ಬೆಂಬಲಿಗರು

ಸೋಮವಾರ, ಜುಲೈ 27, 2015

ರೈತರ ಆತ್ಮಹತ್ಯೆ

                  


ಪ್ರಾಣೇಶಾಚಾರ್ಯರು ಒಂದು ಜೋಕ್ ಹೇಳುತ್ತಿದ್ದರು .ಎಸ್ ಎಸ್ ಎಲ್ ಸಿ  ಪರೀಕ್ಷೆ 

ಫಲಿತಾಂಶ ಸಮಯದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಆತ್ಮಹತ್ಯೆ 

ಮಾಡುವುದನ್ನು ತಪ್ಪಿಸಲು ಉಣಕಲ್ ಕೆರೆ ಬಳಿ ಕಾವಲಿದ್ದ ಪೊಲೀಸರಿಗೆ ಒಬ್ಬ 

ಹುಡುಗ ಕಾಣಿಸುತ್ತಾನೆ .ಯಾಕೋ ಇಲ್ಲಿ ಬಂದೆ ?."ಪರೀಕ್ಷೇಲಿ ಫೈಲ್ ಸಾರ್ 

,ಆತ್ಮಹತ್ಯೆ ಮಾಡೋಣ ಎಂದು ಬಂದೆ. " ಯಾವ ಪರೀಕ್ಷೆ ? "ಪಿ ಯು ಸಿ ಸಾರ್."

ಪರವಾಗಿಲ್ಲ ಹಾರ್ಕೋ? ನಾವು ಎಸ್ ಎಸ್ ಎಲ್ ಸಿ ಯವರನ್ನು ಕಾಯೋಕೆ 

ಬಂದಿದ್ದೇವೆ "

 ರೈತರ ಆತ್ಮಹತ್ಯೆ ವಿಚಾರಿಸಲು ಹೋದ ಅಧಿಕಾರಿಗಳು ಅವನು ರೈತನೇ ಅಣ್ಣ 

ಅವನ ಹೆಸರಿನಲ್ಲಿ ಪಹಣಿ ಪತ್ರವೇ ಇಲ್ಲ ಎಂದು ಕೊಟ್ಟ ಹೇಳಿಕೆ ನೋಡಿದಾಗ 

ಮೇಲಿನ ಜೋಕ್ ನೆನಪಾಯಿತು .ಕೃಷಿ ಮೂಲವಾಗಿರುವ ನಮ್ಮ ಆರ್ಥಿಕತೆ 

ಯಲ್ಲಿ ಕೃಷಿ ಉತ್ಪನ್ನಗಳಿಗೆ ಬೆಲೆ  ಹಠಾತ್ ಕಮ್ಮಿಯಾದರೆ ಅದರ ಪರಿಣಾಮ 

ಜಮೀನು ಇರುವ ಕೃಷಿಕನಲ್ಲದೆ ಕೃಷಿ ಕಾರ್ಮಿಕ ,ಹಳ್ಳಿಯ ಗುಡಿಗಾರಿಕೆ ,ಸಣ್ಣ 

ವ್ಯಾಪಾರಿಗಳು ಎಲ್ಲರೂ ಸಂಕಷ್ಟ ಕ್ಕೆ ಈಡಾಗುತ್ತಾರೆ .ನಮ್ಮ ಊರಿನಲ್ಲಿ ಅಡಿಕೆಗೆ 

ಬೆಲೆ ಇಳಿದಾಗ ಮದ್ಯದ ಅಂಗಡಿ ಮಾಲೀಕರು ಧರ್ಮಸ್ಥಳಕ್ಕೆ ಹರಿಕೆ ಹಾಕಿ ಬೆಲೆ 

ಏರಲೆಂದು ಮೊರೆಯಿಡುತ್ತಿದರು ಎಂದು ಅಲ್ಲಿನ ಧರ್ಮಾಧಿಕಾರಿ ಒಂದು ಸಭೆಯಲ್ಲಿ 

ಹೇಳಿದ ನೆನಪು .

ರೈತನ ಕಾರ್ಪಣ್ಯ ಗಳಿಗೆ ಸಾಲ ಕೊಟ್ಟ ಬ್ಯಾಂಕ್ ಗಳನ್ನು ದೂಷಿಸುವುದು ಸರಿಯಲ್ಲ 

ಬ್ಯಾಂಕ್ ಗಳು ಇದ್ದ ಕಾರಣ ಅವರು ಇಷ್ಟು ಕಾಲ ಬದುಕುವಂತಾಯಿತು .ರೈತರ 

ಆತ್ಮಾಭಿಮಾನ ಅವರನ್ನು ಆತ್ಮಹತ್ಯೆಗೆ ದೂಡುವುದು.

  ರೈತರಿಗೆ  ಸರ್ಕಾರಿ ಕಛೇರಿಗಳಲ್ಲಿ ಗೌರವ ಸಿಗುವಂತೆ ಆಗ ಬೇಕು .ಅವರನ್ನು 

ಕುರಿಗಳಂತೆ ಕಾಣ ಬಾರದು .ಆಧಾರ್ ಕಾರ್ಡ್ ,ರೇಶನ್ ಕಾರ್ಡ್ ಮತ್ತು ಜಾತಿ 

ಸರ್ಟಿಫಿಕೇಟ್ ಗೆಂದು ಅವರನ್ನು ಅಲೆಸ ಬಾರದು .ಕಛೇರಿಗಳಲ್ಲಿ ಅವರಿಗೆ 

ಗೌರವ ಕೊಟ್ಟು ಮಾತನಾಡಿಸದೆ ಅವರು ತಮ್ಮ ಕಷ್ಟ ಹೇಳಿಕೊಂಡಾರು.ಆತ್ಮಹತ್ಯೆ

ಮಾಡಿದ ಮೇಲೆ ಯಾರನ್ನು ಕೇಳಿ ಏನು ಪ್ರಯೋಜನ ?

ಇದಕ್ಕೆ ಸರಕಾರೀ ಕಚೇರಿಗಳಲ್ಲ್ಲಿ ನೇಮಕ ಮಾಡುವಾಗ  ಲಂಚ ತೆಗೆದು ಕೊಳ್ಳದೆ

ಅರ್ಹರಿಗೆ (ಮೀಸಲಾತಿ ಇರಲಿ ,ಅವರಲ್ಲೂ ಅರ್ಹರಿದ್ದಾರೆ)ಕೆಲಸ ಕೊಡಬೇಕು .

ಅದರಲ್ಲಿ ಅಂಕ ಮಾತ್ರವಲ್ಲದೆ ಸೇವಾ ಮನೋಭಾವ ಇದೆಯೋ ಎಂದು ವೈಜಾನಿಕ 

ವಾಗಿ ನಿರ್ಧರಿಸಿ ನೇಮಕ ಮಾಡ ಬೇಕು .

ಸರಕಾರೀ ಕಛೇರಿಗಳಲ್ಲಿ ಅದೂ ಕೃಷಿ ಇಲಾಖೆಯಲ್ಲಿ  ಸಲಹಾ ಕೊಟಡಿ ಇರಬೇಕು .

ಅಲ್ಲಿ ರೈತರಿಗೆ ಗೌರವ ಕೊಟ್ಟು ಪ್ರೀತಿಯಿಂದ ಮಾತನಾಡಿಸುವವರು ಬೇಕು .ಕೃಷಿ 

ಮಾರುಕಟ್ಟೆಯ ಏರು ಪೇರು ನಿರೀಕ್ಷಣಾ ಮಾಹಿತಿ ಕಾಲ ಕಾಲಕ್ಕೆ ರೈತರಿಗೆ ಸಿಗ 

ಬೇಕು .

ಇದಕ್ಕೆಲ್ಲಾ ಹಣ ಎಲ್ಲಿಂದಾ ಎಂದು ಕೇಳುವಿರಾ .ನಮ್ಮ ಜನ ಪ್ರತಿನಿಧಿಗಳು ತಮಗೆ 

ತಾವೇ ಕೊಡಿಸಿ ಕೊಳ್ಳುವ ಸವಲಿತ್ತಿನ ಒಂದು ಭಾಗ ಸಾಕು .ಐಶರಾಮಿ ಹೋಟೆಲ್ 

ಗಳಲ್ಲಿ ಸಭೆ ನಡೆಸಿ ರೈತರ ತಮ್ಮ ರೈತ ಪ್ರೇಮದ ಬಗ್ಗೆ ಭಾಷಣ ಬಿಗಿಯುವ 

ರಾಜಕೀಯ ನೇತಾರರು ಸ್ವಲ್ಪ ಸರಳತೆ ಅನುಸರಿಸಿ .ಗಾಂಧೀಜಿ ಬಟ್ಟೆ ಹಾಕಿ 

ಕೊಳ್ಳದೆ ಇದ್ದುದು ಹಣ ಇಲ್ಲದ ಕಾರಣ ಅಲ್ಲ .ನಮ್ಮ ದೇಶದ ಕೊನೆಯ ವ್ಯಕ್ತಿಯೂ 

ಸರಿಯಾದ ಉಡುಪು ಕೊಳ್ಳುವ ಶಕ್ತಿ ಬರುವ ವರೆಗೆ ತಾವು ಕನಿಷ್ಠ ವಸನ ರಾಗಿ 

ಇರುವುದು ಎಂಬ ಆತ್ಮಸಾಕ್ಷಿಯ ಮಾತಿನ ಕರೆಯಿಂದ .ನಮ್ಮ ನೇತಾರರು ಇದನ್ನು 

ಗಮನಿಸ ಬೇಕು .ಮಂತ್ರಿಗಳಾಗಿರುವವರು  ಆದಷ್ಟು ಸ್ವಯಂ ಭಾರಿ ಉದ್ದಿಮೆ 

(ಶಿಕ್ಷಣ ಸಂಸ್ಥೆ ಸೇರಿ -ಯಾಕೆಂದರೆ ಈಗ ಅದೂ ಉದ್ದಿಮೆ ತಾನೇ ) ಹೊಂದಿರ 

ಬಾರದು .ಯಾಕೆಂದರೆ ಅವರಿಗೆ ಜನರ ಗೋಳು ಕೇಳುವ ವ್ಯವಧಾನ ಇರದು 

ಅಲ್ಲದೆ ಸ್ವಯಂ ಹಿತಾಸಕ್ತಿಗೂ ,ಸಾರ್ವಜನಿಕ ಹಿತಾಸಕ್ತಿಗೂ ಹೊಂದಿ ಬಾರದು .


(ಚಿತ್ರದ ಮೂಲಕ್ಕೆ ಆಭಾರಿ )

ಭಾನುವಾರ, ಜುಲೈ 26, 2015

ಮೂಕಂ ಕರೋತಿ ವಾಚಾಲಂ


ಮಿತ್ರರೇ ಮೇಲಿನ ಚಿತ್ರ ಐನ್ ಸ್ಟೀನ್ ನಂತರದ ಅತೀ ಶ್ರೇಷ್ಠ ಭೌತ ವಿಜ್ಞಾನಿ 

ಎಂದು ಪರಿಗಣಿಸಲ್ಪಡುವ  ಸ್ಟಿಫಾನ್ ಹಾಕಿಂಗ್ .ಖ್ಯಾತ ಖಗೋಳ ಶಾಸ್ತ್ರಜ್ಞ ಕೂಡ .

ಆದರೆ ಇವರ ಸಾಧನೆ ಅದ್ಭುತ .ಇವರ  ಇಪ್ಪತ್ತೊಂದನೆ ವಯಸ್ಸಿನಲ್ಲಿ ಮೋಟಾರ್ 

ನ್ಯುರೋನ್ ಕಾಯಿಲೆ ಇದೆಯೆಂದು ಪತ್ತೆ ಹಚ್ಚಿದ ವೈದ್ಯರು ಚಿಕಿತ್ಸೆ ಇಲ್ಲದ  ಕಾಯಿಲೆ 

ಆದುದರಿಂದ ಕೆಲವೇ ತಿಂಗಳ ಆಯುಸ್ಸು ಎಂದು ಹೇಳಿದರು .ಅದರ ನಂತರವೇ 

ಪದವಿ ,ಮದುವೆ  ಮತ್ತು ಸಂಶೋಧನೆ .೫೩ ಸಂವತ್ಸರಗಳು ಕಳೆದಿವೆ ,

ಸಾಧನೆಗಳ ಸರ ಮಾಲೆ ಇವರ ಕಿರೀಟಕ್ಕೆ ಸೇರಿವೆ .

 ಈತನ್ಮಧ್ಯೆ  ಇವರ ಕಾಯಿಲೆ  ಏರುತ್ತಲೇ ಹೋಯಿತು ,ಶರೀರದ  ಮಾಂಸ ಖಂಡ 

ಗಳು ಶಿಥಿಲ ವಾಗುತ್ತಾ ಹೋದುವು .ಕೈ ಕಾಲು ಸಂಪೂರ್ಣ ನಿಷ್ಕ್ರಿಯವಾದುವು .

ಉಸಿರಾಟ ಕಷ್ಟವಾಗಿ  ಶ್ವಾಸ ನಾಳದಲ್ಲಿ ರಂಧ್ರ ಮಾಡಬೇಕಾಗಿ ಬಂತು ,ಇದರಿಂದ 

ಸ್ವರ ಬಿದ್ದು ಹೋಯಿತು .ಕೆಲವೊಮ್ಮೆ ಕೃತಕ ಉಸಿರಾಟ  ಯಂತ್ರದ ಮೊರೆ ಹೋಗ 

ಬೇಕಾಯಿತು .ಆದರೂ ಬಿಡಲಿಲ್ಲ .ಕಣ್ಣು ಸಂಜ್ಞೆಯನ್ನೇ ಮಾತಾಗಿಸುವ  ತಂತ್ರಾಂಶ

ವನ್ನು ಬಳಸಿ ಕಂಪ್ಯೂಟರ್ ಮೂಲಕ ಸಂವಹನ .ಬರವಣಿಗೆ  ಪುಸ್ತಕ ಪ್ರಕಾಶನ .

ಸಂಶೋಧನೆ ,ಆಸ್ಟ್ರೇಲಿಯಾ ಹೊರತು ಪಡಿಸಿ ಎಲ್ಲಾ (ಅಂಟಾರ್ಟಿಕಾ ಸೇರಿ ) 

ಖಂಡ ಗಳಲ್ಲಿ ಸಂಚಾರ ,ಭಾಷಣ .(ಇವರು ಸಂಪೂರ್ಣ ಗಾಲಿ ಕುರ್ಚಿ

ಅವಲಂಬಿತ ). ಇವರ ಸಹಾಯಕ್ಕೆ  ಒಬ್ಬರು ದಾದಿ.ಎರಡು ಭಾರಿ ವಿವಾಹ ವಾದ 

ಇವರು ಈಗ ಏಕಾಂಗಿ .
                              

ಇವರ ತಂದೆ  ವೈದ್ಯರಾಗಿ ಭಾರತದಲ್ಲಿ ಕೆಲವು ವರುಷ ಸೇವೆ ಸಲ್ಲಿಸಿದ್ದುದರಿಂದ 

ರಜೆಯಲ್ಲಿ ಇಲ್ಲಿಗೆ ಬಂದ ನೆನಪುಗಳನ್ನು  ತನ್ನ ಜೀವನ ಚರಿತ್ರೆಯಲ್ಲಿ 

ಉಲ್ಲೇಖಿಸಿದ್ದಾರೆ.ಹೆಸರಾಂತ  ಕೇಂಬ್ರಿಜ್  ವಿಶ್ವವಿದ್ಯಾಲಯದಲ್ಲಿ  ೩೦ ವರ್ಷ ಗಣಿತ 

ದ  ಪ್ರಾಧ್ಯಾಪಕರಾಗಿ ಸೇವೆ. ಎ ಬ್ರೀಫ್ ಹಿಸ್ಟರಿ ಆಫ್ ಟೈಮ್ ಇವರ ಪ್ರಸಿದ್ಧ 

ಕೃತಿ .ಖಗೋಳಶಾಸ್ತ್ರದಲ್ಲಿ  ಕಪ್ಪು ರಂಧ್ರ ಗಳ ಬಗ್ಗೆ ಇವರ ಸಂಶೋಧನೆ 

ವಿಜ್ಞಾನ ಲೋಕದಲ್ಲಿ ಸರ್ವ ಮಾನ್ಯ .

ಛಲದಂಕ ಮಲ್ಲ ಎಂದರೆ ಇನ್ನಾರು ?ತಮ್ಮ ಶಾರೀರಿಕ ಕಾಯಿಲೆಗೆ 

ದೃತಿಗೆಡದೆ  ಕಾಲ ಕಾಲಕ್ಕೆ ವಿಜ್ಞಾನದ ಸಹಾಯದಿಂದ  ಊನತೆಯನ್ನು ಮೀರಿ

ಮತ್ತೆ  ವಿಜ್ಞಾನಕ್ಕೆ ಅಮೂಲ್ಯ ಕೊಡುಗೆ ಕೊಡುತ್ತಿದ್ದಾರೆ.



ಬುಧವಾರ, ಜುಲೈ 22, 2015

ಕ್ಷಯ ರೋಗ ಅಕ್ಷಯವೇ?

ಕ್ಷಯ ರೋಗ ದ ಅಸ್ತಿತ್ವ  ಬಹಳ ಹಿಂದಿನಿಂದಲೂ ಇತ್ತು .ರಾಬರ್ಟ್ ಕೊಕ್ ಎಂಬ  

ಜರ್ಮನ್  ಇದನ್ನು ಉಂಟು ಮಾಡುವ ಬ್ಯಾಕ್ಟೀರಿಯಾ ಕಂಡು ಹಿಡಿದನು (೧೮೮೨).

ಈ ಕಾಯಿಲೆಗೆ ಕೋಕ್ಸ್ ಡಿಸೀಸ್ ಎಂದೂ ವೈದ್ಯರು ಕರೆಯುವರು .ಇದೇ ವಿಜ್ಞಾನಿ 

ಆಂಥ್ರಾಕ್ಸ್ ಮತ್ತು ಕಾಲರಾ ರೋಗಾಣುಗಳನ್ನೂ ಪತ್ತೆ ಹಚ್ಚಿರುವರು 



     ಈ ರೋಗಾಣುಗಳು  ವಾಯು ಸ್ನೇಹಿ ಮತ್ತು ನಿಧಾನವಾಗಿ ವ್ರುದ್ದಿಸುವಂತವು.

ಶ್ವಾಸ ಕೋಶ ಇವುಗಳ ಮೊದಲ ಗುರಿ .ರೋಗಿಯ ಕಫವು ಗಾಳಿಯ ಮೂಲಕ 

ರೋಗಾಣು ಪಸರಿಸುವವು .

ಆರಂಭದಲ್ಲಿ ಸಣ್ಣ ಜ್ವರ(ಸಂಧ್ಯಾ ಕಾಲದ ಏರುವಿಕೆ),ರಾತ್ರಿ ಬೆವರುವುದು ,ತೂಕ

ಕಡಿಮೆಯಾಗುವುದು ,ಕೆಮ್ಮು ಇದರ ಲಕ್ಷಣಗಳು

                


ಇನ್ನು ಈ ಕಾಯಿಲೆ  ಮೆದುಳಿನಿಂದ ಕಾಲಿನ ವರೆಗೆ ಯಾವ ಅಂಗವನ್ನೂ 

ಭಾದಿಸ ಬಲ್ಲದು .ಮೆದುಳಿನ ಕ್ಷಯ ,ಎಲುಬಿನ ಕ್ಷಯ ,ಗರ್ಭ ಕೋಶದ ಕ್ಷಯ ,

ಮೂತ್ರಪಿಂಡದ ಕ್ಷಯ ಇತ್ಯಾದಿ .

ಕ್ಷಯ ಉಂಟು ಮಾಡುವ ರೋಗಾಣುವಿಗೆ ಮೈಕೋಬ್ಯಾಕ್ಟೀರಿಯಮ್ 

ಟ್ಯೂಬರ್ಕ್ಯುಲೋಸಿಸ್ ಎನ್ನುವರು .ಇದಕ್ಕೆ ಬಣ್ಣ ಹಾಕಿ ಆಮ್ಲದಿಂದ ತೊಳೆದರೂ 

ಅದು ವಿವರ್ಣವಾಗದು.ಅದಕ್ಕೆ  ಆಸಿಡ್ ಫಾಸ್ಟ್ ಬಾ ಸಿಲ್ಲೈ (A F B)ಎನ್ನುವರು .

ಮೇಲಿನ ಚಿತ್ರದಲ್ಲಿ ಕೆಂಪು ತುಣುಕುಗಳಾಗಿ ಕಾಣುವುದು ಕ್ಷಯದ  ರೋಗಾಣು .

ಕ್ಷಯ ರೋಗಕ್ಕೆ ಒಳ್ಳೆಯ ಔಷಧಗಳಿವೆ .ಉಚಿತವಾಗಿ ಸಿಗುತ್ತವೆ ,ಸರಕಾರದ

ಡಾಟ್ಸ್ (Directly observed treatment short course ) ಜಾಗತಿಕ 

ಅರೋಗ್ಯ ಸಂಸ್ಥೆ ಹಮ್ಮಿಕೊಂಡ  ಮಹತ್ವಾಕಾಂಕ್ಷೆಯ ಕಾರ್ಯಕ್ರಮ.ಇದರ 

ಮೂಲಕ  ಉಚಿತ ಕಫ ಪರೀಕ್ಷೆ ಮತ್ತು  ಮನೆ ಬಾಗಿಲಿಗೆ  ಚಿಕಿತ್ಸೆ 

 ಒದಗಿಸಲಾಗುವುದು .

ಹಿಂದೆ  ಈ ರೋಗಕ್ಕೆ ಚಿಕಿತ್ಸೆ ಇರಲಿಲ್ಲ್ಲ .ಆಗ ಗುಹಾವಾಸ ಚಿಕಿತ್ಸೆ .ಎದೆಯನ್ನು 

ಕೊರೆದು  ಕೃತಕ  ವಾಯು ವಕ್ಷ ಚಿಕಿತ್ಸೆ ಇತ್ಯಾದಿ ಮಾಡುತ್ತಿದ್ದರು .

ಕವಿ ಕೀಟ್ಸ್ ,ಕಮಲಾ ನೆಹರು ,ರೂಸ್ವೆಲ್ಟ್ ಅವರ ಪತ್ನಿ , ನೆಲ್ಸನ್ ಮಂಡೇಲಾ 

ಡೆಸ್ಮಂಡ್ ಟುಟು ,ಅಮಿತಾಭ್ ಬಚನ್ ಇಂತಹ ಮಹಾನುಭಾವರೆಲ್ಲಾ 

ಈ ಕಾಯಿಲೆಯಿಂದ ಬಳಲಿದವರು .

ಏಡ್ಸ್ ರೋಗಿಗಳಲ್ಲಿ  ರೋಗ ನಿರೋಧಕ ಶಕ್ತಿ ಕಮ್ಮಿ ಇರುವುದರಿಂದ ಇದಕ್ಕೆ 

ಸುಲಭವಾಗಿ ತುತ್ತಾಗುವರು .

ಕ್ಷಯ  ಸಂಪೂರ್ಣ ಗುಣ ವಾಗುವ ಕಾಯಿಲೆ .ಇದರ ಬಗ್ಗೆ ತಪ್ಪು ಕಲ್ಪನೆ ಸಲ್ಲ

(ಚಿತ್ರಗಳ ಮೂಲಗಳಿಗೆ ಅಭಾರಿ )

ಬುಧವಾರ, ಜುಲೈ 8, 2015

ನಿಮ್ಮ ಮಕ್ಕಳು ನಿಮ್ಮವಲ್ಲ ಖಲೀಲ್ ಗಿಬ್ರಾನ್

ಲೆಬನೀಸ್ ಸಂಜಾತ ಕವಿ ಖಲೀಲ್ ಗಿಬ್ರಾನ್ ವಿಕಿಪೀಡಿಯ ದ  ಪ್ರಕಾರ 

 ಷೇಕ್ಸ್ಪಿಯರ್ ,ಚೈನೀಸ್ ಕವಿ ಲವೊಜಿ ಬಿಟ್ಟರೆ ಜಗತ್ತಿನ ಮೂರನೆ ಜನಪ್ರಿಯ ಕವಿ .

ಆತ ಮಕ್ಕಳ ಬಗ್ಗೆ ಒಂದು ಕವಿತೆ ಬರೆದಿರುವನು .ಬಹಳ ಅರ್ಥಪೂರ್ಣವಾದುದು .

ಅದರ ಭಾವಾನುವಾದ ಹೀಗಿದೆ .

ನಿಮ್ಮ ಮಕ್ಕಳೆನ್ನುವಿರಲ್ಲ  ಅವು ನಿಮ್ಮವಲ್ಲ 

ಅವು ಜೀವಸೆಲೆಯ ಜೀವಿತದಾಶಯದ ಕುಡಿಗಳು 

ನಿಮ್ಮ ಮೂಲಕ ಬಂದುವು ನಿಮ್ಮಿಂದಲಲ್ಲ

ನಿಮ್ಮೊಡನಿದ್ದರೂ ನಿಮ್ಮವಲ್ಲ .

ನೀವು ಅವರಿಗೆ ನಿಮ್ಮ ಪ್ರೀತಿ ಕೊಡಿರಿ ನಿಮ್ಮ  ಆಲೋಚನೆಗಳನ್ನಲ್ಲ

ಯಾಕೆಂದರೆ  ಅವರಿಗೆ ಇವೆ ಸ್ವಂತ ಆಲೋಚನೆ ಗಳು

ಅವರ ಶರೀರಕ್ಕೆ ನೀವು  ಕೊಡ ಬಲ್ಲಿರಿ ಆಶ್ರಯ ಅವರ ಆತ್ಮಕ್ಕಲ್ಲ 

ಯಾಕೆಂದರೆ ಅವರ ಆತ್ಮಗಳಿಗೆ ನಾಳೆ ಅವರ ಶರೀರವೇ ಮನೆ 

ನಿಮ್ಮ ಕನಸಲ್ಲ್ಲೂ ಅವನ್ನು ನೀವು ದರ್ಶಿಸಲಾರಿರಿ 

ಅವರಂತೆ ನೀವಾಗುವ ಯತ್ನ ಮಾಡಿ ಅಡ್ಡಿಯಿಲ್ಲ 

ನಿಮ್ಮಂತೆ ಅವರಗಾಗ ಬೇಕೆನ್ನದಿರಿ 

ಜೀವನ ಗಾಲಿ ಹಿಂತಿರುಗದು ,ನಿನ್ನೆಯೊಡನೆ ತಂಗದು.

ಮಕ್ಕಳೆಂಬ ಜೀವಂತ ಬಾಣ  ಬಿಡುವ ಬಿಲ್ಲುಗಳು ನೀವು 

ಬಿಲ್ಲುಗಾರ ನಿರ್ಧರಿಪ ಬಾಣದ ಅನಂತ ಮಾರ್ಗ 

ತನ್ನ ಬಾಣ   ದೂರ ವೇಗದಿ ಪೋಗೆ 

ತನ್ನ ಶಕ್ತಿಯಿಂದ ಬಿಲ್ಲು ಬಗ್ಗಿಸುತ .

ಬಾಣ  ಮಾರ್ಗಪಿದ ಕಂಡು ,ಶಕ್ತ ಬಿಲ್ಲನು 

ಕಂಡು ಅವನು ಪಡಲಿ ಹರುಷ 

ಅವನ ಹಸ್ತದಿ ಬಾಗಿಪುದು ನಿನಗೆ  ಸಂತಸ .



ಈ ಕವನ ಪ್ರಸಿದ್ದ ವಾದುದು . ಎಲ್ ಕೆ ಅಡ್ವಾಣಿ  ತಮ್ಮ ಜೀವನ ಚರಿತ್ರೆಯಲ್ಲಿ 

ಮಕ್ಕಳ ಬಗ್ಗೆ ಬರೆಯುವಾಗ ಇದನ್ನು ಜ್ಞಾಪಿಸಿ ಕೊಳ್ಳುತ್ತಾರೆ .

ಇತ್ತೀಚಿಗೆ  ಬಿಡುಗಡೆಯಾದ  ಖ್ಯಾತ ಲೇಖಕ  ಅಮಿಶ್ ತ್ರಿಪಾಟಿ ತಮ್ಮ  ಪುಸ್ತಕ 

ಸಯಾನ್ ಆಫ್ ಇಕ್ಷ್ವಾಕು  ವನ್ನು ತನ್ನ ಹೆತ್ತವರಿಗೆ  ಅರ್ಪಿಸುವಾಗ  ಬಾಣ ರೂಪದ 

ತನ್ನ  ಚಲನೆಗೆ ವೇಗ ಮತ್ತು ಶಕ್ತಿ ಕೊಡಲು   ಬಾಗಿದ  ಬಿಲ್ಲುಗಳಿಗೆ ಎಂದು 

ಬರೆದು ಕೊಂಡಿದ್ದಾರೆ 



ಸೋಮವಾರ, ಜುಲೈ 6, 2015

ಮಂಡೂಕ ಪುರಾಣವು

ಇದು ಮ೦ಡುಕೊಪನಿಷತ್ ಬಗ್ಗೆ ಅಲ್ಲ .ಮಂಡೂ'ಕ ಕ್ಕೂ  ಈ ಉಪನಿಷದ್ ಗೂ 

ಸಂಬಂಧ  ವಿರಬಹುದು  ಎಂದು ಕೆಲವು ತಿಳಿದವರು ಹೇಳುವರು .

      ಹೊರ ಜಗತ್ತಿನ ಜ್ಞಾನ ಕಮ್ಮಿ ಇರುವವರನ್ನು ಕೂಪ ಮಂಡೂಕ ಎನ್ನುವರು .

ವಿಶಾಲ ಅರ್ಥದಲ್ಲಿ ನೋಡಿದರೆ ನಾವೆಲ್ಲಾ ಈ ವರ್ಗದಲ್ಲಿ ಬರುವವರು .ಕಡಿಮೆ 

ಪಕ್ಷ ಬಾವಿಯೊಳಗೆ ಇರುವ ಜೀವಿಗಳು ,ಬಾವಿಯ ಹೊರಗೆ ಇರುವ ವಾತಾವರಣ 

ಇವುಗಳ ಬಗ್ಗೆ ನಮಗಿಂತ ಹೆಚ್ಚು  ಕಪ್ಪೆಗಳಿಗೆ ಜ್ಞಾನ ಇರ ಬಹುದು .

                         

ಕಪ್ಪೆಗಳು  ನಮ್ಮ ಹಾಗೆ ಕಶೇರುಕ ಪ್ರಾಣಿಗಳು .ನೀರಲ್ಲಾದರು  ಹಾಕು 

ನೆಲದಲ್ಲಾದರು ಹಾಕು  ಅವು ಬದುಕ ಬಲ್ಲವು .ಅದಕ್ಕೆ ಅವುಗಳನ್ನು 

ಅಮ್ಪಿಬಿಯನ್ ಎನ್ನುವರು .ಯಾವ ಪಕ್ಷ ಸೇರಿದರೂ ಅಧಿಕಾರದಲ್ಲಿ 

ಇರುವ ರಾಜಕಾರಿಣಿಯಂತೆ .  ಅವು  ಶೀತ ರಕ್ತ ಪ್ರಾಣಿಗಳು .ಎಂದರೆ 

ವಾತಾವರಣದ  ಉಷ್ಟತೆ  ಅವುಗಳ ಶರೀರದ ತಾಪ .ಮನುಷ್ಯರಲ್ಲಿ 

ಹಾಗೆ ಅಲ್ಲ ,ಅದಕ್ಕೇ ನಾವು ಉಷ್ಣ  ರಕ್ತ ಪ್ರಾಣಿಗಳು .


ಮಳೆಗಾಲದಲ್ಲಿ ಕಪ್ಪೆಗಳ ವಟ ಗುಟ್ಟುವಿಕೆ ಶ್ರುತಿ ಭದ್ದವಾಗಿ ಕೇಳುವುದು .

ಹಳ್ಳಿ ದಾರಿಗಳಲ್ಲ್ಲಿ  ರಾತ್ರಿ ಸಂಚರಿಸುವಾಗ ಏಕ ತಾನತೆ ,ಶೂನ್ಯತೆ 

ನಿವಾರಿಸುವುದರಲ್ಲಿ  ಈ ಸಂಗೀತ ಮತ್ತು ಜೀರುಂಡೆಗಳ  ಹಿಮ್ಮೇಳ  ಸಹಾಯಕಾರಿ .

ಇವು ಹಾಡುವುದು ನಮಗಾಗಿ ಅಲ್ಲ .ತಮ್ಮ ಪ್ರಿಯತಮೆಯಯರನ್ನು 

ಪ್ರೀತಿಯಾ ತೋರೆಯಾ ಎಂದು ಕೂಗುವ ಹಾಡು ,ಗಂಡು ಕಪ್ಪೆಗಳ 

ಸ್ವರದ ಮಾಧುರ್ಯ  ಮತ್ತು  ಗಡಸು ತನ ಕೇಳಿ ಹೆಣ್ಣು ಕಪ್ಪೆಗಳು 

ತಮ್ಮ ಸಂಗಾತಿಯನ್ನು ಆರಿಸುವವು .ಸೌಂದರ್ಯ ನೋಡಿ ಅಲ್ಲ .


ನಾವು ಪ್ರಥಮ ಎಂ ಬಿ ಬಿ ಎಸ್  ಪಿಸಿಯೋಲಜಿ   ಪ್ರಯೋಗ 

ತರಗತಿಯಲ್ಲಿ ಜೀವಂತ ಕಪ್ಪೆಯನ್ನು ನಮ್ಮ ಕೈಗೆ ಕೊಡೋರು .ಒಲ್ಲದ 

ಕಟುಕ ರಂತೆ   ವಿಲವಿಲ  ಒದ್ದಾಡುತ್ತಿರುವ  ಬಡಪಾಯಿಯ ಹಿಂದಲೆ ಮತ್ತು ಕುತ್ತಿಗೆ 

ನಡುವೆ  ಸೂಜಿ ತೂರಿ  ಪ್ರಜ್ಞೆ ತಪ್ಪಿಸುತ್ತಿದ್ದೆವು .ನನ್ನ ಸುದೀರ್ಘ ವೈದ್ಯಕೀಯ 

ಜೀವನದಲ್ಲಿ   ಸಂಕಟ ಉಂಟು ಮಾಡಿದ  ನೆನಪಿಸಲು ಇಷ್ಟ ಇಲ್ಲದ ವಿಚಾರ ಇದು .

ಮೇಲೆ ಕಾಣಿಸದ  ಉಪಕರಣಕ್ಕೆ  ಅಬ್ಹೊಧಾವಸ್ಥೆಯಲ್ಲಿರುವ  ಕಪ್ಪೆಯನ್ನು 

ಸೇರಿಸಿ  ಅದರ ಮೇಲೆ ಪ್ರಯೋಗ ನಡೆಸುವುದು .ಅದರ ಮಾಂಸ ಖಂಡಗಳಿಗೆ 

ವಿದ್ಯುತ್ತು ಮತ್ತು ಔಷಧಿ ರೂಪದ ಪ್ರಚೋದನೆ ಕೊಟ್ಟು  ಅಧ್ಯಯನ ಮಾಡುತ್ತಿದ್ದೆವು .

ಚಿತ್ರದಲ್ಲಿ ಕಾಣುವ ಡ್ರಮ್ ಗೆ ಮಸಿ ಹಚ್ಚುತ್ತಿದ್ದರು .ಅದು ನಮ್ಮ ಬಿಳಿ 

ಏಪ್ರಾನ್ ಗೆ ಹಿಡಿದು  ಉರಿಯದ ಕಟ್ಟಿಗೆ ಯ ಅಡಿಗೆ ಮನೆಯಿಂದ  ಬಂದವರಂತೆ 

ಕಾಣಿಸುತ್ತಿದ್ದೆವು .

ಕಪ್ಪೆ  ಸಂಗೀತ  ಗೋಷ್ಠಿ ಗೂ ಮಳೆ  ಬೀಳುವುದಕ್ಕೂ ಸಂಬಂಧ ವಿಲ್ಲ.ಮಳೆಗಾಲದಲ್ಲಿ

ಸಂಗಾತಿಗಾಗಿ ಗಂಡು ಕಪ್ಪೆಗಳು ಕೂಗುತ್ತವೆ ಅಷ್ಟೇ .ಬರಗಾಲ ನೀಗಲು

ದೇಶದ ಕೆಲ ಭಾಗಗಳಲ್ಲಿ  ಮಂಡೂಕ ವಿವಾಹ ಏರ್ಪಡಿಸುವ   ಪದ್ಡತಿ 

ಆಚರಣೆಯಲ್ಲಿದೆ 




ಭಾನುವಾರ, ಜುಲೈ 5, 2015

ನೊಂಡಿಟೆ ಕನ್ನಡ ಮತ್ತು ಇಂಗ್ಲಿಷ್

                                  


ನಾವು  ಮಾಧ್ಯಮಿಕ  ಶಾಲೆಯಲ್ಲಿ ಓದುವಾಗ  ಭಾಷಾ ಅಧ್ಯಯನದಲ್ಲಿ  ನೊಂಡಿಟೆ 

ಎಂಬ  ಒಂದು ಪೇಪರ್ ಇರುತ್ತಿತ್ತು . ಯಾವುದಾದರೂ ಸಣ್ಣ ಕಾದಂಬರಿ  ಅಥವಾ 

ಪ್ರಬಂಧ ಸಂಚಯ .ಇದನ್ನು ಅಧ್ಯಾಪಕರು  ಓದಿ ಕೊಂಡು ಹೋಗುವರು ,ವಿವರಣೆ 

 ಇಲ್ಲ .ವಿದ್ಯಾರ್ಥಿಗಳಲ್ಲಿ   ಸಾಹಿತ್ಯ ಅಭಿರುಚಿ ಹುಟ್ಟಿಸುವುದು ಇದರ ಉದ್ದೇಶ ಇರ 

ಬೇಕು ,ಇದರಲ್ಲಿ ಪಾಸು ಆಗುವುದು ಕಡ್ಡಾಯ ವಲ್ಲ .ಪರೀಕ್ಷೆ ಇತ್ತು . ಈ ನೊಂಡಿ ಟೆ  

ಯ ಪೂರ್ಣ ನಾಮ ನಮಗೆ ತಿಳಿದುದು  ಸಾಮಾನ್ಯ ಹತ್ತನೇ ತರಗತಿ ತಲುಪಿದಾಗ .

ಇದು ನೋನ್ ಡೀಟೈಲ್ಡ್ (non -detailed) ಎಂದು .ನನ್ನ ಪಾಲಿಗೆ  ಈ ಪುಸ್ತಕಗಳು 

ಸಾಹಿತ್ಯ ಅಭಿರುಚಿ ಹುಟ್ಟಿಸುವುದರಲ್ಲಿ  ಸಹಾಯಕ ಆದುದು ಸತ್ಯ .

 ಭರ್ತೃಹರಿ ನೀತಿ ಶತಕ ದಲ್ಲ್ಲಿ  ಹೇಳುತ್ತಾನೆ ."ಸಾಹಿತ್ಯ  ಮತ್ತು ಸಂಗೀತದಲ್ಲಿ

ತೊಡಗಿಸಿ ಕೊಳ್ಳದವನು ಪಶುವಿಗೆ  ಸಮಾನ  ,ಅವನಿಗೆ ಬಾಲ ಮತ್ತು ಕೋಡು 

ಇರದಿರಬಹುದು .ಪುಣ್ಯಕ್ಕೆ ಆತನು ಹುಲ್ಲು ತಿನ್ನದಿರುವುದರಿಂದ  ಪಶುಗಳು 

ಉಪವಾಸ ಬೀಳುವುದು ತಪ್ಪಿತು ."

ಜೀವನವನ್ನು  ಸುಂದರ ಗೊಳಿಸುವುದರಲ್ಲ್ಲಿ ಸಾಹಿತ್ಯ ಮತ್ತು ಸಂಗೀತ ಗಳ  ಪಾತ್ರ 

ಮುಖ್ಯ .ವಿದ್ಯಾರ್ಥಿಗಳಿಗೆ  ಭಾಷೆ ಮತ್ತು ಸಾಹಿತ್ಯ  ಕಲಿಸುವುದು ಇದಕ್ಕೆ . ತಾಂತ್ರಿಕ 

ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೂ  ಸಾಹಿತ್ಯ ಅಭ್ಯಾಸ ಇರ ಬೇಕು .ಪರೀಕ್ಷೆ 

ನಡೆಸ ಬೇಕಿಲ್ಲ .ಅಂಕ ಜಾಸ್ತಿ ಸಿಗುವುದು ಎಂದು ಸಂಸ್ಕೃತ , ಹಿಂದಿ  ಭಾಷೆ ತೆಗೆದು 

ಕೊಳ್ಳುವುದು ತಪ್ಪು .

ಇಂದು  ವೈದ್ಯಕೀಯ ಕ್ಷೇತ್ರ ದ  ಹಲವರು  ಸಾಹಿತ್ಯ ರಂಗದಲ್ಲಿ ತಮ್ಮ ಕೊಡುಗೆ 

ನೀಡಿ  ಪ್ರಸಿದ್ದ ರಾಗಿದ್ದಾರೆ .ಕನ್ನಡದಲ್ಲಿ  ಡಾ ಶಿವರಾಂ (ರಾಶಿ ).ಅನುಪಮಾ 

ನಿರಂಜನ ,ಆಂಗ್ಲ ಭಾಷೆಯಲ್ಲಿ  ಡಾ ಅಬ್ರಹಾಂ ವರ್ಗಿಸ್ , ಅತುಲ್ ಘವಂಡೆ ,

ಕಾವೇರಿ  ನಂಬಿಶನ್  ಕೆಲವು  ಹೆಸರುಗಳು . ವಿದೇಶದಲ್ಲಿ  ಎಲ್ಲಾ  

ಉದಯೋನ್ಮುಖ ಬರಹ ಗಾರ ರಿಗೆ   ಬರೆಯುವ  ತರಬೇತಿ ಕೊಡುವ 

ಕಾರ್ಯಕ್ರಮ ಗಳಿರುತ್ತವೆ .