ಮಾತು ಎರಡು ಅಂಶ ಗಳನ್ನು ಹೊಂದಿರುತ್ತದೆ .ಒಂದು ಶ್ರವಣ ಮತ್ತು ವಾಚ್ಯ .ಎಡ ಮೆದುಳಿನ ಶ್ರವಣ ವಿಭಾಗ ಮಾತು ಗ್ರಹಿಸುತ್ತದೆ .ಮತ್ತು ಅಲ್ಲಿಂದ ವಾಚ್ಯ (ಮೋಟಾರ್ ) ವಿಭಾಗಕ್ಕೆ ಸಂದೇಶ ರವಾನೆಯಾಗುವುದು . ವಾಚ್ಯ ಮಾತು ವಿಭಾಗದಿಂದ ಧ್ವನಿಪೆಟ್ಟಿಗೆ ಗೆ ಸಂದೇಶ
ರವಾನೆ ಯಾಗುವುದು . ಅಲ್ಲಿ ಧ್ವನಿಪೆಟ್ಟಿಗೆಯ ಮಾಂಸ ಖಂಡ ಗಳು ಅವಶ್ಯಕ್ಕೆ ಅನುಗುಣವಾಗಿ ಸಂಕುಚಸಿ ವಿಕಸಿಸಿ ಉದ್ದೇಶಿಸಿದ ಸ್ವರ ಹೊರಡುವುದು . ಮಾತು
ಉತ್ಪಾದನೆಯಲ್ಲಿ ನಾಲಿಗೆಯ ಪಾತ್ರ ಕಿರಿದು .ಆದುದರಿಂದ ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ ಎನ್ನುವುದು ಪೂರ್ಣ ಸರಿಯಲ್ಲ .ಆಚಾರವಿಲ್ಲದ ಮನವೇ
ನಿನ್ನ ನೀಚ ಬುದ್ದಿಯ ಬಿಡು ಎಂದೋ ,ಆಚಾರವಿಲ್ಲದ ಧ್ವನಿಪೆಟ್ಟಿಗೆ ಎನ್ನಿವುದೋ ಸಮಂಜಸ .
ಮೆದುಳಿನ ರಕ್ತ ಸಂಚಾರ ಧಿಡೀರನೆ ನಿಂತು ಆಘಾತ ಅಥವಾ ಸ್ಟ್ರೋಕ್ ಸಂಭವಿಸುವುದು .ಇದರಲ್ಲಿ ಮಾತಿನ ಶ್ರವಣ ಮತ್ತು ವಾಚ್ಯ ಎರಡೂ ಕೇಂದ್ರಗಳ ಮೇಲೆ ಪರಿಣಾಮ
ಉಂಟಾದರೆ ಒಟ್ಟು ಮಾತು ಬಿದ್ದು ಹೋಗುವುದು . ಬರಿಯ ಶ್ರವಣ ಕೇಂದ್ರ ಕಾರ್ಯಹೀನ ವಾದರೆ ಅರ್ಥವಿಲ್ಲದ ಶಬ್ದಗಳು ಹೊರಡುವವು . ವಾಚ್ಯ ಶಕ್ತಿ ಹೋದರೆ ಕೇಳಿದ್ದು ಅರ್ಥ
ವಾದರೂ ಮಾತು ಹೊರಡದು . ಮಾತಿನ ವಾಚ್ಯ ಕೇಂದ್ರದ ಸಮೀಪ ಬಲಬದಿಯ ಕೈ ಕಾಲು ಚಲನೆಯನ್ನು ನಿಯಂತ್ರಿಸುವ ಭಾಗ ಮೆದುಳಿನಲ್ಲಿ ಇದೆ. ಆದುದರಿಂದ
ಬಲ ಬದಿ ಪಾರ್ಶ್ವವಾಯು ಆದಾಗ ಕೆಲವೊಮ್ಮೆ ಮಾತೂ ಬೀಳುವುದು
ಶ್ರವಣ ಕೇಂದ್ರಕ್ಕೆ ವರ್ನಿಕೆ ಏರಿಯಾ ಎಂದೂ ವಾಚ್ಯ ಕೇಂದ್ರಕ್ಕೆ ಬ್ರೋಕಾ ಏರಿಯಾ ಎಂದೂ ಹೆಸರಿದೆ .ಮೇಲಿನ ಚಿತ್ರದಲ್ಲಿ ಎದ ಮೆದುಳಿನ ಈ ಭಾಗಗಳನ್ನು ಕಾಣಬಹುದು