ಬೆಂಬಲಿಗರು

ಸೋಮವಾರ, ಆಗಸ್ಟ್ 8, 2022

ಹಿರಿಯರ ನುಡಿಮುತ್ತುಗಳು

  ಕನ್ನಡ ಸಂಸ್ಕೃತಿ ಇಲಾಖೆಯವರು ಹಿರಿಯ ಸಾಹಿತಿ ,ಕಲಾವಿದ ಮತ್ತು ಆಡಳಿತ ಗಾರ ರ ಮನೆಯಂಗಳದಲ್ಲಿ ಮಾತುಕತೆ ಎಂಬ ಕಾರ್ಯಕ್ರಮ ಆರಂಭಿಸಿತ್ತು .ಅದರ ಕೆಲವನ್ನು ಒಟ್ಟು ಸೇರಿಸಿ 'ಮನೆಯಂಗಳದಲ್ಲಿ ಮಾತುಕತೆ 'ಎಂಬ ಹೊತ್ತಿಗೆ ಬಂದಿತ್ತು . ಒಳ್ಳೆಯ ಚಿತ್ರಗಳೂ ಮಾತುಗಳೂ ಇರುವ ಸಂಗ್ರಹಾರ್ಹ ಕೃತಿಯಿಂದ ಆಯ್ದ ಕೆಲ ನುಡಿ ಮುತ್ತುಗಳು 

ಎ ಎನ್ ಮೂರ್ತಿ ರಾವ್ 

ಒಬ್ಬ ವ್ಯಕ್ತಿ ಸತ್ತ ಮೇಲೆ ಅವನನ್ನು ನರಕಕ್ಕೆ ಅಥವಾ ಸ್ವರ್ಗಕ್ಕೆ ಕಳುಹಿಸುತ್ತಾನೆ ಎಂಬ ದೇವರನ್ನು ನಾನು ನಂಬುವುದಿಲ್ಲ .ಮಧ್ಯವರ್ತಿಗಳಿಂದಾಗಿ ದೇವರಿದ್ದಾನೆ ಎಂಬುದನ್ನೂ ನಾನು ಒಪ್ಪುವುದಿಲ್ಲ .ಕಷ್ಟದಲ್ಲಿ ಇರುವ ವ್ಯಕ್ತಿಯನ್ನು ನೋಡಿ ಸಹಾಯ ಮಾಡುವ ವಿಚಾರ ಬಂದರೆ ಅದೇ ದೇವರು . 

ನಮ್ಮ ಹೃದಯದಲ್ಲಿ ಏನು  ಒಳ್ಳೆಯದು ಅಂತ ಇದೆ ಅದೇ ದೇವರು ಅಂತ ನನ್ನ ಅಭಿಪ್ರಾಯ . 

       ಪ್ರೊ ಯು ಆರ್ ರಾವ್ 

 ಒಂದುಗಡೆ     ನಾವು ಹೇಳುತ್ತೇವೆ ದೇವರು ಎಲ್ಲಾ ಕಡೆ ಯಲ್ಲೂ  ಇದ್ದಾನೆ ಎಂದು ,ನಮ್ಮ ಸಂಸ್ಕೃತಿಯೂ ಪ್ರತಿಯೊಬ್ಬ ದೇವರೂ ಕೂಡಾ ಒಂದೇ ಎಂದು .ಎಲ್ಲ ನದಿಗಳು ಕೊನೆಗೆ ಸಮುದ್ರವನ್ನು ಹೋಗಿ ಸೇರುತ್ತವೆ ,ಹಾಗೆಯೆ ದೇವರುಗಳು ಕೂಡಾ ಎಂದು ಹೇಳುತ್ತೇವೆ.ಹಾಗೆ ಹೇಳಿ ಆಮೇಲೆ ಹೊಡೆದಾಡಿಕೊಳ್ಳುತ್ತೇವೆ .ಇದು ಬಹಳ ವಿಚಿತ್ರವಾಗಿದೆ .ನಮಗೆ ಬಹಳಷ್ಟು ವಿದ್ಯೆ ಜ್ಞಾನ ಎಲ್ಲ ಇದೆ ,ಆದರೆ ಮತ್ತೊಂದಡೆ ಇಂತಹ ನಂಬಿಕೆಗಳನ್ನು ಇಟ್ಟುಕೊಳ್ಳುತ್ತೇವೆ . 

ಮಿದುಳನ್ನು ಉಪಯೋಗ ಮಾಡದೇ ಇದ್ದರೆ ಅದು ಕೆಲಸ ಮಾಡುವುದಿಲ್ಲ .ಯುವಕರಂತೆ ಕಾಣಬೇಕಾದರೆ ಯಾವಾಗಲೂ ಕ್ರಿಯಾಶೀಲರಾಗಿ ಇರಬೇಕು . 

ಎಚ್ ನರಸಿಂಹಯ್ಯ 

ಪರೀಕ್ಷೆಗಳಲ್ಲಿ  ಅಂಕಗಳನ್ನು ಗಳಿಸುವುದು  ಕ್ವಾಲಿಟಿ ಎಂದು ಹೇಳುವುದು ತುಂಬಾ ತಪ್ಪಾಗುತ್ತದೆ .ಕ್ವಾಲಿಟಿ ಎಂಬುದಕ್ಕೆ ವ್ಯಾಪಕವಾದ ಅರ್ಥವಿದೆ .ಪರೀಕ್ಷೆಯಲ್ಲಿ ಅಂಕ ಗಳಿಸುವುದು ಅದೊಂದು ಭಾಗ ,ಅಂಶ ಅಷ್ಟೇ . 

ಗ್ರಹಣದಲ್ಲಿ ನಂಬಿಕೆ ಇರುವವರು ಕೆಲವರು ಆ ದಿನ ಅಡಿಗೆ ಮಾಡ ಬಾರದು ,ಊಟ ಮಾಡ ಬಾರದು ,ಮನೆಯೊಳಗೇ ಇರಬೇಕೆಂದು ಬಯಸುತ್ತಾರೆ .ಆದರೆ ,ಗ್ರಹಣದ ಸಮಯದಲ್ಲಿ ಸಿಟಿ ಮಾರ್ಕೆಟ್ ನಲ್ಲಿ ಬಿರಿಯಾನಿ ತಿನ್ನುತ್ತಾ ಕುಳಿತಿರುವವರಿಗೆ ಏನೂ ಆಗುವುದಿಲ್ಲ . 

ನಾನು ಗಾಂಧೀಜಿಯವರ ಅನುಯಾಯಿ .ಏನೇ ಆಗಲಿ ಇವತ್ತಿನ ರಾಜಕೀಯ ನಾಯಕರನ್ನು ಕಂಡಾಗ ಮನಸಿಗೆ ತುಂಬಾ ನೋವುಂಟಾಗುತ್ತದೆ ,ಸಂಕಟವಾಗುತ್ತದೆ ,ಇನ್ನೇನೂ ಇಲ್ಲ. 

ನಿಟ್ಟೂರ್ ಶ್ರೀನಿವಾಸ ರಾವ್ 

ಹಿಂದಿನ ಕಾಲದಲ್ಲಿ ಪತ್ರಿಕೆಗಳು ಕೂಡ ಗಂಭೀರವಾಗಿದ್ದವು .ಅವು ಪ್ರಸಾರಕ್ಕೋಸ್ಕರ   ರಾಜಕಾರಿಣಿಗಳನ್ನು ಸಂತೃಪ್ತಿ ಮಾಡುವುದಕ್ಕೆ ಪ್ರಯತ್ನಿಸುತ್ತಿರಲಿಲ್ಲ .ಇವತ್ತು ಈ ತರಹ ಮಾಡಿಕೊಂಡು ಹೋಗುತ್ತಿದ್ದಾರೆ .ಇದು ತಪ್ಪು ಎಂದು ನಾನು ಧಾರಾಳವಾಗಿ ಹೇಳುತ್ತೇನೆ . 

ಗಂಗೂ ಬಾಯಿ ಹಾನಗಲ್ 

ಅನೇಕರು ನನ್ನನ್ನು ಕೇಳಿದ್ದಾರೆ 'ನಿಮಗೆ ಇಂಗ್ಲಿಷ್ ಬರೂದಿಲ್ಲ ,ನೀವು ಹೇಗೆ ವಿದೇಶ ಪ್ರವಾಸ ಮಾಡಿ ಕಾರ್ಯಕ್ರಮ ಕೊಟ್ರಿ ?'ಅಂತ .'ನನ್ನ ಭಾಷಾ ಅವರಿಗೆ ಬರ್ತಿತ್ತು' ಅಂದೆ .ಸಂಗೀತಕ್ಕೆ ಭಾಷಾನೆ ಇಲ್ಲ !. 

ನನಗೆ ಯಾವತ್ತು ಪ್ರಶಸ್ತಿಗಳತ್ತ  ಲಕ್ಷ್ಯ ಇರೂದಿಲ್ಲ .ತಾವೆಲ್ಲಾ ಆನಂದ ಪಡುತ್ತೀರಲ್ಲ ಅದೇ ಸಾಕು . 

ಏನ್ ಲಕ್ಷ್ಮಣ ರಾವ್ 

ಭ್ರಷ್ಟಾಚಾರದ ವಿಚಾರದಲ್ಲಿ ಅಧಿಕಾರಿಗಳಾದವರು ರಾಜಕಾರಿಣಿಗಳೊಡನೆ ಕೈ ಜೋಡಿಸ ಬಾರದು ..                     

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ