್ಲಿ ರಕ್ತ ನಾಲದ ಗಡುಸು ತನ ಕಮ್ಮಿ ಆಗಿ  ಮತ್ತು ಹೃದಯ ದ ಮೇಲೆ ಕೆಲವು ಕೆಟ್ಟ ರಾಸಾಯನಿಕ ಗಳು ಪರಿಣಾಮ ಪಂಪಿಂಗ್ ಶಕ್ತಿ ಕುಂದಿ ಬಿ ಪಿ ಕಮ್ಮಿ ಆಗ ಬಹುದು .ಬಿ ಪಿ ಕಮ್ಮಿಯಾಗಿ ಅಂಗ ಜೀವ ಕೋಶಗಳ ಕಾರ್ಯ ವ್ಯತ್ಯಯ ಆಗುವುದಕ್ಕೆ ಷಾಕ್ ಎಂದು ವೈದ್ಯ ಶಾಸ್ತ್ರ ದಲ್ಲಿ ಕರೆಯುವರು .

 ಹೆಚ್ಚಿದ ಬಿ ಪಿ ಗೆ ಹೈಪರ್ ಟೆಂಷನ್ ಎಂದರೆ ಕಡಿಮೆ ಆದರೆ ಹೈಪೋ ಟೆಂಷನ್ ಎನ್ನುವರು.ಮೇಲ್ಕಾಣಿಸಿದ ಕಾರಣಗಳಿಂದ  ರಕ್ತದ ಒತ್ತಡ ತುಂಬಾ ಕಮ್ಮ್ಮಿ ಆದರೆ ಮೆದುಳು ,ಮೂತ್ರ ಪಿಂಡ ಮತ್ತು ಸ್ವಯಂ ಹೃದಯ ಆಮ್ಲಜನಕ ಮತ್ತು ಆಹಾರಾಂಶಗಳಿಂದ ವಂಚಿತ ವಾಗಿ ಪರಿಸ್ಥಿತಿ ಗಂಭೀರ ಆಗುವುದು .ಹೃದಯದ ಒಳಗೆ ರಕ್ತ ಇದ್ದರೂ ಅದರ ಮಾಂಸ ಖಂಡ ಗಳಿಗೆ  ಕೊರೋನರಿ ಆರ್ಟರಿ ಎಂಬ ಅಪಧಮನಿ ಯಿಂದ ರಕ್ತ ಸರಬರಾಜು ಆಗುವುದು .ಡೀಸೆಲ್ ಟ್ಯಾಂಕರ್ ತಾನು  ಹೊತ್ತು ನಡೆವ ಟ್ಯಾಂಕರ್ ನಿಂದ ಇಂಧನ ಪಡೆಯದೇ ಬೇರೆ ಟ್ಯಾಂಕ್ ನಿಂದ ಪಡೆಯುವದಲ್ಲವೇ 

ಇನ್ನು ಕೆಲವರ ಬಿ ಪಿ 100/70 ಇತ್ಯಾದಿ ಇರಬಹುದು .ಇದೂ ನಾರ್ಮಲ್ ಬಿ ಪಿ ಯೇ .ಮೇಲೆ ಬಿ ಪಿ ಕಮ್ಮಿಯಾಗಲು ಹೇಳಿದ ಕಾರಣಗಳನ್ನು ಹೊರತು ಪಡಿಸಿ ಲೋ ಬಿ ಪಿ ಎಂಬ ಕಾಯಿಲೆ ಇಲ್ಲ .ವಯಸ್ಸಾದವರಲ್ಲಿ ಮತ್ತು ಸಕ್ಕರೆ ಕಾಯಿಲೆ ಯವರಲ್ಲಿ ಕೆಲವರಿಗೆ ನಿಂತಾಗ ಮಾತ್ರ ಬಿ ಪಿ ಕಮ್ಮಿ ಆಗಬಹುದು .ಇದನ್ನು ಪೋಶ್ಚುರಲ್ ಹೈಪೋ ಟೆಂಷನ್ ಎನ್ನುವರು .

ಆಸ್ತಮಾ ಕಾಯಿಲೆ ಯವರಿಗೆ ಜೋರಾಗಿ ದಮ್ಮು ಕಟ್ಟುತ್ತಿರುವಾಗ ,ಮೈಗ್ರೈನ್ ನಂತಹ ಕಾಯಿಲೆ ಯಿಂದ ಬಳಲುತ್ತಿರುವವರಿಗೆ ತಲೆ ನೋವು ಇರುವಾಗ ,ಮೂತ್ರದ ಕಲ್ಲಿನಿಂದ ತೀವ್ರ ನೋವು ಇರುವಾಗ ನೋಡಿದರೆ ಬಿ ಪಿ ಸ್ವಲ್ಪ ಜಾಸ್ತಿ ಇರ ಬಹುದು .ಮೂಲ ಕಾಯಿಲೆಗೆ ಚಿಕಿತ್ಸೆ ಮಾಡಿದರೆ ಬಿ ಪಿ ಸರಿ ಆಗುವುದು .ಮೆದುಳಿನ ಆಘಾತ (ಸ್ಟ್ರೋಕ್)ಆದಾಗ ಗಾಯಗೊಂಡ ಮೆದುಳಿನ ಸುತ್ತ ಮುತ್ತ ರಕ್ತ ಸಂಚಾರ ಹೆಚ್ಚಿಸಿ  ಮೆದುಳಿನ ಕಾರ್ಯ ಕ್ಷಮತೆಯು ಹೆಚ್ಚು ನಷ್ಟ ಆಗದಂತೆ ರಕ್ತದ ಒತ್ತಡ ತತ್ಕಾಲ ಜಾಸ್ತಿ ಆಗುವುದು .ಮೆದುಳಿನ ರಕ್ತ ಹೆಪ್ಪು ಗಟ್ಟುವಿಕೆ ಯಿಂದ ಆಗುವ ಈ ಸಮಯ ರಕ್ತದ ಒತ್ತಡ ಕಡಿಮೆ ಮಾಡಿದರೆ ಹಾನಿ ಜಾಸ್ತಿ ಆಗುವುದು .ಮೆದುಳಿನ ಆಘಾತ ದಿಂದ ಪಾರ್ಶ್ವ ವಾಯು ಇತ್ಯಾದಿ ಉಂಟಾಗುವುದು ತಾನೇ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ