ಆ ಗಾಗ ಕೇಳಿ ಬರುವ ಶ್ಲೋಕ . ರೋಗ ಗ್ರಸ್ತ ವಾಗಿ ಜರ್ಜರಿತ ಶರೀರ ಜರ್ಜರಿತ ವಾದಾಗ ದೇವರೇ ವೈದ್ಯ ,ಗಂಗಾ ಜಲವೇ ದಿವ್ಯ ಔಷಧ .ಮನುಷ್ಯನಿಗೆ ವಯಸ್ಸಾದಾಗ ಶರೀರ ಶಿಥಿಲ ವಾಗಿ ರೋಗಗಳು ಹುಡುಕಿ ಕೊಂಡು ಬರುತ್ತವೆ .
ವಿನಾ ದೈನ್ಯೇನ ಜೀವಿತಂ ಅನಾಯಸೇನ ಮರಣಂ ಎಂಬ ಮಂತ್ರ ಎಲ್ಲರಿಗೂ ಅಪ್ಯಾಯಮಾನವಾಗಿ ತೋರುವುದು .
ಆದುದರಿಂದ ಅನಾರೋಗ್ಯ ದೂರ ಇಡುವ ಕೆಲವು ಮಾರ್ಗೋಪಾಯ ಗಳನ್ನು ಗಮನಿಸುವ .
ಇದರಲ್ಲಿ ಸುಲಭ (?)ಸಾಧ್ಯ ಸರಿಯಾದ ಸಮತೋಲ ಆಹಾರ ಸೇವನೆ .
ಹಿರಿಯರಿಗೆ ಸಮತೋಲಿತ ಆಹಾರವು ಕಡಿಮೆ ಕ್ಯಾಲೊರಿ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿರಬೇಕು.ನಮ್ಮಲ್ಲಿ ಬಹು ಮಂದಿ ಅಕ್ಕಿ ಗಂಜಿ ,ನೀರು ದೋಸೆ ,ಪುಂಡಿ ಇತ್ಯಾದಿ ಆರೋಗ್ಯಕರ ಆಹಾರ ಎಂದು ಹೇಳುತ್ತಾರೆ .ಆದರೆ ಅಕ್ಕಿಯಲ್ಲಿ ಸಕ್ಕರೆ ಅಥವಾ ಕ್ಯಾಲೋರಿ ಜಾಸ್ತಿ . ಸ್ನಾಯುಗಳ ಸಂರಕ್ಷಣೆಗೆ ಹೆಚ್ಚಿನ ಪ್ರೋಟೀನ್, ಜೀರ್ಣಕ್ರಿಯೆಗೆ ನಾರು, ಹಾಗೂ ಎಲುಬುಗಳ ಆರೋಗ್ಯಕ್ಕಾಗಿ ಅಗತ್ಯವಾದ ವಿಟಮಿನ್ ಮತ್ತು ಖನಿಜಗಳ ಮೇಲೆ ಒತ್ತು ನೀಡಬೇಕು. ಮುಖ್ಯ ಅಂಶಗಳಲ್ಲಿ ಹಣ್ಣುಗಳು, ತರಕಾರಿಗಳು, ಸಂಪೂರ್ಣ ಧಾನ್ಯಗಳು, ಕಡಿಮೆ ಕೊಬ್ಬಿನ ಪ್ರೋಟೀನ್ (ಮೀನು, ಕೋಳಿ, ಬೀನ್ಸ್), ಮತ್ತು ಕಡಿಮೆ ಕೊಬ್ಬಿನ ಹಾಲು ಉತ್ಪನ್ನಗಳು ಸೇರಿವೆ. ಕೊಬ್ಬು, ಉಪ್ಪು ಮತ್ತು ಸಕ್ಕರೆ ಬಳಕೆಯನ್ನು ಕಡಿಮೆ ಮಾಡಬೇಕು. ದೇಹದಲ್ಲಿ ನೀರಿನ ಸಮತೋಲನ ಕಾಪಾಡುವುದು ಅತ್ಯಂತ ಮುಖ್ಯ, ಹಾಗೆಯೇ ಮೃದುವಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನು ಸೇವಿಸುವುದು ಒಳ್ಳೆಯದು.
ಪ್ರೋಟೀನ್: ಸ್ನಾಯುಗಳ ಭಾರವನ್ನು ಕಾಪಾಡಲು ಅಗತ್ಯ. ಕಡಿಮೆ ಕೊಬ್ಬಿನ ಮಾಂಸ, ಕೋಳಿ, ಮೊಟ್ಟೆ, ಮೀನು, ಬೀನ್ಸ್ ಮತ್ತು ಕಾಯಿ-ಬೀಜಗಳು ಉತ್ತಮ ಮೂಲಗಳು.ಅಕ್ಕಿ ಗೋಧಿ ಯಂತಹ ಏಕ ದಳ ಧಾನ್ಯಗಳಿಗಿಂತ ಹೆಸರು ಕಡಲೆ ಉದ್ದು ಮುಂತಾದ ದ್ವಿದಳ ಧಾನ್ಯಗಳಲ್ಲಿ ಪ್ರೊಟೀನ್ ಅಥವಾ ಸಸಾರ ಜನಕ ಅಧಿಕ ಎಂಬುದನ್ನು ಗಮನಿಸ ಬೇಕು .
ಹಣ್ಣುಗಳು ಮತ್ತು ತರಕಾರಿಗಳು: ವಿವಿಧ ಬಣ್ಣಗಳ ಹಣ್ಣು ಮತ್ತು ತರಕಾರಿಗಳನ್ನು, ವಿಶೇಷವಾಗಿ ಹಸಿರು ಎಲೆ ತರಕಾರಿಗಳನ್ನು ಸೇವಿಸುವುದು ನಾರು ಮತ್ತು ಆಂಟಿಆಕ್ಸಿಡೆಂಟ್‌ಗಳನ್ನು ಒದಗಿಸುತ್ತದೆ.
ಅಸಂಸ್ಕರಿತ ಇಡೀ ಧಾನ್ಯ ಗಳು .
ಹಾಲು ಉತ್ಪನ್ನಗಳು: ಕಡಿಮೆ ಕೊಬ್ಬಿನ ಹಾಲು, ಮೊಸರು ಕ್ಯಾಲ್ಸಿಯಂ ಹಾಗೂ ವಿಟಮಿನ್ D ಒದಗಿಸಿ ಎಲುಬುಗಳ ಆರೋಗ್ಯವನ್ನು ಕಾಪಾಡುತ್ತವೆ.
ಆಹಾರ ಸಂಬಂಧಿತ ಸಲಹೆಗಳು ಮತ್ತು ಗಮನಿಸಬೇಕಾದ ವಿಷಯಗಳು
ನೀರಿನ ಸೇವನೆ: ವಯಸ್ಸಾದಂತೆ ದಾಹದ ಭಾವನೆ ಕಡಿಮೆಯಾಗಬಹುದು, ಆದ್ದರಿಂದ ದಿನಪೂರ್ತಿ ಸಾಕಷ್ಟು ದ್ರವಗಳನ್ನು ಕುಡಿಯಬೇಕು.
ಉಪ್ಪು ಮತ್ತು ಸಕ್ಕರೆ ಕಡಿಮೆ ಮಾಡುವುದು: ರುಚಿಗಾಗಿ ಉಪ್ಪಿನ ಬದಲು ಸೊಪ್ಪುಗಳು ಮತ್ತು ಮಸಾಲೆಗಳನ್ನು ಬಳಸಿ; ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರಗಳನ್ನು ತಪ್ಪಿಸಬೇಕು.ಉಪ್ಪಿನ ಕಾಯಿ ,ಉಪ್ಪಿನಲ್ಲಿ ಕಾಪಿಟ್ಟ ಹಲಸು ಮಾವು ಮೀನು ಇತ್ಯಾದಿ ಯಲ್ಲಿ ಉಪ್ಪು ಸಾಂದ್ರೀಕೃತ ವಾಗಿರುತ್ತದೆ ಎಂದು ಗಮನಿಸ ಬೇಕು
ಚಿಕ್ಕ ಪ್ರಮಾಣದ, ಹೆಚ್ಚು ಬಾರಿ ಊಟ:
ಉಪವಾಸ
ನಿಯಮಿತವಾಗಿ ಮಾಡುವ ಉಪವಾಸ ಆರೋಗ್ಯಕ್ಕೆ ಉತ್ತಮ ಎಂದು ಕಂಡು ಬಂದಿದೆ .ಇದು ಆಚೇ ಮನೆ ಸುಬ್ಬಮ್ಮನ ಉಪವಾಸ ದಂತೆ ಬರೀ ಅನ್ನ ಬಿಟ್ಟು ಉಳಿದನ್ನು ಸ್ವಾಹಾ ಮಾಡುವುದು ಆಗಿರ ಬಾರದು ಮತ್ತು ಉಪವಾಸ ಮುರಿದ ಮೇಲೆ ಅದನ್ನು ಹೆಚ್ಚಿನ ಆಹಾರ ಸೇವಿಸಿ ಸಮತೂಕ ಮಾಡಲು ಹೋಗ ಬಾರದು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ