ಪತ್ರಿಕೆ ಓದುಗರಿಗೆ ಓಮ್ನಿ ಪೊಟೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದ ಒಂದು ಹೆಸರು ಪ ರಾಮಕೃಷ್ಣ ಶಾಸ್ತ್ರಿ . ಶಿಷ್ಟ ಶಿಕ್ಷಣ ಹೆಚ್ಚು ಪಡೆಯದ ,ಕುಗ್ರಾಮದಿಂದ ಬಂದ ಇವರು ಸಾಹಿತ್ಯದ ಎಲ್ಲಾ ಪ್ರಾಕಾರ ಗಳಲ್ಲಿ ಕೈಯ್ಯಾಡಿಸಿದ್ದೇ ಅಲ್ಲದೆ ,ಯಕ್ಷಗಾನ ,ಕೃಷಿ ,ರಾಜಕೀಯ ,ಪತ್ರಿಕಾ ರಂಗ ಇತ್ಯಾದಿ ಗಳ ಒಳ ಹೊಕ್ಕ ಅನುಭವ ಇರುವವರು .
ಇಂತಹ ಸಾಧಕರಿಗೆ ಎಪ್ಪತ್ತು ತುಂಬಿದ ಅವಸರದಲ್ಲಿ "ಬದುಕು ಬರಹ ಬವಣೆ "ಎಂಬ ಹೊತ್ತಿಗೆ ಹೊರ ತಂದಿದ್ದಾರೆ . ನಿರೂಪಣೆ ಅವರ ಪತ್ರಕರ್ತ ಪುತ್ರ ಲಕ್ಷ್ಮೀ ಮಚ್ಚಿನ ಅವರದ್ದು . ಈ ಹಿರಿಯರ ಬದುಕಿನ ಅನುಭವಗಳನ್ನು ಯಾವುದೇ ಮುಚ್ಚು ಮರೆ ಇಲ್ಲದೆ ಚಿತ್ರಿಸಿದ್ದಾರೆ . ಲೇಖಕ ನಾಗಿ ಜೀವನ ಸಾಗಿಸ ಬಲ್ಲೆ ಎಂದು ಅರ್ಥ ಸಂಪಾದನೆ ಕೂಡಾ ಉದ್ದೇಶವಾಗಿ ಬರೆಯಲು ಆರಂಬಿಸಿ ಸಾಹಿತಿಯಾಗಿ ರೂಪು ಗೊಂಡ ಬಗೆ ,ಕೃಷಿಕನಾಗಿ ಅನುಭವ , ಎದುರಿಸಿದ ಕಾರ್ಪಣ್ಯ ಮುಜುಗರಗಳು ,ಸಂತೋಷ ಗಳ ವಿವರ ಇದೆ .
,
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ