ಮೊನ್ನೆ ಬೆಟ್ಟಂಪಾಡಿ ಕಾಲೇಜು ನಲ್ಲಿ' ಕನಕ ದಾಸ ಬಸವ ಣ್ಣ ' ಕಮ್ಮಟಕ್ಕೆ ಹೋಗಿ ದ್ದೆ .ಬಹಳ ದಿನಗಳ ನಂತರ ಒಂದು ಒಳ್ಳೆಯ ಸಾಹಿತ್ಯ ಗೋಷ್ಠಿ . ಹಿಂದೆ ಶಾಲೆಯಲ್ಲಿ ಕಲಿತು ,ಆ ಮೇಲೆ ಪುಸ್ತಕಗಳಲ್ಲಿ ಓದಿ ಮರೆತಿತಿದ್ದ ಹಲವು ವಿಚಾರಗಳನ್ನು ಮೆಲುಕು ಹಾಕುವ ಯೋಗ . ಹಳೆಯ ಸಾಲುಗಳಿಗೆ ಹೊಸ ಹೊಳವು ಗಳು . ಧರ್ಮ ಎಂಬ ಶಬ್ದಕ್ಕೆ ಬೇಕಾದಂತೆ ವ್ಯಾಖ್ಯೆ ಹಣಿದು ಅದರ ಹೆಸರಲ್ಲಿ ಬಡಿದಾಡುವರ ಕಂಡಾಗ ಬಸವಣ್ಣ ಅವರ ಈ ಸರಳ ವಚನ ಎಷ್ಟು ಆಪ್ತ ವಾಗುತ್ತದೆ .
ದಯವಿಲ್ಲದ ಧರ್ಮವಾವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯಾ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.
ನಾನು ಶುದ್ಧ ,ಅಶುದ್ಧ ಆದವರು ಮುಟ್ಟಿ ನನ್ನ ಪವಿತ್ರ ತೆ ನಾಶ ಮಾಡಿದರೆ ಪೂಜಿಸುಲ್ಪಡುವ ದೇವ ಮೆಚ್ಚಲಾರ ಎಂಬ ನಂಬಿಕೆ ಗೆ ಅಕ್ಕ ಮಹಾದೇವಿ ವಚನ ಕನ್ನಡಿ ಹಿಡಿಯುತ್ತದೆ .ನೋಡಿ ಇದರಲ್ಲಿ ತನುಕರಗದವರಲ್ಲಿ ಎಂಬ ಮಾತು ಇದೆ . ಬೆವರಿಳಿಸಿ ದುಡಿಯದವರು ಮಾಡುವ ಪೂಜೆ ದೇವನು ಮೆಚ್ಚನು . ಬಸಣ್ಣ ಕಾಯಕವೇ ಕೈಲಾಸ ಎಂದುದು ಇದೇ ಅರ್ಥದಲ್ಲಿ .ಹೇಳಿರುವುದು
ತನುಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾನೀನು.
ಮನಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾನೀನು.
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾನೀನು.
ಅರಿವುಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾನೀನು.
ಭಾವಶುದ್ಭವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾನೀನು.
ಪರಿಣಾಮಿಗಳಲ್ಲದವರಲ್ಲಿನೈವೇದ್ಯವನೊಲ್ಲೆಯಯ್ಯಾನೀನು.
ತ್ರಿಕರಣಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾನೀನು.
ಹೃದಯಕಮಲಅರಳದವರಲ್ಲಿ ಇರಲೊಲ್ಲೆಯಯ್ಯಾನೀನು.
ಎನ್ನಲ್ಲಿಏನುಂಟೆಂದುಕರಸ್ಥಲವನಿಂಬುಗೊಂಡೆಹೇಳಾ
ಚೆನ್ನಮಲ್ಲಿಕಾರ್ಜುನಯ್ಯಾ.
ಇನ್ನು ನಿಜವಾದ ಶುದ್ದಿ ಎಂದರೆ ಏನು ?ಎಂದು ಬಸವಣ್ಣ ಸರಳವಾಗಿ ತಿಳಿಸಿರುವರು
ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ. ಇದೇ ಅಂತರಂಗಶುದ್ಧಿ
ಇದೇ ಬಹಿರಂಗಶುದ್ಧಿ ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.
ಕಮ್ಮಟದಲ್ಲಿ ಪಂಪ ಕು ವೆಂಪು ಅವರ ಪ್ರಸ್ತಾಪವೂ ಬಂತು . ಮನುಜ ಜಾತಿ ತಾನೋಂದೆ ವಲಮ್ ಎಂಬ ಪಂಪನ ಸಾಲು ಕುಲ ಕುಲ ವೆಂದು ಹೊಡೆದಡದಿರಿ ಎಂಬ ಕನಕದಾಸರ ಆಶಯಕ್ಕೆ ಇರುವ ಸಾಮ್ಯತೆ ಬಗ್ಗೆ ಹಲವರು ಎತ್ತಿ ತೋರಿದರು . ಕುವೆಂಪುಅವರ ' ಒ ನನ್ನ ಚೇತನ ಆಗು ನೀ ಅನಿಕೇತನ ಕ್ಕೂ' ಬಸವಣ್ಣ ನವರ 'ಸ್ಥಾವರಕ್ಕಳಿವಿಲ್ಲ ಜಂಗಮಕ್ಕಳಿವುಂಟು' ವಿಗೂ ಇದೇ ತರಹ ಇರ ಬಹುದು .
ಕನಕದಾಸರ ಈ ದೇವರನಾಮಕ್ಕೆ ಹತ್ತಿರವಾದ ಶರಣರ ವಚನಗಳು ಹಲವು ಇವೆ .
ನೀ ಮಾಯೆಯೊಳಗೊನಿನ್ನೊಳು ಮಾಯೆಯೊ
ನೀ ದೇಹದೊಳಗೊ ನಿನ್ನೊಳು ದೇಹವೊ
ಬಯಲು ಆಲಯದೊಳಗೊ ಆಲಯವು ಬಯಲೊಳಗೊ
ಬಯಲು ಆಲಯವೆರಡು ನಯನದೊಳಗೊ ನಯನ ಬುದ್ಧಿಯೊಳಗೊ
ಬುದ್ಧಿ ನಯನದೊಳಗೊ ನಯನ ಬುದ್ಧಿಗಳೆರಡು
ನಿನ್ನೊಳಗೊ ಹರಿಯೆ
ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಗಳೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನೊಳಗೊ ಮನಸು ಜಿಹ್ವೆಯೊಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ
ಕುಸುಮದೊಳು ಗಂಧವೊ ಗಂಧದೊಳು ಕುಸುಮವೊ
ಕುಸುಮ ಗಂಧಗಳೆರಡು ಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ
ನಿನ್ನೊಳಗೊ?
ಮನದ ಮುಂದಿನ ಆಸೆಯೇ ಹೊರತು ಹೆಣ್ಣು ಹೊನ್ನು ಮಣ್ಣು ಅಲ್ಲ ಎಂದು ಅಲ್ಲಮ ಹೇಳಿದ್ದಾನೆ
ಬಾಲಂಗೋಚಿ :ಮನೆ ,ಕಚೇರಿ ,ಆಸ್ಪತ್ರೆ ಎಲ್ಲಾ ಕಡೆ ಹಿರಿಯರು ಇಹ ಲೋಕ ಮರೆತು ಮಕ್ಕಳು ಮೊಬೈಲ್ ನಲ್ಲಿ ಮುಳುಗಿರುವಾಗ ನಾ ಜಂಗಮ (ಮೊಬೈಲ್ )ದೊಳಗೊ ,ಜಂಗಮ (ಮೊಬೈಲ್ )ದೊಳು ನಾನೋ ಎಂಬ ಆಲೋಚನೆ ಬರುತ್ತದೆ . ಅಂತೆಯೇ ಶಿಶುನಾಳ ಶರೀಫರ ಕೋಡಗ ನ ಕೋಳಿ ನುಂಗಿತ್ತಾ ಎಂಬುದು ಈಗ ಕೊಡಗನೇ ಕೋಳಿ ನುಂಗಿದ ಹಾಗೆ ಆಗಿದೆ ಅನಿಸುತ್ತದೆ .