ಬೆಂಬಲಿಗರು

ಮಂಗಳವಾರ, ಏಪ್ರಿಲ್ 30, 2013

ಇನ್ಸ್ಪೆಕ್ಷನ್ ಎಂಬ ಪ್ರಹಸನವು

  ನಮ್ಮ  ದೇಶದಲ್ಲಿ  ಕೆಲಸ ಮಾಡುವವರಿಗಿಂತ  ಮೇಲ್ವಿಚಾರಕರು ಅಧಿಕ ,ನಮ್ಮ ದೇಶದಲ್ಲಿ ಇರುವಷ್ಟು ಸೂಪರ್ ವೈಸರ್ಗಳು
ಬೇರೆಲ್ಲೂ  ಕಾಣ ಸಿಗಲಾರರು.ಅದರಂತೆ ಇನ್ಸ್ಪೆಕ್ಟರುಗಳು.ಈ ಇನ್ಸ್ಪೆಕ್ಷನ್   ಮಕ್ಕಳಿದ್ದಾಗ ಶಾಲೆಗಳಲ್ಲಿ ನೋಡುತ್ತೇವೆ. ಶಾಲೆಗೆ
ಇನ್ಸ್ಪೆಕ್ಟರ್ ಬರುವ ದಿನ ವಿಶೇಷ ಒಪ್ಪ ಓರಣ , ಕುರ್ಚಿ ಬಿಟ್ಟು ಏಳದ ಅಧ್ಯಾಪಕರೂ ಅಂದು ಅತ್ತಿತ್ತ ಓಡಾಡುತ್ತ ,ಬೋರ್ಡ್ ನಲ್ಲಿ  ಚಿತ್ರ ಬರೆಯುತ್ತ ಪಾಠ ಮಾಡುತ್ತಾರೆ. ತರಗತಿಯಲ್ಲಿ ಜಾಣರಾದ ಮಕ್ಕಳನ್ನು ಮುಂದಿನ ಬೆಂಚಿನಲ್ಲಿ ಕುಳ್ಳಿರಿಸಿ  ಇನ್ಸ್ಪೆಕ್ಟರ್ ಅವರ ಪ್ರಶ್ನೆಗಳು ಅವರಿಗೆ ಬೀಳುವಂತೆ ಯತ್ನಿಸುತ್ತಾರೆ. ಇನ್ಸ್ಪೆಕ್ಟರ್  ಕೇಳಿದರೆ  ಹೀಗೆ  ಹೇಳ ಬೇಕು ಎಂದು ರಿಹರ್ಸಲ್ ನಡೆಯುವುದೂ ಉಂಟು. ಇದು  ನಾಟಕೀಯ ವಾಗಿ  ಕಂಡರೂ  ವಿದ್ಯಾರ್ಥಿಗಳು ಅಧ್ಯಾಪಕರಿಗೆ ತೊಂದರೆ ಆಗದಿರಲಿ ಎಂದು ಪ್ರಾರ್ಥಿಸುತ್ತಾರೆ.
ನಾನು ರೈಲ್ವೆಯ ವೈದ್ಯಕೀಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ರೈಲ್ವೆಯಲ್ಲಿ ಇರುವಷ್ಟು ಇನ್ಸ್ಪೆಕ್ಟರುಗಳು ಬೇರೆಲ್ಲೂ
ಇರರು.ರೈಲ್ವೆಯಲ್ಲಿ  ಜನರಲ್ ಮೇನೇಜರ್  ಇನ್ಸ್ಪೆಕ್ಸನ್ ಎಂದರೆ ಭಾರಿ  ದೊಡ್ಡದು ,ತಿಂಗಳು ಮೊದಲೇ ತಯಾರಿ ನಡೆಯುತ್ತದೆ.ಸುಣ್ಣ ಬಣ್ಣ ,ಕಸಗುಡಿಸುವಿಕೆ ಇತ್ಯಾದಿ ಜೋರಾಗಿ ನಡೆಯುತ್ತವೆ. ಜನರಲ್ ಮೇನೇಜರ್ ಎಂದರೆ  ಮೈಸೂರ್ ಮಹಾರಾಜರ ಮರ್ಜಿಗೆ ಸಮ. ಅವರ ಪ್ರಯಾಣಕ್ಕೆ  ಒಂದು ವಿಶೇಷ ಬೋಗಿ  ಇರುತ್ತದೆ,ಇದರಲ್ಲಿ  ಡ್ರಾಯಿಂಗ್  ರೂಮ್ ,ಅಡಿಗೆ ಕೋಣೆ  ಮತ್ತು ಬೆಡ್ ರೂಮ್ ಟಾಯ್ಲೆಟ್ ಇವೆ.ಇನ್ಸ್ಪೆಕ್ಷನ್ಗೆ  ಅವರ ಪಟಾಲಂ  ನಲ್ಲಿ  ೫೦ರಿಂದ ನೂರು ಜನ ಇರುತ್ತಾರೆ. ಪ್ರತ್ಯೇಕ ಟ್ರೈನ್ ; ಇನ್ಸ್ಪೆಕ್ಷನ್ ಸ್ಪೆಷಲ್ ಎಂದು ಹೆಸರು .ಆ ದಿನ ಎಲ್ಲ  ಸ್ಟೇಶನ್ ನ ಎಲ್ಲಾ ನಳ್ಳಿಗಳಲ್ಲಿ  ನೀರು ಬರುತ್ತದೆ.ಯಾವತ್ತೂ ಬೀಗ ಹಾಕಿರುತ್ತಿದ್ದ  ಸಾರ್ವಜನಿಕ  ಶೌಚಾಲಯಗಳು ಗಮ ಗಮಿಸುತ್ತ ತೆರೆದಿರುತ್ತವೆ. ಆ ಸೆಕ್ಷನ್ ನ ರೈಲುಗಳು ಸಮಯಕ್ಕೆ ಸರಿಯಾಗಿ ಬರುತ್ತವೆ , ಸಾಹೇಬರು ವೀಕ್ಷಣೆ ಗೆ  ಹೊರಟಾಗ ತಮ್ಮ ತಮ್ಮ ತಯಾರಿಗೆ ಅನುಗುಣವಾಗಿ  ಬೇರೆ ವಿಭಾಗ ದ  ಅಧಿಕಾರಿಗಳು ಅವರ ದೃಷ್ಟಿ ತಮ್ಮತ್ತ  ಹಾಯಲಿ ಅಥವಾ ಹಾಯದಿರಲಿ ಎಂದು  ದೇವರಲ್ಲಿ ಪ್ರಾರ್ಥಿಸುತ್ತಾರೆ.ಸಾಹೇಬರು ಎಲ್ಲೋ ಒಂದು ಕಡೆ ನಿಂತು ತಮಗೆ ಇಷ್ಟ ತೋರಿದವರಿಗೆ  ಸ್ಥಳದಲ್ಲಿ ಬಹುಮಾನ ಘೋಷಿಸುತ್ತಾರೆ. ಜನರಲ್ ಮೇನೇಜರ್ ಒಂದಿಗೆ ಅವರ ಪಿ ಎ, ಡಿ ಅರ ಎಂ ,,ಸಿ ಓ ಎಸ್, ಸಿ ಸಿ ಎಸ್,.ಸಿ.ಇ., ಸಿ ಅರ ಪಿ ಎಸ್  ಕಮಾಂಡೆಂಟ್.ಸಿ ಓ ಎಸ್,.ಸಿ ಇ ಇ , ಸಿ ಎಸ್ ಟಿ ಇ , ಸಿ ಎಂಓ ಇತ್ಯಾದಿ  ಹಿರಿಯ ಅಧಿಕಾರಿಗಳು ಮತ್ತವರ   ಕೆಳ ಅದಿಕಾರಿಗಳ  ಹಿಂಡು ಇರುತ್ತದೆ. ದೊಡ್ಡ  ಸಾಹೇಬರು  ದಾರಿಯಲ್ಲಿ ಏನಾದರೂ ಕೊರತೆ ಯಿದೆಯೇ ಎಂದು ಕೇಳಿದಾಗ  ಎಲ್ಲರೂ  ಇಲ್ಲ  ಎಲ್ಲವೂ ಖಾವಂದರ  ದಯೆಯಿಂದ ಸುಸೂತ್ರವಾಗಿದೆ ಎಂದು ಒಕ್ಕೊರಲಿನಿಂದ ನುಡಿಯುತ್ತಾರೆ.ಯಾರಾದರೂ ಅಧಿಕ  ಪ್ರಸಂಗಿ ಸತ್ಯ ನುಡಿದರೆ ನೀರಿಲ್ಲದ ಜಾಗಕ್ಕೆ ಎತ್ತ೦ಗಡಿಯಾದೀತು.ಇದೆ ತರಹ  ಇನ್ಸ್ಪೆಕ್ಷನ್  ಮಂತ್ರಿ ಗಳೂ ನಮ್ಮ ನಾಡಿನಲ್ಲಿ ನಡೆಸುತ್ತಾರೆ.ಅವರ ಎದುರು ಯಾರೂ  ನಿಜವನ್ನು ಬಹಿರಂಗವಾಗಿ  ನಿವೇದಿಸುವ ವಾತಾವರಣವೇ ಇರುವುದಿಲ್ಲ.ಭಟ್ಟಂಗಿಗಳು ಅವರನ್ನು ಸುತ್ತುವರಿದಿರುತ್ತಾರೆ.ನೈಜ ಚಿತ್ರಣ ಅವರಿಗೆ ಗೊತ್ತಿರುತ್ತದೆ. ಆದರೆ ಅವರಿಗೆ  ಯಥಾರ್ಥದಲ್ಲಿ  ಅದನ್ನು ನೋಡುವುದು ಬೇಕಾಗಿರುವುದಿಲ್ಲ.
ಬಹಳಷ್ಟು  ಅಧಿಕಾರಿಗಳು  ಮದುವೆ ಮುಂಜಿ ದೇವಸ್ಥಾನ ಸಂದರ್ಶನಗಳನ್ನು  ಇನ್ಸ್ಪೆಕ್ಷನ್ ಟೂರ್ ಆಗಿ ಮಾರ್ಪಡಿಸಿ

ಸ್ವಕಾರ್ಯಕ್ಕೆ ಭತ್ತೆ ಪಡೆಯುತ್ತಾರೆ.ಇಂತಹ ದೈವ ದರ್ಶನ ದೇವರಿಗೆ ಹಿತವೇ?

ಮೆಡಿಕಲ್ ಕಾಲೇಜುಗಳಲ್ಲಿ  ಮೆಡಿಕಲ್ ಕೌನ್ಸಿಲ್ ನವರ  ಇನ್ಸ್ಪೆಕ್ಸನ್ ಪ್ರಹಸನ ಇರುತ್ತದೆ.ಆ ದಿನ  ಕೂಲೆಜಿನಲ್ಲಿ(ಒಂದು ದಿನದ
ಮಟ್ಟಿಗೆ ) ಹೊಸ ಪ್ರೊಫೆಸ್ಸರ್ ಗಳು ,,ಉಪಾನ್ಯಾಸಕರು  ,ಹೆಚ್ಚೇಕೆ  ವಾರ್ಡ್ ಗಳಲ್ಲಿ  ಬಾಡಿಗೆ ರೋಗಿಗಳೂ ತುಂಬಿ
ಕೊಳ್ಳುತ್ತಾರೆ.ಮಾರನೆ ದಿನ ಅಲ್ಲಿ ಹೋದರೆ ಎಲ್ಲಾ ಖಾಲಿ .ಇದು ಇನ್ಸ್ಪೆಕ್ಷನ್ ಮಾಡುವವರಿಗೂ  ಮಾಡಿಸಿ ಕೊಳ್ಳುವವರಿಗೂ ಗೊತ್ತಿರುತ್ತದೆ.ಆದರೂ ಇನ್ಸ್ಪೆಕ್ಷನ್ ಎಂಬ ಪ್ರಹಸನ ನಡೆಯಲೇ ಬೇಕಲ್ಲ.

ಈ  ಇನ್ಸ್ಪೆಕ್ತರುಗಳೂ ಹಾಗೆ. ಕಾನೂನು ಸರಿಯಾಗಿ ಪಾಲಿಸುವವರನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಕೋಪ.ಏಕೆಂದರೆ  ತಾವು
ಕಾಣಿಕೆ ಕೇಳಲು  ಒಳ್ಳೆಯ ಕಾರಣಕ್ಕೆ ತಡಕಾದಬೇಕಲ್ಲವೇ? ಕಾನೂನು ಕಟ್ಟಳೆ ಮೀರಿ ಹಲ್ಲು ಗಿಂಜುತ್ತ ಬರುವವರು ಅವರಿಗೆ
ಆಪ್ಯಾಯಮಾನ   ಕಾರಣ  ಗೊತ್ತಲ್ಲ ?





                                                              
                                  
                            

ಭೂತದ ಬಾಯಲ್ಲಿ ಭಗವದ್ಗೀತೆ


   ಭೂತದ ಬಾಯಲ್ಲಿ ಭಗವದ್ ಗೀತೆ


ನಾವು ಕೆಟ್ಟವರೆಂದು ಪರಿಗಣಿಸುವ ವ್ಯಕ್ತಿಯ ಬಾಯಲ್ಲಿ ನಮಗೆ ಒಳ್ಳೆಯದನ್ನು ಉಪದೇಶಿಸಿದಾಗ  (ಕೆಟ್ಟ ಅರ್ಥದಲ್ಲಿ )ನುಡಿಗಟ್ಟು .ಇದು ಆಂಗ್ಲ ಭಾಷೆಯ ಡೆವಿಲ್ ಕೋಟಿಂಗ್  ಸ್ಕಿಪ್ಚರ್ ಎಂಬ ಮೂಲದ ತಥಾಕಥಿತ ಕನ್ನಡ ಅನುವಾದ.ಸೈತಾನನು ಧರ್ಮ ಗ್ರಂಥಗಳನ್ನು ಉಲ್ಲೇಖಿಸಿ (ತಪ್ಪು ಅರ್ಥದಲ್ಲಿ)ಯೇಸುವನ್ನು ತನ್ನ ಹಾದಿಗೆ ತರುವ  ಯತ್ನ ಮಾಡುವ ಕತೆ ಬೈಬಲ್ ನಲ್ಲಿ ಇದೆ.ಅದರಂತೆ  ಶೇಕ್ಸಪಿಯರ್ ನ ನಾಟಕ ಮರ್ಚೆಂಟ್ ಆಫ್ ವೆನಿಸ್ ನಲ್ಲಿ  ಈ ಸಾಲುಗಳಿವೆ

Mark you Bessanio,
The devil can cite scriptures for his purpose
An evil soul producing holy witness,
Is like villain with smiling cheek,
A goodly apple rotten at heart :
O.what a Godly outside falsehood hath.
ಆದರೆ ಕನ್ನಡದಲ್ಲಿ   ಈ ಗಾದೆಯನ್ನು  ದೆವ್ವದ ಬಾಯಲ್ಲಿ ಭಗವದ್ಗೀತೆ ಎನ್ನುವುದು ಸರಿಯಾದೀತು.ದಕ್ಷಿಣ ಕನ್ನಡದ ಭೂತಗಳು ದೇವರಂತೆ ಪೂಜಿಸಲ್ಪಡುವವು. ಭೂತ ಕೋಲದಲ್ಲಿ ಭೂತವು ಒಳ್ಳೆಯ ವಿಚಾರಗಳನ್ನು ಗಳನ್ನು ಸಂದರ್ಭರ್ಕ್ಕನುಸಾರ ಉಲ್ಲೇಕಿಸುವ ಕ್ರಮ ಇದೆ.ಭೂತ ಕಟ್ಟುವವರು ತಲೆ ತಲಾ೦ತರಗಳಿಂದ  ಕೇಳಿ ಕಲಿತ  ಜ್ಞಾನ ಭೂತ ಮುಖಾಂತರ ಪ್ರಕಟ ವಾಗುತ್ತದೆ.ಇಲ್ಲಿ ಭೂತಗಳು ರಕ್ಷಕರು.ನಮ್ಮ ಹಳ್ಳಿಯಲ್ಲಿ  ಇರುವ ಮಹಾ೦ಕಾಳಿ ಭೂತವು ಅತಲ ವಿತಳ ಪಾತಾಳ ಎಲ್ಲಿದ್ದರೂ ತನ್ನನ್ನು ನಂಬುವವರ ಕಾಯುವೆ ಎಂದು ಭರವಸೆ  ನೀಡುತ್ತಿತ್ತು.

ಭ್ರಷ್ಟಾಚಾರದ  ಬಗ್ಗೆ  ತಮ್ಮ ಎದುರು ಪಕ್ಷದವರು ಮಾತನಾಡುವುದು  ದೆವ್ವದ ಬಾಯಲ್ಲಿ ಭಗವದ್ಗೀತೆ ಬಂದಂತೆ ಎಂದು ರಾಜಕಾರಿಣಿಗಳು ಹೇಳುತ್ತಾರೆ .ಇಲ್ಲಿ ದೆವ್ವಗಳು ಯಾರೋ ,ಭಗವದ್ಗೀತೆ ಯಾವುದೊ  ಯಾರಿಗೆ ಗೊತ್ತು?


ಸೋಮವಾರ, ಏಪ್ರಿಲ್ 29, 2013

ಬಂತು ಮತ್ತೊಂದು ಚುನಾವಣೆ

ಮತ್ತೊಂದು  ಚುನಾವಣೆ ಬರುತ್ತಿದೆ.ಮತದಾರ  ದೊಡ್ಡ  ಸಂದಿಗ್ದದಲ್ಲಿ ಇದ್ದಾನೆ. ಪಕ್ಷ ನೋಡಿ ಮತ ಚಲಾಯಿಸುವಾ

ಎಂದರೆ  ಹಗರಣಗಳಲ್ಲಿ ಸಿಲುಕಿರುವ ಕೇಂದ್ರ ಸರಕಾರದ ಮುಖ್ಯ ಪಾಲುದಾರ ಕಾಂಗ್ರೆಸ್. ಇಲ್ಲಿ  ಸಿಕ್ಕಿದ ಅವಕಾಶ ವನ್ನು

ದುರುಪಯೋಗ ಪಡಿಸಿ ಕರ್ನಾಟಕದ ಇತಿಹಾಸ ದಲ್ಲಿಯೇ ಕಂಡು ಕೇಳರಿಯದಂತಹ  ಬ್ರಷ್ಟಾಚಾರದಲ್ಲಿ ಮುಳುಗಿ

ತೇಲುತ್ತಲಿರುವ ಬಿ ಜೆ ಪಿ .ಕುಟುಂಬದ ಆಸ್ತಿ ಯಾಗಿರುವ ಜೆ ಡಿ ಎಸ. ಒಳ್ಳೆಯ ಮಂದಿ  ಬೆರಳೆಣಿಕೆಯಲ್ಲಿದ್ದ್ದು ಎಲ್ಲಾ

ಪಕ್ಷಗಳಲ್ಲಿ ಹಂಚಿ ಹೋಗಿದ್ದಾರೆ.

ಶಾಸನ ಸಭೆಯ ಸದಸ್ಯರಿಗೆ ಲಾ ಮೇಕರ್ಸ್ ಅಥವಾ  ಕಾನೂನು ಮಾಡುವವರು ಎಂದು ಕರೆಯುತ್ತಾರೆ.ಇವರಿಗೆ

ಪ್ರಜೆಗಳ ಬಗ್ಗೆ ಕಾಳಜಿಯೂ ,ಕಾನೂನು ,ಸಂವಿಧಾನ ದ ಬಗ್ಗೆ ತಿಳಿವೂ ಬೇಕು.ವಿಪರ್ಯಾಸವೆಂದರೆ  ನಮ್ಮಲ್ಲಿ

ಶಾಸನ ಮಾಡುವವರೇ ಅದನ್ನು ಮುರಿಯುವುದರಲ್ಲಿ ಮೊದಲಿಗರಾಗಿರುತ್ತಾರೆ.

  ಚುನಾವಣೆಗಳು ಯುಧ್ಧ ದಂತೆ ನಡೆಯುತ್ತಿವೆ . Everything is fair in love and war  ಎಂಬಂತೆ  ಲಂಗು

ಲಗಾಮಿಲ್ಲದೆ ಪ್ರಚಾರ ನಡೆಯುತ್ತದೆ. ಮಧು ದಂಡಾವತೆ ,ವೀರೇಂದ್ರ ಪಾಟೀಲ್, ಜಗನ್ನಾಥ ರಾವ್ ಜೋಷಿ

ಯಂತಹ ಸಜ್ಜನ ಪ್ರಚಾರಕರು ಯಾವ ಪಕ್ಷದಲ್ಲೂ ಸಿಗುವುದಿಲ್ಲ.

ಮೊರಾರ್ಜಿ ದೇಸಾಯಿ ಅವರ ಚುನಾವಣಾ ಸಭೆಯಲ್ಲಿ ಅವರ ಎದುರಾಳಿಯ ವಿರುದ್ಧ ಘೋಷಣೆ ಕೂಗಲು ಅವರು

ಸಂಮತಿಸುತ್ತಿರಲಿಲ್ಲ.

ಶನಿವಾರ, ಏಪ್ರಿಲ್ 27, 2013

ಮಕ್ಕಳ ಕೆಮ್ಮು

                             

 

 

 

 

 

ಕೆಮ್ಮು  ರೋಗ ಲಕ್ಷಣವೇ ಹೊರತು ರೋಗವಲ್ಲ. ಶ್ವಾಸ ನಾಳದಲ್ಲಿ ಅನಪೇಕ್ಷಿತ  ವಸ್ತು ಕಂಡುಬಂದರೆ ಹೊರ ಹಾಕಲು ಇರುವ

ನೈಸರ್ಗಿಕ ಮಾರ್ಗ. ಬೇಡದ ವಸ್ತು ಧೂಳು , ರೋಗಾಣು  ಅಥವಾ ಮಗು ಆಟಕ್ಕೆ ಸೇವಿಸಿದ ಕಲ್ಲು ಮಣ್ಣು ಇರಬಹುದು .

ಬಹುತೇಕ ಮಕ್ಕಳಲ್ಲಿ ಕಂಡು ಬರುವುದು ಶೀತ ಕೆಮ್ಮು .ಇದು ವೈರಸ್ ಗಳಿಂದ ಬರುವಂತಹುದು. ತಾನಾಗಿಯೇ ಕಡಿಮೆಯಾಗಬೇಕು.

ಅಂಟಿ ಬಯೋಟಿಕ್ ಆವಷ್ಯವಿಲ್ಲ . ಅಮೆರಿಕನ್ ಅಕಾಡೆಮಿ ಆಫ್  ಪೀಡಿಯಾಟ್ರಿಕ್ಸ್  ನ  ಬುದ್ದಿವಂತ ಆಯ್ಕೆ ಸಲಹೆ ಪ್ರಕಾರ  ನಾಲ್ಕು

ವರ್ಷದ ಕೆಳಗಿನ ಮಕ್ಕಳಿಗೆ ಸಾಮಾನ್ಯ  ಕಫ್ ಸಿರಪ್ ಗಳನ್ನೂ ಕೊಡದೆ ಇರುವುದು ಒಳ್ಳೆಯದು.ಈ ಔಷಧಿ ಗಳಿಂದ  ಹಾನಿಯೇ

ಹೆಚ್ಚು.ಶ್ವಾಸ ಕೋಶ ಮತ್ತು ನಾಳ ದಲ್ಲಿ ಕಫ ಇರುವಾಗ ಕೆಮ್ಮನ್ನು ಅದುಮುಮುವಂತಹ ವಸ್ತುಗಳಿ ರುವ ಮದ್ದುಗಳು ಕಾಯಿಲೆಯನ್ನು

ಉಲ್ಬಣಿಸುವಂತೆ ಮಾಡಬಹುದು.ಮಕ್ಕಳ ಪೋಷಕರು ದಾಕ್ಟರಲ್ಲಿ ದಿಡೀರ್ ಕೆಮ್ಮು ನಿವಾರಣೆಗೆ ಇಂತಹ ಔಷಧಿಗಳಿಗೆ  ದುಂಬಾಲು

ಬೀಳಬಾರದು.

ಇದಕ್ಕೆ ಅಪವಾದ ಮಕ್ಕಳ ಅಸ್ತಮ ಕಾಯಿಲೆ ಮಾತ್ರ .ಈ ಸಂದರ್ಭದಲ್ಲಿ ಉಬ್ಬಸದ ಔಷಧಿ ಇರುವ ಸಿರಪ್ ವೈದ್ಯರ ಸಲಹೆ

ಮೇರೆಗೆ ಕೊಡ ಬಹುದು .

ಮಂಗಳವಾರ, ಏಪ್ರಿಲ್ 23, 2013

ಲಾಲ್ಗುಡಿ ಜಯರಾಮನ್

     
                                           Lalgudi1
                       Lalgudi2lalgudi3
ವಯೊಲಿನ್ ಮಾಂತ್ರಿಕ ಲಾಲ್ಗುಡಿ ಜಯರಾಮನ್ ಇನ್ನಿಲ್ಲ.ಕೆಲವು ತಿಂಗಳ ಮೊದಲು ಇನ್ನೋರ್ವ ವಯೊಲಿನ್ ದಿಗ್ಗಜ ಎಂ ಎಸ

ಗೋಪಾಲಕೃಷ್ಣನ್  ನಮ್ಮನ್ನು ಅಗಲಿದ ಆಘಾತ ಆರುವ ಮುನ್ನವೇ ಲಾಲ್ಗುಡಿ ಅವರೂ ಅವರನ್ನು ಅನುಸರಿಸಿ ಹೋದರು.

ಲಾಲ್ಗುಡಿ ಯವರ ವಾದನ ದಲ್ಲಿ ಅಬ್ಬರ ವಿರಲಿಲ್ಲ ಮಂದ ಮಾರುತನಂತೆ ,ಹಿತವಾದ ವಾದನ.ಅವರು ಪಕ್ಕ ವಾದ್ಯ

ನುಡಿಸುವಾಗ
ಮುಖ್ಯ ಕಲಾಕಾರನ   ಸಹಜ ವಿಧೇಯತೆಯಿಂದ  ಅನುಸರಣೆ  ಮಾಡುತ್ತಿದ್ದರು.ಮದುರೈ ಮಣಿ ಐಯ್ಯರ್ ,ಜಿ ಏನ್

ಬಾಲಸುಬ್ರಹ್ಮಣ್ಯಂ

ಮದುರೈ ಸೋಮು ,ಎಂ ದಿ ರಾಮನಾಥನ್ ,ಏನ್ ರಮಣಿ ಯಂತಾ ಘಟಾನುಘತಿಗಳಿಗೆ ಸಾಥ್ ನೀಡಿದವರು .

ತ್ಯಾಗರಾಜರ ಶಬ್ದಗಳಲ್ಲಿ ಇವರ ಸಂಗೀತ ಎಂತ ಮುದ್ದೋ ಎಂತ ಸೊಗಸೋ .ಇವರಿಗೆ ಸೋಲೋಗಳಲ್ಲಿ ಸಾಥ್ ನೀಡುತ್ತಿದ್ದ

ಮೃದಂಗ ವಿದ್ವಾನ್ ವೆಲ್ಲೋರ್ ರಾಮ ಬದ್ರನ್  ಅವರು ಕೆಲ ತಿಂಗಳ ಮೊದಲು ನಮ್ಮನ್ನು ಅಗಲಿದರು.

ವಯೊಲಿನ್ ವಾದನದನ್ನಿ ಸ್ವಯಂ ಪರಂಪರೆ ಲಾಲ್ಗುಡಿ ಬಾನಿ ನಿರ್ಮಿಸಿದ ಇವರು ಒಳ್ಳೆಯ ಕೃತಿ ರಚನಾಕಾರರೂ


ಹೌದು .ಇವರು


ರಚಿಸಿದ ವರ್ಣ ,ತಿಲ್ಲಾನಗಳು ಜನಪ್ರಿಯ ವಾಗಿವೆ.

ಇಂಥವರನ್ನು ಕೊಟ್ಟ ಆ ಮಹಾದೇವರಿಗೆ ವಂದನೆಗಳು.


http://www.youtube.com/watch?v=zBbGHS0SnRE

http://www.youtube.com/watch?v=pLvSMOHcIts

ಅಪ್ಲೋಡರ್ ಗಳಿಗೆ ವಂದಿಸುತ

ಶನಿವಾರ, ಏಪ್ರಿಲ್ 20, 2013

ಜಾಂಡಿಸ್

ಕೆಂಪು ರಕ್ತ  ಕಣಗಗಳ ಉತ್ತರ ಕಾಂಡ ಮತ್ತು ಜಾಂಡಿಸ್
 
ಜಾಂಡಿಸ್ ,ಮಂಜ(ಲು) ಪಿತ್ತ. ಹಳದಿ ಕಾಯಿಲೆ  ಜ್ವರ , ಕೆಮ್ಮು ಇತ್ಯಾದಿಗಳಂತೆ ಒಂದು ರೋಗ ಲಕ್ಷಣ ವೆ ಹೊರತು 
 

ರೋಗವಲ್ಲ.
                          
  
ಕೆಂಪು ರಕ್ತ ಕಣಗಳ ಆಯುಸ್ಸು ಸರಾಸರಿ ೧೨೦ ದಿನಗಳು .ಅವು  ವಯಸ್ಸಾಗಿ ಇಲ್ಲವೇ ರೋಗ ಕಾರಣ ಮೊದಲೇ 

ನಶಿಸಲ್ ಪಟ್ಟಾಗ ಬೈಲಿರುಬಿನ್ ಎಂಬ ವಸ್ತು ಉಂಟಾಗುವುದು.ನೀರಿನಲ್ಲಿ ಕರಗದ ಈ ವಸ್ತುವನ್ನು  ಲಿವರ್ ನಲ್ಲಿ 

ಕಿಣ್ವಗಳು  ನೀರಿನಲ್ಲಿ ಕರಗುವ ವಸ್ತುವಾಗಿ ಮಾರ್ಪಡಿಸುತ್ತವೆ.ಲಿವರ್ ನಿಂದ ಪಿತ್ತ ನಾಳಗಳ  ಮೂಲಕ  ಕರುಳು ಸೇರಿ 

ವಿಸರ್ಜಿಸಲ್ಪಡುತ್ತವೆ .ಸ್ವಲ್ಪ ಅಂಶ ಕರುಳಿನಿಂದ ಹೀರಲ್ಪಟ್ಟು ಮೂತ್ರದಲ್ಲಿ ವಿಸರ್ಜನೆಯಾಗುತ್ತದೆ. ಇದರಿಂದಲೇ ಮಲ 

ಮೂತ್ರ ಹಳದಿ ಬಣ್ಣ ಪಡೆದಿರುವುದು.ಕೆಂಪು ರಕ್ತ ಕಣಗಳು ರೋಗದಿಂದ ಆಯುಸ್ಸು ಮುಗಿಯುವ ಮೊದಲೇ ಹೆಚ್ಚು ಹೆಚ್ಚು  ನಾಶ ಗೊಂಡರೆ ರಕ್ತದಲ್ಲಿ  ಬಿಲಿರುಬಿನ್ ಹೆಚ್ಕು ಆಗಿ ಕಾಮಾಲೆ ಬರ ಬಹುದು .ಮಲೇರಿಯಾ ಕಾಯಿಲೆ ಕೆಂಪು ರಕ್ತ  ಕಣಗಳಿಗೆ ಬರುವ ಕಾರಣ ಮಲೇರಿಯಾ ದಲ್ಲಿ  ಜಾಂಡಿಸ್ ಬರಲು ಒಂದೂ ಕಾರಣ .




ಲಿವೆರಿನ ಸೋಂಕು ಆದಲ್ಲಿ ಬೈಲಿರುಬಿನ್  ಪಿತ್ತ ನಾಳ ಹೋಗಬೇಕಿದ್ದುದು ರಕ್ತಕ್ಕೆ ಸೇರಿ ಅದರಿಂದ ರಕ್ತ ಚರ್ಮಕ್ಕೆ 

ಹಳದಿ ಬಣ್ಣ ಬರುವುದು .ಕೆಲವೊಮ್ಮೆ ಪಿತ್ತ ನಾಳದಲ್ಲಿ ಕಲ್ಲು ,ಕ್ಯಾನ್ಸರ್  ಗಡ್ಡೆ  ಬೈಲಿರುಬಿನ್  ಯುಕ್ತ  ಪಿತ್ತ ರಸಕ್ಕೆ ತಡೆಯೊಡ್ಡಿ 

ಜಾಂಡಿಸ್ ಉಂಟಾಗಬಹುದು.

ಸಾಮಾನ್ಯವಾಗಿ ಲಿವರ್ ನ ಸೋಂಕಿನಿಂದ ಜಾಂಡಿಸ್ ಬರುವುದು,. ಮಲೇರಿಯ ,ಇಲಿ ಜ್ವರ , ಹೆಪಟೈಟಿಸ್ ವೈರಸ್ 

ಸೋಂಕಿನಿಂದ  ಲಿವರ್ ಕಾಯಿಲೆ ಬರಬಹುದು. ವೈರಸ್ಗಳಲ್ಲಿ  ಎ,ಬಿ, ಸಿ, ಇ ಮುಖ್ಯವಾದವು.ಇ ಮತ್ತು ಎ ನೀರಿನ ಮೂಲಕ 

ಹರಡುವಂತಹವು.ಬಿ ಮತ್ತು ಸಿ ರಕ್ತ ,ಲೈಂಗಿಕ ಸಂಬಂಧ ಇತ್ಯಾದಿ ಗಳಿಂದ ಹರಡುವಂತಹವು.ಹೆಪಟೈಟಿಸ್ ಬಿ ಮತ್ತು ಸಿ 

ದೂರಗಾಮಿ ದುಷ್ಪರಿಣಾಮ ಉಂಟು ಮಾಡುವಂತಹವು.ಎ ಮತ್ತು ಬಿ  ವೈರಸ್ಸಿಗೆ ಲಸಿಕೆಗಳಿವೆ.ಬಿ ಮತ್ತು ಸಿ ಗೆ ಔಷಧಿಯೂ ಇದೆ .ಹೆಚ್ಚಿನ ವೈರಸ್ ಕಾಯಿಲೆಗಳಂತೆ ವೈರಲ್ ಹೆಪಟೈಟೀಸ್ ತನ್ನಿಂದ   ತಾನೇ ಶಮನ  ಗೊಳ್ಳುವುದು .ಅದರಿಂದ ನೀವು ಈ ಕಾಲದಲ್ಲಿ (ಲಿವರ್ ಬಾಧಕ ವಸ್ತುಗಳನ್ನು ಬಿಟ್ಟು )ಯಾವ ಸೊಪ್ಪು ಕೊಟ್ಟರೂ ಅದಕ್ಕೆ ಕ್ರೆಡಿಟ್ ಸಿಗುವುದು .ನೆಲ ನೆಲ್ಲಿಯನ್ನು ಕೂಡಾ ಹಲವು ಟ್ರಾಯಲ್ ಗಳಲ್ಲಿ  ಪರೀಕ್ಷೆ ಮಾಡಿ ಅದರ ಉಪಯುಕ್ತತೆ ದೃಡ ಪಟ್ಟಿಲ್ಲ .

ಮಲೇರಿಯ ,ಇಲಿ ಜ್ವರ ಕ್ಕೆ ಚಿಕಿತ್ಸೆ ಇದೆ.ವೈರಸ್ ಕಾಯಿಲೆಗಳನ್ನು ತಡೆಗಟ್ಟ ಬಹುದು.ಇಲ್ಲಿಜಾಂಡಿಸ್ ಎಂದು ಹಳ್ಳಿ ಮದ್ದು ಮಾಡಿ ಕೊಂಡು ಕೂತರೆ ಪ್ರಾಣ ಹೋದೀತು .

ಈ ತರಹದ ಸೊಂಕುಗಳಲ್ಲಿ ಮೊದಲು ಹಸಿವೆ ಕಮ್ಮಿ ಇರುತ್ತದೆ. ಕೊಬ್ಬು ಪದಾರ್ಥ ಜೀರ್ಣಕ್ಕೆ ಪಿತ್ತ ರಸ ಅವಶ್ಯ ವಿರುವುದರಿಂದ 

ಅಜೀರ್ಣ ವಾದೀತು .ಹೊರತಾಗಿ   ಯಾವುದೇ ಪಥ್ಯದ ಅವಶ್ಯಕತೆ ಯಿಲ್ಲ .ರೋಗ ಗುಣವಾಗಲು ಪೌಷ್ಟಿಕ ಅಂಶಗಳು 

ಅವಶ್ಯವಿದ್ದು ಪಥ್ಯದಿಂದ  ಹಾನಿಯಾಗುವುದೇ ಹೆಚ್ಚು.

ಲಿವರ್  ಗ್ಲುಕೋಸ್ ಉಂಟು ಮಾಡುವ ಫ್ಯಾಕ್ಟರಿ ,ಅದರ ಕಾಯಿಲೆಯಲ್ಲಿ  ಸಿಹಿ ಜಾಸ್ತಿ ಸೇವಿಸಲು ಹೇಳುವ ಕಾರಣ ಇದು.

ಕಬ್ಬಿನ ಹಾಲೇ ಆಗಬೇಕೆಂದು ಇಲ್ಲ. ಅನೈರ್ಮಲ್ಯ ಇರುವ ಅಂಗಡಿ ಕಬ್ಬಿನ  ಹಾಲು ಕುಡಿಯದಿರುವುದೇ ಲೇಸು.

 ಎಳೆ ಶಿಶು ಗಳಲ್ಲಿ ಬರುವ  ಜಾಂಡಿಸ್  ಸತ್ತ  ಕೆಂಪುರಕ್ತ ಕಣ ಗಳ ವಿಲೇವಾರಿ ಮಾಡುವ ಕಿಣ್ವಗಳು ಸಶಕ್ತ ವಾಗಿಲ್ಲದಿದ್ದುದರಿಂದ 

ಬರುವುದು ,ಕೆಲ ದಿನಗಳಲ್ಲಿ ಸರಿ ಹೋಗುವುದು.
 
                  




                                    .

ಗುರುವಾರ, ಏಪ್ರಿಲ್ 18, 2013

ಎಸ್ ಜಾನಕಿ

                                      
            
ಇತ್ತೀಚೆಗೆ ಸರಕಾರದವರು ಕೊಡಮಾಡಿದ ಪದ್ಮ ಭೂಷಣ ಪ್ರಸಸ್ತಿ ತಿರಸ್ಕರಿಸಿ ಸುದ್ದಿ ಮಾಡಿದ ಖ್ಯಾತ ಗಾಯಕಿ ಎಸ್ ಜಾನಕಿ. ಭಾರತದ
ಹಲವು  ಭಾಷೆಗಳಲ್ಲಿ ೨೨೦೦೦ ಕ್ಕೂ ಅಧಿಕ ಹಾಡುಗಳನ್ನು ಧ್ವನಿ ಮುದ್ರಿಸಿದ ಸಾಧನೆ .ಇವರು ಮೂಲತಹ ತೆಲುಗರು.ವಿಶೇಷವೆಂದರೆ 
ದಕ್ಷಿಣ ಭಾರತದ ಬಹುತೇಕ ಹಿನ್ನಲೆ ಗಾಯಕರು ತೆಲುಗರು. ಉದಾ ಪಿ ಬಿ ಶ್ರೀನಿವಾಸ್ ,ಪಿ ಸುಶೀಲ ,ಮಾನೋ. ಎಸ ಪಿ
ಬಾಲಸುಬ್ರಹ್ಮಣ್ಯಂ,ಘಂಟಸಾಲ .ತ್ಯಾಗರಾಜ ರೆ ತೆಲುಗರಲ್ಲವೇ? ಇವರೆಲ್ಲರ ಕನ್ನಡ ಹಾಡುಗಳನ್ನು ಕೇಳಿದಾಗ  ಕನ್ನಡಿಗರಲ್ಲವೆಂದು
ಯಾರೂ ಹೇಳರು.
ಪ್ರಶಸ್ತಿ ತಿರಸ್ಕರಿದ್ದುದು ಅಹಕಾರದಿಂದ ಅಲ್ಲ .ಬೇಸರದಿಂದ .ದಕ್ಷಿಣ ಭಾರತದ ಕಲಾವಿದರಿಗೆ ದೇಶಿಯ ಮಟ್ಟದಲ್ಲಿ ಅವಗಣನೆ ಸಾಮಾನ್ಯ.

ಅದಕ್ಕೆ ಪ್ರತಿಭಟನೆ. ಪ್ರಸಿದ್ಧ ಗಾಯಕ ಜೇಸುದಾಸ್ ಅವರ ಮಕ್ಕಳು ತಮ್ಮ ತಂದೆ ಹಾಡಿದ ಗೀತೆಗಳನ್ನು ಗಾನ ಮೇಳಗಳಲ್ಲಿ
ಹಾಡುವುದಕ್ಕೆ ಮುನ್ನ ಅನುಮತಿ ಪಡೆಯ ಬೇಕೆಂಬ ವರಾತೆ ತೆಗೆದಿದ್ದರು.. ಜಾನಕಿಯಮ್ಮ ತಮ್ಮ ಹಾಡುಗಳನ್ನು ಯಾರು ಎಲ್ಲಿ
ಬೇಕಾದರೂ ಹಾಡಬಹುದು .ಅದರಿಂದ ನನ್ನ ಹಾಡುಗಳ ಜನಪ್ರಿಯತೆ ಹೆಚ್ಚುವುದಲ್ಲವೇ ಎಂದರು.
ಎಸ್ ಜಾನಕಿ ಯವರ ವೆಬ್ ಸೈಟ್ ಇದೆ . www.sjanaki.net
                                      ಇದರಲ್ಲಿ ತಮ್ಮ ಆಯ್ದ ಹಾಡುಗಳನ್ನು ಹಾಕಿದ್ದಾರೆ.ರಸಿಕರು ಕೇಳಬಹುದು.ಇವರ ವಾಯ್ಸ್ 
ಮಾಡ್ಯೂಲೆಶನ್ ಅದ್ಭುತ .ಮಕ್ಕಳಂತೆ ಅಜ್ಜಿಯಂತೆ ಹಾಡಬಲ್ಲರು.ವಿನಯ ಶೀಲೆ
ಹೇಮಾವತಿ ಕನ್ನಡ ಚಿತ್ರದಲ್ಲಿ ಖ್ಯಾತ ವಯೊಲಿನ್ ಪಟು ಎಂ ಎಸ್ ಗೋಪಾಲಕೃಷ್ಣನ್ ರ ಪಕ್ಕ ವಾದ್ಯದಲ್ಲಿ ಹಾಡಿದ ಶಿವ ಶಿವ ಎನ್ನದ
ನಾಲಿಗೆ ಹಾಡು ಕೇಳಿ.
www.youtube.com/watch?v=rGLLevDBwDU
www.4shared.com/mp3/A922kgBB/Siva_Siva_ennada.htm
ಇನ್ನೊಂದು ಜನಪ್ರಿಯ ಗೀತೆ ಭಾರತ ಭೂಶಿರ -ಉಪಾಸನೆ ಚಿತ್ರದ್ದು

www.youtube.com/watch?v=57Ibj4fD4uQ

ಇದಲ್ಲದೆ ಜನಪ್ರಿಯ ತಮಿಳ್ ಗೀತೆ ಸಿಂಗಾರ ವೇಲನೆ ಬಾ ಹಾಡಿಗೆ ಖ್ಯಾತ  ನಾದಸ್ವರ ವಿದ್ವಾನ್ ಕಾರೈಕುರುಚ್ಚಿ

ಅರುಣಾಚಲಂ  ಪಕ್ಕ ವಾದ್ಯ

ಒದಗಿಸಿದ್ದರೆ ,ಕನ್ನಡದ ಸನಾದಿ ಅಪ್ಪಣ್ಣ ಹಾಡಿಗೆ ಶೆಹನಾಯಿ ಮಾಂತ್ರಿಕ ಬಿಸ್ಮಿಲ್ಲಾ ಖಾನ್ ನುಡಿದ್ದಾರೆ.

www.youtube.com/watch?v=oDRgGpEwSYw

www.youtube.com/watch?v=mPEXKFcbLsM

ಅಪ್ ಲೋಡರ್ ಗಳಿಗೆ ವಂದಿಸುತ ಹಾಡುಗಳನ್ನು ಆನಂದಿಸಿರಿ.

ಎಸ್ ಜಾನಕಿಯವರು ಕೆಲವು ಶಾಸ್ತ್ರಿಯ ಸಂಗೀತದ ದ್ವನಿ ಸುರುಳಿ ಗಳನ್ನೂ ಹೊರತಂದಿದ್ದಾರೆ. ಇವರ ವೆಬ್ ಸೈಟ್ ನಲ್ಲಿ ವಿವರ ಗಳಿವೆ.