ಕಾಡೂರು ಸೀತಾರಾಮ ಶಾಸ್ತ್ರಿಗಳು
.ನಿನ್ನೆ ನಟರಾಜ ವೇದಿಕೆಯಲ್ಲಿ ಬಡಗು ತಿಟ್ಟಿನ ಯಕ್ಷಗಾನ ಸುಧನ್ವ ಮೋಕ್ಷ ಮತ್ತು ಗದಾ ಯುದ್ಧ ನೋಡಿ ಆನಂದಿಸಿದೆ .ನಿರೀಕ್ಷೆಯಂತೆ ಚೆನ್ನಾಗಿ ಬಂತು ಹಿಂದೆ ಪುತ್ತೂರಿನಲ್ಲಿ ವ್ಯವಸಾಯೀ ಮೇಳಗಳ ಯಕ್ಷಗಾನ ಬಯಲಾಟಗಳು ಸಾಕಷ್ಟು ಆಗುತ್ತಿದ್ದು ಜಾತ್ರೆ ಸಮಯವಂತೂ ಆರೇಳು ಆಟಗಳು ಒಂದೇ ದಿನ ಆದದ್ದು ಇದೆ .ಯಾಕೋ ಈ ಗ ಕಟೀಲು ಮೇಳದ ಹರೆಕೆ ಆಟ ಬಿಟ್ಟರೆ ಡೇರೆ ಮೇಳಗಳ ಆಟ ಬರುವುದೇ ಇಲ್ಲ .ಯಕ್ಷಗಾನ ಪ್ರೇಕ್ಷಕರು ಎಲ್ಲಿ ಮಾಯವಾದರು ?
ಇಂತಹ ಬರಗಾಲ ಹೋಗಲಾಡಿಸಲು ಕೆಲವು ಕಲಾ ಪ್ರೇಮಿಗಳು ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ . ಅವರ ಪೈಕಿ ಕಾಡೂರು ಸೀತಾರಾಮ ಶಾಸ್ತ್ರಿ ಗಳು ಅಗ್ರಗಣ್ಯರು .ಶಾಸ್ತ್ರೀ ಅಂಡ್ ಕೋ ಎಂಬ ಅಡಿಕೆ ಮಾರಾಟ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿರುವ ಇವರು ಯಕ್ಷಗಾನ ತಾಳ ಮದ್ದಳೆ ,ಬಯಲಾಟ ಇತ್ಯಾದಿಗಳನ್ನು ವರ್ಷವೂ ನಡೆಸಿಕೊಂಡು ಬರುತ್ತಿದ್ದು ,ಪುತ್ತೂರಿನ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಯಾವತ್ತೂ ಕಂಡು ಬರುವ ಮುಖ . ತಾವು ಆನಂದಿಸಿದ ಕಲಾಪ್ರಕಾರ ಗಳನ್ನು ಉಳಿದವರೂ ನೋಡಿ ಸಂತಸ ಪಡಲಿ ಎಂಬ ಧ್ಯೇಯ .ತಮ್ಮ ಗಳಿಕೆಯ ಒಂದು ಭಾಗ ಇದಕ್ಕೆ ಮೀಸಲು . ಅದಕ್ಕೆ ಸಮಾನ ಮನಸ್ಕರ ತಂಡ . ಕಳೆದ ವರ್ಷದ ವರೆಗೆ ಪುತ್ತೂರು ದಸರಾ ಕಾರ್ಯಕ್ರಮದಲ್ಲಿಯೂ ಇವರ ಸಕ್ರಿಯ ಪಾಲು . ಆಪತ್ ಸ್ಥಿತಿಯಲ್ಲಿ ಸಿಲುಲುಕಿದ ಅನೇಕರಿಗೆ ಇವರು ಸಹಾಯ ಮಾಡಿದ್ದು ,ಪ್ರಚಾರದಿಂದ ದೂರ .
ಪುತ್ತೂರಿನಲ್ಲಿ ಹಿಂದೆ ಉದ್ಯಮಿಗಳಾದ ದಿ ಮಾಧವ ನಾಯಕ್ ,ಜಿ ಎಲ್ ಆಚಾರ್ಯ ಮುಂತಾದವರು ಸ್ವಯಂ ಕಲಾಸಕ್ತರಾಗಿ ಕಲೆ ಸಾಹಿತ್ಯಕ್ಕೆ ಪ್ರೋತ್ಸಾಹ ಕೊಡುತ್ತಿದ್ದರು .ಜಿ ಎಲ್ ಆಚಾರ್ಯ ಅವರ ಶತಮಾನೋತ್ಸವ ಕಾರ್ಯಕ್ರಮ ಇಂದು ಆರಂಭ ಗೊಳ್ಳಲಿದೆ . ಈಗಿನ ತಲೆಮೊರೆಯ ಡಾ ಹರಿಕೃಷ್ಣ ಪಾಣಾಜೆ ,ಡಾ ಶ್ರೀಪ್ರಕಾಶ್ ಬಂಗಾರಡ್ಕ ,ಡಾ ಶ್ರೀಶ ಕುಮಾರ್ ಮತ್ತು ರಾಘವೇಂದ್ರ ಹಾಲ್ಕೆರೆ ಮುಂತಾದವರನ್ನು ನೆನಪಿಸಿ ಕೊಳ್ಳ ಬಯಸುತ್ತೇನೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ