ಬೆಂಬಲಿಗರು

ಶನಿವಾರ, ಮಾರ್ಚ್ 21, 2015

ಕೊಲೆಸ್ಟರಾಲ್ ಗೆ ಯಾರಿಗೆ ಚಿಕತ್ಸೆ ಬೇಕು ?

ಕೊಲೆಸ್ಟರಾಲ್ ಗೆ  ಯಾರಿಗೆ ಚಿಕಿತ್ಸೆ ಅವಶ್ಯಕ ?

ಅಮೆರಿಕನ್ ಹಾರ್ಟ್ ಅಸೋಸಿಯೇಷನ್  ನ ಪ್ರಕಾರ  ಈ ಕೆಳಗಿನ ವರಿಗೆ  ಮಾತ್ರ 

ಚಿಕಿತ್ಸೆ ಅವಶ್ಯ 
 ೧.  ಹೃದಯಾಘಾತ, ಕೊಬ್ಬು ಜನ್ಯ ಹೃದಯ ಕಾಯಿಲೆ  ಇರುವವರು 

೨.  LDL (ಕೆಟ್ಟ) ಕೊಲೆಸ್ಟರಾಲ್ 190 mg ಗಿಂತ ಜಾಸ್ತಿ ಇದ್ದರೆ 

೩.  ೪೦ ರಿಂದ ೭೫ ವರ್ಷದ ವರೆಗಿನ  ಸಕ್ಕರೆ ಕಾಯಿಲೆ ರೋಗಿಗಳಲ್ಲಿ  LDL               ಕೊಲೆಸ್ಟರಾಲ್ 70 mg ಗಿಂತ ಜಾಸ್ತಿ ಇದ್ದರೆ 

೪. ಇನ್ನುಳಿದವರಲ್ಲಿ  ೧೦ ವರ್ಷಗಳ  ನಿರೀಕ್ಷಿತ ಕೊಬ್ಬು ಜನ್ಯ ಹೃದಯ ಕಾಯಿಲೆ 

ಪ್ರಮಾಣ 7.5% ಗಿಂತಲೂ ಅಧಿಕ ಇದ್ದರೆ,ಇದನ್ನು ಲೆಕ್ಕ ಹಾಕಲು 

ಒಂದು  ಸೂತ್ರವನ್ನೂ ಕಂಡು ಹಿಡಿದಿದ್ದಾರೆ 

Risk Assessment Tool for Estimating Your 10-year Risk of Having a Heart Attack

The risk assessment tool below uses information from the Framingham Heart Study to predict a person’s chance of having a heart attack in the next 10 years. This tool is designed for adults aged 20 and older who do not have heart disease or diabetes. To find your risk score, enter your information in the calculator below.
Age:
 years
Gender:
   
 mg/dL
 mg/dL
   
 mm/Hg
Are you currently on any medication to treat high blood pressure.
   
                            ಮೇಲಿನ  ಸೂತ್ರದಲ್ಲಿ ಕೇಳಿದ ದತ್ತಾಂಶ ಗಳನ್ನು ಕೊಟ್ಟರೆ  ಕಂಪ್ಯೂಟರ್  ೧೦ ವರ್ಷಗಳ ನಿರೀಕ್ಷಿತ  ಹೃದಯ ಕಾಯಿಲೆ  ಪ್ರಮಾಣ ಕೊಡುವುದು 



ಚಿಕಿತ್ಸೆ ರೋಗಿಗೋ ರಿಪೋರ್ಟಿಗೋ ?

ರಿಪೋರ್ಟನ್ನು ಚಿಕಿತ್ಸೆ ಮಾಡದಿರಿ ರೋಗಿಯನ್ನು ಚಿಕಿತ್ಸೆ ಮಾಡಿ .

ಇಡೀ ರೋಗಿಯನ್ನು ಪರೀಕ್ಷೆ ಮಾಡಿ ಭಾಗಶ ಪರೀಕ್ಷೆ ಸಲ್ಲ 

ಇದು ನನ್ನ ಗುರು ಡಾ ಕೆ ವಿ ತಿರುವೆಂಗಡಂ ಹೇಳುತ್ತಿದ್ದ  ಮಾತುಗಳು .

ಉದಾಹರಣೆಗೆ  ಕೆಲವು ರೋಗಿಗಳು ಕೊಲೆಸ್ಟರಾಲ್  ರಿಪೋರ್ಟ್ ತಂದು ಇದಕ್ಕೆ 

ಚಿಕಿತ್ಸೆ ಮಾಡಿ ಎನ್ನುವರು .ಕೆಲವರು ಕೊಲೆಸ್ಟರಾಲ್ ನಮ್ಮ ವೈರಿ ಎಂದು 

ತಿಳಿದಿರುವರು ,ಅದು ನಿಜವಲ್ಲ ,ಅದು ಎಲ್ಲಾ ಜೀವಕೋಶಗಳಿಗೆ ಅವಶ್ಯ .ಅದು 

ಸ್ವಲ್ಪ ಹೆಚ್ಚು ಆದ ಕೂಡಲೇ ಚಿಕಿತ್ಸೆ ಅವಶ್ಯವಿಲ್ಲ .ರೋಗಿಗೆ ಬೇರೆ ಕಾಯಿಲೆಗಳು 

(ಬಿ ಪಿ ,ಶುಗರ್ ,ಹೃದಯ ಕಾಯಿಲೆ )ಇವೆಯೋ ,ಯಾವ ಕೊಲೆಸ್ಟರಾಲ್ ಎಷ್ಟು ಇದೆ 

ಇದನ್ನಲ್ಲಾ ನೋಡ ಬೇಕು .ಅದಕ್ಕೆ ವೈಜ್ಞಾನಿಕ ಲೆಕ್ಕಾಚಾರ ಇದೆ .

ಇನ್ನೊಂದು ರಿಪೋರ್ಟ್  ಇಯೋಸಿನೋಪಿಲ್  ಕೌಂಟ್ .ಇವು ರಕ್ತದಲ್ಲಿ ಇರುವ  

ಬಿಳಿ ರಕ್ತ ಕಣಗಳ ಒಂದು ವರ್ಗಕ್ಕೆ ಸೇರಿದವುಗಳು .ಅಸ್ತಮಾ ,ಅಲರ್ಜಿ ,ಹೊಟ್ಟೆ 

ಹುಳ ಬಾಧೆ ಇತ್ಯಾದಿ ಸಂದರ್ಭಗಳಲ್ಲಿ  ಈ ಕಣಗಳು ಜಾಸ್ತಿ ಇರುತ್ತವೆ .ಆಯಾ 

ಕಾಯಿಲೆಗಳಿಗೆ ಚಿಕಿತ್ಸೆ ಯಾಗಬೇಕೇ ಹೊರತು ಇಯೋಸಿನೋಫಿಲ್  ಗೆ ಅಲ್ಲ 

ಇನ್ನು ಕೆಲವರು  ರಕ್ತದಲ್ಲಿ   ವಯ್ಡಾಲ್ ಟೆಸ್ಟ್  positive ಇದೆ ,ನನಗೆ 

ಟೈಫಾಯಿಡ್ ಇದೆ ಎಂದು ಭಯ ಪಡುವರು . ಈ ಟೆಸ್ಟ್  ಇನ್ನು ಕೆಲವು ಕಾರಣ 

ಗಳಿಂದ ಪೊಸಿಟಿವ್ ಇರ ಬಹುದು ,ಅಲ್ಲದೆ  ಒಮ್ಮೆ ಟೈಫಾಯಿಡ್ ಬಂದರೆ 

ಬಹಳ ಸಮಯದ ವರೆಗೆ  ರಕ್ತದಲ್ಲಿ ಪೊಸಿಟಿವ್ ಇರ ಬಹುದು ಹಾಗೆಂದು 

ರೋಗಿಗೆ ಪ್ರಸ್ತುತ ಟೈಫಾಯಿಡ್ ಇದೆ ಎಂದು ಅರ್ಥವಲ್ಲ .ಅದೇ ರೀತಿ  ಡೆಂಗು

ಇಲಿ ಜ್ವರದಲ್ಲಿಯೂ  ರಕ್ತದಲ್ಲಿ ಪ್ರತಿರಕ್ಷಾತ್ಮಕ  ಆಂಟಿ ಬಾಡಿ ಗಳು ಅನೇಕ  ವರ್ಷ 

ಉಳಿಯುವುದರಿಂದ  ಅವುಗಳ ಮೇಲೆ ನಿರ್ಧರಿತ ಪರೀಕ್ಷೆಗಳು  ಪೊಸಿಟಿವ್ 

ಇರುತ್ತವೆ .ಆದರಿಂದ ಈ ರಿಪೋರ್ಟ್ ಗಳನ್ನ ನೋಡಿ ರೋಗಿಗೆ ಚಿಕಿತ್ಸೆ 

ಮಾಡುವುದು ತರವಲ್ಲ .

 ಹೃದಯ ಸಂಬಂದಿ ರೋಗಗಳಿಗೆ ಇ ಸಿ ಜಿ ಮಾಡುತ್ತೇವೆ .ಕೆಲವೊಮ್ಮೆ ರೋಗಿಗೆ 

ಹೃದಯಾಘಾತ ಇದ್ದಾಗಲೂ ಇ ಸಿ ಜಿ ನಾರ್ಮಲ್ ಇರ ಬಹುದು .ಇನ್ನು ಕೆಲವು 

ಭಾರಿ  ಹೊಟ್ಟೆ ಯಲ್ಲಿ ಏನಾದರೂ ತೊಂದರೆ ಇದ್ದಾಗ  ಇ ಸಿ ಜಿ ವ್ಯತ್ಯಾಸ ಇರ 

ಬಹುದು .ಇವನ್ನು ಸಮಗ್ರವಾಗಿ ನೋಡ ಬೇಕಾಗುವುದು .

ಹಲವು ರೋಗಿಗಳು ತಮಗೆ ಗ್ಯಾಸ್ಟ್ರಿಕ್ ಪ್ರಾಬ್ಲಮ್ ಎಂದು ಬರುವರು .ಹೊಟ್ಟೆಯನ್ನು 

ಪರೀಕ್ಷಿಸಿದಾಗ  ಎಲ್ಲಾ ಸರಿ ಇರುತ್ತದೆ .ಎದೆಯಲ್ಲಿ  ಆಸ್ತಮಾ ದ ಲಕ್ಷಣ ಇರುತ್ತದೆ 

ಅಸ್ತಮಾ ರೋಗಿಗಳಲ್ಲಿ ಶ್ವಾಸಕೋಶಕ್ಕೆ ಹೋಗ ಬೇಕಾದ ಗಾಳಿ  ಹೊಟ್ಟೆಗೆ ಹೋಗಿ 

ಹೊಟ್ಟೆ ಉಬ್ಬರಿಸುವುದು .ಆಗ ನಾವು ಅಸ್ತಮಾ ಕ್ಕೆ ಚಿಕಿತ್ಸೆ ಸರಿಯಾಗಿ ಮಾಡಿದರೆ 

ಇದೂ ಶಮನ ಆಗುವುದು .

ಇನ್ನು ಬಿ ಪಿ .ನಾನು ನನ್ನ ಮೊದಲ ಬ್ಲಾಗ್ ಗಳಲ್ಲಿ ಬರೆದಂತೆ  ಮೈಗ್ರೈನ್.

ಉದ್ವೇಗದ ತಲೆನೋವು ,ಅಸ್ತಮಾ ,ಮೂತ್ರದ ಕಲ್ಲಿನ ನೋವು ಇತ್ಯಾದಿ ಗಳಿಂದ 

ಬಳಲುವವರಲ್ಲಿ ಬಿ ಪಿ ತಾತ್ಕಾಲಿಕವಾಗಿ ಏರುವುದು .ಆಗ ನಾವು ಮೂಲ ರೋಗ 

ಗಳಿಗೆ ಚಿಕಿತ್ಸೆ ಮಾಡಿದರೆ ಬಿ ಪಿ ಬಹುತೇಕ ಸಾಮಾನ್ಯ ವಾಗುವುದು .ಅಲ್ಲದೆ 

ಆಸ್ಪತ್ರೆಗೆ ಹೊಸತಾಗಿ ಬಂದವರಿಗೆ ಸ್ವಲ್ಪ ಬಿ ಪಿ ಜಾಸ್ತಿ ಇರ ಬಹುದು .ಆಗ ನಾವು 

ಸ್ವಲ್ಪ ಬಿಟ್ಟು ಪುನಃ ಬಿ ಪಿ ನೋಡುವೆವು .

ಇತ್ತೀಚಿಗೆ  ಹೊಟ್ಟೆಯ ಸ್ಕ್ಯಾನ್ ನಲ್ಲಿ  ಫ್ಯಾಟಿ ಲಿವರ್ ಎಂದು ವರದಿ ಸಾಮಾನ್ಯ .

ಇದು ಶರೀರದಲ್ಲಿ ಬೊಜ್ಜು ಜಾಸ್ತಿ ಇದ್ದವರಲ್ಲಿ ಸಾಮಾನ್ಯ .ಸಕ್ಕರೆ ಕಾಯಿಲೆ ,ಮದ್ಯ 

ಪಾನಿಗಳಲ್ಲೂ ಈ ರಿಪೋರ್ಟ್ ಬರ ಬಹುದು . ಇದಕ್ಕೆ ಆಯಾ ಕಾಯಿಲೆಗಳ 

ಚಿಕಿತ್ಸೆ ಮಾಡಬೇಕು .ಲಿವರ್ ತೊಂದರೆ ಎಂದು ಬೇಡದ ಪಥ್ಯ ,ಲಿವರ್ ಟಾನಿಕ್ 

ಇತ್ಯಾದಿಗಳ ಮೊರೆ ಹೋಗ ಬಾರದು .




ಗುರುವಾರ, ಮಾರ್ಚ್ 19, 2015

ಹಾಸಿಗೆಯಲ್ಲಿಯ ಭೂತ

ಖ್ಯಾತ ಲೇಖಕ ಸುಂದರ ರಾಮ ಸ್ವಾಮಿಯವರ  ಕೃತಿ  ಕೊಳಂದೆಗಳ್ ಪೆಣ್ಗಳ್ 

ಮತ್ತು  ಆಂಗಳ್ ಇಂಗ್ಲಿಷ್ ಅನುವಾದ ಓದುತ್ತಿದ್ದೆ . ಅದರಲ್ಲಿ  ಬಾಲು ಎಂಬ 

ಹುಡುಗನ ಸ್ವಗತ ಹೀಗಿದೆ ."ಅಪ್ಪ ಬರುವುದರೊಳಗೆ ಚಾಪೆ ಮಡಿಚಿ ಇಡಬೇಕು .

ಇಲ್ಲದಿದ್ದರೆ  ಬಿಡಿಸಿಟ್ಟ ಚಾಪೆ ಕಂಡು ಆತನ ಮುಖ ಕೆಂಪೇರಿ ಕೈಗಳು 

ಕಂಪಿಸಲಾರಂಬಿಸುತ್ತವೆ. ತೆರೆದ ಖಾಲಿ  ಹಾಸಿಗೆಯಲ್ಲಿ ದುಷ್ಟ ಶಕ್ತಿಗಳು 

ಮಲಗುವುವು .ಆ ಮೇಲೆ ಜೀವನ ಪರ್ಯಂತ ಅವುಗಳ ನಿರ್ಮೂಲನ ಅಸಾಧ್ಯ ."

 ಈ ನಂಬಿಕೆ ನಮ್ಮಲ್ಲಿಯೂ ಇತ್ತು .ಬೆಳಿಗ್ಗೆ ಎದ್ದೊಡನೆ  ಚಾಪೆ ಅಥವಾ ಹಾಸಿಗೆ 

ಮಡಿಚಿ ಇಡುವುದು  ಮೊದಲೆಲ್ಲ ರೂಡಿ. ಈಗ ಆ ಅಭ್ಯಾಸ ಹೋಗಿದೆ .

ತೆರೆದಿಟ್ಟ ಹಾಸಿಗೆಯಲ್ಲಿ  ಧೂಳು ಕ್ರಿಮಿ (Dust mite )ಎಂಬ  ಫಂಗಸ್  ಮನೆ ಮಾಡುವುದು .ಅದು  ದೊಡ್ಡ  ಅಲರ್ಜಿ ಕಾರಕ . 

                        



ರಾತ್ರಿ  ಮಲಗಿದೊಡನೆ ಮತ್ತು ಫ್ಯಾನ್ ನ ಗಾಳಿಗೆ  ಇವು ಮೇಲೆದ್ದು  ನಾವು 

ಉಸಿರಾಡುವ ಗಾಳಿಯೊಡನೆ  ಶ್ವಾಸಕೋಶಕ್ಕೆ ಹೋಗಿ  ಅಲರ್ಜಿ ಉಂಟು 

ಮಾಡುತ್ತವೆ .



ಇದರಿಂದ ಸೀನು ,ಅಸ್ತಮಾ ಇತ್ಯಾದಿ  ಉಂಟಾಗ ಬಹುದು .ಇದನ್ನೇ  ನಮ್ಮ 


ಹಿಂದಿನವರು   ದುಷ್ಟ ಶಕ್ತಿ ಅಥವಾ  ಭೂತ ಎಂದು ಕರೆದಿದ್ದಿರಬಹುದು .

( ಚಿತ್ರದ ಮೂಲಕ್ಕೆ ಅಭಾರಿ )

ನುಡಿಯೊಳಗಾಗಿ ನಡೆಯದಿದ್ದರೆ - ನಡೆಯುವುದಕ್ಕೊಂದು ತರಬೇತಿ

ಈಗ ನಡೆಯುವುದು ಮರೆತು ಹೋಗಿದೆ .ಮಗುವು ಮಗ್ಗುಲು ತಿರುಗಿ ,ಆ ಮೇಲೆ 

ಕುಳಿತು ,ಮತ್ತೆ ನಿಲ್ಲುವುದು .ನಿಂತ ಮಗು ನಡೆಯುವುದಕ್ಕೆ ಮುನ್ನ ಚಲಿಸಲು 

 ವಾಕರ್  ಎಂಬ ಸಾಧನ ಬಂದಿದೆ .ಆಮೇಲೆ ಕಾರ್ ,ಎಟ್ ಲೀಸ್ಟ್ ರಿಕ್ಷಾ  ,ಮನೆಯ 

ಹೊಸಿಲಿಂದ  ನರ್ಸರಿ , ಶಾಲೆ ,ಕಾಲೇಜ್  ಎಲ್ಲಿಯೂ ನಡೆಯಲು ಅವಕಾಶ ಇಲ್ಲ .

ಪ್ರಾಯ ಪೂರ್ತಿ ಆಗುವಾಗ ಡ್ರೈವಿಂಗ್ ಲೈಸೆನ್ಸ್ ಸಿಗುವುದು .ಆ ಮೇಲೆ 

ನಡೆಯುವುದು  ಮರ್ಯಾದೆಗೆ ಕಮ್ಮಿ ಎಂಬ ಭಾವನೆ ಬರುತ್ತದೆ .ಕೆಲವು ನಾಯಿ 

ಮರಿಗಳಿಗಾದರೂ ನಡೆಯುವ ಭಾಗ್ಯ ಕೆಲಸದವರ ಜೊತೆ ಇರುತ್ತದೆ .

                    ಈಗ  ಮೊದಲಿನಂತೆ ನಡೆಯುವುದು ಕಷ್ಟ .ಹಳ್ಳಿಗಳಲ್ಲಿ ಹಳೆಯ 

ರೂಡಿಯ ಕಾಲು ದಾರಿಗಳು ಅದೃಶ್ಯವಾಗಿವೆ .ಪೇಟೆಯಲ್ಲಿ ನಡೆಯುವ ಮುನ್ನ 

ಜೀವ ವಿಮೆ ಮಾಡಿಸಿ ಕೊಳ್ಳುವುದು ಉತ್ತಮ . ಪಾದಚಾರಿಗಳಿಗೆ  ರಸ್ತೆ ಬದಿಯಲ್ಲಿ 

ಇದ್ದ ಜಾಗವನ್ನು  ಹಿಂತೆಗೆದು ಕೊಂಡ ಹಾಗಿದೆ .ಅವರು ರಸ್ತೆ  ತೆರಿಗೆ  

ಕಟ್ಟುವುದಿಲ್ಲವಲ್ಲ .ವಾಹನ ಸವಾರರಿಗೆ  ಆಲ್ ಇಂಡಿಯಾ ಲೈಸನ್ಸ್ ಇದ್ದ ಕಾರಣ 

ಅವರು ರಸ್ತೆ ತುಂಬಾ ಅಲ್ಲದೆ ಕೆಲವೊಮ್ಮೆ ರಸ್ತೆಯ ಹೊರಗೂ ಚಲಿಸುತ್ತಾರೆ .ಇನ್ನು 

ಮುಂದೆ ನಡೆಯುವ ಲೈಸನ್ಸ್ ಉಳ್ಳವರು ಮಾತ್ರ ರಸ್ತೆಯಲ್ಲಿ ನಡೆಯ ಬಹುದು 

ಎಂದು ಕಾನೂನು ಮಾಡಬಹುದು .

ನಡೆಯ  ಪಾಠ ಗಳು ಈ ರೀತಿ ಇರಬಹುದು 

೧. ನಡೆಯುವವರು ತಮ್ಮ ಫೋಟೋ ವಿಳಾಸ ಇರುವ ಲೈಸನ್ಸ್ ಹೊಂದಿರ ಬೇಕು 

ಯಾವ ವಾಹನ ಯಾರ ಮೇಲೆ ಹೋಗುವುದೋ ಯಾರಿಗೆ ಗೊತ್ತು ?

೨  ರಸ್ತೆಯಲ್ಲಿ  ಆಟೋ ರಿಕ್ಷಾ ದ ಹಿಂದೆ ನಡೆಯವಾಗ  ಸಾಕಷ್ಟು ಅಂತರ 

ಇಟ್ಟುಕೊಳ್ಳಿ .ಅವರು ಯಾವುದೇ ಮುನ್ಸೂಚನೆ ಇಲ್ಲದೆ ನಿಲ್ಲಿಸುವರು .ಅವರು ಎಡಕ್ಕೆ 

ಇಂಡಿಕೇಟರ್ ಹಾಕಿ ಬಲಕ್ಕೆ ಹೋದರೂ ಹೋಗ ಬಹುದು .

೩. ನಿಮ್ಮ ಶ್ರವಣ ಶಕ್ತಿ  ಪರೀಕ್ಷಿಸಲು ತರಹ ತರಹದ ಹಾರ್ನ್ (ಕಹಳೆ )ಗಳು 

ಕೇಳಿಸಿದರೂ ಅಂಜದಿರಿ ,ಯಾಕೆಂದರೆ  ರಸ್ತೆಯೊಳಗೆ ಇಳಿದು ಹಾರ್ನ್ ಗೆ 

ಅಂಜಿದೊಡೆಂತಯ್ಯಾ .ನಮ್ಮಲ್ಲಿ ಕಾರಣವಿಲ್ಲದೆ ಹಾರ್ನ್ ಮಾಡುವರೇ ಜಾಸ್ತಿ 

ಇದರಿಂದ  ಜನರ ಶ್ರವಣ ಶಕ್ತಿ ಕುಂದುವುದು.

೩ ಬಹಳ  ವಾಹನ ಸಂದಣಿ ಇರುವ ರಸ್ತೆ ದಾಟುವುದು ಕಷ್ಟ ವಾದರೆ  ರಿಕ್ಷಾ 

ಹಿಡಿದು  ಹೋಗುವುದು  ಜೀವಕ್ಕೆ ಕ್ಷೇಮ 

೪ ,ನಡೆಯುವಾಗ  ದೃಷ್ಟಿ ದಾರಿ ಮೇಲೆ ಮತ್ತು  ರಸ್ತೆ ಮೇಲೆ ಇರಲಿ  .ಅಂಗಡಿ 

ಯಲ್ಲಿ  ಪ್ರದರ್ಶನಕ್ಕೆ ಇಟ್ಟ ವಸ್ತುಗಳನ್ನು   ನೋಡುತ್ತಾ ನಡೆದರೆ  ದಾರಿಯಲ್ಲಿ 

ಸ್ಲಾಬ್  ಎದ್ದು  ಹೋಗಿದ್ದು ನೀವು ಚರಂಡಿಗೆ ಬೀಳುವ ಅಪಾಯ ಇದೆ .

೫. ನನಗೆ  ನಡೆಯುವುದೆಂದರೆ ಇಷ್ಟ ,ರಸ್ತೆಯಲ್ಲಿ  ನಾನು ನಡೆಯುವಾಗ ಪರಿಚಯ 

ದವರು  ಡಾಕ್ಟ್ರೆ ನಿಮ್ಮ ಕಾರ್ ಏನಾಯಿತು ಎಂದು ಸಹಾನುಭೂತಿ ಪೂರ್ವಕ 

ಪ್ರಶ್ನೆ ಕೇಳುವರು .ಕೆಲವರು ಇವರ ಪ್ರಾಕ್ಟೀಸ್ ಚೆನ್ನಾಗಿ ನಡೆಯುತ್ತಿಲ್ಲಾ ಎಂದು 

ಕಾಣುತ್ತದೆ .ಅದಕ್ಕೆ ಇವರು ನಡೆಯುತ್ತಿದ್ದಾರೆ ಎಂದುಕೊಂಡು ಕರುಣಾಕಟಾಕ್ಷ 

 ಬೀರುವರು.ಇದಕ್ಕೆಲ್ಲಾ ನಡೆಯುವವರು  ಸಿದ್ದರಾಗಿ  ಇರಬೇಕು .

೬. ನಮ್ಮ ಮುಂದೆ ನಡೆಯುವರ ಲಿಂಗವನ್ನು ಹಿಂದಿನಿಂದ ನೋಡಿ ನಿರ್ಧರಿಸ ಬೇಡಿ .

ಕೇಶಾಲಂಕಾರ ,ಉಡುಗೆ ತೊಡುಗೆ ಯಿಂದ ಗಂಡೋ ಹೆಣ್ಣೋ ಎಂದು 

ಹೇಳುವ ಕಾಲ ಇದಲ್ಲ .
೭. ನಿಮ್ಮದೇ ತಪ್ಪಿನಿಂದ ರಸ್ತೆಯಲ್ಲಿ  ಏನಾದರೂ ಅನಾಹುತ ನಡೆದರೂ 

ಸಾರೀ ಎಂದು ಹಲ್ಲುಕಿರಿಯ ಬೇಡಿ .ಒಫ್ಫೆನ್ಸ್ ಇಸ್ ದಿ ಬೆಸ್ಟ್ ಡಿಫೆನ್ಸ್ 

ಆಕ್ರಮಣ ಕಾರೀ  ಪ್ರತಿಕ್ರಿಯೆ  ಉತ್ತಮ  ರಕ್ಷಣಾತ್ಮಕ ಕ್ರಿಯೆ .ಇಲ್ಲಿ 

ಸುಸಂಸ್ಕೃತತೆ ಇತ್ಯಾದಿ ಗಳನ್ನ ಮರೆಯಬೇಕು .

ಮಿತ್ರರೇ ನೀವು ನಡೆಯುವವರಾದರೆ ಇದಕ್ಕೆ ನಿಮ್ಮ ಸಲಹೆಗಳನ್ನು 

ಸೇರಿಸಿರಿ .



ಬುಧವಾರ, ಮಾರ್ಚ್ 18, 2015

ಪೋಸ್ಟಲ್ ರನ್ನರ್ ಮರೆಯುವ ಮುನ್ನ

ಅಂಚೆಯ ಅಣ್ಣನು ಕೊರಿಯರ್ ಮತ್ತು ಇಂಟರ್ನೆಟ್ ಗಳ  ಅಬ್ಬರದಲ್ಲಿ 

ಮರೆಯಾಗುತ್ತಿದ್ದಾನೆ  .ದೂರದ ಊರಿನಲ್ಲಿರುವ ಮಗನ ಪತ್ರವನ್ನು 

ಪ್ರತೀಕ್ಷಿಸುತ್ತಿರುವ  ತಂದೆ ತಾಯಂದಿರು ,ಹೊಸತಾಗಿ ಮದುವೆಯಾಗಿ  ಇನ್ನೂ 

ತಾಯಿ ಮನೆಯಲ್ಲಿ ಇರುವ ಪತ್ನಿಯಿಂದ ಕಾಗದ ಕಾಯುತ್ತಿರುವ ಹುಡುಗ ,

ತಂದೆ ಕಳುಹಿಸುವ ಮನಿ ಆರ್ಡರ್ ಗೆ ಕಾಯುತ್ತಿರುವ ವಿದ್ಯಾರ್ಥಿ ಎಲ್ಲರಿಗೂ 

ಅಂಚೆಯ ಅಣ್ಣನ ಪ್ರತೀಕ್ಷೆ .ಬಂದ ಪತ್ರಕ್ಕನುಸಾರ ಅವನಿಗೆ ಪ್ರೀತಿಯ ಉಡುಗೊರೆ.

ಇವುಗಳೆಲ್ಲದುರ ನಡುವೆ ಯಾವ ಗುರುತಿಸುವಿಕೆಯೂ ಇಲ್ಲದೆ ಮರೆಯಾದವನು 

ಪೋಸ್ಟಲ್ ರನ್ನರ್ .

                                       
ಅಂಚೆ ಕಚೇರಿಯಿಂದ  

ಅಂಚೆ ಕಚೇರಿಗೆ ಪತ್ರ ಸಾಗಿಸುತ್ತಿದ್ದ  ಇವರು ಇಂದು  ಇಲ್ಲ 

ಕೈಯ್ಯಲ್ಲಿ   ಒಂದು   ಭರ್ಜಿ (ಮೊನಚು ಆಯುಧ ),ಅದಕ್ಕೆ ತಾಗಿಕೊಂಡು 

ಕಾಲ ಗೆಜ್ಜೆಯಂತಹ ಸಣ್ಣ ಘಂಟಾ ಮಣಿಗಳು .ಇವರ ಹುದ್ದೆಯೇ ಹೇಳುವಂತೆ 

ಇವರು ರನ್ನರ್ .ತಲೆಯಲ್ಲಿ  ಅಂಚೆ ಚೀಲ .ಕೈಯ್ಯಲ್ಲಿ ಘಂಟಾ ಆಯುಧ .

ಇವರು ಓಡುತ್ತಾ ನಡೆಯುವರೋ ನಡೆಯುತ್ತಾ ಓಡುವರೋ  ಹೇಳುವುದು 

ಕಷ್ಟ .ಬಹುಶಃ ದಾರಿಯಲ್ಲಿರುವ ಪ್ರಾಣಿಗಳ ಗಳನ್ನು ಬೆದರಿಸಲು 

ಕೈಯ್ಯಲ್ಲಿ  ಆಯುಧ ಇದ್ದಿರ ಬೇಕು .

ನಮ್ಮ ಮನೆಯ ಮೇಲಿನಿಂದ ಇವರು ಹೋಗುತ್ತಿದ್ದರು .ನೀರಡಿಕೆ ತಣಿಸಲು 

ಒಮ್ಮೊಮ್ಮೆ  ಮನೆಗೆ ಬಂದು ಬೆಲ್ಲ ನೀರು ಕುಡಿದು ದಣಿವಾರಿಸಿ ಕೊಳ್ಳುವರು .

ರಜಾ ದಿನಗಳಲ್ಲಿ  ಪೇಟೆಯಿಂದ ದಿನ ಪತ್ರಿಕೆ  ಮನೆಗೆ ತಂದು ಕೊಡುತ್ತಿದ್ದರು .

ನಾನು ಅಥವಾ ತಮ್ಮ  ಕೈಯ್ಯಲ್ಲಿ  ಮಜ್ಜಿಗೆ ನೀರು ಹಿಡಿದುಕೊಂಡು ಮನೆಯ 

ಹಿಂದಿನ ಗುಡ್ಡದ ಮೇಲಿನ  ದಾರಿಯಲ್ಲಿ ಇವರಿಗಾಗಿ  ಕಾದು ನಿಲ್ಲುತ್ತಿದ್ದೆವು .

ಪೇಪರ್  ಮಾತ್ರ ನಮಗೆ  ಹೊರಜಗತ್ತಿಗೆ ಕಿಂಡಿಯಾಗಿದ್ದ ಕಾಲ .

ಈ ರನ್ನರ್ ಹುದ್ದೆ ಈಗ ಇಲ್ಲದಿದ್ದರೂ  ಅವರ ನೆನೆಪು ,ಕೈ ಗೆಜ್ಜೆ ನಾದ 

ಇನ್ನೂ ಮನದಲ್ಲಿ ಹಸಿರಾಗಿದೆ .

ಸೋಮವಾರ, ಮಾರ್ಚ್ 16, 2015

ಡಯಸ್ಪೋರ ಮತ್ತು ಗಿರ್ಮಿಟಿಯ ,ವಲಸೆ ಸಂಸ್ಕೃತಿ



ಇರುವದೆಲ್ಲವ ಬಿಟ್ಟು ಇರದಿರುವುದಕ್ಕೆ ತುಡಿಯುವುದೇ ಜೀವನ- ಕವಿ ಅಡಿಗ

ಹಾಗಿದ್ದರೆ  ಇಲ್ಲದೆಯೇ ಇರುವ ಮಂದಿ ಹೊಸ ಜೀವನ ವ  ಹಾರೈಸಿ ಬರಿಗೈಲಿ

ದೇಶಾಂತರ  ಹೋಗಿ  ಅಲ್ಲಿಯೇ  ನೆಲೆಸಿದರೂ  ಮೂಲ ಸಂಸ್ಕೃತಿಗೆ ಆತು

ಕೊಂಡಿರುವ  .ವಿಚಾರ ನನಗೆ ತುಂಬಾ ಕುತೂಹಲ ಉಂಟು ಮಾಡುತ್ತದೆ .

ವರ್ಷಗಳ ಹಿಂದೆ  ಭಾರತ ದೇಶದಿಂದ ಮುಖ್ಯವಾಗಿ  ಈಗಿನ ಯು ಪಿ ,ಬಿಹಾರ

ಗಳಿಂದ  ದೂರದ ಸುರಿನಾಮ್ ,ಕ್ಯಾರಿಬ್ಬಿಯನ್ ದ್ವೀಪಗಳು,ಮಾರಿಷಿಯಸ್

ಮತ್ತು ಫಿಜಿ ದೇಶಗಳ  ಕಬ್ಬು ಕೃಷಿ ಕಾರ್ಮಿಕರಾಗಿ  ಹೋಗಿ ಅಲ್ಲಿ ನೆಲೆಸಿರುವವರ

ಕತೆ  ರೋಚಕ .
                                                    Suriname    sriname book  ಕೆಲವು ದಿನಗಳ ಹಿಂದೆ ಪತ್ರಿಕೆ

ಒಂದರಲ್ಲಿ  ಮೊದಲು ಡಚ್ಚರ ಕಾಲೋನಿ ಆಗಿದ್ದ
ಸುರಿನಾಮ ಗೆ    ಸ್ವಾತಂತ್ರ್ಯ   ಕೊಡುವಾಗ  ಅಲ್ಲಿದ್ದ ಭಾರತೀಯ
ಮೂಲದವರಿಗೆ    ಹಾಲೆಂಡ್ ದೇಶದ ಪೌರರಾಗುವ ಆಯ್ಕೆ  ಕೊಟ್ಟ
ರೆಂದೂ ,ಆ ರೀತಿ ಅಲ್ಲಿಗೆ ತೆರಳಿದವರು ಹುಟ್ಟು ಹಾಕಿದ್ದ್ದ ಬೇಂಕು
ಮುಂದೆ    ಪ್ರತಿಷ್ಠಿತ  ಎ ಬಿ ಏನ್ (ಅಮ್ರೋ)ಆಗಿ ಭಾರತದಲ್ಲಿಯೂ
ಶಾಖೆಗಳನ್ನು ತೆರೆದ ವಿಚಾರ ಪ್ರಕಟವಾಗಿತ್ತು .              

ಇದೇ ಬ್ಲಾಗ್ ನಲ್ಲಿ ಹಿಂದೆ ಭಾರತ ಮೂಲದ  ಕೆನ್ನೆತ್ ಲಲ್ಲಾ ಅವರ ಬಗ್ಗೆ

ಬರೆದಿದ್ದೆ .
                                                       trinidadcaribbeanಈ ದೇಶಗಳಿಗೆ ತೆರಳಿದ ಜನರು ಬರಿ ಗೈಲಿ
ಹೋಗಿದ್ದರೂ ಅವರ ಜತೆಯೇ ನಮ್ಮ ಸಂಸ್ಕೃತಿಯೂ  ತೆರಳಿದುದು ರೋಚಕ

ರಾಮಾಯಣ ,ಮಹಾಭಾರತ ,ಪೂಜೆ ಪುರಸ್ಕಾರ ಗಳೂ ಶತಮಾನ ಗಳಿಂದ 
ಅಲ್ಲಿ ನೆಲೆ ನಿಂತು ಭಾರತೀಯತೆ ಕಾಪಾಡುವ  ಕಾರ್ಯ ಮಾಡಿವೆ .ಆಗಿನ್ನೂ

ರೇಡಿಯೋ ,ಕ್ಯಾಸೆಟ್ಟು ಬಿಡಿ ಪುಸ್ತಕ ಕೂಡಾ ಇರಲಿಲ್ಲ.ಬಾಯ್ದೆರೆ ಯಾಗಿ

ದೇಶವಾಸಿಗಳ ಎದೆಯಿಂದ ಎದೆಗೆ ಹರಿಯಿಯುತು ಸಂಸ್ಕೃತಿ .

ಇತ್ತೀಚೆಗೆ ಬ್ರಿಜ್ ವಿ ಲಾಲ್ ಅವರು ಬರೆದ  ಪುಸ್ತಕ ‘ಆನ್ ದ ಅದರ್ ಸೈಡ್ ಆಫ್ 
ಮಿಡ್ ನೈಟ್ ಎ ಫಿಜಿಯನ್ ಜರ್ನಿ “ಓದಿದೆ .ಅವರು  ಫಿಜಿಯ
ಭಾರತೀಯರ  ಮೂರನೇ ತಲೆಮಾರಿನವರು .ತಮ್ಮ ಮೂಲವನ್ನು ಹುಡುಕಿ
ಭಾರತಕ್ಕೆ ಬಂದ ಕಥೆ ,ತಮ್ಮ ಅಜ್ಜ ತಂದೆ ಭಾರತೀಯರಾಗಿ ಬಾಳಿದ ಪರಿ
ರೋಚಕವಾಗಿ ಬರೆದಿದ್ದಾರೆ .
figi bookFiji
ಆಗೆಲ್ಲಾ  ಈ ರೀತಿ ವಲಸೆ ಹೋಗುತ್ತಿದ್ದ ಕೂಲಿ ಕಾರ್ಮಿಕರನ್ನು ಗಿರ್ಮಿಟಿಯಾ
ಎಂದು ಕರೆಯುತ್ತಿದ್ದರು .ಇದು ಅಗ್ರಿಮೆಂಟ್ ಎಂಬ ಶಬ್ದದ ಅಪಭ್ರಂಶ  ಎಂದು

ಹೇಳುತ್ತಾರೆ .ಬ್ರಿಜ್ ವಿ ಲಾಲ್ ಅವರು ಒಂದು ಪ್ರಶ್ನೆ ಎತ್ತುತ್ತಾರೆ .ಒಂದು
ದೇಶದಲ್ಲಿ ಎಷ್ಟು ತಲೆಮಾರು ಕಳೆದ ಮೇಲೆ ಅದನ್ನು ತನ್ನ ತಾಯಿ ನಾಡು
ಎಂದು ಕರೆಯ ಬಹುದು ?
ಮೇಲೆ  ಹೇಳಿದ ದೇಶಗಳಲ್ಲಿ  ಕ್ಯಾರಿಬ್ಯಾನ್ ದ್ವೀಪ ,ಸುರಿನಾಮ್ ಗಳಲ್ಲಿ  ಕ್ರಮೇಣ  ಅಲ್ಲಿಯ ಪೌರತ್ವ 

 ನಮ್ಮವರಿಗೆ ಲಭಿಸಿದ್ದರೂ  ಫಿಜಿಯಲ್ಲಿ  ಸ್ವಲ್ಪ ಅತಂತ್ರ  ಸ್ಥಿತಿ  ಇದೆ .ಕೊಲ್ಲಿ ದೇಶಗಳಲ್ಲಿ ಅಂತೂ  ಎಷ್ಟು 

ಪರಿಣಿತ ರಾದರೂ ಎಷ್ಟು ವರ್ಷ ಅಲ್ಲಿ  ಗೆಯ್ದು ತಮ್ಮ ಜೀವನ ತೆಯ್ದರೂ  ನಿಮಗೆ ಪೌರತ್ವ ನೀಡರು.

ಮೇಲಿನ  ಚಿತ್ರಗಳ ಮೂಲಗಳಿಗೆ ನಾನು ಆಭಾರಿಯಾಗಿದ್ದೇನೆ

ಭಾನುವಾರ, ಮಾರ್ಚ್ 15, 2015

ಮುಖ್ಯ ನ್ಯಾಯಾಧೀಶರ ಕಥೆ

ನನಗೆ  ನ್ಯಾಯಾಂಗದ ಮೇಲೆ ವಿಶೇಷ ಅಕ್ಕರೆ ಮತ್ತು ಕುತೂಹಲ .ನಮ್ಮ ದೇಶದಲ್ಲಿ ಪ್ರಜಾತಂತ್ರ ಗಟ್ಟಿಯಾಗಿ ಬೇರೂರಲು

ಕ್ರಿಯಾಶೀಲ ನ್ಯಾಯಾಂಗ ಮುಖ್ಯ ಕಾರಣ ಎಂದು ನಂಬಿದವರಲ್ಲಿ ನಾನೂ ಒಬ್ಬನು .ನನ್ನ ಈ ಬ್ಲಾಗಿನ ಹಿಂದಿನ

ಬರಹ  ನನ್ನ ಅಜ್ಜ ಮತ್ತು ಪುತ್ತೂರು ಪೇಟೆ ಯಲ್ಲಿ ನನಗೆ ಅಜ್ಜ ಹೇಗೆ ಕೋರ್ಟ್ ಕಛೇರಿಗಳ ಬಗ್ಗೆ ಚಿಕ್ಕಂದಿನಲ್ಲೇ  ಆಸಕ್ತಿ

ಮೂಡಿಸಿದರು ಎಂದು ಬರೆದಿದ್ದೇನೆ ದಿನವಿಡೀ ನ್ಯಾಯವಾದಿಗಳ ಭಾಷಣ ಕೇಳಿ ಕುಳಿತಿರುವ ನ್ಯಾಯಾಧೀಶರು ನ್ಯಾಯಾಂಗದ

ಸ್ವಾತಂತ್ರ್ಯ ಮತ್ತು ಗೌರವ ಕಾಪಾಡುವ  ಛಲದಲ್ಲಿ ತಮ್ಮ ವೈಯುಕ್ತಿಕ ಸ್ವಾತಂತ್ರ್ಯ ಬಹಳಷ್ಟು ತ್ಯಾಗ ಮಾಡ ಬೇಕಾಗುತ್ತದೆ .

ಪ್ರಾತಃ ಸ್ಮರಣೀಯ ನ್ಯಾಯ ಮೂರ್ತಿ ಜಸ್ಟಿಸ್ ಎಚ್ ಅರ ಖನ್ನಾ ತಮ್ಮ ಜೀವನ ಚರಿತ್ರೆ ನೀದರ್ ರೋಸಸ್ ನೋರ್

ತೋರ್ನ್ಸ್ ಯಲ್ಲಿ  ಈ ರೀತಿ ಬರೆಯುತ್ತಾರೆ. "ಅಗಣಿತ ಅಧಿಕಾರ ವುಳ್ಳ ನ್ಯಾಯಾಧೀಶರ ಹುದ್ದೆ  ಅದೇ ಸಮಯಕ್ಕೆ

ಭಯ ಉಂಟು ಮಾಡುವ  ತೆರದಲ್ಲಿ ಯಾವುದೇ ರಕ್ಷಣೆ ರಹಿತ ವಾಗಿರುತ್ತದೆ."

                                                     

ಈಗಸ್ಟೆ ಓರ್ವ ನಿವೃತ್ತ ಮುಖ್ಯ  ನ್ಯಾಯಾಧೀಶರ ಜೀವನ ಚರಿತ್ರೆ  ಓದಿ ಮುಗಿದ್ದೇನೆ .ಜಸ್ಟಿಸ್  ಯು ಎಲ್ ಭಟ್ 

ಅವರ  ಸ್ಟೋರಿ ಆಫ್ ಚೀಫ್ ಜಸ್ಟಿಸ್ .ಆಂಧ್ರದ ವಿಶಾಕ ಪಟ್ಟಣದಲ್ಲಿ ಜನಿಸಿ (ಇವರ ತಂದೆ ಅಲ್ಲಿ ಮಹಾರಾಜ 
ಕಾಲೇಜ್ ನಲ್ಲಿ  ಪ್ರಾಂಶುಪಾಲರಾಗಿದ್ದರು )ಮಂಗಳೂರು ,ಮದ್ರಾಸ್ ಗಳಲ್ಲಿ ಓದಿ  ಕಾಸರಗೋಡ್ ನ ಖ್ಯಾತ 

ವಕೀಲ ತಮ್ಮ ಭಾವ  ಬಿ ಎಸ ಕಕ್ಕಿಲ್ಲಾಯ ರ  ಬಳಿ ವಕೀಲ ವೃತ್ತಿ ಆರಂಬಿಸಿ ಸ್ವಲ್ಪ ಕಾಲ ಕಮ್ಯುನಿಸ್ಟ್ ಪಕ್ಷದ ಸಕ್ರಿಯ 

ಕಾರ್ಯಕರ್ತ ನಾಗಿಯೂ ಇದ್ದು ಮುಂದೆ ತಮ್ಮ ಪ್ರತಿಭೆಯ ಬಲದಿಂದ   ಜಿಲ್ಲಾ ನ್ಯಾಯಾಧೀಶ ರಾಗಿ ನಿಯುಕ್ತಿಗೊಂಡು

ಕೇರಳ ರಾಜ್ಯ ಹೈ ಕೋರ್ಟ್ ನ್ಯಾಯಾಧೀಶ ರಾಗುತ್ತಾರೆ .ಅಲ್ಲಿಂದ ಗೌಹಾತಿ  ಹೈ ಕೋರ್ಟ್ ನ ಮುಖ್ಯ ನ್ಯಾಯಾಧೀಶ 

ಮತ್ತೆ  ಮಧ್ಯ ಪ್ರದೇಶ ಹೈ ಕೋರ್ಟ್ ನ ಮುಖ್ಯ ನ್ಯಾಯಾಧೀಶ ಹುದ್ದೆ. ಇವರು ಈ ಮಧ್ಯ ಪ್ರದೇಶ ಕ್ಕೆ ಬರುವಾಗ 

ಅಲ್ಲಿನ  ಹೈ ಕೋರ್ಟ್ ಗುಂಪು ರಾಜಕೀಯದಿಂದ ಬಹಳ ನಿಕೃಷ್ಟ ಅವಸ್ಥೆಯಲ್ಲಿ ಇತ್ತು .ಅದನ್ನು ಸರಿಪದಿಸಲೆಂದೇ 

ಅವರನ್ನು ಅಲ್ಲಿ  ಹಾಕಲಾಯಿತು.ತಮ್ಮ  ಪರಿಶ್ರಮ ಮತ್ತು ಕಾರ್ಯ ಕ್ಷಮತೆಯಿಂದ  ಮಧ್ಯ ಪ್ರದೇಶದ ನ್ಯಾಯಾಂಗ 

ವ್ಯವಸ್ತೆಯಲ್ಲಿ  ಕ್ರಾಂತಿಕಾರಿ ಬದಲಾವಣೆ ತರುವುದರಲ್ಲಿ ಅವರು ಯಶಸ್ವಿ ಯಾಗುತ್ತಾರೆ. ಇದಕ್ಕೆ ಮೊದಲು 

ಗೌಹಾತಿಯಿಂದ  ಕರ್ನಾಟಕ ,ಆಂಧ್ರ , ಅಥವಾ ತಮಿಳ್ ನಾಡಿಗೆ ಬರುವ ಅವರ ಆಸೆ ನೆರವೇರುವುದಿಲ್ಲ .

ಯಾಕೆಂದರೆ  ಇಂತಹ ನಿರ್ಭೀತ  ನ್ಯಾಯ ಮೂರ್ತಿ  ತಮ್ಮ  ರಾಜ್ಯದ  ಹೈ ಕೋರ್ಟ್ ಗೆ ಬರುವುದು 

ಇಲ್ಲಿಯ   ಪ್ರಭಾವ ಶಾಲೀ  ರಾಜಕೀಯ ನಾಯಕರಿಗೆ  ಬೇಕಿರಲಿಲ್ಲ . 

ಮುಂದೆ  ಅವರಿಗೆ  ಬರಬೇಕಿದ್ದ  ಸುಪ್ರೀಂ ಕೋರ್ಟ್ ನ ನ್ಯಾಯಾಧೀಶ ಹುದ್ದೆಯೂ ತಪ್ಪಿತು .ಅದರ ಬಗ್ಗೆ  ಈ ಪುಸ್ತಕಕ್ಕೆ 

ಮುನ್ನುಡಿ ಬರೆದ ಜಸ್ಟಿಸ್ ಕೃಷ್ಣ ಅಯ್ಯರ್ ಅವರ  ಶಬ್ದಗಳಲ್ಲಿ ಓದಿ."Bhat is bold ,brilliant and original.He is known 

for integrity.His views on public issues and institutions are not conditioned by pressures from above

or cravings from below.he is independent of expediencies,oppotunisms and authoritarianisms.

this i thought was a superlative qualification of a judge to function without fear or favour .But where 

lesser judges without vision are in authority over judges ,this rare virtue proves to be a 

drawback.Bhat,a good ,senior and great judge acted unafraid of authoritarian whims and wayward 

destinies .Bhat became a martyr."

ಈ  ಹೊತ್ತಗೆ ಓದುವಾಗ  ಇನ್ನೊಬ್ಬ ನಿರ್ಭೀತ ನ್ಯಾಯಮೂರ್ತಿ ಜಸ್ಟಿಸ್ ಎಸ ಎಸ್ ಸೋಧಿ  ಅವರ ಆತ್ಮ ಕತೆ 

ದಿ  ಅದರ್ ಸೈಡ್ ಆಫ್ ಜಸ್ಟಿಸ್  ಜ್ಞಾಪಕಕ್ಕೆ ಬರುತ್ತದೆ .ಅಶಿಸ್ತಿನ ಕೊಂಪೆಯಾಗಿದ್ದ ದೇಶದ ದೊಡ್ಡ  ನ್ಯಾಯ ಪಾಲಿಕೆ 

ಅಲ್ಲಹಾಬಾದ್  ಹೈ ಕೋರ್ಟ್ ನ್ನು ತಮ್ಮ ಸ್ವಂತ ಪರಿಶ್ರಮ ದಿಂದ  ಒಂದು ದಾರಿಗೆ ತಂದ ಶ್ರೇಯ ಇವರದು .ಅದಕ್ಕೆ 

ಪ್ರತಿ ಫಲ ಸುಪ್ರೀಂಕೋರ್ಟ್ ನ್ಯಾಯಾಧೀಶ ಹುದ್ದೆ ನಿರಾಕರಣೆ !ಅದಕ್ಕೆ ಅವರು ಇನ್ನೊಬ್ಬ ಶ್ರೇಷ್ಟ ನ್ಯಾಯಾಧೀಶರ 

ಈ ವಾಕ್ಯ ಪುನರುಚ್ಚರಿಸುತ್ತಾರೆ ."It is honourable to be a victim of such politics than to be a beneficiary"

( ಅಂತಹ ರಾಜಕಾರಣದ ಫಲಾನುಭವಿ ಆಗುವುದಕ್ಕಿಂತ  ಅದರ ಬಲಿಪಶುವಾಗುವುದು ಲೇಸು ")



ಬಾಲಂಗೋಚಿ:  ಮೂಲತಃ  ಕಮ್ಯೂನಿಸ್ಟ್  ಆಗಿದ್ದ  ಜಸ್ಟಿಸ್  ಭಟ್ ಈಗಿನ  ಕಮ್ಯುನಿಸ್ಟ್ ಅತಿರೇಕ  ಸ್ವತಃ 

ಅನುಭವಿತ್ತಾರೆ .ಕೇರಳದ ತಲೆ ಹೊರೆ ಕಾರ್ಮಿಕರು ಇವರು ರಾಜ್ಯದೊಳಗೆ ವರ್ಗಾವಣೆ ಗೊಳ್ಳುವ ಸಂಧರ್ಭದಲ್ಲಿ 

ಗೃಹ ಸಾಧನ ಸಾಗಾಟದ ಸಮಯದಲ್ಲಿ  ತಮ್ಮ   ಅತಾರ್ಕಿಕ ಬೇಡಿಕೆಗಳನ್ನು ಇಟ್ಟು ಬೆದರಿಸುತ್ತಿದ್ದ  ವಿಷಯ ಬರೆದಿರುವರು .

ಈ ತರಹ ಅರ್ಹರಿಗೆ ಉನ್ನತ ಪದವಿ ವಂಚನೆ ಆದ ಕತೆ ಮಾಸ್ತಿಯವರ ಜೀವನದಲ್ಲಿ ಬರುತ್ತದೆ."ಭಾವ ' ದಲ್ಲಿ 

ತಮಗೆ  ದಿವಾನ್ ಪದವಿ ತಪ್ಪಿದ ವಿಚಾರ  ಮನೋಜ್ಞವಾಗಿ  ವಿವರಿಸಿದ್ದಾರೆ .ತಾವು ದುಖ ತಪ್ತ ರಾಗಿ ಆತ್ತುದು ,ಆ ಮೇಲೆ 

ರಾಮಾಯಣ ದಲ್ಲಿ  ರಾಜ್ಯ ನಿಷೇಧಕ್ಕೆ  ಶ್ರೀರಾಮ ಪ್ರಭು ವಿನ ಕೆತೆ ನೆನೆದು ಸಮಾಧಾನ  ಪಟ್ಟುಕೊಂಡುದನ್ನು  ಬರೆದ ಹಾಗೆ ನೆನಪು.