ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.
ಹೊಂಗೆ ಹೂವ ತೊಂಗಳಲಿ,
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ.
ಬೇವಿನ ಕಹಿ ಬಾಳಿನಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ.
ವರುಷಕೊಂದು ಹೊಸತು ಜನ್ಮ,
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ.
ಒಂದೇ ಒಂದು ಜನ್ಮದಲಿ
ಒಂದೇ ಬಾಲ್ಯ, ಒಂದೇ ಹರೆಯ
ನಮಗದಷ್ಟೇ ಏತಕೋ.
ನಿದ್ದೆಗೊಮ್ಮೆ ನಿತ್ಯ ಮರಣ,
ಎದ್ದ ಸಲ ನವೀನ ಜನನ,
ನಮಗೆ ಏಕೆ ಬಾರದು?
ಎಲೆ ಸನತ್ಕುಮಾರ ದೇವ,
ಎಲೆ ಸಾಹಸಿ ಚಿರಂಜೀವ,
ನಿನಗೆ ಲೀಲೆ ಸೇರದೂ.
ಯುಗ ಯುಗಗಳು ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.
ಅಂಬಿಕಾತನಯದತ್ತ
ಈ ಹಾಡನ್ನು ಕುಲವಧು ಚಿತ್ರದಲ್ಲಿ ನೋಡಿರಿ (ಅಪ್ ಲೋಡರ್ ಗೆ ವಂದಿಸುತ)
www.youtube.com/watch?v=T3O211xkJ8o
ಯುಗಾದಿ ಭವಿಷ್ಯ
ಈ ವರ್ಷ ಆದಿಯಲ್ಲಿ ನೀರಿನ ಕೊರತೆಯಿಂದ ಮಳೆ ಬೆಳೆಗಳಿಗೆ ಹಾನಿ. ಧಾನ್ಯ ,ತರಕಾರಿಗಳ ಬೆಲೆ ಗಗನಕ್ಕೆ .
ಅರ್ಥಿಕ ಪರಿಸ್ಥಿತಿ ಏರು ಪೇರು.
ಜೂನ್ ಜುಲೈ ಮಳೆ ಹೊಂದಿ ಕೊಂಡು ಮನೆಯ ಮತ್ತು ಮನಶಾಂತಿ ನಿರ್ಧಾರ.
ಸಧ್ಯಕ್ಕೆ ರಾಜಕಾರಣ ಸಂಬಂದಿ ಉದ್ಯೋಗ ಉತ್ತಮ. ಸಾಫ್ಟ್ವೇರ್ ಉದ್ಯೋಗ ಅವಕಾಶ ಸ್ವಲ್ಪ ಕಮ್ಮಿ. ಅದರ ಪರಿಣಾಮ
ಇತರ ಕ್ಷೇತ್ರಗಳಲ್ಲೂ ಕಾಣಿಸದಿರದು. ವಿವಾಹಾನ್ವೇಷಿ ಹುಡುಗಿಯರು ಇತರೇ ಉದ್ಯೋಗಿಗಳನ್ನೂ ಪರಿಗಣಿಸುವುದು
ಉತ್ತಮ.
ವರ್ಷದ ಕೊನೆಯಲ್ಲಿ ಶಾಂತಿ ಸಿಗಬಹುದು.ಸುಬ್ರಹ್ಮಣ್ಯ ಸೇವೆ ಎಲ್ಲರಿಗೂ ಒಳ್ಳೆಯದು.
ಬೆಂಬಲಿಗರು
ಗುರುವಾರ, ಏಪ್ರಿಲ್ 11, 2013
ಮಂಗಳವಾರ, ಏಪ್ರಿಲ್ 9, 2013
USE AND ABUSE OF ANTIBIOTICS
Antibiotics by definition are the substances produced by the microbes which have microbicidal
activity. But in practice synthetic substances which are used as anti microbes are also called
antibiotics.Science has helped us to develop wonderful drugs to combat dreadful infections
be it bacterial,fungal or viral. The debate is are they abused?
Common ailments like rhinosinusitis which in more than 90%of cases caused by virus and
self limiting do not warrant treatment with antibacterial drugs.Similarly diarrhea in children
most of caused by rota virus requires only re hydration with oral re hydration solution .But
doctors blindly prescribe antibiotics ;sometimes patients insist upon them to get quick relief.
Indiscriminate use of antibiotics has lead to development of monster organisms which are
resistant to most of antibiotics.In addition companies advertise the soaps,detergents and even tooth
pastes with antibacterial substances to kill invisible bacteria .In practise they kill
commensals or the native harmless and useful microbes ;thus inviting pathogenic strains to cause
disease.
ಘನವೆತ್ತ ರಾಜ್ಯಪಾಲರು -೩
ಶ್ರೀ ಧರ್ಮ ವೀರ
ಧರ್ಮ ವೀರರು ಹಳೆಯ ಆಯ್ ಸಿ. ಎಸ್ ಗೆ ಸೇರಿದವರು.ತನ್ನ ಪ್ರಾಮಾಣಿಕ ತೆ ಮತ್ತು ಕಾರ್ಯ ಕ್ಷಮತೆಯಿಂದ ಕೇಂದ್ರದಲ್ಲಿ
ಕ್ಯಾಬಿನೆಟ್ ಸೆಕ್ರೆಟರಿ ಹುದ್ದೆಯ ವರೆಗೆ ಏರಿದವರು.ಇದೂ ನೆಹರು ಕಾಲದಲ್ಲಿ. ಆ ಮೇಲೆ ಜೆಕೊಸ್ಲಾವೆಕಿಯಾದಲ್ಲಿ ನಮ್ಮ
ರಾಯಭಾರಿಯಾಗಿ ಸೇವೆ.ಮತ್ತೆ ಹರ್ಯಾಣ,ಪಶ್ಚಿಮ ಬಂಗಾಳಗಳ ರಾಜ್ಯಪಾಲ. ಅಲ್ಲಿಂದ ಆಗಿನ ಮೈಸೂರು ರಾಜ್ಯದ
ರಾಜ್ಯ ಪಾಲರಾಗಿ ಬೆಂಗಳೂರಿಗೆ.ಇವರು ಬಂದಾಗ ಲವ ಕುಶ ರೆಂದು ಪ್ರಸಿದ್ದಿ ಪಡೆದಿದಿದ್ದ ವೀರೇಂದ್ರ ಪಾಟೀಲ್ ಮತ್ತು
ಅವರ ಅರ್ಥ ಮಂತ್ರಿ ರಾಮಕೃಷ್ಣ ಹೆಗಡೆಯವರ ಆಡಳಿತದ ಸುವರ್ಣ ಕಾಲ.ಲೋಕ ಸಭಾ ಚುನಾವಣೆಯಲ್ಲಿ ಪಕ್ಷ ಬಹುಮತ
ಕಳೆದು ಕೊಂಡಾಗ ಮಂತ್ರಿಮಂಡಲ ರಾಜೀನಾಮೆ. ರಾಷ್ಟ್ರಪತಿ ಆಡಳಿತ .ಧರ್ಮವಿರ ರ ಅನುಭವ ಮತ್ತು ಕ್ಷಮತೆ ಯ
ಫಲ ಕನ್ನಡಿಗರಿಗೆ ಸಿಕ್ಕಿತು.ಭಯ ಅಥವಾ ಪಕ್ಷಪಾತ ,ರಾಗ ಅಥವಾ ದ್ವೇಷವಿಲ್ಲದ ಆಡಳಿತ.
ಪೋಲಿಸ್ ವ್ಯವಸ್ತೆಯ ಸುಧಾರಣೆ ಬಗ್ಗೆ ಇವರ ನೇತೃತ್ವದಲ್ಲಿಯ ಆಯೋಗ ನೀಡಿದ ವರದಿ ಬಹು ಪ್ರಸಿದ್ದ.ಆದರೆ ಸ್ವಾರ್ಥ ದಿಂದ
ಅದರ ಶಿಫಾರಸುಗಳ ಪಾಲನೆ ಮಾಡಲು ರಾಜಕಾರಿಣಿಗಳಿಗೆ ಅಸಡ್ಡೆ.
ಮುಂದೆ ಇವರಿಗೆ ಪದ್ಮವಿಭೂಷಣ ಗೌರವ. ಇವರ ಜೀವನ ಚರಿತ್ರೆ 'ಮೆಮರೀಸ್ ಆಫ್ ಎ ಸಿವಿಲ್ ಸರ್ವೆಂಟ್' ಎಲ್ಲರು ಓದ
ಬೇಕಾದ ಹೊತ್ತಿಗೆ.
ಶ್ರೀ ಟಿ ಏನ್ ಚತುರ್ವೇದಿ
ಶ್ರೀ ಚತುರ್ವೆದಿಯವರೂ ಐ ಎ ಎಸ ಗೆ ಸೇರಿದವರು.ಕೇಂದ್ರದಲ್ಲಿ ಗೃಹ ಕಾರ್ಯದರ್ಶಿ ರಾಗಿದ್ದಾಗ ಪಂಜಾಬ್ ,ಕಾಶ್ಮೀರ ಸಮಸ್ಯೆ
ಗಳ ಪರಿಹಾರಕ್ಕೆ ಯತ್ನಿಸಿದವರು.ಮುಂದೆ ಭಾರತದ ಮಹಾ ಲೆಕ್ಕ ಪರಿಶೋದಕ ರಾಗಿ ನೇಮಕ .ಬೊಫೋರ್ಸ್
ಕರ್ಮಕಾಂಡವನ್ನು ವಿಮರ್ಶಿಸಿದವರು.ಮುಂದೆ ರಾಜ್ಯ ಸಭಾ ಸದಸ್ಯ.ಕರ್ನಾಟಕ ದ ರಾಜ್ಯಪಾಲರಾಗಿ ನಿಯುಕ್ತಿ.
ಈ ಅವಧಿಯಲ್ಲಿ ವಿಶ್ವ ವಿದ್ಯಾಲಯಗಳ ಆಡಳಿತ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ.ಅವರ ನಿರ್ಣಯಗಳು
ವಿವಾದ ಮುಕ್ತ.ರಾಜ್ಯದಲ್ಲಿ ಕಾಂಗ್ರೆಸ್ ಜೆ ಡಿ ಎಸ. ಸರಕಾರಕ್ಕೆ ಜೆ ಡಿ ಎಸ. ಬೆಂಬಲ ಹಿಂತೆಗೆದು ಕೊಂಡಾಗ ಮುಖ್ಯ ಮಂತ್ರಿ
ಧರ್ಮ ಸಿಂಗರಿಗೆ ಬಹು ಮತ ಸಾಬೀತಿಗೆ ಸಾಕಷ್ಟು ಸಮಯ ಕೊಟ್ಟುದು ಅವರ ನಿಸ್ಪಕ್ಷಪಾತ ನಡೆಗೆ ಸಾಕ್ಷಿ. ಅವರನ್ನು
ಏನ್ ಡಿ ಎ ಸರಕಾರ ನೇಮಿಸಿದ್ದರೂ ಅವರು ಅದರ ಏಜೆಂಟ್ ರಂತೆ ಎಂದೂ ನಡೆಯಲಿಲ್ಲ .
ಶ್ರೀಯುತರಿಗೆ ಪದ್ಮ ಭೂಷಣ ನೀಡಿ ಗೌರವಿಸಲಾಗಿದೆ.
ಬಾಲಂಗೋಚಿ: ರೋಟರಿ ಲಯನ್ಸ್ ನವರೂ ಗವರ್ನರ್ ಗೆ ಸಮನಾಗಿ ರಾಜ್ಯಪಾಲ ಎಂದು ಬಳಸುತ್ತಾರೆ.ಇದು ಅಸ್ಟು
ಸಮಂಜಸವೆನಿಸುವುದಿಲ್ಲ. ಆಡಳಿತಾಧಿಕಾರಿ ಎಂದು ಕರೆಯುವುದು ಹೆಚ್ಚು ಸೂಕ್ತ.
ಘನವೆತ್ತ ರಾಜ್ಯಪಾಲರು-೨ ಡಾ ಪಿ.ಸಿ ಅಲೆಕ್ಷಾ೦ಡರ್
ಪಿ ಸಿ ಅಲೆಕ್ಷಾನ್ದರ್
ಪಿ ಸಿ ಅಲೆಕ್ಷಾನ್ದರ್ ದೇಶ ಕಂಡ ಅತ್ಯುತ್ತಮ ರಾಜ್ಯಪಾಲರಲ್ಲಿ ಒಬ್ಬರು. ಬ್ರಿಟನ್ ನಲ್ಲಿ ನಮ್ಮ ರಾಯಭಾರಿಯಾಗಿದ್ದ್ದ
ಅವರನ್ನು ತಮಿಳ್ನಾಡಿನ ರಾಜ್ಯಪಾಲರಾಗಿ ಹೋಗುವಂತೆ ಆಗಿನ ಪ್ರಧಾನಿ ರಾಜೀವ ಗಾಂಧಿಯವರು ಕೇಳಿದಾಗ
ಇವರು ಹಾಕಿದ ಷರತ್ತು ಕೊಂಗ್ರೆಸ್ಸ್ ಪಕ್ಷದವರು ಆಡಳಿತ ದಲ್ಲಿ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳಬೇಕು..
ಆಗ ತಮಿನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆಯಿತ್ತು.ರಾಜೀವ ಗಾಂಧಿಯವರು ಅಸ್ತು ಎಂದ ಮೇಲೆಯೇ ಆ ಹುದ್ದ್ದೆಯನ್ನು ಒಪ್ಪಿದರು.
ವಿಶ್ವೇಶ್ವರಯ್ಯನರು ದಿವಾನ ರಾಗುವ ಮೊದಲು ತಮ್ಮ ತಾಯಿಯರನ್ನು ತಮ್ಮ ಬಂಧು ಬಳಗದವರಿಗೆ ಅನುಕೂಲ
ಮಾಡುವಂತೆ ಕೇಳಿಕೊಳ್ಳಬಾರದೆಂಬ ಷರತ್ತು ಇಟ್ಟಿದ್ದರಂತೆ.ರಾಜ್ಯಪಾಲರಾಗಿ ಒಂದು ವರ್ಷ ರಾಷ್ಟ್ರಪತಿ ಆಳ್ವಿಕೆಯನ್ನು
ಎಲ್ಲರೂ ಬೇಶ್ ಎನ್ನುವಂತೆ ನಡೆಸಿದರು.ಅಲೆಕ್ಷಾನ್ದರ್ ಅಂತವರು ರಾಜ್ಯಪಾಲರಾಗಿದ್ದರೆ ಚುನಾಯಿತ ಪ್ರತಿನಿಧಿಗಳ
ಸರಕಾರಕ್ಕಿಂತಲೂ ಉತ್ತಮ ಎಂದು ಎಲ್ಲರೂ ಹೇಳುವಂತೆ ಆಯಿತು.
ಒಂದು ದಿನ ಇವರ ಮಗಳು ಟ್ರಾಫಿಕ್ ಸಿಗ್ನಲ್ ಅಲಕ್ಷಿಸಿದ್ದುದಕ್ಕೆ ಕಾನ್ಸ್ಟೇಬಲ್ ನಿಲ್ಲಿಸಿ ಫೈನ್ ಹಾಕಿದರು.ಆ ಮೇಲೆ ಗವರ್ನರ್
ಅವರ ಮಗಳೆಂದು ತಿಳಿದು ಒಡನೆ ರಾಜಭವನಕ್ಕೆ ತೆರಳಿ ಕ್ಷಮೆ ಕೇಳಿದಾಗ 'ನೀನು ಮಾಡಿದ ತಪ್ಪು ಎಂದರೆ ಕರ್ತವ್ಯ ಪಾಲಿಸಿದ
ಬಗ್ಗೆ ಕ್ಷಮೆ ಕೇಳಿದ್ದು.'ಕಾನೂನು ಎಲ್ಲರಿಗು ಒಂದೇ.ಒಳ್ಳೆಯ ಕೆಲಸ ಮಾಡಿದೆಯೆಂದು ಬೆನ್ನು ತಟ್ಟಿ ಕಳಿಸಿದರು.ಇವರ ನೇಮಕ
ವಾದಾಗ ಕಾಂಗ್ರೆಸ್ ಪಕ್ಷದ ಏಜೆಂಟ್ ಎಂದು ವಿರೋದಿಸಿದ್ದ ಕರುಣಾನಿಧಿಯವರೂ ಇವರನ್ನು ಬಿಳ್ಕೊಡುವಾಗ 'ಒಬ್ಬ
ಅಲೆಕ್ಷಾನ್ದರ್ ಹಿಂದೆ ನಮ್ಮ ದೇಶವನ್ನು ಗೆದ್ದರೆ,ಈ ಅಲೆಕ್ಷಾನ್ದರ್ ತಮಿಳರ ಹೃದಯವನ್ನೇ ಗೆದ್ದ 'ಎನ್ನುವಂತೆ ಆಯಿತು.
ಮುಂದೆ ಇವರು ಮಹಾರಾಷ್ಟ್ರದ ರಾಜ್ಯಪಾಲರಾದಾಗಲೂ ಬಿ ಜೆ ಪಿ ಶಿವಸೇನೆಯವರು ಮೊದಲು ಸಂಶಯದಿಂದ
ನೋಡಿದರೂ
ಇವರ ನಿಷ್ಪಕ್ಷಪಾತ ನಡವಳಿಕೆ ಕಂಡು ಎರಡನೇ ಅವಧಿಗೆ ಮುಂದುವರಿಸುವಂತೆ ಮಾಡಿದರು.ಮೊದಲು ಇವರನ್ನು
ನೇಮಿಸಿದುದು ಕಾಂಗ್ರೆಸ್ ಸರಕಾರ ,ಪ್ರಧಾನಿ ನರಸಿಂಹ ರಾಯರು.ಆಗ ಮಹಾರಾಸ್ತ್ರದಲ್ಲೂ ಅವರ ಪಕ್ಷದ ಆಢಳಿತ ವಿತ್ತು.
ಎರಡನೇ ಅವಧಿಗೆ ಆಗುವಾಗ ಕೇಂದ್ರದಲ್ಲಿ ವಾಜಪೇಯಿ ಪ್ರಧಾನಿ.ರಾಜ್ಯದಲ್ಲಿ ಶಿವಸೇನ ಬಿ ಜೆ ಪಿ ಆಡಳಿತವಿತ್ತು.ಹಿಂದೂ
ವಾದಿಗಳಾದ ಶಿವಸೆನೆಯವರೇ ಇವರ ಎರಡನೇ ಅವಧಿಗೆ ಒತ್ತಾಯಿಸಿದರೆಂದರೆ ಇವರ ಹಿರಿಮೆ ಅರ್ಥ ವಾಗುವುದು.
ಏನ್ ಡಿ ಎ ಇವರನ್ನು ರಾಷ್ಟ್ರಪತಿ ಮಾಡಬೇಕೆನ್ದಿತ್ತು.ಆದರೆ ಕಾಂಗ್ರೆಸ್ ನ ಅಸಹಕಾರದಿಂದ ಅದು ಸಾಧ್ಯವಾಗಲಿಲ್ಲ.
ಏನ್.ಸಿ.ಪಿ. ಬೆಂಬಲಿತ ಹುರಿಯಾಳಾಗಿ ಮಹಾರಾಷ್ಟ್ರ ವಿಧಾನ ಸಭೆಯಿಂದ ರಾಜ್ಯಸಭೆಗೆ ಸ್ಪರ್ದಿಸಿದ ಇವರನ್ನು ೩/೪
ಬಹುಮತದಿಂದ ಆರಿಸಿ ಮಾರಾಟಿಗಳು ಕೃತಜ್ಞತೆ ಮೆರೆದರು.
ಶ್ರೀ ಅಲೆಕ್ಷಾನ್ದರ್ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಕಾಲದಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಮುಖ್ಯ
ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿದವರು.ಉದಾರ ಚರಿತರು.
ಇವರ ಜೀವನ ಚರಿತ್ರೆ' ಥ್ರೂ ದ ಕಾರಿದೊರ್ಸ್ ಆಫ್ ಪವರ್ ' ಭಾರತೀಯರೆಲ್ಲಾ ಓದ ಬೇಕಾದ ಪುಸ್ತಕ.
ಶುಕ್ರವಾರ, ಏಪ್ರಿಲ್ 5, 2013
ಘನವೆತ್ತ ರಾಜ್ಯಪಾಲರು ೧
ರಾಜ್ಯಪಾಲರ ಹುದ್ದೆಯ ವಿಶೇಷವೆಂದರೆ ನೀವು ೨೪ ಗಂಟೆ ಸುಖವಾಗಿ ನಿದ್ದೆ ಮಾಡ ಬಹುದು ಅಥವಾ ಕೆಲಸ ಮಾಡ
ಬಹುದು ,ಯಾರೂ ಅಡ್ಡಿ ಬರರು ;ಇದು ಮಾಜಿ ರಾಜ್ಯಪಾಲ ಮತ್ತು ಮುತ್ಸದ್ಧಿ ಸಿ.ಸುಬ್ರಹ್ಮಣ್ಯಂ ಅವರ ನುಡಿಗಳು.ರಾಷ್ಟ್ರಪತಿ
ಆಳ್ವಿಕೆ ಇಲ್ಲದಿದ್ದರೆ ಅವರೊಂದು
ಉತ್ಸವ ಮೂರ್ತಿ.ವಯಸ್ಸು ಆಗಿ ನಿವೃತ್ತರಾದ ರಾಜಕಾರಿಣಿಗಳಿಗೆ ಪುನರ್ವಸತಿ ತಾಣ.ಆದರೂ ಕೆಲವರು ಈ ಹುದ್ದೆಗೆ ತಮ್ಮ
ಅವಿವೇಚನೆಯಿಂದ ಕೆಟ್ಟ ಹೆಸರು ತಂದಿದ್ದಾರೆ.ಉದಾ ಶ್ರೀ ಜಿ ದಿ ತಪಾಸೆ,.ಶ್ರೀ ರಾಮ ಲಾಲ್,ಶ್ರೀ ಬೂಟಾ ಸಿಂಗ್, ರೋಮೇಶ್
ಭಂಡಾರಿ ಹಂಸ ರಾಜ ಭಾರದ್ವಾಜ್ ಹೆಸರಿಸ ಬಹುದಾದ ಕೆಲವರು.
ತಮ್ಮ ಸಂವಿಧಾನ ಭದ್ಧತೆ ನಿಸ್ಪಕ್ಷಪಾತ ಮತ್ತ್ತು ಮಾನವೀಯ ಗುಣಗಳಿಂದ ಈ ಹುದ್ದೆಯ ಘನತೆ ಹೆಚ್ಚಿಸಿ ಎಲ್ಲರಿಂದಲೂ ಸೈ
ಎನಿಸಿ ಕೊಂದವರೂ ಹಲವರಿದ್ದಾರೆ.ಶ್ರೀ ಸಿ.ಸುಬ್ರಹ್ಮಣ್ಯಂ ,ಪಿ ಸಿ.ಅಲೆಕ್ಷಾನ್ದರ್, ಧರ್ಮ ವೀರ ,ಬಿ ಕೆ ನೆಹರು ಟಿ ಏನ್
ಚತುವೇದಿ ಈ ವರ್ಗಕ್ಕೆ ಸೇರಿದವರು.
ಇವರಲ್ಲಿ ಸಿ ಸುಬ್ರಮಣ್ಯಮ್ ಅವ ರು ಒಬ್ಬ ಭಾರತ ರತ್ನ. ಸ್ವಾತಂತ್ರ ಹೋರಾಟಗಾರ,ಹಳೆ ಮದ್ರಾಸ್ ರಾಜ್ಯದಲ್ಲಿ
ಮಂತ್ರಿ,ಕೇಂದ್ರದಲ್ಲಿ ಕೃಷಿ,ಅರ್ಥ,ಮತ್ತು ರಕ್ಷಣೆ ಯಂತ ಭಾರೀ ಖಾತೆಗಳನ್ನು ಯಶಶ್ವಿಯಾಗಿ ನಿರ್ವಹಿಸಿದ ಮುತ್ಸದ್ದಿ. ಇವರನ್ನು
ಭಾರತದ ಹಸಿರು ಕ್ರಾಂತಿಯ ಹರಿಕಾರ ಎಂದು ಕರೆಯುತ್ತಾರೆ.ಕೃಷಿ ವಿಜ್ಞಾನಿ ಎಂ ಎಸ ಸ್ವಾಮಿನಾಥನ್ ಅವರ ಬೆಂಬಲ
ದೊಂದಿಗೆ ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ಸಾಧಿಸಿ
ದೇಶವು ಆಹಾರ ಸ್ವಾವಲಂಬನೆ ಸಾದಿಸುವಂತೆ ಮಾಡಿದವರು.ಅಲ್ಲದೆ ಶ್ರೀ ವರ್ಗಿಸ್ ಕುರಿಯನ್ ಅವರಿಗೆ ಪ್ರೋತ್ಸಾಹ ವಿತ್ತು
ಆಪರೇಷನ್ ಫ್ಲಡ್ ಮೂಲಕ ಕ್ಷೀರ ಕ್ರಾಂತಿಗೆ ಬೆನ್ನೆಲುಬಾವದವರು.ಸ್ವಯಂ ಸಂವಿಧಾನ ರಚನಾ ಸಭೆಯ ಅಂಗವಾಗಿದ್ದ
ಹಿರಿಯರು.
ವಿಪಿ ಸಿಂಗ್ ಪ್ರಧಾನಿಯಾಗಿದ್ದಾಗ ಮದ್ರಾಸಿನಲ್ಲಿ ನಿವೃತ್ತಿ ಜೀವನ ನಡೆಸುತ್ತಿದ್ದ ಇವರನ್ನು ವಿನಂತಿಸಿ ಮಹಾರಾಷ್ಟ್ರ ರಾಜ್ಯದ
ರಾಜ್ಯ ಪಾಲರನ್ನಾಗಿ ಮಾಡಿದರು.ದಂತ ಗೋಪುರದಲ್ಲಿ ಸುಮ್ಮನೆ ಕುಳಿತು ಕೊಳ್ಳುವ ಪ್ರವೃತ್ತಿ ಇವರದಲ್ಲ.ರಾಜ ಭವನ ದ
ದುಂದು ವೆಚ್ಚಗಳಿಗೆ ಕಡಿವಾಣ ಹಾಕಿದರು.ರಾಜ ಭವನವನ್ನು ಜನರಿಗೆ ತೆರೆದಿಟ್ಟರು.ಅಲ್ಲಿ ಸಮಾಜ ಸೇವಾ ಸಂಸ್ತೆಗಳು
ಸಭೆಗಳನ್ನು ನಡೆಸಲು ಅನುವು ಮಾಡಿ ಕೊಟ್ಟರು.ವಿಶ್ವ ವಿದ್ಯಾಲಯಗಳ ಕುಲಾಧಿಪತಿಯಾಗಿ ಅವುಗಳ ಆಗು ಹೋಗುಗಳಲ್ಲಿ
ವಿಶೇಷ ಆಸಕ್ತಿ ವಹಿಸಿದರು.ರಾಜ್ಯಪಾಲರನ್ನು ಹಿಸ್
ಎಕ್ಷೆಲ್ಲನ್ಸಿ ಎಂದು ಸಂಬ್ಹೊದಿಸುವುದನ್ನು ನಿಲ್ಲಿಸ ಪ್ರಯತ್ನಿಸಿದರು.ತಾವು ಸಂಚರಿಸುವ ದಾರಿಯಲ್ಲಿ ಟ್ರಾಫಿಕ್ ನಿಲುಗಡೆ ಮಾಡಿ
ಜನ ಸಾಮಾನ್ಯರಿಗೆ ತೊಂದರೆ ಮಾಡದಂತೆ ಆದೇಶ ನೀಡಿದರು.ಒಟ್ಟಿನಲ್ಲಿ ಇವರು ಜನರ ರಾಜ್ಯಪಾಲ ಎಂದು ಹೆಸರು
ಗಳಿಸಿದರು.ಮುಂಬೈ ನಗರದ ತ್ಯಾಜ್ಯ ವಿಲೇವಾರಿ ಯಲ್ಲಿ ಆವಿಷ್ಕಾರ ತರಲು ಪ್ರಯತ್ನ ನಡೆಸಿದರು .
ಗೋವಾ ದಲ್ಲಿ ವಿಜ್ಞಾನ ಕಾಂಗ್ರೆಸ್ ನಡೆಯಿತು .ಪ್ರಧಾನಿ ನರಸಿಂಹ ರಾಯರು ಮುಖ್ಯ ಅತಿಥಿ.ರಾಜ್ಯಪಾಲ ರಾದುದರಿಂದ
ಇವರೂ ಉಪಸ್ತಿತ .ಕಾರ್ಯಕ್ರಮ ನಂತರ ವಿಶ್ರಮಿಸಲು ರಾಜಭವನಕ್ಕೆ ತೆರಳಲು ಅನುವಾದ ಇವರನ್ನು ವಿಜ್ಞಾನಿಗಳು ಚಹಾ
ಕೂಟ ಕ್ಕೆ ಬರಲು ಒತ್ತಾಯಿಸಿದರು.ಆ ಕೂಟ ದಲ್ಲಿ ಅನೌಪಚಾರಿಕವಾಗಿ ಮಾತ ನಾದುತ್ತ ಸುಬ್ರಹ್ಮಣ್ಯಂ ಪ್ರಧಾನಿಯವರ
ಸಮಯ ಮೌಲ್ಯ ಯುತವಾದುದು.ಅವರು ಸಣ್ಣ ಪುಟ್ಟ ಉಧ್ಘಾಟನೆ ,ಚಿಲ್ಲರೆ ಕಾರ್ಯಗಳಿಗೆ ಸಮಯ ವ್ಯಯಿಸದೇ ರಾಷ್ಟ್ರ ದ
ಪ್ರಮುಖ ಸಮಸ್ಯೆಗಳ
ತ್ತ ಗಮನ ಹರಿಸ ಬೇಕೆಂದು ಹೇಳಿದರು.ಇದು ಒಂದು ಆಫ್ ದಿ ರೆಕಾರ್ಡ್ ಹೇಳಿಕೆ .ಇದನ್ನು ಅಲ್ಲಿದ್ದ ಒಬ್ಬ ಪತ್ರಕರ್ತ ರಾಜ್ಯ
ಪಾಲರಿಂದ
ಪ್ರಧಾನಿಗಳ ಕಾರ್ಯ ವೈಖರಿಯ ಟೀಕೆ.ಎಂದು ದೊಡ್ಡದಾಗಿ ಪ್ರಕಟಿಸಿದರು.ಪತ್ರಿಕಾ ಸ್ವಾತಂತ್ರ್ಯದ ದುರುಪಯೋಗ.
ಇದರಿಂದ ಮನನೊಂದು ಸುಬ್ರಹ್ಮಣ್ಯಂ ರಾಜೀನಾಮೆ ನೀಡಿದರು.ಪ್ರಧಾನಿಯಾಗಲಿ ರಾಷ್ಟ್ರಪತಿಗಳಾಗಲೀ ಅವರನ್ನು
ಹಿಂತೆಗೆಯುವಂತೆ ಕೇಳಲಿಲ್ಲ.
ಖ್ಯಾತ ನ್ಯಾಯವಾದಿ ಸಂವಿದಾನ ತಜ್ಞ ನಾನಿ ಪಾಲ್ಕಿವಾಲ ಹೀಗೆ ಪ್ರತಿಕ್ರಿಯೆ ನೀಡಿದರು,' ಶ್ರೀ ಸುಬ್ರಹ್ಮಣ್ಯಂ ಅವರ
ರಾಜೀನಾಮೆ ಅನಾವಶ್ಯಕ ವಾಗಿದ್ದರೆ ಅದನ್ನು ಒಪ್ಪಿ ಕೊಂಡ ಸರಕಾರ ದ ಕ್ರಮ ಬಂಡ ತನದ ಪರಮಾವಧಿ.ಮಹಾರಾಷ್ಟ್ರದ
ಜನತೆ ಸುಬ್ರಹ್ಮಣ್ಯಂ ಅವರ ನಾಯಕತ್ವ ,ದೂರ ದೃಷ್ಟಿ ,ಮಾರ್ಗದರ್ಶನ ಮತ್ತು ಜನಸಾಮಾನ್ಯರ ಏಳಿಗೆಗೆ ಇದ್ದ ಬದ್ಧತೆ ಯನ್ನು
ಮರೆಯಲಾರರು.'ಇವರ ಜೀವನ ಚರಿತ್ರೆ 'ಹ್ಯಾಂಡ್ ಆಫ್ ಡೆಸ್ಟಿನಿ ' ಮೂರು ಸಂಪುಟಗಲ್ಲಿ ಭಾರತೀಯ ವಿದ್ಯಾಭವನ
ಪ್ರಕಟಿಸಿದೆ.ಓದ ಬೇಕಾದ ಪುಸ್ತಕ.
ಬುಧವಾರ, ಏಪ್ರಿಲ್ 3, 2013
ಮೂತ್ರದ ಕಲ್ಲುಗಳು
ಇತ್ತೀಚಿಗೆ ಮೂತ್ರಾಂಗ ಕಲ್ಲುಗಳಿಂದ ಬಳಲುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.ಈ ರೋಗವು ಅಸಹನೀಯ ನೋವು ಉಂಟು
ಮಾಡುವುದಲ್ಲದೆ ಮೂತ್ರ ಪಿಂಡದ ವಿನಾಶಕ್ಕೂ ಕಾರಣವಾಗ ಬಹುದು.
ಬಹಳ ಮಂದಿಗೆ ಶರೀರದಲ್ಲಿ ಕಿಡ್ನಿ ಅಥವಾ ಮೂತ್ರ ಪಿಂಡ ಇರುವ ಜಾಗದ ಬಗ್ಗೆ ತಪ್ಪು ಕಲ್ಪನೆಗಳಿವೆ.ಕೆಲವರು ವೃಷಣಗಳನ್ನೇ ಕಿಡ್ನಿ
ಎಂದು ತಿಳಿದುಕೊಂಡಿದ್ದಾರೆ.ಮೇಲಿನ ಒಂದು ಮತ್ತು ಎರಡನೇ ಚಿತ್ರದಿಂದ ಮೂತ್ರಪಿಂಡ (ಕಿಡ್ನಿ) ಶರೀರದಲ್ಲಿ ಇರುವ ಜಾಗ
ಯಾವುದೆಂದು ತಿಳಿಯ ಬಹುದು .
ರೋಗ ಲಕ್ಷಣಗಳು.
ಮೂತ್ರಾಂಗ ಕಲ್ಲುಗಳು ತೀವ್ರತರ ನೋವು ಉಂಟುಮಾಡುತ್ತವೆ. ಈ ನೋವು ಬೆನ್ನಿನ ಪಾರ್ಶ್ವದ ಮೇಲ್ಬಾಗದಿಂದ ,ಹೊಟ್ಟೆಯ
ಬದಿ,ಮತ್ತು ಕೆಳಗೆ ವ್ರುಶಣದ ವರೆಗೆ ಬರಬಹುದು.
ಕಲ್ಲಿಗೆ ಕಾರಣಗಳು.
೧ ಸಾಕಷ್ಟು ನೀರು ಸೇವಿಸದಿರುವುದು
೨.ಉಪ್ಪಿನ ಅಂಶ ಅಧಿಕ ಸೇವನೆ
೩.ಆಗಾಗ್ಗೆ ವಾಹನ ಯಾತ್ರೆ ಮಾಡುವುದು.ಪ್ರಯಾಣ ನಂತರ ಮೂತ್ರ ಹಳದಿಯಾಗುವುದಿಲ್ಲವೇ. ನಮ್ಮ ಶರೀರದಿಂದ ನೀರು
ಆವಿಯಾಗಿ ಮೂತ್ರ ಹೆಚ್ಚು ಸಾಂದ್ರಿತ ವಾಗುವುದು.
೪. ಫ್ಯಾನ್ ಹಾಕಿ ಮಲಗುವುದು ,ಸೊಳ್ಳೆ ಮತ್ತು ಸೆಖೆ ತಡೆಯಲು ಫ್ಯಾನ್ ಹಾಕಿ ಮಲಗುವುದರಿಂದಲೂ ಶರೀರದ ನೀರಿನ ಅಂಶ
ಆವಿಯಾಗುವುದು .
೫.ಅದಿಕ ಸಸಾರ ಜನಕ (ಪ್ರೋಟೀನ್) ಸೇವನೆ.ಮುಖ್ಯವಾಗಿ ಮಾಂಸಾಹಾರ.
ಪರೀಕ್ಷೆ
ಹೊಟ್ಟೆಯ ಅಲ್ಟ್ರಾಸೌಂಡ್ ಸ್ಕಾನ್ ಮಾಡಿಸಿ ಕಲ್ಲು ಪತ್ತೆ ಹಚ್ಚ ಬಹುದು.
ಚಿಕಿತ್ಸೆ.
ನೋವಿಗೆ ನೋವಿನ ಮಾತ್ರೆ ಮತ್ತು ಇಂಜೆಕ್ಷನ್ ಕೊಡುತ್ತಾರೆ
ನೀರು ಜಾಸ್ತಿ ಕುಡಿಯುವುದು.ದಿನಕ್ಕೆ ಕನಿಸ್ಟ ೨ ಲೀಟರ್ ನೀರು ಕುಡಿಯಬೇಕು.
೭ಮಿ.ಮಿ ಗಿಂತ ಸಣ್ಣ ಕಲ್ಲು ಔಷಧಿ ಯಿಂದ ಹೋಗ ಬಹುದು .ದೊಡ್ಡ ಕಲ್ಲುಗಳನ್ನು ಲಿತೋತ್ರಿಪ್ಸಿ ,ಎಂದರೆ ಆಪರೇಷನ್ ಇಲ್ಲದೆ
ಹುಡಿಮಾಡಿ ತೆಗೆಯುವುದು,ಆಪರೇಷನ್ ,ಮೂತ್ರನಾಳದ ಮೂಲಕ ಟ್ಯೂಬ್ ಹಾಕಿ ತೆಗೆಯುವುದು ಇತ್ಯಾದಿ ವಿಧಾನಗಳಿವೆ .
ನೋವಿನಿಂದ ಬಹಳ ವಾನ್ತಿಯಾದರೆ ಮಾತ್ರ ಡ್ರಿಪ್ ಹಾಕುತ್ತಾರೆ.ಉಳಿದಂತೆ ಡ್ರಿಪ್ ಹಾಕಿ ಕಲ್ಲು ತೆಗೆಯುವುದು ವಿವಾದಾಸ್ಪದ.
ಬಾಲಂಗೋಚಿ.: ಹಿಂದೆ ರೇಶನ್ ಅಕ್ಕಿಯಲ್ಲಿ ತೆಗೆದಸ್ಟು ಮುಗಿಯದ ಕಲ್ಲುಗಳಿರುತ್ತಿದ್ದವು.ಅದನ್ನು ತಿಂದರೂ ಯಾರಿಗೂ ಕಲ್ಲಿನ
ಉಪದ್ರ ಇರಲಿಲ್ಲ .ಈಗ ಡಿಸ್ಟೋನ್ ಅಕ್ಕಿ .ಆದರೂ ಕಲ್ಲು .ನಾವು ಶಿಲಾ (ಕಲ್ಲು) ಯುಗಕ್ಕೆ ಹೋಗುತ್ತಿದ್ದೆವೆಯೇ?
(ಅಕ್ಕಿಯ ಕಲ್ಲಿಗೂ ಮೂತ್ರದ ಕಲ್ಲಿಗೂ ಸಂಬಂಧ ಇಲ್ಲ.)
ಪಂಜೆ ಮಂಗೇಶರಾಯರು
೨೦ ನೆ ಶತಮಾನದಲ್ಲಿ ಎಲ್ಲ ಅಡೆತಡೆಗಳ ನಡುವೆಯೂ ಸಮೃದ್ದ ಹಾಗೂ ವೈವಿಧ್ಯ ಮಯ ಸಾಹಿತ್ಯ ಸೃಷ್ಟಿ ಮಾಡಿದವರು
ಪಂಜೆಯವರು.ಬಾಲಸಾಹಿತ್ಯ ಸಣ್ಣ ಕತೆ ಕವಿತೆ ಲಲಿತ ಪ್ರಬಂಧ ಸಂಶೋಧನಾ ಸಾಹಿತ್ಯ ಎಲ್ಲ ವಿಭಾಗಗಳಲ್ಲಿ ಕೈಯಾಡಿಸಿದವರು.ಕನ್ನಡದಲ್ಲಿ ಸಣ್ಣ ಕಥೆಗಳ ಜನಕ ಎಂಬ ಕೀರ್ತಿಯೂ ಅವರಿಗಿದೆ.ಈ ವಿಚಾರದಲ್ಲಿ ತಮಗೂ ಪಂಜೆಯವರಿಗೂ ಆದ ಸಂಭಾಷಣೆಯನ್ನು ಮಾಸ್ತಿಯವರು ಒಂದು ಕಡೆ ಹೇಳಿದ್ದಾರೆ.ಕವಿಶಿಷ್ಯ ಎಂಬ ಕಾವ್ಯನಾಮ ಇಟ್ಟುಕೊಂಡುದು ಅವರಲ್ಲಿದ್ದ ವಿನಯದ ದ್ಯೋತಕ.
ಪಂಜೆಯವರು.ಬಾಲಸಾಹಿತ್ಯ ಸಣ್ಣ ಕತೆ ಕವಿತೆ ಲಲಿತ ಪ್ರಬಂಧ ಸಂಶೋಧನಾ ಸಾಹಿತ್ಯ ಎಲ್ಲ ವಿಭಾಗಗಳಲ್ಲಿ ಕೈಯಾಡಿಸಿದವರು.ಕನ್ನಡದಲ್ಲಿ ಸಣ್ಣ ಕಥೆಗಳ ಜನಕ ಎಂಬ ಕೀರ್ತಿಯೂ ಅವರಿಗಿದೆ.ಈ ವಿಚಾರದಲ್ಲಿ ತಮಗೂ ಪಂಜೆಯವರಿಗೂ ಆದ ಸಂಭಾಷಣೆಯನ್ನು ಮಾಸ್ತಿಯವರು ಒಂದು ಕಡೆ ಹೇಳಿದ್ದಾರೆ.ಕವಿಶಿಷ್ಯ ಎಂಬ ಕಾವ್ಯನಾಮ ಇಟ್ಟುಕೊಂಡುದು ಅವರಲ್ಲಿದ್ದ ವಿನಯದ ದ್ಯೋತಕ.
ರಾಷ್ಟ್ರಕವಿ ಕುವೆಂಪು ಪಂಜೆಯವರ ಬಗ್ಗೆ ಬರೆದ ಕವನ ಹೀಗಿದೆ
ಹಾಲು ಸಕ್ಕರೆ ಸೇರಿ ನೀವಾದಿರಾಚಾರ್ಯ
ನಡೆಯ ಮಡಿಯಲಿ ನುಡಿಯ ಸವಿಯಲ್ಲಿ ,ನಿಮ್ಮ ಬಗೆ
ಹಸುಳೆ ನಗೆ;ನಿಮ್ಮ ಕೆಳೆಯೊಲುಮೆ ಹಗೆತನಕೆ ಹಗೆ
ಕಪ್ಪುರಕೆ ಕಿಡಿ ಮತ್ತೆ ಸತ್ಯಕ್ಕೆ ಸೌಂದರ್ಯ
ಸಂಗಮಿಸಿದಂತೆ ರಂಜಿಸಿದೆ ಜೀವನ ಸೂರ್ಯ
ನಿಮ್ಮದೆಮ್ಮೆಯ ನುಡಿಯ ಗುಡಿಗೆ ಮಂಗಳ ಕಾಂತಿ
ಮತ್ತೆ ರಸಕಾರ್ಯಗಳಿಗುಪಮೆ ;ವೀಣಾತೂರ್ಯ!
ಕಚ್ಚಿದರೆ ಕಬ್ಬಾಗಿ ,ಹಿಂಡಿದರೆ ಜೇನಾಗಿ
ನಿಮ್ಮುತ್ತಮಿಕೆಯ ಮೆರೆದಿರಯ್ಯ;ಚಪ್ಪಾಳೆ
ಮುಗುದಾರವನಿಕ್ಕಿ ನಡೆಯಿಸಿದರದು ಬಾಳೆ
ಹಿರಿಯ ಸಿರಿಚೇತನಕೆ ಕೀರ್ತಿಲೋಭಕೆ ಬಾಗಿ
ಬಾಲ್ಬಂಡಿ ನೊಗಕೆ ಹೆಗಲಿತ್ತವರು ನೀವಲ್ಲ
ತೇರ್ಮಿಣಿಯ ಸೆಳೆದಿರಲ್ಲದೆ ಮತ್ತೆ ಮಣಿದಿಲ್ಲ.
ನಡೆಯ ಮಡಿಯಲಿ ನುಡಿಯ ಸವಿಯಲ್ಲಿ ,ನಿಮ್ಮ ಬಗೆ
ಹಸುಳೆ ನಗೆ;ನಿಮ್ಮ ಕೆಳೆಯೊಲುಮೆ ಹಗೆತನಕೆ ಹಗೆ
ಕಪ್ಪುರಕೆ ಕಿಡಿ ಮತ್ತೆ ಸತ್ಯಕ್ಕೆ ಸೌಂದರ್ಯ
ಸಂಗಮಿಸಿದಂತೆ ರಂಜಿಸಿದೆ ಜೀವನ ಸೂರ್ಯ
ನಿಮ್ಮದೆಮ್ಮೆಯ ನುಡಿಯ ಗುಡಿಗೆ ಮಂಗಳ ಕಾಂತಿ
ಮತ್ತೆ ರಸಕಾರ್ಯಗಳಿಗುಪಮೆ ;ವೀಣಾತೂರ್ಯ!
ಕಚ್ಚಿದರೆ ಕಬ್ಬಾಗಿ ,ಹಿಂಡಿದರೆ ಜೇನಾಗಿ
ನಿಮ್ಮುತ್ತಮಿಕೆಯ ಮೆರೆದಿರಯ್ಯ;ಚಪ್ಪಾಳೆ
ಮುಗುದಾರವನಿಕ್ಕಿ ನಡೆಯಿಸಿದರದು ಬಾಳೆ
ಹಿರಿಯ ಸಿರಿಚೇತನಕೆ ಕೀರ್ತಿಲೋಭಕೆ ಬಾಗಿ
ಬಾಲ್ಬಂಡಿ ನೊಗಕೆ ಹೆಗಲಿತ್ತವರು ನೀವಲ್ಲ
ತೇರ್ಮಿಣಿಯ ಸೆಳೆದಿರಲ್ಲದೆ ಮತ್ತೆ ಮಣಿದಿಲ್ಲ.
೧೯೭೪ರಲ್ಲಿ ಪಂಜೆ ಶತಮಾನೋತ್ಸವ ಮಂಗಳೂರಿನಲ್ಲಿ ವಿಜೃಂಭಣೆ ಯಿಂದ ನಡೆಯಿತು.ಏರ್ಯ ಲಕ್ಷ್ಮಿನಾರಾಯಣ ಆಳ್ವ ,ಎಸ ವಿ ಪರಮೇಶ್ವರ ಭಟ್ಟ,ಕೀಕಾನ ರಾಮಚಂದ್ರ ರ ಹಿರಿತನದಲ್ಲಿ ಕನ್ನಡ ಸಾಹಿತ್ಯ ದಿಗ್ಗಜಗಳಾದ ಮಾಸ್ತಿ.ವಿ.ಸೀ.ರಾಜರತ್ನಂ ,ನಾಗೇ ಗೌಡ ಮುಂತಾದವರು ಉತ್ಸಾಹ ದಿಂದ ಪಾಲ್ಗೊಂಡಿದ್ದರು.ಪಂಜೆಯವರ ಸಮಗ್ರ ಬರಹ ಗಳ ಮೂರು ಸಂಪುಟಗಳಗಳನ್ನ್ನೂ ತೆಂಕಣಗಾಳಿ ಎಂಬ ಸ್ಮರಣ ಸಂಚಿಕೆ ಹೊರ ತಂದಿದ್ದರು.ಪಂಜೆ ಸಾಹಿತ್ಯದ ಬಗ್ಗೆ ವಿಚಾರ ಸಂಕಿರಣಗಳು ಇದ್ದವು. ನಾಗರ ಹಾವೇ ಪದ್ಯವನ್ನು ಆಗ ಆಳುತ್ತಿದ್ದ ಬ್ರಿಟಿಷರನ್ನು ಉದ್ದೇಶಿಸಿ ಬರೆದಿರಬಹುದೆಂದು ಒಬ್ಬರು (ಸ್ವಲ್ಪ ಉತ್ಪೇಕ್ಷೆ ಎನಿಸುತ್ತದೆ.) ಅಭಿಪ್ರಾಯ ಮಂಡಿಸಿದ್ದರು. ಅವರ ಮಗ ರಾಮ ರಾಯರು ಈ
ಹಾಡನ್ನು ಅಭಿನಯ ಪೂರ್ವಕ ಪ್ರಸ್ತುತ ಪಡಿಸಿದ್ದು ಮನ ಮುಟ್ಟುವಂತಿತ್ತು.
ಹಾಡನ್ನು ಅಭಿನಯ ಪೂರ್ವಕ ಪ್ರಸ್ತುತ ಪಡಿಸಿದ್ದು ಮನ ಮುಟ್ಟುವಂತಿತ್ತು.
ಅವರ ಅಡಿನಾ ಮರಿ ಕವನ
ಆಡಿನಾ ಮರೀ ,ಆಡ ಬಾರಲೆ!
ಒಡ ಬೇಡಲೆ ನೋಡಿ ನನ್ನನು!
ಅರಳಿ ಎಲೆಯನೂ ,ಹಲಸಿನೆಲೆಯನೂ,
ಹುರುಳಿ ಕಡಲೆಯಾ,ಕಲಸಿ ಕೊಡುವೆನು .
ಮಾತನಾಡದೇ ,ನನ್ನ ನೋಡದೆ ,
ಏತಕ್ಹೋಗುವೆ ಆಡಿನಾ ಮರಿ.
ಪಾಣಿಪತದ ಮೂರನೆಯಾ ಯುಧ್ಧ ಎಂಬ ಯಕ್ಷಗಾನ ಪ್ರಸಂಗದ ಕೊನೆಯ ನಾಲ್ಕು ಪ್ಯಾರಾಗಳು ಹೀಗಿವೆ
ನೆತ್ತರ ಮೂಲಕ ಧರ್ಮವನು-ಹಾ
ಬಿತ್ತರಿಸುವ ದುಷ್ಕರ್ಮವನು
ಎತ್ತಲು ಮುಂದಕೆ ಸಲ್ಲದು ಎಂಬೀ
ಉತ್ತಮ ಬೋಧವ ತಂದವಗೆ-
ಬಲವಂತರು ತಮ್ಮಯ ಬಲದೆ ದು
ರ್ಬಲರನು ಕಾಳಗದಲಿ ಕೊಲದೆ,
ಒಲಿದವರಾತ್ಮೊನ್ನತಿಯನು ಗಳಿ
ಸಲು ಬೇಕೆನ್ನುತ ಸಾರುವಗೆ-
ಹಿಂದು,ಮುಸಲ್ಮಾನ ,ಸುನ್ನಿ,ಶೇಕ್,ಜೈನ,
ಬಂದ ಫಾರಸಿ ,ಕ್ರಿಶ್ಚನ,ಸೀಖ್,
ಇಂದಾ ಭಾರತ ವರ್ಷದ ನಡೆಯಲಿ
ಒಂದಾಗಿರಿಸುವ ಮಹಿಮನಿಗೆ
ಸನ್ನುತ ಜನತೆ ಪ್ರಮುಖವೆಂದು-ರಾ
ಷ್ಟೋನ್ನತಿಯೇ ಇಹಸುಖವೆಂದು ,
ಇನ್ನೀ ಮಂತ್ರವನೆಲ್ಲರು ಪಠಿಸಲಿ
ಎನ್ನುತ ಉಪದೇಶಿಸಿದವಗೆ-
ಅವರ ತೆಂಕಣ ಗಾಳಿ ,ಹುತ್ತರಿ ಹಾಡು ಬಹಳ ಜನಪ್ರಿಯ .ಹುತ್ತರಿ ಹಾಡಂತೂ ಕೊಡಗರ ನಾಡ ಗೀತೆಯೆಂದೆ ಹೇಳಬಹುದು.
ಒಡ ಬೇಡಲೆ ನೋಡಿ ನನ್ನನು!
ಅರಳಿ ಎಲೆಯನೂ ,ಹಲಸಿನೆಲೆಯನೂ,
ಹುರುಳಿ ಕಡಲೆಯಾ,ಕಲಸಿ ಕೊಡುವೆನು .
ಮಾತನಾಡದೇ ,ನನ್ನ ನೋಡದೆ ,
ಏತಕ್ಹೋಗುವೆ ಆಡಿನಾ ಮರಿ.
ಪಾಣಿಪತದ ಮೂರನೆಯಾ ಯುಧ್ಧ ಎಂಬ ಯಕ್ಷಗಾನ ಪ್ರಸಂಗದ ಕೊನೆಯ ನಾಲ್ಕು ಪ್ಯಾರಾಗಳು ಹೀಗಿವೆ
ನೆತ್ತರ ಮೂಲಕ ಧರ್ಮವನು-ಹಾ
ಬಿತ್ತರಿಸುವ ದುಷ್ಕರ್ಮವನು
ಎತ್ತಲು ಮುಂದಕೆ ಸಲ್ಲದು ಎಂಬೀ
ಉತ್ತಮ ಬೋಧವ ತಂದವಗೆ-
ಬಲವಂತರು ತಮ್ಮಯ ಬಲದೆ ದು
ರ್ಬಲರನು ಕಾಳಗದಲಿ ಕೊಲದೆ,
ಒಲಿದವರಾತ್ಮೊನ್ನತಿಯನು ಗಳಿ
ಸಲು ಬೇಕೆನ್ನುತ ಸಾರುವಗೆ-
ಹಿಂದು,ಮುಸಲ್ಮಾನ ,ಸುನ್ನಿ,ಶೇಕ್,ಜೈನ,
ಬಂದ ಫಾರಸಿ ,ಕ್ರಿಶ್ಚನ,ಸೀಖ್,
ಇಂದಾ ಭಾರತ ವರ್ಷದ ನಡೆಯಲಿ
ಒಂದಾಗಿರಿಸುವ ಮಹಿಮನಿಗೆ
ಸನ್ನುತ ಜನತೆ ಪ್ರಮುಖವೆಂದು-ರಾ
ಷ್ಟೋನ್ನತಿಯೇ ಇಹಸುಖವೆಂದು ,
ಇನ್ನೀ ಮಂತ್ರವನೆಲ್ಲರು ಪಠಿಸಲಿ
ಎನ್ನುತ ಉಪದೇಶಿಸಿದವಗೆ-
ಅವರ ತೆಂಕಣ ಗಾಳಿ ,ಹುತ್ತರಿ ಹಾಡು ಬಹಳ ಜನಪ್ರಿಯ .ಹುತ್ತರಿ ಹಾಡಂತೂ ಕೊಡಗರ ನಾಡ ಗೀತೆಯೆಂದೆ ಹೇಳಬಹುದು.
ಪಂಜೆಯವರ ಹಾಸ್ಯ ಪ್ರಜ್ಞೆ
ಅವರ ಹಾಸ್ಯ ಪ್ರಜ್ಞೆ ಪ್ರಸಿದ್ಧವಾದುದುದು.ಅವರ ಪ್ರಬಂಧ ಮತ್ತು ಕಥೆಗಳಲ್ಲಿ ತಿಳಿ ಹಾಸ್ಯದ ಮೆರುಗು ಕಾಣ ಬಹುದು.ಡಿ ವಿ ಜಿ ಯವರು ಈ ಮಗ್ಗುಲನ್ನು ಚೆನ್ನಾಗಿ ಚಿತ್ರಿಸಿದ್ದಾರೆ."ಒಮ್ಮೆ ಕೆಲಸದ ಮೇಲೆ ಮೈಸೂರಿಗೆ ಹೋಗಿದ್ದ ಪಂಜೆಯವರನ್ನು ಪರಿಚಯದವರು ಒಬ್ಬರು ಏನು ಬರೋಣವಾಯಿತು ಎಂದು ಕೇಳಿದ್ದಕ್ಕೆ ಪಂಜೆಯವರು ಒಂದು ಚೇಂಜಿಗೆ ಎನ್ನುತಾರೆ .ಅದಕ್ಕೆ ಅವರು ಶ್ರೀಮತಿಯವರನ್ನು ಕರಕೊಂಡು ಬರಲಿಲ್ಲವೇ ಎಂದು ವಿಚಾರಿಸುತ್ತಾರೆ. ಇಲ್ಲ ನಾನು ಹೇಳಲಿಲ್ಲವೇ ಬಂದದ್ದು ಚೇ೦ಜಿಗಾಗಿ ಎನ್ನುತ್ತಾರೆ ಪಂಜೆ.
ಇನ್ನೊಮ್ಮೆ ಬಾಲ ಸಾಹಿತ್ಯ ವಟಾರದಲ್ಲಿ ಉಲ್ಲಾಳ ಮಂಗೇಶ ರಾಯರು,ಉಗ್ರಾಣ ಮಂಗೇಶ ರಾಯರು ಮತ್ತು ತನ್ನನ್ನು ತೋರಿಸುತ್ತಾ ನೋಡಿ ಎಷ್ಟು ಮಂಗಗಳು ,ಇದರಿಂದಲೇ ಮಂಗಳೂರು ಎಂಬ ಹೆಸರು ಎಂದು ನಗೆಯಾಡುತ್ತಾರೆ.
ಇನ್ನೊಮ್ಮೆ ವಿದ್ವಾನ್ ಮುಳಿಯ ತಿಮ್ಮಪ್ಪಯ್ಯನವರನ್ನು ಪರಿಚಯಿಸುತ್ತಾ ಇವರೇ ಮುಳಿಯ ತಿಮ್ಮಪ್ಪಯ್ಯ ಮುಳಿಯದ ತಿಮ್ಮಪ್ಪಯ ಎಂದರು."
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)




