ನಾನು ಕನ್ನಡದಲ್ಲಿ ಬರೆಯುವುದು ಅಲ್ಪ ಸ್ವಲ್ಪ ಬರುವ ಭಾಷೆ ಅದೆಂದು ,ಇಂಗ್ಲಿಷ್ ಸರಿ ಬರುವುದಿಲ್ಲ ಎಂದು ಒಪ್ಪಿ ಕೊಳ್ಳುವೆನು .ಆದರೂ ದ್ರಾಕ್ಷಿ ಹುಳಿ ಎಂದು ನರಿ ಹೇಳಿದಂತೆ ಆಂಗ್ಲ ಪರಕೀಯ ಭಾಷೆ ,ಅದು ಸಲ್ಲ ಎನ್ನುವೆನು .ನನ್ನ ಬಾಲ್ಯದಲ್ಲಿ ಅಮ್ಮನೂ ,ಶಾಲೆಯ ಅಧ್ಯಾಪಕರೂ ನಿನಗೆ ಹೇಳಿದರೆ ಭಾಷೆ ಇಲ್ಲ ಎಂದು ಹಲವು ಬಾರಿ ಆಶೀರ್ವಾದ ಮಾಡಿದ ಪರಿಣಾಮ ಇರಬೇಕು .
ನಮಗೆ ಇಂಗ್ಲಿಷ್ ಶಿಕ್ಷಣ ಮೂರನೇ ತರಗತಿಯಲ್ಲಿ ಆರಂಭ .ಪತ್ರ ಲೇಖನದಲ್ಲಿ ರಜಾ ಅರ್ಜಿ ಬರೆಯಲು ಒಂದು ಫಾರ್ಮಾಟ್ ಹೇಳಿ ಕೊಟ್ಟಿದ್ದರು .As i am suffering from fever sanction me three days fever ,Yours obediently ,ಇತ್ಯಾದಿ .ಅದು ಕಲಿಸಿ ಕೊಟ್ಟ ಕೆಲವೇ ದಿವಸಗಳಲ್ಲಿ ನನ್ನ ಅಕ್ಕನ ಮದುವೆಗೆ ರಜೆ ಬೇಕಿತ್ತು .ಕನ್ನಡ ದಲ್ಲೇ ಬರೆದರೆ ಸಾಕಿತ್ತು .ಆದರೆ ಅಧ್ಯಾಪಕರನ್ನು ಇಂಪ್ರೆಸ್ ಮಾಡಲು ಇಂಗ್ಲಿಷ್ ನಲ್ಲಿಯೇ ಬರೆದೆ.As i am suffering from sister's marriage kindly sanction me ಇತ್ಯಾದಿ .ತಂದೆಯವರಿಗೆ ಇಂಗ್ಲಿಷ್ ಬರುತ್ತಿರಲಿಲ್ಲ .ಆದುದರಿಂದ ಮಗ ಇಷ್ಟು ಸಣ್ಣವನು ಇಂಗ್ಲಿಷ್ ಕಾಗದ ಬರೆದಿದ್ದಾನೆ ಎಂದು ಸಹಿ ಮಾಡಿ ಕೊಟ್ಟರು .ಅಧ್ಯಾಪಕರಿಗೆ ಕೊಟ್ಟಾಗ ,ಮುಂದಿನ ಕತೆ ಬೇಡ .ನಮ್ಮ ಅಧ್ಯಾಪಕರಿಗೂ ಇಂಗ್ಲಿಷ್ ಚೆನ್ನಾಗಿ ಬರುತ್ತಿರಲಿಲ್ಲ .ಹೆಚ್ಚ್ಚಿನ ಹಳ್ಳಿ ಶಾಲೆಗಳಲ್ಲಿ ಇದೇ ಪರಿಸ್ತಿತಿ.ನಾವು ಪರಸ್ಪರ ತುಳು ಮತ್ತು ಕನ್ನಡದಲ್ಲಿ ಮಾತನಾಡುತ್ತಿದ್ದೆವು .
ಕೆಲವು ಪೇಟೆ ಶಾಲೆಗಳಲ್ಲಿ ಮಕ್ಕಳು ಇಂಗ್ಲಿಷ್ ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡ ಬಾರದು ಎಂಬ ಕಟ್ಟಳೆ ಇದೆ.ಶಿವರಾಮ ಕಾರಂತರು ತಮ್ಮ ಹೈ ಸ್ಕೂಲ್ ನಲ್ಲಿ ಅಂತಹ ಒಬ್ಬ ಮುಖ್ಯೋಪಾಧ್ಯಾಯ ಇದ್ದರು ,ಒಂದು ದಿನ ಅವರು ಜಗಲಿಯಲ್ಲಿ ನಡೆಯುತ್ತಿರುವಾಗ ಅವರಿಗೆ ಕೇಳಿಸುವಂತೆ ತನ್ನ ಮಿತ್ರನಿಗೆ "Fool laugh in english why are you laughing in Kannada ?"ಹೇಳಿದರಂತೆ .ಕೈಲಾಸಮ್ ಅವರ ಸಂಸ್ಕೃತ ಅಧ್ಯಾಪಕರು ಎಲ್ಲಾ ವಿದ್ಯಾರ್ಥಿಗಳೂ ತಮ್ಮ ತರಗತಿಯಲ್ಲಿ ಸಂಸ್ಕೃತ ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡ ಬಾರದು ,ತಪ್ಪಿದರೆ ಶಿಕ್ಷೆ ಎಂದು ಆದೇಶ ನೀಡಿದ್ದರಂತೆ .ಒಂದು ದಿನ ಕೈಲಾಸಂ ಎದ್ದು ನಿಂತು ಒಂದು ಬೆರಳು ತೋರಿಸಿ "ಮೂತ್ರ ವಿಸರ್ಜನಾರ್ಥಾಯ ಬಹಿರ್ದೆಶಮ್ ಗಚ್ಚಾಮಿ "(ಮೂತ್ರ ಮಾಡಲು ಹೊರಹೋಗಬೇಕಿತ್ತು )ಎಂದರಂತೆ .ಕೋಪ ಗೊಂಡ ಶಿಕ್ಷಕರು ದೇವ ಭಾಷೆಯನ್ನು ಇದಕ್ಕೆಲ್ಲ ಉಪಯೋಗಿಸಿ ಮೈಲಿಗೆ ಮಾಡಬಾರದು ಹುಚ್ಚು ಮುಂಡೇದೆ "ಎಂದು ಬೈದರಂತೆ .
ಈಗಿನ ಮಾತೆಯರು (ತಂದೆಯೂ )ಮಕ್ಕಳಿಗೆ ಅತಿ ಬಾಲ್ಯದಲ್ಲಿ ಕಮ್ ಗೋ ಸಿಟ್ ಸ್ಟಾಂಡ್ ಇತ್ಯಾದಿ ತರಬೇತಿ ಮಾಡುತ್ತಾರೆ .ಕನ್ನಡ ಬಾಯಲ್ಲಿ ಬಂದರೆ ಮೈಲಿಗೆ ಆಗುತ್ತದೆ ಎಂಬಂತೆ .ತಮ್ಮ ನಾಯಿ ಬೆಕ್ಕುಗಳ ಕೂಡ ಇಂಗ್ಲಿಷ್ ಸಂವಹನ .ಎಚ್ ನರಸಿಂಹಯ್ಯ ತಮ್ಮ ಆತ್ಮ ಚರಿತ್ರೆಯಲ್ಲಿ ,ಬೆಂಗಳೂರು ಲಾಲ್ ಭಾಗ್ ನಲ್ಲಿ ಮುಂಜಾನೆ ವಾಕಿಂಗ್ ಮಾಡುವಾಗ ,ಅಲ್ಲಿ ಬಂದವರ ನಾಯಿಗಳಲ್ಲಿ ಬಹುತೇಕ ಇಂಗ್ಲಿಷ್ ಮೀಡಿಯಂ ,ಒಂದು ಮಾತ್ರ ತೆಲುಗು ಮಾಧ್ಯಮ ದ್ದು ,ಕನ್ನಡ ಮಾಧ್ಯಮದ ನಾಯಿಗಳೇ ಕಾಣಲಿಲ್ಲ ಎಂದು ದುಃಖಿಸಿದ್ದಾರೆ ..
ನಾನು ಮಂಗಳೂರಿನಲ್ಲಿ ಫ್ಲಾಟ್ ವಾಸವಿದ್ದ ಸಮಯ ,ಎದುರು ಮನೆಯಲ್ಲಿ ನೇಹಾ ಎಂಬ ಹುಡುಗಿ ,ತುಂಬಾ ಚೂಟಿ .ನನ್ನ ಫ್ರೆಂಡ್ .ನಾನು ಅವಳನ್ನು ಹೊಗಳಿ ಯು ಆರ್ ಎ ಗುಡ್ ಗರ್ಲ್ ಎಂದುದಕ್ಕೆ ಎಲ್ ಕೆ ಜಿ ಯ ಆ ಪೋರಿ "ಈ ಮಾಮನಿಗೆ ಇಂಗ್ಲಿಷ್ ಸರಿಯಾಗಿ ಬರುವುದಿಲ್ಲ .ಅದು ಗರ್ಲು ಅಲ್ಲ ಗಲ್ .(R ಸೈಲೆಂಟ್ ಎಂಬಂತೆ ),ಎಂದು ಸರಿ ಪಡಿಸಿದಾಗ ನಾನು ಹೌದಮ್ಮಾ ಇಂಗ್ಲಿಷ್ ಐಸ್ ನಾಟ್ ಕಮಿಂಗ್ ಟು ಮೀ ಎಂದೆ .ಕೂಡಲೇ ಅವಳು ತಲೆ ಮೇಲೆ ಕೈ ಇಟ್ಟು ವಾಟ್ ಇಂಗ್ಲಿಷ್ ಕಮಿಂಗ್ ಗೋಯಿಂಗ್ ,ಐ ಡೋಂಟ್ ನೊ ಇಂಗ್ಲಿಷ್ ಎಂದು ತಿದ್ದಿದಳು .ಪ್ರೈಮರಿ ಶಾಲೆಯಲ್ಲಿ ನಾನು ಕಿವಿ ಕೇಳುವುದಿಲ್ಲ ಎಂಬುದಕ್ಕೆ ಇಯರ್ ನಾಟ್ asking ,ಹಣ್ಣು ಹಣ್ಣು ಮುದುಕ ಎಂಬುದಕ್ಕೆ ಫ್ರೂಟ್ ಫ್ರೂಟ್ ಗ್ರಾಂಡ್ ಫಾದರ್ ,ಬಿದ್ದು ಬಿದ್ದು ನಕ್ಕನು ಎಂಬುದಕ್ಕೆ ಫೆಲ್ ಫೆಲ್ ಅಂಡ್ ಲಾಫ್ಡ್ ಎಂದೆಲ್ಲಾ ಬರೆಯುತ್ತಿದ್ದೆ ,
-------------------------------------------------------------------
ಪ್ರೊ ವೈ ಅರ ಮೋಹನ್ ಅವರ ನೆನಪುಗಳು ಪುಸ್ತಕದಲ್ಲಿ ತಮ್ಮ ಪ್ರೈಮರಿ ಶಾಲೆಯ ಇಂಗ್ಲಿಷ್ ಅಧ್ಯಾಪಕರ ಬಗ್ಗೆ ಬರೆದಿದ್ದಾರೆ ,ಅದರಿಂದ ಕೆಲವು ಸಾಲುಗಳು .
;I say silence ,silence. you see this is class room ;not fish market,i say,do you understand?
'You see ,English is very important.In today's society .you see .If you don't know English ,your bean doesn't get baked(ನಿಮ್ಮ ಬೇಳೆ ಬೇಯದು) ,you understand? .
You see ,English is very very difficult !You see ,don't think learning English is as easy as peeling plantain and putting in mouth I say'(ಬಾಳೆಹಣ್ಣು ಸುಲಿದು ತಿಂದಂತೆ ಅಲ್ಲ )
ಇನ್ನೂ ಕೆಲವು ಸಾಲುಗಳು
I say you are a village simpleton!You see you listen to Ramayana all night and in the morning ask what is Rama's relation to Sita!
I see that's why you look like one who took castor oil (ಹರಳೆಣ್ಣೆ ಕುಡಿದವನ ಮುಖ ).
Teacher:I say ,I simply asked whether you saw anything .You see ,if someone shouts pumpkin-thief ,you touch and feel your shoulders!(ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿದನಂತೆ )
Now say what is the plural form of sheep?Stuent:Sheeps saar !
Teacher :That includes you also !Useless fellow.I feel like warming your palm.(ಕೈ ಬಿಸಿ ಮಾಡಬೇಕು )
------------------------------------------------------------------------
ನನಗೆ ಇಂಗ್ಲಿಷ್ ಚೆನ್ನಾಗಿ ಬರುವುದಿಲ್ಲ ಎಂದು ಬೇಸರ ನಾಚಿಕೆ ಕೀಳರಿಮೆ ಇಲ್ಲ .ಹಲವಾರು ಬಾರಿ ರೋಗಿಯ ಕೇಸ್ ಶೀಟ್ ನಲ್ಲಿ ನಾನು ನನ್ನಂತೆ ಇರುವ ಸಹೋದರಿಯರಿಗೆ (nurse) ಕನ್ನಡಲ್ಲಿ ಆದೇಶ ಬರೆಯುವೆನು ,ಆಗಾಗ ಮಗ್ಗಲು ತಿರುಗಿಸಿರಿ ,ಗಂಟಲು ಗರ ಗರ ಎಂದರೆ ಸಕ್ಷನ್ ಮಾಡಿರಿ ,ತಲೆ ಏರಿಸಿ (ರೋಗಿಯ ತಲೆ ನಿಮ್ಮದಲ್ಲ )ಮಲಗಿಸಿ ಇತ್ಯಾದಿ .-
ಅಂಗಡಿಯಲ್ಲಿ ಅಕ್ಕಿ ಕೇಳಿದರೆ ಸಾಧಾರಣ ,ಮೀಡಿಯಂ ಮತ್ತು ಎ ಒನ್ ಯಾವ್ದು ಬೇಕು ಎನ್ನುವರು ,ಅದರಂತೆ ಕನ್ನಡ ಎ ಒನ್ ಇಂಗ್ಲಿಷ್ ಮೀಡಿಯಂ .ಆದರೆ ವಶಿಷ್ಠ ಗುರುಕುಲ ಆಂಗ್ಲ ಮಾಧ್ಯಮ ಶಾಲೆ ಇತ್ಯಾದಿ ಹೆಸರು ಕಂಡಾಗ ಏನೋ ಕಸಿ ವಿಸಿ ಆಗುವುದು
ಇಷ್ಟೆಲ್ಲಾ ಹೇಳಿದರೂ ಇವಳು ನನ್ನ ಹೆಂಡತಿ ಎನ್ನುವುದಕ್ಕಿಂತ ನನ್ನ ವೈಫ್ ,ಇದು ನನ್ನ ತಂದೆ ಗೆ ಬದಲು ಡ್ಯಾಡಿ ಇತ್ಯಾದಿ ಎನ್ನುವುದರಲ್ಲಿ ಒಂದು ಗತ್ತು ಮೇಲೇ ಇದೆ ಎನ್ನುವಿರೋ ?
ಬಹಳ ಚೆನ್ನಾಗಿ ಬರೆದಿದ್ದೀರಾ. ಇದು ನಮ್ಮೆಲ್ಲರ common problem.
ಪ್ರತ್ಯುತ್ತರಅಳಿಸಿತುಂಬಾ ಚೆನ್ನಾಗಿದೆ😃
ಪ್ರತ್ಯುತ್ತರಅಳಿಸಿತುಂಬಾ ಚೆನ್ನಾಗಿದೆ😃
ಪ್ರತ್ಯುತ್ತರಅಳಿಸಿ