ವೈದ್ಯರನ್ನು ದೇವರೆಂದು ನಂಬುವ ಕಾಲ ಇತ್ತು.ಈಗ ವೈದ್ಯರೂ ಹಣಕ್ಕಾಗಿ ಸೇವೆ ಒದಗಿಸುವ ವ್ಯಕ್ತಿ ಎಂಬ ಭಾವನೆ ಬಂದಿದೆ
ಇದಕ್ಕೆ ಕಾರಣ ಏನು ಎಂಬುದನ್ನು ಚರ್ಚಿಸಲು ನಾನು ಹೋಗುವುದಿಲ್ಲ .ಒಬ್ಬ ಜ್ವರದ ವ್ಯಕ್ತಿ ಡಾಕ್ಟರ್ ನೋಡಿದ ಕೂಡಲೇ ತನಗೆ ಯಾವ ಜ್ವರ ಎಂದು ತಿಳಿಯ ಬಯಸುತ್ತಾನೆ .ಅದೂ ವಾಡಿಕೆಯಲ್ಲಿ ಇರುವ ಹಂದಿ ಜ್ವರ ,ಇಲಿ ಜ್ವರ , ಡೆಂಗು
,ಟೈಫಾಯಿಡ್ ಇತ್ಯಾದಿ ಇಲ್ಲಾ ಎಂದು ನಮ್ಮ ಬಾಯಿಯಿಂದ ಹೇಳಿಸ ಬಯಸುತ್ತಾನೆ .ವೈದ್ಯ ಶಾಸ್ತ್ರ ಓದಿದವನಿಗೆ ಯಾವುದೇಜ್ವರ ದ ಕಾರಣ ನಿಖರವಾಗಿ ಹೇಳುವುದು ಎಷ್ಟು ಕಷ್ಟದ ಕೆಲಸ ಎಂದು ತಿಳಿದಿದೆ .ಪ್ರಚಲಿತ ವಿರುವ ಎಲ್ಲ ಜ್ವರಗಳ ಕಾರಣ
ತಿಳಿಸುವ ಪರೀಕ್ಷೆಗಳನ್ನು ನಡೆಸುವುದು ಆರ್ಥಿಕವಾಗಿ ರೋಗಿಗೆ ಭಾರವಾಗುವುದಲ್ಲದೆ ಅನವಶ್ಯಕ ವೂ ಹೌದು .
ಇನ್ನು ಗಂಬೀರ ಕಾಯಿಲೆಗಳಾದ ಹೃದಯಾಘಾತ ,ಸ್ಟ್ರೋಕ್ ಇತ್ಯಾದಿ ಆದ ರೋಗಿಗಳ ಬಂಧುಗಳಲ್ಲಿ ಅದನ್ನು ತಿಳಿಸಿದಾಗಬಹಳಷ್ಟು ಮಂದಿ ಸಂಭಂದಿಗಳು ಅಷ್ಟೇ ಅಲ್ಲವಾ ಡಾಕ್ಟ್ರೆ ಬೇರೇನೂ ಇಲ್ಲವಲ್ಲ ಎನ್ನುತ್ತಾರೆ !ಆಗ ನಾನು ಬೇರೇನು ಬೇಕು
ಇದುವೇ ಸಾಕು ರೋಗಿಯ ಪ್ರಾಣ ತೆಗೆಯಲು ಎನ್ನುತ್ತೇನೆ . ಇನ್ನು ಅಂತಹ ಸಂದರ್ಭದಲ್ಲಿ ಚಿಂತಿಸಬೇಡಿ ಎಲ್ಲಾ ಸರಿ
ಹೋಗುವುದು ಎಂದು ಸಾಂತ್ವನ ಹೇಳಿದಿರೋ ಜೋಕೆ ! ರೋಗಿಗೆ ದುರದೃಷ್ಟವ್ಶಾತ್ ಏನಾದರು ಸಂಭವಿಸಿದರೆ ನೀವೇಹೇಳಿದ್ರಲ್ಲ ಸರಿಹೋಗುತ್ತೆ ಎಂದು ಈಗ ಹೀಗೇಕೆ ಆಯಿತು ಎಂದು ಜಗಳ ಕಾಯಿವುವರು ಇದ್ದಾರೆ.
ಒಮ್ಮೆ ಹೃದಯಾಘಾತವಾದ ವ್ಯಕ್ತಿಯೋರ್ವರ ಪತ್ನಿಗೆ ನಾನು ಚಿಂತಿಸ ಬೇಡಿ ಎಲ್ಲಾ ಸರಿ ಹೋಗುವುದು ಎಂದುದಕ್ಕೆ
ಆಕೆ ನನ್ನ ಗಂಡನಿಗೆ ಹಾರ್ಟ್ ಅಟ್ಯಾಕ್ ಆದಾಗ ನಾನು ಚಿಂತೆ ಮಾಡದೆ ಮತ್ತಾರು ಮಾಡುವುದು ,ಏನು ಮಾತೂಂತ
ಹೇಳುತ್ತಿರ ಎಂದು ನನ್ನ ಮೇಲೆ ಹರಿ ಹಾಯ್ದರು .
ವಿದೇಶದಲ್ಲಿ ಶಸ್ತ್ರ ಚಿಕಿತ್ಸೆಗಿಂತ ಮೊದಲು ವೈದ್ಯರು ಅದನ್ನು ಮಾಡುವ ವಿಧಾನ ಸಾಧಕ ಭಾಧಕ ಗಳನ್ನ ರೋಗಿಗೆ ವಿಶದ
ವಾಗಿ ವಿವರಿಸಿ ಒಪ್ಪಿಗೆ ಸಹಿ ತೆಗೆದುಕೊಳ್ಳುವರು .ಅದಕ್ಕೆ ಇನ್ಫಾರ್ಮ್ದ್ ಕನ್ಸೆಂಟ್ ಎನ್ನುವರು .ನಮ್ಮಲ್ಲಿ ಶಸ್ತ್ರ ಚಿಕಿತ್ಸೆಯ ಚಿತ್ರಣ
ಪೂರ್ಣ ವಿವರಿಸಿದರೆ ಹೆದರಿ ಓಡಿ ಹೋದಾರು .ಅಂತೆಯೇ ಗರ್ಭಿಣಿ ಸ್ತ್ರೀಯರಿಗೆ ಎಕ್ಲ೦ಪ್ಸಿಯ ,ಎಂಬೋಲಿಸಂ ,ಹೆರಿಗೆಯ ಸಮಯದಲ್ಲಿ ಬರಬಹುದಾಗ ಸಮಸ್ಯೆಗಳನ್ನು ವಿವರಿಸಿ ಹೇಳುವುದೂ ಕಷ್ಟ
ಇತ್ತೀಚಿಗೆ ವಯಸ್ಸಾದ ರೋಗಿಗಳ ನ್ನು ನೋಡಲು ಮುಸುಂಬಿ ಆರೆಂಜ್ ತೆಗೆದು ಕೊಂದು ಅಸ್ಪತ್ರೆಗೆ ಬರುವ ನೆಂಟರ ಸಂಖ್ಯೆ
ಕಡಿಮೆ ಆಗಿದೆ .ಅಷ್ಟೇಕೆ ಐ ಸಿ ಯು ನಲ್ಲಿ ವೃದ್ದರು ಅಡ್ಮಿಟ್ ಆದರೆ ಡಾಕ್ಟರ್ ಹೊರಗೆ ಬರುವಾಗ ಹಿಂದೆ ಎಲ್ಲಾ ಕೊರಳುದ್ದಮಾಡಿ ಕಾಯುತ್ತಿದ್ದಂತೆ ಇರುವ ನೆಂಟರು ಈಗ ನಾಪತ್ತೆ .ಎಷ್ಟೋ ವೇಳೆ ನಮ್ಮ ಎಲ್ಲ ಪ್ರಯತ್ನ ಗಳ ಹೊರತಾಗಿತೂ ರೋಗಿಬದುಕಿ ಉಳಿದರು ಎಂದು ಹೇಳಬೇಕಾಗುತ್ತದೆ .
ಇನ್ನು ಕೆಲವು ಪತ್ನಿಯರು ತಮ್ಮ ಗಂಡನಿಗೆ ಕುಡಿಯ ಬೇಡಿ ಎಂದು ಹೇಳಿರಿ ಡಾಕ್ಟ್ರೆ ,ನಾನು ಹೇಳಿದ್ದು ಎಂದು ಬೇಡ ,
ತಾಯಂದಿರು ಮಕ್ಕಳಿಗೆ ಚಾಕಲೇಟ್ ತಿನ್ನಬೇಡಿ ಎಂದು ಹೇಳಿ ,ಟಿ ವಿ ನೋಡ ಬೇಡಿ ಎಂದು ಹೇಳಿ ಎಂದು ನಮ್ಮ ಭುಜದಮೇಲಿಂದ ಶೂಟ್ ಮಾಡಲು ಯತ್ನಿಸುತ್ತಾರೆ.
ಈಗ ಮತ್ತೊಂದು ರೋಗ ಸುರುವಾಗಿದೆ .ಮೊಬೈಲ್ ಹಾವಳಿ .ಕ್ಲಿನಿಕ್ ನ ಒಳಗೆ ಬಂದಾಗ ನಿಮಗೆ ಏನು ತೊಂದರೆ ಎಂದು
ಕೇಳುವಷ್ಟರಲ್ಲಿ ಮೊಬೈಲ್ ರಿಂಗಿಸುತ್ತದೆ.ನಮ್ಮ ತ್ತ ಕೈ ಭಾಷೆ ಮಾಡಿ ನಿಮಿಷ ಗಟ್ಟಲೆ ಗಟ್ಟಿಯಾಗಿ ಸಂಬಾಷಣೆ
ಮುಂದುವರಿಸ್ತ್ತಾರೆ .ಅವರ ಮಾತು ಮುಗಿದ ಮೇಲೆ ನಮ್ಮ ಪ್ರಶ್ನೆಗೆ ಉತ್ತರ .ಹಲವು ಬಾರಿ ದೂರದಲ್ಲಿರುವ ಅವರ ಸಂಬಂದಿಮಿತ್ರರಿಗೆ ಮೊಬೈಲ್ ನಲ್ಲಿ ಕನೆಕ್ಟ್ ಮಾಡಿ ಮೊಬೈಲ್ ನ್ನು ಕ್ರಿಕೆಟ್ ಆಟಗಾರರರು ಪ್ಯಾಂಟಿನಲ್ಲಿ ಉಜ್ಜುವಂತೆ ಉಜ್ಜಿ
ನೀವೊಮ್ಮೆ ಇವರ ಬಳಿ ನಮ್ಮ ಕಾಯಿಲೆ ಬಗ್ಗೆ ಹೇಳಿ ದಾಕ್ತ್ರೆ ಎಂದು ಆರ್ಡರ್ ಮಾಡುತ್ತಾರೆ .
ಅಂತೂ ರೋಗಿಯನ್ನು ಸಂಬಾಳಿಸಿದರೂ ಅವರ ನೆಂಟರನ್ನು ಸಂಬಾಳಿಸುವುದು ಕಷ್ಟ ಎಂಬಂತಾಗಿದೆ