ಸಂಪಾಜೆ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿ ಪ್ರದೇಶ . ಇಲ್ಲಿಯ ಗೇಟ್ ಇತಿಹಾಸ ಪ್ರಸಿದ್ದ .ಮಳೆಗಾಲದಲ್ಲಿ ವಿಪರೀತ ಮಳೆ .ಹಿಂದೆ ನಾಗರಿಕ ಸೌಲಭ್ಯ ಗಳು ಬಹಳ ಕಡಿಮೆ ಇತ್ತು . ಮಡಿಕೇರಿ ಪುತ್ತುರಿನಂತಹ ಪೇಟೆಗಳಲ್ಲಿ ಕೂಡಾ ಆಧುನಿಕ ಪದ್ದತಿಯ ವೈದ್ಯರು ಬೆರಳೆಣಿಕೆಯಲ್ಲಿ ಇದ್ದರು. ಆ ಕಾಲದಲ್ಲಿ ಎಂ ಬಿ ಬಿ ಎಸ್ ಪದವಿ ಪೂರೈಸಿ ಸಂಪಾಜೆಯಲ್ಲಿ ವೈದ್ಯಕೀಯ ಸೇವೆ ಆರಂಬಿಸಿದವರು ಡಾ ಜಿ ಕೆ ಸುಬ್ರಹ್ಮಣ್ಯ ಭಟ್ ಅವರು.ಹಲವು ವರ್ಷ ತಮ್ಮದೇ ಚಿಕಿತ್ಸಾಲಯ ,ನಂತರ ಕೆ ವಿ ಜಿ ವೈದ್ಯಕೀಯ ಕಾಲೇಜ್ ನ ಸಂಯೋಗ ದಲ್ಲಿ ಇರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ .
ಇವರು ಪ್ರಸಿದ್ದ ಕೋಣೆತೋಟ ಮನೆತನದವರು . ಮೃದು ಭಾಷಿ .ಸದಾ ಅಧ್ಯಯನ ಕುತೂಹಲಿ .ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳ ಪರಿಚಯ ಮಾಡಿಕೊಂಡು ,ಅವನ್ನು ತಮ್ಮ ವೃತ್ತಿ ಸೇವೆಯಲ್ಲಿ ಅಳವಡಿಸುವ ಉದ್ದೇಶ ಹೊಂದಿದ್ದವರು . ಸಂಪಾಜೆ ಕಲ್ಲುಗುಂಡಿ ಪರಿಸರದಲ್ಲಿ ಇವರ ಸೇವೆ ,ಸಜ್ಜನಿಕೆ ಪರಿಚಯ ಇಲ್ಲದವರು ಅಪರೂಪ .
ಸದ್ಯ ಸಂಪಾಜೆಯಲ್ಲಿ ನೆಲೆಸಿರುವ ಇವರು ವೃದ್ದಾಪ್ಯ ದ ಆರೋಗ್ಯ ಸಮಸ್ಯೆಗಳ ಕಾರಣ ವೃತ್ತಿಗೆ ವಿದಾಯ ಹೇರಿರುವರು. ಇಂತಹವರ ಸೇವೆ ಸಮಾಜ ಸದಾ ನೆನಪಿನಲ್ಲಿ ಇಟ್ಟು ಕೊಂಡಿರ ಬೇಕು.