ಬೆಂಬಲಿಗರು

ಮಂಗಳವಾರ, ಮಾರ್ಚ್ 10, 2015

ಉದರ ಶೂಲಾ ಬಹು ವಿಧ ರೋಗಂ


ಹೊಟ್ಟೆ ನೋವು ಸಾಮಾನ್ಯ ರೋಗ ಲಕ್ಷಣ .ಹೆಚ್ಚಿನ ಹೊಟ್ಟೆ ನೋವು ಮತ್ತು
ಉರಿಯನ್ನು ಜನರು ಗ್ಯಾಸ್ಟ್ರಿಕ್ ಅಥವಾ ಗ್ಯಾಸ್ ಟ್ರಬಲ್ ಎಂದೂ ಕರೆಯುತ್ತಾರೆ .
ನಿಜ ಅರ್ಥದಲ್ಲಿ ಉದರದ ಆಮ್ಲ ಪ್ರಕೋಪದಿಂದ ಉಂಟಾಗುವ ನೋವು
ಅಥವಾ ಸಂಕಟಕ್ಕೆ ಗ್ಯಾಸ್ಟ್ರಿಕ್ ಎಂದು ಕರೆಯುವುದು ಲೇಸು .ಜಠ
ರ ಹೊಟ್ಟೆಯ ಮೇಲ್ಬಾಗದಲ್ಲಿ ಇರುವದರಿಂದ ಈ ತರಹದ ನೋವು ಹೊಟ್ಟೆಯ
ಮೇಲ್ಬಾಗದಲ್ಲಿ ಇರುತ್ತದೆ.
                               

ಹೊಟ್ಟೆಯನ್ನು ವೈದ್ಯ ಶಾಸ್ತ್ರದಲ್ಲಿ ಮ್ಯಾಜಿಕ್ ಬಾಕ್ಸ್ ಎಂದು
ಕರೆಯುತ್ತಿದ್ದರು .ಎಂತಹ  ಅನುಭವಿ ವೈದ್ಯರೂ ಹೊಟ್ಟೆ ನೋವಿನ ಕಾರಣ
ಪತ್ತೆಯಲ್ಲಿ ಸೋಲುವುದುಂಟು .ಈಗ ಸ್ಕ್ಯಾನ್ ಗಳು ಬಂದ ಮೇಲೆ ಪರಿಸ್ತಿತಿ 
ಕೊಂಚ ಸುದಾರಿಸಿದೆ .ಇದಕ್ಕೆ ಕಾರಣ ಉದರದೊಳಗೆ ಅನೇಕ ಅಂಗೋಪಾಂಗ
ಗಳು ಅಡಗಿವೆ .ಯಾವ ಹುತ್ತದಲ್ಲಿ ಯಾವ ಹಾವೋ ಎಂದು ಹೊರಗಿನಿಂದ
ಹೇಳುವುದು ಕಷ್ಟ .
ಸ್ಥೂಲವಾಗಿ   ಈ  ಕಾರಣಗಳು ಇರ ಬಹುದು
೧. ಹೊಟ್ಟೆಯ  ಮೇಲ್ಬಾಗ 
       ಬಲಬದಿಯಲ್ಲಿ ಪಿತ್ತಜನಕಾಂಗ ಮತ್ತು ಪಿತ್ತ ಕೋಶ ಇರುವುದರಿಂದ  ಅವಕ್ಕೆ
       ಸಂಬಂಧಪಟ್ಟ ಕಾಯಿಲೆಗಳು ಉದಾ ಪಿತ್ತ ಕೋಶ ದ ಕಲ್ಲು
        ಸೋಂಕು ,ಲಿವರ್ (ಪಿತ್ತಜನಕಾಂಗ)ಸೋಂಕು ,ಕ್ಯಾನ್ಸರ್ ಇತ್ಯಾದಿ .

         ಮಧ್ಯ ಬಾಗದಲ್ಲಿ ಜಠರದ  ಆಮ್ಲ ಭಾದೆ .ಇದನ್ನೇ ಜನ ರು  ಗ್ಯಾಸ್ಟ್ರಿಕ್
          ಎಂದು  ಕರೆಯುವುದು ವಾಡಿಕೆ .ಆಮ್ಲದ ತೊಂದರೆ ಜಾಸ್ತಿ ಆದರೆ
           ಅಲ್ಸರ್ ಅಥವಾ ಹೊಟ್ಟೆ ಹುಣ್ಣು ಆಗುವುದು .
                       The Liver, Kidneys, and Pancreas – Kiwi Kids News
 

ಇನ್ನು ಹೊಟ್ಟೆಯ ಮೇಲ್ಭಾಗದ ಮಧ್ಯದಲ್ಲಿ ಮೇದೋಜೀರಕ ಗ್ರಂಥಿಯ 
ಸೋಂಕಿನಿಂದ  ತೀವ್ರ ತರ ನೋವು ಮತ್ತು ವಾಂತಿ
ಬರುವುದು .ಮದ್ಯಪಾನಿಗಳಲ್ಲಿ ಇದು ಸಾಮಾನ್ಯ .
ಕೆಲವೊಮ್ಮೆ ಹೃದಯಾಘಾತದ ನೋವು ಹೊಟ್ಟೆಯಲ್ಲಿ ಮಾತ್ರ ಕಾಣಿಸಿ
ಕೊಳ್ಳುವುದು ಇದೆ .
ಅದೇ ತರಹ  ಶ್ವಾಸಕೋಶದ  ನ್ಯುಮೋನಿಯಾ ಕಾಯಿಲೆಯ
ನೋವು ಮೇಲ್ ಹೊಟ್ಟೆಯಲ್ಲಿ ಕಾಣಿಸಿ ಕೊಳ್ಳುತ್ತದೆ .
ಮೂತ್ರ ಪಿಂಡ ಅಥವಾ ಕಿಡ್ನಿಗಳು ಮೇಲ್ ಹೊಟ್ಟೆಯ ಹಿಂಬಾಗದಲ್ಲಿ ಇರುತ್ತವೆ .
ಇದಕ್ಕೆ ಸರಿಯಾಗಿ ಅದಕ್ಕೆ ಸಂಬಂದ ಪಟ್ಟ ವೇದನೆ ಬೆನ್ನಿನಿಂದ ಹೊಟ್ಟೆಗೆ ಬರುವುದು .
 
 Abdominal Pain Causes and its appropriate action - Dr. Varsha
 ೨.   ಹೊಟ್ಟೆಯ ಕೆಳ ಭಾಗ .
            ಕೆಳ ಬಲಬದಿಯಲ್ಲಿ ಸಾಮಾನ್ಯವಾಗಿ ನೋವು ಬರುವುದು
            ಅಪ್ಪೆಂಡಿಸೈಟಿಸ್,ಮೂತ್ರ ನಾಳದ ಕಲ್ಲು ಕಾರಣ
            ಮಧ್ಯ ಭಾಗದಲ್ಲಿ ಮೂತ್ರಕೋಶ ಇದೆ .ಇದರ ಸೋಂಕು ಅಥವಾ ಕಲ್ಲು
            ನೋವಿಗೆ ಕಾರಣ ಇರ ಬಹುದು .ಎಡ ಕಿಬ್ಬೊಟ್ಟೆಯಲ್ಲಿ ಮೂತ್ರ ನಾಳದ
             ಕಲ್ಲು ವೇದನೆ ಗೆ  ಮೂಲ ಇರ ಬಹುದ .ಇವಲ್ಲದೆ ಹೆಂಗಸರಲ್ಲಿ ಗರ್ಭ ಕೋಶ ಮತ್ತು ಅಂಡಾಶಯಕ್ಕೆ
            ಸಂಭಂದಿಸಿದ ನೋವು ಕಿಬ್ಬೊಟ್ಟೆಯಲ್ಲಿ ಕಾಣಿಸಿ ಕೊಳ್ಳುವುದು .ಬಹಳ ಅಪಾಯಕಾರಿ ಕಾಯಿಲೆ ಒಂದು ಇದೆ .ಅದನ್ನು ಎಕ್ಟೋಪಿಕ್ ಪ್ರೆಗ್ನೆನ್ಸಿಎನ್ನುವರು .ಇಲ್ಲಿ ಶಿಶು ಭ್ರೂಣವು  ಗರ್ಭಾಶಯದ ಬದಲು ಅಂಡಾಶಯವನ್ನು ಗರ್ಭ ಕೋಶಕ್ಕೆ ಸಂಪರ್ಕಿಸುವ ಟ್ಯೂಬು (Fallopian tube) ಸ್ಥಾಪನೆಗೊಂಡು ಬೆಳೆಯುವಾಗ ಆ  ನಾಳವನ್ನು ಭೇದಿಸಿ  ಉದರ ಪ್ರವೇಶ ಮಾಡುವುದು .ಇದರಿಂದ ಹೊಟ್ಟೆ ನೋವು ಮತ್ತು ತೀವ್ರತರ  ಆಂತರಿಕ ರಕ್ತ ಸ್ರಾವ ಆಗಿ ಪರಿಸ್ಥಿತಿ ಗಂಭೀರ ಆಗುವುದು .
 
          
Managing an Ectopic Pregnancy | CHI St. Luke's Health
ಕಿಡ್ನಿಯ ನೋವು ವ್ರುಷಣಗಳಿಗೂ ವೃಷಣ ಗಳ ನೋವು
ಹೊಟ್ಟೆಯಲ್ಲಿ ಕಾಣಿಸಿ ಕೊಳ್ಳುವುದುಂಟು.ಇದನ್ನು ನಾವು ಸೂಚಕ ನೋವು
(reffered pain) ಎಂದು ಕರೆಯುತ್ತೇವೆ .ಏಕೆಂದರೆ ಎರಡಕ್ಕೂ ನರ ಮೂಲ
ಒಂದೇ ಆಗಿರುವುದು ..
ಹೊಟ್ಟೆ ಹುಳ ದ ಕಾರಣ ಹೊಟ್ಟೆ ನೋವು ಬರುವುದು ಕಡಿಮೆ .
ಕೆಲವೊಮ್ಮೆ ಕರುಳ ಸೋಂಕು ನೋವು ಉಂಟುಮಾಡ ಬಹುದು .
ಇನ್ನೊಂದು ಕಾಯಿಲೆ ಇದೆ .ಉದ್ವೇಗದ ಕರುಳ ಕಾಯಿಲೆ (irritable bowel
syndrome)ಎಂದು ಕರೆಯಲ್ಪಡುವ ಈ ರೋಗದಲ್ಲಿ ಪರೀಕ್ಷೆಗೆ ಏನೂ ಸಿಗದು
ಆದರೆ ಹೊಟ್ಟೆ ನೋವು ಮಲ ವಿಸರ್ಜನೆ ಏರು ಪೇರು ಇರುವುದು .ಇದಕ್ಕೆ ಕೂಡ
ಬೇರೆ ಚಿಕಿತ್ಸೆ ಇದೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ