ಬೆಂಬಲಿಗರು

ಭಾನುವಾರ, ಆಗಸ್ಟ್ 18, 2013

ಏರುತ್ತಿರುವ ಆತ್ಮಹತ್ಯಾ ಪ್ರಕರಣಗಳು

ಒಂದೇ ದಿನದಲ್ಲ್ಲಿ ಎರಡು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಗಳು ಚಿಕಿತ್ಸೆಗೆ ಬಂದಿವೆ .ವಿಷಪ್ರಾಶನ ಮಾಡಿ ಬಂದವರ  ಹೊಟ್ಟೆಗೆ

ನಳಿಗೆ ಹಾಕಿ ತೊಳೆದು ಪ್ರತಿ ವಿಷ ಕೊಡುತ್ತೇವೆ .ಆಸಿಡ್ ,ಎಣ್ಣೆ ಇತ್ಯಾದಿ ಸೇವಿಸಿದರೆ ಹೊಟ್ಟೆ ತೊಳೆಯುವುದು ನಿಷಿದ್ದ.


ಇತ್ತೀಚೆಗೆ ಆತ್ಮಹತ್ಯಾ ಪ್ರಕರಣಗಳು ಏರುತ್ತಿವೆ .ಕುಟುಂಬ ಕಲಹ ,ಪರೀಕ್ಷೆ ಪ್ರೇಮಪ್ರಕರಣದ ವೈಫಲ್ಯ ,ಸಾಲ ಬಾಧೆ ಹೀಗೆ

ಹಲವು ಕಾರಣಗಳು .ಇವು ಹಿಂದೆಯೂ ಇದ್ದವು .ಆದರೆ ಕೂಡು ಕುಟುಂಬ ಒಂದು ಶಾಕ್  ಅಬ್ಸೋಬರ್ ಆಗಿ ಕೆಲಸ

ಮಾಡುತ್ತಿತ್ತು .ಈಗ  ಉದ್ವೇಗ ಸೃಷ್ಟಿಸುವ ವಾತಾವರಣ ಎಲ್ಲೆಲ್ಲೂ .ತಣಿಸುವ  ಪರಿಸರ ಇಲ್ಲ.


ತಾಯಿ  ಮಗುವಿಗೆ  ಟಿ ವಿ ನೋಡುವುದು ಕಮ್ಮಿ ಮಾಡಿ ಸ್ವಲ್ಪ ಹೊರಗೆ ಆಡು ಅಥವಾ ಓದು ಎಂದುದೇ ಕಾರಣ ,ಅವಮಾನ

ದಿಂದ ಮಕ್ಕಳು ಜೀವ ಕೊನೆಗಾಣಿಸಲು ಯತ್ನಿಸುತ್ತವೆ .ಇದುವೇ ಪ್ರಕರಣಕ್ಕೆ ಅಮ್ಮನ ಬದಲು ಶಾಲೆಯ ಶಿಕ್ಷಕ  ಕಾರಣ

ನಾದರೆ  ಇಡೀ ಸಮಾಜ ಮತ್ತು ಮಾಧ್ಯಮಗಳು ಅವನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತವೆ.

ರೈತರು ಕೆಲವು ಸಾವಿರ  ಸಾಲ ಮರು ಪಾವತಿ ಸಾಧ್ಯವಾಗಲಿಲ್ಲ ಎಂದು  ಅಭಿಮಾನಕ್ಕೆ ಕುಂದು ಬಂದು ಆತ್ಮ ಹತ್ಯೆಗೆ

ಶರಣಾದರೆ  ಉದ್ದೇಶ ಪೂರ್ವಕ ಕೋಟಿ ಕಟ್ಟಳೆ ಬಾಕಿ ಇಟ್ಟವರು ರಾಜಾರೋಷವಾಗಿ ಬದುಕುತ್ತಿದ್ದಾರೆ.ಸ್ವಾಭಿಮಾನದ  ಎಲ್ಲೆ

ಎಲ್ಲಿ  ವರೆಗೆ  ಇರ ಬೇಕು ?

                   ಪ್ರವಾಹದಂತೆ  ಕಾಲವು ಬದಲಾಗುತ್ತಿದೆ .ನಮಗೆ ಯಾವುದು ಒಳ್ಳೆಯದು ಯಾವುದು ಕೆಟ್ಟುದು ಎಂದು

ನಿಂತು ಯೋಚಿಸಲು ನಮಗೆ ವ್ಯವಧಾನ ಇಲ್ಲ .ಸಮಾಜದ ಸ್ವಾಸ್ಥ್ಯ ಕೆಟ್ಟಾಗ ವೈಯುಕ್ತಿಕ ಆರೋಗ್ಯದ ಮೇಲೂ ಪರಿಣಾಮ

ಬೀರುವುದು.

                


ಬೊಜ್ಜು ಎಂಬ ಕಾಯಿಲೆ

ಬೊಜ್ಜು ಒಂದು ಕಾಯಿಲೆ. ಅಲ್ಲದೆ ಹಲವು ರೋಗಗಳ ಪೀಠಿಕೆ. ಹಿಂದೆ ಮಧ್ಯ ವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಸಮಸ್ಯೆ


ಈಗ  ಮಕ್ಕಳಲ್ಲೇ  ಆರಂಭವಾಗುತ್ತಿದೆ.ಅತಿಯಾಗಿ ತಿನ್ನುವುದು,ಕಡಿಮೆ ಶರೀರ ಶ್ರಮ  ಮೇಲ್ನೋಟಕ್ಕೆ ಕಾರಣವಾಗಿ ಕಂಡರೂ


ವಂಶವಾಹಿಗಳ  ಪಾತ್ರವೂ  ಕಂಡು ಬ೦ದಿದೆ.ಜಾಹಿರಾತುಗಳಲ್ಲಿ ಕಾಣುವ  ಚಬ್ಬಿ ಮಕ್ಕಳೇ ಆರೋಗ್ಯವಂತರು ಎಂದು

ಹೆತ್ತವರ ನಂಬಿಕೆ ಅಸ್ಟು ಸರಿಯಲ್ಲ .

ಶರೀರ ಸಾಂದ್ರತೆ ಸೂಚಕಾಂಕ (ಬಾಡಿ ಮಾಸ್ ಇಂಡೆಕ್ಸ್ ): ಶರೀರದ ತೂಕ (ಕಿಲೋಗ್ರಾಂ ಗಳಲ್ಲಿ )
                                                                               ಎತ್ತರ (ಮೀಟರ್ )Xಎತ್ತರ (ಮೀಟರ್ )


     ಈ ಸೂಚಕಾಂಕ 30 ಕ್ಕಿಂತ ಹೆಚ್ಚು ಇದ್ದರೆ  ಬೊಜ್ಜು ಎಂದು ಕರೆಯುತ್ತಾರೆ.

ಬೊಜ್ಜಿನಲ್ಲ್ಲಿಯೂ  ಹೊಟ್ಟೆ ಸುತ್ತದ  ಕೊಬ್ಬು ಹೆಚ್ಚು ಅಪಾಯಕಾರಿ.


                       ಅತಿಯಾದ ಕೊಬ್ಬು ಇರುವವರಲ್ಲಿ  ಅತಿ ರಕ್ತದ ಒತ್ತಡ ,ಹೃದಯಾಘಾತ, ಸಕ್ಕರೆ ಕಾಯಿಲೆ ,ಸ್ಟ್ರೋಕ್

ಮನಸಿನ ಖಿನ್ನತೆ ಹೆಚ್ಚು ಕಂಡು ಬರುತ್ತದೆ.ಶರೀರದ  ಭಾರ  ತಾಳಲಾರದೆ  ಕಾಲಿನ ಗಂಟುಗಳು ಅಕಾಲಿಕ ವಾಗಿ

ಸವೆದು ಸಂದಿವಾತ ಬರುತ್ತದೆ.ಅಲ್ಲದೆ ಸ್ತನ ,ಕರುಳು ಗಳ  ಕ್ಯಾನ್ಸರ್  ಸ್ಥೂಲ ವ್ಯಕ್ತಿಗಳಲ್ಲಿ ಹೆಚ್ಚು.ಪಿತ್ತ ಕೋಶದ ಕಲ್ಲು ,ನಿದ್ರೆ

ಸಂಬಂದಿ ಕಾಯಿಲೆಗಳಿಗೂ ಅತಿ ಸ್ಥೂಲಕಾಯದವರಲ್ಲಿ ಹೆಚ್ಚು .ಕಮಲೇ ಕಮಲೋತ್ಪತ್ತಿ ಎಂದಂತೆ  ಸ್ಥೂಲ ಕಾಯೇ ಸ್ಥೂಲ ಕಾಯೋತ್ಪತ್ತಿ.ಏಕೆಂದರೆ  ಬೊಜ್ಜು ಶರೀರದವರಿಗೆ  ನಡೆಯಲು ,ಕೆಲಸ ಮಾಡಲು ಬೇಗನೆ ಆಯಾಸ ಆಗುವುದರಿಂದ ತೂಕ ಇಳಿಕೆಯ ಮಾರ್ಗ ತಪ್ಪುವುದು .

ಮಿತಿಯಾದ ಆಹಾರ ,ವ್ಯಾಯಾಮ ಇವುಗಳಿಂದ ಒಂದು ಪರಿಧಿಯ ವರೆಗೆ  ಈ ರೋಗವನ್ನು ಹತೋಟಿಯಲ್ಲಿ ಇಡ ಬಹುದು .


ಮೃಷ್ಟಾನ್ನ ಸಿಕ್ಕಿದಾಗ ಅದೃಷ್ಟವೆ೦ದು  ಸಂಭ್ರಮಿಸದೆ  ಮೈ ಮುರಿದು ಕೆಲಸ ಮಾಡಬೇಕಾದಾಗ ವಿಧಿಯ ಹಳಿಯದೆ ಇರಿ .

ಅದು ನಮಗೆ ದೈವ ಕೊಟ್ಟ ವರ ಇರ ಬಹುದು.


ಶುಕ್ರವಾರ, ಆಗಸ್ಟ್ 16, 2013

ಗೊರಕೆ

ಇಂಗ್ಲಿಷ್ ನಲ್ಲಿ ಸುಖನಿದ್ರೆಗೆ ಸೌಂಡ್ ಸ್ಲೀಪ್ಎನ್ನುತ್ತಾರೆ.ನಿಜವಾಗಿಯೂ  ಗೊರಕೆ  ನಿದ್ರೆ ಅಕ್ಷರಶಃ ಸುಖ  ನಿದ್ರೆಯೇ ?


ಇಲ್ಲಿ ಸೌಂಡ್ ಇದ್ದ್ದರೂ  ಒಳ್ಳೆಯ ನಿದ್ರೆ ಅಲ್ಲ ಎನ್ನುತ್ತಾರೆ ವಿಜ್ಞಾನಿಗಳು. ಶ್ವಾಸ ಮಾರ್ಗದಲ್ಲಿ ಅಡಚಣೆ ಇರುವುದರಿಂದ

ಗೊರಕೆ ಉಂಟಾಗುವುದು.ಇದರಿಂದ ಕೆಲವೊಮ್ಮೆ ತಾತ್ಕಾಲಿಕ ಶ್ವಾಸ ಸ್ಥಂಭನ ಆಗ ಬಹುದು .ಗೊರಕೆ ಹೊಡೆಯುವವರು

                                                   
                    


ಹಟಾತ್ ಉಸಿರು ನಿಲ್ಲಿಸುವುದು ಕೇಳಿರಬಹುದು.ಇದನ್ನು  ಸ್ಲೀಪ್ ಅಪ್ನಿಯ ಎಂದು ಕರೆಯುತ್ತಾರೆ.ಇದು ಒಂದು ಕಾಯಿಲೆ.


                              ಈ ತರಹದ ನಿದ್ರೆ ಇರುವವರು ಎದ್ದಾಗ  ಇನ್ನೂ ಬಳಲಿದವರಂತೆ  ಇರುವರು .ಹಗಲಲ್ಲೂ

 ತೂಕಡಿಸುವರು .ತಲೆ ನೋವು ,ಯಾವುದೇ ಕೆಲಸದಲ್ಲಿ ಏಕಾಗ್ರತೆ ಇಲ್ಲದಿರುವುದು ಇತ್ಯಾದಿ ಇದರ ಲಕ್ಷಣಗಳು.


ಕೆಲವೊಮ್ಮೆ ಹೃದಯ ಯದ್ವಾತದ್ವಾ ಬಡಿದುಕೊಳ್ಳ ಬಹುದು.


ಈ ಕಾಯಿಲೆಗೆ ತೃಪ್ತಿಕರ ಚಿಕಿತ್ಸೆ ಕಂಡು ಹಿಡಿದಿಲ್ಲ . ತೂಕ ಇಳಿಸುವುದು ,ಶ್ವಾಸ ಮಾರ್ಗ ದ  ಅಡಚಣೆ ನಿವಾರಣಾ ಶಸ್ತ್ರ ಚಿಕಿತ್ಸೆ

ಉಸಿರಾಟಕ್ಕೆ ಕೃತಕ  ಉಪಕರಣಗಳ ಬಳಕೆ ಇತ್ಯಾದಿ ಬಳಕೆಯಲ್ಲಿವೆ


ಆದುದರಿಂದ   ಗೊರಕೆ  ನಿದ್ರೆ ಸುಖ ನಿದ್ರೆ ಅಲ್ಲ , ರೋಗದ ಮುನ್ಸೂಚನೆ.