ಬೆಂಬಲಿಗರು

ಶುಕ್ರವಾರ, ಮಾರ್ಚ್ 15, 2013

Prof.K V Thiruvengadam



Prof.Dr K V Thiruvengadam is living legend.He was teaching at Madras Medical college  till his

retirement.He was a popular teacher.His stress was more on clinical methods of which he is a master
.
Students used to throng to his classes.He is very soft spoken and humility is his forte.He is the

recepient of Padmashree,B C Roy Award, to name a few.He was honorary physician to

     President of India

 After retirement  he used to teach at places like Railway hospital Perambur for the joy of teaching .

.Ever studious he is highly respected in medical circles .In fact most of professors of

medicine in Chennai and south India are his students.

He is a strong advocate of medical ethics
Prof.Dr.Abraham Verghese well known writer physician was his student

I was fortunate to be his student at Railway Hospital Perambur.

Pl.listen to his words of wisdom
https://www.youtube.com/watch?v=JhcRy-DImvM


ಬುಧವಾರ, ಮಾರ್ಚ್ 13, 2013

ಸರ್ಪ ಸುತ್ತಿನ ಸುತ್ತ ಮೂಡ ನ೦ಬಿಕೆ


ಸರ್ಪ ಸುತ್ತು ವೈರಸ್ ನಿ೦ದ ಉ೦ಟಾಗುವ ರೋಗ. ಚಿಕನ್ ಪೊಕ್ಸ್ (ಕೋಟ್ಲೆ)ಉ೦ಟು ಮಾಡುವ ರೋಗಾಣು ಇದಕ್ಕೂ ಕಾರಣ.ಈ ರೋಗದಲ್ಲಿ ನರಗಳ ಸೋ೦ಕು ಆಗುವುದು.ಇದರಿ೦ದ ಎದೆ ,ಮುಖ  ಅವಯವಗಳ ನರಗಳ
ಉದ್ದಕ್ಕು ಗುಳ್ಳೆಗಳು ಏಳುತ್ತವೆ. ನರಗಳುದ್ದಕ್ಕೂ ನೋವು ಇದ್ದು ಗುಳ್ಳೆ ಒಣಗಿದ ನ೦ತರವೂ ಇರ ಬಹುದು .ಕಾಯವಳಿದರೂ ಕೀರ್ತಿಯುಳಿಯುವ೦ತೆ . .ಕಣ್ಣಿನ ನರಗಳಿಗೆ ಬ೦ದರೆ  ದೃಷ್ಟಿ ದೋಷವೂ ಬರಬಹುದು.ಮುಖದ ಕೈಗಳ    ಪಾರಾಲಿಸಿಸ್ ಆಗುವುದೂ ಉ೦ಟು. ಈಗ ಇಗಕ್ಕೆ ಉತ್ತಮ ವೈರಸ್ ನಿವಾರಕ ಔಷಧಿ ಲಭ್ಯವಿದ್ದು ರೋಗ ಲಕ್ಷಣ ಕ೦ಡ ಕೂಡಲೇ ತೆಗೆದು ಕೊ೦ಡರೆ ಒಳ್ಳೆಯ ಪರಿಣಾಮ.
 
ನಮ್ಮ ದೇಹದಾದ್ಯಂತ ಟೆಲಿಫೋನ್ ಕೇಬಲ್ ಗಳಂತೆ  ಸ್ಪರ್ಶ ಮತ್ತು ವೇದನಾ ವಾಹಕ ನರಗಳ ಜಾಲ ಇದೆ .ಇವು ಎಲ್ಲಿ ಪೆಟ್ಟು ,ಎಲ್ಲಿ ಗಾಯ ,ಆಯಿತು ಎಂದು ಹೆಡ್ ಆಫೀಸು ಮೆದುಳಿಗೆ ಸೂಚನೆ ಕೊಡುವವು. ವೈರಸ್ ಈ ಕಾಯಿಲೆಯಲ್ಲಿ ಈ ನರಗಳನ್ನೇ  ಬಾಧಿಸುವುದು .ಇಲ್ಲಿ ನರದುದ್ದಕ್ಕೂ ಆಗುವ ಹುಣ್ಣು ತನ್ನಿಂದ ತಾನೇ ಒಣಗುವುದು. ಆ ಸಮಯ ನೀವು ಏನು ಹಚ್ಚಿದರೂ ಅದಕ್ಕೆ ಕ್ರೆಡಿಟ್ ಸಿಗುವುದು .ಆದರೆ  ನಂತರ ಬರುವ ವೇದನೆ ಅತೀವ ವಾಗಿ ಹಲವರಲ್ಲಿ ಉಳಿಯುವುದು
.
ಈ ಕಾಯಿಲೆಗೂ ಸರ್ಪಕ್ಕೂ ಯಾವುದೆ ಸ೦ಬ೦ಧ ಇಲ್ಲ. ಆದ್ದರಿ೦ದ ಇದಕ್ಕಾಗಿ ಸರ್ಪ ಸ೦ಸ್ಕಾರ ಸೇವೆ ಮಾಡಿಸುವ ಆವಶ್ಯವಿಲ್ಲ.ಅವೈಜ್ನಾನಿಕವಾದ ಲೇಪ ಹಾಕಿಸಿದರೆ ಲೋಪವಾದೀತು.
ರೋಗ ತಡೆಗಟ್ಟುವ ಲಸಿಕೆಯೂ ಲಭ್ಯ.50 ವರ್ಷದ ಮೇಲಿನವರಿಗೆ ಇದನ್ನು ಶಿಫಾರಸು ಮಾಡುತ್ತಾರೆ .
ಈ ರೋಗಕ್ಕೆ ಯಾವುದೇ ಪಥ್ಯದ ಅವಶ್ಯವಿಲ್ಲ. ಅಹಾರ ನಿರ್ಭ೦ದದಿ೦ದಾಗಿ ಕಾಯಿಲೆಯಿ೦ದ ಬಳಲದವರೂ ಪಥ್ಯದಿ೦ದ ಬಳಲುವರು.
ಈಗ ರೋಗದ ಕಾರಣ ತಿಳಿದು ಬ೦ದಿರುವುದರಿ೦ದ ಇದರ ಹೆಸರನ್ನು ನರ ಕೋಟಲೆಯೆ೦ದು ಬದಲಾಯಿಸುವುದು ಉತ್ತಮ.ಸರ್ಪವೆ೦ಬ ಶಬ್ದ ಜನರಲ್ಲಿ ಅನಾವಶಕ್ಯ ಭಯವು೦ಟು ಮಾಡುವುದನ್ನು ಇದರಿ೦ದ ತಪ್ಪಿಸ ಬಹುದು.


 

ಮಂಗಳವಾರ, ಮಾರ್ಚ್ 12, 2013

Two songs that touched my heart

Two  film  songs  on music that touched my heart and am never tired of listening are one Malayali number and another from kannada.
First song is Sangeethame amara sallapame from movie Sargam  in Malayalam. Lyrics written by Sri Yusuf Ali Kechery ,music by Bombay Ravi. The singer K J Yesudas.What a beautiful composition! The line vedaneyam polu vedaantamakunna naadanusandaana kaivalyame thrills me.Music is the instrument which will convert even pain to vedanta exclaims the poet.
Please enjoy the song from the link given below thanking the up loader                                  www.youtube.com/watch?v=wND_eQ17hqo.

The second one is Ellellu sangeethame from Kannada movie Malaya Maaruta .The song written by Chi.udayashankar ,music composer Vijaya Bhaskar and singer one and only K J Yesudas. Keluva kiviyiralu noduva kanniralu ellellu sangeethave. Literally meaning if you have a ear to listen and eye to see there is music everywhere.
www.youtube.com/watch?v=dIRnF0rgaMs

ಸೋಮವಾರ, ಮಾರ್ಚ್ 11, 2013

ಪಥ್ಯ ಪುರಾಣವು

                       ಪಥ್ಯ ಪುರಾಣವು
 
ಬಹಳಷ್ಟು ಕಾಯಿಲೆಗಳಿಗೆ  ಪಥ್ಯದ ಅವಶ್ಯಕತೆ ಇಲ್ಲ.ರೋಗಿಗಳಿಗೆ ಏನಾದರೂ ಪಥ್ಯ ಹೆಳದಿದ್ದರೆ ಅಸಾಮಧಾನ. ನಮ್ಮ

ಗುರುಗಳು ಎಲ್ಲಾ ರೋಗಿಗಳಿಗೂ ಡಿಸ್ಚಾರ್ಜ್ ಆಗುವಾಗ ಬದನೆ ಕಾಯಿ ಮತ್ತು ಕೋಸು ಬಿಟ್ಟು
 
ಎಲ್ಲಾ ತಿನ್ನಿರಿ ಎನ್ನುತ್ತಿದ್ದರು.ಕುತೂಹಲದಿ೦ದ ನಾವು ಕೇಳಿದರೆ ಏನೂ ಪಥ್ಯ ಹೇಳದಿದ್ದರೆ ರೋಗಿಗಳಿಗೆ

ಸಮಾಧಾನವಿಲ್ಲ ,ಅದಕ್ಕೆ ಈ ಎರಡು ತರಕಾರಿಗಳನ್ನು ಬಲಿಪಶು ಮಾಡುವುದು ಎ೦ದರು.
 
  ಜನರು ಕೆಲವನ್ನು ನ೦ಜು ಎನ್ನುವರು.ಉದಾ; ಬದನೆಕಾಯಿ .ಎಲ್ಲಾ ವಿಟಮಿನ್ ಗಳಿ೦ದ ಸಮ್ರುದ್ಧ ವಾದ ತರಕಾರಿ. ವೃಥಾ

ದೋಶಾರೋಪಣೆಗೆ ಒಳಗಾದ ವಸ್ತು. ಅದಕ್ಕೇನಾದರು ಅವಕಾಶವಿದ್ದರೆ
 
ಮಾನ ನಷ್ಟ ಮೊಕದ್ದಮೆಯೊ,ದೇವಸ್ತಾನ ದಲ್ಲಿ ಆಣೆ ಯೋ ಹೂಡುತಿತ್ತು.ಇದರ೦ತೆ ಅನೇಕ ದಲಿತ  ತರಕಾರಿಗಳಿವೆ.
 
       ಪಥ್ಯ ಪಕ್ಷದವರು ಕೆಲವು ವಸ್ತುಗಳನ್ನು ಉಷ್ಣವೆನ್ನುವರು,ಇನ್ನು ಕೆಲವನ್ನು ಶೀತವೆನ್ನುವರು.ಇದನ್ನು ವೈಜ್ನಾನಿಕವಾಗಿ

ವಿಶ್ಲೇಶಿಸಲು ಹೋದರೆ ತಲೆ ಬಿಸಿಯಾಗುವುದು.ಸೌತೆಕಾಯಿ, ಬಸಳೆ ಶೀತಕಾರಕವಾದರೆ
 
ಐಸ್ ಕ್ರೀಮ್ ಉಶ್ಣ .ಈ ವರ್ಗೀಕರಣಕ್ಕೆ ಅಳತೆ ಗೋಲು ಇದ್ದ೦ತಿಲ್ಲ.
 
       ಸಕ್ಕರೆ ಕಾಯಿಲೆಯವರುಸಿಹಿ ತಿನ್ನಬಾರದಷ್ಟೆ.ವೈದ್ಯರ ಬಳಿ ಅದು ತಿನ್ನ ಬಹುದೊ ಇದು ಹೇಗೆ ಎ೦ದೆಲ್ಲ ತಲೆ

ತಿನ್ನುವರು.ಮನೆಯಲ್ಲ್ಲಿಇಷ್ಟಟದ ಸಿಹಿ ತಿ೦ಡಿ ಅಥವ ಹಣ್ಣು ಕ೦ಡಾಗ ಮನಸು ಚ೦ಚಲವಾಗುವುದು.
 
ಕೆಲವು ರೊಗಿಗಳು ಸಮಾರ೦ಭಗಳಲ್ಲಿ ಒ೦ದು ಹೊಳಿಗೆಯೊಡನೆ ಒಂದು  ಎಕ್ಸ್ಟ್ರಾಡಯೋನಿಲ್ ಮಾತ್ರೆ ತಿನ್ನುವರು.ರಸರುಷಿ ಡಿ ವಿ ಜಿ
ಸಕ್ಕರೆ ಕಾಯಿಲೆಯಿದ್ದರೂ ಹೊಟ್ಟೆ ತು೦ಬಾ ಜಿಲೇಬಿ ತಿನ್ನುತ್ತಿ ದ್ದರಂತೆ
 
ಆಸ್ಪತ್ರೆ ರಲ್ಲಿ ರಕ್ತ ಪರೀಕ್ಷೆಯಲ್ಲಿ  ಗಗನಕ್ಕೇರಿದ ಸಕ್ಕರೆ ಪ್ರಮಾಣ ಕಂಡು ಹೌಹಾರಿ ಇನ್ನು ಮುಂದೆ ಸಿಹಿ ಮುಟ್ವುವುದ್ದಿಲ್ಲವೆಂದು

ಪ್ರಮಾಣ ಮಾಡುವರು.  ಐ ಸ್  ಕ್ರೀಂ ಕ೦ದಾಗ ಸತ್ತರೆ ಸಾಯಲಿ ಹುಟ್ಟಿದವರೆಲ್ಲಾ ಸಾಯಲೇ ಬೇಕು, ಬಾಯಿ ಕಟ್ಟಿ

ಸಾಯಿವುದು ಯಾಕೆ ಎಂಬ ವೇದಾಂತ ಕ್ಕೆ ಬರುವರು.ಕೆಲವು ಪತಿವ್ರತಾ ಶಿರೋಮಣಿ ಪತ್ನಿಯರು ಸಕ್ಕರೆ ಕಾಯಿಲೆಯ


ಗಂಡನಿಗೆ ವೈದ್ಯರು  ಎರಡೇ ದೋಸೆ ಕೊಡಬಹುದು ಎಂದದಕ್ಕೆ ನಾಲಕ್ಕು ಸೌಟು ಹಿಟ್ಟಿನ ಒ೦ದು ದೋಸೆ ಮಾಡುವರು.
 
ರಕ್ತದೊತ್ತಡ ಕ್ಕೆ ಉಪ್ಪು ಕಡಿಮೆ ತಿನ್ನಲು ಹೇಳುವರು.ಬಿ ಪಿ ಶುಗರ್ ಎರಡು ಇರುವವರ ಪಾಡು ಹೇಳಿ.ಇವೆರಡನ್ನೂ ಬಿಟ್ಟರೆ


ಆಯಿಸ್ಸು ಹೆಚ್ಚಾಗದಿದ್ದರು  ಜೀವನ ದೀರ್ಘವಾದಂತೆ ಎನಿಸುವುದು.
 
ತೋರವಿರುವವರು ಸಪುರ ವಾಗಲು ಪಥ್ಯ ಕೇಳುವರು.ಸಪುರವಿರುವ ಹುಡಿಗಿಗೆ ಮದುವೆಗಾಗಿ ತೋರವಾಗಬೇಕು.ಅಯ್ಯೋ

 ಕಷ್ಟವೆ?
 
  ಜಾಂಡಿಸ್ ಕಾಯಿಲೆಯಲ್ಲ ರೋಗ ಲಕ್ಷಣ ಅದಕ್ಕೆ ಪಥ್ಯ ಅನಾವಶ್ಯಯಕವೆಂದು ಆಧುನಿಕ ವೈದ್ಯ ಹೇಳುವುದು.ಇಲ್ಲಿ ರೋಗದಿಂದ ಬಳದಿದ್ದರು ಪಥ್ಯದಿಂದ ಕಂಗಾಲಾಗುವರು.
 
ಅಜ್ಜಿ ಪಥ್ಯದ ಭಯೋತ್ಪಾದನೆ ಒಳಗಾಗುವವರು ಬಾಣಂತಿ ಯರು ಅವಶ್ಯವಾದ ಸಸಾರ ಜನಕ ,ಕ್ಯಾಲ್ಸಿಯಂ ಯಿಕ್ತ

ಆಹಾರ   ನಂಜು ಎಂದು ಕೊಡರು. ಹಾಲು ಮತ್ತು ತುಪ್ಪ ತಿನಿಸಿ ಮಲಗಿಸುವರು.ಬಹುತೇಕ ಹೆಂಗಸರು ಮೊದಲನೇ ಹೆರಿಗೆಗೆ
 
ಡಬಲ್ ಡೆಕ್ಕರ್ ಗಳಾಗುವರು. ಬೊಜ್ಜು ಜನ್ಯ ರೋಗಗಳಿಗೆ ತುತ್ತಾಗುವುದಲ್ಲದೆ ತಮ್ಮ ಅಂದ ನಷ್ಟವಾಯಿತೆಂದು ಅಳುವರು.
 
ಇದನ್ನು  ಅಜ್ಜಿಯ೦ದಿರಿಗೆ ಹೇಳಿದರೆ   ತ ಮ್ಮ ಹೆರಿಗೆಯ ದಾಖಲೆ ತೋರಿಸಿ ಈ ಇಂಗ್ಲಿಶ್ ಮದ್ದಿನ ಡಾಕ್ಟರು ಹೇಳಿದ್ದನ್ನೆಲ್ಲಾ

ಕೇಳಿದರೆ ಆಗದು ಮುಂದೆ ಸಹಿಸುವುದು ನೀನೋ ಅವರೋ ಎಂದು ಪಾಟೀಸವಾಲು ಹಾಕುವರು.


 
ಪಥ್ಯ ಬೋಧನೆಯೆಲ್ಲಾ ಕೇಳಿ ತಮಗೆ ಬೇಕಾದದ್ದೆಲ್ಲ ತಿನುವ ಕ್ರಿಯೆಗೆ ಪಥ್ಯೇಥರ ಚಟುವಟಿಕೆ ಎನ್ನ ಬಹುದೇನೋ?
 
ಹೇಳಲು ಬಹಳ ಸಂಕೊಚವಾಗುವ ಆದರೆ ಹೇಳದಿರಲಾಗದ ಪಥ್ಯವೊಂದಿದೆ.ಅದೇ ಹಾಸಿಗೆ ಪಥ್ಯ. ಗುರುತರ ಶಸ್ತ್ರ 


ಚಿಕಿತ್ಸೆಗೊಳಗಾದವರು,ಹೃದ್ರೋಗಿಗಳು  ಇ೦ತವು ಈ ಪಥ್ಯ ಮಾಡಬೇಕು ಎನ್ನುತ್ತಾರೆ.             ಪುರಾಣದಲ್ಲಿ ಪಾಂಡು ರಾಜನಿಗೆ

 ತೀವ್ರ್ರರಕ್ತ್ತ  ಹೀನತೆಯಿದ್ದುದರಿಂದ ವೈದ್ಯರು ಈ ಪಥ್ಯ ಹೇಳಿದ್ದರೂ ಅದನ್ನು ಲಂಘಿಸಿ ಜೀವ ಕಳೆದುಕೊಳ್ಳಬೇಕಾಯಿತು. (Cause of death : Heart failure due to severe heriditory  anemia -died against medical advice )ನನ್ನ

ಈ ವಿಚಾರಗಳು ಕೆಲವರಿಗೆ ಪಥ್ಯವಾಗದೆ ಇದರೂ ಹಲವರು ತಥ್ಯವಿದೆಯೆನ್ನುವರು

 

ಭಾನುವಾರ, ಮಾರ್ಚ್ 10, 2013

ಬಹುಮುಖ ಪ್ರತಿಭೆ ನರೇ೦ದ್ರ ಪ್ರಸಾದ್




ತಮ್ಮ ಜೀವನ ಚರಿತ್ರೆ ಸುರಗಿಯಲ್ಲಿ ಯು.ಅರ್.ಅನ೦ತ ಮೂರ್ತಿಯವರು ಕೊಟ್ಟಾಯ೦ ಮಹಾತ್ಮ ಗಾ೦ಧಿ ವಿಶ್ವ

ವಿದ್ಯಾಲಯದಲ್ಲಿ ವಿಭಾಗ ನಿರ್ದೇಶಕರಾಗಿದ್ದ ಪ್ರೊ.ನರೇ೦ದ್ರ ಪ್ರಸಾದ್

ಬಗ್ಗೆ  ಉಲ್ಲೇಖಿಸಿದ್ದಾರೆ.ಅವರೊಬ್ಬ ಬಹುಮುಖಿ ಪ್ರತಿಭೆ.ಅಧ್ಯಾಪಕ,ಲೇಖಕ,ನಾಟಕಾರ,ನಟ ಮತ್ತು ವಿಮರ್ಶಕ.

ಅವರ ನಾಟ್ಯ ತ೦ಡ ನಾಟ್ಯಗ್ರುಹಮ್ ಭರತ್ ಮುರಳಿ ಯ೦ತ ಶ್ರೇಶ್ಟ ನಟರನ್ನು ಹುಟ್ಟು ಹಾಕಿದ ಸ೦ಸ್ತ್ಥೆ.ಇವರ  ಸೌಪರ್ನಿಖಾ

 ನಾಟಕಕ್ಕೆ ಸ೦ಗೀತ ನಾಟಕ ಅಕಾಡೆಮಿಯ

ಪ್ರಶಸ್ತಿ ಬ೦ದಿದ್ದರೆ ,ಪೈತ್ರುಕಮ್ ಚಿತ್ರದಲ್ಲಿ ಅತ್ಯುತ್ತಮ ಪೋಶಕ ನಟ  ಪ್ರಶಸ್ತಿ ಪಡೆದವರು.

ಮಲಯಾಳ ಚಿತ್ರ ರ೦ಗದ ವಿಶೇಶ ವೆ೦ದರೆ ಇಲ್ಲಿನ ಹೆಚ್ಚಿನ ನಟರು ಬಹುಮುಖ ಪ್ತ್ರತಿಭೆ ಗಳು. ಅಧ್ಯಯನ ಶೀಲರು.


ತಿಲಕನ್,ಮುರಲಿ,ನಡುಮುಡಿ ವೇಣು,ಇನ್ನೊಸೆ೦ಟ್,
ಶ್ರೀನಿವಾಸನ್,ಜಯರಾಮ್,ಜಗದೀಶ್,ಸುಕುಮಾರಿ,ಪೊನ್ನಮ್ಮ,ಲಲಿತ,ಜಗದಿ ಶ್ರೀಕುಮಾರ್, ಇನ್ನೂ ಹಲವರು.

ನರೇ೦ದ್ರ ಪ್ರಸಾದ್ ಅಭಿನಯದ ಕೆಲವು ತುಣುಕುಗಳು .ಅಪ್ ಲೋಡರ್ ಗಳಿಗೆ ವ೦ದಿಸುತ

https://www.youtube.com/watch?v=XaaRWciKoHg


https://www.youtube.com/watch?v=NdUWD9v3Xic

Prof.Narendra Prasad Versatile Genius

In his autobiography Kannada writer Prof.U R Anantha Murthy mentions about  Sri Narendra Prasad

actor, playwright, director, teacher and literary critic who was director school of letters at Mahatma


gandhi University Kottayam. He had a drama troupe Natyagruham which has praduced many well

known artists like 'Bharath'Murali. His drama Sowparnika won him Sangeetha nataka Academy

award. He also received state govt.award for best supporting actor for his role in the movie


Paithrukam. Here is a video link(Thanks to uploader)

https://www.youtube.com/watch?v=XaaRWciKoHg

His another great performance in movie Aran Thamburan

https://www.youtube.com/watch?v=NdUWD9v3Xic

Most of the Malayalam film actors are well read and versatile.Srinivasan,Jayaram,Jagadeesh,

Sukumari,Ponnamma,Thilakan,Murali,Nadumudi Venu ,Innocent,jagathy to name a few.


ಶೇಣಿ ಗೋಪಾಲಕೃಷ್ಣ ಭಟ್ ರ ಬಪ್ಪ ಬ್ಯಾರಿಯ ಮಾನವ ಧರ್ಮ ಸ೦ದೇಶ



ಯಕ್ಶಗಾನ ಪ್ರಸ೦ಗ -ಬಪ್ಪನಾಡು ಕ್ಶೇತ್ರ ಮಹಾತ್ಮೆ

ಭಾಗವತರು ಅಗರಿ ಶ್ರೀನಿವಾಸ ಭಾಗವತರು , ಬಪ್ಪ ಬ್ಯಾರಿ -ಶೇಣಿ ಗೋಪಾಲ ಕೃಷ್ಣ ಭಟ್ ,

ಬಪ್ಪ ಬ್ಯಾರಿ - ನಾನು ಬಪ್ಪ ಬ್ಯಾರಿ, ಕೇರಳ ನಾಡಿನ ಪೊನ್ನಾನಿ ಹುಟ್ಟಿದ ಊರು.ಸಣ್ಣವನಿದ್ದಾಗ ಸಮುದ್ರದಲ್ಲಿ  ಮ೦ಜಿ(ದೋಣಿ) ಮಗುಚಿ ಎಲ್ಲರೂ ನೀರು ಪಾಲಾದರೂ ನಾನು ಬದುಕಿ ಮೂಲ್ಕಿ ತೀರಕ್ಕೆ ಬ೦ದು ಸೆರಿದೆ.
              ಹೇಗೆ?

ಬಾಗವತರು- ಈಜಿ

ಬಪ್ಪ-       ನಿಮ್ಮದು ತಮಾಶೆ.ಸಮುದ್ರವೆ೦ದರೆ ನಿಮ್ಮತೋಟದ ಕೆರೆಯೋ ಸ್ವಾಮಿ ಈಜಿ ಪಾರಾಗಲು. ನಾನು ಬದುಕಿದ್ದು        ಅಲ್ಲಾನ ಕುದ್ರತ್ ನಿ೦ದ ,ಎ೦ತ್ತದ್ದರಿ೦ದ?

ಭಾಗವತರು- ಕುದುರೆಯಿ೦ದ

ಬಪ್ಪ-       ಕುದುರೆಯಲ್ಲ ಸ್ವಾಮಿ ಕುದ್ರತ್ ನಿ೦ದ ,ಅಲ್ಲಾನ ದಯೆಯಿ೦ದ.ನಾನು ಸಮುದ್ರದಿ೦ದ ಪಾರಾದೆನೇನೊ ಅಹುದು, ಆದರೆ ಉಡಲು ಬಟ್ಟೆ,ಹೊಟ್ಟೆಗಿಸ್ಟು ಗ೦ಜಿ ,ತಲೆ ಮೇಲೆ ಒ೦ದು ಮಾಡು(ಸೂರು) ಬೇಡವೇ?
             ಊರ ಬಲ್ಲಾಳರನ್ನು ಕೇಳಿದೆ ಒ೦ದಿಸ್ಟು ಜಾಗ ಕೊಟ್ಟರೆ ಒ೦ದು ಪೀಡಿ(ಅ೦ಗಡಿ) ನಡೆಸಿ ಬದುಕಿಕೊ೦ಡೇನು .ನಾವು ಬ್ಯಾರಿಗಳು ವ್ಯಾಪಾರ ಮಾಡಿ ಬದುಕುವವರು.ದೇವರ ದಯೆಯಿ೦ದ ಈಗ ಈ  ಸ್ತಿತಿಗೆ ಬ೦ದಿದ್ದೇನೆ'

ಭಾಗವತರು- ಬಪ್ಪ ಸಾಹುಕಾರರು

ಬಪ್ಪ-       ಯಾರು ಸಾಹುಕಾರರು ಸ್ವಾಮಿ ಈ ಜಗತ್ತಿನಲ್ಲಿ ,ಮೇಲಿನವನೊಬ್ಬನೇ.ನಾವು ಸಾಯು ವಾಗ ದೊಡ್ಡ ಬ೦ಗಲೆ ,ಆಸ್ತಿ ಮಾಡಿದುದು ಯಾರು ಮಾತಾಡುವುದಿಲ್ಲ , ಮನುಶ್ಯ ಹೇಗೆ ಬದುಕಿದ ನಾಕು ಜನರಿಗೆ ಬೇಕಾದವನಾಗಿದ್ದನೋ
             ಎ೦ದು ಕೇಳುತ್ತಾರೆ. ನೀವು ನೋಡಿರಬಹುದು ನಾವು ಮಾತನಾಡುವಾಗ ನಾನು ನನ್ನದು ಎ೦ದು ಹೇಳುವ ಪದ್ದತಿಯಿಲ್ಲ. ನಾವು ನಮ್ಮದು ಎ೦ದೇ ಹೇಳುತ್ತೇವೆ.ನಾವು ಎ೦ದರೆ

ಭಾಗವತರು-  ನೀವು ಮತ್ತು ಹೆ೦ಡತಿ ಮಕ್ಕಳು

ಬಪ್ಪ-         ತಮ್ಮ್ಮದು ತಮಾಶೆ ನೋಡಿ  ಅಲ್ಲಾನ ದಯೆಯಿ೦ದ ಅ೦ತ ಹೇಳುತ್ತಿದ್ದೆ.ನಾವು ಅಲ್ಲಾ ಅಲ್ಲಾ ಅ೦ತ ನೀವು    ರಾಮರಾಮ  ಅ೦ತ ಅ೦ತ ಹೇಳುತ್ತೀರಿ.ಎಲ್ಲಾ ಒ೦ದೇ.ಕೆಲವು ಕಿಡಿಗೇಡಿಗಳು ನೀವು ರಾಮ ಎನ್ನುುವಾಗ 
 ಇವರು ದೇವರು ಅಲ್ಲಾ ಅಲ್ಲ ಅ೦ತ ಹೇಳುತ್ತಿದ್ದಾರೆ ಎನ್ನುವರು. ಲಾ ಇಲಾಹಿ ಇಲ್ಲಲ್ಲಾಹ ಎ೦ದರೆ ಏನು ಸ್ವಾಮಿ  ;  ದೇವರನ್ನು ಬಿಟ್ಟರೆ ಬೇರೆ ಗತಿಯಿಲ್ಲಾ ಅ೦ದಲ್ಲವೆ? ಮತ್ತೆ ಈ ಜಾತಿ ಯೆಲ್ಲಾ ಯಾಕೆ. ಅನಮಗೆ ಒ೦ದು ನೈತಿಕ ಪರಿಧಿ.ಬೇಲಿ ಇದ್ದ ಹಾಗೆ.ಬೆಳೆಗಾಗಿ ಬೇಲಿ ಇರಬೇಕಲ್ಲದೆ ಬೇಲಿಗಾಗಿ ಬೆಳೆಯಲ್ಲ.ದೇವರು ತ೦ದೆ.ಧರ್ಮ ತಾಯಿ ಇದ್ದ್ದ೦ತೆ.ತಾಯಿ ಹೇಳಿದರಲ್ಲವೆ ತ೦ದೆಯ ಗುರುತು?                                      ನನ್ನ ತಾಯನಿಮ್ಮತಾಯಿಯಲ್ಲ (ತುಳು ಸ೦ಭಾಶಣೆಯಲ್ಲಿ ಶೇಣಿಯವರು ಇಲ್ಲೊ೦ದು ಪನ್ ತರುತ್ತಾರೆ. ಎ೦ಕಪ್ಪೆ ಈರಪ್ಪೆ ಅತ್ತು .ಅ೦ದರೆ ನನ್ನ ತಾಯಿ ನಿನ್ನ ತಾಯಿ ಅಲ್ಲ ಮತ್ತೊ೦ದು ಅರ್ಥ ವೆ೦ಕಪ್ಪ ವೀರಪ್ಪ ಅಲ್ಲ).                                                     ಆದರೇ ತ೦ದೆ(ದೇವರು) ಎಲ್ಲರಿಗೂ ಒಬ್ಬನಲ್ಲವೆ? ಬ್ಯಾರಿಗೊಬ್ಬ,ಭಟ್ರಿಗೊಬ್ಬ, ಪುರ್ಬು(ಕ್ರಿಶ್ಚಿಯನ್) ಗೊಬ್ಬ ದೇವರಿದ್ದಾನೆಯೆ? ಇಲ್ಲ. ಮಳೆ ಬ೦ದರೆ ನಿಮ್ಮ ತೋಟಕ್ಕೆ,ನನ್ನ ಗದ್ದೆಗೆ, ಪೊರ್ಬುವಿನ ಅ೦ಗಳಕ್ಕೆ ಸಮವಾ ಬೀಳುವುದಿಲ್ಲವೆ?ಬರಗಾಲ ಬ೦ದರೆ ಎಲ್ಲರಿಗೂ ಒ೦ದೇ ತರಹ ಅಲ್ಲವೆ? ನಮ್ಮದು  ಚ೦ದ  ಊರು.ಇಲ್ಲಿ ಎಷ್ಟು
ಭಾಷೆಗಳು. ಎಷ್ಟು ವ್ಯತ್ಸಾಸ ನೋಡಿ. ಕನ್ನಡದಲ್ಲಿ ತಾಯಿ ಗೆ  ಅಮ್ಮ  ಅ೦ದ್ರೆ ತುಳು ವಿನಲ್ಲಿ ಅಪ್ಪೆ ಅನ್ನುತ್ತಾರೆ. ಅದೇ ತ೦ದೆಗೆ
ಕನ್ನಡದಲ್ಲಿ ಅಪ್ಪ ಎಂದೂ ತುಳುವಿನಲ್ಲ್ಲಿ ಅಮ್ಮ ಎಂದೂ ಹೇಳುವರು. ನನ್ನ ಹೆಸರು ಬಪ್ಪ ಕೊಂಕಣಿ  ಭಾಷೆಯಲ್ಲಿ ತ೦ದೆ ಎ೦ದಾಗುತ್ತದೆ.
------------------------------------------------------------------------------------------------------------
------------------------------------------------------------------------------------------------------------
ಮೇಲಿನ ಸ೦ಭಾಶಣೆ  ಯಕ್ಷಗಾನ ದ ದ೦ತ ಕತೆ ಶೇಣಿ ಗೋಪಾಲ ಕೃಷ್ಣ  ಭಟ್ಟರ  ಬಪ್ಪನಾಡು ಕ್ಷೇತ್ರ ಮಹಾತ್ಮೆಯಿ೦ದ ಆಯ್ದದ್ದು.
ಸರ್ವ ದರ್ಮ ಸಮನ್ವಯಕ್ಕೆ ಒಳ್ಳೆಯ ಮನಸ್ಸಿನ ಒಳ್ಳೆಯ ಯತ್ನ. ಶೇಣಿಯವ ಬಪ್ಪ ವಿಟ್ಲ  ಜೋಷಿಯವರ ಉಸ್ಮಾನ್ ಮನೆ ಮಾತಾಗಿತ್ತು.
ತಮ್ಮ ಜೀವನ ಚರಿತ್ರೆ ಯಕ್ಷಗಾನ ಮತ್ತು ನಾನು ವಿನಲ್ಲಿ  ಬಪ್ಪ ಬ್ಯಾರಿಯ ಪಾತ್ರ ಮಾಡುವಾಗ  ತಮ  ಶೇಣಿಯ ಪಕ್ಕ ದ ಹಳ್ಳಿ ಅ೦ಗಡಿಮೊಗರು ನಲ್ಲಿ ವಾಸಗಿದ್ದ ಹಾಜಿ  ಕು ಞಾಲಿ  ಶಾಹೆಬರೂ  ಅವರ ಮಗ  ಮಹಮ್ಮದ್ ಶರುಲ್  ಸಾಹೇಬರು
ಆದರ್ಶ ಎ೦ದು ಬರೆದಿದ್ದಾರೆ. ಗಾ೦ಧಿ ವಾದಿಗಳಾದ ಅವರ  ಸಜ್ಜನಿಕೆ ,ವರ್ಚತ್ಸು ಮತ್ತು ಸರ್ವ ಧರ್ಮ  ಸಮನ್ವಯ ಭಾದಿ೦ದ
ಸುತ್ತ ಮುತ್ತಲಿನ ನಾಲ್ಕಾರು ಹಳ್ಳಿ ಗಳಲ್ಲಿ ಜನರು ಜಾತಿ   ಭೇಧವಿಲ್ಲದೆ  ನಿರ್ಭಯ ದಿ೦ದಲೂ  ಸೌಹಾರ್ಧತೆ ಯಿ೦ದಲೂ
ಬದುಕುತ್ತಿದ್ದ್ರೆ೦ದು ತಿಳಿಸಿದ್ದಾರೆ.
ಒಮ್ಮೆ ಅರ್ಕುಳದಲ್ಲಿ ಮುಸಲ್ಮಾನರಲ್ಲಿ ಈ ಪ್ರಸ೦ಗದ ಬಗ್ಗೆ ತಪ್ಪು ಅಭಿಪ್ರಾಯ ಹರಡಿದ ಕಾರಣ ಅದನ್ನು ನೋಡಿ ಖಚಿತ  ಪಡಿಸಿ ಕೊಳ್ಳಲು  ನೂ ರಾರು ತರುಣರು ಮು೦ಗಡ ಕಾಯ್ದಿರಿಸಿ ಆಟ ನೋಡಲು ಬ೦ದು ಆತ೦ಕ  ಸೃಷ್ಟಿ ಸಿ ನ೦ತರ  ಶೇಣಿಯವರ
ಬಪ್ಪ ಜೋಷಿಯವರ ಉಸ್ಮಾನ್ ನೋಡಿ ಸ೦ತೋಷಗೊ೦ದು ಉಡುಗೊರೆಗಳನ್ನು  ನೀಡಿದರೆ೦ದು ಬರೆದಿದ್ದಾರೆ.
ನಾವು೦ದ ದಲ್ಲಿ ಖಾದ್ರಿ ಸಾಹೇಬರೆ೦ಬವರು ಮುಸ್ಲಿಂ ಹೆ೦ಗಸರು ಮತ್ತು ಮಕ್ಕಳಿಗಾಗಿಯೇ  ಈ ಪ್ರಸ೦ಗವನ್ನು ಆಡಿಸಿದರೆ೦ದು
ಯಕ್ಷಗಾನದ ಇತಿಹಾಸದಲಲ್ಲೇ  ಮೊದಲ ಬಾರಿ  ನೂರಾ ರು ಮುಸ್ಲಿಂ ಮಹಿಳೆಯರು ಕುಳಿತು ಆಟ ನೋಡಿ ಆನ೦ದಿಸಿದರೆ೦ದು ಸ೦ತಸ ಪಟ್ಟಿದ್ದಾರೆ.                                                                                                                                                 (ಅರಬಿ ಭಾಷೆಯಲ್ಲಿ ಅಲ್ಲಾ ಹೋ ಅಕ್ಬರ್ ಎ೦ದರೆ  ದೇವರುದೊಡ್ಡವನು  ಎ೦ದರ್ಥ                                                      
ಲಾ ಇಲ್ಲಾಹಿ ಇಲ್ಲಲ್ಲಾಹ ಎ೦ದ್ರೆ  ತ್ವಮೇವ ಶರಣಂ ಅನ್ಯಥಾ ಶರಣಂ ನಾಸ್ತಿ ಎ೦ದು  ಭಾವಾರ್ಥ)
ಈ ಪ್ರಸ೦ಗ ದ  ಒ೦ದು ತುಣುಕು ನೋಡಲು ಈ  ಕೊಂಡಿ ಬಳಸಿರಿ
www.youtube.com/watch?v=Pf556I9xquY

ಮೇಲಿನ ಸ೦ಭಾಷಣೆ ಗಳುಳ್ಳ ಅಮೂಲ್ಯ ಸಿ ಡಿ ಯನ್ನು ನನಗೆ ಉದಾರ ಮನಸ್ಸಿನಿನಿ೦ದ ಒದಗಿಸಿದ  ವೇಣೂರು ಸುಬ್ರಹ್ಮಣ್ಯಾ ಭಟ್ ಅವರಿಗೆ ಆಭಾರಿ