ಬೆಂಬಲಿಗರು

ಸೋಮವಾರ, ಏಪ್ರಿಲ್ 13, 2015

ಇಂಜೆಕ್ಷನ್ ಪುರಾಣವು

                     

ಬಾಲ್ಯದಲ್ಲಿ ವೈದ್ಯರು ಚುಚ್ಚುಮದ್ದು ಕೊಡುವುದನ್ನು  ಭಯಮಿಶ್ರಿತ  ಕುತೂಹಲ 

ದಿಂದ ನೋಡುತ್ತಿದ್ದೆವು .ಬಿಸಿನೀರ ಪಾತ್ರೆಯಿಂದ  ಇಕ್ಕುಳದ ಸಹಾಯದಿಂದ 

ಗಾಜಿನ  ಸಿರಿಂಜ್ ತೆಗೆದು ಪಿಸ್ಟನ್ ಸಿಕ್ಕಿಸಿ ಸೂಜಿ ಮೂಲಕ ಔಷಧಿ ಲೋಡ್ 

ಮಾಡಿ ಕೊಡುವುದು  ದೊಡ್ಡ ಅದ್ಭುತ ಕೆಲಸ  ಎನಿಸುತ್ತಿತ್ತು .

ಮುಂದೆ  ವೈದ್ಯಕೀಯ ವ್ಯಾಸಂಗ ಕಾಲದಲ್ಲಿ  ಇಂಜೆಕ್ಷನ್ ರೂಂ  ಪೋಸ್ಟಿಂಗ್ ನಲ್ಲಿ 

ನುರಿತ  ಸಿಸ್ಟರ್ ಗಳ  ಸುಪರ್ದಿಯಲ್ಲಿ  ಮೊದಲ  ಚುಚ್ಚುಮದ್ದು ಅಮಾಯಕ  

ರೋಗಿಗೆ ಚುಚ್ಚಿದಾಗ  ಜಗತ್ತನ್ನೇ  ಜಯಿಸಿದ ಅನುಭವ .  ಮಾಂಸ ಖಂಡ ಗಳಿಗೆ 

ಕೊಡುವ ಇಂಜೆಕ್ಷನ್ ಅಷ್ಟು ಕಷ್ಟ ಎನಿಸಲಿಲ್ಲ .ಆದರೆ  ರಕ್ತನಾಳ ಗಳಿಗೆ 

ಚುಚ್ಹುವುದು  ಆರಂಭದಲ್ಲಿ ಸ್ವಲ್ಪ  ತ್ರಾಸ ದಾಯಕ .ಹಲವು ಭಾರಿ  ಎರಡು ಮೂರು 

ಕಡೆ ಚುಚ್ಚ ಬೇಕಾಗುತ್ತಿತ್ತು .ರೋಗಿಗಳು  ನಮಗೆ  ಸಿಸ್ಟರೆ  ಚುಚ್ಚಲಿ 

ನೀವು ಬೇಡ ಎಂದು  ಮುಲಾಜಿಲ್ಲದೆ ಹೇಳುತ್ತಿದ್ದರು .

ಸರಕಾರೀ  ವೈದ್ಯಕೀಯ ಕಾಲೇಜ ಅಸ್ಪತ್ರೆಯ  ಇಂಜೆಕ್ಷನ್  ರೂಮನ್ನು  

ಊಹಿಸಿಕೊಳ್ಳಿ.ನೂರಾರು ರೋಗಿಗಳ  ಕ್ಯೂ.ಹೆಚ್ಚಿನವರು  ಪೆನ್ಸಿಲ್ಲಿನ್  ಇಂಜೆಕ್ಷನ್ 

ಗಾಗಿ.ದಿನಕ್ಕೆ ಇಷ್ಟೆಂದು  ಸ್ಟೋರ್ ನಿಂದ  ಔಷದಿ  ಕೊಡುತ್ತಿದ್ದರು .ಅದು ರಾವಣನ

ಹೊಟ್ಟೆಗೆ ಕಾಸಿನ ಮಜ್ಜಿಗೆ . ಅನಿರೀಕ್ಷಿತವಾಗಿ  ಹೆಚ್ಚು ಅತಿಥಿಗಳು ಬಂದರೆ 

ಸಾರು  ಸಾಂಬಾರು ನೀರು ಸೇರಿಸಿ ಸುಧಾರಿಸುವಂತೆ  ಇಂಜೆಕ್ಷನ್  ವಯಲ್ ಗಳಿಗೆ 

ನೀರು ಜಾಸ್ತಿ ಸೇರಿಸಿ  ಮ್ಯಾನೇಜ್ ಮಾಡುತ್ತಿದ್ದೆವು .ಒಂದು ಎಲೆಕ್ಟ್ರಿಕ್  ಸ್ಟೆರಿಲೈಸರ್

ಕರೆಂಟ್  ಇದ್ದರೆ ಕಾಯಿಲ್ ಸರಿ ಇಲ್ಲ ,ಕಾಯಿಲ್ ಇದ್ದಾಗ  ಕರೆಂಟ್ ಇಲ್ಲ .

ದೇವರನ್ನು ಪ್ರಾರ್ಥಿಸಿ  ಸ್ಟೆರಿಲೈಸರ್ ನಲ್ಲಿ ಇದ್ದ  ನೀರಿನಲ್ಲಿ ಪುಸ್ ಪುಸ್ ಎಂದು 

ಸಿರಿಂಜ್ ಮತ್ತು ಸೂಜಿ ಶುಧ್ಧ ಮಾಡುವುದು .ಸ್ತೆರಿಲೈಸರ್   ನೀರು ಹಲವು 

ಆಂಟಿಬಯೋಟಿಕ್ ಗಳ ಮಿಶ್ರಣ ವಾಗಿರುತ್ತಿತ್ತು .ಅದರಿಂದ  ಇಂಜೆಕ್ಷನ್ 

ಕೀವು ಉಂಟಾಗುತ್ತಿರಲಿಲ್ಲ .ಇನ್ನು ಸೂಜಿ ಗಳು  ಮೊಂಡು.ಮಾಂಸ ಖಂಡಗಳಿಗೆ 

ಚುಚ್ಚುವಾಗ  ಕರ ಕರ ಶಬ್ದ ವಾಗುತ್ತಿತ್ತು .ಅದಕ್ಕೇ  ಒಮ್ಮೆ ಚುಚ್ಚಿಸಿಕೊಂಡ 


ಮಗು  ಇನ್ನೊಮ್ಮೆ  ವೈದ್ಯರನ್ನು ಕಂಡರೆ ದೆವ್ವ ಕಂಡ ರೀತಿ ಕಿರುಚುತಿತ್ತು.

ಈಗ  ಉಪಯೋಗಿಸಿ ಎಸೆಯುವ  ಸಿರಿಂಜ್ ಗಳ ಕಾಲ ,ಬಿಸಿನೀರು ಬೇಡ 

ಇಕ್ಕುಳ ಬೇಡ .ಸುಜಿಯೂ  ಹರಿತ .ಮಕ್ಕಳು ನಮಗೆ ಹೆದರುವುದಿಲ್ಲ ,ಏಕೆಂದರೆ 

ನೋವೇ ಇಲ್ಲ.ಇಲ್ಲದಿದ್ದರೆ ಈಗಿನ  ಅಗಣಿತ  ರೋಗ ಪ್ರತಿಭಂಧಕ  ಚುಚ್ಚುಮದ್ದು

ಗಳನ್ನು  ಮಕ್ಕಳು ಹೇಗೆ ಸಹಿಸುತ್ತಿದ್ದರು .ಖ್ಯಾತ ವೈದ್ಯರೊಬ್ಬರ  ಪ್ರಕಾರ 

ಮಕ್ಕಳ ಸೊಂಟ ಈಗ ಒಂದು ಪಿನ್ ಕುಶನ್ ಆಗಿದೆ .

ಬಾಯಿಯ ಮೂಲಕ ಔಷಧಿ  ಸೇವನೆ ಕಷ್ಟ ವಾದಾಗ ,ಔಷಧಿ  ಹೊಟ್ಟೆಗೆ ಹೋದಾಗ 

ರಾಸಯನಿಕ ಕ್ರಿಯೆಯಿಂದ ನಿಷ್ಕ್ರಿಯ ವಾಗುವುದಿದ್ದರೆ ,ಮತ್ತು ಕೆಲವೊಮ್ಮೆ 

ವೇಗವಾಗಿ  ರೋಗ ಸ್ಥಾನ ವನ್ನು  ಸೇರಬೇಕಾದಲ್ಲಿ  ಇಂಜೆಕ್ಷನ್ ಮುಖಾಂತ ರ 

ಕೊಡುತ್ತಾರೆ .ಇಂಜೆಕ್ಷನ್ ಗೆ ಜಾಸ್ತಿ  ಪವರ್ ಇಲ್ಲ.ಸ್ವಲ್ಪ ಮಟ್ಟಿಗೆ 

ಇಂಜೆಕ್ಷನ್  ಮೇನಿಯ  ವೈದ್ಯರಿಂದ  ಉಂಟಾದುದು.ಇತ್ತೀಚಿಗೆ  ಏಡ್ಸ್ 

ಹೆಪಟೈಟಿಸ್ ಜಾಗೃತಿ ಬಂದ ಮೇಲೆ ಇಂಜೆಕ್ಷನ್  ರೋಗ ಕಮ್ಮಿ ಯಾಗಿದೆ .

ತಮಿಳ್ ನಾಡಿನಲ್ಲಿ  ಇಂಜೆಕ್ಷನ್  ಕೊಡದೆ ಇದ್ದರೆ ರೋಗಿಗಳು 

ಎನ್ನಾ ಸಾರ್ ಇವುಳ ನೋಯಿ ಇರುಕ್ಕುದು ಊಸಿಯೇ ಪೋಡ್ಲೆಯೇ ಎಂದು 

ಗಲಾಟೆ ಮಾಡುವರು .

ನಾನು ವಿದ್ಯಾರ್ಥಿಯಾಗಿದ್ದಾಗ  ಕೆಲವು ಅತಿರಥ ರೋಗಿಗಳು " ಸಾರ್ ನಾವು 

ಸಂಜೆ  ಕುಷಿ ಮಾಡಲು (ವೇಶ್ಯಾ ಸಂಗ )ಹೋಗುವೆವು ,ಒಂದು  ಪೆನಿಸಿಲಿನ್ 

ಇಂಜೆಕ್ಷನ್  ತೆಗೆದು ಕೊಂಡೆ  ಹೋಗುವಾ ಎಂದು ಬಂದೆವು' ಎಂದು ಕೇಳುತ್ತಿದ್ದುದೂ 

ಉಂಟು .
(ಮೇಲಿನ ಚಿತ್ರ ಮೂಲಕ್ಕೆ ಆಭಾರಿ )

ಶುಕ್ರವಾರ, ಏಪ್ರಿಲ್ 10, 2015

ಮಾಂತ್ರಿಕ ವಿಡಂಬನೆಯ ವಿಜಾರ್ಡ್ ಆಫ್ ದಿ ಕ್ರೋ

                                 
                                     

ಆಫ್ರಿಕಾ ನನ್ನನ್ನು ಆವರಿಸಿ ಬಿಟ್ಟಿದೆ .ವಸಾಹತುಶಾಹಿಯಿಂದ ಬಿಡುಗಡೆ 

ಪಡೆದು  ಹೊಸ  ಕನಸುಗಳೊಡನೆ ಜನ್ಮ ತಾಳಿದ ಎಲ್ಲಾ ದೇಶಗಳೂ  ರಾಜಕೀಯ 

ನಾಯಕರ  ಭ್ರಷ್ಟಾಚಾರ,ಸ್ವಜನ ಪಕ್ಷಪಾತ ಮತ್ತು ದೂರ ದೃಷ್ಟಿಯ ಕೊರತೆಯಿಂದ 

ಬಳಲುತ್ತಿರುವ ದುರಂತ ಕತೆಯ ಸಾಕ್ಷಿಯಾಗಿ ಮಾರ್ಪಡುತ್ತಿರುವುದು ವಿಪರ್ಯಾಸ .

ಹೆಚ್ಚು ಕಮ್ಮಿ ಭಾರತದ ಕತೆಯ ಹಾಗೆಯೇ .ಇದಕ್ಕೆ ಅಪವಾದ  ದಕ್ಷಿಣ 

ಆಫ್ರಿಕಾ ದ ನೆಲ್ಸನ್ ಮಂಡೇಲಾ ಮತ್ತು ಸೆನೆಗಲ್ ದೇಶದ ಲೆಪೋಲ್ದ್ ಸೆಡಾ 

ಸೇನ್ಗೊರ್  ರವರ ನಾಯಕತ್ವ ಎನ್ನ ಬಹುದು .

ಬಹಳಷ್ಟು ಭಾರತೀಯರು ನೆಲೆಸಿರುವ ಕೆನ್ಯಾದ ಕತೆಯೂ ಹೀಗೆಯೇ ಇದೆ .

ಭಾರತೀಯ  ಮೂಲದ ಎಂ ಜಿ ವಾಸನ್ಜಿ ರಚಿತ ಇನ್ ಬಿಟ್ವೀನ್ ದಿ ವರ್ಲ್ಡ್ ಆಫ್ 

ವಿಕ್ರಂ ಲಾಲ್ ಸ್ವಾತಂತ್ರೋತ್ತರ ಕೆನ್ಯಾದ ಕತೆಯನ್ನು ಒಂದು ಕೋನದಲ್ಲಿ 

ಚಿತ್ರಿಸಿದ್ದರೆ  ಕೆನ್ಯಾದ ಹೆಸರಾಂತ ಲೇಖಕ  ನುಗಿ ವಾ ತಿಯನ್ಗೋ  ಅವರ 

ಕಾದಂಬರಿ ದಿ ವಿಜ್ಯರ್ದ್ ಆಫ್ ದಿ  ಕ್ರೌ  ಎಂಬ  ವಿಡಂಬನಾತ್ಮಕ  ಕಾದಂಬರಿ 

ದೇಶದ ಚಿತ್ರಣವನ್ನು  ಹೊಸ ಮಾಧ್ಯಮದಲ್ಲಿ ತೆರೆದಿಡುತ್ತದೆ . ಜನತೆಯ 

ಹೋರಾಟದಿಂದ ಅಧಿಕಾರಕ್ಕೆ ಬಂದ ನಾಯಕ ತಾನೇ  ದೇಶ ,ತನಗಾಗಿ ನಾಡು 

 ಎಂಬ ಭ್ರಮೆ ಗೆ  ಈಡಾಗುವುದು, ಪ್ರಜಾಸತ್ತಾತ್ಮಕ ಭಿನ್ನಾಭಿಪ್ರಾಯ ಬಗ್ಗು 

ಬಡಿಯುವುದು ಮತ್ತು  ತನ್ನ ನೆಲೆ ಭದ್ರ ಪಡಿಸುವ ಸಲುವಾಗಿ  ತನ್ನ ಕೆಳಗಿನ 

ಒಬ್ಬ ನಾಯಕನನ್ನು ಇನ್ನೊಬ್ಬನ ಮೇಲೆ ಎತ್ತಿ ಕಟ್ಟುವುದು ಇತ್ಯಾದಿ ಗಳನ್ನು 

ಸೆಟಯಿರ್ (ವಿಡಂಬನೆ ) ರೂಪದಲ್ಲಿ ಚಿತ್ರಿಸಿರುವ ಕಾದಂಬರಿ .ಇದರಲ್ಲಿ 

ಭಾರತ ,ಮಹಾಭಾರತ (ಏಕಲವ್ಯ),ಆಯುರ್ವೇದ , ,ಇಲ್ಲಿಯ ಶಿಕ್ಷಣ ಪದ್ಧತಿ 

ಬಗ್ಗೆಯೂ ಉಲ್ಲೇಖ ಇದೆ.ಮತ್ತೊಂದು ವೈಶಿಷ್ಟ್ಯ ಲೇಖಕ ಉಲ್ಲೇಖಿಸಿರುವ 

ಗಾದೆ ಮತ್ತು ನುಡಿ ಗಟ್ಟುಗಳ ಸರಮಾಲೆ .ಪ್ರತಿಯೊಂದು ಪುಟದಲ್ಲಿಯೂ 

ಸಂಧರ್ಬ್ಹೊಚಿತವಾಗಿ  ಗಾದೆಗಳು ಹರಿದು ಬರುತ್ತವೆ .

ಕಾದಂಬರಿಯ ಕೆಲವು ವಾಕ್ಯಗಳನ್ನು ಇಂಗ್ಲಿಷ್ ನಲ್ಲಿಯೇ ಕೊಡುತ್ತೇನೆ 

ಅಬುರಿರಿಯಾ ಎಂಬ ಕಾಲ್ಪನಿಕ ದೇಶ .ಅದರ ಅಧಿಪ ಇತರ  ದುರ್ಮೊಹ ಗಳೊಡನೆ 

ಸ್ತ್ರೀ ಲೋಲ .ಅವನ ಹೆಂಡತಿ  ರೇಚಲ್ ಅವನಿಗೆ ಪ್ರಶ್ನಿಸುವುದು ಹೀಗೆ .

I know you take the title Father of The Nation seriously, You know


that  i have not complained about all those women who make beds 

for  you ,no matter how many children you sire with them .But 

why school girls ? Are they not as young as the children you have 

fathered ?are they not really your children? You father them today 

and tomorrow turn them into wives?Have you no tears of concern 

for tomorrow ?ಇಷ್ಟು ಕೇಳಿದ್ದಕ್ಕೆ  ತನ್ನ ಹೆಂಡತಿಯನ್ನೇ  ಗೃಹ ಬಂಧನದಲ್ಲಿ  

ಇಡುತ್ತಾನೆ  ನಾಯಕ .ಇಲ್ಲಿಂದಲೇ ಕತೆ ಆರಂಭ .

ನಾಯಕನ ಮಹತ್ವಾಕಾಂಕ್ಷೆಯ ಯೋಜನೆ ಮಾರ್ಚಿಂಗ್ ಟು ಹೆವೆನ್ಸ್ ಎಂಬ 

ಕಟ್ಟಡ .ಇದಕ್ಕೆ  ಗ್ಲೋಬಲ್ (ಓದಿ ವರ್ಲ್ಡ್ ಬ್ಯಾಂಕ್ )ಬ್ಯಾಂಕ್ ನ  ಅರ್ಥಿಕ ನೆರವು 

ಕೋರುತ್ತಾರೆ .ಯೋಜನೆ ಆರಂಭವಾಗುವುದಕ್ಕೆ ಮೊದಲೇ ಅದರ ನಿಯೋಜಿತ 

ಮುಖ್ಯ ಅಧಿಕಾರಿಗೆ  ಲಂಚ ದ ಅರ್ಚನೆ ಆರಂಭವಾಗುತ್ತದೆ .ಗ್ಲೋಬಲ್ ಬ್ಯಾಂಕ್ ನ 

ಪ್ರತಿನಿಧಿಗಳು  ತಂಗಿರುವ ಹೋಟೆಲ್ ಬಳಿ ಭಿಕ್ಷುಕರ ಹಾವಳಿ .ಅದನ್ನು 

ಆಢಳಿತ ಅಧಿಕಾರಿ ತನ್ನ ಕಾರ್ಯದರ್ಶಿಗೆ  ಹೇಳುವ ರೀತಿ 

'These beggars are too much ,I don't know what should be done 

with them.How dare they stretch out their hands at the very same 

place where our own government was  ... He was going to say 

'stretching out their hands".


ಇನ್ನೂ ಕೆಲವು ವಾಕ್ಯಗಳು 

We oppose the right of might with might of right.

What kind of property is so precious that i would be willing

to sacrifice my daughter to save it?

One editor told her that the disappearance of an adult was not news 

he could use.

In any case ,in Alburiria justice ends up in pockets of highest bidder.

Yet the wealthier they became ,the greater dispiritedness as they 

entered into discords that intensified into domestic violence.

ನಾಯಕನ ರಾಜಕೀಯ ಸಿದ್ದಾಂತ .ಹೀಗಿದೆ 

 What was not important in any given country was not the quantity 

of political parties but character of the person who personified

the head ,heart,arms and legs  of the state .There are no moral

limits that a ruler can use ,from lies to lives .bribes to blows

in order to ensure that his state is stable and his power is secure.But

if he could keep the state stable through sacrificing truth rather 

than lives.bending rather than breaking law ,sealing the lips of 

outspoken with endless trickeries  rather than tearing them with 

barbed-wire and hot wax ,if he could buy peace through 

grand deception rather than a vast display of armored vehicles in 

the streets ,which often gave his enemies material for propaganda

,it would be sweetest of victories.











ಸೋಮವಾರ, ಏಪ್ರಿಲ್ 6, 2015

ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು

                 ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು

ಮಳೆಯ ಬೇಸರ ಕಳೆಯಲು  ಕತೆಯೊಂದನ್ನು ಹೇಳುವಂತೆ  ಕೇಳಿದ

 

ಮನೋರಮೆ ಸಂಸ್ಕೃತ ದಲ್ಲಿ  ಕಾವ್ಯ ವಾಚನ ಮಾಡಿದ ಮುದ್ದಣ್ಣನಿಗೆ

 

ಹೇಳಿದ ಮಾತು .ಅಂದರೆ ಸಾಧಾರಣ ಅಕ್ಷರ ಜ್ಞಾನವುಳ್ಳ ತನಗೆ ಸರಳ ಕನ್ನಡ

 

ವೇ ಅರಗಿಸಲು ಕಷ್ಟ ವಿರುವಾಗ  ಸಂಸ್ಕೃತ ಯಾಕೆ ?

 

       ಆದರೆ  ಅಕಲೆಸಿಯ ಕಾರ್ಡಿಯಾ  ಎಂಬ ಅಪರೂಪದ ಕಾಯಿಲೆಯಲ್ಲಿ

 

ಗಂಟಲಲ್ಲಿ ನೀರು ಇಳಿಯದು.ಅದರೆ ಕಡುಬು ಇಳಿಯುವುದು .ಅನ್ನ ನಾಳ

 

ಮತ್ತು ಜಠರದ ನಡುವೆ  ಒಂದು ಕವಾಟ ಇದೆ .ಇದು ಸರಿ ಇಲ್ಲದಿದ್ದರೆ ಈ

 

ಪರಿಸ್ತಿತಿ ಬರುವುದು .

 

  ಅನ್ನನಾಳದಲ್ಲಿ ಗಡ್ಡೆ ಬೆಳೆದರೂ  ನುಂಗಲು ಕಷ್ಟ ,ಆದರೆ ಇಲ್ಲಿ ಘನ

 

ಆಹಾರ ಇಳಿಯದು,ದ್ರವ  ಇಳಿಯ ಬಹುದು .ಕೆಲವು ಭಾರಿ  ಮೆದುಳಿನ

 

ಅಥವಾ   ಅನ್ನನಾಳದ ನರಗಳು ದುರ್ಬಲಗೊಂಡು ನುಂಗುವುದು

 

ಕಷ್ಟ ವಾಗುವುದು .ಇಂತಹ ಸಂದರ್ಭ ರೋಗಿಗೆ ಬಾಯಲ್ಲಿ ತಿನ್ನಲು

 

ಅಥವಾ  ಕುಡಿಯಲು ಕೊಟ್ಟರೆ  ಅದು  ಹೊಟ್ಟೆಗೆ ಹೋಗುವ ಬದಲು

 

ಶ್ವಾಸಕೋಶ ಕ್ಕೆ  ಹೋಗಿ ಕೆಮ್ಮು ಮತ್ತು ದಮ್ಮು ಉಂಟಾಗುವುದು .

 

ಇದಕ್ಕೆ  ಪುನಃ ಬಾಯಲ್ಲಿ ಕೆಮ್ಮಿನ ಔಷಧಿ ಕೊಟ್ಟು ಪ್ರಯೋಜನ ಇಲ್ಲ .

 

ಬದಲಾಗಿ ಕೆಮ್ಮು ಇನ್ನೂ ಹೆಚ್ಚುವುದು . ಇದನ್ನು ಕಫ ಎಂದು ಭಾವಿಸಿ 

 

ಚಿಕಿತ್ಸೆ ಮಾಡಿಸುವರು ,ಅದು ಸರಿಯಲ್ಲ   ಇಂತಹ ಸಂದರ್ಭ ದಲ್ಲಿ ಟ್ಯೂಬಿನ

 

ಮೂಲಕ ಆಹಾರ ಕೊಡಬೇಕು .ಇಲ್ಲವೇ  ಹೊಟ್ಟೆಯ ಮೇಲೆ ಒಂದು

 

ರಂಧ್ರ ಮಾಡಿ ನೇರ  ಜಠರ ಕ್ಕೆ  ಆಹಾರ ಕೊಡಬೇಕಾಗುವುದು ..

 

           ಔಷಧಿ  ಕಂಪೆನಿಗಳ ಪ್ರತಿನಿಧಿಗಳು ತಮ್ಮ ಮಾತ್ರೆಗಳು ಬೇರೆ ಕಂಪೆನಿಗಳಿಗೆ  ಹೊಲಿಸಿದರೆ  ಗಾತ್ರದಲ್ಲಿ ಬಹಳ ಸಣ್ಣದಾಗಿದ್ದು ನುಂಗಲು ಬಲು ಸುಲಭ ಎನ್ನುವರು .ನನ್ನ ಮೇಲೆ ಅದು ಪ್ರಭಾವ ಬೀರುವುದಿಲ್ಲ .ಮಾತ್ರೆ  ತುಂಬಾ ಸಣ್ಣ ಇದ್ದರೆ ನುಂಗಲು ಕಷ್ಟ  ,ಅಲ್ಲದೆ ಅದು  ಗಂಟಲಿನ ಬದಿಯಲ್ಲಿ ಸಿಕ್ಕಿಕೊಂಡಂತೆ  ಆಗುವುದು.ನೀವು  ಒಂದು  ಕಾಳು ಅಕ್ಕಿ ಮತ್ತು ಒಂದು ತುಂಡು ಇಡ್ಲಿ ತಿಂದು ನೋಡಿರಿ .ಯಾವುದು ಸುಲಭವಾಗಿ ಇಳಿಯುವುದು ?ಇದರಲ್ಲಿ ಗುರುತ್ವಾಕರ್ಷಣ ವೂ  ಭಾಗಶಃ ಕೆಲಸ  ಮಾಡುವುದು .

 

     

 

 

 

ಶನಿವಾರ, ಏಪ್ರಿಲ್ 4, 2015

ಬ್ರಾಹ್ಮಣ ನೆಂದರೆ ಯಾರು ?

          ಬ್ರಾಹ್ಮಣ ನೆಂದರೆ ಯಾರು ?
 
ಮಹಾಭಾರತದ ವನ ಪರ್ವದಲ್ಲಿ ಬರುವ ಕತೆ.ಭೀಮನನ್ನು  ಕಾಡಿನಲ್ಲಿ ಶಾಪದಿಂದ 

ಹೆಬ್ಬಾವು  ರೂಪದಲ್ಲಿ ಇರುವ ನಹುಷ ಆಕ್ರಮಿಸಿ ಹಿಡಿದು  ಸುತ್ತಿ ಕೊಳ್ಳುವನು,ಬಲ 

ಭೀಮನಿಗೂ ಅವನಿಂದ ಬಿಡಿಸಿ ಕೊಳ್ಳಲು ಆಗುವುದಿಲ್ಲ .ಆಗ ತಮ್ಮನನ್ನು ಹುಡುಕಿ 

ಕೊಂದು ಬಂದ ಧರ್ಮರಾಯ ನಿಗೆ ತನ್ನ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ 

ಕೊಟ್ಟರೆ ತಮ್ಮನನ್ನು ಬಿಡುವುದಾಗಿ ನಹುಷ ಹೇಳುವನು .

ನಹುಷ : ಯಾರನ್ನು ಬ್ರಾಹ್ಮಣ ಎಂದು ಕರೆಯುತ್ತೇವೆ ?

ಧರ್ಮರಾಯ :ಸತ್ಯವಂತ ,ದಯವಂತ ,ದಾನಶೀಲ ,ಕ್ಷಮೆ  ಮತ್ತು  ಸ್ವಯಂ  ಮನ 

ಹತೋಟಿ ಇರುವವನು ಬ್ರಾಹ್ಮಣ .

ನಹುಷ :ಆದರೆ ಇದು  ಚಾತುರ್ವರ್ಣ ಪದ್ಧತಿ ಗೆ ವಿರುದ್ದವಾಯಿತು .ಈ ಗುಣಗಳು 

 ಶೂದ್ರನಲ್ಲಿಯೂ ಇರ ಬಹುದು ಸದ್ಗುಣಗಳು ಯಾವದೇ  ಜಾತಿಯ ಸೊತ್ತಲ್ಲ .

ಧರ್ಮರಾಯ :ನಿಜ .ಬ್ರಾಹ್ಮಣನಾಗಿ ಹುಟ್ಟಿದರೂ ಸದಾಚಾರ ,ಸದ್ಗುಣ ಇಲ್ಲದಿದ್ದರೆ 

ಅವನು ಶೂದ್ರನೆ .ಅದೇ ಮೇಲೆ ಹೇಳಿದ ಒಳ್ಳೆಯ ಗುಣಗಳನ್ನು ರೂಡಿಸಿ ಕೊಂಡ

ಯಾರೇ ಬ್ರಾಹ್ಮಣ ಎನಿಸಿಕೊಳ್ಳುವನು .




ಭಗವದ್ಗೀತೆ  ಯ ೧೮ ನೆ ಅಧ್ಯಾಯ ದ ೪೨ ನೆ ಶ್ಲೋಕದಲ್ಲಿ   ಇದನ್ನೇ ಹೇಳಲಾಗಿದೆ .
ಶಾಂತ ಪ್ರಕೃತಿ  ಸ್ವಯಂ ಶಾಸನ ,ಸರಳ ಜೀವನ ,ಶುದ್ದಾಂತಃ ಕರಣ .ಕ್ಷಮೆ 
ಪ್ರಾಮಾಣಿಕತೆ ,ಜ್ಞಾನದಾಹ ಮತ್ತು  ಧಾರ್ಮಿಕತೆ ಇದ್ದವನು ಬ್ರಾಹ್ಮಣ .

 

ಹಿರಿಯ ಬಾಳು ಬಾಳಿದ ಸರಳ ಜೀವಿಗಳು

ನಿನ್ನೆಯ ಪ್ರಜಾವಾಣಿ ಪತ್ರಿಕೆಯಲ್ಲಿ ರಾಮಚಂದ್ರ ಗುಹಾ ಇತ್ತೀಚಿಗೆ ನಿಧನರಾದ 

 ನಾರಾಯಣ್ ದೇಸಾಯಿ ಬಗ್ಗೆ ಬರೆದಿದ್ದರು .ಗಾಂಧೀಜಿಯವರ  ಆಪ್ತ ಕಾರ್ಯದರ್ಶಿ 

ಯಾಗಿದ್ದ  ಮಹಾದೇವ ದೇಸಾಯಿ ಅವರ ಪುತ್ರ .ಕೊನೆ ತನಕ ಗಾಂಧಿ ವಾದಿ 

ಯಾಗಿಯೇ ಬದುಕಿದವರು .ಗಾಂಧಿ ಬಗೆಗಿನ ಸೆಮಿನಾರ್ ಒಂದಕ್ಕೆ ದೆಹಲಿಗೆ 

ಬಂದಿದ್ದ ಗಣ್ಯರು ಕೊನೆ ದಿನ ವಿಮಾನ ಪಯಣದ ಟಿ ಎ ತೆಗೆದು ಕೊಳ್ಳುವ 

ಧಾವಂತ ಈ ಮನುಷ್ಯ ತಾನು ರೈಲಿನಲ್ಲಿ ಬಂದುದಾಗಿಯೂ ,ನನ್ನ ಮನೆಗೆ 

ಹೋಗಲು ನನಗೆ ಬೇರೆ ಹಣದ ಅವಶ್ಯ ಇಲ್ಲ ಎಂದು ಹೇಳಿದರು ಎಂದು ಬರೆದಿದ್ದಾರೆ .

ಸರಳ  ಜೀವನವನ್ನು  ತಮ್ಮ ಸಹಜ ಶೈಲಿ ಯಾಗಿ ಮಾಡಿಕೊಂಡ ಮಹನೀಯರು .

                        ಇದನ್ನು ಓದುವಾಗ ನನಗೆ ನಮ್ಮವರೇ ಆದ ಎಚ್ ನರಸಿಂಹಯ್ಯ 

ಅವರ ನೆನಪಾಯಿತು .ಅವರು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಗಿದ್ದಾಗ 

ರಾಜ್ಯದಾದ್ಯಂತ  ಸಂಚರಿಸ ಬೇಕಿತ್ತು .ಸರಕಾರದ ಸಚಿವ ಸಮಾನ ಹುದ್ದೆ .ಆದರೂ 

ಅವರು ರೈಲಿನ ಎರಡನೇ ದರ್ಜೆಯಲ್ಲಿ ಸಂಚರಿಸಿ  ಅದೇ ದರ್ಜೆಯ  ಪ್ರಯಾಣ ಭತ್ತೆ 

ಪಡೆದರು .ಅಲ್ಲದೆ ತಮ್ಮ ಕಚೇರಿಗೆ ಬರುತ್ತಿದ್ದ ವೃತ್ತ ಪತ್ರಿಕೆಗಳ ಹಳೆಯ 

ಪ್ರತಿಗಳನ್ನು ಮಾರಿ ಸರಕಾರದ ಖಜಾನೆಗೆ ಪಾವತಿಸುತ್ತಿದ್ದರು .ಈ ವಿಷಯಗಳ 

ಬಗ್ಗ್ಗೆ ಅವರ ಜೀವನ ಚರಿತ್ರೆ ಹೋರಾಟದ ಬದುಕು ವಿನಲ್ಲಿ  ಬರೆದಿರುವರು .


                    ಲಾಲ್ ಬಹಾದುರ್ ಶಾಸ್ತ್ರೀಯವರೂ ಹೀಗೆಯೇ ಬದುಕಿದವರು .

ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ  ಮಂಗಳೂರಿಗೆ ಆಗಮಿಸಿದ್ದರು .ಆ ಸಮಯ 

ಕದ್ರಿ ಯ ಪ್ರವಾಸಿ ಬಂಗಲೆಯ  ಸಾಧಾರಣ  ಕೋಣೆಯಲ್ಲಿ ಉಳಕೊಂಡು  ಅಲ್ಲಿ 

ಇದ್ದ  ವಾತಾನುಕೂಲ  ಕೋಣೆಯನ್ನು ಬಂದಿದ್ದ ರಾಜ್ಯದ ಮುಖ್ಯ ಮಂತ್ರಿ 

ನಿಜಲಿಂಗಪ್ಪನವರಿಗೆ ಬಿಟ್ಟು ಕೊಟ್ಟರು .ಈ ಬಗ್ಗೆ ಆಗ  ಜಿಲ್ಲೆಯ ಜಿಲ್ಲಾಧಿಕಾರಿ 

ಯಾಗಿದ್ದು ಮುಂದೆ ಸರ್ಕಾರದ ಕಾರ್ಯದರ್ಶಿಯಾಗಿ ನಿವೃತ್ತರಾದ  ಶ್ರೀ 

ರಾಮಚಂದ್ರನ್ ಅವರು ತಮ್ಮ  ವೃತ್ತಿ ಜೀವನ ಚಿತ್ರ ತಾಬೇದಾರಿ ಯಲ್ಲಿ  

ಉಲ್ಲೇಖಿಸಿದ್ದಾರೆ .

ಇಂತಹವರು ಈಗ ಬಹಳ ಅಪರೂಪ ಆಗುತ್ತಿದ್ದಾರೆ .ಸರಳತೆಯ ಭೋಧನೆ 

ಮಾಡುವವರು ಸ್ವಯಂ ಐಶಾರಮ ಜೀವನ ನಡೆಸುತ್ತಿದ್ದಾರೆ.ಸರಕಾರಿ ನೌಕರರೂ 

ಸಮಾಜದ ಹಣವನ್ನು ಬೇಕಾಬಿಟ್ಟಿ ಬಳಸುತ್ತಿದ್ದಾರೆ .ಸಮಾಜದ ಕೊನೆಯ ವ್ಯಕ್ತಿ 

ಕೂಡ ಗೌರವಾನ್ವಿತ ವಾಗಿ ಬದುಕುವ ಸನ್ನಿವೇಶ ಬರುವ ವರೆಗೂ ಉಳ್ಳವರು 

ತಮ್ಮ ಐಶ್ವರ್ಯ ಪ್ರದರ್ಶನ ಮಾಡುವುದು ಮಾನವಿಯತೆಗೂ ಸಮಾಜದ 

ಸ್ವಾಸ್ಥ್ಯಕ್ಕೂ ಒಳ್ಳೆಯದಲ್ಲ .


ಗುರುವಾರ, ಏಪ್ರಿಲ್ 2, 2015

ಆಶಿರ್ವಾದವೇ ಉಡುಗೊರೆ

ಇತ್ತೀಚಿಗೆ ಆಮಂತ್ರಣ ಪತ್ರಿಕೆಗಳಲ್ಲಿ   ಆಶಿರ್ವಾದವೇ ಉಡುಗೊರೆ  , ಪ್ರೆಸೆಂಟ್ಸ್ 

ಇನ್  ಬ್ಲೆಸ್ಸಿ೦ ಗ್ಸ್  ಓನ್ಲಿ ಇತ್ಯಾದಿಯಾಗಿ ಎಚ್ಚರಿಸುವುದು  ಸಾಮಾನ್ಯವಾಗಿದೆ. 

ಆಹ್ವಾನಿತರು ಉಡುಗೊರೆ ಕೊಡಬೇಕಲ್ಲಾ ಎಂದು ಚಿಂತಿಸಿ ಮದುವೆಗೆ ಹೋಗದೇ

ಇರುವುದು ಬೇಡ ಎಂಬ ಸದಾಶಯ ಇರ ಬಹುದು .ನಮ್ಮ ಮನೆಯಲ್ಲಿಯೇ ಬೇಡದ 

ಬಟ್ಟೆ ತಟ್ಟೆ ಗಡಿಯಾರಗಳು ತುಂಬಿವೆ ಇನ್ನು ನೀವೂ ಇನ್ನಷ್ಟು ಕೊಟ್ಟರೆ  ಏನು 

ಮಾಡುವುದು ? ಎಂಬ ಚಿಂತೆಯೂ ಇದರ ಹಿಂದೆ ಇರ ಬಹುದು .ಏನೇ ಇರಲಿ .

       ಕೆಲವು ಇಂಗ್ಲಿಷ್ ಆಮಂತ್ರಣ ಪತ್ರಿಕೆಯಲ್ಲಿ  ಅರ್ ಎಸ್ ವಿ ಪಿ .(RSVP) 

ಎಂದು ಬರೆದಿರುತ್ತಾರೆ .ಇದು ಫ್ರೆಂಚ್ ನುಡಿಗಟ್ಟು ಒಂದರ ಅಪಭ್ರ೦ಶ.ಅಂದರೆ 

ಸಾಧ್ಯವಾದರೆ ಈ ಪತ್ರಕ್ಕೆ ಉತ್ತರಿಸಿರಿ .ಎಂದರೆ ನೀವು  ಬರುತ್ತೀರೋ ಇಲ್ಲ್ಲವೋ 

ತಿಳಿಸಿ .ಅದರ ಪ್ರಕಾರ  ಅತಿಥೇಯರು ಔತಣ ಏರ್ಪಡಿಸುವರು .ನಮ್ಮಲ್ಲಿ  ಈ

ಪದ್ಧತಿ ಇದ್ದರೆ ಎಷ್ಟೋ ಆಹಾರ ಪದಾರ್ಥ ನಷ್ಟ ವಾಗುವುದನ್ನು ತಪ್ಪಿಸ ಬಹುದು .

ಖ್ಯಾತ ಲೇಖಕ ರೊಬ್ಬರು ತನ್ನ ಏಳಮೆಯಲ್ಲಿ  RSVP ಯನ್ನು ರಸಂ ಸಾಂಭಾರ್ 

ವಡೆ ಪೊಂಗಲ್ ಎಂದು ಮೆನು ಇರಬೇಕು ಎಂದು ಭಾವಿಸಿದ್ದಾಗಿ  ತಮ್ಮ  ಆತ್ಮ 

ಚರಿತ್ರೆಯಲ್ಲಿ ಬರೆದಿದ್ದಾರೆ . 

ಇನ್ನು ಕೆಲವು ಆಮಂತ್ರಣ ಪತ್ರಿಕೆಯಲ್ಲಿ  ವಿಷಾದಿಸುವುದಿದ್ದರೆ  ಮಾತ್ರ ಉತ್ತರಿಸಿ 

ಎಂದು ಬರೆದಿರುತ್ತಾರೆ .ರಿಪ್ಲೈ ಇಫ್  ರಿಗ್ರೆಟ್ಸ್.ಎಂದರೆ  ನಿಮಗೆ ಬರಲು 

ಅನಾನುಕೂಲವಿದ್ದಲ್ಲಿ  ಮಾತ್ರ ಉತ್ತರಿಸಿರಿ .ಅಂದರೆ ನಿಮ್ಮಿಂದ ಪ್ರತಿಕ್ರಿಯೆ 

ಬರದಿದ್ದಲ್ಲಿ  ಭೋಜನ  ಲೆಕ್ಕ ಕ್ಕೆ ನಿಮ್ಮನ್ನೂ  ಸೇರಿಸಲಾಗುವುದು ಎಂದರ್ಥ .ಅಲ್ಲ 

ಅವರ ಮಗಳಿಗೋ ಮಗನಿಗೋ ಮದುವೆ ಆದರೆ ನೀವೇಕೆ ವಿಷಾದಿಸ ಬೇಕು 

ಎಂದು ಚಿಂತೆ ಮಾಡ ಬೇಡಿ .

 ಆಯಿತು  ನೀವು ಆಮಂತ್ರಣ ಬಂತು ಎಂದು  ನೀವು  ಮುಹೂ ರ್ಥ ಕ್ಕೆ ಸರಿಯಾಗಿ 

ಹೋದರೆ  ಎಲ್ಲರೂ ಮೇಲೆ ಕೆಳಗೆ ನೋಡುವರು .ನಿಮ್ಮ ಪ್ರತಿಷ್ಠೆ  ಉಳಿಯ 

ಬೇಕಾದರೆ  ಭೋಜನ ವೇಳೆ ತೆರಳಿ ಮದು ಮಕ್ಕಳಿಗೆ  ಶುಭ ಹಾರೈಸುವ  ಶಾಸ್ತ್ರ 

ಮಾಡ ಬೇಕು .ಅಲ್ಲಿಯೂ ನಿಮ್ಮಂತೆ ಬಂದವರ ಉದ್ದ  ಕ್ಯೂ ಇರುವುದು .ಕೆಲವು 

ಬುದ್ದಿವಂತರು ಸಿನೆಮಾ   ಹಾಲ್  ,ರೈಲ್ವೆ ಟಿಕೆಟ್ ಕೌಂಟರ್ ನಲ್ಲಿ ಮಾಡಿದಂತೆ 

 ಇಲ್ಲೂ  ಕ್ಯೂ ಜಂಪ್ ಮಾಡುವರು .ಅಂತೂ ನಿಮ್ಮ ಸರದಿ ಬರುವಾಗ ನಿನಗಿಂತ 

ಮೊದಲು   ಬಂದ  ವಿ ಆಯ ಪಿ ಯವರ ವೀಡಿಯೊ ಆಗುತ್ತಿರುತ್ತದೆ .ನಿಮ್ಮನ್ನು 

ಎಲ್ಲರೂ ಬದಿಗೆ ತಳ್ಳುವರು .ಬೇಸರ ಮಾಡ ಬೇಡಿ .ಒಳ್ಳೆಯ ಊಟ ನಿಮಗಾಗಿ 

ಕಾದಿರುತ್ತದೆ .

ಒಂದು ಪ್ರಸಿದ್ದ ಉದ್ಯಮಿಯ ಮಗನ ಮದುವೆಗೆ ಹೋಗಿದ್ದೆ .ಇದ್ದ ಬದ್ದವರಿಗೆಲ್ಲ್ಲಾ 

ಆಮಂತ್ರಣ ಕೊಟ್ಟಿದ್ದರು .ಮದು ಮಕ್ಕಳಿಗೆ  ಹಾರೈಸಲು  ಹೋದಾಗ  ತಂದೆ 

ತಾಯಿ ಯಥಾ ಪ್ರಕಾರ ಊಟ ಮಾಡಿಯೇ ಹೋಗಿ ಎಂದರು .ಕೆಳಗೆ  ಭೋಜನ 

ಶಾಲೆಗೆ ಹೋದರೆ  ಎಲ್ಲಾ ಖಾಲಿ .ಹಸಿದು ಕೊಂಡೆ ಮನೆಗೆ ಮರಳಿದೆವು .

 ಇದಕ್ಕೆ ಪರಿಹಾರ ಮೊದಲು ಊಟಕ್ಕೆ ಹೋಗುವುದು .ಹೇಗೂ ವೀಡಿಯೊ  ದಲ್ಲಿ 

ನೀವು ಊಟ ಮಾಡುವ ಚಿತ್ರ ನಿಮ್ಮ ಹಾಜರಿಯನ್ನು  ಸಾಕ್ಷಿಕರಿಸುತ್ತ್ತದೆ .

                           ಮೊದಲು ನಮ್ಮ ಕಡೆ ಮದುವೆ ಮನೆಯಲ್ಲಿ  ಅಡಿಕೆ 

ಭತ್ತ ಬೆಳೆಯ ಬಗ್ಗೆ  ,ಕುಟುಂಬ ದವರ ಆರೋಗ್ಯದ ಬಗ್ಗೆ  ಉಭಯಕುಶಲೋಪರಿ

ನಡೆಯುತ್ತಿತ್ತು .ಈಗ   ಸಿ ಇ ಟಿ., ಕ್ಯಾಂಪಸ್ ಅಗಿದೋ ,ಅಮೇರಿಕಾ ಬಾಳಂತನ

ಇತ್ಯಾದಿಗಳು  ಮೇಲಿನ ವಿಷಯಗಳ ಜಾಗ ಆಕ್ರಮಿಸಿವೆ .ಅಜ್ಜ ಅಜ್ಜಿಯವರಿಗೆ 

ಹಿಂದಿನ ಹಾಗೆ ಅಗ್ರ ಮಣೆ   ಕಾಣೆಯಾಗಿದೆ .. 
         

ನಿಮಗೆ ಅನಿಸಿದೆಯೋ ಗೊತ್ತಿಲ್ಲ ,ಹಲವು  ಕಾರ್ಯಕ್ರಮಗಳಿಗೆ  ಹೋಗಿ ಬಂದ 

ಮೇಲೆ  ಅಲ್ಲಿ ಹೋಗದಿದ್ದರೂ  ನಡೆಯುತ್ತಿತ್ತು  ಎಂದು ಅನಿಸುತ್ತದೆ .ಕೆಲವು 

ಕಡೆ ನಮ್ಮ ಅದೃಷ್ಟ ಒಳ್ಳೆಯದಿದ್ದರೆ  ಇಲ್ಲಿಗೆ ಬಾರದಿದ್ದರೆ ಎಷ್ಟು ಕಳೆದು ಕೊಳ್ಳುತ್ತಿದ್ದ್ದೆ 

ಎಂದೂ ತೋರಿದ್ದುಂಟು .





ಬುಧವಾರ, ಏಪ್ರಿಲ್ 1, 2015

ಪುಸ್ತಕ ಪ್ರೇಮಿ ನವಕರ್ನಾಟಕ ದ ವಿಶ್ವನಾಥರು

                                             
                                             

ಒಂದು ಪುಸ್ತಕ ದ ಅಂಗಡಿ .ಶಾಲೆಯ ಅಧ್ಯಾಪಕಿ ಒಬ್ಬರು  ಬಂದು ನಿಮ್ಮಲ್ಲಿ 

ಕುವೆಂಪು ಅವರ ನನ್ನ ಮನೆ ಕವನ ಇರುವ ಪುಸ್ತಕ ಇದೆಯೇನ್ರಿ  ಎಂದು  

ಹುಡುಗನನ್ನು ವಿಚಾರಿಸಿದರು .ಶಾಲೆಯ ಕಾರ್ಯಕ್ರಮಕ್ಕೆ ಆ ಹಾಡು ಅವರಿಗೆ 

ಬೇಕಿತ್ತು .ಅದು ಯಾವ ಸಂಕಲನದಲ್ಲಿದೆ ಎಂಬುದು ಅವರಿಗೆ ಗೊತ್ತಿಲ್ಲ .ಅಂಗಡಿ 

ಹುಡುಗ ಸ್ವಲ್ಪವೂ ಬೇಸರ ತೋರಿಸದೆ ಒಳಗಡೆ ಪುಸ್ತಕ ರಾಶಿಗಳನ್ನು ಹುಡುಕಿ 

ಒಂದು ಕವನ ಸಂಕಲನ ತಂದು ಅವರ ಕೈಯ್ಯಲ್ಲಿ ಇಟ್ಟ.ಟೀಚರ್  ಗೆ 

ಸಂತೋಷ .

ಇನ್ನೊಂದು ಸನ್ನಿವೇಶ .ಮಂಗಳೂರಿನ ಒಂದು ದೊಡ್ಡ ವಾಚನಾಲಯ .ತ್ಯಾಗವೀರ

ಕಾರ್ನಾಡ್ ಸದಾಶಿವ ರಾಯರ ಬಗ್ಗೆ  ಪುಸ್ತಕ ಬೇಕಿತ್ತು . ವಾಚನಾಲಯದ 

ಡೆಸ್ಕ್ ನಲ್ಲಿ  ಕುಳಿತ ವ್ಯಕ್ತಿ ಅವರ ಹೆಸರೇ ಕೇಳಿರಲಿಲ್ಲ .ಆಮೇಲೆ ಅನ್ಯಮನಸ್ಕನಾಗಿ 

ಅಲ್ಲಿ   ರೇಕ್ ನಲ್ಲಿ ನೋಡಿ ಇದ್ದರೂ ಇರಬಹುದು ಎಂದು ಕೈ ತೊಳೆದು 

ಕೊಂಡರು .ಪುಸ್ತಕ ಕಪಾಟು ಗಳು  ಧೂಳು ಮಾಯ ಮತ್ತು  ಯಾವುದೂ 

ಸೂಚಿತ  ಕ್ರಮದಲ್ಲಿ ಇಲ್ಲ . 

ಇನ್ನೊಂದು  ಪ್ರಸಿದ್ದ  ಪುಸ್ತಕ ಅಂಗಡಿ .ನೀವು  ಯಾವುದೋ ಪುಸ್ತಕ  ಕೇಳುತ್ತೀರಿ.

ಅಲ್ಲಿ ಎಲ್ಲಿಯಾದರೂ ಇರ ಬಹುದು ನೋಡಿ ಎನ್ನುತ್ತಾರೆ ಮಾಲಕ .

ಇದು ಮೂರೂ ನಾನು ಸ್ವಯಂ ಅನುಭವಿಸಿದವನು .ಮೇಲಿನ  ಮೊದಲಿನ 

ಅನುಭವದ  ವ್ಯಕ್ತಿ  ಮಂಗಳೂರಿನ  ಕೆ ಎಸ ರಾವ್ ರಸ್ತೆಯ  ನವಕರ್ನಾಟಕ  ಪುಸ್ತಕ 

ಅಂಗಡಿಯ  ಉದ್ಯೋಗಿ  ಶ್ರೀ ವಿಶ್ವನಾಥ ಅವರು .ತನ್ನ ಕೆಲಸವನ್ನು 

ಅತಿಯಾಗಿ ಪ್ರೀತಿಸುವ  ಇವರು ಸ್ವತಃ  ಒಳ್ಳೆ ಓದುಗ .ಪತ್ರಿಕೆಗಳಲ್ಲಿ 

ಬರುವ ಪುಸ್ತಕ ವಿಮರ್ಶೆ ,ಚುಕ್ಕು ಬುಕ್ಕು .ಕಾಂ ನಂತಹ ಬ್ಲಾಗ್ ಗಲ್ಲಿ ಬರುವ 

ಮಾಹಿತಿ  ಇತ್ಯಾದಿಗಳನ್ನು ಓದಿ ,ಪುಸ್ತಕಗಳನ್ನು ಸಾಧ್ಯವಿದ್ದಷ್ಟು ಓದಿ 

ಒಳ್ಳೆಯ ಪುಸ್ತಕ ಯಾವುದು ,ಅಲ್ಲದೆ  ಓದುಗರ ಅಭಿರುಚಿ ಗೆ ಅನುಗುಣ 

ವಾದ  ಕೃತಿ ಯಾವುದು ಎಂದು ಸ್ವಲ್ಪ ಮಟ್ಟಿಗೆ ಅಧಿಕಾರ ಪೂರ್ವಕ ಹೇಳಬಲ್ಲರು .

ಗ್ರಾಹಕ ಎಷ್ಟು ಪುಸ್ತಕ ಮಗುಚಿ ಹಾಕಿದರೂ ಅವರಿಗೆ ಬೇಸರ ಇಲ್ಲ ,ಬದಲಾಗಿ 

ನಿಮ್ಮ ಅಭಿರುಚಿಯ ವಾಸನೆ ಅವರಿಗೆ ಸಿಕ್ಕರೆ  ಅವರೇ ಮೂಲೆ ಮೂಲೆಗಳಿಂದ 

ಐದಾರು ಪುಸ್ತಕ ತಂದು ತೋರಿಸುವರು .ಮಂಗಳೂರು ಪರಿಸರದ 

ಬರಹಗಾರರು  ಇವರಿಗೆ ಪರಿಚಿತ .ಸಂಗೀತ ಪ್ರಿಯರೂ ಆಗಿರುವ ವಿಶ್ವನಾಥರು 

ಅದರ  ಅಧ್ಯಯನ ಮಾಡುತ್ತಿರುತ್ತಾರೆ .

ತಾನು ಮಾಡುವ ಕೆಲಸ ಎಷ್ಟೇ ಸಂಬಳ ತಂದರೂ ಸದಾ ಅಸಂತ್ರುಪ್ತ ರಾಗಿ 

ಗೊಣಗುವವರೇ  ತುಂಬಿರುವ ಈ ಕಾಲದಲ್ಲಿ  ಇಂತಹವ ರ  ಸಂಖ್ಯೆ 

ಹೆಚ್ಚಾಗಲಿ .