ಹೃದಯಾಘಾತ 1
ಎಲ್ಲರೂ ಹೆದರುವ ಕಾಯಿಲೆ ಹೃದಯಾಘಾತ .ಆಘಾತ ಎಂದರೆ ಯಾವುದೇ
ದೀರ್ಘ ಮುನ್ಸೂಚನೆ ಇಲ್ಲದೆ ಎರಗುವ ಆಕ್ರಮಣ .
ಹೃದಯ ದೇಹದ ಎಲ್ಲಾ ಭಾಗಗಳಿಗೆ ಆಹಾರ ,ಮತ್ತು ಆಮ್ಲಜನಕ ರಕ್ತದ ಮೂಲಕ
ಸರಬರಾಜು ಮಾಡುವ ಅಂಗ .ಇಂತಹ ಪ್ರಾಮುಖ್ಯ ಅಂಗಕ್ಕೆ ರಕ್ತ ಸರಬರಾಜು
ಮಾಡುವ ರಕ್ತ ನಾಳ ಗಳಿಗೆ ಕೊರೋನರಿ ರಕ್ತನಾಳ ಎನ್ನುವರು .ತನ್ನ ಒಳಗೆ
ರಕ್ತ ಇದ್ದರೂ ಆಯಿಲ್ ಟ್ಯಾಂಕರ್ ವಾಹನಕ್ಕೆ ಬೇರೆ ಡಿಸೇಲ್ ಟ್ಯಾಂಕ್ ಮತ್ತು
ಪೈಪ್ ಇರುವಂತೆ ಹೃದಯಕ್ಕೆ ಇವು.
ದೀರ್ಘ ಮುನ್ಸೂಚನೆ ಇಲ್ಲದೆ ಎರಗುವ ಆಕ್ರಮಣ .
ಹೃದಯ ದೇಹದ ಎಲ್ಲಾ ಭಾಗಗಳಿಗೆ ಆಹಾರ ,ಮತ್ತು ಆಮ್ಲಜನಕ ರಕ್ತದ ಮೂಲಕ
ಸರಬರಾಜು ಮಾಡುವ ಅಂಗ .ಇಂತಹ ಪ್ರಾಮುಖ್ಯ ಅಂಗಕ್ಕೆ ರಕ್ತ ಸರಬರಾಜು
ಮಾಡುವ ರಕ್ತ ನಾಳ ಗಳಿಗೆ ಕೊರೋನರಿ ರಕ್ತನಾಳ ಎನ್ನುವರು .ತನ್ನ ಒಳಗೆ
ರಕ್ತ ಇದ್ದರೂ ಆಯಿಲ್ ಟ್ಯಾಂಕರ್ ವಾಹನಕ್ಕೆ ಬೇರೆ ಡಿಸೇಲ್ ಟ್ಯಾಂಕ್ ಮತ್ತು
ಪೈಪ್ ಇರುವಂತೆ ಹೃದಯಕ್ಕೆ ಇವು.
ಮಹಾ ಅಪಧಮನಿ ಯಿಂದ ಕವಲೊಡೆವ ಕೊರೋನರಿ ನಾಳಗಳಲ್ಲಿ
ಮುಖ್ಯವಾಗಿ ಬಲ ಮತ್ತು ಎಡ ಎಂಬ ಎರಡು ಮುಖ್ಯ ವಾದುವು .ಹೃದಯದ
ಎಡ ಭಾಗ ಹೆಚ್ಚು ಕೆಲಸ ಮಾಡ ಬೇಕಾದುದರಿಂದ ಎಡದ ರಕ್ತನಾಳ ದಲ್ಲಿ
ಹೆಚ್ಚು ರಕ್ತ ಸಂಚಾರ .ಎಡದ ಕೊಳವೆ ಮುಂದೆ ಎಡ ಮುಂದಕ್ಕೆ ಇಳಿಯುವ
ಮತ್ತು ಎಡ ಸುತ್ತು ಹಾಕುವ ಎಂದು ವಿಭಜನೆ ಹೊಂದುವುದು.. ಹಾಗೆ ಒಟ್ಟು
ಮೂರು ಪ್ರಧಾನ ರಕ್ತನಾಳಗಳು ಆದುವು .ಇವುಗಳ ತೊಂದರೆಯನ್ನೇ
ಒಂದು ನಾಳದ (ಸಿಂಗಲ್ ವೆಸ್ಸೆಲ್) ಬ್ಲಾಕ್ ,ಮೂರು ಬ್ಲಾಕ್ ಇತ್ಯಾದಿ ಹೇಳುವರು .
ಹೃದಯಾಘಾತ ಉಂಟಾಗುವ ಪರಿ
ಮೊದಮೊದಲು ರಕ್ತನಾಳದ ಒಳ ಪದರಿನ ಕೆಳಗೆ ಕೊಬ್ಬು ಶೇಖರಣೆ ಆಗುವುದು .
ಇದನ್ನು ಫ್ಯಾಟಿ ಸ್ಟ್ರೀಕ್ ಎನ್ನುವರು ,ಇದು ಬೆಳೆದು ರಕ್ತನಾಳದಲ್ಲಿ ಮೊದಲು
ಭಾಗಶ ತಡೆ ಏರ್ಪಡಿಸುವುದು .ಮುಂದೆ ಒಳಪದರ ಒಡೆದು ರಕ್ತ ಹೆಪ್ಪು ಗಟ್ಟಿಸುವ
ವಸ್ತುಗಳನ್ನು ಆಕರ್ಶಿಸಿ ಪ್ರಚೋದಿಸುವುದು .ಇವುಗಳಲ್ಲಿ ಪ್ಲೇಟ್ ಲೆಟ್ ರಕ್ತ
ಕಣಗಳು ( ಇವುಗಳ ಬಗ್ಗೆ ವಿವರhttps://padmangri.blogspot.com/2020/11/blog-post_20.html) ಮತ್ತು ಹೆಪ್ಪು ಗಟ್ಟಿಸುವ ರಾಸಾಯನಿಕಗಳು ಸೇರಿ ಈ ಭಾಗದಲ್ಲಿ ರಕ್ತ
ಹೆಪ್ಪುಗಟ್ಟಿ ರಕ್ತ ಸಂಚಾರಕ್ಕೆ ಪೂರ್ಣ ತಡೆ ಏರ್ಪಡುವುದು .ರಕ್ತದ ಮೂಲಕ
ಆಮ್ಲಜನಕ ,ಆಹಾರ ಸಿಗದೆ ಹೃದಯದ ಮಾಂಸ ಖಂಡಗಳು ಬಸವಳಿದು
ಬೆಂಡಾಗಿ ಕೂಗುವುವು.ಅದುವೇ ಎದೆ ನೋವಿಗೆ ಕಾರಣ .ಪರಿಸ್ತಿತಿ
ಸುಧಾ ರಿಸದಿದ್ದಲ್ಲಿ ಆ ಭಾಗದ ಮಾಂಸ ಖಂಡ ಸತ್ತು ಹೃದಯ ರಕ್ತ ಪಂಪ್
ಮಾಡುವ ಕಾರ್ಯದಲ್ಲಿ ವ್ಯತ್ಯಯ ಆಗುವುದು .ಮೆದುಳಿಗೆ ರಕ್ತ ಬಂದ್ ಆದರೆ
ಸಾವು ಸಂಭವಿಸುವುದು .
ಹೃದಯದ ಆರ್ತನಾದ ಎದೆ ನೋವಿನ ರೂಪದಲ್ಲಿ .ನೋವು ಎದೆ ಮಧ್ಯದಲ್ಲಿ
ಒತ್ತಿದಂತೆ , ಎಡದ ಕೈ ಮತ್ತು ದವಡೆಗೆ ಪಸರಿಸುವುದು .ಸಿನೆಮಾ ದಲ್ಲಿ ತೋರಿಸುವಂತೆ ಎಡ ಭಾಗದಲ್ಲಿ ನೋವು ಬರುವುದು ಕಡಿಮೆ ..ಕೆಲವೊಮ್ಮೆ
ಹೊಟ್ಟೆ ನೋವು ರೂಪದಲ್ಲಿ ಬರಬಹುದು .ಅತಿಯಾಗಿ ಬೆವರುವುದು .
ಇನ್ನು ಮೌನ ಆಘಾತ (ಸೈಲೆಂಟ್ ಅಟ್ಯಾಕ್ ) ದಲ್ಲಿ ನೋವು ಇರದು .ಇದು
ಸಕ್ಕರೆ ಕಾಯಿಲೆ ಯವರಲ್ಲಿ ಸಾಮಾನ್ಯ .ನೋವು ವಾಹಕ ನರಗಳ ದೌರ್ಬಲ್ಯ