ಬೆಂಬಲಿಗರು

ಶುಕ್ರವಾರ, ಅಕ್ಟೋಬರ್ 11, 2013

M Srinivasa Rao My teacher (Shrinivasa mastru )

                                                 


He was a teacher par excellence, not a trained one. He had evolved his own


methods of teaching on which people can do PhD now.

Evenings he used to take outside classrooms and read stories from Chandamama

and other story books sitting under a tree.

He had a question hour where he will ask questions pertaining to subjects

taught and the person who does not answer will move physically with bag

down the line; again if does well in the second round can move up something like snake and ladder
.
He was a highly principled man and strict disciplinarian. Caning finger knuckles 

was his usual way of punishing. But spared girls but used to ask fellow girls

to pinch the ear lobes of errant females. I also received the taste of his cane

once for not having done home work and telling lie in defense. He was

equally strict with his children also.

In the evenings he used write accounts in a shop in the town.

Later his son became my science teacher in High School. He was also

chip of old block. Whenever we go to his house ask for teacher his wife

will question ' which teacher you want senior or junior?'

When we had some unexpected problems from our neighbors he came

to our house to give moral support to my father.


ಒಪ್ಪಕ್ಕ

ಒಪ್ಪ ಎಂದರೆ ಹವ್ಯಕ ಭಾಷೆಯಲ್ಲಿ ಚಂದದ ಎಂದು ಅರ್ಥ .ಒಪ್ಪಕ್ಕ ಎಂದು ಹುಡುಗಿಯರನ್ನು ಕರೆಯುವುದು ವಾಡಿಕೆ

 .ಮಲಯಾಳಂ ನಲ್ಲಿಯೂ ಒಪ್ಪೋಳ್ ಎಂದು ಅಕ್ಕನಿಗೆ ಕರೆಯುವುದಿದೆ.ನನ್ನ ಎರಡನೇ ಅಕ್ಕ  ಭಾಗ್ಯಲಕ್ಷ್ಮಿ .ನನಗಿಂತ

ಎರಡು ವರ್ಷ ದೊಡ್ಡವಳು .ನನ್ನಿಂದ ಹಿಡಿದು ತಮ್ಮ೦ದಿರಿಗೆಲ್ಲಾ ಅವಳೇ  caretaker.ಎರಡು ಜಡೆ ಹಾಕಿಕೊಂಡು ಉದ್ದ ಲಂಗ

ರವಿಕೆ ಧರಿಸಿ ಸಂಭ್ರಮ ದಿಂದ ನಾಯಕಿಯಾಗಿ ನಮ್ಮನ್ನು ನಡೆಸಿದವಳು . ನಮ್ಮ ಶಾಲಾ ಬ್ಯಾಗ್ ಮೊದಲೆರಡು

ವರ್ಷಗಳಲ್ಲಿ ಹೊತ್ತವಳು ,ಬುತ್ತಿ ಯನ್ನು ಹೊರುವುದಲ್ಲದೆ ಮಧ್ಯಾಹ್ನ ನಮ್ಮನ್ನು ಉಣ್ಣಿಸಿ ತೊಳೆವ ಕೆಲಸ ಮಾಡಿದವಳು .

ನಾವು ನಡೆವಾಗ ,ಆಡುವಾಗ ಬಿದ್ದರೆ ಎಬ್ಬಿಸಿ ಸಾಂತ್ವನ ಹೇಳಿದವಳು .ಅವಳಿಗೆ ತುಂಬಾ ಸಹನೆ .ದಾರಿಯಲ್ಲಿ

ಗೆಳತಿಯರ ಮನೆಯಿಂದ ಹೂ ,ಹೂವಿನ ಸಸಿ ಸಂಗ್ರಹ ಅವಳ ಹವ್ಯಾಸ .ಗೆಳತಿಯರ ಜತೆ ಮಾವಿನ ಕಾಯಿ ,ಹುಣಿಸೇ ಬೀಜ

ನೆಲ್ಲಿಕಾಯಿ ಬಾರ್ಟರ್ ಆಗುತ್ತಿತ್ತು .ಆದರಲ್ಲಿ ನಮಗೂ ಪಾಲು ಸಿಗುತ್ತಿತ್ತು .

                   ಟೆನ್ನಿಕೊಯಿಟ್ ಚೆನ್ನಾಗಿ ಆಡುತ್ತಿದ್ದಳು .ಹೈ ಸ್ಕೂಲ್ ನಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಗೆದ್ದು ಚಾಂಪಿಯನ್


ಆಗಿದ್ದಳು .ಆಗೆಲ್ಲ ತಡವಾಗಿ ಮನೆಗೆ ಹೋಗುವುದಿದ್ದರೆ ನಾವು ತಮ್ಮಂದಿರು ಯಾರಾದರೂ ಅವಳ ಜತೆ ಕಾದು ನಿಂತು

ಬರಬೇಕಿತ್ತು .ಈಗಲೂ ಪರಿಸ್ತಿತಿ ಬದಲಾಗಿಲ್ಲ .ಹೊತ್ತು ಕಂತಿದ ಮೇಲೆ ಹುಡುಗಿಯರು ಒಬ್ಬರೇ ನಡೆದು ಹೋಗುವುದು

ಅಪಾಯಕಾರಿ.

ಮನೆಯಲ್ಲೂ ಹುಡುಗಿಯರು ಮನೆ ಕಾರ್ಯದಲ್ಲ್ಲಿ ಹಿರಿಯರಿಗೆ ಸಹಾಯ ಮಾಡುತ್ತಿದ್ದರು .ಆ ಮೇಲೆ ರಾತ್ರಿ ಚಿಮ್ಮಿಣಿ ದೀಪದ

ಬೆಳಕಿನಲ್ಲಿ ಓದು .ಇಬ್ಬರಿಗೆ ಒಂದು ದೀಪ. ಇದರಿಂದಾಗಿ ಅಕ್ಕ ಓದುತ್ತಿದ್ದ್ದುದು ನನಗೂ ಬಾಯಿ ಪಾಠ ಆಗಿ ಬರುತ್ತಿತ್ತು .

ಆಗೆಲ್ಲ ಅಧ್ಯಯನ ಎಂದರೆ ಪಾಠ  ಪುಸ್ತಕ ಮತ್ತು ನೋಟ್ಸ್ ಉರು ಹಾಕುವುದೇ ಆಗಿತ್ತು .

                   ಈಗ  ಒಪ್ಪಕ್ಕ ಅಜ್ಜಿ ಆಗಿದ್ದಾಳೆ .ನಮಗಂತೂ ಈಗಲೂ ನಮ್ಮನ್ನು ಕೈ ಹಿಡಿದು ಹೆಮ್ಮೆಯಿಂದ ನಡೆಯುತ್ತಿದ್ದ

ಅಕ್ಕನಗಿಯೇ ಇದ್ದಾಳೆ .


ಗುರುವಾರ, ಅಕ್ಟೋಬರ್ 10, 2013

ಸಾರ್ಥಕ ಶತಮಾನದ ಹೊಸ್ತಿಲಲ್ಲಿ ನನ್ನ ಶಾಲೆ

                             

 ನನ್ನ ಪ್ರಾಥಮಿಕ ವಿದ್ಯಾಭ್ಯಾಸ  ಬೋರ್ಡ್ ಹೈಯರ್ ಎಲಿಮೆಂಟರಿ ಶಾಲೆ ಕನ್ಯಾನ .ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ

ತಾಲೂಕಿನಲ್ಲಿ ಇದೆ .ಕೇರಳ ಗಡಿಗೆ ತಾಗಿ ಇರುವ ಹಳ್ಳಿ   ಶಾಲೆ .ಕನ್ಯಾನ ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಇದೆ.ಉತ್ತರಕ್ಕೆ

ತಲೆಯೆತ್ತಿ ನಿಂತ ಕಳಂಜಿಮಳೆ ಕನ್ಯಾನ ಗ್ರಾಮವನ್ನು ಮಂಚಿ ಕೊಲ್ನಾಡು ಗಳಿಂದ ಪ್ರತ್ಯೇಕಿಸುತ್ತದೆ .ಈ ಗುಡ್ಡ ದಾಟಿ

ನಮ್ಮ ಹೈ ಸ್ಕೂಲ್ ಗೆ ವಿದ್ಯಾರ್ಥಿಗಳು ಬರುತ್ತಿದ್ದರು . ದಕ್ಷಿಣ ದಲ್ಲಿ ಪಿಲಿ೦ಗುಳಿ ಶಿರಂಕಲ್ಲು .ವಿಟ್ಲದಿಂದ ಬರುವ ಮುಖ್ಯ ರಸ್ತೆ

ಕಳ೦ಜಿಮಲೆಯ ತಳ ಭಾಗಕ್ಕೆ ಸುತ್ತಿ ಬಂದು ಕನ್ಯಾನದಲ್ಲಿ ಕವಲೊಡೆದು ಒಂದು ಉಪ್ಪಳ ಕ್ಕೂ ಇನ್ನೊಂದು ಮಂಜೆಶ್ವರಕ್ಕೂ

ಹೋಗುತ್ತವೆ .ಗ್ರಾಮದ ಮೂಲೆ ಮೂಲೆಗಳಿಂದ ಮಕ್ಕಳು ನಡೆದು ಶಾಲೆಗೆ ಬರುತ್ತಿದ್ದರು .

ನಮ್ಮ ಮನೆ ಅಂಗ್ರಿ  ಕನ್ಯಾನ ಗ್ರಾಮದ ಒಂದು ಮೂಲೆಯಲ್ಲಿ ಅಳಿಕೆ ಗ್ರಾಮಕ್ಕೆ ತಾಗಿ ಇತ್ತು .ಅಲ್ಲಿಂದ ಕನ್ಯಾನಕ್ಕೆ ಮೂರು

ಮೈಲು .ಎರಡು ಮೂರು ಕಾಲು ದಾರಿಗಳಿದ್ದವು .ಹೆಚ್ಚಾಗಿ ಕಿರಿನ್ಚಿಮೂಲೆ  ಕೆಪ್ಲ ಗುಡ್ಡೆ ಗಾಗಿ ಹೋಗುತ್ತಿದ್ದೆವು .ಹೊರಡುವಾಗ

ನಮ್ಮ ಏಳೆಂಟು ಮಂದಿಯ  ಸೈನ್ಯ  ದಾರಿಯಲ್ಲಿ   ಸೇರ್ಪಡೆಯಿಂದ ಹತ್ತಿಪ್ಪತ್ತು ಮಕ್ಕಳ ದಂಡೇ ಆಗುತ್ತಿತ್ತು. ಸಣ್ಣ ಮಕ್ಕಳು

ದೊಡ್ಡವರ ಸುಪರ್ದಿಯಲ್ಲಿ .ಹೊಲ ಗದ್ದೆ ,ಗುಡ್ಡ  ಝರಿ ಗಳನ್ನು ದಾಟಿ ಹೋಗುವ ನಮಗೆ ಪ್ರಕೃತಿಯಿಂದಲೇ ಮೊದಲ

ಪಾಠ ಆಗುತ್ತಿತ್ತು.ಜೊತೆಗೆ ನಮಗರಿವಿಲ್ಲದಂತೆಯೇ ವ್ಯಾಯಾಮ .

(ಮುಂದುವರಿಯುವುದು)

ಬುಧವಾರ, ಅಕ್ಟೋಬರ್ 2, 2013

ಬೆಲ್ಟ್ ಏರಿಯ

ಬೆಲ್ಟ್ ಏರಿಯ  - ಈ ಶಬ್ದ ನೀವು ಕೇಳಿರಲಿಕ್ಕಿಲ್ಲ.೧೯೭೭ ನೇ ಇಸವಿ ಗೆ ಮೊದಲು ಅಂತರ್ ರಾಜ್ಯ ಆಹಾರ ಧಾನ್ಯ


ಸಾಗಣೆಗೆ ನಿರ್ಬಂಧ ಇತ್ತು .ಇದರ ಪ್ರಕಾರ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಆಹಾರ ಧಾನ್ಯಗಳನ್ನು ಸರಕಾರದ


ಅನುಮತಿಯಿಲ್ಲದೆ ಸಾಗಿಸುವಂತೆ ಇಲ್ಲ. ಇದಕ್ಕಾಗಿ ಕೇರಳ ಗಡಿಗಿಂತ ಹತ್ತು ಹನ್ನೆರಡು ಮೈಲು ಈ ಕಡೆ ಮುಖ್ಯ ರಸ್ತೆಯಲ್ಲಿ

ತಪಾಸಣಾ ಗೇಟ್ ಹಾಕಿದ್ದರು .ಈ ಗೇಟ್ ನಿಂದ ಕೇರಳ ಗಡಿಯ ವರೆಗೆ ಇರುವ ಪ್ರದೇಶವನ್ನು  ಬೆಲ್ಟ್ಏರಿಯ ಎಂದು

ಕರೆಯುತ್ತಿದ್ದರು.ಕನ್ಯಾನ ,ಕರೋಪಾಡಿ ,ಅಳಿಕೆ ಗ್ರಾಮಗಳು ಇದರ ವ್ಯಾಪ್ತಿಯಲ್ಲಿ ಬರುತ್ತಿದ್ದವು .ವ್ಯಾವಹಾರಿಕವಾಗಿ ಇದು

ಬೇರೆ ರಾಜ್ಯದಂತೆ ಆಗಿತ್ತು .ಕೇಂದ್ರ ಭಾಗದಿಂದ ಬೆಲ್ಟ್ ಏರಿಯದೊಳಗೆ ಆಹಾರ ಧನ್ಯ ಸಾಗಣೆಗೆ ನಿಷೇಧ ಇತ್ತು .


ಸಮಾರಂಭಗಳಿಗೆ  ತಹಶೀಲ್ದಾರ್ ಅವರ ವಿಶೇಷ ಅನುಮತಿ (ಪರ್ಮಿಟ್ ) ಪಡೆದು ಧಾನ್ಯಗಳನ್ನು ಸಾಗಿಸ ಬೇಕಿತ್ತು .

                     ವಿಟ್ಲದ ಸಮೀಪ ಉಕ್ಕುಡ ದಲ್ಲಿ ಒಂದು ತಪಾಸಣಾ ಗೇಟ್ .ಇಲ್ಲಿ ಎಲ್ಲಾ ವಾಹನಗಳನ್ನು ನಿಲ್ಲಿಸಿ

ಚೆಕ್ ಮಾಡುತ್ತಿದ್ದರು .ಮೀನು ಮಾರುವ ಹೆಂಗಸರ ಬುಟ್ಟಿ,ಪ್ರಯಾಣಿಕರ ಚೀಲ ದೊಳಗೆ ಅಕ್ಕಿ ,ಅವಲಕ್ಕಿ ಇತ್ಯಾದಿ

ಇದೆಯೋ ಎಂದು ನೋಡುತ್ತಿದ್ದರು .

                                        ಬಹಳ ಮಂದಿ  ಕಾಡಿನ ದಾರಿಯ ಮೂಲಕ ತಲೆ ಹೊರೆಯಲ್ಲಿ ಅಕ್ಕಿಯನ್ನು ಕೇರಳಕ್ಕೆ

ಸಾಗಿಸಿ ಹಣ ಸಂಪಾದಿಸುತ್ತಿದ್ದರು .ಕೆಲವರು ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲಿಗೆ ಹೋದದ್ದೂ ಇದೆ .ಈ ಸಂಬಂಧ

ಅನೇಕ ಕೇಸುಗಳು ಇನ್ನೂ ಇತ್ಯರ್ಥವಾಗಿಲ್ಲವೆಂದು ಓದಿದ ನೆನಪು.ಸಂದರ್ಭಾನುಸಾರವಾಗಿ ಮನುಷ್ಯನು ಜೀವನ

ಮಾರ್ಗ ಕಂಡು ಹಿಡಿಯುತ್ತಾನೆ ಎಂಬುದಕ್ಕೆ ನಿದರ್ಶನ .

                       ಇದೇ ದೇಶದ ನಾಗರಿಕರಾಗಿ ಇದೇ ರಾಜ್ಯದ ಒಂದು  ಭಾಗವಾಗಿದ್ದೂ ಆಹಾರ ಧಾನ್ಯ ವನ್ನು ಕಳ್ಳರಂತೆ

ಸಾಗಿಸ ಬೇಕಾದ ದೌರ್ಭಾಗ್ಯ ಈ ಭಾಗ ದವರದು ಆಗಿತ್ತು .ಅರ್ಧ ಕಿಲೋ ಒಂದು ಕಿಲೋ ಅಕ್ಕಿಯನ್ನೂ ನಿರ್ದಾಕ್ಷಿಣ್ಯವಾಗಿ

ವಶ ಪಡಿಸಿ ಕೊಳ್ಳಲಾಗುತ್ತಿದ್ದ  ಆ ದೃಶ್ಯವನ್ನು ನೆನೆಸಿ ಕೊಂಡರೆ ಹೊಟ್ಟೆ ತೊಳಸಿದಂತೆ ಆಗುವುದು .

    ೧೯೭೭ರಲ್ಲಿ ಕೇಂದ್ರದಲ್ಲಿ ಜನತಾ ಸರಕಾರ ಬಂದಾಗ ಅಂತರ ರಾಜ್ಯ ಆಹಾರ ಸಾಗಾಟ ನಿರ್ಬಂಧ ತೆಗೆಯುವುದರೊಂದಿದೆ

ಈ ಗೇಟುಗಳೂ ಗತ ಕಾಲಕ್ಕೆ ಸೇರಿದವು.