ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಮೂಗಿನ ಮೂಲಕ ನಳಿಕೆ ಹಾಕಿ ಆಹಾರ
ಕೊಡುವುದನ್ನು ನೋಡಿರುವಿರಿ.ಇದನ್ನು ನಾಸಿಕೋದರ ನಾಳ ಎಂದು ಕರೆಯುವರು.
ನಮ್ಮ ನುಂಗುವ ಪ್ರಕ್ರಿಯೆ ಸಂಕೀರ್ಣವಾದದ್ದು. ಯಾವುದೇ ವಸ್ತುವನ್ನು ನುಂಗಲು
ಅಥವಾ ಕುಡಿಯಲು ಮೊದಲು ಮೆದುಳಿನಿಂದ ಆಜ್ಞೆ ಬರಬೇಕು .ಅದರಾನುಸಾರ
ಬಾಯಿ ತೆರೆಯುವುದು .ಕಿರು ನಾಲಿಗೆ ಶ್ವಾಸನಾಳವನ್ನು ಮುಚ್ಚಿ ನಾವು ತಿನ್ನುವ
ಅಥವಾ ಕುಡಿಯುವ ವಸ್ತು ಶ್ವಾಸಕೋಶಕ್ಕೆ ಹೋಗದಂತೆ ತಡೆಯುವುದು .ಆಹಾರ
ಗಂಟಲಿಂದ ಅನ್ನನಾಳದಲ್ಲಿ ಕೆಳಗೆ ಇಳಿದು ಜಠರಕ್ಕೆ ಸೇರುವಲ್ಲಿ ಒಂದು ಗೇಟ್ ಇದೆ .
ಅದು ಏಕ ಮುಖ ಸಂಚಾರ ವನ್ನು ಖಚಿತ ಪಡಿಸುವುದು .ಎಂದರೆ ಉದರದಿಂದ
ಆಹಾರ ,ಮತ್ತು ಆಮ್ಲ ಅನ್ನನಾಳ ವನ್ನು ಸೇರಿ ಕಿರಿ ಕಿರಿ ಮಾಡದಂತೆ
ನೋಡುವುದು ಇದರ ಕಾರ್ಯ .ಮೇಲಿನಿಂದ ಬಂದ ವಸ್ತು ಉದರಕ್ಕೆ ಬಿಡುವುದು
ಏಕ ಮುಖ ಸಂಚಾರ .
ಈಗ ಈ ಕ್ರಿಯೆಗೆ ಯಾವ ಯಾವ ರೀತಿಯಲ್ಲಿ ತಡೆಯುಂಟು ಆಗುವುದು ಎಂದು
ನೋಡುವಾ .
ಮೆದುಳಿನಲ್ಲಿ ರಕ್ತ ಸ್ರಾವ , ಹೆಪ್ಪುಗಟ್ಟುವಿಕೆ .ಸೋಂಕು ಅಥವಾ ಗಡ್ಡೆ
ಇತ್ಯಾದಿಗಳು ಅಥವಾ ಮೆದುಳಿನ ಕ್ಷಮತೆ ಮಂದ ಗೊಳಿಸುವ ಔಷಧಿ
ಮದ್ಯ ಪಾನ ಇತ್ಯಾದಿ ಗಳು ನುಂಗುವುದಕ್ಕೆ ಬೇಕಾದ ಸಿದ್ದತೆ ಇಲ್ಲದಂತೆ
ಮಾಡುತ್ತವೆ . ಅಂತಹ ಸಂದರ್ಭದಲ್ಲಿ ನಾವು ಬಾಯಿಗೆ ನೀರು ಅಥವಾ
ಆಹಾರ ಕೊಟ್ಟರೆ ಅದು ಭಾಗಶಃ ಶ್ವಾಶಕೋಶ ಸೇರಿ ಕೆಮ್ಮು ಮತ್ತು ಸೋಂಕು
ಉಂಟು ಮಾಡುವುದು .ಅಲ್ಲದೆ ಬಾಯಿಯಲ್ಲಿನ ಜೊಲ್ಲು ನುಂಗಲೂ ಅಸಾಧ್ಯವಾಗಿ
ಗಂಟಲಲ್ಲಿ ಗುರು ಗುರು ಎಂದು ಶಬ್ದ ವಾಗುವುದು .ಕೆಮ್ಮು ಬರುವುದು .
ಇದಕ್ಕೆ ಕಫದೋಷ ಎಂದು ಬಲಾತ್ಕಾರವಾಗಿ ಕೆಮ್ಮಿನ ಸಿರಪ್ ಕುಡಿಸಲು
ಹೋಗುವರು .ಪರಿಸ್ಥಿತಿ ಉಲ್ಬಣವಾಗುವುದು . ಆದುದರಿಂದ ಇಂತಹ
ರೋಗಿಗಳಿಗೆ ,ಪ್ರಜ್ಞೆ ಇಲ್ಲದವರಿಗೆ ಬಾಯಲ್ಲಿ ಏನೂ ಕೊಡ ಬಾರದು .
ಇದಕ್ಕೆ ಪರಿಹಾರ ಆಹಾರವನ್ನು ರಕ್ತ ನಾಳ ಗಳ ಮೂಲಕ ಡ್ರಿಪ್ ರೂಪದಲ್ಲಿ
ಕೊಡುವುದು .ಇಲ್ಲವೇ ನಾಸಿಕೋದರ ನಾಳದಲ್ಲಿ ಆಹಾರ ಕೊಡುವುದು .
ಇವುಗಳಲ್ಲಿ ಎರಡನೆಯದು ಉತ್ತಮ .ಏಕೆಂದರೆ ಪೌಷ್ಟಿಕ ಆಹಾರ ವನ್ನು ದ್ರವ
ರೂಪದಲ್ಲಿ ಕೊಡ ಬಹುದು .ರಕ್ತ ನಾಳಗಳ ಮೂಲಕ ನೀರು ,ಲವಣ ಮತ್ತು
ಗ್ಲುಕೋಸ್ ಮಾತ್ರ ಕೊಡ ಬಹುದು .
(ಮೇಲಿನ ಚಿತ್ರಗಳ ಮೂಲಗಳಿಗೆ ಆಭಾರಿಯಾಗಿದ್ದೇನೆ)

ಈ ನಳಿಕೆಯನ್ನು ಕೆಲವು ಸಂದರ್ಭ ಗಳಲ್ಲಿ ಹೊಟ್ಟೆ ತೊಳೆಯಲೂ
ಉಪಯೋಗಿಸುವರು .ಉದಾ : ವಿಷ ಕುಡಿದು ಬಂದಾಗ .