ಮೆದುಳಿನ ಆಘಾತ (ಪಕ್ಷವಾತ ,ಸ್ಟ್ರೋಕ್ )ಮತ್ತು ರಕ್ತದ ಒತ್ತಡ
ಅನಿಯಂತ್ರಿತ ರಕ್ತದ ಒತ್ತಡ ಇರುವವವರಲ್ಲಿ ಮೆದುಳಿನ ಆಘಾತ ಅಧಿಕ . ಏರು ರಕ್ತದ ಒತ್ತಡ ಇಲ್ಲದವರಲ್ಲಿಯೂ ಮೆದುಳಿನ ಆಘಾತಕ್ಕೆ ಕಾರಣ ವಾದ ಮೆದುಳಿನ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಅಥವಾ ರಕ್ತಸ್ರಾವ ಆಗ ಬಹುದು .
ಇಂತಹ ಸಂದರ್ಭದಲ್ಲಿ ಮೆದುಳಿನ ಆಯಕಟ್ಟಿನ ಜಾಗಗಳಿಗೆ ರಕ್ತ ಸಂಚಾರ ಅಡಚಣೆ ಆಗದಂತೆ ಶರೀರದ ರಕ್ಷಣಾ ವ್ಯವಸ್ಥೆಯ ಆದೇಶ ದಂತೆ ರಕ್ತದ ಒತ್ತಡ ಜಾಸ್ತಿ ಆಗುವುದು . ಮೆದುಳಿನ ರಕ್ತನಾಳಗಲ್ಲಿ ರಕ್ತ ಹೆಪ್ಪು ಗಟ್ಟಿ ಸ್ಟ್ರೋಕ್ ಆದರೆ ನಾಲ್ಕು ಗಂಟೆಗಳ ಒಳಗೆ ಬಂದರೆ ಅದನ್ನು ಕರಗಿಸುವ ಔಷಧಿ ಚುಚ್ಚು ಮದ್ದು ರೂಪದಲ್ಲಿ ಕೊಡುವರು . ಅಂತಹ ಸಂದರ್ಭ ಮಾತ್ರ ಬಿಪಿ ಹೆಚ್ಚು ಇದ್ದರೆ ೧೮೫/೧೦೫ (ನಾರ್ಮಲ್ ೧೨೦/೮೦)ಮಟ್ಟಕ್ಕೆ ತರಬೇಕಾಗುತ್ತದೆ . ಇಲ್ಲಿ ಕೂಡಲೇ ರಕ್ತ ನಾಳದ ಬ್ಲಾಕ್ ತೆರವು ಆಗುವುದರಿಂದ ಮೆದುಳಿನ ರಕ್ತ ಸರಬರಾಜು ಹೆಚ್ಚ್ಚು ವೇಳೆ ಅಸ್ತವ್ಯಸ್ತ ಆಗದು .
ಆದರೆ ತಡವಾಗಿ ಬಂದ ರೋಗಿಗಳಲ್ಲಿ , ಹೆಚ್ಚಿದ ರಕ್ತದ ಒತ್ತಡವನ್ನು ದಿಢೀರ್ ಕಡಿಮೆ ಮಾಡಿದರೆ ಮೆದುಳಿಗೆ ಹೆಚ್ಚು ಹಾನಿ ಆಗುವದು .ಇಂತಹ ಸಂದರ್ಭ ಆಸ್ಪಿರಿನ್ ನಂತಹ ಹೆಪ್ಪು ನಿರೋಧಕ ಔಷಧಿ ಮಾತ್ರ ಕೊಡುವರು . ರೋಗಿಗೆ ಈಗಾಗಲೇ ಬಿ ಪಿ ಮಾತ್ರೆ ಇದ್ದರೆ ಅದನ್ನು ಮುಂದುವರಿಸುವರು .
ಇನ್ನು ಮೆದುಳಿನ ರಕ್ತ ಸ್ರಾವ ದಲ್ಲಿ ರಕ್ತದ ಒತ್ತಡ ಅಧಿಕ ಇದ್ದರೆ ಕೂಡಲೇ ಕಡಿಮೆ ಮಾಡುವ ಔಷಧಿ ಕೊಡುವರು .
ನಾನು ಹಿಂದೆ ತಿಳಿಸಿದಂತೆ ಇಂತಹ ಕಾಯಿಲೆಯನ್ನು ವಾಡಿಕೆಯಲ್ಲಿ ಪಕ್ಷವಾತ ಎಂದು ಕರೆದರೂ ರೋಗ ಇರುವದು ಮೆದುಳಿನಲ್ಲಿಯೇ ಹೊರತು ಕೈ ಕಾಲಿನಲ್ಲಿ ಅಲ್ಲ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ