ಬೆಂಬಲಿಗರು

ಮಂಗಳವಾರ, ಫೆಬ್ರವರಿ 8, 2022

ನೋ ಕೋನ್ಫಿಡೆನ್ಸ್ ಮೋಷನ್

            ನೋ ಕಾನ್ಫಿಡೆನ್ಸ್ ಮೋಷನ್ (ಕಿರಿ ಕಿರಿ ಕರುಳ ಕಾಯಿಲೆ )

ಒಂದು ಕಾಯಿಲೆ ಇದೆ ಕಿರಿ ಕಿರಿ ಕರುಳ ಭಾದೆ (Irritable Bowel Syndrome )ಎಂದು ಇದರ ಹೆಸರು  . 

 ಅಸ್ಪಷ್ಟ ಹೊಟ್ಟೆ ನೋವು ಇದರ ಮುಖ್ಯ ಲಕ್ಷಣ ವಾದರೆ ,ಮಲ ಬದ್ಧತೆ ,ಭೇದಿ ,ಹೊಟ್ಟೆ ಉಬ್ಬರಿಸುವುದು ,ಗ್ಯಾಸ್ ಸಮಸ್ಯೆ ಇತ್ಯಾದಿ ಕೂಡಾ ಜತೆಗಾರ ರಾಗಿ ಇರಬಹುದು . ಸ್ಕ್ಯಾನ್ ,ಸ್ಕೋಪ್ ಇತ್ಯಾದಿ ಪರೀಕ್ಷೆಗಳಲ್ಲಿ ಗಮನಾರ್ಹ ತೊಂದರೆ ಏನೂ ಕಾಣಿಸದು . 

ಭೇದಿ ರಕ್ತ ರಹಿತವಾಗಿದ್ದು ,ಲೋಳೆ ಯಂತೆ ಇದ್ದು ರಾತ್ರಿ ತೊಂದರೆ ಕೊಡುವದು ಕಡಿಮೆ . ಕೆಲವರಲ್ಲಿ ಊಟ ಮಾಡಿದ ಕೂಡಲೇ ಮಲ ವಿಸರ್ಜನೆ ಮಾಡಬೇಕೆಂದು ಆಗುವುದು 

ಮಲಬದ್ಧತೆ  ಇರುವವರಲ್ಲಿ  ವಿಸರ್ಜನೆ ಕಷ್ಟ ವಾಗುವದು ಮತ್ತು ಮಾಡಿದ ಮೇಲೂ ಕ್ರಿಯೆ ಪೂರ್ಣವಾದ ಭಾವನೆ ಬರದೇ ಇನ್ನೂ ಹೋಗ ಬೇಕೆಂದು ತೋರುವುದು . (ಇದೇ ನೋ ಕಾನ್ಫಿಡೆನ್ಸ್ ಮೋಶನ್ ). 

ಬಹಳ ಮಂದಿಯಲ್ಲಿ  ಮಲಬದ್ಧತೆ ಮತ್ತು ಭೇದಿ ಪರ್ಯಾಯವಾಗಿ ಬರುವುದು . 

ಈ ಕಾಯಿಲೆಯ ನೈಜ ಕಾರಣ ಇನ್ನೂ ತಿಳಿದಿಲ್ಲ . ಮೆದುಳಿನಿಂದ ಕರುಳಿಗೆ ಹೋಗುವ ಸಂದೇಶಗಳ ಹರಾಕಿರಿಯಿಂದ ಇದು ಉಂಟಾಗುವುದು ಎಂದೂ ಹೇಳುವರು . ವ್ಯಕ್ತಿಯು ತನ್ನ ಕರುಳಿನ ಮೂಲಕ ಅಳುವನು ಎಂದು ಹೇಳುವುದುಂಟು . 

ರೋಗ ಲಕ್ಷಣ ನೋಡಿ ಚಿಕಿತ್ಸೆ ಮಾಡುವರು ,ಉದಾ ಭೇದಿ ಇದ್ದರೆ ಅದರ ಶಮನ . ಜತೆಗೆ ಮನಸು ಶಾಂತಿ ಮಾಡುವ ಔಷಧಿಗಳನ್ನೂ ಸೇರಿಸುವರು .. 

Irritable Bowel Syndrome: Modern Concepts and Management Options - The  American Journal of Medicineಮೇಲಿನ ಶೀರ್ಷಿಕೆ ಖ್ಯಾತ ಕರುಳು ಜಠರ ವೈದ್ಯರಾಗಿದ್ದ  ದಿ ಡಾ ಮದನ ಗೋಪಾಲನ್ ಅವರು ಆಗಾಗ ಉಪಯೋಗಿಸುತ್ತಿದ್ದುದು