ಬೆಂಬಲಿಗರು

ಶುಕ್ರವಾರ, ಡಿಸೆಂಬರ್ 20, 2019

ಮರೆಯಾದರೂ ಮರೆಯಲಾಗದ ಕಾರ್ಕಳ ರಾಮಚಂದ್ರ

            

ಕಾರ್ಕಳ ಎಂದೊಡನೆ  ನೆನಪಿಗೆ ಬರುವುದು  ತ್ಯಾಗಮೂರ್ತಿ  ಗೋಮಟೇಶ್ವರ ,

ಶಿಲ್ಪಿ ರೆಂಜಾಳ ಗೋಪಾಲ ಶೆಣಾಯ ಮತ್ತು  ಪ್ರಾಧ್ಯಾಪಕ ಸಾಹಿತಿ ಮತ್ತು 

ಸಂಘಟಕ  ಎಂ ರಾಮಚಂದ್ರ .ಸೇಡಿಯಾಪು ಕೃಷ್ಣ ಭಟ್ ಅವರ ಶಿಷ್ಯ ಎಂದು 

ತಮ್ಮನ್ನು ಕರೆದು ಕೊಳ್ಳುತ್ತಿದ್ದ ಶ್ರಿಯುತರು ಕಾರ್ಕಳವನ್ನು ಸಾಹಿತ್ಯ ದ  ಕಾಶಿ 

ಯನ್ನಾಗಿ ಮಾಡಿದರು .ಇವರ ಆತಿಥ್ಯ ಸವಿಯದ ,ಕಾರ್ಯಕ್ರಮಗಳಲ್ಲಿ 

ಭಾಗವಹಿಸದ ಕನ್ನಡ ಸಾಹಿತಿಗಳು ವಿರಳ .ಮೊದಲು ಭುವನೇಂದ್ರ ಕಾಲೇಜ್ ,

ನಿವೃತ್ತಿ ನಂತರ  ಕಾರ್ಕಳ ಸಾಹಿತ್ಯ  ಸಂಘ ದ ಮೂಲಕ  ಅವ್ಯಾಹತ ಸಾಹಿತ್ಯ 

ಚಟುವಟಿಗಳನ್ನು ದಣಿವಿಲ್ಲದೆ  ತಪಸ್ಸಿನಂತೆ  ನಡೆಸಿದ ಮಹಾನ್ ಚೇತನ .ಇದಲ್ಲದೆ 

ಜಿಲ್ಲೆಯ  ದೊಡ್ಡಸಾಹಿತ್ಯ ಚಟುವಟಿಕೆ ಗಳಲ್ಲಿ ಇವರ ಸೇವೆ ಸದಾ .ಇವರ 

ಕೆಲಸ ಕಾರ್ಯಗಳಲ್ಲಿ  ಶಿಸ್ತು ,ಒಪ್ಪ ಓರಣ .

ನಿನ್ನೆ ಕನ್ನಡ ಪುಸ್ತಕ ಪ್ರಾಧಿಕಾರ ಅವರ ಸಾಹಿತ್ಯ  ಕೈಂಕರ್ಯ ಗುರುತಿಸಿ ಜೆ ಪಿ 

ರಾಜರತ್ನಂ ಪುರಸ್ಕಾರ ಘೋಷಿಸಿತ್ತು .ಜೆ ಪಿ ರಾಜರತ್ನಂ ಅವರ ಶಿಷ್ಯನಲ್ಲದ ಶಿಷ್ಯ 

ಅವರು ನನ್ನ ಗುರುವಲ್ಲದ ಗುರು ಎಂದು ಒಂದು ಕಡೆ ರಾಮಚಂದ್ರ  ಹೇಳಿ 

ಕೊಂಡಿದ್ದಾರೆ .ಅಂತಹವರ ಹೆಸರಿನ ಪ್ರಶಸ್ತಿ ಬಂದಾಗ ಸಹಜವಾಗಿ ಸಂತೋಷ 

ವಾಗಿರ ಬೇಕು .ಅಲ್ಲದೆ ಅವರೆಂದೂ ಪ್ರಶಸ್ತಿಗಳ ಹಿಂದೆ ಹೋದವರಲ್ಲ .ನನ್ನಂತಹ 

ಸಾಹಿತ್ಯೇತರ  ಕ್ಷೇತ್ರದವರನ್ನೂ ಕನ್ನಡ ಸಾಹಿತ್ಯದಲ್ಲಿ ಇರುವ ಮಮತೆ ಕಂಡು 

ಪ್ರೋತ್ಸಾಹಿಸಿದವರು .

                        
ನಿನ್ನೆಯಷ್ಟೇ ಅವರನ್ನು ಅಭಿನಂದಿಸಿ ಹತ್ತು ನಿಮಿಷ  ದೂರವಾಣಿ ಯಲ್ಲಿ 

ಮಾತನಾಡಿದ್ದೆ .ಪ್ರಾಯಶಃ ನನ್ನಂತೆ ಹಲವು ಅಭಿಮಾನಿಗಳ ಜೊತೆ ಮಾತನಾಡಿ 

ಹೃದಯ ತುಂಬಿ ಬಂದಿರ ಬೇಕು .ಮಾಸ್ತಿ 125 ಸಮಾರಂಭದಲ್ಲಿ  ಬಂದ ಅತಿಥಿ 

ಸಾಹಿತಿ  ಕರ್ನಾಟಕದ ಎರಡು ಆಘೋಷಿತ ವಿಶ್ವವಿದ್ಯಾಲಯ ಗಳು ಎರ್ಯ 

ಲಕ್ಷ್ಮಿನಾರಾಯಣ ಆಳ್ವ ಮತ್ತು ಕಾರ್ಕಳ ರಾಮಚಂದ್ರ ಎಂದು ಹೇಳಿದ್ದರಲ್ಲಿ ಉತ್ಪ್ರೇಕ್ಷೆ 

ಇಲ್ಲ .ಇಬ್ಬರೂ ಒಂದೇ ವರ್ಷ ನಮ್ಮನ್ನು ಅಗಲಿದ್ದು ,ಗೋವಿಂದ ಪೈ ಗಳು  

ಕೈಲಾಸಂ ನಿಧನ ರಾದಾಗ ,ಅದನ್ನೇ ರಾಮಚಂದ್ರ ಅವರು ರಾಜರತ್ನಂ ಬಗ್ಗೆ 

ಬರೆದಂತೆ where will we get another Karkala Ramachandra 

sir?another Erya Laxminarayana Alva?ಸಾಹಿತ್ಯ ಸೇವೆಯಲ್ಲಿ ರಾಮ 

ಲಕ್ಷ್ಮಣರಂತೆ  ಎರ್ಯ ,ಕಾರ್ಕಳ .ಏರ್ಯರೆ  ಮೇಲಿನಿಂದ ರಾಮಚಂದ್ರ ರಿಗೆ 

ಬಲೆಯೇ ಮೂಳು ಒಂಜಿ  ಸಾಹಿತ್ಯ ಕಾರ್ಯಕ್ರಮ ಮಲ್ಪುಗ ಎಂದು ಕರೆಸಿ 

ಕೊಂಡರೋ?

ಮಂಗಳವಾರ, ಡಿಸೆಂಬರ್ 17, 2019

ಕೆಲವು ನಂಬಿಕೆಗಳು

ಚಿಕ್ಕಂದಿನಲ್ಲಿ  ಕೆಲವು  ನಂಬಿಕೆಗಳು ವಾಡಿಕೆಯಲ್ಲಿ ಇದ್ದವು. ಅದರಲ್ಲಿ  ವಿಚಿತ್ರವಾದ 

ಒಂದು ,ಬೆಕ್ಕು ಕೊಂದರೆ  ತಲೆ ನಮ್ಮ ನಿಯಂತ್ರಣ ಇಲ್ಲದೆ ಆಡುವುದು .ಈ 

ಕಾಯಿಲೆಗೆ ವೈದ್ಯ ಶಾಸ್ತ್ರದಲ್ಲಿ  ಟಿ ಟ್ಯು ಬೇಶನ್ 

         ಇನ್ನೊಂದು ಕಪ್ಪೆ ಕೊಂದರೆ  ಚರ್ಮದಲ್ಲಿ ಕೆಡು ಅಥವಾ ವಾರ್ಟ್ ಆಗುವುದು .

ಕೆಡು ಆದರೆ  ಕುಕ್ಕೆ ಸುಬ್ರಹ್ಮಣ್ಯ ಕ್ಕೆ  ಹರಕೆ ಹೇಳಿದರೆ ಹೋಗುವುದು .

            ತೆಂಗಿನ ಕಾಯಿ ಹರೆಯುವಾಗ ತಿಂದರೆ ಮದುವೆ ದಿನ ಮಳೆ  ಬರುವುದು .

 ಬೆಳಿಗ್ಗೆ ನರಿ ಮುಖ ನೋಡಿದರೆ  ವಿನಾ ಕಾರಣ ನಗು ಬರುವುದು .

         ಮಕ್ಕಳಿಗೆ   ಅಲಂಕಾರ  ಮಾಡಿ  ಬಹು ಮಂದಿಯ  ನಡುವೆ ಹೋದರೆ 

ದೃಷ್ಟಿ  ಆಗುವುದು .ಸಭೆ ಸಮಾರಂಭಗಳಲ್ಲಿ  ಶೀತ ಕೆಮ್ಮು ಇರುವವರು 

ಯಾರಾದರೂ ಬಂದಿರುತ್ತಾರೆ .ಅವರಿನಂದ ಗಾಳಿ ಮೂಲಕ  ಮಗುವಿಗೆ ಕಾಯಿಲೆ 

ಬರುವುದು .ಇದನ್ನೇ ದೃಷ್ಟಿ ಎಂದು ತಿಳಿದು ಅದರ ನಿವಾರಣೆಗೆ ಹರಕೆ ಹೇಳುವರು .

              ಏನಾದರೂ ತಿನ್ನ ಬೇಕೆಂದು ಆಸೆಯಾದರೆ  ಅಥವಾ ಬೇರೆಯವರಿಗೆ 

ಕೊಡದೆ ತಿಂದರೆ  ಬಿಕ್ಕಳಿಕೆ ಬರುವುದು.

ಮರ ಗೆಣಸು ಹಾಗೇ ತಿಂದರೆ  ಹುಚ್ಚು ಹಿಡಿಯುವುದು .

ಮಂಗಳವಾರ, ನವೆಂಬರ್ 26, 2019

ಗಟ್ಟಿ ಸಾಹಿತ್ಯದ ಕೆ ಟಿ ಗಟ್ಟಿ ಭೇಟಿ

ನಮ್ಮ ದೇಶದಿಂದ ಸಾವಿರಾರು ಮಂದಿ ಉದ್ಯೋಗಾರ್ಥಿ ಗಳಾಗಿ ವಿದೇಶಗಳಿಗೆ 

ತೆರಳುತ್ತಾರೆ .ಅದರಲ್ಲೂ ಮಧ್ಯ ಪ್ರಾಚ್ಯ ಮತ್ತು ಆಫ್ರಿಕಾ ಖಂಡದ ದೇಶಗಳಿಗೆ 

ತಜ್ನರು ಕುಶಲ ಕರ್ಮಿಗಳು ಮತ್ತು ಸಾಮಾನ್ಯ ಕೆಲಸ ಗಾರರು ಹೋಗುವುದು ಹೆಚ್ಚು .
ಮೊದಲು ಹೋಗುವಾಗ  ಒಂದಿಷ್ಟು ಹಣ ಮಾಡಿ ಹಿಂತಿರುಗುವ  ಗುರಿ ಇರುತ್ತದೆ .

ದಿನ ಕಳೆದಂತೆ  ಬೇಕುಗಳು ಮತ್ತು ಗುರಿಗಳ ಮಟ್ಟ ಏರುತ್ತದೆ .ಊರಿಗೆ ರಜೆಯಲ್ಲಿ 

ತೆರಳುವಾಗ ಅಲ್ಲಿಯ  ತಮ್ಮ ಕಲಿಕೆಗೆ ಅನುಗುಣವಾದ ಕೆಲಸ ,ಗೌರವ ಯುತ 

ವಾದ ಸಂಬಳ  ಮರೀಚಿಕೆ ಎನಿಸುತ್ತದೆ .ಕುಟುಂಬದವರೂ  ವಿದೇಶದ ಸಂಪಾದನೆ 

ಯ ಮಟ್ಟಕ್ಕೆ ತಮ್ಮ ಜೀವನ ಶೈಲಿ ಏರಿಸಿರುತ್ತಾರೆ .ಇದರಿಂದ ಮರಳಿ ನಾಡಿಗೆ  

ಬರುವ ಗಡುವು ಮುಂದಕ್ಕೆ ಹೋಗುತ್ತದೆ.

ವಿದೇಶದಲ್ಲಿ  ನಮ್ಮ ನಾಡಿಗೆ ಹೋಲಿಸಿದರೆ ಅಧಿಕ ಸಂಬಳ ಬರುವುದು .ಕೆಲವು 

ಕಡೆ  ಕೆಲಸದ ವಾತಾವರಣ ಹಿತವಾಗಿರುವುದು .ಆದರೆ  ಆ ನಾಡಿನವರಿಗೆ ವಲಸೆ 

ಉದ್ಯೋಗಿಗಳ  ಬಗ್ಗೆ   ಪ್ರೀತಿ ,ಅಸೂಯೆ  ಮತ್ತು ದ್ವೇಷ  ಏಕ ಕಾಲಕ್ಕೆ ಬೇರೆ ಬೇರೆ 

ಪ್ರಮಾಣಗಳಲ್ಲಿ ಇರುವುದು .ಅದಕ್ಕೆ  ಆನುಗುಣವಾಗಿ ಆಗಾಗ್ಗೆ  ಊರಿಗೆ ಮರಳುವ 

ಆಲೋಚನೆ ಬರುವುದು .

ಇದು ಒಂದು ಸಂಕೀರ್ಣ ವಿಚಾರ .ಇದನ್ನು ಆದರಿಸಿ  ಕನ್ನಡದಲ್ಲಿ ಬಹಳ  ಕೃತಿಗಳು 

ಬಂದಿಲ್ಲ .ನನ್ನ ಮೇಲೆ ಪ್ರಭಾವ ಬೀರಿದ ಎರಡು ಕಾದಂಬರಿಗಳು , ಒಂದು 

ಕೆ ಟಿ ಗಟ್ಟಿ ಯವರ  ಅರಗಿನ ಮನೆ , ಎರಡು  ಮಲಯಾಳಿ ಲೇಖಕ  ಬೆನ್ಯಾಮೀನ್ 

ಅವರ  ಆಡು ಜೀವಿತಮ್ ಇದರ ಕನ್ನಡ ಅನುವಾದ ಡಾ ಅಶೋಕ್ ಕುಮಾರ್ 

.ಇದರಲ್ಲಿ  ಎರಡನೆಯದು ಗಲ್ಫ್  ರಾಷ್ಟ್ರದಲ್ಲಿ ನಡೆದ ಕತೆಯಾದರೆ ,ಕೆ ಟಿ 

ಗಟ್ಟಿಯವರ ಕಾದಂಬರಿ ಯ  ಆಫ್ರಿಕಾ ಖಂಡದ ಇತಿಯೋಪಿಯ ದೇಶಕ್ಕೆ ಶಿಕ್ಷಕ 

ನಾಗಿ ತೆರಳಿದ  ಕನ್ನಡಿಗನ ಕಥೆ .ಸ್ವತಃ  ಗಟ್ಟಿಯವರೇ  ಅಲ್ಲಿ ಅಧ್ಯಾಪಕನಾಗಿ 

ಇದ್ದ ಕಾರಣ ಇದರಲ್ಲಿ  ಭಾಗಶಃ ಆತ್ಮ ಚರಿತ್ರೆಯ ಛಾಯೆ ಇದೆ.

         ಬಹು ಮುಖ ಸಂಸ್ಕೃತಿ ಮತ್ತು ಬಹು ಭಾಷೆಗಳ  ಇತಿಯೋಪಿಯ  ಇತಿಹಾಸ 

ಇರುವ  ದೇಶ .ವರ್ಣ ರಂಜಿತ  ಚಕ್ರವರ್ತಿ ಹ್ಯಾಲಿ ಸಲಾಸೆ ಪದಚ್ಯುತಿ ಗೊಂಡು

ಕಮ್ಯೂನಿಸ್ಟ್ ಆಢಳಿತ ಇದ್ದ ಕಾಲದ ಚಿತ್ರಣ ಅರಗಿನ ಮನೆಯಲ್ಲಿ ಇದೆ.ಈ ಪುಸ್ತಕ 

ನನ್ನಲ್ಲಿ ಆಫ್ರಿಕಾ ದ ಮೇಲಿನ  ಕುತೂಹಲ ಬೆಳೆಸಿತು .ಉಗಾಂಡ ,ಕೀನ್ಯ ,ದಕ್ಷಿಣ 

ಆಫ್ರಿಕಾ  ,ಜಿಂಬಾಬ್ವೆ ಗಳ  ಸಂಸ್ಕೃತಿ  ಜೀವನ ಮತ್ತು ಸಾಹಿತ್ಯ  ಓದುವ ಪ್ರೇರಕ 

ಆಯಿತು .ಅದರಲ್ಲೂ ಭಾರತ ಮೂಲದ   ಎಂ ಜಿ ವಾಸಂಜಿ,ಅಹ್ಮದ್ ಕತ್ರಡ ಮತ್ತು 

ಮಯೂರ್ ಮಧ್ವಾನಿ ಅವರ  ಕೃತಿಗಳು  ತಮ್ಮ ತಮ್ಮ ನಾಡಿನ ಬದುಕು ಮತ್ತು 

ಇತಿಹಾಸದ  ಮೇಲೆ ಒಳನೋಟ  ಒದಗಿಸಿದವು .

             ಕೆ ಟಿ ಗಟ್ಟಿ ಯವರು  ಹಲವು ಒಳ್ಳೆಯ ಕಾದಂಬರಿಗಳ ಜತೆಗೆ  ಶಿಕ್ಷಣಕ್ಕೆ 

ಸಂಬಂದಿಸಿದ ಮೌಲಿಕ ಕೃತಿಗಳನ್ನೂ ಕೊಟ್ಟಿರುವರು .ಈ ಹಿರಿಯರು ದಕ್ಷಿಣ 

ಕನ್ನಡ ಜಿಲ್ಲೆಯ ಉಜಿರೆಯಲ್ಲಿ  ಎಲ್ಲಾ ಗೌಜಿ ಗೊಂದಲ ಪ್ರಚಾರ ಗಳಿಂದ  ದೂರ 

ಇದ್ದು   ಸಾಹಿತ್ಯ ಶಿಕ್ಷಣ ಸೇವೆ ಮಾಡುತ್ತ  ಬಂದಿದ್ದಾರೆ .ಕಾರಂತರು  ಪುತ್ತೂರು 

ಮತ್ತು ತೇಜ್ಜಸ್ವಿ  ಮೂಡಿಗೆರೆ ಯ  ಮೂಲೆಯಲ್ಲಿ ನೆಲಸಿ ಮೌಲಿಕ  ಕೃತಿಗಳನ್ನು

 ನೀಡಿದಂತೆ .

  ಕೆ ಟಿ ಗಟ್ಟಿ ಯವರನ್ನು ಕಂಡು ಮಾತನಾಡಿಸಲು  ಹೋದ ವಾರ ಅವರ 

ಮಂಗಳೂರು ನಿವಾಸಕ್ಕೆ ಮಿತ್ರ ವರದರಾಜ ಚಂದ್ರಗಿರಿ ಜತೆ ಹೋದಾಗ ,

ಬರಹ ಗಾರನನ್ನು  ಅವನ ಬರವಣಿಗೆಯ  ಏರು ಕಾಲದಲ್ಲಿ ,ಚಿತ್ರ ನಟಿ ಯನ್ನು 

ಅವಳ ಯೌವನ ಕಾಲದಲ್ಲಿ ನೋಡ ಬೇಕು .ಎಲ್ಲಾ ಬಿಟ್ಟು  ನನ್ನನ್ನು ನೋಡಲು 

ಬಂದಿದ್ದೀರಲ್ಲ ಎಂದು ನಗೆಯಾಡಿದರು .



              










                  


ಬುಧವಾರ, ನವೆಂಬರ್ 20, 2019

ಕೆಮ್ಮು

ಕೆಮ್ಮು ಶರೀರದ ರಕ್ಷಣಾತ್ಮಕ ಸಂಕೀರ್ಣ ಕ್ರಿಯೆ .ಶ್ವಾಸ ವಾಯು ಸಾಗುವ 

ದಾರಿಯಲ್ಲಿ ಅನಾಪೇಕ್ಷಣೀಯ ವಸ್ತುಗಳನ್ನು (ರೋಗಾಣುಗಳನ್ನು ಸೇರಿ )ಹೊರ 

ಹಾಕುವುದೇ ಇದರ ಉದ್ದೇಶ .
                              Image result for respiratory system diagramಉದಾಹರಣೆಗೆ  ಬೇಡದ ವಸ್ತು ಗಂಟಲ ಒಳ ಚರ್ಮದ ಸಂಪರ್ಕಕ್ಕೆ  ಬಂದೊಡನೇ  ಅದರ ಮೈಯಲ್ಲಿ ಇರುವ ಸಿಲಿಯಾ ಎಂಬ ಪೊರಕೆ ಅದನ್ನು ಸಾರಿಸಿ ಹೊರ ಹಾಕಲು 

ಯತ್ನಿಸುವುದು .ಒಡನೆಯೇ  ಮೆದುಳಿಗೆ ಸಂದೇಶ ರವಾನೆ ಆಗುವುದು .

ಮೆದುಳಿನಿಂದ  ವಪೆ ಮತ್ತು  ಎದೆಯ  ನಿಶ್ವಾಸ  ಮಾಂಸಖಂಡ ಗಳು ಸಂಕುಚ 

ಗೊಳ್ಳುವಂತೆ  ಆದೇಶ ಬರುವುದು .ಇದರಿಂದ  ಶ್ವಾಸ ಕೋಶ ಗಳು ಹಿಗ್ಗಿ ಗಾಳಿ 

ಎಳೆದು ಕೊಳ್ಳುವವು .ತತ್ಸಮಯ  ಧ್ವನಿ ಪೆಟ್ಟಿಗೆ ಯ  ಕವಾಟ ಮುಚ್ಚುವುದು .ಶ್ವಾಸ 

ಕೋಶ ಮತ್ತು ನಾಳಗಳಲ್ಲಿ ಗಾಳಿ ತುಂಬಿದೆ .ಹೊರ ಹೋಗುವ ದಾರಿ ಮುಚ್ಚಿದೆ .ಆಗ 

ಮೆದುಳಿನ ಆದೇಶದಂತೆ  ಉದರದ ಮಾಂಸಖಂಡ ಮತ್ತು  ಎದೆಯ ನಿಶ್ವಾಸದ 

ಸ್ನಾಯುಗಳು ಬಲವಾಗಿ ಸಂಕುಚಿತ ಗೊಂಡು ಮುಚ್ಚಿದ ಧ್ವನಿ ಪೆಟ್ಟಿಗೆ ಕವಾಟ ವನ್ನು 

ತೆರೆದು ವೇಗ ಮತ್ತು ಬಲದಿಂದ ನಿಶ್ವಾಸ ವಾಯು ಬೇಡದ ವಸ್ತುವನ್ನು ಹೊರ 

ಹಾಕಲು ನಮ್ಮ ಅರಿವಿಲ್ಲದಂತೆ ಸಹಾಯ ಮಾಡುವವು .ಇದೇ ಕೆಮ್ಮು .

              ಗಂಟಲು ಶ್ವಾಸ  ನಾಳ ಮತ್ತು ಶ್ವಾಸ ಕೋಶಗಳ ಸೋಂಕು ,

ಗಾಳಿಯಲ್ಲಿನ  ಕಲ್ಮಶ ,ಶ್ವಾಸ ದಾರಿಯಲ್ಲಿ ಗಡ್ಡೆಗಳು ,ಎಲರ್ಜಿ ಉಂಟು ಮಾಡುವ 

ವಸ್ತುಗಳು ಕೆಮ್ಮಿಗೆ ಸಾಮಾನ್ಯ ಕಾರಣ .

                    ಸಣ್ಣ ಮಕ್ಕಳಲ್ಲಿ ವೈರಸ್ ಸೋಂಕು ಕೆಮ್ಮಿಗೆ ಸಾಮಾನ್ಯ ಕಾರಣ .

ಇಂತಹ ಕೆಮ್ಮಿಗೆ ಆಂಟಿ ಬಯೊಟಿಕ್ ಬೇಡ .ನಾಲ್ಕು ವರ್ಷದಿಂದ ಕೆಳಗಿನ 

ಮಕ್ಕಳಿಗೆ  ಕೆಮ್ಮು ಅದುಮಿಸುವಂತಹ  ಶಿರಪ್ ಕೊಡದಿರುವುದೇ ಲೇಸು .ಇಂತಹ 

ಔಷಧಿಗಳು ಮೆದುಳಿನ ಕೆಮ್ಮು  ಜನಕ ಕೋಶಗಳನ್ನು ನಿಷ್ಕ್ರಿಯ ಮಾಡುತ್ತವೆ 

.ಇವುಗಳ ಉಪಯೋಗಕ್ಕಿಂತ ಅಡ್ಡ ಪರಿಣಾಮಗಳೆ ಅಧಿಕ ಎಂದು ತಜ್ನನರು 

ಹೇಳುವರು .

        ಇನ್ನೂ  ಎಲರ್ಜಿ ಆಸ್ತಮಾ ದಂತ ಕಾಯಿಲೆಗಳಲ್ಲಿ  ಶ್ವಾಸ ನಳಿಕೆ ಗಳು 

ಸಂಕುಚಿತಗೊಂಡು  ನಿಶ್ವಾಸ ಕಷ್ಟ ವಾಗುವುದು .ಅಲ್ಲದೆ  ಶ್ವಾಸ ಮಾರ್ಗ ದಿಂದ 

ಸುಯಿನ್ ಸುಯಿನ್ ಎಂಬ ಸದ್ದು ಮತ್ತು ಕೆಮ್ಮು ಬರುವುದು .ಇದಕ್ಕೆ  ಶ್ವಾಸ ನಳಿಕೆ 

ಗಳನ್ನು ಹಿಗ್ಗಿಸುವ ಮತ್ತು ಎಲರ್ಜಿ ನಿವಾರಕ  ಔಷಧಿ ಗಳನ್ನು  ಸೇದುವ ರೂಪದಲ್ಲಿ 

ಅಥವಾ ಮಾತ್ರೆ ,ಶಿರಪ್ ರೂಪದಲ್ಲಿ ಕೊಡುವರು .ಅದನ್ನು ಮಕ್ಕಳೂ ಸೇವಿಸ 

ವೈದ್ಯರ  ಸಲಹೆ ಮೇರೆಗೆ ಸೇವಿಸ ಬಹುದು .

            ಶ್ವಾಸ ಕೋಶದ ಸೋಂಕಿಗೆ  ನ್ಯೂಮೋನಿಯ ಎನ್ನುವರು .ಶ್ವಾಸ ನಾಳದ 

ಇನ್ಫೆಕ್ಷನ್  ಗೆ  ಬ್ರೊಂಕೈಟೀಸ್ ಎಂದೂ  ಕರೆಯುವರು .ಇವುಗಳಿಂದಲೂ ಕೆಮ್ಮು 

ಬರುವುದು .ಎರಡು ವಾರಗಳಿಗಿಂತ  ಮೀರಿದ ಕೆಮ್ಮು ಇದ್ದರೆ ಕಫ ಪರೀಕ್ಷೆ ಮಾಡಿ  

ಕ್ಷಯ  ರೋಗ  ಇದೆಯೋ ಎಂದು ಪತ್ತೆ ಹಚ್ಚ ಬೇಕು .

            ಬೀಡಿ ಸಿಗರೇಟ್ ಸೇವನೆ ಯಿಂದ  ಕೆಮ್ಮು ಬರುವುದು .ಯಾಕೆಂದರೆ 

ಹೊಗೆ ,ತಂಬಾಕು ಎರಡೂ  ಶರೀರಕ್ಕೆ ಹಾನಿಕರ.

ಕೆಲವು ಔಷಧಿ ಗಳು  ( ಉದಾ ಬಿ ಪಿ ಗೆ ಉಪಯೋಗಿಸುವ ಎನಾಲಾಪ್ರಿಲ್  )

,ಕೆಲವರಲ್ಲಿ  ಅಸಾಧ್ಯ ಕೆಮ್ಮು ಉಂಟು ಮಾಡಬಹುದು .

                     ಕೆಮ್ಮುವವರು ಬಾಯಿ ಮೂಗಿಗೆ ಬಟ್ಟೆ ಇಟ್ಟರೆ  ಉಳಿತು .ಇದರಿಂದ 

ಕಫದ ಕಣಗಳ ಮೂಲಕ ರೋಗಾಣುಗಳು ಹರಡುವುದು  ಕಡಿಮೆ ಆಗುವುದು .







ಸೋಮವಾರ, ನವೆಂಬರ್ 18, 2019

ಎಕ್ಸ್ಛೇಂಜ್ ರೇಟ್ ಮನೋಭಾವ

ನಮ್ಮ ದೇಶದಲ್ಲಿ ಎಷ್ಟು ದುಡಿದರೂ ಸಾಲದು , ಇನ್ಕಮ್ ಟಾಕ್ಸ್ ಬೇರೆ ಕಟ್ಟಬೇಕು 

ಎಂದು ಲಕ್ಷಾಂತರ ಮಂದಿ  ಉದ್ಯೋಗ ಅರಸಿ  ಮಧ್ಯ ಪ್ರಾಚ್ಯದ ದೇಶಗಳಿಗೆ  

ಕನಸುಗಳನ್ನು ಹೊತ್ತು ಹೋಗುವರು .ಅಲ್ಲಿಯ ಕೆಲಸದ ವೀಸಾ ಕ್ಕಾಗಿ  ಸಾಲ 

ಸೋಲ ಮಾಡುವವರು ಹಲವರು. ಸಾವಿರ ದಿರ್ಹಮ್ ಸಂಬಳ ಎಂದರೆ  ಅಬ್ಬಬ್ಬಾ 

ನಮ್ಮ ಇಪ್ಪತ್ತು ಸಾವಿರ ರೂಪಾಯಿ .ಟಾಕ್ಸ್ ಏನೂ ಇಲ್ಲ .ಐನೂರು ಸಾವಿರ 

ರೂಪಾಯಿ ಯಲ್ಲಿ  ಊಟ ಉಪಚಾರ ಕಳೆದರೆ ಉಳಿದ ಹಣ ಮನೆಗೆ ಕಳುಹಿಸ 

ಬಹುದು ಎಂದೆಲ್ಲಾ ಆಲೋಚನೆ .

                  ಹೊಟೇಲ್ ನಲ್ಲಿ  ಚಹಾ ಸೇವಿಸುವಾ ಎಂದು ಹೋದರೆ  ಅದಕ್ಕೆ 

ಎರಡು ದಿರ್ಹಮ್ .ಕೂಡಲೇ ಲೆಕ್ಕ ಮಾಡುವೆವು ,ಅಂದರೆ  ಇಂಡಿಯಾದ  

ನಲುವತ್ತು ರೂಪಾಯಿ ,ಮನಸ್ಸು ಅಳುವುದು .ಚಹದ ರುಚಿ ಕೆಡುವುದು .

ತಿಂಗಳು ತಿಂಗಳು ಹೇರ್ ಕಟ್ ಗೆ ಹೋದರೆ ನಾಪಿತ  ಹದಿನೈದು ದಿರ್ಹಮ್ 

ಎಂದು ಬರೆದಿರುವನು .ಅಬ್ಬಬ್ಬಾ  ಮುನ್ನೂರು ರೂಪಾಯಿ , ಕೂದಲೇ ಕಿತ್ತು 

ಬರುವುದು .ತಿಂಗಳ ಕೊನೆಗೆ ನಮ್ಮ ಲೆಕ್ಕಾಚಾರ ತಪ್ಪುವುದು.

           ಕೆಲ ವರ್ಷಗಳ ಹಿಂದೆ ಊರಿಗೆ ಪತ್ರವನ್ನು  ಸ್ಟಾಂಪ್ ವೆಚ್ಚ ಉಳಿಸಲೆಂದು 

ರಜೆಯಲ್ಲಿ ಊರಿಗೆ ತೆರಳುವ ಮಿತ್ರರಲ್ಲಿ ಇಂಡಿಯಾದಿಂದ ಬರುವಾಗ ತಂದ 

ಸ್ಟಾಂಪ್ ಹಚ್ಚಿ  ಕೊಡುವುದು .ಅವರು ಊರಿಗೆ ತಲುಪಿದೊಡನೆ ಅದನ್ನು ಪೋಸ್ಟ್

 ಮಾಡುವ ಪದ್ದತಿ ಇತ್ತು .ಒಬ್ಬೊಬ್ಬ  ದೇಶಾಗಾಮನಿ ಯೂ ಒಬ್ಬ ಮಿನಿ ಪೋಸ್ಟ್ 

ಮ್ಯಾನ್.ಈಗ ಮೊಬೈಲ್ ವ್ಹಾಟ್ಟ್ಶಪ್ಪ್ ಬಂದ ಮೇಲೆ ಅದು ಕಡಿಮೆ ಆಗಿದೆ .

 

ಶನಿವಾರ, ನವೆಂಬರ್ 16, 2019

ಅಮೆರಿಕ ದೇಶದ ಟ್ಯಾಕ್ಸಿ ಚಾಲಕರು

ಕೆಲವು ವರ್ಷಗಳ ಹಿಂದೆ ಅಮೆರಿಕ ಪ್ರವಾಸ ಮಾಡುತ್ತಿದ್ದ ಸಂದರ್ಭ ಅಲ್ಲಿಯ 

ನಿವಾಸಿಗಳು ಬಂದ ಪ್ರವಾಸಿ ಗಳೊಡನೆ  ಬೆರೆಯಲು ಮತ್ತು ಮಾತನಾಡಲು 

ನಿರಾಸಕ್ತಿ ಎದ್ದು ಕಂಡಿತು .ಅಕ್ಕ ಪಕ್ಕದ ಮನೆಯವರು ಪರಸ್ಪರ ಮಾತುಕತೆ ಕಡಿಮೆ .
ಆದರೆ  ನಾವು ಕಂಡ ಹೆಚ್ಚಿನ ಟ್ಯಾಕ್ಸಿ ಚಾಲಕರು ವಾಚಾಳಿಗಳು. ದೊಡ್ಡ ಹುದ್ದೆಗಳಲ್ಲಿ 

ಇದ್ದು ನಿವೃತ್ತ ರಾದವರೂ  ಈ ಉದ್ಯೋಗ ದಲ್ಲಿ ಇದ್ದಾರೆ .ಕಾಯಕದಲ್ಲಿ ಪ್ರತಿಸ್ಟ್ಟೆ 

ಯ ವಿಚಾರ ಇಲ್ಲ .ಮೆಕ್ಸಿಕೊ ,ಭಾರತ ,ಬಾಂಗ್ಲಾದೇಶ ,ಅಮೆರಿಕ ಮತ್ತು 

ಇತಿಯೋಪಿಯ ಮೂಲದ ಚಾಲಕರೊಡನೆ ಮಾತನಾಡುವ ಅವಕಾಶ ಸಿಕ್ಕಿತು .

                           ವಾಷಿಂಗ್ಟನ್  ನಗರದಲ್ಲಿ  ಓರ್ವ ಅಮೆರಿಕನ್ ಡ್ರೈವರ್ .ಆತನ 

ಟ್ಯಾಕ್ಸಿ  ಬೆಂಜ್ ಕಾರ್ .ಜಿ ಪಿ ಎಸ್ ಬಂದ ಮೇಲೆ ಹೋಗುವ ಜಾಗದ ಜಾಡು 

ಹಿಡಿಯುವುದು ಎಷ್ಟು ಸುಲಭ ಆಗಿದೆ ಎಂದು ವಿವರಿಸಿದ .ತಾನು ಭಾರತಕ್ಕೆ ಅದೂ 

ಮೈಸೂರಿಗೆ ಬಂದಿದ್ದೆ ಎಂದೂ ಮೈಸೂರು ಊಟಿ ರಸ್ತೆ ತುಂಬಾ ಹೊಂಡಗಳು 

ಇದ್ದು ಗುಡು ಗುಡು ಎಂದು ವಾಹನ ಅಲುಗಾಡುತ್ತಿತ್ತು ಎಂದು ನೆನಪಿಸಿದ .

                             ನ್ಯೂಯೋರ್ಕ್ ನಗರದಲ್ಲಿ  ಬಂಧುಗಳ ಮನೆಯಿಂದ 

ವಿಮಾನ ನಿಲ್ದಾಣಕ್ಕೆ ಬರುವಾಗ ಟಾಕ್ಸಿಯಲ್ಲಿ ಇತಿಯೋಪಿಯ ಮೂಲದ ಚಾಲಕ .

ತಮ್ಮ ದೇಶದಲ್ಲಿ ಕ್ರಾಂತಿ ಸಮಯ ಪಕ್ಕದ ಸುಡಾನ್ ದೇಶಕ್ಕೆ ಪರಾರಿಯಾಗಿ 

ಮುಂದೆ ಹೇಗೋ ರಾಜಕೀಯ ನಿರಾಶ್ರಿತ ಎಂದು ಅಮೆರಿಕಾ ದೇಶಕ್ಕೆ ಬಂದು ಸಣ್ಣ 

ಪುಟ್ಟ ಉದ್ಯೋಗ ಮಾಡಿ ಮುಂದೆ ವಿಶ್ವ ಸಂಸ್ಥೆ ಯಲ್ಲಿ ಉದ್ಯೋಗಿಯಾಗಿ ನಿವೃತ್ತ 

ನಾದ ಮೇಲೆ ಟ್ಯಾಕ್ಸಿ ಓಡಿಸುವ ಪ್ರವೃತ್ತಿ .ತನ್ನ ಮೂಲ ದೇಶದ ಬಗ್ಗೆ ಹೆಮ್ಮೆ .ತಮ್ಮ 

ದೇಶದಲ್ಲಿ ಭಾರತೀಯರು ಅಧ್ಯಾಪನ ಮತ್ತು ನರ್ಸಿಂಗ್ ವೃತ್ತಿಯಲ್ಲಿ ಗಣನೀಯ 

ಸೇವೆ ಸಲ್ಲಿಸಿದ್ದಾರೆ ಎಂದು ಕೃತಜ್ನತೆಯಿಂದ  ಹೇಳಿ ಕೊಂಡ.


 

ಬುಧವಾರ, ನವೆಂಬರ್ 6, 2019

ಒಳಗೊಂದು ಹೊರಗೊಂದು

ರೋಗಿ ಪತ್ನಿ ಸಮೇತ ಬರುತ್ತಾನೆ .ಕಾಯಿಲೆಯ ಮಾಹಿತಿ ಕೇಳುತ್ತೀರಿ .ಮದ್ಯಪಾನ 

ದಿಂದ ಉಂಟಾದ ಕಾಯಿಲೆ ಹಾಗೆ ಕಾಣಿಸುತ್ತದೆ .ರೋಗಿಯ ಬಳಿ ಕೇಳಿದರೆ 

 ಇಲ್ಲಾ ಎನ್ನುವನು .ಪತ್ನಿಯೂ ಗೋಣು ಆಡಿಸುವಳು .ಮತ್ತೆ ಗಂಡ ನ ಕಣ್ಣು ತಪ್ಪಿಸಿ 

ಬಂದು ಇಲ್ಲಾ ಡಾಕ್ತ್ರೆ ಅವ್ರು ಸಿಕ್ಕಾ ಬಟ್ಟೆ ಕುಡಿಯುತ್ತಾರೆ ,ಅವರ ಎದುರು ಹೇಳಿದರೆ 

ಬೈಯ್ಯುತ್ತಾರೆ ಎನ್ನುವರು .

                ಇನ್ನು ಕೆಲವರು ತಮ್ಮ ಹಿರಿಯರನ್ನು ಕರೆ ತರುವ ಮೊದಲೇ 

ಒಂಟಿಯಾಗಿ ಬಂದು "ನೋಡಿ ಡಾಕ್ತ್ರೆ ನಮ್ಮ ತಂದೆಯನ್ನು ಮತ್ತೆ ಕರೆ ತರುತ್ತೇನೆ 

ಅವರಿಗೆ ಏನೂ ಕಾಯಿಲೆ ಇಲ್ಲ ,ಆದರೆ ಇಲ್ಲಿ ನೋವು ಅಲ್ಲಿ ನೋವು ,ನಿದ್ದೆ ಇಲ್ಲಾ 

ಎಂದು ಗೊಣಗುವರು .ನೀವು ಸುಮ್ಮನೆ ನೋಡಿದ ಹಾಗೆ ಮಾಡಿ ಒಂದು ಟಾನಿಕ್ 

ಬರೆದು ನಿಮಗೆ ಏನೂ ಇಲ್ಲ ಎಂದು ಹೇಳಿ ,ಜಾಸ್ತಿ ಟೆಸ್ಟ್ ಎಲ್ಲ ಮಾಡಿಸುವುದು 

ಬೇಡ ಎಂದು ಪೂರ್ವ ಸೂಚನೆ ಕೊಟ್ಟು ನಾವು ರೋಗಿಯ ಬಗ್ಗೆ ಪೂರ್ವಾಗ್ರಹ

ಪೀಡಿತರಾಗುವಂತೆ ಮಾಡುವರು .ತೋರಿಸಿದ ಹಾಗೆ ಮಾಡ ಬೇಕು ,ಸರಿಯಾಗಿ 

ತೋರಿಸಲೂ ಮನಸ್ಸಿಲ್ಲ .

         ಇನ್ನು ಕೆಲವರು ಹಿರಿಯರು ಜಾಸ್ತಿ ಮಾತನಾಡುವರು .ಯಾವಾಗಲೂ 

ಕಿರಿ ಕಿರಿ ಎಂದು ಹೇಳುವರು .ಇದು ಸಾಪೇಕ್ಷ ಅಥವಾ relative . ಹಿರಿಯರ ಸಹಜ 

ಮಾತು ಅಥವಾ ಬೇಡಿಕೆ ಈಗ ಕಿರಿಯರಿಗೆ ಹೆಚ್ಚ್ಕು ಎನಿಸುವುದು .ನಾವು 

ವೈದ್ಯರು ಇದನ್ನು ಅಳೆದು ತೂಗಿ ನೋಡ ಬೇಕಾಗುವುದು .

ಅನೈಚ್ಛಿಕ ನಿಯಂತ್ರಿತ ಕ್ರಿಯೆ

ಕಾರ್ಕಳದಲ್ಲಿ ಎಂ ರಾಮಚಂದ್ರ ಎಂಬ ನಿವೃತ್ತ ಪ್ರಾಧ್ಯಾಪಕ ಲೇಖಕ ಮತ್ತು ಕನ್ನಡ 

ಪರಿಚಾರಕಾರಿದ್ದಾರೆ .ಮೂರು ಉಪಾಧಿಗಳಲಲ್ಲಿ ಕೊನೆಯದು ಅವರಿಗೆ ಹೆಚ್ಚು 

ಸಲ್ಲುತ್ತದೆ. ಸಾಹಿತಿಗಳ ವ್ಯಕ್ತಿ ಚಿತ್ರಗಳ ಪುಸ್ತಕ  ಚಿತ್ರ ಚರಿತ್ರ ಅವರ ಒಂದು  

ಉತ್ತಮ ಕೃತಿ.ಅದರಲ್ಲಿ  ಕನ್ನಡದ ದಂತ ಕತೆ ಕೋಟ ಶಿವರಾಮ ಕಾರಂತರ  ಬಗ್ಗೆ 

ಒಂದು ಲೇಖನ ಇದೆ .ಅದರಲ್ಲಿ ಒಂದು ಘಟನೆ ಇದೆ.

     "ಒಮ್ಮೆ ಮಧ್ಯಾಹ್ನದ ಹೊತ್ತಿಗೆ  ಪುತ್ತೂರಿಗೆ ಬರುವುದಾಗಿ ತಿಳಿಸಿದ್ದೆ .ಮಧ್ಯಾಹ್ನದ 

ಹೊತ್ತಿಗೆ ಹೋದರೆ ಊಟ ಮಾಡಿಯೇ ಹಿಂದಿರುಗುವುದು ಕ್ರಮ .ಹಾಗೆ ನಾನು ಆ 

ಸಲ ಹೋದಾಗ ಸ್ವಲ್ಪ ತಡವಾಯಿತು .ಬಾಲವನದಲ್ಲಿ ,ಅವರ ಮನೆಯ ಸುತ್ತ 

ಕಾಗೆಗಳ ಗದ್ದಲವೇ ಗದ್ದಲ .'ಇದೇಕೆ ಹೀಗೆ 'ಎಂದು ಕೇಳಿದೆ;ಅದಕ್ಕೆ ಕಾರಂತರ 

ಉತ್ತರ ಕೇಳಿ ನಾನು ಒಂದು ಕ್ಷಣ ಮೂಕನಾದೆ; "ನೀವು ಮಧ್ಯಾಹ್ನದ ಹೊತ್ತಿಗೆ 

ಬರುವುದಾಗಿ ತಿಳಿಸಿದ್ದಿರಿ.ಒಟ್ಟಿಗೆ ಊಟ ಮಾಡೋಣ ಎಂದು ಕಾದೆ.ನಾನು 

ಸಾಮಾನ್ಯವಾಗಿ ಮಧ್ಯಾಹ್ನ ಹನ್ನೊಂದು ಮುಕ್ಕಾಲರ ಹೊತ್ತಿಗೆ ಊಟ ಮಾಡಿ ,

ಒಂದು ಹಿಡಿ ಅನ್ನ ಕಾಗೆಗಳಿಗೆ ಹಾಕುತ್ತೇನೆ ಇಂದು  ತಡವಾಯಿತು .ಅವುಗಳು 

ಹೊತ್ತಿಗೆ ಸರಿಯಾಗಿ ಬಂದಿವೆ .ತಡವಾದ್ದಕ್ಕೆ ಗದ್ದಲ."ಎಂದರು .ಇದು ಖಾರ ಎನ್ನಿಸಿ 

ಕೊಂಡಿರುವ ಕಾರಂತರ ಹೃದಯವಂತಿಗೆಗೆ ,ಪ್ರಾಣಿ ಪಕ್ಷಿಗಳ ಮೇಲಿನ ಪ್ರೀತಿಗೆ 

ಒಂದು ಮಾರ್ಮಿಕ ನಿದರ್ಶನ.
                    
                         ಮೊನ್ನೆ  ಹೆಗ್ಗೊಡು ಸಂಸ್ಕೃತಿ ಶಿಬಿರಕ್ಕೆ ಹೋದವನು  ಸಾಗರ 

ದಲ್ಲಿ ಮುಂಜಾನೆ ಚಹಾ ಸೇವನೆಗೆ ಹೋಟೆಲ್ಲಿಗೆ ಹೋಗಿದ್ದೆ .ಹೊಟೇಲ್ ಮಾಣಿ 

ಹಿಂದಿನ ದಿನದ ಉಳಿಕೆಯದ  ವಡೆ ಬನ್ಸ್ ಇತ್ಯಾದಿಗಳನ್ನು ಪುಡಿ ಮಾಡುತ್ತಿದ್ದ 

.ಅದನ್ನೇ ರೀಸೈಕಲ್ ಮಾಡಿ ಇಂದಿನ ತಿಂಡಿಗೆ ಸೇರಿಸುವರೋ ಎಂದು ಕೊಂಡೆ .

ಆದರೆ ಹಾಗೆ ಆಗಲಿಲ್ಲ .ಆತ ಪುಡಿ ಮಾಡಿದ ತಿಂಡಿಯನ್ನು ರಸ್ತೆಯಾಚೆ ಉದ್ಯಾನದ 

ಬಳಿ ಕಲರವ ಮಾಡುತ್ತಿದ್ದ ಹಕ್ಕಿಗಳಿಗೆ  ಹಂಚಿ ಸ್ವಲ್ಪ ಹೊತ್ತು ನಾಯಿ ಬಾರದಂತೆ 

ಅಲ್ಲೇ ಕಾವಲು ಮಾಡಿದ.ಹಕ್ಕಿಗಳ ಮತ್ತು ಹೊಟೇಲ್ ಮಾಣಿಯ ನಿತ್ಯ ಕಜ್ಜ .

                                  ಪ್ರಾಣಿ ಪಕ್ಷಿಗಳ ಶರೀರದಲ್ಲಿ ಒಂದು ಜೈವಿಕ ಗಡಿಯಾರ 

ಇದೆ. ಜೀವ ಶಾಸ್ತ್ರ ದಲ್ಲಿ  ಪೌಲೋವನ ನಾಯಿ ಪ್ರಯೋಗ ಎಂದು ಇದೆ .ದಿನಾಲೂ 

 ಒಂದೇ ಹೊತ್ತಿಗೆ  ಆತ ಒಂದು ಗಂಟೆ ಬಾರಿಸಿ ನಾಯಿಗೆ ಆಹಾರ ಹಾಕುವನು .

ಒಂದು ದಿನ  ಗಂಟೆ ಬಾರಿದರೂ ಆಹಾರ ಹಾಕಲಿಲ್ಲ .ಆದರೂ ನಾಯಿಯ 

ಬಾಯಿಯಿಂದ ಜೊಲ್ಲು ಯೆಥೇಚ್ಚ ಸುರಿಯಿತು .ಇದನ್ನೇ ಅನ್ನೈಚ್ಛಿಕ  ನಿಯಂತ್ರಿತ 

ಕ್ರಿಯೆ ಎನ್ನುವರು .(Conditioned Reflex).

      ನಿಮ್ಮ ಶರೀರದಲ್ಲಿ ಕೆಲವು ಜೈವಿಕ ಕ್ರಿಯೆಗಳು ಇದೇ ತರಹ ಇವೆಯೇ?



 

ಶನಿವಾರ, ಅಕ್ಟೋಬರ್ 19, 2019

ಅಧುನಿಕ ಮುದ್ದಣನ ವ್ಯಥೆ

 
 
ಮುದ್ದಣ  ಮನೋರಮೆಯರ ಕತೆ ನೀವೆಲ್ಲಾ ಕೇಳಿರುವಿರಿ .ದಿನವಿಡೀ ಜಿಟಿಗುಟ್ಟುವ ಮಳೆ ಮನೆಯಲಿ ಏಕಾಂತ ಬಚ್ಚಲಿನ ಹೊಗೆ ಯಲ್ಲಿ ಒಣಗಿ ಅದರ ಕಂಪು ಸೋಸುವ ಸೀರೆ ಉಟ್ಟು ಇದ್ದ ಸಾಂತಣಿ ಪುಳಿಂಕೊಟ್ಟೆ ತಿಂದು ಮುಗಿಸಿ ಸಮಯ ಕೊಳ್ಳುವುದು ಹೇಗೆ ಎಂದು ಗಂಡ ಬರುವಿಕೆಯನ್ನೆ ಕಾಡು ಕುಳಿತ ಮನೋರಮೆ ಮುದ್ದಣ ಆಗಮನವಾದಂತೆ ಚಿಗರೆಯಂತೆ ಓಡಿ ಅವನನ್ನು ಉಪಚರಿಸಿ ಸಮಯ ಕಳೆಯಲು ಒಂದು ಕತೆ ಹೆಳೆಂದು ಪೀಡಿಸುವಳು .ಮೀಡಿಯಂ ಸಂಸ್ಕೃತವೊ ಕನ್ನಡವೋ ಎಂಬುದಕ್ಕೆ ನೀರು (ಕನ್ನಡ ) ಇಳಿಯದ ಗಂಟಲೋಲ್ ಕಡುಬು (ಸಂಸ್ಕೃತ )ತುರುಕಿದಂತೆ ಆಯ್ತು ಎಂದು ನಮ್ಮ ನಿಮ್ಮಂತೆ ಕನ್ನಡ ವನ್ನೇ ಆಯ್ಕೆ ಮಾಡುತ್ತಾಳೆ .ಪದ್ಯವೋ ಗದ್ಯವೋ ಎಂಬ ಮಲ್ಟಿಪಲ ಚಾಯಿಸ್ ಗೆ ಪದ್ಯಮ್ ವದ್ಯಮ್ ಗದ್ಯಮ್ ಹೃದ್ಯಮ್ ಎಂದು ಎರಡನೆಯದನ್ನು ಆಯ್ಕೆ ಮಾಡುವಳು .ಹಾಗೆ ಹುಟ್ಟಿತು ಮುದ್ದಣನ ರಾಮಾಶ್ವ ಮೇಧ ಕತೆ .ಮನೋರೋರಮೆಯಲ್ಲಿ ಸದಭಿರುಚಿ ಮನೋ ವ್ಯಾಪಾರದ ನಿರ್ವಾತ  ಮುದ್ದಣನ ಕಲ್ಪನಾ ಒತ್ತಡ ಕೃತಿ ರೂಪದಲ್ಲಿ ಹೀರಿಕೊಳ್ಳುತ್ತದೆ     
                          ಅದುನಿಕ ಮುದ್ದಣನ ವ್ಯಥೆ .
                                               ವರ್ಷಾಕಾಲದೊಲ್  ಒರು ದಿವಸಂ ಬೈಗುಂ  ಬೋಲ್ಥಿನೋಲ್  ಎಂದಿನಂತೆ  ಬಸವಳಿದು
ಮನೆಗೆ  ಬರೆ  ಬಾಗಿಲು ಮುಚ್ಚಿತ್ತು .ಹಿಂದಿನಂತೆ ನಗುಮೊಗದ ಮನದನ್ನೆಯ ಸ್ವಾಗತ ಬಾಗಿಲಲ್ಲಿ
ಕಾಣದು .ತಾನೇ  ಮನೆಯ ಮಾಡಿನ ಸೋನೆಯ ನೀರಲ್ಲಿ ಕಾಲು ಮೊಗ ತೊಳೆದು " ಮನೋರಮೆ
ಮನೋರಮೇ "ಎಂದು ಯಕ್ಷಗಾನದ  ರಕ್ಕಸ ದನಿಯಲ್ಲಿ  ಕೂಗೆ  ಒಳಗಿಂದಲೇ  " ಬಾಗಿಲು ತೆರೆದಿದೆ
ದೂಡಿ ಬನ್ನಿರಿ " ಎಂಬ ಉತ್ತರ ಬಂದಿತು .ತಾನೇ ಬಾಗಿಲು ತೆರದು  ಒಳ ಪೊಗಲು  ಮಡದಿ
ಶು!  ಸ್ವಲ್ಪ ಮೌನವಾಗಿರಿ  ಆಮ್  ಟಿ ವಿ ಯಲ್ಲಿ"  ಸೊಸೆ ತಾಟಕಿ" ಧಾರವಾಹಿ  ರೋಚಕ ಘಟ್ಟ
ನೋಡುತ್ತಿರ್ಪೆ .ಒಲೆಯ  ಮೇಲೆ ಪಾಲ್ ಇರ್ಪುದು  ಬೇಕಾದಂತೆ  ಚಹವೋ ಕಾಫಿಯೋ  ಮಾಡಿ
ಕುಡಿಯುವುದು ."


      ರಸಿಕ ಕವಿ ಮುದ್ದಣ  ತಾನು  ಪತ್ನಿಯ  ಏಕತಾನತೆ  ದೂರ ಮಾಡಲು ರಾಮಾಶ್ವಮೇಧ
ವಿಕ್ರಮಾದಿತ್ಯ ವಿಜಯ  ,ಕೃಷ್ನಾರ್ಜುನಕಾಳಗ  ಯಾವುದಂ  ಪೇಳಲಿ  ಎಂದು ಹಿಂದಿನಂತೆ
ಯೋಚನನಾಕ್ರಾಂತನಾಗಿರ್ಪನ್ .ಧಾರವಾಹಿ  ಬೇಗ  ಮುಗಿವದೇ?ಜಾಹಿರಾತಿನೋಲ್ 
ಧಾರವಾಹಿಯೋ  ಧಾರವಾಹಿಯೋಲ್  ಜಾಹಿರಾತೋ  ಎಂಬಂತೆ  ಘಳಿಗೆ ಘಳಿಗೆಗಲ್  ಜಾರಿ
ಕೊನೆಗೊಮ್ಮೆ  ಮುಗಿಯೆ  ನಿಸುಡೊಯ್ದು ಮನೋರಮೆ  ಎಂತಹ  ಮಳೆ ಎಂದಳು .


     ಒಡನೆ  ಮುದ್ದಣ ನು ಯಾವುದಾದರೂ ಕತೆಯಂ  ಪೇಳಲೇ ಎಂದು  ತನ್ನ  ಮನದಲ್ಲಿ
ಇರುವ   ಕತೆಗಳ  ಪಟ್ಟಿ ಒಪ್ಪಿಸೆ   ಆಕೆ  " ಇಸ್ಸಿ  ಇದೆಂತ  ಪಳೆಯ  ಕತೆ  ನಿಮಗೆ  ವರ್ತಮಾನ  ಕಾಲದ
ನಟ ನಟಿಯರ  ಪ್ರೇಮ ಕತೆಯೋ  ,ಇಂದಿನ sಶಾಲಾ ಮಕ್ಕಳ  ಸಾಹಸ  ಕತೆಯೋ ನಿಮಗೆ   ಅರಿಯದು
ನೀವು ಸುಮ್ಮನಿರಿ   ಅಂ   ಟಿ ವಿ ಯೋಲ್  ಚಲಚಿತ್ರ ವೇನಾದರೂ ಇರ್ಪುದೋ  ನೋಲ್ಪೆ "


ಎಂದು   ಚಾನೆಲ್ ಚರ್ವಣ  ಕಾರ್ಯದಲ್ಲ್ಲಿ  ಪ್ರವೃತ್ತ ಳಾದಳ್.",ನಿನಗೆ ಬೇಕಾದರೆ ಸರಳ ಗದ್ಯದಲ್ ಪೇಳುವೆನು ಎಂದು ಮುದ್ದಣನು ಮರು ಪೇಳಲು ಪದ್ಯಮ್ ಗದ್ಯಮ್ ದೃಶ್ಯಮ್ ನೃತ್ಯಮ್ ಇಲ್ಲಾ ಟಿ ವಿ ಮೊಬೈಲ್ ನಲ್ಲಿ ಇರ್ಕೆ ,ನೀವು ಸುಮ್ಮನಿರಿ ಸದ್ಯಮ್ . ಮುದ್ದಣನು ಇಂಗು ತಿಂದ ಮಂಗನಂತೆ (ನಿಜವಾಗಿಯೂ ಇಂಗು ತಿಂದ ಮಂಗನನ್ನು ಯಾರಾದರೂ ನೋಡಿರುವರೇ ಅಲ್ಲ ಪ್ರಾಸಕ್ಕೆ ಬೇಕಾಗಿ ಆದ ಸೃಷ್ಟಿಯೋ) ಪೆಂಗನಾಗಿ ಕುಳಿತನು .( ಈ ಪೆಂಗ ,ಪಿರ್ಕಿ ,ಎರೆಪ್ಪು ಎಂಬ ಸುಂದರ ಬೈಗಳು ಶಬ್ದಗಳು ನಮ್ಮ ವ್ಯಾವಹಾರಿಕ ನಿಘಂಟುವಿನಿಂದ ಮಾಯವಾಗುತ್ತಿರುದನ್ನು ಭಾಷಾ ಕೋವಿದರು ಗಮನಿಸ ಬೇಕು ).ಅವನ ರಾಮಾಶ್ವ ಮೇಧ ಕುದುರೆ ಏರಲೆ ಇಲ್ಲ

ಭಾನುವಾರ, ಸೆಪ್ಟೆಂಬರ್ 29, 2019

ಮಾತು ಕತೆ

Image result for brain speech area
ಮಾತು ಎರಡು ಅಂಶ ಗಳನ್ನು ಹೊಂದಿರುತ್ತದೆ .ಒಂದು ಶ್ರವಣ  ಮತ್ತು  ವಾಚ್ಯ .ಎಡ  ಮೆದುಳಿನ ಶ್ರವಣ ವಿಭಾಗ ಮಾತು ಗ್ರಹಿಸುತ್ತದೆ .ಮತ್ತು ಅಲ್ಲಿಂದ  ವಾಚ್ಯ (ಮೋಟಾರ್ ) ವಿಭಾಗಕ್ಕೆ ಸಂದೇಶ ರವಾನೆಯಾಗುವುದು . ವಾಚ್ಯ ಮಾತು ವಿಭಾಗದಿಂದ  ಧ್ವನಿಪೆಟ್ಟಿಗೆ ಗೆ  ಸಂದೇಶ

ರವಾನೆ ಯಾಗುವುದು . ಅಲ್ಲಿ ಧ್ವನಿಪೆಟ್ಟಿಗೆಯ ಮಾಂಸ ಖಂಡ ಗಳು  ಅವಶ್ಯಕ್ಕೆ ಅನುಗುಣವಾಗಿ  ಸಂಕುಚಸಿ ವಿಕಸಿಸಿ  ಉದ್ದೇಶಿಸಿದ ಸ್ವರ ಹೊರಡುವುದು . ಮಾತು 

ಉತ್ಪಾದನೆಯಲ್ಲಿ ನಾಲಿಗೆಯ ಪಾತ್ರ ಕಿರಿದು .ಆದುದರಿಂದ ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ ಎನ್ನುವುದು ಪೂರ್ಣ ಸರಿಯಲ್ಲ .ಆಚಾರವಿಲ್ಲದ  ಮನವೇ

ನಿನ್ನ ನೀಚ ಬುದ್ದಿಯ ಬಿಡು ಎಂದೋ ,ಆಚಾರವಿಲ್ಲದ ಧ್ವನಿಪೆಟ್ಟಿಗೆ ಎನ್ನಿವುದೋ ಸಮಂಜಸ .

ಮೆದುಳಿನ ರಕ್ತ ಸಂಚಾರ  ಧಿಡೀರನೆ ನಿಂತು  ಆಘಾತ ಅಥವಾ ಸ್ಟ್ರೋಕ್ ಸಂಭವಿಸುವುದು .ಇದರಲ್ಲಿ  ಮಾತಿನ  ಶ್ರವಣ ಮತ್ತು  ವಾಚ್ಯ ಎರಡೂ  ಕೇಂದ್ರಗಳ ಮೇಲೆ ಪರಿಣಾಮ

ಉಂಟಾದರೆ ಒಟ್ಟು ಮಾತು ಬಿದ್ದು ಹೋಗುವುದು . ಬರಿಯ ಶ್ರವಣ ಕೇಂದ್ರ ಕಾರ್ಯಹೀನ ವಾದರೆ ಅರ್ಥವಿಲ್ಲದ ಶಬ್ದಗಳು  ಹೊರಡುವವು . ವಾಚ್ಯ ಶಕ್ತಿ ಹೋದರೆ ಕೇಳಿದ್ದು ಅರ್ಥ

ವಾದರೂ ಮಾತು ಹೊರಡದು . ಮಾತಿನ ವಾಚ್ಯ ಕೇಂದ್ರದ  ಸಮೀಪ ಬಲಬದಿಯ  ಕೈ ಕಾಲು ಚಲನೆಯನ್ನು ನಿಯಂತ್ರಿಸುವ ಭಾಗ ಮೆದುಳಿನಲ್ಲಿ ಇದೆ. ಆದುದರಿಂದ

ಬಲ ಬದಿ ಪಾರ್ಶ್ವವಾಯು ಆದಾಗ ಕೆಲವೊಮ್ಮೆ ಮಾತೂ ಬೀಳುವುದು 

 ಶ್ರವಣ  ಕೇಂದ್ರಕ್ಕೆ  ವರ್ನಿಕೆ ಏರಿಯಾ  ಎಂದೂ  ವಾಚ್ಯ ಕೇಂದ್ರಕ್ಕೆ  ಬ್ರೋಕಾ ಏರಿಯಾ ಎಂದೂ ಹೆಸರಿದೆ .ಮೇಲಿನ ಚಿತ್ರದಲ್ಲಿ  ಎದ ಮೆದುಳಿನ ಈ ಭಾಗಗಳನ್ನು ಕಾಣಬಹುದು

ಶುಕ್ರವಾರ, ಸೆಪ್ಟೆಂಬರ್ 27, 2019

ಮಂಜು ಮತ್ತು ಟೊಪ್ಪಿ

ಚಳಿಗಾಲ ಆರಂಭವಾಗಿದೆ . ಮುಂಜಾನೆ ಮಂಜು ದಟ್ಟೈಸಿ  ಇರುತ್ತದೆ . ಹವೆಯ

ಉಷ್ಣತೆ  ಕಡಿಮೆಯಾದಾಗ  ವಾತಾವರಣದ ನೀರಾವಿ  ಸಾಂದ್ರಿಕೃತ ಗೊಂಡು ಉಂಟಾಗುವುದೇ

ಮಂಜು .ಮೇಲಿನಿಂದ ಭಾರಗೊಂಡು ಕೆಳಗೆ ಬರುವ ಮಂಜು ಹನಿಗಳು ತಮ್ಮೊಡನೆ  ವಾತಾವರಣದ

ಧೂಳು ಮತ್ತು ಇತರ ತೇಲಾಡುವಕಲ್ಮಶ ಗಳನ್ನೂ  ಸೇರಿಸಿ ಕೊಂಡಿರುತ್ತವೆ .ಜನಮೇಜಯನ

ಸರ್ಪಯಜ್ಞ ದಲ್ಲಿ  ತಕ್ಷಕನೊಡನೆ ಇಂದ್ರ ಕೆಳಗೆ ಬಂದಂತೆ .

   ಈ ಮಂಜಿನ ಹನಿಗಳಲ್ಲಿ  ಇರುವ ಕಲ್ಮಶಗಳು  ಕೆಮ್ಮು ದಮ್ಮು ಉಂಟು ಮಾಡಬಹುದು .ಇದರಿಂದ

ಪಾರಾಗಲು ಜನರು ತಲೆಗೆ ಹ್ಯಾಟ್ ಅಥವಾ ಟೊಪ್ಪಿಗೆ  ಧರಿಸಿ ನಡೆಯುವರು .ಆದರೆ ಉಸಿರಿನ

ಮೂಲಕ  ಒಳ ಸೇರುವ  ರೋಗ ಕಾರಕ ಗಳನ್ನ  ಇದರಿಂದ ತಡೆಗಟ್ಟಲು ಆಗದು . ಮುಖಕ್ಕೆ  ಮಾಸ್ಕ

ಧರಿಸಿ  ಹೊರ ಹೋಗುವುದು  ಉತ್ತಮ .

    ಉಸಿರ ಮೂಲಕ   ಶರೀರದ ಒಳ ಹೋಗು ವುದ  ತಲೆಯ ಮೇಲಿನ ಟೊಪ್ಪಿಗೆ ತಡೆಯದು

ಅಕ್ಕಿ ಪುರಾಣ

ನಮ್ಮ ಭಾಗದಲ್ಲಿ ಊಟಕ್ಕೆ ಕುಚ್ಚಲು ಅಕ್ಕಿ ಬಳಸುವರು .ಮದುವೆ ಸಮಾರಂಭಗಳಲ್ಲಿ  ಬಿಳಿ ಅಕ್ಕಿ

ಅಥವಾ ಬೆಳ್ತಿಗೆ ಅಕ್ಕಿ ಉಪಯೋಗಿಸುವ ವಾಡಿಕೆ .ಆರೋಗ್ಯಕ್ಕೆ ಕುಚ್ಚಲು ಅಥವಾ ಕುಸುಬುಲು ಅಕ್ಕಿ

ಉತ್ತಮ .ಇದು ಬೇಯಲು ಹೆಚ್ಚು ಸಮಯ ತೆಗೆದು ಕೊಳ್ಳುವುದು .ಇದು ವರ್ಣ ಭೇದ ನೀತಿಯೋ ಶಾಸ್ತ್ರ ಬದ್ದವೋ ಅಲ್ಲ ,ಅನುಕೂಲ ಶಾಸ್ತ್ರ
                        ಬಹಳ ಮಂದಿ ಸಮಾರಂಭಗಳಲ್ಲಿ ಅಥವ  ದೇವಸ್ಥಾನದಲ್ಲಿ  ಊಟ ಮಾಡಿದ ಮೇಲೆ

ನೀರಡಿಕೆ ಜಾಸ್ತಿ ,ಹೊಟ್ಟೆ ಉರಿ ಆರಂಭವಾಗಿದೆ .ಇದಕ್ಕೆ ಬೆಳ್ತಿಗೆ ಅಕ್ಕಿ ಊಟ ಕಾರಣ ಎಂದು

ಆರೋಪಿಸುವರು .ಇದು ಸರಿ ಎಂದು ಕಾಣುವುದಿಲ್ಲ .ಮದುವೆ ಮುಂಜಿ ಔತಣ ಊಟದಲ್ಲಿ ಹೆಚ್ಚು

ವ್ಯಂಜನ ಗಳು ಇರುತ್ತವೆ .ದಿನ ನಿತ್ಯ ಮನೆ ಊಟಕ್ಕೆ ಒಂದು ಪಲ್ಯ ,ಒಂದು ಸಾಂಭಾರ್ ಇದ್ದರೆ

ಔತಣ ಊಟಕ್ಕೆಹಲವು ಪಲ್ಯ ,ಸಾರು ,ಸಾಂಭಾರ್ ಇತ್ಯಾದಿ ಇರುತ್ತವೆ .ಸಹಜವಾಗಿ ಹೆಚ್ಚುಉಪ್ಪು

ಮತ್ತು  ಖಾರ ಹೊಟ್ಟೆ ಸೇರುತ್ತದೆ .ಇದರಿಂದ  ಹೊಟ್ಟೆ ಉರಿ ಮತ್ತು  ನೀರಡಿಕೆ ಉಂಟಾಗುವುದು .

ಜತೆಗೆ ಪಾಯಸ ಸಿಹಿ ತಿಂಡಿ ಗಳ ಸಕ್ಕರೆ ಯೂ ರಕ್ತಸೇರುತ್ತದೆ .ಉಪ್ಪು ಮತ್ತು  ಸಕ್ಕರೆ  ರಕ್ತದ

ಸಾಂದ್ರತೆ ಹೆಚ್ಚಿಸುವವು .ಹೆಚ್ಚಿದ  ಸಾಂದ್ರತೆಯ ರಕ್ತ ಮೆದುಳಿನಲ್ಲಿ  ಬಾಯಾ ರಿಕೆ ಉಂಟುಮಾಡುವ

ಕೇಂದ್ರವನ್ನುಪ್ರಚೋದಿಸಿ ನೀರು ಕುಡಿಯುವಂತೆ ಮಾಡುವುದು .ನೀರಡಿಕೆ ನಿವಾರಣೆಗೆ ನೀರೇ

ಉತ್ತಮ .ಕಬ್ಬಿಣ ಹಾಲು ,ಹಣ್ಣಿನ ರಸ  ರಕ್ತದ ಸಾಂದ್ರತೆ  ಹೆಚ್ಚಿಸುವವು . ಅವುಗಳ ಸೇವನೆ

ಬಾಯಾರಿಕೆ ನೀಗುವುದಕ್ಕೆ ಉತ್ತಮ  ಮಾರ್ಗ ಅಲ್ಲ .

                 ನಾವು  ಔತಣ ಕೂಟಗಳಲ್ಲಿ  ನಿತ್ಯ ದ ಆಹಾರಕ್ಕಿಂತ ಹೆಚ್ಚಿನpಪ್ರಮಾಣದಲ್ಲಿ ತಿನ್ನುವೆವು .

ಇದೇ ಕಾರಣಕ್ಕೆ  ಸಕ್ಕರೆ ಕಾಯಿಲೆ ಇರುವವರಿಗೆ ನಿಯಂತ್ರಣ ತಪ್ಪುವುದು ,ಅವರು ಸಿಹಿ ತಿಂಡಿ

ಪಾಯಸ  ಸೇವಿಸದಿದ್ದರೂ .

ಗುರುವಾರ, ಸೆಪ್ಟೆಂಬರ್ 19, 2019

ಆಹಾರ ಬಗ್ಗೆ ಕೆಲವು ನಂಬಿಕೆಗಳು ಸತ್ಯಾಸತ್ಯತೆ

ಮೊನ್ನೆ ಓರ್ವ ತಾಯಿ ಬಂದಿದ್ದರು .ತನಗೆ ಸಣ್ಣ ಮಗು ಇದೆ ,ಮೊಲೆ ಹಾಲು  ಸಾಕಾಗುವುದಿಲ್ಲ ,

ಅದಕ್ಕೆ ಹೆಚ್ಚು ಹಾಲು ಸೇವಿಸಿ  ಕಫ  ಆಗಿದೆ , ಔಷದಿ ಕೊಡಿ ಎಂದರು.

ನಾನೆಂದೆ " ನೋಡಿ ಅಮ್ಮ ಹಾಲು ಆಗಲು ಹೆಚ್ಚು ಸಸಾರಜನಕ (ಪ್ರೋಟೀನ್) ಇರುವ ದ್ವಿದಳ ಧಾನ್ಯ

ಸೇವಿಸಿ .ರಾಸುಗಳಿಗೆ ನಾವು ಪ್ರೋಟೀನ್ ಯುಕ್ತ ಹಿಂಡಿ ಹಾಕುವೆವು .ಮತ್ತೆ ಹಾಲು ಕುಡಿದು ಕಫ

ಆದದ್ದೂ ಇರಲಿಕ್ಕಿಲ್ಲ .ಗಾಳಿಯಲ್ಲಿ ಬಂದ ಸೋಂಕಿನಿಂದ ಕಫ ಆಗಿರ ಬೇಕು ."

ಬಹಳ ಮಂದಿ ಕಫ ಬಿಳಿ ಇದೆ .ಅದ್ದರಿಂದ  ಹಾಲು ಕುಡಿದರೆ ಜಾಸ್ತಿ ಆಗುವುದು ಎಂದು ಭಾವಿಸುತ್ತಾರೆ .
           
           ಹಲವರು  ಡಾಕ್ಟರ್ ನಿನ್ನೆ  ಮದುವೆಯಲ್ಲಿ  ಕೋಲ್ಡ್ ಕುಡಿದು ಶೀತ ಆಗಿದೆ ,ಕೆಮ್ಮು ಆಗಿದೆ

ಎನ್ನುವರು .ಸಮಾರಂಭಕ್ಕೆ ಬಂದ ವರಲ್ಲಿ  ಶೀತ ಆದವರು ಇರುವರು .ಅವರ ಉಸಿರಲ್ಲಿ  ವೈರಸ್

ಇರಬಹುದು ,ಅದರಿಂದ  ನಮಗೆ ಹರಡುವ ಸಾಧ್ಯತೆ ಜಾಸ್ತಿ. ತಿನ್ನುವ ಅಥವಾ ಕುಡಿಯುವ 

ಆಹಾರದಿಂದ  ಹೊಟ್ಟೆ ನೋವು ಭೇದಿ ಬರಬಹುದು .ಅಮೇರಿಕಾ ದ  ಸೋಂಕು ನಿವಾರಕ ಕೇಂದ್ರ

(CDC) ಸಲಹೆ ಪ್ರಕಾರ  ಗಂಟಲು ನೋವು ಕಿರಿ ಕಿರಿ ಗೆ  ಐಸ್ ತುಂಡು ಚೀಪ ಬಹುದು .

                       ಇನ್ನು ಕೆಲವರು  ಕಾಯಿಲೆ ಬಂದಾಗ  ಎಳನೀರು ಬಿಸಿ ಮಾಡಿ ಕುಡಿಯುವರು .ಇದು

ಅನವಶ್ಯಕ .ಅಲ್ಲದೆ ಅದರಲ್ಲ್ಲಿ ಏನಾದರೂ ಪೌಷ್ಟಿಕ ಅಂಶ ಇದ್ದರೆ ನಾಶವಾಗುವುದು . ಏಳ

ನೀರಿನಲ್ಲಿ  ನಾವು ತಿಳಿದು ಕೊಂಡಂತೆ ಭಾರೀ ಪೌಷ್ಟಿಕ ದಾಯಕ ಅಂಶಗಳು ಇಲ್ಲ .ಅದು ಶುದ್ಧ

ದ್ರವಾಹಾರ .ಅದೇ ರೀತಿ ಶೀತ ಆಗಿದೆ ಎಂದು ಮಜ್ಜಿಗೆ ಬಿಸಿ ಮಾಡಿ ಉಪಯೋಗಿಸುವರು  ಇದ್ದಾರೆ

.ಇದೂ ಸರಿಯಲ್ಲ .

                       ಬಹಳ ಮಂದಿ  ನಾನು  ಅನ್ನಾನೆ ಊಟ ಮಾಡುವುದು , ರಾಗಿ ಮುದ್ದೇನೆ ತಿನ್ನುವುದು

ಅದರಿಂದ ಆರೋಗ್ಯವಾಗಿದ್ದೇನೆ ಎನ್ನುವರು .ಆಹಾರ ಯಾವಾಗಲು ಸಮ ತೂಕ ಆಗಿರಬೇಕು .

ಅದರಲ್ಲಿ ಏಕದಳ ,ಮತ್ತು ದ್ವಿದಳ ಧಾನ್ಯಗಳು , ಹಣ್ಣು ,ತರಕಾರಿ ಅವಶ್ಯ .ಬರೀ ಅಕ್ಕಿ ಅಥವಾ ರಾಗಿ ,

ಗೋಧಿ  ತಿನ್ದಿಗಳಿ೦ತ  ಇಡ್ಲಿ ಉದ್ದಿನ ದೋಸೆ ಹೆಚ್ಚು ಪೌಷ್ಟಿಕ . ಕಷ್ಟ ಪಟ್ಟು ಬ್ರೆಡ್ ತಿನ್ನುವುದಕ್ಕಿಂತ

ರೋಗಿಗಳು ಮತ್ತು ಇತರರು ಇಡ್ಲಿ ತಿನ್ನುವುದು ಉತ್ತಮ .

                                     ಇನ್ನು  ಬಾಣಂತಿ ಯರು ಸಮತೂಕದ ಆಹಾರ ತಿನ್ನುವುದು ಹೆಚ್ಚು ಅವಶ್ಯಕ

ಅವರಿಗೆ ಕೇವಲ ಹಾಲು ತುಪ್ಪ ತಿನಿಸುವರು .ಇದರಿಂದ ತೂಕ ಹೆಚ್ಚುವುದು .ದ್ವಿದಳ ಧಾನ್ಯ

ಮೀನು ,ಮಾಂಸ ಹಣ್ಣುತರಕಾರಿ ಉತ್ತಮ .

                      ಹಣ್ಣು ತಿಂದರೆ ಕಫ ಆಗದು .ಕಫ ಇದ್ದದ್ದು ಹೆಚ್ಚು ಆಗುವುದಿಲ್ಲ .


ಡೆಂಗ್ಯು ಜ್ವರ ಬಗ್ಗೆ ಇನ್ನಷ್ಟು

ಈ ಕಾಯಿಲೆ ಬಗ್ಗೆ ನನ್ನ ಹಿಂದಿನ ಪೋಸ್ಟ್ ಗಳಲ್ಲಿಬರೆದಿದ್ದೆ . ಈಗ ಡೆಂಗ್ಯು ಸೀಸನ್ ನಮ್ಮ ಊರಲ್ಲಿ

(ದಕ್ಷಿಣ ಕನ್ನಡ )ದಲ್ಲಿ  ಕಡಿಮೆ ಆಗುತ್ತಾ ಬಂದಿದೆ .ಈ ವರುಷ  ಮಂಗಳೂರು ನಗರ ಪ್ರವೇಶಿಸಿ

ತುಂಬಾ ಆತಂಕ  ಉಂಟು ಮಾಡಿದೆ .ಇದು ವರೆಗೆ  ಅಲ್ಲಿ ಮಲೇರಿಯ ಜ್ವರದ ಕಾಟ ಮಾತ್ರ

ಇತ್ತು.ಬೆಂಗಳೂರು ಮಂಗಳೂರು ನಂತಹ ನಗರಗಳಿಗೆ ಇಂತಹ ಕಾಯಿಲೆಗಳು ಬಂದರೆ  endemic

ಎಂದರೆ  ಸರ್ವ ಋತು ವಿನಲ್ಲಿಯೂ ಕಾಡುವ  ಸಾಧ್ಯತೆ ಇದೆ .ಹಳ್ಳಿ ಗಳಲ್ಲಿ ಕೆಲವು  ತಿಂಗಳು ಮಾತ್ರ

ಇದರ ಹಾವಳಿ  ಇರುತ್ತದೆ .

                ವರುಷ ವರುಷ ಕಾಯಿಲೆ ಸೀಸನ್ ನಲ್ಲಿ ದೊಡ್ಡ ಸುದ್ದಿಆಗುತ್ತದೆ .ಎಲ್ಲರೂ ಸೊಳ್ಳೆ ಮತ್ತು

 ಅರೋಗ್ಯ ಇಲಾಖೆಯನ್ನುಬೈಯುತ್ತಾರೆ .ಆ ಮೇಲೆ ಮರೆಯುತ್ತ್ತಾರೆ . ಪುನರಪಿ ಸ್ಮರಣಂ  ಪುನರಪಿ

ಶಪನಂ . ನಮ್ಮ  ಹಳ್ಳಿಗಳಲ್ಲಿ  ಸೊಳ್ಳೆ ನಿಯಂತ್ರಣ ಕಷ್ಟ .ಮನೆಗಳು ದೂರ ದೂರ ಇರುತ್ತವೆ

.ಮನೆಯ ಎದುರು ತೋಟ ಗದ್ದೆ.ಅಲ್ಲಿ ಮಳೆಗಾಲದಲ್ಲಿ ನೀರು ನಿಲ್ಲದಂತೆ ಮಾಡುವುದು ಅಸಾಧ್ಯ .

ಅರೋಗ್ಯ ಇಲಾಖೆ ಯವರು ಏನು ಮಾಡಿಯಾರು ?ಜನ ಬೈಯುತ್ತಾರೆ ಎಂದು ಫಾಗ್ಗಿಂಗ್ ಮಾಡಿದರೆ

ಅದರ ಪರಿಣಾಮ ಒಂದೆರಡು ದಿನ ಇದ್ದೀತು.ಆದರೆ ನಗರ ಗಳಲ್ಲಿ ನೀರು ನಿಲ್ಲದಂತೆ ಮಾಡುವುದು

ಅಸಾಧ್ಯ ಅಲ್ಲ .ಆದರೆ ಎಲ್ಲರೂ ತಮ್ಮ ಮನೆಗೆ ರೋಗbಬಂದಾಗ ಮಾತ್ರ ಎಚ್ಚೆತ್ತು ಕೊಳ್ಳುತ್ತಾರೆ .


                     ಡೆಂಗ್ಯು ಕಾಯಿಲೆ ಗೆ ಔಷಧಿ ಇಲ್ಲ . ತನ್ನಿಂದ ತಾನೇ ಅದು ವಾಸಿಯಾಗ ಬೇಕು .ಜ್ರರ

ನೋವಿಗೆ  ಪ್ಯಾರಸಿಟಮಾಲ್  ಮಾತ್ರೆ  ಅಥವಾ ಇಂಜೆಕ್ಷನ್  ಕೊಡುವರು .

                          ಈ ಕಾಯಿಲೆಯಲ್ಲಿ ಪ್ಲೇಟ್ ಲೆಟ್ ಎಂಬ ರಕ್ತ ಕಣಗಳು ಕಮ್ಮಿ ಯಾಗುತ್ತವೆ .ಆದರೆ

ಇದಕ್ಕೂ ರೋಗದ  ತೀವ್ರತೆಗೂ ನೇರ ಸಂಬಂಧ ಇದ್ದ ಹಾಗೆ ಇಲ್ಲ .ಕಮ್ಮಿಯಾದ  ಸಂಖ್ಯೆ ತಾನೇ

ಸರಿಯಾಗುವುದು .ಇದರ ಸಂಖ್ಯೆ  ೧೦೦೦೦ ಕ್ಕಿಂತ ಕಮ್ಮಿ ಯಾದರೆ ಅಥವಾ ರಕ್ತ ಸ್ರಾವ ಇದ್ದರೆ

ಪ್ಲೇಟ್ ಲೆಟ್  ಕೊಡುವರು .


                    ಹಾಗಾದರೆ ಈ ಕಾಯಿಲೆ  ತೀವ್ರ ತರ ರೂಪ  ಪಡೆಯುವುದು  ಹೇಗೆ ? ಕೆಲವೊಂದು

ರೋಗಿಗಳಲ್ಲಿ ಹಠಾತ್ ರಕ್ತದ ಒತ್ತಡ ಕಮ್ಮಿಆಗುವುದು .ಜ್ವರ ಬಿಟ್ಟ ಮೇಲೆಯೂ ಇದು ಅಗ ಬಹುದು

ಇದನ್ನು  ಡೆಂಗ್ಯು ಶಾಕ್ ಎನ್ನುವರು . ಅಪರೂಪಕ್ಕೆ ಕೆಲವರಲ್ಲಿ  ಕಾಯಿಲೆ ಮೆದುಳಿಗೆ ಬಂದು

ಪ್ರಾಣಾಪಾಯ  ಉಂಟಾಗುವುದು .







ಲೈಬ್ರರಿಯನ್ನೂ ಹೋಟೆಲ್ ಮಾಣಿಯೂ

ಚಿಕ್ಕಂದಿನಲ್ಲಿ  ನನಗೆ ಎರಡು  ಉದ್ಯೋಗಿಗಳ ಬಗ್ಗೆ ಅಸೂಯೆ .ಒಂದು ಹೋಟೆಲ್ ಮಾಣಿ

.ಹೋಟೆಲ್ನಲ್ಲಿ  ಗಮಗಮಿಸುವ ನೀರುಳ್ಳಿ ಬಜೆ ಗೋಳಿಬಜೆ ನಮಗೆ ಗಗನ ಕುಸುಮ .ಏಕೆಂದರೆ

ಕೈಯಲ್ಲಿ ಕಾಸಿಲ್ಲ ,ಇದ್ದರೂ ನಮ್ಮ ಅರ್ಥಿಕ ಸ್ಥಿತಿಗೆ ಒಂದು ಫುಲ್ ಪ್ಲೇಟ್ ಸಿಗಲಾರದು ,ಅರ್ಧ

ಪ್ಲೇಟ್ ಅಂತ  ಕೊಡುವುದಿಲ್ಲ. ಹೋಟೆಲ್ ಮಾಣಿ ಗಾದರೋ  ಉಳಿದ ನೀರುಳ್ಳಿ ಮತ್ತು ಗೋಳಿಬಜೆ

ತಿನ್ನುವ ಭಾಗ್ಯಇದೆಯಲ್ಲ .ದೊಡ್ಡವನಾದಾಗ ಹೋಟೆಲ್ ಕೆಲಸಕ್ಕೆ ಸೇರಬೇಕು .


      ಇನ್ನೊಂದು  ನಮ್ಮ ಪಂಚಾಯತ್ ಲೈಬ್ರರಿ ನೋಡಿಕೊಳ್ಳುತ್ತಿದ್ದ ಸೆಕ್ರೆಟರಿ .ಆಗಿನ್ನೂ

ಲೈಬ್ರರಿಯನ್  ಹುದ್ದೆ ಇರಲಿಲ್ಲ .ವಾಚನಾಲಯದಲ್ಲಿ ಒಳ್ಳೆಯ ಕತೆ ಕಾದಂಬರಿ ಪುಸ್ತಕಗಳು

ಇದ್ದವು .ಕಾರಂತ,ಕುವೆಂಪು ,ರಾವ್ ಬಹಾದ್ದೂರ್ ,ಕಟ್ಟಿಮನಿ  ಅವರ ಕೃತಿಗಳಲ್ಲದೆ  ನರಸಿಂಹಯ್ಯ

ಅವರ  ರೋಚಕ ಪತ್ತೇದಾರಿ ಕಾದಂಬರಿಗಳನ್ನು  ಮೊದಲು ಓದಿದ್ದೇ ಅಲ್ಲಿ .ಆದರೆ ಒಮ್ಮೆಗೆ  ಎರಡೇ

ಪುಸ್ತಕ ಕೊಡುತ್ತಿದ್ದರು .ಅದು ಎರಡು ಮೂರು ದಿನದಲ್ಲಿ ಮುಗಿದು ಮುಂದಿನ ಪುಸ್ತಕಕ್ಕೆ ಒಂದು

ವಾರ  ಕಾಯಬೇಕಿತ್ತು .ಏಕೆಂದರೆ hಹಲವು ಜವಾಬ್ದಾರಿ ಹೊತ್ತ  ಸೆಕ್ರೆಟರಿ ಪುಸ್ತಕ ವಿತರಣೆಗೆ ಒಂದು

ದಿನ ನಿಗದಿ ಮಾಡಿದ್ದರು . ಹಲವು ಬಾರಿ ಆ ದಿನವೂ ಅವರು ರಜೆ ಮೇಲೆ ಇದ್ದರೆ ನಮ್ಮ ನಿರಾಸೆ

ಹೇಳತೀರದು .ಆದುದರಿಂದ  ಇಂತಹ ಲೈಬ್ರರಿ ಯ ಮೇಲ್ವಿಚಾರಕ ಕೆಲಸಕ್ಕೆ ಸೇರಬೇಕು ,ಅಂದರೆ

ಎಷ್ಟು ಪುಸ್ತಕ ಬೇಕಾದರೂ ಆದ ಬಹುದು ಎಂಬ ಯೋಚನೆ ಆಗಾಗ ಬರುತ್ತಿತ್ತು.

                      ಈಗ ನಮ್ಮಅರ್ಥಿಕ  ಸ್ಥಿತಿ ಸುದಾರಿಸಿದೆ. ನೀರುಳ್ಳಿ ಬಜೆ ಗೋಳಿಬಜೆ ಆಸೆ ಕಮ್ಮಿ ಯಾಗಿದೆ .

ಪುಸ್ತಕ ಓದುವ ಅಸೆ ಹಾಗೇ ಇದೆ.  ಬೇಕಾದ ಹೊಸ ಕೃತಿಗಳು ಆನ್ಲೈನ್ನಲ್ಲಿ ಸಿಗುತ್ತವೆ . ಹಳೆಯ ಕೆಲವು

ಹೊತ್ತಿಗೆಗಳು  ಅಂಗಡಿಯಲ್ಲ್ಲಿ ಯಲ್ಲಿ  ಸಿಗುತ್ತಿಲ್ಲ ,ಲೈಬ್ರರಿಗಳಲ್ಲೂ .