ಬೆಂಬಲಿಗರು

ಶನಿವಾರ, ಮಾರ್ಚ್ 28, 2015

ದಾಸರ ನಂಬಿ

ಶಂಕರಾಚಾರ್ಯರು  ಭಜ ಗೋವಿಂದಮ್ ಭಜ ಗೋವಿಂದಮ್ ಭಜ ಗೋವಿಂದಮ್ ಮೂಢ ಮತೇ  ಎಂದರೆ ಸಾಕ್ಷಾತ್ಕಾರಕ್ಕೆ  ಕ್ಲಿಷ್ಟ   ಸಂಸ್ಕೃತ ಶಬ್ದ ಗಳ ವ್ಯಾಕರಣ ಶುದ್ಧ ಮಂತ್ರ  ಇಲ್ಲದೆ ಗೋವಿಂದನನ್ನು ಭಜಿಸಿರಿ  ಸಾಕು ಮೂಢಗಳಿರಾ ಎಂದರು .ದಾಸರು ನರ ಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣಾ ಎನಬಾರದೇ ಎಂದು ಹಾಡಿದರು. .ಅದರಿಂದ ಸ್ಪೂರ್ತಿ ಪಡೆದು ಗೋವಿಂದಾ ಕೃಷ್ಣಾ ಕಾಪಾಡೋ ಶ್ರೀಹರಿ ಎಂದು ಅಚ್ಚ ಕನ್ನಡದಲ್ಲಿ ಭಜನೆ ಮಾಡುತ್ತೀರಿ . 
ಆಗ ದಾಸರ ಪದ್ಯ ಕಿವಿಗೆ ಬೀಳುತ್ತದೆ .ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವು ಎನ್ನ ನಾಲಿಗೆಗೆ ಬರಲಿ .ಕೃಷ್ಣ ಕೃಷ್ಣಾ ಎಂದು ಶಿಷ್ಟರು ಪೇಳುವ  ಕಷ್ಟದ ಒತ್ತಕ್ಷರದ ಬದಲು ನಾರಾಯಣ ನಾರಾಯಣ ಎಂಬ ಸರಳ   ಅಷ್ಟಾಕ್ಷರಿ ಸಾಕು ಎನ್ನುವರು .

         ಅದೇ ನೀವು  ನಾರಾಯಣ ನಾಮ ಸ್ಮರಣೆಯಲ್ಲಿ ತೊಡಗಿದಿರಾ ಅವರೇ ಆ ಮಂತ್ರ ಈ ಮಂತ್ರ ಎಂದು ನೀ ಕೆಡ ಬೇಡ ಸೋಮಶೇಖರನಿಗೆ ಒಲಿದ ಸರಳ ರಾಮ ಮಂತ್ರ ಸಾಕು ರಾಮ ಮಂತ್ರವ ಜಪಿಸೋ ಎನ್ನುವರು.
ಇದೆಲ್ಲ ಕೇಳಿ ನೀವು ಗಲಿ ಬಿಲಿ ಗೊಂಡು ದಾಸರನ್ನು ಶಪಿಸಿದರೆ  ದಾಸರ ನಿಂದಿಸ 
ಬೇಡ ಎಂಬ  ದೇವರ ನಾಮ ರಡಿ. ಇನ್ನೇನು ಮಾಡುವಿರಿ ಭಕ್ತ ಮಹಾಶಯರೇ ?
   
ಆದರೆ ದೇವರ ನಾಮ ಸ್ಮರಣೆ ನಿಲ್ಲಿಸಲು ಆಗುವುದೇ ?ನೀನ್ಯಾಕೋ ನಿನ್ನ ಹಂಗು ಯಾಕೋ ನಿನ್ನ ನಾಮದ ಬಲ ಒಂದಿದ್ದರೆ ಸಾಕೋ ಎಂದೂ ಇದೆಯಲ್ಲ .ನನ್ನ ಮಡದಿ ದಿನವೂ ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ,ಪದುಮನಾಭನ (ನನ್ನ ಹೆಸರು ಪದ್ಮನಾಭ )ಪಾದ ಭಜನೆ ಸುಖವಯ್ಯಾ ಎಂದು ಭಜನೆ ಮಾಡುವಾಗ ಒಂದು ಸುಖ ಶಾಂತಿ .

ಹೆತ್ತ ಕರುಳು ಮತ್ತು ಹೊಟ್ಟೆ ಹುಳಗಳು

 

ಸಾಮಾನ್ಯವಾಗಿ  ಹೆತ್ತ ಕರುಳು ಎಂದು ತಾಯ ಉದರವನ್ನು

 

ಸೂಚಿಸುವುದು  .ಆದರೆ ಕರುಳಿನಲ್ಲಿ ಮಗು ಬೆಳೆಯುದಿಲ್ಲ .ಅದು 

 

ಬೆಳೆಯುವುದು ಗರ್ಭ ಕೋಶದಲ್ಲಿ .ಆದರೆ ಕರುಳು ಬೆಳೆಸಿ ಹೆರುವುದು

 

ಹೊಟ್ಟೆ ಹುಳಗಳನ್ನು .ಲಿಂಗ ಬೇದವಿಲ್ಲದೆ ಗಂಡಸರೂ ಹೆಂಗಸರೂ

 

ಹುಳದ ಸಂತತಿ ಬೆಳೆಸುವರು .ಕರುಳ ಕುಡಿ ಅಂದರೆ ನಿಜಾರ್ಥದಲ್ಲಿ

ಇವುಗಳು .

 

ಸಾಮಾನ್ಯವಾಗಿ ಕಂಡು ಬರುವುದು  ಮೂರು ಹುಳಗಳು .

೧. ಜಂತು  ಹುಳ

 

      ಇದು  ಉದ್ದನೆಯದು .ಸರಾಸರಿ  ೧೫ ರಿಂದ ೨೦ ಸೆ ಮೀ ಉದ್ದವಿರುವುದು .

ಕರುಳಿನಲ್ಲಿ  ಮೊಟ್ಟೆ ಉತ್ಪಾದನೆಯಾಗಿ  ವಿಸರ್ಜಿಸಲ್ಪಡುತ್ತವೆ.ಕಲುಷಿತ

 

ನೀರು ಆಹಾರ ಮೂಲಕ  ಮನುಜನ ಹೊಟ್ಟೆ ಸೇರಿ  ಬೆಳೆದು  ಸಂತಾನ

ಅಭಿವೃದ್ದಿ ಮಾಡುವುವು .

                     roundround 2

ಇವು  ಬೆಳೆಯುವ ಹಂತದಲ್ಲಿ ರಕ್ತದ ಮೂಲಕ ಶ್ವಾಸ ಕೋಶದ ಮೂಲಕ

ಸಂಚಾರ ಮಾಡುವುವು.ಇದರಿಂದ ಕೆಮ್ಮು ದಮ್ಮು ಬರ ಬಹುದು .ಕರುಳಿನ

 

ಒಳಗೆ  ಜೀರ್ಣ ಕ್ರಿಯೆಯನ್ನು ಕು೦ಟಿತ ಗೊಳಿಸುದಲ್ಲದೆ  ಕರುಳಿನ ಒಳಗೆ

ಕೆಲವೊಮ್ಮೆ ಪಿತ್ತ ನಾಳಗಳ ಒಳಗೆ ರಾಸ್ತಾ ರೋಕೋ ಮಾಡಿ ಗಂಬೀರ ಅಪಾಯ

ತರುವುದುಂಟು .

೨.  ಕೊಕ್ಕೆ ಹುಳ

 

     ಇದು ಮೂರ್ತಿ ಚಿಕ್ಕದಾದರೂ   ರಕ್ತ ಪಿಪಾಸು ಆಗಿರುವುದರಿಂದ 

 

ಅಪಾಯಕಾರಿ.ಇದರ ಮೊಟ್ಟೆಗಳು ಮಣ್ಣಿನಲ್ಲಿ ಲಾರ್ವಾ ಆಗಿ ಬರಿಗಾಲಿನಲ್ಲಿ

 

ನಡೆಯುವವರ  ಚರ್ಮದ ಮೂಲಕ  ರಕ್ತ ಸೇರುವವು .ಇವು ಕೂಡ  ಶ್ವಾಸ

 

ಕೋಶ ಸಂಚಾರ ಮಾಡಿ ಆ ಮೇಲೆ ಕರುಳಿಗೆ ತೆರಳುವವು .ಕಾಲಿನಲ್ಲಿ ಚರ್ಮ

 

ಸೇರುವ ಜಾಗದಲ್ಲಿ ನವೆ  ಉಂಟಾಗ ಬಹುದು .ಶ್ವಾಸ ಕೋಶ ಸಂಚಾರ ವೇಳೆ

ಕೆಮ್ಮು ದಮ್ಮು ಉಂಟು ಮಾಡ ಬಹುದು .ಕರುಳಿನಲ್ಲಿ ಇವು ರಕ್ತ ನಾಳಗಳನ್ನು

ಛೇದಿ ಸಿ ರಕ್ತ ಕುಡಿಯುವುವು .ಇದರಿಂದ  ರಕ್ತ ಹೀನತೆ ಉಂಟಾಗುವುದು .

 

                                             ankylostoma

 

೩.  ಇನ್ನು ಈಗ ಸಾಮಾನ್ಯವಾಗಿ ಇರುವಂತಹ  ಮಿಜಿಲೆ ಅಥವಾ ಸೂಜಿ ಹುಳ

 

(ಪಿನ್ ವರ್ಮ್).ಇದು ಬೆಳ್ಳಗೆ ತೆಳ್ಳಗೆ ಸಣ್ಣಗೆ ಇದ್ದು ದೊಡ್ಡ ಕರುಳು ಮಲ ದ್ವಾರ

 

ದಲ್ಲಿ ವಾಸ ವಾಗಿರುತ್ತದೆ .ಇದರ ಮೊಟ್ಟೆ ನೀರು ಆಹಾರ ಮೂಲಕ ನಮ್ಮ

 

ಹೊಟ್ಟೆ ಸೇರುವು ದು .ಮರಿಗಳು  ಗುದದ್ವಾರ ದ ಸುತ್ತ ಮುತ್ತ ಕಿರಿ ಕಿರಿ ಉಂಟು

 

ಮಾಡಿ ಕೆರೆತ ಉಂಟಾಗುವುದು .

 

EM1pruritis ani

ಕೈಗಳ ನೈರ್ಮಲ್ಯ  ಜಂತು ಮತ್ತು ಪಿನ್ ಹುಳ ತಡೆಗಟ್ಟ ಬಹುದಾದರೆ

 

ಕಾಲಿನಲ್ಲಿ  ಪಾದರಕ್ಷೆ  ಕೊಕ್ಕೆ ಹುಳ ತಡೆಗಟ್ಟುವುದು .

 

ಮೇಲಿನ ಎಲ್ಲಾ ಹುಳ ಗಳಿಗೂ  ಅಲ್ಬೆ೦ಡಜೊಲ್ ,ಮೆಬೆ೦ಡಜೊಲ್  ಒಳ್ಳೆಯ

 

ಔಷಧಿಗಳು .  ಮಿಜಿಲೆ ಅಥವಾ ಪಿನ್ ಹುಳ ಕ್ಕೆ  ಮಾತ್ರ  ಇದನ್ನು ಎರಡು

 

ವಾರಗಳ ಅಂತರದಲ್ಲಿ ಪುನಃ ತೆಗೆದುಕೊಳ್ಳಬೇಕು .ಅಲ್ಲದೆ ಕುಟುಂಬದವರು

 

ಎಲ್ಲರೂ  ಒಂದೇ ಸಾರಿ ಔಷಧಿ ಸೇವನೆ ಮಾಡಿದರೆ  ಒಬ್ಬರಿಂದ ಇನ್ನೊಬ್ಬರಿಗೆ

 

ಹರಡುವುದು ತಪ್ಪುವುದು .ಶಾಲೆಗಳಲ್ಲಿ ಮಕ್ಕಳಿಗೆ ಸಾಮೂಹಿಕ  ಹುಳ

 

ನಿರೋಧಕ ಔಷಧಿ ನೀಡುವುದು ಒಳ್ಳೆಯದು .

 

ಕೆಲವರು ಹೊಟ್ಟೆಯಲ್ಲಿ  ಹುಳ ಗುಳು ಗುಳು ಶಬ್ದ ಮಾಡುವುದು

ಎನ್ನುವರು .ಅದು ತಪ್ಪು .ಹುಳಗಳಿಗೆ ಮಾತು ಇಲ್ಲ .ಹೊಟ್ಟೆಯಿಂದ

ಬರುವ ಶಬ್ದ  ಗಾಳಿ ಮತ್ತು ನೀರಿನ ಚಲನೆ ಯಿಂದ ಬರುವುದು .

ಶುಕ್ರವಾರ, ಮಾರ್ಚ್ 27, 2015

ವಾಸನೆ ಮತ್ತು ನೆನಪಿನ ಸರಮಾಲೆ


           




ನಮ್ಮ ಘ್ರಾಣ ಶಕ್ತಿ ಶ್ವಾನ  ಗಳಿಗಿಂತ  ಕಮ್ಮಿ ಇದ್ದರೂ  ಸಹ ಕೆಲವೊಮ್ಮೆ  ಕೆಲವು 

ವಾಸನೆಗಳು ನೆನಪಿನ ಸರಮಾಲೆ ಯನ್ನು ಉಂಟು ಮಾಡುತ್ತವೆ .ನಮ್ಮ 

ಮೂಗಿನಿಂದ ವಾಸನೆಯ ನರಗಳು ಪರಿಮಳವನ್ನು  ಮೆದುಳಿಗೆ ರವಾನಿಸಿ ಅಲ್ಲಿ  

ಕಂಪ್ಯೂಟರ್ ಮೆಮೊರಿ ಯ ಹಾಗೆ ದಾಸ್ತಾನು ಇಡಲಾಗುವುದು .ನೀವು ಕೆಲವೊಮ್ಮೆ 

ಒಂದು ವಿಷಯವನ್ನು ಗೂಗಲ್ ನಲ್ಲಿ  ಸರ್ಚ್ ಗೆ  ಹಾಕುವಾಗ ಅದಕ್ಕೆ ಹೊಂದಿ 

ಕೊಂಡಿರುವ ಎಲ್ಲಾ ವಿಷಯಗಳು ಪುಂಖಾನುಪುಂಖವಾಗಿ ಬರುವಂತೆ ಯಾವುದೇ 

ವಾಸನೆ ಬಂದೊಡನೆ  ಅದರ ಹಿಂದಿನ ವಾತಾವರಣ ,ಕತೆ ಜ್ಞಾಪಕಕ್ಕೆ ಬರುತ್ತದೆ .

ಉದಾಹರಣೆಗೆ  ಬೇಸಿಗೆಯಲ್ಲಿ ಬೆವರು ,ಪಟ್ಟು ಸೀರೆ ,ಪೌಡರ್ ಗಳ ಮಿಶ್ರಣ  

ವಾಸನೆ ನಮಗೆ ನಮ್ಮ ಅಥವಾ ಹಿಂದಿನ ಅನೇಕ ಮದುವೆ ಸಮಾರಂಭಗಳ 

ನೆನಪು ಬರುವುದು .ಅದೇ ರೀತಿ ಬೇಸಿಗೆಯಲ್ಲಿ ಬೆಳಗಾತ ಅಡಿಗೆ ಮನೆಯಿಂದ 

ಬಾಳೆ ಎಲೆ ,ಹಲಸಿನ ಹಣ್ಣು ,ಬೆಲ್ಲ ಮತ್ತು ಹಬೆಯ ಮಿಶ್ರಣ ಕಡುಬಿನ ಜ್ಞಾಪಕ 

ದೊಡನೆ ನಾವು ಜೀವ ಮಾನ ದಲ್ಲಿ ತಿಂದ ಹಲಸಿನ ಹಣ್ಣುಗಳು ,ನಮ್ಮ ಅಜ್ಜ 

ಅಜ್ಜಿಯರು ಇನ್ನೇನೋ ನೆನಪಿಗೆ ಬರುತ್ತವೆ .

                 

ಹಳ್ಳಿಯಲ್ಲಿ ನಡೆಯುವಾಗ  ಬಿದ್ದ  ಕಾಟು ಮಾವಿನ ಹಣ್ಣಿನ ಪರಿಮಳ ಹೊತ್ತ ಗಾಳಿ 

ಕೊಯಿಲಿಗೆ ಸಿದ್ದವಾದ ಪೈರು ,ಹೋಟೆಲ್ ನಿಂದ ಬರುವ ನೀರುಳ್ಳಿ ಬಜ್ಜಿ ಇನ್ನು 

ಹಲವು ಟ್ರೇಡ್ ಮಾರ್ಕ್ ಪರಿಮಳಗಳು ಈ  ವಸ್ತುಗಳಲ್ಲದೆ ಅದಕ್ಕೆ ಜೋಡಣೆಯಾದ 

ಹಲವು  ಸಂಗತಿಗಳು ಜ್ಞಾಪಕಕ್ಕೆ ಬರುತ್ತವೆ .

            



ನಮ್ಮ ಹಳ್ಳಿಗಳ  ಜೀನಸು ಅಂಗಡಿಗಳನ್ನು ನೆನೆಸಿದರೆ  ಧಾನ್ಯ,ಸೆಣಬಿನ ಗೋಣಿ 

ಚೀಲ ,ಸೀಮೆ ಎಣ್ಣೆ ,ತಂಬಾಕು ,ಕಾಫಿ ಮತ್ತು ಚಹಾ ಹುಡಿ ಇವೆಲ್ಲವುಗಳ  ಮಿಶ್ರಣ 

ವಾಸನೆ  ನಮ್ಮನ್ನು ಬಾಲ್ಯಕ್ಕೆ ಕೊಂಡೊಯ್ಯುತ್ತದೆ .ಅಂಗಡಿಯಲ್ಲಿ  ಮನೆಯ 

ಹೆಸರು ಹೇಳಿ ಸಾಲಕ್ಕೆ ಸಾಮಗ್ರಿ ಖರೀದಿಸಿದ್ದು ,ಹಳ್ಳಿಯ ಜನರು ನಾಲ್ಕಾಣೆ ಬೆಲ್ಲ 

ಎಂಟಾಣೆ ಸಕ್ಕರೆ ,ಚಾ ಪುಡಿ ಹೀಗೆ  ಮಾಡುತಿದ್ದ  ಅತೀ ಚಿಲ್ಲರೆ ವ್ಯಾಪಾರ .ಅಂಗಡಿ 

ಯವನ ತಾಳ್ಮೆ ಎಲ್ಲ ಕಣ್ಣು ಮುಂದೆ ಬರುತ್ತವೆ .ದೀಪಾವಳಿಗೆ  ಅಂಗಡಿ ಪೂಜೆಗೆ 

ಹೊಸ ಲೆಕ್ಕ ಪ್ರಾರಂಭ ಎಂಬ ಆಹ್ವಾನ ಪತ್ರಿಕೆ ಬರುವುದು .ಅಂಗಡಿಯಲ್ಲಿ  ಉಪ್ಪು 

ಮಾತ್ರ  ಅಸ್ಪೃಶ್ಯ .ಅದಕ್ಕೆ ಹೊರಗೇ ಜಾಗ .ಕೆಲವೊಮ್ಮೆ ಶ್ವಾನ ಸಂಕುಲ 

ಅದರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದೂ ಇರ ಬಹುದು .ಅಂಗಡಿ ಯವರಿಗೂ 

ಗ್ರಾಹಕರಿಗೂ  ಭಾವನಾತ್ಮಕ  ಭಾಂಧವ್ಯ ಇತ್ತು .ನಾವು ಮಕ್ಕಳು  ಅಂಗಡಿಗೆ 

ಹೋದರೆ  ಸಣ್ಣ  ನಿಂಬೆ  ಮಿಟಾಯಿ ಕೊಟ್ಟು  ಯೋಗ ಕ್ಷೇಮ ವಿಚಾರ ಮಾಡುತ್ತಿದ್ದರು .
ಈಗ  ಮಾಲ್ ಸೂಪರ್ ಮಾರ್ಕೆಟ್ ಗಳು ಬಂದ ಮೇಲೆ ಇಂತಹ  ಸಂಬಂಧ ಗಳು 

 ಅವುಗಳ  ನೆನಪುಗಳು ಇನ್ನೆಲ್ಲಿ ?


ಸಾಹಿತ್ಯದಲ್ಲಿ  ಮಣ್ಣಿನ ವಾಸನೆ ಎಂಬ ಪದ ಇದೆ .ಮೊದಲ ಮಳೆಗೆ ಬಿದ್ದ   ನೀರು 

ಮಣ್ಣಿನೊಡನೆ ಸೇರಿ ಹಿತವಾದ ಕಂಪು ಉಂಟು ಮಾಡುತ್ತದೆ .ಅದರೊಡನೆ  

ಮೊದಲ ಮಳೆಯ ಸಮಯದಲ್ಲಿ ನಡೆದ  ಸನ್ನಿವೇಶಗಳೂ ಸಿನೆಮಾ ಪರದೆಯಲ್ಲಿ 

ಮೂಡಿದಂತೆ ಕಣ್ಮುಂದೆ ಬರುತ್ತವೆ .

ಕುವೆಂಪು ತಮ್ಮ ಕಾದಂಬರಿ ಒಂದರಲ್ಲಿ  ಮಲೆನಾಡಿನ ಮನೆಯ ಹಿತ್ತಿಲ  ಭಾಗದಲ್ಲಿ 

ಕೋಳಿ ಹಿಕ್ಕೆ , ಮನುಷ್ಯರ ಮೂತ್ರ ಮತ್ತು ಮಳೆ ನೀರಿನ ಮಿಶ್ರಿತ  ವಾಸನೆ ಬಗ್ಗೆ 

ಬರೆದಿದಿದ್ದಾರೆ .ಇದೇ ತರಹ  ಕೂವಂ ನದಿಯ ದುರ್ವಾಸನೆ ಮೂಗಿಗೆ ಬಿದ್ದ 

ಕೂಡಲೇ  ಚೆನ್ನೈ ನಲ್ಲಿ ಕಳೆದ ದಿನಗಳು ,ಜಯಲಲಿತಾ ,ರಜನಿಕಾಂತ್  ,ಮಾರ್ಗಳಿ

ಕಛೇರಿಗಳು ಎಲ್ಲಾ ಜ್ಞಾಪಕಕ್ಕೆ ಬರುತ್ತವೆ .ಫಿನಾಯಿಲ್ ,ಮೂತ್ರ  ಮತ್ತು  ಚಹಾ ದ 

ಮಿಶ್ರಣ  ರೈಲ್ವೆ ಪ್ರಯಾಣ ನೆನಪುಗಳನ್ನು  ಪುನಃ ತರುವುದು .                             
  
 ಮೂಗಿನಿಂದ ನೀರು ಸುರಿಸುತ್ತ ಸಿಗರೇಟ್  ಬೀಡಿ ಮತ್ತು ಬೆವರು  ಮಿಶ್ರಿತ  

ವಾಸನೆ ನಮಗೆ   ಸಿನೆಮಾ ಥಿಯೇಟರ್ ,ಚಲನ ಚಿತ್ರಗಳನ್ನು ನೆನಪಿಗೆ 

ಜಾರಿಸುವುದು .

ನಮ್ಮ ಮೆದುಳಿನ ವಾಸನಾ ಘ್ರಾಹಕ ಕೇಂದ್ರದಲ್ಲಿ  ಕಾಯಿಲೆ ಇದ್ದರೆ  ಇಲ್ಲದ ವಾಸನೆ 

ಬೇಡದ  ವೇಳೆ ಬರ ಬಹುದು .ಅದು ಒಂದು ತರಹದ ಅಪಸ್ಮಾರ . ಇನ್ನು 

ಕೆಲವೊಮ್ಮೆ ಮೆದುಳಿನ ಗಡ್ಡೆಗಳು   ಮೂಗಿನಿಂದ ಮೆದುಳಿನ ಕೇಂದ್ರಕ್ಕೆ ಹೋಗುವ 

ಘ್ರಾಣ ತಂತುಗಳ ಮೇಲೆ  ಒತ್ತಡ ಹೇರಿದಾಗ ವಾಸನಾ ಶಕ್ತಿ  ಕಳೆದು ಹೋಗ 

ಬಹುದು .
(ಚಿತ್ರಗಳ ಮೂಲಗಳಿಗೆ ಅಭಾರಿ )



ಬುಧವಾರ, ಮಾರ್ಚ್ 25, 2015

ಹಿರಿಯರು ಘನ ತ್ಯಾಜ್ಯ ವಸ್ತುಗಳೇ ?

ನೀನಾಸಂ  ವಾರ್ಷಿಕ  ಶಿಬಿರದಲ್ಲಿ ಖ್ಯಾತ ಚಿಂತಕರು  ಇಂದಿನ ಸಮಾಜದಲ್ಲಿ 

ಹಿರಿಯರು  ಘನ ತ್ಯಾಜ್ಯ ವಸ್ತು ಗಳಾಗಿ ಬಿಟ್ಟಿರುವರು ಎಂದು  ವಿಷಾಧ ವ್ಯಕ್ತ 

ಪಡಿಸಿದರೆಂದು ಓದಿದ ನೆನಪು .ಇಂದಿನ ಯುವಕರೇ ಮುಂದಿನ ವೃದ್ದರು 

ಆಗಿರುವುದರಿಂದ ಈ ಬಗ್ಗೆ ಗಂಭೀರ ಚಿಂತನೆ ಅವಶ್ಯ .ಅಲ್ಲದೆ  ಸುಧಾರಿತ 

ಅರೋಗ್ಯ  ಸೇವೆಯಿಂದ ಹಿರಿಯ ನಾಗರಿಕರ ಸಂಖ್ಯೆಯೂ ಏರುತ್ತಿದೆ.ಯಾಕೆ  ಹೀಗೆ 

ಆಯಿತು ?ಹಿಂದೆ ವಯಸ್ಸಿಗೆ ಗೌರವ ಇತ್ತು .ಮನೆಯಲ್ಲಿ ಯಾವ ಕಾರ್ಯ 

ನಡೆಸುವುದಿದರೂ ಹಿರಿಯರನ್ನು ಕೇಳಿ ಮುಂದುವರಿಸುವ ಕ್ರಮ ಇತ್ತು .ಹಿರಿಯರ 

ಆಶಿರ್ವಾದ ನಮ್ಮನ್ನು ಮುನ್ನಡೆಸುವುದು ಎಂಬ ನಂಬಿಕೆಯೂ ಇತ್ತು .ಮನೆ 

ವಾರ್ತೆಯಲ್ಲಿ ತಂದೆ ತಾಯಿ ಮಗ್ನರಾಗಿದ್ದಾಗ  ಮಕ್ಕಳಿಗೆ  ಅಜ್ಜ ಆಜ್ಜಿಯರ ಒತ್ತಾಸೆ 

ಆಪ್ಯಾಯಮಾನವಾಗಿತ್ತು .ಅಜ್ಜ ಅಜ್ಜಿ ಯರ  ಅನುಭವ  ಮಾತುಗಳು ,ಅವರು 

ಹೇಳುತ್ತಿದ್ದ  ಪುರಾಣ ,ಕತೆಗಳು  ಮಕ್ಕಳಿಗೆ  ಮುಖ್ಯ ರಂಜನೆ .ತುಂಬಿದ 

ಕುಟುಂಬಗಳಲ್ಲಿ  ಒಬ್ಬನಲ್ಲದಿದರೆ ಒಬ್ಬ ಹಿರಿಯರ ಯೋಗ ಕ್ಷೇಮ ನೋಡುವುದಕ್ಕೆ 

ಇರುತ್ತಿದ್ದುದಲ್ಲದೆ  ಅದರಿಂದ  ಸಂತೋಷ ಪಡುತ್ತಲಿದ್ದರು .

        ಈಗ  ಯುವ ತಾಯಿ ತಂದೆಯರಿಗೆ  ಮಕ್ಕಳ ವಿದ್ಯಾಭ್ಯಾಸ  ದೊಡ್ಡ ಹೊರೆ 

ಎನಿಸಿದೆ .ಮನೆಯಲ್ಲಿ ಅಡಿಗೆ ,ಬಟ್ಟೆ ತೊಳೆಯುವುದು ಇತ್ಯಾದಿಗಳಿಗೆ ಯಂತ್ರಗಳು   

 ಹೊರಗಡೆ  ಹೋಗಲು ವಾಹನ ,ಮೊಬೈಲ್ ಇತ್ಯಾದಿಗಳು  ಸಮಯ ಸಾಕಷ್ಟು 


ಉಳಿತಾಯ  ಆಗಿದ್ದರೂ   ಅದರ ಬಹು ಪಾಲು  ಟಿ ವಿ ಕಾರ್ಯಕ್ರಮ ಗಳು  

ಕೊಂಡರೆ , ಈಗ  ದೂರದ ಪ್ರಯಾಣ ಮತ್ತು ಪ್ರವಾಸಗಳು  ಸುಲಭ ಲಭ್ಯ 

ವಾಗಿರುವುದರಿಂದ ಅದಕ್ಕೆ  ಇಷ್ಟು ಕಾಲ ಕಳೆಯುವುದು .ಅಲ್ಲದೆ  ಬಿ ಪಿ 

ಸಕ್ಕರೆ ,ಹೃದಯ ಕಾಯಿಲೆಗಳು  ಸಣ್ಣ ಪ್ರಾಯಕ್ಕೆ ಕಾಲಿಡುವುದರಿಂದ  ಮಧ್ಯ 

ವಯಸ್ಕರ ಅರೋಗ್ಯ ವೂ ಹಿಂದಿನಂತೆ ಇಲ್ಲ .ಹಿಂದಿನಂತೆ ಸೇವಕರ ದಂಡು ಈಗ 

ಮರೆಯಾಗಿದೆ .ಮುಖ್ಯವಾಗಿ  ಮನೆಯಲ್ಲಿ  ಗಂಡ ಮತ್ತು ಹೆಂಡತಿ ಇಬ್ಬರೂ ಹೊರಗೆ 

ದುಡಿಯಲು ಹೋಗುವುದರಿಂದ  ,ಆರ್ಥಿಕವಾಗಿ ಒಬ್ಬರ ಮೇಲೆಯೇ ಅವಲಂಬನೆ 

ಇಲ್ಲದ ಕಾರಣ  ಹಿರಿಯರನ್ನು ಯಾರು ನೋಡಿ ಕೊಳ್ಳುವುದು ಎಂಬ ತರ್ಕ 

ಬರುವುದು .ಒಬ್ಬರ ಮುಲಾಜಿಗಾಗಿಯಾದರೂ  ತ್ಯಾಗ ಮಾಡುವ ಮನೋಭಾವ 

ಕಡಿಮೆ ಆಗುತ್ತಿದೆ .

  ವೈದ್ಯನಾಗಿ   ನಾಲ್ಕು ದಶಕಗಳಿಂದ  ಕೆಲಸ ಮಾಡುತ್ತಿರುವ ನನಗೆ ಈ 

ಬದಲಾವಣೆ ಗಳು  ಹೊಡೆದು ಕಾಣುತ್ತಿವೆ .ವೃದ್ಧರ ಆರೋಗ್ಯದ ಬಗ್ಗೆ ಕುಟುಂಬ 

ಕಾಳಜಿ ಕಡಿಮೆ ಆಗುತ್ತಿದೆ .ಅದೇ ವೇಳೆ ಮಕ್ಕಳ ಆರೋಗ್ಯದ ಬಗ್ಗೆ ಅತಿರೇಕ 

ಎನಿಸುವ   ಕಾತರ ,ಚಿಂತೆ  ತಂದೆ ತಾಯಂದಿರಲ್ಲಿ ಕಂಡು ಬರುತ್ತಿದೆ . ಮಗುವಿಗೆ 

ಸಣ್ಣ  ಶೀತ 

ಜ್ವರ ಬಂದರೂ ಅಸ್ಪತ್ರೆಗೆ ದೌಡಾಯಿಸುತ್ತಾರೆ. ಹಿಂದೆ ತುರ್ತು ಚಿಕಿತ್ಸಾ ವಿಭಾಗದಲ್ಲಿ

ರೋಗಿಯನ್ನು ನೋಡಿ ಹೊರ ಬರುವಾಗ  ಕುಟುಂಬದವರು ನಮಗೆ ಮುತ್ತಿಗೆ  

ಹಾಕಿ ರೋಗಿಯ ಪರಿಸ್ಥಿತಿ  ಕಾತರದಿಂದ ಕೇಳುತ್ತಿದ್ದರು .ಈಗ ಹಿರಿಯರು  

ಅಯ್ ಸಿ ಯು ನಲ್ಲಿ ಇದ್ದರೆ ಅವರ  ಸ್ಥಿತಿ  ವಿವರಿಸುವ ಸಲುವಾಗಿ ನಾವು ಮಕ್ಕಳನ್ನು 

ಹುಡುಕಿ ಕೊಂಡು ಹೋಗ ಬೇಕಿದೆ .ಒಂದು ವೇಳೆ ತೀರಾ ಗಂಬೀರ ಸ್ಥಿತಿಯಲ್ಲಿ 

ರೋಗಿ ಇದ್ದರೆ  ಮಕ್ಕಳು ತಮ್ಮ ಮಗನ ಮದುವೆ ಇತ್ಯಾದಿ ಮೊದಲೇ  ನಿಶ್ಚಯಿಸಿದ್ದ 

ಕಾರ್ಯಕ್ರಮಗಳು ಮುಂದೆ ಹೋಗುವ ಚಿಂತೆ ತಂದೆ ತಾಯಿ ಅಗಲುವಿಕೆಗಿಂತ 

ಹೆಚ್ಚು  ಕಾಡುತ್ತವೆ .ಹಿಂದೆ ನಾವು  ರೋಗಿ ಮೃತ ಪಟ್ಟರೆ  ನಮ್ಮ ಎಲ್ಲ ಪ್ರಯತ್ನಗಳ 

ಹೊರತಾಗಿಯೂ  ಉಳಿಸಲಾಗಲಿಲ್ಲ ಎಂದು ದೈನ್ಯತೆಯಿಂದ ಹೇಳುತ್ತಿದ್ದೆವು .ಈಗ 

ರೋಗಿ ಬದುಕಿ ಉಳಿದರೆ ಹಾಗೆ ಹೇಳುವ ಸ್ಥಿತಿ  ನಿರ್ಮಾಣ ಆಗಿದೆ .ಹಿರಿಯರು 

ಅಡ್ಮಿಟ್ ಆದರೆ ಹಣ್ಣು ಹಂಪಲು ಕೊಂಡು ಬರುವವರು ನಾಪತ್ತೆ .ಮತ್ತೆ ಅವರು 

ಗುಣ ಮುಖರಾದುದಕ್ಕೆ ನಾವು  ಸಿಹಿ ನಿರೀಕ್ಷಿಸುವುದಂತು  ಅಸಾಧ್ಯ .ಮಕ್ಕಳು 

ಹುಟ್ಟಿದಾಗ ಮಾತ್ರ ಸಿಹಿ ವಿತರಣೆ .

     ಒಬ್ಬಾಕೆ ಗೃಹಿಣಿ ,ಧರ್ಮ ಬೀರು.ರಾಮಾಯಣ ಶ್ರವಣಕ್ಕೆ ಯಾವಾಗಲೂ 

ಹೋಗುತಿದ್ದವಳು .ಮನೆಯಲ್ಲಿ ಅತ್ತೆಯನ್ನು ಸರಿ ನೋಡಿ ಕೊಳ್ಳುತ್ತಿರಲಿಲ್ಲ .

ಆಕೆಯನ್ನು ಕುತೂಹಲದಿಂದ ಕೇಳಿದೆ ರಾಮ ಭಕ್ತೆಯಾದ ನೀವು ಹೀಗೆ ಮಾಡ 

ಬಹುದೇ ?ಅದಕ್ಕೆ ಅವಳೆಂದಳು "ಡಾಕ್ಟ್ರೆ ನನ್ನ ಅತ್ತೆ ಕೌಸಲ್ಯ ಅಲ್ಲ ಕೈಕೇಯಿ .

ಮಂಥರೆ ," ಅದು ಬಿಡಿ ನಿಮಗೆ ಭರತನ ಹೆಂಡತಿ ಹೆಸರು ಗೊತ್ತೇ ? ನಾನೆಂದೆ 

"ತಿಳಿಯದು ". " ನೋಡಿ ರಾಮ ಸೀತೆಯೊಡನೆ ಕಾಡಿಗೆ ಹೋದ ಹದಿನಾಲ್ಕು ವರ್ಷ 

ಮೂರು ಅತ್ತೆಯರನ್ನು ನೋಡಿ  ಕೊಂಡಾಕೆ ಮಾಂಡವಿ ,ಭರತನ ಪತ್ನಿ .ಅವಳ 

ಹೆಸರೇ ಬಹಳ ಮಂದಿಗೆ ಗೊತ್ತಿಲ್ಲ !"

      ಇನ್ನು ಈ ಸ್ಥಿತಿಗೆ   ಹಿರಿಯರೂ ಸ್ವಲ್ಪ ಮಟ್ಟಿಗೆ ಕಾರಣ .ತಾವು ತಮ್ಮ 

ಹಿರಿಯರನ್ನು ನಡೆಸಿ ಕೊಂಡ ರೀತಿ ತಮ್ಮ ಮಕ್ಕಳು ತಮ್ಮನ್ನು ನೋಡಿ ಕೊಳ್ಳ 

ಬೇಕು ಎಂಬ ನಿರೀಕ್ಷೆ ದುಃಖಕ್ಕೆ ಕಾರಣ .

ಖಲೀಲ್ ಗಿಬ್ರಾನ್ ಹೇಳಿದಂತೆ " ನಿಮ್ಮ ಮಕ್ಕಳು ನಿಮ್ಮವಲ್ಲ  ,ಅವು  ಜೀವ 

ಸಲೆಯ ಮಗ ಮಗಳಂದಿರು. ಅವು ನಿಮ್ಮ ಮೂಲಕ ಬಂದವು ,ನಿಮ್ಮಿಂದ ಅಲ್ಲ.

ನಿಮ್ಮೊಡನೆ ಇದ್ದರೂ ನಿಮ್ಮದಲ್ಲ "ಎಂಬ  ತತ್ವ ಬೇಗ ಗ್ರಹಿದಸ್ಟೂ ಕ್ಷೇಮ .

 ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು .ಸಂಸಾರ ವೂ ಹಾಗೆ 

ಎಂದು  ಕೊಂಡಿದ್ದೆವು. ಆದರೆ ಈಗ ಚಿಗುರು ಮಾತ್ರ ಬೇಕು ,ಬೇರು ಯಾಕೆ  

ಎಂಬಂತಾಗಿದೆ .ಶಂಕರಾಚಾರ್ಯರು  ಭಜ ಗೋವಿಂದಂ ನಲ್ಲಿ  ಹೇಳಿರುವ 

ವಾಕ್ಯಗಳು  ನಿಜವಾಗುತ್ತಿವೆ.

  ಯಾವದ್ವಿತ್ತೋಪಾರ್ಜನಸಕ್ತಃ


ಸ್ತಾವನ್ನಿಜಪರಿವಾರೋ ರಕ್ತಃ|


ಪಶ್ಚಾಜ್ಜೀವತಿ ಜರ್ಜರದೇಹೇ


ವಾರ್ತಾಂ ಕೋsಪಿ ನ ಪೃಚ್ಛತಿ ಗೇಹೇ ||5||

ನಿನಗೆ  ಧನಾರ್ಜನೆ ಇರುವ ವರೆಗೆ ಕುಟುಂಬದ ಪ್ರೀತಿ ಅದರ 

ಶರೀರ ಜರ್ಜರವಾಗೆ ಎಲ್ಲರ  ಅನಾದರ 


ಇತ್ತೀಚಿಗೆ  ಕೆಲವರು ಮರಣಾನಂತರ ತಮ್ಮ ಮಕ್ಕಳಿಗೆ ಹೊರೆಯಗುವುದು ಬೇಡ 

ಎಂದು ತಮ್ಮ ಶರೀರವನ್ನು ಮೆಡಿಕಲ್ ಕಾಲೇಜ್ ಗೆ  ದಾನ ಪತ್ರ ಬರೆದು  ಇಡಲು  

ಆರಂಬಿಸಿರುವರು .ಇಲ್ಲಿ ಕೆಲವರು  ಈ ಅನಿವಾರ್ಯತೆಯನ್ನು  ಒಂದು 


ಸದ್ಗುಣ  ಎಂದು  ಹೇಳಿಕೊಳ್ಳುವುದೂ ಉಂಟು .(Virtue out of necessity ).

 ಕೆಲವು ತಂದೆ ತಾಯಂದಿರು  ಮನೆಯಲ್ಲಿ ತಿರಸ್ಕಾರ ತಾಳಲಾರದೆ ವೃದ್ದಾಶ್ರಮ 

ಸೇರುವುದುಂಟು  ಅಥವಾ ಸೇರಿಸಲ್ಪಡುವುದುಂಟು .ಮನೆಯಲ್ಲಿ ಸಿಗದ ಪ್ರೀತಿ ಅಲ್ಲಿ 

ದೊರಕಿದರೆ  ಅದೃಷ್ಟ .ಕಡಿಮೆ ಪಕ್ಷ ತಿರಸ್ಕಾರ   ದ್ವೇಷ ಇಲ್ಲದಿರಲಿ .

    ಬಹಳ  ಮಂದಿ ಹಿರಿಯರು ಬದುಕಿದ್ದಾಗ  ಸೇವೆ ಮಾಡಲು ಆಗದಿದ್ದರೂ ಸತ್ತ 

ಮೇಲೆ  ವಿಧಿ ವಿಧಾನಗಳನ್ನು  ಕ್ರಮ ಪ್ರಕಾರ ಮಾಡುವರು.ಶರೀರಕ್ಕೆ ದೊರಕದ 

ಪ್ರೀತಿ ಆತ್ಮಕ್ಕೆ ದೊರಕೀತೇ?

ಒಂದು  ಬೆಳ್ಳಿ ಗೆರೆ .ಇನ್ನೂ ಬಡವರಲ್ಲಿ ಮತ್ತು ಶ್ರಮ ಜೀವಿಗಳಲ್ಲಿ  ಹಿರಿಯರ ಬಗ್ಗೆ 

ಪ್ರೇಮ ಗೌರವ ಕಾಳಜಿ ಉಳಿದು ಕೊಂಡಿದೆ .

ಸಿರಿಯು  ವರವೋ  ,ಮಾರುವೇಷದ ಶಾಪವೋ ?

ಮಂಗಳವಾರ, ಮಾರ್ಚ್ 24, 2015

ಭಾಷಾ ಮಾಧ್ಯಮ ಮತ್ತು ಸಮಾಜ ಸ್ವಾಸ್ಥ್ಯ

ಪತ್ರಿಕೆಯೊಂದು ಶಾಲೆಗಳಲ್ಲಿ ಭಾಷಾ ಮಾಧ್ಯಮದ ಬಗ್ಗೆ  ಒಂದು ಗೋಷ್ಠಿ  

ಏರ್ಪಡಿಸಿತ್ತು .ಈ ಸಮಸ್ಯೆ ನನ್ನಂತಹ ಪಾಮರರಿಗೆ ಕೆಲವೊಮ್ಮೆ  ಅತೀ 

ಸರಳವಾಗಿಯೂ ಮತ್ತೆ ಕೆಲವೊಮ್ಮೆ  ಬಹಳ  ಸಂಕೀರ್ಣ ವಾಗಿಯೂ  ಕಾಣುತ್ತದೆ.

ಭಾಷೆ ಆಯ್ಕೆ ಮಕ್ಕಳ ಜನ್ಮ ಸಿದ್ಧ ಹಕ್ಕು ಎನ್ನುತ್ತದೆ ಸಂವಿಧಾನ , ಎಂದು 

ನ್ಯಾಯಾಲಯಗಳ  ವ್ಯಾಖ್ಯಾನ .ತೋರಿಕೆಗೆ ಸರಿ ಕಾಣುವುದು .


       ಇನ್ನೂ   ಒಂದು ಮುಖ  ಇದೆ .ಸಕಲ ಜೀವಿಗಳಿಗೂ ಎರಡು ಮುಖ್ಯ  

ಮೂಲ ಸಹಜ ಪ್ರವೃತ್ತಿ (ಬೇಸಿಕ್ ಇನ್ಸ್ಟಿಂಕ್ಟ್ ) ಇರುತ್ತವೆ .ಒಂದು ತಮ್ಮ ಸಂತತಿ 

ಯನ್ನು ಮುದುವರಿಸುವುದು .ಪ್ರೇಮ ,ಕಾಮ ,ಲೈಂಗಿಕ ದೌರ್ಜನ್ಯ , ಅತ್ಯಾಚಾರ 

ಇತ್ಯಾದಿ ಎಲ್ಲಾ  ಈ ಮೂಲ ಗುಣದ ಬೇರೆ ಬೇರೆ ರೂಪಗಳು .ಇದಕ್ಕೆಂದೇ  ನಮ್ಮಲ್ಲಿ 

 ಟೆಸ್ಟೋಸ್ಟೆರಾನ್ ,ಇಸ್ತ್ರೋಜನ್ , ಪಿಟ್ಯುಟರಿ ಹಾರ್ಮೋನ್ ಗಳು . ಇನ್ನೊಂದು 

ತನ್ನನ್ನು  ರಕ್ಷಣೆ  ಮಾಡಿ ಕೊಳ್ಳುವುದು .ಈ ತನ್ನ ರಕ್ಷಣೆಗೆಂದೇ  ಬೇರೆ 

 ಭಾವನಾತ್ಮಕ ಬಂಧಗಳು  .ಇದಕ್ಕೆ ಶರೀರದ  ರಕ್ಷಣಾ ವ್ಯೂಹ . ಅಡ್ರಿನಲಿನ್  

ಹಾರ್ಮೋನ್ ಇತ್ಯಾದಿಗಳ ಕೈಂಕರ್ಯ .ತಾವು ಉಳಿಯುವುದಕ್ಕೂ ತಮಗೆ 

ಪರಿಚಿತ ಮತ್ತು ಬಳಕೆಯಲ್ಲಿ  ಇರುವ  ಪರಿಸರಕ್ಕೂ  ಏನೋ ಸಂಬಂದ ಇದೆ .

ನಮ್ಮ ಶರೀರದಲ್ಲಿ  ಸ್ವಕೀಯ ಮತ್ತು ಪರಕೀಯ ವಾದುದನ್ನು  ಬೇರ್ಪಡಿಸುವ 

ಪರಿಣಾಮಕಾರಿ  ವ್ಯವಸ್ಥೆ ಇದೆ .ಇದರ ಬಗ್ಗೆ  ನನ್ನ   ಅಲರ್ಜಿ ಬಗೆಗಿನ ಹಿಂದಿನ ಬ್ಲಾ 

ಗ್ ನಲ್ಲಿ ಬರೆದಿರುವೆನು . ಹಾಗೆಯೇ ನಮ್ಮ ಮೆದುಳು ಮತ್ತು ಹಾರ್ಮೋನ್ ಗಳು 

ಪರಿಚಿತ ಮತ್ತು ಅನುಕೂಲ ಪರಿಸರ ದ  ಗುರುತು ಹಿಡಿಯುತ್ತವೆ .ಇಂತಹ 

ಜಿವಾನುಕೂಲ  ಪರಿಸರ  ನಿರ್ಮಾಣ ಮತ್ತು ಗುರುತಿಸುವಿಕೆಯಲ್ಲಿ 

ಭಾಷೆ ಮುಖ್ಯ .ತಾಯಿಯಿಂದ ಮಗುವಿಗೆ ಬಂದ ಮತ್ತು  ಸಮೀಪದ  ಪರಿಸರದ 

ಸಂವಹನ ಭಾಷೆ ಜೀವಕ್ಕೆ ಹತ್ತಿರ  ಮತ್ತು  ಭಾವನೆಗಳಿಗೆ  ಭಾರ ವಲ್ಲದ್ದು .

ಅದರ ಬಳಕೆ ಜೀವಕ್ಕೆ ಸುರಕ್ಷಿತ ಭಾವ ಕೊಡುತ್ತದೆ .ಯಾಕೆಂದರೆ  ಅದರ ಮೂಲಕ 

ಆಲೋಚನಾ ಪ್ರಕ್ರಿಯೆ ತೊಡಗುತ್ತದೆ .ಕಲಿಕೆ ನೈಸರ್ಗಿಕ ವಾಗುತ್ತದೆ . ಈ ತರಹದ 

ರಕ್ಷಣೆಯ ಮತ್ತೊಂದು  ರೂಪ ಜಾತಿ ,ಪಂಗಡ ಇತ್ಯಾದಿ .  ಭಾರತವನ್ನು 

ಪ್ರೀತಿಸುವ ಖ್ಯಾತ ಪತ್ರ ಕರ್ತ ಮತ್ತು ಲೇಖಕ  ಮಾರ್ಕ್ ಟಲಿ  ತಮ್ಮ ಒಂದು  

ಲೇಖನದಲ್ಲಿ  ಜಾತಿ ಪದ್ಧತಿ ಜನರಾಡಿಕೊಳ್ಳುವಂತೆ  ಕೆಟ್ಟದನ್ನು ಮಾತ್ರ ಅಲ್ಲದೆ 

ಸಮಾಜಕ್ಕೆ ತನ್ಮೂಲಕ ಜನರಿಗೆ ಒಂದು ಸುರಕ್ಷಿತ ಭಾವ ತಂದು ಕೊಡುತ್ತದೆ 

ಎಂದು  ಬರೆದಿರುವರು .ಈ ಎಲ್ಲಾ ವಿಚಾರಗಳನ್ನು ನೋಡಿದರೆ  ಮಾತೃ ಭಾಷೆ 

ಹೆಚ್ಚು ನೈಸರ್ಗಿಕ ,ಇದರಿಂದ ಹೆಚ್ಚು ಆರೋಗ್ಯಕರ .

ಆದರೆ ನಮ್ಮಲ್ಲಿ  ಮಗು ಜನಿಸಿದ ಕೂಡಲೇ ಈಗಿನ ತಾಯಂದಿರು  ಮನೆಯ 

ಅಫೀಷಿಯಲ್ ಭಾಷೆ ಯಾಗಿ  ಇಂಗ್ಲಿಷನ್ನು ಹೇರುತ್ತಾರೆ .ಮಗುವಿನೊಡನೆ 

ಕಂ ,ಗೋ ,ಸಿಟ್ ,ಕನ್ನಡ ನುಡಿ ಬಂದರೆ ಸಿಟ್ಟು . ಇದರಿಂದ  ಆಂಗ್ಲ ಭಾಷೆಯು 

ಮಾತೃಭಾಷೆಯಾಗಿ ಹೇರಲ್ಪಡುವುದು .ಆದರೆ ಸುತ್ತು ಮುತ್ತಲಿನ ಭಾಷೆ 

ಬೇರೆ ಇರುತ್ತದೆ .ಇದು ಅನೈಸರ್ಗಿಕ ವಾಗಿ ತೋರುವುದು .

ಇನ್ನು  ನಮ್ಮ ಸಂಸ್ಕೃತಿ ಬಗ್ಗೆ ಬಹಳ ಮಾತನಾಡುವ  ಧಾರ್ಮಿಕ ಗುರುಗಳು 

ನಾಯಕರು  ಆಂಗ್ಲ ಮಾಧ್ಯಮ ಶಾಲೆಗಳನ್ನು ಸ್ಥಾಪಿಸುವುದಲ್ಲದೆ ಅದಕ್ಕೆ 

ಧರ್ಮ ,ದೇವತೆಗಳ ಹೆಸರು ಇಡುತ್ತಾರೆ ,  ಈ ಶಾಲೆಗಳಲ್ಲಿ ಡ್ಯಾಡ್ ಮಾಮ್ 

ಮೇಮ್ ಇತ್ಯಾದಿ ಕಲಿಸುವುದಲ್ಲದೆ ಮಕ್ಕಳ ಸಮ ವಸ್ತ್ರ ವೂ ನಮ್ಮ ದೇಶದ 

ಹವೆ ಸಂಸ್ಕೃತಿ ಗೆ ಪರಕೀಯ ಆಗಿರುತ್ತವೆ  ಇದು ಅಭಾಸ ವಲ್ಲದೆ  ಒಂದು ರೀತಿಯ  


ಅಪಹಾಸ್ಯ .ಎಚ್ ನರಸಿಂಹಯ್ಯ  ,ಕುವೆಂಪು ಇದನ್ನು ಬದಲಿಸ ಯತ್ನಿಸಿದರು .

    ಇನ್ನು  ನಮ್ಮ ದಕ್ಷಿಣ ಕನ್ನಡ ಜಿಲ್ಲೆಗೆ ಅದರದೇ  ಆದ ಭಾಷಾ ಸಮಸ್ಯೆ ಇದೆ .

ಇಲ್ಲಿ ಮನೆ ಮಾತು  ಬಹಳ .ಆದರೆ ಕಲಿಕಾ ಭಾಷೆ   ಕನ್ನಡ .ಇಲ್ಲಿಯ ಸಂಸ್ಕೃತಿ 

ತೌಳವ .ಮತ್ತು  ಬಹು ಪಾಲು  ಮಲಯಾಳ ಕ್ಕೆ ಹತ್ತಿರ (ಹಬ್ಬ ,ದೇವಾಲಯ  

,ಉಡುಗೆ  ತೊಡುಗೆ  ಇತ್ಯಾದಿ ).ಆದರೂ ನಮ್ಮ ಜೀವಕ್ಕೆ  ಅಂಗ್ಲ ಕ್ಕಿಂತ  ಕನ್ನಡ 

ಹತ್ತಿರ .

  ಉದ್ಯೋಗ ಮತ್ತು ಇತರ ಕಾರಣಕ್ಕೆ ವಲಸೆ ಹೋದವರಲ್ಲಿ  ಅಸುರಕ್ಷಾ  ಭಾವನೆಗೆ 

ಮತ್ತು ಅದರಿಂದ  ಉಂಟಾಗುವ  ಕಾಯಿಲೆಗಳಿಗೆ (ಉದಾ ರಕ್ತದ ಒತ್ತಡ ,ಹೃದ್ರೋಗ

ಸಕ್ಕರೆ ಕಾಯಿಲೆ ,ಮಾನಸಿಕ ಉದ್ವೇಗ )   ಜೀವಕ್ಕೆ ಅಪರಿಚಿತ ಮತ್ತು ಪರದೇಶಿ 

 ಸಂಸ್ಕೃತಿ  ಕಾರಣ ಇರ ಬಹುದು .ಸಂಸ್ಕೃತಿಯ ಮುಖ್ಯ ವಾಹಕ ಭಾಷೆ ತಾನೆ .



  ಕೇಂದ್ರ ಸರಕಾದ ಹುದ್ದೆಯಲ್ಲಿ ಇದ್ದ ನನಗೆ ಚೆನ್ನೈ ಗೆ ವರ್ಗವಾಗಿತ್ತು .ನಾನು 

ಕೆಲಸ ಮಾಡುತ್ತಿದ್ದ  ಪೆರಮ್ಬೂರ್ ರೈಲ್ವೆ ಆಸ್ಪತ್ರೆ  ಬಲಿ ಅಯನಾವರಂ ನಲ್ಲಿ 

ಕನ್ನಡ ಸಂಘ ನಡೆಸುವ ಶಾಲೆ ಇದೆ .ನನ್ನ ಮಗ ನನ್ನು ಒಂದನೇ ತರಗತಿಗೆ  ಅಲ್ಲಿ 

ದಾಖಲಾತಿ ಮಾಡಿಸಲು ಹೋದಾಗ ಮುಖ್ಯ ಅಧ್ಯಾಪಿಕೆ (ಕನ್ನಡ ದವರೆ )

ಆಕಾಶವೇ  ಭೂಮಿಗೆ ಬಿದ್ದವರಂತೆ   ಡಾಕ್ಟರರ ಮಕ್ಕಳು ಎಲ್ಲಾ ಇಲ್ಲಿಗೆ  ಸೇರ

ಬಾರದು .ನಿಮಗೆ ಒಳ್ಳೆಯ ಕಾನ್ವೆಂಟ್ ನಾನು ತೋರಿಸುವೆನು ಎಂದು ಹೇಳಿದರು .

ಆಕೆಯ ಬಗ್ಗೆ ನನಗೇನೂ ಕೋಪ ಇಲ್ಲ ,ಲೋಕದ ರೂಡಿ ಯಂತೆ ನನ್ನ 

ಒಳ್ಳೆಯದು ಬಯಸಿ ಹೇಳಿರ ಬೇಕು .ನಾನು ಕೊನೆಗೆ ಕೇಂದ್ರೀಯ ವಿದ್ಯಾಲಯಕ್ಕೆ 

ಸೇರಿಸಿದರೂ ನಮ್ಮ ಸಂಸ್ಕೃತಿ ಗೆ ಮಗ ದೂರ ಆಗ ಬಾರದೆಂಬ ಸ್ವಾರ್ಥದಿಂದ 

ಕೆಲಸಕ್ಕೆ ರಾಜೀನಾಮೆ ಕೊಟ್ಟು ಮಂಗಳೂರಿಗೆ ಬಂದು ಅವನ ಕಲಿಕೆ 

ಮುಂದುವರಿಸುವುದರೊಡನೆ  ಕನ್ನಡ ಅಧ್ಯಯನ ವೂ ಆಗುವಂತೆ ನೋಡಿ 

ಕೊಂಡೆನು .



ಹೊಟ್ಟೆಪಾಡಿಗಾಗಿ ಹೊರದೇಶಗಳಿಗೆ ವಲಸೆ ಹೋಗಿ ನೆಲಸಿದವರಿಗೆ ಬರುವ 

ಪ್ರಶ್ನೆ ಎಷ್ಟು ತಲೆಮಾರುಗಳ ನಂತರ  ಒಂದು ನಾಡು  ತಾಯಿ ನಾಡು ಎನಿಸುತ್ತದೆ ?

ಅದೇ ಪ್ರಶ್ನೆ ಮಾತೃ ಭಾಷೆಗೂ ಅನ್ವಯವಾಗುವುದೋ ?


ಬಾಲಂಗೋಚಿ :  ಒಂದು ಸರಕಾರೀ ಕಚೇರಿಯಲ್ಲಿ  ಎಡಿಶನಲ್ ವರ್ಕ್ಸ್ ಇನ್ಸ್ಪೆಕ್ಟರ್ 

ಗೆ ಕನ್ನಡದಲ್ಲಿ "ಅಪರ ಕರ್ಮ ನಿರೀಕ್ಷಕರು " ಎಂದು ಸೂಚನಾ ಪಲಕ ಹಾಕಿದ್ದರು !




ಭಾನುವಾರ, ಮಾರ್ಚ್ 22, 2015

ಓದಿನ ಬಂಡಿ

ಓದುವ ಅಭ್ಯಾಸವೇ ಹಾಗೆ .ಹಾಡಿನ ಬಂಡಿಯಂತೆ ಒಂದು ಇನ್ನೊಂದಕ್ಕೆ  

ಇನ್ನೊಂದು ಮತ್ತೊಂದಕ್ಕೆ .ನನ್ನ ಈ ಉದಾಹರಣೆ ನೋಡಿ .

 


ಖ್ಯಾತ ಕನ್ನಡ  ಲೇಖಕ  ಕೆ ಟಿ ಗಟ್ಟಿ ಯವರ ಅರಗಿನ ಮನೆ ಕಾದಂಬರಿ ಓದಿದ್ದೆ .

ಇಥಿಯೋಪಿಯಾ ದೇಶದಲ್ಲಿ  ಉದ್ಯೋಗ ಅರಸಿ ಹೋದ ಕನ್ನಡಿಗನ ಕತೆ .ಒಂದು 

ರೀತಿಯಲ್ಲಿ ಜೀವನ ಕಥಾತ್ಮಕ ವಾದುದು.ಇಥಿಯೋಪಿಯ  ಆಫ್ರಿಕಾ ದಲ್ಲಿ  ತನ್ನದೇ 

ವಿಶಿಷ್ಟ ಚರಿತ್ರೆಯುಳ್ಳ ದೇಶ. ಅತ್ಯಧಿಕ  ಜನ ಸಾಂದ್ರತೆಯ ನಾಡು .ಅಲ್ಲಿಯ ವರ್ಣ 

ರಂಜಿತ ಚಕ್ರವರ್ತಿ.ಜನರ ವಿಚಿತ್ರ ಕಟ್ಟು ಪಾಡುಗಳು ,ಅದರೊಡನೆ ಇಲ್ಲಿಂದ  

ಉದ್ಯೋಗಕ್ಕಾಗಿ ಹೋದವರ ಕಷ್ಟ ಕಾರ್ಪಣ್ಯಗಳು ,ಇಲ್ಲಿರಲಲಾರೆ ,ನಾಡಿಗೆ ಮರಳಲೂ ಅರೆ ಎಂಬ 

ಸ್ಥಿತಿಗಳನ್ನು ಮನ ಮುಟ್ಟುವಂತೆ ಕಥಾ ರೂಪದಲ್ಲಿ ಹೇಳುವ ಕೃತಿ .

    ಇಥಿಯೋಪಿಯ ಬಗ್ಗೆ ನನ್ನ ಕುತೂಹಲ ನನ್ನನ್ನು   ವೈದ್ಯ ಸಾಹಿತಿ ಡಾ ಅಬ್ರಹಾಂ 

ವೆರ್ಗಿಸ್ ಅವರ ರೋಚಕ ಕಾದಂಬರಿ ಕಟಿಂಗ್ ಫಾರ್ ಸ್ಟೋನ್ಸ್ ಓದಲು 

ಪ್ರೇರೇಪಿಸಿತು .ಉತ್ತಮ ಕೃತಿ .
                    


    ಈ ಇಥಿಯೋಪಿಯ ಬೇಟೆ  ಶ್ರೀ ನಟವರ್ ಸಿಂಗ್ ಅವರ ಪುಸ್ತಕ  ವಾಕಿಂಗ್  ವಿಥ್ 

ಲಯನ್ಸ್ ಓದಲು ಪ್ರೇರೇಪಿಸಿತು .ಇದರಲ್ಲಿ  ಇಥಿಯೋಪಿಯ ದ ಚಕ್ರವರ್ತಿ  ಹಾಲೇ

ಸಾಲೆ  ಯವರ  ವಿಚಿತ್ರ ನಡವಳಿಕೆಗಳು ,ರಾಜ ಮತ್ತು ಪ್ರಜೆಗಳ ಅಸುರಕ್ಷಿತ  ಭಾವ 

ಇತ್ಯಾದಿಗಳನ್ನು ಚೆನ್ನಾಗಿ ಬರೆದಿದ್ದಾರೆ . ಈ ಪುಸ್ತಕದ ಮೂಲಕ  ನಟವರ್ ಸಿಂಗ್ 

ಎಂಬ  ಲೇಖಕನ ಪರಿಚಯ ಆಯಿತು (ಅಲ್ಲಿಯ ವರೆಗೆ ಅವರ ರಾಜತಾಂತ್ರಿಕ 

ಮತ್ತು ರಾಜಕೀಯ ಮುಖದ ಬಗ್ಗೆ ಮಾತ್ರ ಅರಿವಿತ್ತು ) ನಟವರ್ ಅವರ  ಯಾವದೇ 

ಕೃತಿ ಇರಲಿ  .ಅದರಲ್ಲಿ ಅವರು ಕಂಡ ಲೇಖಕರು ಓದಿದ ಪುಸ್ತಕಗಳ ಬಗ್ಗೆ 

ಮಾಹಿತಿ ಯಥೇಚ್ಛ ದೊರೆಯುತ್ತದೆ . ಮುಂದೆ ಅವರ  ವಿವಾದಾತ್ಮಕ  ಜೀವನ 

ಚರಿತ್ರೆ  ಒನ್ ಲೈಫ್ ಇಸ್ ನಾಟ್  ಇನಫ್  ನಲ್ಲಿ  ತಮ್ಮ  ರಾಜತಾಂತ್ರಿಕ 

ಜೀವನದ  ದಿನಗಳಲ್ಲಿ  ಚೀನಾ ದಲ್ಲಿ ಖ್ಯಾತ ಲೇಖಕಿ ಹಾನ್ ಸುಯಿನ್ ಅವರನ್ನು 


ಬೇಟಿಯಾಗಿ   ಅವರ ಜೊತೆ ಅಡ್ಡಾಡಿದ ಬಗ್ಗೆ  ಬರೆದಿರುವರಲ್ಲದೆ  ಈ ಲೇಖಕಿಯ 

ಜೀವನ ಚರಿತ್ರೆ   ಮೈ ಹೌಸ್ ಹ್ಯಾಸ್  ಗಾಟ್ ಟೂ ಡೋರ್ಸ್ ನಲ್ಲಿ  ತನ್ನ ಬಗ್ಗೆ 

ಬರೆದಿದ್ದಾರೆ  ಎಂಬ ಮಾಹಿತಿ ನೀಡಿದ್ದಾರೆ. 


ಇದರಿಂದ ನನಗೆ ಈ ಪುಸ್ತಕ ಕೊಂಡು ಓದುವ ಪ್ರೇರಣೆಯಾಯಿತು .ಹಾನ್ 

ಸುಯಿನ್  ಅವರದು ವರ್ಣಮಯ ಜೀವನ .ಚೈನೀಸ್ ತಂದೆ ಮತ್ತು ಬೆಲ್ಜಿಯಂ 

ತಾಯಿಗೆ ಜನಿಸಿದ ಅವರು  ಮೂರು ಭಾರಿ ವಿವಾಹವಾಗಿದ್ದು  ಅವರ ಕೊನೆ 

ಪತಿ ಭಾರತೀಯ  ವಿನ್ಸೆಂಟ್ ರಾಮಸ್ವಾಮಿ . ಹೊಂಗ್ ಕೊಂಗ್ , ಮಲಯಾ ,

ಚೀನಾ ಮತ್ತು ಅಮೇರಿಕಾ .ಭಾರತ ,ನೇಪಾಳ ,ಇಂಗ್ಲೆಂಡ್  ಮತ್ತು ಸ್ವಿಟ್ಜರ್ಲ್ಯಾಂಡ್

ದೇಶಗಳ ಚಿತ್ರಣ ಅವರ ಜೀವನ ಚರಿತ್ರೆಯಲ್ಲಿ ಇದೆ .ಅವರೊಬ್ಬ ವೈದ್ಯೆ 

ಹೊಂಗ್ ಕೊಂಗ್ ಮತ್ತು ಮಲಯಾ ಮತ್ತು ಸಿಂಗಾಪುರ್ ಗಳಲ್ಲಿ  ತಮ್ಮ 

ವೈದ್ಯಕೀಯ ವೃತ್ತಿ ಬಗ್ಗೆ ಚಿತ್ರಣ ನೀಡಿದ್ದಾರೆ , ಸಿಂಗಾಪುರ್ ನ  ಖ್ಯಾತ 

ನನ್ಯಂಗ್ ವಿಶ್ವವಿದ್ಯಾಲಯ ಸ್ಥಾಪನೆಯಲ್ಲಿ ತನ್ನ ಪಾತ್ರ ,  ಕಮ್ಯುನಿಸ್ಟ್  ಚೀನಾ ದ 

ನಾಯಕರಾದ ಚೌ ಏನ್ ಲಾಯ್ ಮತ್ತು ಮಾವೋ ,ನಮ್ಮ ನೆಹರು  ಅವರೊಡನೆ 

ಒಡನಾಟ ಇವುಗಳ ಬಗ್ಗೆ ಮಾಹಿತಿ ಇದೆ .



 ಈ ಪುಸ್ತಕದಲ್ಲಿ ಚೈನೀಸ್ ಲೇಖಕ ಲಾವೋ ಶೇ ಅವರ ಬಗ್ಗೆ  

ಬರೆದಿದ್ದಾರೆ,ಇದರಿಂದ  ಪ್ರೇರಿತನಾಗಿ  ಈ  ಲೇಖಕನ  ಕಾದಂಬರಿ 

ರಿಕ್ಷಾ ಬಾಯ್ ಕೊಂಡಿದ್ದೇನೆ .ಓದಿ ತಿಳಿಸುವೆನು .

            

(ಚಿತ್ರಗಳ ಮೂಲಗಳಿಗೆ ಅಭಾರಿ )

ಶನಿವಾರ, ಮಾರ್ಚ್ 21, 2015

ಕೊಲೆಸ್ಟರಾಲ್ ಗೆ ಯಾರಿಗೆ ಚಿಕತ್ಸೆ ಬೇಕು ?

ಕೊಲೆಸ್ಟರಾಲ್ ಗೆ  ಯಾರಿಗೆ ಚಿಕಿತ್ಸೆ ಅವಶ್ಯಕ ?

ಅಮೆರಿಕನ್ ಹಾರ್ಟ್ ಅಸೋಸಿಯೇಷನ್  ನ ಪ್ರಕಾರ  ಈ ಕೆಳಗಿನ ವರಿಗೆ  ಮಾತ್ರ 

ಚಿಕಿತ್ಸೆ ಅವಶ್ಯ 
 ೧.  ಹೃದಯಾಘಾತ, ಕೊಬ್ಬು ಜನ್ಯ ಹೃದಯ ಕಾಯಿಲೆ  ಇರುವವರು 

೨.  LDL (ಕೆಟ್ಟ) ಕೊಲೆಸ್ಟರಾಲ್ 190 mg ಗಿಂತ ಜಾಸ್ತಿ ಇದ್ದರೆ 

೩.  ೪೦ ರಿಂದ ೭೫ ವರ್ಷದ ವರೆಗಿನ  ಸಕ್ಕರೆ ಕಾಯಿಲೆ ರೋಗಿಗಳಲ್ಲಿ  LDL               ಕೊಲೆಸ್ಟರಾಲ್ 70 mg ಗಿಂತ ಜಾಸ್ತಿ ಇದ್ದರೆ 

೪. ಇನ್ನುಳಿದವರಲ್ಲಿ  ೧೦ ವರ್ಷಗಳ  ನಿರೀಕ್ಷಿತ ಕೊಬ್ಬು ಜನ್ಯ ಹೃದಯ ಕಾಯಿಲೆ 

ಪ್ರಮಾಣ 7.5% ಗಿಂತಲೂ ಅಧಿಕ ಇದ್ದರೆ,ಇದನ್ನು ಲೆಕ್ಕ ಹಾಕಲು 

ಒಂದು  ಸೂತ್ರವನ್ನೂ ಕಂಡು ಹಿಡಿದಿದ್ದಾರೆ 

Risk Assessment Tool for Estimating Your 10-year Risk of Having a Heart Attack

The risk assessment tool below uses information from the Framingham Heart Study to predict a person’s chance of having a heart attack in the next 10 years. This tool is designed for adults aged 20 and older who do not have heart disease or diabetes. To find your risk score, enter your information in the calculator below.
Age:
 years
Gender:
   
 mg/dL
 mg/dL
   
 mm/Hg
Are you currently on any medication to treat high blood pressure.
   
                            ಮೇಲಿನ  ಸೂತ್ರದಲ್ಲಿ ಕೇಳಿದ ದತ್ತಾಂಶ ಗಳನ್ನು ಕೊಟ್ಟರೆ  ಕಂಪ್ಯೂಟರ್  ೧೦ ವರ್ಷಗಳ ನಿರೀಕ್ಷಿತ  ಹೃದಯ ಕಾಯಿಲೆ  ಪ್ರಮಾಣ ಕೊಡುವುದು 



ಚಿಕಿತ್ಸೆ ರೋಗಿಗೋ ರಿಪೋರ್ಟಿಗೋ ?

ರಿಪೋರ್ಟನ್ನು ಚಿಕಿತ್ಸೆ ಮಾಡದಿರಿ ರೋಗಿಯನ್ನು ಚಿಕಿತ್ಸೆ ಮಾಡಿ .

ಇಡೀ ರೋಗಿಯನ್ನು ಪರೀಕ್ಷೆ ಮಾಡಿ ಭಾಗಶ ಪರೀಕ್ಷೆ ಸಲ್ಲ 

ಇದು ನನ್ನ ಗುರು ಡಾ ಕೆ ವಿ ತಿರುವೆಂಗಡಂ ಹೇಳುತ್ತಿದ್ದ  ಮಾತುಗಳು .

ಉದಾಹರಣೆಗೆ  ಕೆಲವು ರೋಗಿಗಳು ಕೊಲೆಸ್ಟರಾಲ್  ರಿಪೋರ್ಟ್ ತಂದು ಇದಕ್ಕೆ 

ಚಿಕಿತ್ಸೆ ಮಾಡಿ ಎನ್ನುವರು .ಕೆಲವರು ಕೊಲೆಸ್ಟರಾಲ್ ನಮ್ಮ ವೈರಿ ಎಂದು 

ತಿಳಿದಿರುವರು ,ಅದು ನಿಜವಲ್ಲ ,ಅದು ಎಲ್ಲಾ ಜೀವಕೋಶಗಳಿಗೆ ಅವಶ್ಯ .ಅದು 

ಸ್ವಲ್ಪ ಹೆಚ್ಚು ಆದ ಕೂಡಲೇ ಚಿಕಿತ್ಸೆ ಅವಶ್ಯವಿಲ್ಲ .ರೋಗಿಗೆ ಬೇರೆ ಕಾಯಿಲೆಗಳು 

(ಬಿ ಪಿ ,ಶುಗರ್ ,ಹೃದಯ ಕಾಯಿಲೆ )ಇವೆಯೋ ,ಯಾವ ಕೊಲೆಸ್ಟರಾಲ್ ಎಷ್ಟು ಇದೆ 

ಇದನ್ನಲ್ಲಾ ನೋಡ ಬೇಕು .ಅದಕ್ಕೆ ವೈಜ್ಞಾನಿಕ ಲೆಕ್ಕಾಚಾರ ಇದೆ .

ಇನ್ನೊಂದು ರಿಪೋರ್ಟ್  ಇಯೋಸಿನೋಪಿಲ್  ಕೌಂಟ್ .ಇವು ರಕ್ತದಲ್ಲಿ ಇರುವ  

ಬಿಳಿ ರಕ್ತ ಕಣಗಳ ಒಂದು ವರ್ಗಕ್ಕೆ ಸೇರಿದವುಗಳು .ಅಸ್ತಮಾ ,ಅಲರ್ಜಿ ,ಹೊಟ್ಟೆ 

ಹುಳ ಬಾಧೆ ಇತ್ಯಾದಿ ಸಂದರ್ಭಗಳಲ್ಲಿ  ಈ ಕಣಗಳು ಜಾಸ್ತಿ ಇರುತ್ತವೆ .ಆಯಾ 

ಕಾಯಿಲೆಗಳಿಗೆ ಚಿಕಿತ್ಸೆ ಯಾಗಬೇಕೇ ಹೊರತು ಇಯೋಸಿನೋಫಿಲ್  ಗೆ ಅಲ್ಲ 

ಇನ್ನು ಕೆಲವರು  ರಕ್ತದಲ್ಲಿ   ವಯ್ಡಾಲ್ ಟೆಸ್ಟ್  positive ಇದೆ ,ನನಗೆ 

ಟೈಫಾಯಿಡ್ ಇದೆ ಎಂದು ಭಯ ಪಡುವರು . ಈ ಟೆಸ್ಟ್  ಇನ್ನು ಕೆಲವು ಕಾರಣ 

ಗಳಿಂದ ಪೊಸಿಟಿವ್ ಇರ ಬಹುದು ,ಅಲ್ಲದೆ  ಒಮ್ಮೆ ಟೈಫಾಯಿಡ್ ಬಂದರೆ 

ಬಹಳ ಸಮಯದ ವರೆಗೆ  ರಕ್ತದಲ್ಲಿ ಪೊಸಿಟಿವ್ ಇರ ಬಹುದು ಹಾಗೆಂದು 

ರೋಗಿಗೆ ಪ್ರಸ್ತುತ ಟೈಫಾಯಿಡ್ ಇದೆ ಎಂದು ಅರ್ಥವಲ್ಲ .ಅದೇ ರೀತಿ  ಡೆಂಗು

ಇಲಿ ಜ್ವರದಲ್ಲಿಯೂ  ರಕ್ತದಲ್ಲಿ ಪ್ರತಿರಕ್ಷಾತ್ಮಕ  ಆಂಟಿ ಬಾಡಿ ಗಳು ಅನೇಕ  ವರ್ಷ 

ಉಳಿಯುವುದರಿಂದ  ಅವುಗಳ ಮೇಲೆ ನಿರ್ಧರಿತ ಪರೀಕ್ಷೆಗಳು  ಪೊಸಿಟಿವ್ 

ಇರುತ್ತವೆ .ಆದರಿಂದ ಈ ರಿಪೋರ್ಟ್ ಗಳನ್ನ ನೋಡಿ ರೋಗಿಗೆ ಚಿಕಿತ್ಸೆ 

ಮಾಡುವುದು ತರವಲ್ಲ .

 ಹೃದಯ ಸಂಬಂದಿ ರೋಗಗಳಿಗೆ ಇ ಸಿ ಜಿ ಮಾಡುತ್ತೇವೆ .ಕೆಲವೊಮ್ಮೆ ರೋಗಿಗೆ 

ಹೃದಯಾಘಾತ ಇದ್ದಾಗಲೂ ಇ ಸಿ ಜಿ ನಾರ್ಮಲ್ ಇರ ಬಹುದು .ಇನ್ನು ಕೆಲವು 

ಭಾರಿ  ಹೊಟ್ಟೆ ಯಲ್ಲಿ ಏನಾದರೂ ತೊಂದರೆ ಇದ್ದಾಗ  ಇ ಸಿ ಜಿ ವ್ಯತ್ಯಾಸ ಇರ 

ಬಹುದು .ಇವನ್ನು ಸಮಗ್ರವಾಗಿ ನೋಡ ಬೇಕಾಗುವುದು .

ಹಲವು ರೋಗಿಗಳು ತಮಗೆ ಗ್ಯಾಸ್ಟ್ರಿಕ್ ಪ್ರಾಬ್ಲಮ್ ಎಂದು ಬರುವರು .ಹೊಟ್ಟೆಯನ್ನು 

ಪರೀಕ್ಷಿಸಿದಾಗ  ಎಲ್ಲಾ ಸರಿ ಇರುತ್ತದೆ .ಎದೆಯಲ್ಲಿ  ಆಸ್ತಮಾ ದ ಲಕ್ಷಣ ಇರುತ್ತದೆ 

ಅಸ್ತಮಾ ರೋಗಿಗಳಲ್ಲಿ ಶ್ವಾಸಕೋಶಕ್ಕೆ ಹೋಗ ಬೇಕಾದ ಗಾಳಿ  ಹೊಟ್ಟೆಗೆ ಹೋಗಿ 

ಹೊಟ್ಟೆ ಉಬ್ಬರಿಸುವುದು .ಆಗ ನಾವು ಅಸ್ತಮಾ ಕ್ಕೆ ಚಿಕಿತ್ಸೆ ಸರಿಯಾಗಿ ಮಾಡಿದರೆ 

ಇದೂ ಶಮನ ಆಗುವುದು .

ಇನ್ನು ಬಿ ಪಿ .ನಾನು ನನ್ನ ಮೊದಲ ಬ್ಲಾಗ್ ಗಳಲ್ಲಿ ಬರೆದಂತೆ  ಮೈಗ್ರೈನ್.

ಉದ್ವೇಗದ ತಲೆನೋವು ,ಅಸ್ತಮಾ ,ಮೂತ್ರದ ಕಲ್ಲಿನ ನೋವು ಇತ್ಯಾದಿ ಗಳಿಂದ 

ಬಳಲುವವರಲ್ಲಿ ಬಿ ಪಿ ತಾತ್ಕಾಲಿಕವಾಗಿ ಏರುವುದು .ಆಗ ನಾವು ಮೂಲ ರೋಗ 

ಗಳಿಗೆ ಚಿಕಿತ್ಸೆ ಮಾಡಿದರೆ ಬಿ ಪಿ ಬಹುತೇಕ ಸಾಮಾನ್ಯ ವಾಗುವುದು .ಅಲ್ಲದೆ 

ಆಸ್ಪತ್ರೆಗೆ ಹೊಸತಾಗಿ ಬಂದವರಿಗೆ ಸ್ವಲ್ಪ ಬಿ ಪಿ ಜಾಸ್ತಿ ಇರ ಬಹುದು .ಆಗ ನಾವು 

ಸ್ವಲ್ಪ ಬಿಟ್ಟು ಪುನಃ ಬಿ ಪಿ ನೋಡುವೆವು .

ಇತ್ತೀಚಿಗೆ  ಹೊಟ್ಟೆಯ ಸ್ಕ್ಯಾನ್ ನಲ್ಲಿ  ಫ್ಯಾಟಿ ಲಿವರ್ ಎಂದು ವರದಿ ಸಾಮಾನ್ಯ .

ಇದು ಶರೀರದಲ್ಲಿ ಬೊಜ್ಜು ಜಾಸ್ತಿ ಇದ್ದವರಲ್ಲಿ ಸಾಮಾನ್ಯ .ಸಕ್ಕರೆ ಕಾಯಿಲೆ ,ಮದ್ಯ 

ಪಾನಿಗಳಲ್ಲೂ ಈ ರಿಪೋರ್ಟ್ ಬರ ಬಹುದು . ಇದಕ್ಕೆ ಆಯಾ ಕಾಯಿಲೆಗಳ 

ಚಿಕಿತ್ಸೆ ಮಾಡಬೇಕು .ಲಿವರ್ ತೊಂದರೆ ಎಂದು ಬೇಡದ ಪಥ್ಯ ,ಲಿವರ್ ಟಾನಿಕ್ 

ಇತ್ಯಾದಿಗಳ ಮೊರೆ ಹೋಗ ಬಾರದು .




ಗುರುವಾರ, ಮಾರ್ಚ್ 19, 2015

ಹಾಸಿಗೆಯಲ್ಲಿಯ ಭೂತ

ಖ್ಯಾತ ಲೇಖಕ ಸುಂದರ ರಾಮ ಸ್ವಾಮಿಯವರ  ಕೃತಿ  ಕೊಳಂದೆಗಳ್ ಪೆಣ್ಗಳ್ 

ಮತ್ತು  ಆಂಗಳ್ ಇಂಗ್ಲಿಷ್ ಅನುವಾದ ಓದುತ್ತಿದ್ದೆ . ಅದರಲ್ಲಿ  ಬಾಲು ಎಂಬ 

ಹುಡುಗನ ಸ್ವಗತ ಹೀಗಿದೆ ."ಅಪ್ಪ ಬರುವುದರೊಳಗೆ ಚಾಪೆ ಮಡಿಚಿ ಇಡಬೇಕು .

ಇಲ್ಲದಿದ್ದರೆ  ಬಿಡಿಸಿಟ್ಟ ಚಾಪೆ ಕಂಡು ಆತನ ಮುಖ ಕೆಂಪೇರಿ ಕೈಗಳು 

ಕಂಪಿಸಲಾರಂಬಿಸುತ್ತವೆ. ತೆರೆದ ಖಾಲಿ  ಹಾಸಿಗೆಯಲ್ಲಿ ದುಷ್ಟ ಶಕ್ತಿಗಳು 

ಮಲಗುವುವು .ಆ ಮೇಲೆ ಜೀವನ ಪರ್ಯಂತ ಅವುಗಳ ನಿರ್ಮೂಲನ ಅಸಾಧ್ಯ ."

 ಈ ನಂಬಿಕೆ ನಮ್ಮಲ್ಲಿಯೂ ಇತ್ತು .ಬೆಳಿಗ್ಗೆ ಎದ್ದೊಡನೆ  ಚಾಪೆ ಅಥವಾ ಹಾಸಿಗೆ 

ಮಡಿಚಿ ಇಡುವುದು  ಮೊದಲೆಲ್ಲ ರೂಡಿ. ಈಗ ಆ ಅಭ್ಯಾಸ ಹೋಗಿದೆ .

ತೆರೆದಿಟ್ಟ ಹಾಸಿಗೆಯಲ್ಲಿ  ಧೂಳು ಕ್ರಿಮಿ (Dust mite )ಎಂಬ  ಫಂಗಸ್  ಮನೆ ಮಾಡುವುದು .ಅದು  ದೊಡ್ಡ  ಅಲರ್ಜಿ ಕಾರಕ . 

                        



ರಾತ್ರಿ  ಮಲಗಿದೊಡನೆ ಮತ್ತು ಫ್ಯಾನ್ ನ ಗಾಳಿಗೆ  ಇವು ಮೇಲೆದ್ದು  ನಾವು 

ಉಸಿರಾಡುವ ಗಾಳಿಯೊಡನೆ  ಶ್ವಾಸಕೋಶಕ್ಕೆ ಹೋಗಿ  ಅಲರ್ಜಿ ಉಂಟು 

ಮಾಡುತ್ತವೆ .



ಇದರಿಂದ ಸೀನು ,ಅಸ್ತಮಾ ಇತ್ಯಾದಿ  ಉಂಟಾಗ ಬಹುದು .ಇದನ್ನೇ  ನಮ್ಮ 


ಹಿಂದಿನವರು   ದುಷ್ಟ ಶಕ್ತಿ ಅಥವಾ  ಭೂತ ಎಂದು ಕರೆದಿದ್ದಿರಬಹುದು .

( ಚಿತ್ರದ ಮೂಲಕ್ಕೆ ಅಭಾರಿ )

ನುಡಿಯೊಳಗಾಗಿ ನಡೆಯದಿದ್ದರೆ - ನಡೆಯುವುದಕ್ಕೊಂದು ತರಬೇತಿ

ಈಗ ನಡೆಯುವುದು ಮರೆತು ಹೋಗಿದೆ .ಮಗುವು ಮಗ್ಗುಲು ತಿರುಗಿ ,ಆ ಮೇಲೆ 

ಕುಳಿತು ,ಮತ್ತೆ ನಿಲ್ಲುವುದು .ನಿಂತ ಮಗು ನಡೆಯುವುದಕ್ಕೆ ಮುನ್ನ ಚಲಿಸಲು 

 ವಾಕರ್  ಎಂಬ ಸಾಧನ ಬಂದಿದೆ .ಆಮೇಲೆ ಕಾರ್ ,ಎಟ್ ಲೀಸ್ಟ್ ರಿಕ್ಷಾ  ,ಮನೆಯ 

ಹೊಸಿಲಿಂದ  ನರ್ಸರಿ , ಶಾಲೆ ,ಕಾಲೇಜ್  ಎಲ್ಲಿಯೂ ನಡೆಯಲು ಅವಕಾಶ ಇಲ್ಲ .

ಪ್ರಾಯ ಪೂರ್ತಿ ಆಗುವಾಗ ಡ್ರೈವಿಂಗ್ ಲೈಸೆನ್ಸ್ ಸಿಗುವುದು .ಆ ಮೇಲೆ 

ನಡೆಯುವುದು  ಮರ್ಯಾದೆಗೆ ಕಮ್ಮಿ ಎಂಬ ಭಾವನೆ ಬರುತ್ತದೆ .ಕೆಲವು ನಾಯಿ 

ಮರಿಗಳಿಗಾದರೂ ನಡೆಯುವ ಭಾಗ್ಯ ಕೆಲಸದವರ ಜೊತೆ ಇರುತ್ತದೆ .

                    ಈಗ  ಮೊದಲಿನಂತೆ ನಡೆಯುವುದು ಕಷ್ಟ .ಹಳ್ಳಿಗಳಲ್ಲಿ ಹಳೆಯ 

ರೂಡಿಯ ಕಾಲು ದಾರಿಗಳು ಅದೃಶ್ಯವಾಗಿವೆ .ಪೇಟೆಯಲ್ಲಿ ನಡೆಯುವ ಮುನ್ನ 

ಜೀವ ವಿಮೆ ಮಾಡಿಸಿ ಕೊಳ್ಳುವುದು ಉತ್ತಮ . ಪಾದಚಾರಿಗಳಿಗೆ  ರಸ್ತೆ ಬದಿಯಲ್ಲಿ 

ಇದ್ದ ಜಾಗವನ್ನು  ಹಿಂತೆಗೆದು ಕೊಂಡ ಹಾಗಿದೆ .ಅವರು ರಸ್ತೆ  ತೆರಿಗೆ  

ಕಟ್ಟುವುದಿಲ್ಲವಲ್ಲ .ವಾಹನ ಸವಾರರಿಗೆ  ಆಲ್ ಇಂಡಿಯಾ ಲೈಸನ್ಸ್ ಇದ್ದ ಕಾರಣ 

ಅವರು ರಸ್ತೆ ತುಂಬಾ ಅಲ್ಲದೆ ಕೆಲವೊಮ್ಮೆ ರಸ್ತೆಯ ಹೊರಗೂ ಚಲಿಸುತ್ತಾರೆ .ಇನ್ನು 

ಮುಂದೆ ನಡೆಯುವ ಲೈಸನ್ಸ್ ಉಳ್ಳವರು ಮಾತ್ರ ರಸ್ತೆಯಲ್ಲಿ ನಡೆಯ ಬಹುದು 

ಎಂದು ಕಾನೂನು ಮಾಡಬಹುದು .

ನಡೆಯ  ಪಾಠ ಗಳು ಈ ರೀತಿ ಇರಬಹುದು 

೧. ನಡೆಯುವವರು ತಮ್ಮ ಫೋಟೋ ವಿಳಾಸ ಇರುವ ಲೈಸನ್ಸ್ ಹೊಂದಿರ ಬೇಕು 

ಯಾವ ವಾಹನ ಯಾರ ಮೇಲೆ ಹೋಗುವುದೋ ಯಾರಿಗೆ ಗೊತ್ತು ?

೨  ರಸ್ತೆಯಲ್ಲಿ  ಆಟೋ ರಿಕ್ಷಾ ದ ಹಿಂದೆ ನಡೆಯವಾಗ  ಸಾಕಷ್ಟು ಅಂತರ 

ಇಟ್ಟುಕೊಳ್ಳಿ .ಅವರು ಯಾವುದೇ ಮುನ್ಸೂಚನೆ ಇಲ್ಲದೆ ನಿಲ್ಲಿಸುವರು .ಅವರು ಎಡಕ್ಕೆ 

ಇಂಡಿಕೇಟರ್ ಹಾಕಿ ಬಲಕ್ಕೆ ಹೋದರೂ ಹೋಗ ಬಹುದು .

೩. ನಿಮ್ಮ ಶ್ರವಣ ಶಕ್ತಿ  ಪರೀಕ್ಷಿಸಲು ತರಹ ತರಹದ ಹಾರ್ನ್ (ಕಹಳೆ )ಗಳು 

ಕೇಳಿಸಿದರೂ ಅಂಜದಿರಿ ,ಯಾಕೆಂದರೆ  ರಸ್ತೆಯೊಳಗೆ ಇಳಿದು ಹಾರ್ನ್ ಗೆ 

ಅಂಜಿದೊಡೆಂತಯ್ಯಾ .ನಮ್ಮಲ್ಲಿ ಕಾರಣವಿಲ್ಲದೆ ಹಾರ್ನ್ ಮಾಡುವರೇ ಜಾಸ್ತಿ 

ಇದರಿಂದ  ಜನರ ಶ್ರವಣ ಶಕ್ತಿ ಕುಂದುವುದು.

೩ ಬಹಳ  ವಾಹನ ಸಂದಣಿ ಇರುವ ರಸ್ತೆ ದಾಟುವುದು ಕಷ್ಟ ವಾದರೆ  ರಿಕ್ಷಾ 

ಹಿಡಿದು  ಹೋಗುವುದು  ಜೀವಕ್ಕೆ ಕ್ಷೇಮ 

೪ ,ನಡೆಯುವಾಗ  ದೃಷ್ಟಿ ದಾರಿ ಮೇಲೆ ಮತ್ತು  ರಸ್ತೆ ಮೇಲೆ ಇರಲಿ  .ಅಂಗಡಿ 

ಯಲ್ಲಿ  ಪ್ರದರ್ಶನಕ್ಕೆ ಇಟ್ಟ ವಸ್ತುಗಳನ್ನು   ನೋಡುತ್ತಾ ನಡೆದರೆ  ದಾರಿಯಲ್ಲಿ 

ಸ್ಲಾಬ್  ಎದ್ದು  ಹೋಗಿದ್ದು ನೀವು ಚರಂಡಿಗೆ ಬೀಳುವ ಅಪಾಯ ಇದೆ .

೫. ನನಗೆ  ನಡೆಯುವುದೆಂದರೆ ಇಷ್ಟ ,ರಸ್ತೆಯಲ್ಲಿ  ನಾನು ನಡೆಯುವಾಗ ಪರಿಚಯ 

ದವರು  ಡಾಕ್ಟ್ರೆ ನಿಮ್ಮ ಕಾರ್ ಏನಾಯಿತು ಎಂದು ಸಹಾನುಭೂತಿ ಪೂರ್ವಕ 

ಪ್ರಶ್ನೆ ಕೇಳುವರು .ಕೆಲವರು ಇವರ ಪ್ರಾಕ್ಟೀಸ್ ಚೆನ್ನಾಗಿ ನಡೆಯುತ್ತಿಲ್ಲಾ ಎಂದು 

ಕಾಣುತ್ತದೆ .ಅದಕ್ಕೆ ಇವರು ನಡೆಯುತ್ತಿದ್ದಾರೆ ಎಂದುಕೊಂಡು ಕರುಣಾಕಟಾಕ್ಷ 

 ಬೀರುವರು.ಇದಕ್ಕೆಲ್ಲಾ ನಡೆಯುವವರು  ಸಿದ್ದರಾಗಿ  ಇರಬೇಕು .

೬. ನಮ್ಮ ಮುಂದೆ ನಡೆಯುವರ ಲಿಂಗವನ್ನು ಹಿಂದಿನಿಂದ ನೋಡಿ ನಿರ್ಧರಿಸ ಬೇಡಿ .

ಕೇಶಾಲಂಕಾರ ,ಉಡುಗೆ ತೊಡುಗೆ ಯಿಂದ ಗಂಡೋ ಹೆಣ್ಣೋ ಎಂದು 

ಹೇಳುವ ಕಾಲ ಇದಲ್ಲ .
೭. ನಿಮ್ಮದೇ ತಪ್ಪಿನಿಂದ ರಸ್ತೆಯಲ್ಲಿ  ಏನಾದರೂ ಅನಾಹುತ ನಡೆದರೂ 

ಸಾರೀ ಎಂದು ಹಲ್ಲುಕಿರಿಯ ಬೇಡಿ .ಒಫ್ಫೆನ್ಸ್ ಇಸ್ ದಿ ಬೆಸ್ಟ್ ಡಿಫೆನ್ಸ್ 

ಆಕ್ರಮಣ ಕಾರೀ  ಪ್ರತಿಕ್ರಿಯೆ  ಉತ್ತಮ  ರಕ್ಷಣಾತ್ಮಕ ಕ್ರಿಯೆ .ಇಲ್ಲಿ 

ಸುಸಂಸ್ಕೃತತೆ ಇತ್ಯಾದಿ ಗಳನ್ನ ಮರೆಯಬೇಕು .

ಮಿತ್ರರೇ ನೀವು ನಡೆಯುವವರಾದರೆ ಇದಕ್ಕೆ ನಿಮ್ಮ ಸಲಹೆಗಳನ್ನು 

ಸೇರಿಸಿರಿ .



ಬುಧವಾರ, ಮಾರ್ಚ್ 18, 2015

ಪೋಸ್ಟಲ್ ರನ್ನರ್ ಮರೆಯುವ ಮುನ್ನ

ಅಂಚೆಯ ಅಣ್ಣನು ಕೊರಿಯರ್ ಮತ್ತು ಇಂಟರ್ನೆಟ್ ಗಳ  ಅಬ್ಬರದಲ್ಲಿ 

ಮರೆಯಾಗುತ್ತಿದ್ದಾನೆ  .ದೂರದ ಊರಿನಲ್ಲಿರುವ ಮಗನ ಪತ್ರವನ್ನು 

ಪ್ರತೀಕ್ಷಿಸುತ್ತಿರುವ  ತಂದೆ ತಾಯಂದಿರು ,ಹೊಸತಾಗಿ ಮದುವೆಯಾಗಿ  ಇನ್ನೂ 

ತಾಯಿ ಮನೆಯಲ್ಲಿ ಇರುವ ಪತ್ನಿಯಿಂದ ಕಾಗದ ಕಾಯುತ್ತಿರುವ ಹುಡುಗ ,

ತಂದೆ ಕಳುಹಿಸುವ ಮನಿ ಆರ್ಡರ್ ಗೆ ಕಾಯುತ್ತಿರುವ ವಿದ್ಯಾರ್ಥಿ ಎಲ್ಲರಿಗೂ 

ಅಂಚೆಯ ಅಣ್ಣನ ಪ್ರತೀಕ್ಷೆ .ಬಂದ ಪತ್ರಕ್ಕನುಸಾರ ಅವನಿಗೆ ಪ್ರೀತಿಯ ಉಡುಗೊರೆ.

ಇವುಗಳೆಲ್ಲದುರ ನಡುವೆ ಯಾವ ಗುರುತಿಸುವಿಕೆಯೂ ಇಲ್ಲದೆ ಮರೆಯಾದವನು 

ಪೋಸ್ಟಲ್ ರನ್ನರ್ .

                                       
ಅಂಚೆ ಕಚೇರಿಯಿಂದ  

ಅಂಚೆ ಕಚೇರಿಗೆ ಪತ್ರ ಸಾಗಿಸುತ್ತಿದ್ದ  ಇವರು ಇಂದು  ಇಲ್ಲ 

ಕೈಯ್ಯಲ್ಲಿ   ಒಂದು   ಭರ್ಜಿ (ಮೊನಚು ಆಯುಧ ),ಅದಕ್ಕೆ ತಾಗಿಕೊಂಡು 

ಕಾಲ ಗೆಜ್ಜೆಯಂತಹ ಸಣ್ಣ ಘಂಟಾ ಮಣಿಗಳು .ಇವರ ಹುದ್ದೆಯೇ ಹೇಳುವಂತೆ 

ಇವರು ರನ್ನರ್ .ತಲೆಯಲ್ಲಿ  ಅಂಚೆ ಚೀಲ .ಕೈಯ್ಯಲ್ಲಿ ಘಂಟಾ ಆಯುಧ .

ಇವರು ಓಡುತ್ತಾ ನಡೆಯುವರೋ ನಡೆಯುತ್ತಾ ಓಡುವರೋ  ಹೇಳುವುದು 

ಕಷ್ಟ .ಬಹುಶಃ ದಾರಿಯಲ್ಲಿರುವ ಪ್ರಾಣಿಗಳ ಗಳನ್ನು ಬೆದರಿಸಲು 

ಕೈಯ್ಯಲ್ಲಿ  ಆಯುಧ ಇದ್ದಿರ ಬೇಕು .

ನಮ್ಮ ಮನೆಯ ಮೇಲಿನಿಂದ ಇವರು ಹೋಗುತ್ತಿದ್ದರು .ನೀರಡಿಕೆ ತಣಿಸಲು 

ಒಮ್ಮೊಮ್ಮೆ  ಮನೆಗೆ ಬಂದು ಬೆಲ್ಲ ನೀರು ಕುಡಿದು ದಣಿವಾರಿಸಿ ಕೊಳ್ಳುವರು .

ರಜಾ ದಿನಗಳಲ್ಲಿ  ಪೇಟೆಯಿಂದ ದಿನ ಪತ್ರಿಕೆ  ಮನೆಗೆ ತಂದು ಕೊಡುತ್ತಿದ್ದರು .

ನಾನು ಅಥವಾ ತಮ್ಮ  ಕೈಯ್ಯಲ್ಲಿ  ಮಜ್ಜಿಗೆ ನೀರು ಹಿಡಿದುಕೊಂಡು ಮನೆಯ 

ಹಿಂದಿನ ಗುಡ್ಡದ ಮೇಲಿನ  ದಾರಿಯಲ್ಲಿ ಇವರಿಗಾಗಿ  ಕಾದು ನಿಲ್ಲುತ್ತಿದ್ದೆವು .

ಪೇಪರ್  ಮಾತ್ರ ನಮಗೆ  ಹೊರಜಗತ್ತಿಗೆ ಕಿಂಡಿಯಾಗಿದ್ದ ಕಾಲ .

ಈ ರನ್ನರ್ ಹುದ್ದೆ ಈಗ ಇಲ್ಲದಿದ್ದರೂ  ಅವರ ನೆನೆಪು ,ಕೈ ಗೆಜ್ಜೆ ನಾದ 

ಇನ್ನೂ ಮನದಲ್ಲಿ ಹಸಿರಾಗಿದೆ .

ಸೋಮವಾರ, ಮಾರ್ಚ್ 16, 2015

ಡಯಸ್ಪೋರ ಮತ್ತು ಗಿರ್ಮಿಟಿಯ ,ವಲಸೆ ಸಂಸ್ಕೃತಿ



ಇರುವದೆಲ್ಲವ ಬಿಟ್ಟು ಇರದಿರುವುದಕ್ಕೆ ತುಡಿಯುವುದೇ ಜೀವನ- ಕವಿ ಅಡಿಗ

ಹಾಗಿದ್ದರೆ  ಇಲ್ಲದೆಯೇ ಇರುವ ಮಂದಿ ಹೊಸ ಜೀವನ ವ  ಹಾರೈಸಿ ಬರಿಗೈಲಿ

ದೇಶಾಂತರ  ಹೋಗಿ  ಅಲ್ಲಿಯೇ  ನೆಲೆಸಿದರೂ  ಮೂಲ ಸಂಸ್ಕೃತಿಗೆ ಆತು

ಕೊಂಡಿರುವ  .ವಿಚಾರ ನನಗೆ ತುಂಬಾ ಕುತೂಹಲ ಉಂಟು ಮಾಡುತ್ತದೆ .

ವರ್ಷಗಳ ಹಿಂದೆ  ಭಾರತ ದೇಶದಿಂದ ಮುಖ್ಯವಾಗಿ  ಈಗಿನ ಯು ಪಿ ,ಬಿಹಾರ

ಗಳಿಂದ  ದೂರದ ಸುರಿನಾಮ್ ,ಕ್ಯಾರಿಬ್ಬಿಯನ್ ದ್ವೀಪಗಳು,ಮಾರಿಷಿಯಸ್

ಮತ್ತು ಫಿಜಿ ದೇಶಗಳ  ಕಬ್ಬು ಕೃಷಿ ಕಾರ್ಮಿಕರಾಗಿ  ಹೋಗಿ ಅಲ್ಲಿ ನೆಲೆಸಿರುವವರ

ಕತೆ  ರೋಚಕ .
                                                    Suriname    sriname book  ಕೆಲವು ದಿನಗಳ ಹಿಂದೆ ಪತ್ರಿಕೆ

ಒಂದರಲ್ಲಿ  ಮೊದಲು ಡಚ್ಚರ ಕಾಲೋನಿ ಆಗಿದ್ದ
ಸುರಿನಾಮ ಗೆ    ಸ್ವಾತಂತ್ರ್ಯ   ಕೊಡುವಾಗ  ಅಲ್ಲಿದ್ದ ಭಾರತೀಯ
ಮೂಲದವರಿಗೆ    ಹಾಲೆಂಡ್ ದೇಶದ ಪೌರರಾಗುವ ಆಯ್ಕೆ  ಕೊಟ್ಟ
ರೆಂದೂ ,ಆ ರೀತಿ ಅಲ್ಲಿಗೆ ತೆರಳಿದವರು ಹುಟ್ಟು ಹಾಕಿದ್ದ್ದ ಬೇಂಕು
ಮುಂದೆ    ಪ್ರತಿಷ್ಠಿತ  ಎ ಬಿ ಏನ್ (ಅಮ್ರೋ)ಆಗಿ ಭಾರತದಲ್ಲಿಯೂ
ಶಾಖೆಗಳನ್ನು ತೆರೆದ ವಿಚಾರ ಪ್ರಕಟವಾಗಿತ್ತು .              

ಇದೇ ಬ್ಲಾಗ್ ನಲ್ಲಿ ಹಿಂದೆ ಭಾರತ ಮೂಲದ  ಕೆನ್ನೆತ್ ಲಲ್ಲಾ ಅವರ ಬಗ್ಗೆ

ಬರೆದಿದ್ದೆ .
                                                       trinidadcaribbeanಈ ದೇಶಗಳಿಗೆ ತೆರಳಿದ ಜನರು ಬರಿ ಗೈಲಿ
ಹೋಗಿದ್ದರೂ ಅವರ ಜತೆಯೇ ನಮ್ಮ ಸಂಸ್ಕೃತಿಯೂ  ತೆರಳಿದುದು ರೋಚಕ

ರಾಮಾಯಣ ,ಮಹಾಭಾರತ ,ಪೂಜೆ ಪುರಸ್ಕಾರ ಗಳೂ ಶತಮಾನ ಗಳಿಂದ 
ಅಲ್ಲಿ ನೆಲೆ ನಿಂತು ಭಾರತೀಯತೆ ಕಾಪಾಡುವ  ಕಾರ್ಯ ಮಾಡಿವೆ .ಆಗಿನ್ನೂ

ರೇಡಿಯೋ ,ಕ್ಯಾಸೆಟ್ಟು ಬಿಡಿ ಪುಸ್ತಕ ಕೂಡಾ ಇರಲಿಲ್ಲ.ಬಾಯ್ದೆರೆ ಯಾಗಿ

ದೇಶವಾಸಿಗಳ ಎದೆಯಿಂದ ಎದೆಗೆ ಹರಿಯಿಯುತು ಸಂಸ್ಕೃತಿ .

ಇತ್ತೀಚೆಗೆ ಬ್ರಿಜ್ ವಿ ಲಾಲ್ ಅವರು ಬರೆದ  ಪುಸ್ತಕ ‘ಆನ್ ದ ಅದರ್ ಸೈಡ್ ಆಫ್ 
ಮಿಡ್ ನೈಟ್ ಎ ಫಿಜಿಯನ್ ಜರ್ನಿ “ಓದಿದೆ .ಅವರು  ಫಿಜಿಯ
ಭಾರತೀಯರ  ಮೂರನೇ ತಲೆಮಾರಿನವರು .ತಮ್ಮ ಮೂಲವನ್ನು ಹುಡುಕಿ
ಭಾರತಕ್ಕೆ ಬಂದ ಕಥೆ ,ತಮ್ಮ ಅಜ್ಜ ತಂದೆ ಭಾರತೀಯರಾಗಿ ಬಾಳಿದ ಪರಿ
ರೋಚಕವಾಗಿ ಬರೆದಿದ್ದಾರೆ .
figi bookFiji
ಆಗೆಲ್ಲಾ  ಈ ರೀತಿ ವಲಸೆ ಹೋಗುತ್ತಿದ್ದ ಕೂಲಿ ಕಾರ್ಮಿಕರನ್ನು ಗಿರ್ಮಿಟಿಯಾ
ಎಂದು ಕರೆಯುತ್ತಿದ್ದರು .ಇದು ಅಗ್ರಿಮೆಂಟ್ ಎಂಬ ಶಬ್ದದ ಅಪಭ್ರಂಶ  ಎಂದು

ಹೇಳುತ್ತಾರೆ .ಬ್ರಿಜ್ ವಿ ಲಾಲ್ ಅವರು ಒಂದು ಪ್ರಶ್ನೆ ಎತ್ತುತ್ತಾರೆ .ಒಂದು
ದೇಶದಲ್ಲಿ ಎಷ್ಟು ತಲೆಮಾರು ಕಳೆದ ಮೇಲೆ ಅದನ್ನು ತನ್ನ ತಾಯಿ ನಾಡು
ಎಂದು ಕರೆಯ ಬಹುದು ?
ಮೇಲೆ  ಹೇಳಿದ ದೇಶಗಳಲ್ಲಿ  ಕ್ಯಾರಿಬ್ಯಾನ್ ದ್ವೀಪ ,ಸುರಿನಾಮ್ ಗಳಲ್ಲಿ  ಕ್ರಮೇಣ  ಅಲ್ಲಿಯ ಪೌರತ್ವ 

 ನಮ್ಮವರಿಗೆ ಲಭಿಸಿದ್ದರೂ  ಫಿಜಿಯಲ್ಲಿ  ಸ್ವಲ್ಪ ಅತಂತ್ರ  ಸ್ಥಿತಿ  ಇದೆ .ಕೊಲ್ಲಿ ದೇಶಗಳಲ್ಲಿ ಅಂತೂ  ಎಷ್ಟು 

ಪರಿಣಿತ ರಾದರೂ ಎಷ್ಟು ವರ್ಷ ಅಲ್ಲಿ  ಗೆಯ್ದು ತಮ್ಮ ಜೀವನ ತೆಯ್ದರೂ  ನಿಮಗೆ ಪೌರತ್ವ ನೀಡರು.

ಮೇಲಿನ  ಚಿತ್ರಗಳ ಮೂಲಗಳಿಗೆ ನಾನು ಆಭಾರಿಯಾಗಿದ್ದೇನೆ

ಭಾನುವಾರ, ಮಾರ್ಚ್ 15, 2015

ಮುಖ್ಯ ನ್ಯಾಯಾಧೀಶರ ಕಥೆ

ನನಗೆ  ನ್ಯಾಯಾಂಗದ ಮೇಲೆ ವಿಶೇಷ ಅಕ್ಕರೆ ಮತ್ತು ಕುತೂಹಲ .ನಮ್ಮ ದೇಶದಲ್ಲಿ ಪ್ರಜಾತಂತ್ರ ಗಟ್ಟಿಯಾಗಿ ಬೇರೂರಲು

ಕ್ರಿಯಾಶೀಲ ನ್ಯಾಯಾಂಗ ಮುಖ್ಯ ಕಾರಣ ಎಂದು ನಂಬಿದವರಲ್ಲಿ ನಾನೂ ಒಬ್ಬನು .ನನ್ನ ಈ ಬ್ಲಾಗಿನ ಹಿಂದಿನ

ಬರಹ  ನನ್ನ ಅಜ್ಜ ಮತ್ತು ಪುತ್ತೂರು ಪೇಟೆ ಯಲ್ಲಿ ನನಗೆ ಅಜ್ಜ ಹೇಗೆ ಕೋರ್ಟ್ ಕಛೇರಿಗಳ ಬಗ್ಗೆ ಚಿಕ್ಕಂದಿನಲ್ಲೇ  ಆಸಕ್ತಿ

ಮೂಡಿಸಿದರು ಎಂದು ಬರೆದಿದ್ದೇನೆ ದಿನವಿಡೀ ನ್ಯಾಯವಾದಿಗಳ ಭಾಷಣ ಕೇಳಿ ಕುಳಿತಿರುವ ನ್ಯಾಯಾಧೀಶರು ನ್ಯಾಯಾಂಗದ

ಸ್ವಾತಂತ್ರ್ಯ ಮತ್ತು ಗೌರವ ಕಾಪಾಡುವ  ಛಲದಲ್ಲಿ ತಮ್ಮ ವೈಯುಕ್ತಿಕ ಸ್ವಾತಂತ್ರ್ಯ ಬಹಳಷ್ಟು ತ್ಯಾಗ ಮಾಡ ಬೇಕಾಗುತ್ತದೆ .

ಪ್ರಾತಃ ಸ್ಮರಣೀಯ ನ್ಯಾಯ ಮೂರ್ತಿ ಜಸ್ಟಿಸ್ ಎಚ್ ಅರ ಖನ್ನಾ ತಮ್ಮ ಜೀವನ ಚರಿತ್ರೆ ನೀದರ್ ರೋಸಸ್ ನೋರ್

ತೋರ್ನ್ಸ್ ಯಲ್ಲಿ  ಈ ರೀತಿ ಬರೆಯುತ್ತಾರೆ. "ಅಗಣಿತ ಅಧಿಕಾರ ವುಳ್ಳ ನ್ಯಾಯಾಧೀಶರ ಹುದ್ದೆ  ಅದೇ ಸಮಯಕ್ಕೆ

ಭಯ ಉಂಟು ಮಾಡುವ  ತೆರದಲ್ಲಿ ಯಾವುದೇ ರಕ್ಷಣೆ ರಹಿತ ವಾಗಿರುತ್ತದೆ."

                                                     

ಈಗಸ್ಟೆ ಓರ್ವ ನಿವೃತ್ತ ಮುಖ್ಯ  ನ್ಯಾಯಾಧೀಶರ ಜೀವನ ಚರಿತ್ರೆ  ಓದಿ ಮುಗಿದ್ದೇನೆ .ಜಸ್ಟಿಸ್  ಯು ಎಲ್ ಭಟ್ 

ಅವರ  ಸ್ಟೋರಿ ಆಫ್ ಚೀಫ್ ಜಸ್ಟಿಸ್ .ಆಂಧ್ರದ ವಿಶಾಕ ಪಟ್ಟಣದಲ್ಲಿ ಜನಿಸಿ (ಇವರ ತಂದೆ ಅಲ್ಲಿ ಮಹಾರಾಜ 
ಕಾಲೇಜ್ ನಲ್ಲಿ  ಪ್ರಾಂಶುಪಾಲರಾಗಿದ್ದರು )ಮಂಗಳೂರು ,ಮದ್ರಾಸ್ ಗಳಲ್ಲಿ ಓದಿ  ಕಾಸರಗೋಡ್ ನ ಖ್ಯಾತ 

ವಕೀಲ ತಮ್ಮ ಭಾವ  ಬಿ ಎಸ ಕಕ್ಕಿಲ್ಲಾಯ ರ  ಬಳಿ ವಕೀಲ ವೃತ್ತಿ ಆರಂಬಿಸಿ ಸ್ವಲ್ಪ ಕಾಲ ಕಮ್ಯುನಿಸ್ಟ್ ಪಕ್ಷದ ಸಕ್ರಿಯ 

ಕಾರ್ಯಕರ್ತ ನಾಗಿಯೂ ಇದ್ದು ಮುಂದೆ ತಮ್ಮ ಪ್ರತಿಭೆಯ ಬಲದಿಂದ   ಜಿಲ್ಲಾ ನ್ಯಾಯಾಧೀಶ ರಾಗಿ ನಿಯುಕ್ತಿಗೊಂಡು

ಕೇರಳ ರಾಜ್ಯ ಹೈ ಕೋರ್ಟ್ ನ್ಯಾಯಾಧೀಶ ರಾಗುತ್ತಾರೆ .ಅಲ್ಲಿಂದ ಗೌಹಾತಿ  ಹೈ ಕೋರ್ಟ್ ನ ಮುಖ್ಯ ನ್ಯಾಯಾಧೀಶ 

ಮತ್ತೆ  ಮಧ್ಯ ಪ್ರದೇಶ ಹೈ ಕೋರ್ಟ್ ನ ಮುಖ್ಯ ನ್ಯಾಯಾಧೀಶ ಹುದ್ದೆ. ಇವರು ಈ ಮಧ್ಯ ಪ್ರದೇಶ ಕ್ಕೆ ಬರುವಾಗ 

ಅಲ್ಲಿನ  ಹೈ ಕೋರ್ಟ್ ಗುಂಪು ರಾಜಕೀಯದಿಂದ ಬಹಳ ನಿಕೃಷ್ಟ ಅವಸ್ಥೆಯಲ್ಲಿ ಇತ್ತು .ಅದನ್ನು ಸರಿಪದಿಸಲೆಂದೇ 

ಅವರನ್ನು ಅಲ್ಲಿ  ಹಾಕಲಾಯಿತು.ತಮ್ಮ  ಪರಿಶ್ರಮ ಮತ್ತು ಕಾರ್ಯ ಕ್ಷಮತೆಯಿಂದ  ಮಧ್ಯ ಪ್ರದೇಶದ ನ್ಯಾಯಾಂಗ 

ವ್ಯವಸ್ತೆಯಲ್ಲಿ  ಕ್ರಾಂತಿಕಾರಿ ಬದಲಾವಣೆ ತರುವುದರಲ್ಲಿ ಅವರು ಯಶಸ್ವಿ ಯಾಗುತ್ತಾರೆ. ಇದಕ್ಕೆ ಮೊದಲು 

ಗೌಹಾತಿಯಿಂದ  ಕರ್ನಾಟಕ ,ಆಂಧ್ರ , ಅಥವಾ ತಮಿಳ್ ನಾಡಿಗೆ ಬರುವ ಅವರ ಆಸೆ ನೆರವೇರುವುದಿಲ್ಲ .

ಯಾಕೆಂದರೆ  ಇಂತಹ ನಿರ್ಭೀತ  ನ್ಯಾಯ ಮೂರ್ತಿ  ತಮ್ಮ  ರಾಜ್ಯದ  ಹೈ ಕೋರ್ಟ್ ಗೆ ಬರುವುದು 

ಇಲ್ಲಿಯ   ಪ್ರಭಾವ ಶಾಲೀ  ರಾಜಕೀಯ ನಾಯಕರಿಗೆ  ಬೇಕಿರಲಿಲ್ಲ . 

ಮುಂದೆ  ಅವರಿಗೆ  ಬರಬೇಕಿದ್ದ  ಸುಪ್ರೀಂ ಕೋರ್ಟ್ ನ ನ್ಯಾಯಾಧೀಶ ಹುದ್ದೆಯೂ ತಪ್ಪಿತು .ಅದರ ಬಗ್ಗೆ  ಈ ಪುಸ್ತಕಕ್ಕೆ 

ಮುನ್ನುಡಿ ಬರೆದ ಜಸ್ಟಿಸ್ ಕೃಷ್ಣ ಅಯ್ಯರ್ ಅವರ  ಶಬ್ದಗಳಲ್ಲಿ ಓದಿ."Bhat is bold ,brilliant and original.He is known 

for integrity.His views on public issues and institutions are not conditioned by pressures from above

or cravings from below.he is independent of expediencies,oppotunisms and authoritarianisms.

this i thought was a superlative qualification of a judge to function without fear or favour .But where 

lesser judges without vision are in authority over judges ,this rare virtue proves to be a 

drawback.Bhat,a good ,senior and great judge acted unafraid of authoritarian whims and wayward 

destinies .Bhat became a martyr."

ಈ  ಹೊತ್ತಗೆ ಓದುವಾಗ  ಇನ್ನೊಬ್ಬ ನಿರ್ಭೀತ ನ್ಯಾಯಮೂರ್ತಿ ಜಸ್ಟಿಸ್ ಎಸ ಎಸ್ ಸೋಧಿ  ಅವರ ಆತ್ಮ ಕತೆ 

ದಿ  ಅದರ್ ಸೈಡ್ ಆಫ್ ಜಸ್ಟಿಸ್  ಜ್ಞಾಪಕಕ್ಕೆ ಬರುತ್ತದೆ .ಅಶಿಸ್ತಿನ ಕೊಂಪೆಯಾಗಿದ್ದ ದೇಶದ ದೊಡ್ಡ  ನ್ಯಾಯ ಪಾಲಿಕೆ 

ಅಲ್ಲಹಾಬಾದ್  ಹೈ ಕೋರ್ಟ್ ನ್ನು ತಮ್ಮ ಸ್ವಂತ ಪರಿಶ್ರಮ ದಿಂದ  ಒಂದು ದಾರಿಗೆ ತಂದ ಶ್ರೇಯ ಇವರದು .ಅದಕ್ಕೆ 

ಪ್ರತಿ ಫಲ ಸುಪ್ರೀಂಕೋರ್ಟ್ ನ್ಯಾಯಾಧೀಶ ಹುದ್ದೆ ನಿರಾಕರಣೆ !ಅದಕ್ಕೆ ಅವರು ಇನ್ನೊಬ್ಬ ಶ್ರೇಷ್ಟ ನ್ಯಾಯಾಧೀಶರ 

ಈ ವಾಕ್ಯ ಪುನರುಚ್ಚರಿಸುತ್ತಾರೆ ."It is honourable to be a victim of such politics than to be a beneficiary"

( ಅಂತಹ ರಾಜಕಾರಣದ ಫಲಾನುಭವಿ ಆಗುವುದಕ್ಕಿಂತ  ಅದರ ಬಲಿಪಶುವಾಗುವುದು ಲೇಸು ")



ಬಾಲಂಗೋಚಿ:  ಮೂಲತಃ  ಕಮ್ಯೂನಿಸ್ಟ್  ಆಗಿದ್ದ  ಜಸ್ಟಿಸ್  ಭಟ್ ಈಗಿನ  ಕಮ್ಯುನಿಸ್ಟ್ ಅತಿರೇಕ  ಸ್ವತಃ 

ಅನುಭವಿತ್ತಾರೆ .ಕೇರಳದ ತಲೆ ಹೊರೆ ಕಾರ್ಮಿಕರು ಇವರು ರಾಜ್ಯದೊಳಗೆ ವರ್ಗಾವಣೆ ಗೊಳ್ಳುವ ಸಂಧರ್ಭದಲ್ಲಿ 

ಗೃಹ ಸಾಧನ ಸಾಗಾಟದ ಸಮಯದಲ್ಲಿ  ತಮ್ಮ   ಅತಾರ್ಕಿಕ ಬೇಡಿಕೆಗಳನ್ನು ಇಟ್ಟು ಬೆದರಿಸುತ್ತಿದ್ದ  ವಿಷಯ ಬರೆದಿರುವರು .

ಈ ತರಹ ಅರ್ಹರಿಗೆ ಉನ್ನತ ಪದವಿ ವಂಚನೆ ಆದ ಕತೆ ಮಾಸ್ತಿಯವರ ಜೀವನದಲ್ಲಿ ಬರುತ್ತದೆ."ಭಾವ ' ದಲ್ಲಿ 

ತಮಗೆ  ದಿವಾನ್ ಪದವಿ ತಪ್ಪಿದ ವಿಚಾರ  ಮನೋಜ್ಞವಾಗಿ  ವಿವರಿಸಿದ್ದಾರೆ .ತಾವು ದುಖ ತಪ್ತ ರಾಗಿ ಆತ್ತುದು ,ಆ ಮೇಲೆ 

ರಾಮಾಯಣ ದಲ್ಲಿ  ರಾಜ್ಯ ನಿಷೇಧಕ್ಕೆ  ಶ್ರೀರಾಮ ಪ್ರಭು ವಿನ ಕೆತೆ ನೆನೆದು ಸಮಾಧಾನ  ಪಟ್ಟುಕೊಂಡುದನ್ನು  ಬರೆದ ಹಾಗೆ ನೆನಪು.