ಬೆಂಬಲಿಗರು

ಭಾನುವಾರ, ಜೂನ್ 30, 2013

ನನ್ನ ಹಳ್ಳಿಗೆ ನಾನೊಂದು ಕನಸಾದೆ

                                                       
I am a dream to my village ಇದು ನಾನು ಈಗ ತಾನೇ ಓದಿ ಬದಿಗಿರಿದ ಪುಸ್ತಕ .ಇದರ ಕರ್ತೃ  ಕೆನ್ನೆತ್ ಆರ್

ಲಲ್ಲ .ಟ್ರಿನಿಡಾಡ್ ನಾಡಿನ ಹೆಸರಾಂತ ವಕೀಲರು.ಮಾಜಿ ಸಂಸದ್ ಸದಸ್ಯರು.ಇವರ ರೋಚಕ ಆತ್ಮಕತೆ.

ಭಾರತೀಯರು ಶತಮಾನಗಳ ಹಿಂದೆ ಫಿಜಿ ,ಮಾರಿಷಿಯಸ್ , ತ್ರಿನಿದಾದ್ ,ಸುರಿನಾಮ್ ಮತ್ತು ಆಫ್ರಿಕಾದ ದೇಶಗಳಿಗೆ ಹಡಗುಗಳಲ್ಲಿ

ಪಯಣಿಸಿ ಅರಿಯದ ಊರಿನಲ್ಲಿ ನೆಲೆ ಕಂಡು ತಮ್ಮ ಹೊಕ್ಕುಳ ಬಳ್ಳಿ ಕಳೆದುಕೊಂಡ ಕತೆಗಳ ಬಗ್ಗೆ ನನಗೆ ಕುತೂಹಲ.

ಬಿಹಾರದ ಧರ್ಬಾಂಗಾ ಪ್ರಾಂತದ ಬಲಭದ್ರ ದಾಸ್ ಮದ್ಯಮ ವರ್ಗದಲ್ಲಿ ಜನಿಸಿದ ಹುಡುಗ.ತಂದೆಯವರು ತೀರಿಕೊಂಡ ಪ್ರಯುಕ್ತ ಜಾಣ

ಹುಗುಗ ಎಂದು ಚಿಕ್ಕಪ್ಪನ ಮನೆಯಿಂದ ಶಾಲೆಗೆ ಹೋಗುತ್ತಿದ್ದ.ಒಂದು ಬಾರಿ ಹೋಂ ವರ್ಕ್ ಪುಸ್ತಕದಲ್ಲಿ ತಪ್ಪು ಬರೆದಿದ್ದ ಹುಡುಗ.ಅದನ್ನು

ವಿಚಾರಿಸಿದ ಚಿಕ್ಕಪ್ಪನಿಗೆ ಶಾಲೆಯಲ್ಲಿ ಅಧ್ಯಾಪಕರೇ ಹಾಗೆ ಹೇಳಿ ಕೊಟ್ಟುದಾಗಿ ಸುಳ್ಳು ಹೇಳುತ್ತಾನೆ.ಆದರೆ ಮರುದಿನ ಚಿಕ್ಕಪ್ಪ ಗುರುಗಳಲ್ಲಿ

ವಿಚಾರಿಸಿದರೆ ಮಾನ ಹೋಗುತ್ತದೆಯೆಂದು ಮನೆ ಬಿಟ್ಟು ಓಡಿ ಹೋಗುತ್ತಾನೆ.ರೈಲ್ವೆ ನಿಲ್ದಾಣದಲ್ಲಿ ಚಿಂತಾಕ್ರಾಂತನಾಗಿ ಕುಳಿತಿದ್ದ 

ಹುಡುಗನನ್ನು ವಿದೇಶಗಳಿಗೆ ಕೂಲಿಗಳನ್ನೂ ಸರಬರಾಜು ಮಾಡುವ ದಲಾಲಿ ಪುಸಲಾಯಿಸಿ ಕಲ್ಕತ್ತಾ ನಗರಕ್ಕೆ ಕರೆದುಕೊಂಡು

ಹೋಗುತ್ತಾನೆ.ಅಲ್ಲಿ ಕೂಡಿಹಾಕಿದ್ದ ಇಂತಹ ಅನೇಕರನ್ನು ಹಡಗಿನ ಮೂಲಕ ತ್ರಿನಿದಾದ್ ನಾಡಿಗೆ ರವಾನಿಸುತ್ತಾರೆ.ಗೊತ್ತು ಗುರಿ ಯಿಲ್ಲದ
                                                       
ನಾಡು .ತಮ್ಮ ಮನೆತನದ ಹೆಸರು ಕೆಡುವುದು ಬೇಡ ಎಂದು ತನ್ನ ಹೆಸರನ್ನುರಾಮ್ ಭಾಜೂ ಎಂದು  ಬದಲಾಯಿಸಿ ಕೊಡುತ್ತಾರೆ,

ತ್ರಿನಿದಾದ್ ನ ಕ್ಯಾಲಿಫೋರ್ನಿಯ ಪ್ರಾಂತ್ಯದ ಡೌ ಗ್ರಾಮದ ಕಬ್ಬಿನ ತೋಟದಲ್ಲಿ ಕೂಲಿ ಕೆಲಸಕ್ಕೆ ಹುಡುಗನನ್ನು ಹಾಕುತ್ತಾರೆ,ಮತ್ತೇನು


ಮಾಡುವುದು ಹಿಂತಿರಿಗುವಂತಿಲ್ಲ.ಅಲ್ಲಿಯೇ ಬೆಳೆದು ದೊಡ್ಡವನಾದ ರಾಮ್ ಭಾಜೂ ರಾಮ್ ಕಲ್ಯ ಎಂಬ ಬಿಹಾರಿ ಹುಡುಗಿಯನ್ನು


ಮದುವೆಯಾಗುತ್ತಾನೆ.ಕಾಂತ.,ಕವಾಲಿ(ಹುಡುಗಿ),ಮತ್ತು ರಾಮ್ ಶಾಂತ ಎಂಬ ಮೂರು ಮಕ್ಕಳಾದುವು.ದುರದ್ರುಸ್ತವಶಾತ್  ಪತ್ನಿ


ಮಕ್ಕಳನ್ನು ಬಿಟ್ಟು ಬೇರೆ ಯುವಕನೊಡನೆ ಓಡಿ ಹೋಗುತ್ತಾಳೆ.ರಾಮ್ ಭಾಜೂ ಪುನ ವಿವಾಹ ವಾಗದೆ ಮಕ್ಕಳನ್ನು ಸಲಹುತ್ತಾನೆ,ಓಡಿ

ಹೋದವಳನ್ನು ನಿಂದಿಸಲಿಲ್ಲ.(ಮಾಸ್ತಿಯವಯ ಕಟ್ಟಿಗೆಯನ ಕತೆ ನೆನಪಿಸುತ್ತದೆ.)
ಈ ಮಕ್ಕಳ ಪೈಕಿ ರಾಮ್ ಶಾಂತ ನೆ ಚಿಕ್ಕವನು.ತಾಯಿಯ ಆರೈಕೆ ಕಂಡವನಲ್ಲ .ಹುಡುಗನಾಗಿ ಕಬ್ಬಿನ ತೋಟ ,ಸಕ್ಕರೆ ಕಾರ್ಖಾನೆ ಗಳಲ್ಲಿ


ಕೆಲಸ.ತಂದೆಯವರಿಂದ ಉತ್ತಮ ಸಂಸ್ಕಾರ.ಕಳ ಬೇಡ ,ಹುಸಿಯ ನುಡಿಯಲು ಬೇಡ ದೇವರನ್ನು ನಂಬು ,ನಂಬಿ ಕೆಟ್ಟವರಿಲ್ಲ ,ಜೀವ

ಹೋದರೂ ಸರಿ ಚಾರಿತ್ರ್ಯ ಕೆಡಿಸಿಕೊಳ್ಳದೆ ಇರು ಇವು ತಂದೆ ಯವರು ತೋರಿದ ದಾರಿ .


ರಾಮ್ ಭಾಜೂ ಅಸೌಖ್ಯ ದಿಂದ ತೀರಿಕೊಂಡ ಮೇಲೆ ಕಿರಿಯ ರಾಮ ಶಾಂತ ದಿಕ್ಕಿಲ್ಲದವನಾಗಿ ಬಿಡುತ್ತಾನೆ.ಆಗ ಬರುತ್ತಾಳೆ ಗಾಡ್

ಮದರ್ .ಈಕೆ ಮನೆ ಕೆಲಸಕ್ಕೆ ನಗರಕ್ಕೆ ಹುಡುಗನ್ನು ಒಯ್ಯುತ್ತಾಳೆ.ಅಲ್ಲಿ ಮಗನಂತೆ ನೋಡಿ ಕೊಂಡು ಶಾಲೆಗೆ ಸೇರಿಸುತ್ತಾಳೆ.



ಶಾಲೆಯಲ್ಲಿ ಹೆಸರು ಕೆನ್ನೆತ್ ಲಲ್ಲ ಎಂದು ದಾಖಲಿಸುತ್ತಾರೆ.ಕೆನ್ನೆತ್ ಆದರೂ ಹಿಂದೂ ಧರ್ಮ ಬಿಡುವುದಿಲ್ಲ .ಮುಂದೆ ಇಂಗ್ಲಂಡ್ ಗೆ ತೆರಳಿ


ಬ್ಯಾರಿಸ್ಟರ್ ಪದವಿ ಗಳಿಸಿ ಕ್ರಮೇಣ ಹೆಸರಾಂತ ವಕೀಲ ರಾಗಿ , ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಾರೆ.ದೇಶದ ಅಧ್ಯಕ್ಷರಾಗುವ

ಯೋಗ ಕೂದಲ ಎಳೆಯಲ್ಲಿ ತಪ್ಪುತ್ತದೆ.
                                                   
ಮುಂದೆ ತಮ್ಮ ಪೂರ್ವಜರ ನಾಡಿಗೆ ಬೇಟಿ ನೀಡುತ್ತಾರೆ.ಮನೆಯವರನ್ನು ಕಾಣುವ ಭಾಗ್ಯ ಸಿಗುವುದಿಲ್ಲ
.
ಇದು ಕೆನ್ನೆತ್ ಲಲ್ಲಾ ರ ಕತೆ,ಇದು ಶಿವನರೈನ್ ಚಂದ್ರ ಪಾಲ್ .ರೋಹನ್ ಕೆನ್ನಾಯ್ ಅವರ ಕತೆ ಆಗ ಬಹುದು.

ಬಾಲಂಗೋಚಿ.:ಈ ಪುಸ್ತಕವನ್ನು ಪ್ರಕಟಿಸಿದವರು ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಅವರು.ಈಗ ನೀವು ಏನ್ ಬಿ ಟಿ ಯ

ಪುಸ್ತಕಗಳನ್ನು ಆನ್ಲೈನ್ ತರಿಸಿಕೊಳ್ಳ ಬಹುದು.ಒಳ್ಳೆಯ ಮಕ್ಕಳ ಪುಸ್ತಕಗಳು ಇವೆ.ಇವರ ಸೇವೆ ಉತ್ತಮವಾಗಿದೆ.

ಈ  ಪುಸ್ತಕದಲ್ಲಿ ಗೋಯಿಂಗ್ ಔಟ್ ಡ್ರೆಸ್ ಎಂಬ  ಶಬ್ದ ಬರುತ್ತದೆ.ನಮ್ಮಲ್ಲೂ  ಹೊರಗೆ ಹೋಗುವ ಉಡುಪು ಎಂದು ಇರುತ್ತಿತ್ತು.ನೆಂಟರ

ಮನೆಗೆ ಹೋಗುವಾಗ ,ಮದುವೆ ಸಮಾರಂಭಗಳಿಗೆ ಮಾತ್ರ ಮಿಸಲಿದ್ದ ಡ್ರೆಸ್.ಇದನ್ನು ಜಿರಳೆ ಗುಳಿಗೆಗಳ ರಕ್ಷಣೆಯಲ್ಲಿ ಟ್ರಂಕ್ ನಲ್ಲಿ

ಇಸ್ತ್ರಿ ಯಿಲ್ಲದೆ ಮಡಿಸಿ ಇಡುತ್ತಿದ್ದರು.ಅದರ ವಾಸನೆ (ಪರಿಮಳ?) ಮತ್ತು ಜನ ತುಂಬಿದ ಬಸ್ಸಿನ ಯಾತ್ರೆ ಸೇರಿ ಉಡುಪಿನ ಮೇಲೆ

ವಾಂತಿಯ  ಸಿಂಚನ ಆಗುತ್ತಿತ್ತು.

ಬುಧವಾರ, ಜೂನ್ 26, 2013

ಹೃದಯ ಕಾಯಿಲೆಯಲ್ಲಿ ದಮ್ಮು ಕಟ್ಟುವುದು ಯಾಕೆ ?

ದಮ್ಮು  ಕಟ್ಟುವುದೆಲ್ಲಾ  ಬ್ರೊಂಕಿಯಲ್ ಅಸ್ತಮ ಅಲ್ಲ. ಹೃದಯ  ಕಾಯಿಲೆಯಲ್ಲೂ ದಮ್ಮು ಬರುತ್ತದೆ. ಹೃದಯದ ಕೊರೋನರಿ

ರಕ್ತನಾಳ ಗಳು  ಕೊಬ್ಬು ತುಂಬಿ ಒಳಗೆ ಸಪುರವಾದಾಗ ಹೃದಯದ ಮಾಂಸ ಖಂಡ ಗಳಿಗೆ  ರಕ್ತ ಸಂಚಾರ ಕಡಿಮೆಯಾಗುತ್ತದೆ.

ವಿಶ್ರಾಂತ ಸ್ತಿತಿಯಲ್ಲಿ ಎಲ್ಲಾ ಸರಿಯಿದ್ದರೂ  ಕಷ್ಟದ ಕೆಲಸ ಮಾಡುವಾಗ ,ಏರಿ ಏರುವಾಗ ,ಓಡುವಾಗ ಬೇಕಾದ ಹೆಚ್ಚಿನ ರಕ್ತ --

ಮತ್ತು ಅದರ ಮೂಲಕ ಆಮ್ಲಜನಕ ಸಿಕ್ಕದಿದ್ದರೆ  ಎದೆ ನೋವು ಅಥವಾ ದಮ್ಮು ಕಟ್ಟಿದ ಅನುಭವ ಆಗುವುದು.



ಇನ್ನೊಂದು ಕಾರಣ ಶ್ವಾಶಕೊಶದಲ್ಲಿ  ನೀರು ತುಂಬುವುದು.ನಿಮಗೆ ತಿಳಿದಂತೆ ದೇಹದ  ಸಕಲ ಮೂಲೆಗಳಿಂದ ಅಶುದ್ದ ರಕ್ತ

ಅಭಿಧಮನಿಗಳ ಮೂಲಕ ಹೃದಯದ ಬಲ ಬಾಗ ಕ್ಕೆ  ಬಂದು ಅಲ್ಲಿಂದ  ಶುದ್ದೀಕರಣ ಕ್ಕಾಗಿ  ಶ್ವಾಶಕೊಶಗಳಿಗೆ

ರವಾನಿಸಲ್ಪಡುತ್ತದೆ.ಅಲ್ಲಿಂದ ಶುದ್ದ ರಕ್ತ  ಎಡ ಭಾಗದ ಹೃದಯಕ್ಕೆ ಬಂದು ದೇಹದ ಎಲ್ಲಾ ಮೂಲೆಗಳಿಗೆ ಪಂಪ್

ಮಾಡಲ್ಪಡುತ್ತದೆ. ಈಗ ಹೃದಯಾಘಾತವಾಗಿ ಎಡ ಹೃದಯದ ಮಾಂಸ ಖಂಡಗಳು ಕಾರ್ಯ ವಿಮುಖವಾದರೆ

ಅವು ರಕ್ತವನ್ನು ಹೊರಕಳಿಸಲು  ಸಾಧ್ಯವಾಗುವುದಿಲ್ಲ .ಇದರಿಂದ ಶ್ವಾಸಕೋಶದಿಂದ ರಕ್ತವನ್ನು ಸ್ವೀಕರಿಸಲು ಸ್ಥಳಾವಕಾಶ

ಕಡಿಮೆಯಾಗಿ ಅದು ಶ್ವಾಶ ಕೋಶದಲ್ಲಿ ಉಳಿದು  ತೀವ್ರ ತರದ ದಮ್ಮು ಉಂಟು ಮಾಡುತ್ತದೆ.ಇದನ್ನು  ವೈದ್ಯಕೀಯ

ಭಾಷೆಯಲ್ಲಿ ಪಲ್ಮನರಿ  ಎಡಿಮ  ಎಂದು ಕರೆಯುತ್ತಾರೆ.ಈ ಸಂಧರ್ಭದಲ್ಲಿ  ಆಮ್ಲಜನಕ ,ಶರೀರದಿಂದ  ನೀರು ಮೂತ್ರ ರೂಪದಲ್ಲಿ

ಹೋಗಲು  ಮತ್ತು ಅಭಿದಮನಿಗಳನ್ನು ಹಿಗ್ಗಿಸಿ ಅವು ಹೃದಯಕ್ಕೆ ತರುವ ರಕ್ತದ ಪ್ರಮಾಣ ಕಮ್ಮಿ ಮಾಡುವ  ಔಷಧ ಕೊಟ್ಟು

ಶಮನ ಸಿಗುವಂತೆ ಮಾಡುತ್ತಾರೆ.


ಮಂಗಳವಾರ, ಜೂನ್ 25, 2013

ಹೃದಯಾಘಾತ

ಹೃದಯ ದೇವರು  ನಿರ್ಮಿಸಿದ ಅದ್ಬುತ  ಪಂಪ್.ದೇಹದ ಎಲ್ಲಾ ಜೀವಕೋಶಗಳಿಗೆ ಆಹಾರ ಮತ್ತ್ತು ಆಮ್ಲಜನಕ ಸರಬರಾಜು

ಮಾಡುವುದಲ್ಲದೆ ಅಶುದ್ದ್ದ ರಕ್ತವನ್ನು ಸ್ವೀಕರಿಸಿ ಸ್ವಾಶಕೊಶಕ್ಕೆ ಶುದ್ದೀಕರಣಕ್ಕಾಗಿ ಕಳುಸಿಸಿ  ಕೊಡುತ್ತದೆ.ಅದರಲ್ಲೂ ಮೆದುಳಿನ 

ಜೀವಕೋಶಗಳು ಬಹಳ ಸೂಕ್ಷ್ಮ .ಕೆಲ ನಿಮಿಷಗಳ ರಕ್ತ ಸರಬರಾಜು ನಿಂತರೂ ಅವು ಸತ್ತು ಹೋಗುವವು.ಆದುದರಿಂದ

 ಯಾವುದೇ ವಿಶ್ರಾಂತಿ ಇಲ್ಲದೆ ಕೆಲಸ ಮಾಡುವ ಅಂಗ ಹೃದಯ. ಈ ಹೃದಯಕ್ಕೂ ರಕ್ತ ಸರಬರಾಜು ಬೇಕು. ಅದಕ್ಕೆಂದೇ 

ಮಹಾ ಅಪಧಮನಿ (ಅಯೋರ್ತ) ದಿಂದ ಉದ್ಭವಿಸುವ   ಕೊರೋನರಿ ರಕ್ತ ನಾಳಗಳು  ಹೃದಯದ ಮಾಂಸ ಖಂಡಗಳಿಗೆ 

ಬೇಕಾದ ಆಹಾರ ಮತ್ತು  ಆಮ್ಲಜನಕ ಒದಗಿಸುತ್ತವೆ. ಡಿಸೇಲ್  ಟ್ಯಾಂಕರ್  ಲಾರಿ ಗೆ  ಇಂಧನ ಒದಗಿಸಲು ಬೇರೆ  ಟ್ಯಾಂಕ್ 

ಇದೆಯಲ್ಲವೇ?
                                                           
ಹೃದಯದ ರಕ್ತ ನಾಳಗಳು.
ಬಲ ಮತ್ತು ಎಡ  ಎಂಬ ಎರಡು ಮುಖ್ಯ ನಾಳಗಳು ,ಎಡದ ಹೃದಯದ ಮಾಂಸ ಖಂಡಗಳು ಹೆಚ್ಚು 

ಕೆಲಸ ಮಾಡುವುದರಿಂದ ಎಡದ ರಕ್ತನಾಳ  ದೊಡ್ಡದಿದ್ದು ಎರಡು ಮುಖ್ಯ ಕವಲು ಗಳಾಗಿ  ಒಡೆಯುತ್ತದೆ.

ಇವು ಮೂರು ಮುಖ್ಯ ರಕ್ತನಾಳಗಳು. ಇವುಗಳು ಬ್ಲಾಕ್ ಆದಾಗ ಸಿಂಗಲ್ ವೆಸ್ಸೆಲ್  ಬ್ಲಾಕ್ , ಡಬ್ಬಲ್ ಮತ್ತು ಟ್ರಿಪಲ್ 

ವೆಸ್ಸೆಲ್ ಬ್ಲಾಕ  ಎಂದು ವೈದ್ಯರು ಕರೆಯುತ್ತಾರೆ. ಇಂಗ್ಲಿಷ್ ನಲ್ಲಿ ರಕ್ತನಾಳ ಕ್ಕೆ  ಬ್ಲಡ್ ವೆಸ್ಸಲ್ ಎಂದೂ ಕರೆಯುತ್ತಾರೆ.

ಈ ಕೊರೋನರಿ  ರಕ್ತನಾಳ ಗಳ ಒಳಗೆ  ಕೊಲೆಸ್ತೆರೋಲ್ ಮತ್ತು ಕೊಬ್ಬಿನ ಅಂಶ ಕುಳಿತು ರಕ್ತ ಸಂಚಾರಕ್ಕೆ 

ತಡೆಯುಂಟು ಮಾಡಿದರೆ ಹೃದಯ ದ ಮಾಂಸ ಖಂಡಗಳು ನೋವಿನಿಂದ  ಕೂಗುತ್ತವೆ. ಆ ಕೂಗೆ ಎದೆ ನೋವು.

ಹೃದಯ ಸಂಬಂದಿ ಎದೆ ನೋವು. ಈ ನೋವು  ಎದೆಯ ಮಧ್ಯ ಭಾಗದಲ್ಲಿ ಒತ್ತಿದಂತ  ಅನುಭವ , ಎಡದ ಕೈಗೂ 

ನೋವು ಪಸರಿಸ ಬಹುದು.  ರಕ್ತನಾಳ ಪೂರ್ಣವಾಗಿ ಬ್ಲಾಕ್  ಆದರೆ  ಅದನ್ನು ಅವಲಂಬಿಸಿಸುವ ಹೃದಯದ 

ಮಾಂಸ ಖಂಡಗಳು ಉಪವಾಸದಿಂದ ಸಾಯುತ್ತವೆ. ಇದನ್ನ್ನುರ್ ಮಯೊ ಕಾರ್ಡಿಯಲ ಇನ್ಫಾರ್ಕ್ಶನ್  ಅಥವಾ 

ಹೃದಯಾಘಾತ  ಎಂದು ಕರಯುತ್ತಾರೆ.ಇದು ತಿವ್ರವಾಗಿದ್ದರೆ ಮೆದುಳಿಗೆ ರಕ್ತ ಇಲ್ಲದೆ ವ್ಯಕ್ತಿ ಸಾವನ್ನು ಅಪ್ಪುವನು.

ಸಕ್ಕರೆ ಕಾಯಿಲೆ ಇರುವ ರೋಗಿಗಳಲ್ಲಿ ನರಗಳು  ಭಾದಿಸಲ್ಪತ್ತಿರುವುದರಿಂದ  ಅವರಿಗೆ ಉಳಿದವರಂತೆ ಎದೆ ನೋವು 

ಬಾರದಿರಬಹುದು.ಹೃದಯದ  ಅಡಿ ಭಾಗ ದ  ರಕ್ತನಾಳ ಗಳು ಮುಚ್ಚಿದ್ದರೆ  ಹೊಟ್ಟೆ ನೋವು ಬರಬಹುದು. ಇದನ್ನು 

ಗ್ಯಾಸ್ಟ್ರಿಕ್ ಎಂದು ಉಪೇಕ್ಷಿಸಿ  ಅನಾಹುತ ಆದ ನಿದರ್ಶನ ಗಳಿವೆ,.

ಹೃದಯಾಘಾತ  ಯಾರಲ್ಲಿ ಬರುತ್ತದೆ?

ಸಕ್ಕರೆ ಕಾಯಿಲೆ , ಅಧಿಕ ರಕ್ತದ ಒತ್ತಡ  ಇರುವವರು, ಕುಟುಂಬದಲ್ಲಿ ಹೃದಯಾಘಾತದ ಇತಿಹಾಸ ಉಳ್ಳವರು, ಧೂಮ 

ಪಾನಿಗಳು ,  ಶಾರೀರಿಕ  ವ್ಯಾಯಾಮ ಇಲ್ಲದವರು ಈ ಮಂದಿಯಲ್ಲಿ  ಹೃದಯಾಘಾತ ಹೆಚ್ಚು.ಇತ್ತೀಚಿಗಿನ 

ಉದ್ವೇಗದ ಜೀವನ ಶೈಲಿಯೂ ಕಾರಣ. ಗಂಡಸರಲ್ಲಿ ಇದು ಹೆಚ್ಚಾದರೂ ಮುಟ್ಟು ನಿಂತ ಮೇಲೆ  ಹೆಂಗಸರೂ 

ಇದಕ್ಕೆ ಹೊರತಲ್ಲ.

ಹಿಂದಿನ ಕಾಲದಲ್ಲಿ  ಹೃದಯಾಘಾತ ದಿಂದ  ಮರಣ ಹೊಂದಿದರೆ  ಭೂತ  ಪಿಶಾಚಿಗಳನ್ನ  ದೂರುತ್ತಿದ್ದರು.

ಅನಾಯಾಸೇನ ಮರಣಂ ಎಂದು ಬಯಸುವವರಿಗೆ  ಇದು ವರ ಪ್ರಸಾದ.

ಬುಧವಾರ, ಜೂನ್ 19, 2013

Rajaji"s Prophesy

While granting independence to India Sir Winston Churchill is said to have prophesied.


Power will go to the hands of Rascals, Rogues, Free loaders & Charlatans...


All Indian Leaders will be of low calibre & men of straw...

They will have Sweet Tongues & Silly Hearts...

Giving false promises will be their game with the poor & stupid masses...

They will be Shameless & Unpatriotic in their ways while handling problems of the people...

They will fight amongst themselves for power & India will be lost in political squabbles...

Justice will be a joke...

A day will come when Air, Water & even Common Salt will be taxed in India..."
Our own  Statesman Rajaji had in 1922 in his prison diary wrote:
'We all ought to know that Swaraj will not at once or ,I think ,even for a long time to come
bring better goverment or greater happiness fo people.Elections and their corruptions.injustice, and
the power and tyranny of wealth,and inefficiency of administration ,will make a hell of life as soon
as freedom is given to us.Men will look regretfully back to the old regime of comparative justice
and efficient,peaceful,more or less honest administration.Only thing gained as race we wiil be
saved from dishonour and subordination.Hope lies only in unversal education by which right
conduct,fear of God and love will be developed among  citizens from childhood.It is only if we
succeed in this that Swraraj will mean happiness.Otherwise it will mean the grinding injustices
and tyranny of wealth.What a beautiful world it would be if everybody were just and God fearing
and realised the happiness of loving other!Yet ,there is more practical hope for ultimate
 consummation of ideal in India than elsewhere.

ಕಿಡ್ನಿ ವೈಫಲ್ಯ -೨

ಮೂತ್ರ  ಪಿಂಡಗಳ ವೈಫಲ್ಯ ಧಿಡೀರ್ ಆಗಿ (acute) ಆಗಿ ಅಥವಾ ನಿಧಾನ ( ಕ್ರೋನಿಕ್) ವಾಗಿ ಬರ ಬಹುದು.ತೀವ್ರ ರಕ್ತ ಸ್ರಾವ,

ತೀವ್ರ ತರ ಸೋಂಕು ,ವಾಂತಿ ಬೇದಿ ,ಮೂಲತ ಕಿಡ್ನಿ ರೋಗಗಳು ಧಿಡೀರ್ ವೈಫಲ್ಯಕ್ಕೆ ಕಾರಣ ವಾಗ ಬಹುದು. ನಿಧಾನ

ವೈಫಲ್ಯಕ್ಕೆ ಸಕ್ಕರೆ ಕಾಯಿಲೆ ,ರಕ್ತದ ಒತ್ತಡ ಜಾಗತಿಕವಾಗಿ ಮುಖ್ಯ ಕಾರಣಗಳು.

ಸಕ್ಕರೆ ಕಾಯಿಲೆ  ರೋಗಿಗಳ ಮೂತ್ರದಲ್ಲಿ ಸಸಾರಜನಕ (ಅಲ್ಬುಮಿನ್) ಹೋಗ  ತೊಡಗುವುದು ಈ ರೋಗ ಕಿಡ್ನಿ ಗೆ

ವ್ಯಾಪಿಸಿರುವುದರ  ಸೂಚಕ .ಆದುದರಿಂದ ಸಕ್ಕರೆ ಕಾಯಿಲೆ ಯುಳ್ಳ ರೋಗಿಗಳು ಮೂತ್ರ ಪರೀಕ್ಷೆ ಮಾಡಿಸಿ ಅಲ್ಬುಮಿನ್

ಇದೆಯೇ ಎಂದು ಆಗಾಗ್ಗೆ ನೋಡಿ ಕೊಳ್ಳ ಬೇಕು.

ಕಿಡ್ನಿಗಳು ವೈಫಲ್ಯ ತೊಡಗುತ್ತಿದ್ದಂತೆ  ಅವುಗಳು ಸೋಸುವ ರಕ್ತ ದ ಪ್ರಮಾಣ ಕಡಿಮೆ ಆಗುತ್ತಾ ಬರುತ್ತದೆ.ಇದನ್ನು

ವೈದ್ಯಕೀಯ ಭಾಷೆಯಲ್ಲಿ ಗ್ಲೋಮರ್ಯುಲಾರ್ ಫಿಲ್ತ್ರೆಶನ್ ರೇಟ್ ಎನ್ನುತ್ತಾರೆ. ಗ್ಲೋಮರುಲಾಸ್ ಎಂದರೆ ಕಿಡ್ನಿಯ  ಇಂದು

ಕಾರ್ಯ ಕಾರಿ  ಯೂನಿಟ್.ರಕ್ತ ದಲ್ಲಿ ಕಿಡ್ನಿ ಕಾರ್ಯ ಪರೀಕ್ಷೆ ( ರೀನಲ್ ಫಂಕ್ಷನ್ ಟೆಸ್ಟ್ ) ಎಂದರೆ  ರಕ್ತದ ಯೂರಿಯಾ ಮತ್ತು

ಕ್ರಿಯಾಟಿನಿನ್  ಅಳೆಯುವುದು.ಉಭಯ  ಮೂತ್ರ ಪಿಂಡಗಳ ಕಾರ್ಯ ಕ್ಷಮತೆ ಶೇಕಡಾ ೫೦ ರಷ್ಟು ನಾಶ ವಾದಾಗ  ಈ

ಅಂಶಗಳು ರಕ್ತದಲ್ಲಿ ಹೆಚ್ಚಾಗ ತೊಡಗುತ್ತವೆ .ಆದುದರಿಂದ  ಬಹಳ ಮೊದಲೇ ಈ  ರೋಗವನ್ನು ಕಂಡು ಹಿಡಿಯುವುದು ಸ್ವಲ್ಪ

ಕಷ್ಟ .


ಕಿಡ್ನಿ ವೈಫಲ್ಯ ದ ಲಕ್ಷಣಗಳು 

                                     ಶರೀರದ ಎಲ್ಲಾ ಅಂಗಗಳ ಕ್ಷಮತೆ ಕಂಮಿಯಾಗುವುದು. ಅತಿಯಾದ

ಆಯಾಸ ,ಏಕಾಗ್ರತೆ ಇಲ್ಲದಿರುವುದು ,ನಿದ್ರೆ ಕಮ್ಮಿ ,ಮಾಂಸ ಖಂಡ ಗಳು ಹಿಡಿದು ಕೊಳ್ಳುವುದು ,ರಾತ್ರಿ ಆಗಾಗ್ಗೆ ಮೂತ್ರ

ವಿಸರ್ಜನೆ ,ಚರ್ಮ ಒಣಗಿದಂತಾಗಿ ತುರಿಸುವುದು ,ಸಾಮಾನ್ಯ ಔಷಧಿಗಳಿಂದ ಗುಣವಾಗದ ರಕ್ತ ಹೀನತೆ ,ಮತ್ತು ಏರುವ ರಕ್ತದ

ಒತ್ತಡ  ,ಕೊನೆಗೆ  ಮುಖ ಕಾಲುಗಳಲ್ಲಿ ನೀರು ,ದಮ್ಮು ಕಟ್ಟುವುದು.



ಮೊದಲೇ ಹೇಳಿದಂತೆ  ಆರಂಭದಲ್ಲಿ  ಅಂತಹ ರೋಗ ಕುರುಹುಗಳು ಕಾಣ ಬರುವುದಿಲ್ಲ .

ಕಿಡ್ನಿ ವೈಫಲ್ಯ ತಡೆಗಟ್ಟುವ ಮಾರ್ಗ :

ಸಕ್ಕರೆ ಕಾಯಿಲೆ ನಿಯಂತ್ರಣ ದಲ್ಲಿ ಇಡುವುದು .ಅದರಂತೆ  ಅಧಿಕ ರಕ್ತದ ಒತ್ತಡಕ್ಕೆ  ಯಾವುದೇ ರೋಗ ಲಕ್ಷಣ ಇಲ್ಲದಿದ್ದರೂ

ಚಿಕಿತ್ಸೆ ಮಾಡುವುದು .ನೋವಿನ ಮಾತ್ರೆಗಳನ್ನು ಅತಿಯಾಗಿ ಸೇವನೆ ಮಾಡದಿರುವುದು .ಮೂತ್ರ ನಾಳದ ಕಲ್ಲು , ಪ್ರಾಸ್ಟೇಟ್

ರೋಗಗಳಿಗೆ ಸರಿಯಾದ ಚಿಕಿತ್ಸೆ ಮಾಡುವುದೂ ಅಗತ್ಯ.

ಕಿಡ್ನಿ ವೈಫಲ್ಯ ಕಂಡು ಹಿಡಿಯುವುದು.

ರೋಗಿಯ ರೋಗ ಇತಿಹಾಸ, ಮೂತ್ರ ಮತ್ತು ರಕ್ತ ಪರೀಕ್ಷೆ ,ಅಲ್ಟ್ರಾ ಸೌಂಡ್ ಸ್ಕ್ಯಾನ್  ,ಅವಶ್ಯ ಬಿದ್ದರೆ  ಕಿಡ್ನಿ ಬಯೋಪ್ಸಿ

 ಮಾಡಿಸುವರು. ಸ್ಕ್ಯಾನ್ ನಲ್ಲಿ ಕಿಡ್ನಿ ಯಲ್ಲಿ ಜನ್ಮತ  ಊತ , ಕಲ್ಲುಗಳು ,ಪ್ರಾಸ್ಟೇಟ್ ಇತ್ಯಾದಿಗಳನ್ನು ಕಂಡು ಹಿಡಿಯ

ಬಹುದಲ್ಲದೆ  ವೈಫಲ್ಯ ದೊಡನೆ ಕುಂದುತ್ತ್ತಿರುವ  ಕಿಡ್ನಿಗಳ ಗಾತ್ರ ಗಳನ್ನು  ಗಮನಿಸುತ್ತಾರೆ.

ಚಿಕಿತ್ಸೆ .

ಆರಂಭದ ಹಂತದಲ್ಲಿ  ಕಟ್ಟು ನಿಟ್ಟಿನ  ಸಕ್ಕರೆ ಹಾಗೂ ರಕ್ತ ಒತ್ತಡ ದ ಹತೋಟಿ ,ರಕ್ತ ಉಂಟಾಗಲು ಏರಿಥ್ರೋಪೋಯಿಟಿನ್ ,


ಕ್ಯಾಲ್ಸಿಯಂ ಮತ್ತು ಪರಿಷ್ಕೃತ  ವಿಟಮಿನ್ ಡಿ ಯ ನ್ನು ಕೊಟ್ಟು  ರೋಗವನ್ನು ನಿಯಂತ್ರಣದಲ್ಲಿ  ಇಡಬಹುದು.


ಕಿಡ್ನಿಗಳು ತೀರಾ ಹದೆಗೆಟ್ತಾಗ  ಡಯಾಲಿಸಿಸ್ ಮಾಡುತ್ತಾರೆ. ಎಂದರೆ  ಕೃತಕ ಕಿಡ್ನಿ  ಯಂತ್ರದ ಮೂಲಕ ರೋಗಿಯ



ರಕ್ತವನ್ನು ಹಾಯಿಸಿ ಶುದ್ಧ ಗೊಳಿಸುತ್ತಾರೆ .
                                               

ಕಿಡ್ನಿಯ ಕಸಿ


  .ಇಲ್ಲಿ ದಾನಿಯ ಒಂದು ಕಿಡ್ನಿಯನ್ನು  ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು  ರೋಗಿಗೆ  ಜೋಡಿಸುವರು.ಕಸಿಯಾದ ಮೇಲೂ


ಅದನ್ನು ರೋಗಿಯ ಶರೀರ ತಿರಸ್ಕರಿಸದಂತೆ  ನಿರಂತರೆ ಔಷಧಿ ಸೇವನೆ ಅವಶ್ಯ.

                                                    


( ಮೇಲಿನ ಚಿತ್ರಗಳ ಮೂಲಕ್ಕೆ ಆಭಾರಿ)

ಮಂಗಳವಾರ, ಜೂನ್ 18, 2013

ಕಿಡ್ನಿ(ಮೂತ್ರ ಪಿಂಡ) ವೈಫಲ್ಯ (Kidney failure) ೧

ಹಾರ್ಟ್ ಫೈಲ್ಯುರ್ ಬಗ್ಗೆ  ಎಲ್ಲರೂ ಕೇಳಿರುತ್ತೀರಿ.ಅದರಂತೆ ಕಿಡ್ನಿ(ಮೂತ್ರ ಪಿಂಡ)  ಫೇಲ್ಯೂರೂ ಇದೆ.ಬಹಳ ಮಂದಿಗೆ


ಮೂತ್ರ ಪಿಂಡಗಳ ಬಗ್ಗೆ ಮಾಹಿತಿ ಇಲ್ಲ. ಹಲವರು ವೃಷಣಗಳನ್ನೇ ಕಿಡ್ನಿ ಎಂದು ಕರೆಯುತ್ತಾರೆ.ದೇವರು ನಮಗೆ ಎರಡು


ಕಿಡ್ನಿಗಳನ್ನು ಕೊಟ್ಟಿದ್ದಾನೆ ,ಆದರೆ ಒಂದೇ ಹೃದಯ ,ಲಿವರ್ .ಹೃದಯದಿಂದ ಪಂಪ್ ಮಾಡಲ್ಪಟ್ಟ ರಕ್ತದ  ನಾಲ್ಕನೇ ಒಂದು ಪಾಲು


ಮೂತ್ರ ಪಿಂಡಗಳಿಗೆ ಹೋಗುವುದು.ಅಂದರೆ  ವನ ಸುಮ ದೋಲ್ ಕಾರ್ಯ ನಿರ್ವಹಿಸುವ ಈ ಅಂಗದ ಮಹತ್ವ



ಅರಿವಾಗುವುದು.

                                         
 
ಕಿಡ್ನಿಗಳು  ಉದರದ  ಹಿಂಬಾಗದಲ್ಲಿ  ,ಎಂದರೆ ಬಲದ ಬದಿ ಲಿವರ್ ನ  ಹಾಗು ಎಡದ ದಲ್ಲಿ  ಸ್ಪ್ಲೀನ್ ನ
 
 
ಹಿಂದೆ  ಬೆನ್ನಿಗೆ ಸಮೀಪ  ಇರುತ್ತವೆ .(ಎದೆಗೆ ತಾಗಿ ಕೊಂಡು).ವೈದ್ಯ ಶಾಸ್ತ್ರದಲ್ಲಿ  ಕಿಡ್ನಿ ಗಳು  ಬೀನ್ಸ್ ನ  ಆಕಾರದಲ್ಲ್ಲಿ
 
 
ಇರುತ್ತವೆ ಎಂದು ಹೇಳಿದರೆ ಸಸ್ಯ ಶಾಸ್ತ್ರದಲ್ಲಿ  ಬೀನ್ಸ್   ಕಿಡ್ನಿ ಶೇಪ್ ನಲ್ಲಿ ಇರುತ್ತವೆ ಎಂದು ಕಲಿಸುತ್ತಾರೆ.
 
 
 
 ಎಲ್ಲರೂ ತಿಳಿದಿರುವಂತೆ  ಕಿಡ್ನಿ ಗಳು  ನಮ್ಮ ರಕ್ತದಿಂದ  ಅಶುದ್ದ ಅಂಶಗಳನ್ನು  ಮೂತ್ರದ ಮೂಲಕ  ಹೊರ
 
 
ಹಾಕುತ್ತವೆ .ಕಿಡ್ನಿ ಗಳು ಮುಷ್ಕರ  ಹೂಡಿದರೆ  ಕಲ್ಮಶಗಳು  ಮತ್ತು  ನೀರು ಶರೀರದಲ್ಲ್ಲಿ ಶೇಖರವಾಗಿ  ಗಾರ್ಬೇಜ್  ತುಂಬಿದ
 
 
 
ಬೆ೦ಗಳೂರಿನಂತೆ  ನಮ್ಮ  ದೇಹ ನೆರಳುತ್ತದೆ.
 
 
 
ಬಹಳ ಮಂದಿಗೆ  ತಿಳಿದಿರದಂತಹ  ಕೆಲವು ಕಾರ್ಯಗಳನ್ನೂ ಮೂತ್ರ  ಪಿಂಡಗಳು  ನಿರ್ವಹಿಸುತ್ತವೆ .ಆಮ್ಲಜನಕ  ವಾಹಕ
 
 
ಗಳಾದ  ಕೆಂಪು ರಕ್ತ ಕಣಗಳು  ಮಜ್ಜೆಯಲ್ಲಿ  ಉತ್ಪಾದನೆ  ಆಗಲು  ಪ್ರೇರಕ ವಸ್ತು  ಏರಿತ್ರೋಪೋಯ್ತಿಣ್ ಕಿದ್ನಿಗಳಲ್ಲೇ
 
 
ಉಂಟಾಗುವುದು. ಈ ವಸ್ತು ಇಲ್ಲದಿದ್ದರೆ  ರಕ್ತ ಹೀನತೆ ಉಂಟಾಗುವುದು. ಇನ್ನು ನಮ್ಮ ಎಲುಬುಗಳಿಗೆ ಬೇಕಾದ
 
 
ಕ್ಯಾಲ್ಸಿಯಂ  ರಕ್ತ ಸೇರಲು  ಡಿ  ವಿಟಮಿನ್ ಬೇಕು ತಾನೆ. ಸೂರ್ಯನ ಬೆಳಕು ಮತ್ತು ಆಹಾರದಿಂದ ಲಭ್ಯವಾದ  ಕಚ್ಚಾ
 
 
ಡಿ ಅನ್ನಾಂಗವನ್ನು ಮೂತ್ರ ಪಿಂಡಗಳು  ಪರಿಷ್ಕರಿಸಿ ಉಪಯುಕ್ತ ವಸ್ತುವಾಗಿ ಮಾರ್ಪಡಿಸುತ್ತದೆ. ಆದುದರಿಂದ
 
 
ಕಿಡ್ನಿಗಳ ಅಸಹಕಾರದಲ್ಲ್ಲಿ  ಎಲುಬುಗಳೂ  ನಶಿಸುವುವು.
 
 
ಮೂತ್ರ ಪಿಂಡಗಳ  ವೈಫಲ್ಯಕ್ಕೆ  ಕಾರಣಗಳು  ಹಲವು. ಹೆಸರಿಸಬಹುದುದಾದ ಕೆಲವು
 
 
೧  ಸಕ್ಕರೆ ಕಾಯಿಲೆ
 
೨.ಅಧಿಕ ರಕ್ತದೊತ್ತಡ.
 
೩.ಮೂತ್ರಪಿಂಡದ ಮೂಲ ಕಾಯಿಲೆಗಳು
 
೪.ಔಷಧಿಗಳು ಉದಾ  ನೋವು ನಿವಾರಕಗಳು.
 
೫.ಇಲಿ ಜ್ವರ ,ಮಲೇರಿಯಾ ದಂತಹ ಸೋಂಕುಗಳು.
 
೬.ತೀವ್ರ ರಕ್ತ ಸ್ರಾವ ,ವಾಂತಿ ಭೇದಿ .
 
 
 

ಶುಕ್ರವಾರ, ಜೂನ್ 14, 2013

ರಾಜಾಜಿಯವರ ಬಗ್ಗೆ ಎರಡು ನೆನಪುಗಳು

                                        


ನಮ್ಮ ದೇಶ ಕಂಡ  ಮುತ್ಸದ್ದಿ ರಾಜಕಾರಿಣಿ ಮಾತು ಅಪ್ರತಿಮ ಆಡಳಿತಗಾರ ರಾಜಾಜಿ.


ಭಾರತ ರತ್ನ ಸಿ ಸುಬ್ರಹ್ಮಣ್ಯಂ  ಆಗಿನ ಮದ್ರಾಸ್ ರಾಜ್ಯದ ಮುಖ್ಯ ಮಂತ್ರಿಗಳಾಗಿದ್ದ  ರಾಜಾಜಿ ಸಂಪುಟದಲ್ಲಿ

ಸಚಿವರಾಗಿದ್ದವರು. ತಮ್ಮ  ಜೀವನ ಚರಿತ್ರೆ  ಹ್ಯಾಂಡ್ ಆಫ್ ಡೆಸ್ಟಿನಿ ಯಲ್ಲಿ ತಾವು ಆಡಳಿತ ಒಳ ಹೊರಗುಗಳನ್ನು


ರಾಜಾಜಿಜಯವರಿಂದಲೇ ಕಲಿತೆ ಎಂದು ಬರೆದಿದ್ದಾರೆ. ಒಂದು ಬಾರಿ  ಯಾವುದೊ ವಿಷಯ ಚರ್ಚಿಸಲು ಫೈಲ್



ಸಹಿತ ಮುಖ್ಯಮಂತ್ರಿಗಳ ಕೊಟಡಿಗೆ ಸುಬ್ರಹ್ಮಣ್ಯ೦ ತೆರಳುತ್ತಾರೆ.ಅಲ್ಲಿ ಒಂದು ಫೈಲ್ ಬಗ್ಗೆ ಚರ್ಚೆ ಮಾಡಿ

ಅದನ್ನು ಬದಿಗಿಟ್ಟು ಇನ್ನೊಂದು ವಿಷಯಕ್ಕೆ ತೊಡಗುವಾಗ ರಾಜಾಜಿಯವರು  ಸುಬ್ರಮಣ್ಯಮ್  ಅವರಿಗೆ


ಮೊದಲ ಫೈಲಿನ  ಪಟ್ಟಿ (ದಾರ)ಕಟ್ಟಿ  ನಂತರ ಮಾತನಾಡುವಂತೆ ಹೇಳುತ್ತಾರೆ.ಯಾಕೆಂದರೆ ಪ್ರಮುಖ ನಿರ್ಧಾರ


ಗಳಿರುವ  ಫೈಲ್ ನ ಹಾಳೆಗಳು  ಅದಲು ಬದಲು ಆಗದಂತೆ ನೋಡಿಕೊಳ್ಳುವುದು ಮುಖ್ಯ ಎನ್ನುತ್ತಾರೆ.



  ಇನ್ನೊಂದು ಪ್ರಕರಣ  ನಮ್ಮವರೇ ಆದ ನಿವೃತ್ತ  ಪೋಲಿಸ್ ಅಧಿಕಾರಿ  ರತ್ನಾಕರ ರೈ ಅವರ ಜೀವನ್ ಚರಿತ್ರೆ


ಖಾದಿ ಮತ್ತು ಖಾಕಿ ಯಲ್ಲಿ ಬರುತ್ತದೆ.ಅವರು ಮದ್ರಾಸ್ ಸರ್ವಿಸ್ ನಲಿ ಇದ್ದ ದಿನಗಳು.ಆಂಧ್ರ ಪ್ರಾಂತ್ಯ ನಿರ್ಮಾಣ ವಾಗುವಾಗ


ಮದ್ರಾಸ್ ಗೆ ಸಮೀಪವಿರುವ ತಿರುತ್ತಣಿ  ನಗರ  ತಮಗೆ ಸೇರಬೇಕೆಂದು ತಮಿಳರೂ ,ತೆಲುಗರೂ  ಚಳುವಳಿ ಆರಂಬಿಸಿದರು .

ಒಂದು ದಿನ ಜನಪ್ರಿಯ ತಮಿಳ್ ನೇತಾರರು  ಭಾರೀ  ಪ್ರತಿಭಟನಾ ರಾಲಿ  ಸಂಘಟಿಸುವರಿದ್ದು ಕಾನೂನು ಸುವ್ಯವಸ್ತೆ


ಗಾಗಿ  ಲಾಟಿ ಪ್ರಯೋಗ ಬೇಕಾಗಿ ಬರಬಹುದಿತ್ತಿತ್ತು.  ಮುನ್ನಾ ದಿನ ರಾಜಾಜಿಯವರು ರತ್ನಾಕರ ರೈ ಯವರನ್ನು

ಕರೆಸಿ ತಿರುತ್ತ್ತಣಿಯಲ್ಲಿ  ಹುಣಿಸೆ ಮರಗಳ ತೋಪು ಇದೆ ,ಅವುಗಳ ಬೆತ್ತ ಮಾಡಿ ಇಟ್ಟುಕೊಳ್ಳಿ ,ಅವಶ್ಯ ಬಂದರೆ ಅದರಲ್ಲೇ


ಚಾರ್ಜ್ ಮಾಡಿ ,ಅದರಿಂದ ನೋವಾಗುತ್ತದೆ ,ಎಲುಬು ಮುರಿಯದು ಎಂದು ಸಲಹೆ ಇತ್ತರು. ಮತ್ತು ಅದು 


ನೂರಕ್ಕೆ ನೂರು ಸರಿ ಆಯಿತು ಎಂದು ಉಲ್ಲೇಖಿಸಿದ್ದಾರೆ.
                                               

ಉಗಾಂಡಾ ದ ಬಗ್ಗೆ ಎರಡು ಪುಸ್ತಕಗಳು

ಶತಮಾನಗಳ ಹಿಂದೆ ನಮ್ಮ ದೇಶದಿಂದ ಆಫ್ರಿಕ ,ವೆಸ್ಟ್ ಇಂಡಿಸ್ ,ಫಿಜಿ ಮುಂತಾದ ನಾಡುಗಳಿಗೆ ತೆರಳಿ ತಮ್ಮ ಬದುಕನ್ನು

ಅಲ್ಲಿಯೇ ರೂಪಿಸಿ ಕೊಂಡ ಭಾರತೀಯ ರ ಬಗ್ಗೆ ನನಗೆ ವಿಸ್ಮಯ ಭರಿತ ಕುತೂಹಲ.ಈಗಿನ ಸಂಪರ್ಕ ಸಾಧನ ಗಳು ಇಲ್ಲದಿದ್ದ

ದಿನಗಳಲ್ಲ್ಲಿ ಖಂಡಾಂತರ ಯಾತ್ರೆ ಮಾಡಿ ಅರಿಯದ ನಾಡಿನಲ್ಲಿ ಬದುಕನ್ನು ಅರಸಿ ಮುಂದೆ ಹಲವು ಮಂದಿ ಉದ್ದ್ದಿಮೆಗಳ

ಅರಸರಾದರು.ಅವರಲ್ಲಿ ಮಧ್ವಾನಿ ಕುಟುಂಬ ಆಫ್ರಿಕಾದ ರಾಷ್ಟ್ರ ಗಳ ಉದ್ದಗಲಕ್ಕೆ ತಮ್ಮಮ ಜಾಲವನ್ನು ಹಬ್ಬಿಸಿ ಹೆಸರು

ಪಡೆದಂತಹುದು.ಉಗಾಂಡ ದೇಶವನ್ನು ಕೇಂದ್ರವಾಗಿಟ್ಟುಕೊಂಡು ಅವರ ವ್ಯವಹಾರ ಆರಂಭ.ಮಜ್ಲಿಭಾಯ್ ಮಧ್ವಾನಿ

ಯವರು ಉಗಾಂಡಾದಲ್ಲಿ ಆರಂಬಿಸಿದ ಕಕಿರಾ ಸಕ್ಕರೆ ಕಾರ್ಖಾನೆ ,ನೈಲ್ ಬ್ರುವೆರಿಎಸ್ ,ಜವುಳಿ ಉದ್ದಿಮೆ ,ಮತ್ತು

ಗಾಜಿನ ಕಾರ್ಖಾನೆಗಳು ಉಗಾಂಡಾ ,ಕೀನ್ಯ ,ಗಳಿಂದ ತೊಡಗಿ ಲೆಬನಾನ್ ,ಸೌದಿ ಅರೇಬಿಯಾ ಕ್ಕೂ ಲಗ್ಗೆ ಇಟ್ಟಿತು.

ಉಗಾಂಡಾ ದ ಕಕಿರಾ ಸಕ್ಕರೆ ಉದ್ಯಮ ೧೦೦೦೦ ಹೆಕ್ಟೇರ್ ಗಿಂತಲೂ ಅಧಿಕ ಪ್ರದೇಶವನ್ನು ಒಳಗೊಂಡಿದೆ.ಇಲ್ಲಿ

ಮಧ್ವಾಣಿ ನಗರವೆಂಬ ಊರೆ  ನಿರ್ಮಾಣ ವಾಯಿತು .ಅಸ್ಟೆಲ್ಲ  ಆಗುವಾಗ ಧೂಮಕೇತುವಿನಂತೆ ಬಂದವನು  ಇದಿ

ಅಮಿನ್.ಸೇನಾ ಬಂಡಾಯದ ಮೂಲಕ ಮಿಲ್ಟನ್ ಒಬೋಟೆಯನ್ನು ಪದಚ್ಯುತ ಗೊಳಿಸಿ ತಾನೆ ಅಧ್ಯಕ್ಷನಾದನು .

ತನಗೆ ತಾನೇ ಫೀಲ್ಡ್ ಮಾರ್ಷಲ್ ,ಡಾಕ್ಟರೇಟ್, ಇತ್ಯಾದಿ ಪದವಿಗಳನ್ನು ಸೇರಿಸಿಕೊಂಡನು. 'ಹಿಸ್ ಎಕ್ಷೆಲ್ಲೆನ್ಸಿ

ಅಜೀವ ಅಧ್ಯಕ್ಷ ,ಆಲ್ ಹಜ್ ,ಫೀಲ್ಡ್ ಮಾರ್ಷಲ್,ಡಾಕ್ಟರ್ ಇದಿ ಅಮಿನ್ ವಿ.ಸಿ.  ,ಡಿ ಎಸ.ಓ., ಎಂ ಸಿ, ಜಗತ್ತಿನ  ನೆಲದ ಮೇಲಿನ


ಎಲ್ಲಾ ಪ್ರಾಣಿಗಳ ಮತ್ತು ಸಮುದ್ರದೊಳಗಿನ ಮೀನುಗಳ ಒಡೆಯ , ಆಫ್ರಿಕಾದಲಿ ಮುಖ್ಯವಾಗಿ ಉಗಾಂಡದಲ್ಲಿ  ಬ್ರಿಟಿಷರನ್ನು

ಮರ್ದಿಸಿದ ವೀರ ,ಹಾಗೂ ಈ ನೆಲೆಯಲ್ಲಿ ಸ್ಕೊಟ್ಲಂಡ್ನ ಅನಭ್ಶಿಕ್ತ  ದೊರೆ 'ಇವು  ಆತನು ತನ್ನನ್ನು ಕರೆಸಿಕೊಲ್ಲುತ್ತ್ತದ್ದ  ಪರಿ.

ವಿದೇಶಿ ಮೂಲ ದ  ಎಲ್ಲರು ಉಗಾಂಡಾ ಬಿಟ್ಟು  ತೆರಳುವಂತೆ ಅದೇಶಿದ. ಏಷ್ಯಾ ಮೂಲದವರು ಹಸುವನ್ನು ಹಿಂಡುತ್ತಾರೆ

ಆದರೆ  ಅದಕ್ಕೆ ಆಹಾರ ಹಾಕುವುದಿಲ್ಲ ಎಂಬುವುದು  ಅವನ ಆರೋಪ .ಪ್ರತಿಷ್ಟಿತ  ಮಧ್ವಾಣಿ ಗುಂಪಿನ  ಮನು ಭಾಯ್

ಅವರನ್ನು ಜೈಲಿನಲ್ಲಿ ಇರಿಸಿ ಉಳಿದ  ಎಷ್ಯನ್ನರನ್ನ್ನು ಹೆದರಿಸಿದ ಭೂಪ.ಇವನ  ಕಾಲದಲ್ಲಿಯೇ  ಇಸ್ರೇಲಿಗಳು ಅಪಹೃತ

ವಿಮಾನವನ್ನು ಮೈ ನವಿರೇಳಿಸುವ  ಕಮಾಂಡೋ  ಕಾರ್ಯಚರಣೆಯಲ್ಲಿ   ಎಂಟೆಬ್ಬೆ  ನಿಲ್ದಾಣದಿಂದ ಬಿಡಿಸಿ  ಕೊಂಡುಡು.

ಈಯೆಲ್ಲ ವಿವರಗಳನ್ನು ಒಳಗೊಂಡ ಎರಡು ಉತ್ತಮ ಹೊತ್ತಿಗೆಗಳು. ಟೈಡ್ ಆಫ್ ಫಾರ್ಚ್ಯೂನ್  ಮನುಭಾಯ್ ಮಧ್ವಾಣಿ

ಯವರ ರೋಚಕ ಆತ್ಮ ಕತೆ,  ಉಗಾಂಡದಲ್ಲಿ ನಮ್ಮ ರಾಯಭಾರಿ ಆಗಿದ್ದ ,ಬರಹಗಾರ ,ಸ್ವಾನಂತ್ರ್ಯ ಹೋರಾಟಗಾರ

ಮದನ್ಜಿತ್ ಸಿಂಗ್ ರ  ಕಲ್ಚರ್ ಆಫ್ ಸೇಪಲ್ಚರ್ ಇದಿ ಅಮಿನ್ ನ ಮುಖಗಳನ್ನು ತೋರಿಸುವ  ನೆನಪುಗಳು.

ಹಿಂದಿನ ದಿನಗಳ ಹಿಂದಿ ಚಿತ್ರ ತಾರೆ ಮಮ್ತಾಜ್  ಮಧ್ವಾಣಿ ಕುಟುಂಬದ  ಮಯೂರ್ ಮಧ್ವಾನಿಯವರನ್ನು  ವಿವಾಹವಾದರು .

ಇದಿ ಅಮಿನ್ ಒಂದು ಸಲ ಎಲ್ಲಾ ರಾಜ ತಾಂತ್ರಿಕರನ್ನು  ಆಗಮಿಸುತ್ತಿರುವ ವಿಶೇಷ  ಅತಿಥಿಯನ್ನು ಸ್ವೀಕರಿಸಲು ವಿಮಾನ

ನಿಲ್ದಾಣಕ್ಕೆ ಬರ ಹೇಳುತ್ತಾರೆ. ಅಲ್ಲಿ ನೋಡಿದರೆ ವಿಮಾನದಿಂದ  ಬ್ರಿಟನ್ ದೇಶದಿಂದ ಆಮದು ಮಾಡಿದ ಹಸುಗಳು

ಬೋಇಂಗ್ ನಿಂದ ಇಳಿಯುತ್ತಿರುತ್ತವೆ.ಇನ್ನು ಉಗಾಂಡದ ಜನತೆ  ಪುಡಿ ಹಾಲಿನ ಬದಲಿಗೆ ಶುದ್ದ್ದ ಹಾಲು ಕುಡಿಯುವರು ಎಂದು

ಘೋಷಣೆ ಮಾಡುತ್ತಾನೆ .ಆದರೆ  ಕೆಲ ದಿನಗಲ್ಲೇ ಅವು ಅಮಿನ್ ಮತ್ತು ಸೈನ್ಯಾಧಿಕಾರಿಗಳ ಭೋಜನಕ್ಕೆ  ಬಲಿಯಾಗುತ್ತವೆ.

ತನ್ನ ವಿರೋಧಿಗಳೆ೦ಬ ಸಂಶಯದಲ್ಲಿ  ಲಕ್ಷಾಂತರ  ನಾಗರಿಕರನ್ನು ಕೊಲ್ಲಿಸಿದ ಕಟುಕ ಅಮಿನ್ , ತಮ್ಮ ಆಡಳಿತವನು

ವಿಮರ್ಶಿಸಿದ ಉಗಾಂಡದ ಸುಪ್ರಿಂಕೋರ್ಟ್ ಮುಖ್ಯ ನ್ಯಯಧಿಶರನ್ನೇ ಬಂದಿಸಿ  ಕೊಲೆ ಗೈದ  ಪಾಪಿ.
                                                             ಮನು ಭಾಯ್ ಮಧ್ವಾನಿ


                                                 
ಮದನಜೀತ್ ಸಿಂಗ್

ಬುಧವಾರ, ಜೂನ್ 12, 2013

ಯಾಕೆ ನಿರ್ದಯನಾದೆಯೋ ಶ್ರೀಹರಿ ?

                                                               ಕಣ್ಮರೆಯಾದ ನಕ್ಷತ್ರ


                                           

ಕೆಲವು ದಿನಗಳಿಂದ ಬ್ಲಾಗ್ ಬರೆಯುವ ಉತ್ಸಾಹವಿಲ್ಲ. ಮನಸ್ಸಿನಲ್ಲಿ  ಸುಪ್ತವಾದ ಬೇಸರ.ಕಾರಣ 

ಮೇಲಿನ ಚಿತ್ರದಲ್ಲಿ  ಭಾವ ಪರವಶವಾಗಿ ಹಾಡುತ್ತಿರುವ ಹುಡುಗಿ ಯನ್ನು  ಮರಣ ಶಯ್ಯೆಯಲ್ಲಿರುವ 


ರೋಗಿಯಾಗಿ   ಉಪಚರಿಸುವ   ಪ್ರಮೇಯ ನನ್ನಂತ ಹತ ಭಾಗ್ಯನಿಗೆ ಬಂದುದು. ಅದನ್ನು ನಾನು ದೌರ್ಭಾಗ್ಯ 

ಎನ್ನುವುದಿಲ್ಲ.  ಈ  ತಾಯಿಯ ಸೇವೆ ಮಾಡುವ ಪುಣ್ಯ ಎಂದು ಕೊಳ್ಳುತ್ತೇನೆ.


ಹಲವು ವರ್ಷಗಳಿಂದ  ಇವಳ ಬೆಳವಣಿಗೆ ಗಮನಿಸುತ್ತಾ ಬಂದಿದ್ದೇನೆ ,ಸಂಗಿತದಲ್ಲಿ ಸಾಧನೆ ಮಾಡುವ ಹಠ ಮತ್ತು 

ಹೆತ್ತವರ ಒತ್ತಾಸೆಯಿಂದ ಚೆನ್ನೈ ಮಹಾನಗರಕ್ಕೆ ಚಿಕ್ಕಂದಿನಲ್ಲಿಯೇ ತೆರಳಿ   ಗುರು ಮುಖೇನ ಅದ್ಯಯನ ಮಾಡಿ 

ಪರಿಶ್ರಮ ,ಶ್ರದ್ದೆ  ಮತ್ತು ಸಮರ್ಪಣಾ ಭಾವದಿಂದ  ರಸಿಕರ ಮನ ಗೆದ್ದ ಸಾಧಕಿ .

ತಿಂಗಳ ಹಿಂದೆ  ತಿರುಪತಿ ದೇವಸ್ತಾನ ದ  ಟಿ ವಿ ಯಲ್ಲಿ ಇವಳ ಹಾಡು ಗಾರಿಕೆ ನೋಡಿದ್ದೆ. ಘೋರ 

ಕಾಯಿಲೆ ಗೆ  ಕೀಮೋ ತೆರಪಿ ಮಾಡಿ ಬಳಲಿದ್ದ  ಶರೀರ .ಆದರೆ  ಭಕ್ತಿ ಭಾವ ತುಂಬಿದ್ದ  ಶಾರೀರ ಇನ್ನೂ ಸೋತಿರಲಿಲ್ಲ.

ಕರ್ನಾಟಕ ಸಂಗಿತದ  ರಾಜಧಾನಿ  ಚೆನ್ನೈ ನಲ್ಲಿ  ಈಕೆಗೆ  ನಕ್ಷತ್ರ ಪಟ್ಟ ಸಿಕ್ಕಿತ್ತು.ಇವಳ ನಿಧನ 

ವಾರ್ತೆಯನ್ನು  ದಿ ಹಿಂದು ವಿನಂತಹ  ಪತ್ರಿಕೆಗಳು ಪ್ರಮುಖ ವಾರ್ತೆಯನ್ನಾಗಿ ಪ್ರಕಟಿಸಿದವು .ಸಂಗೀತ ಪ್ರೇಮಿಗಳು 

ಕಣ್ಣೀರು ಮಿಡಿದರು.ಇನ್ನೂ ಮೂವತ್ತರ ಹರಯ ,ಸಾಧಿಸಿದ್ದು ಬಹಳ ,ಇನ್ನೂ ಸೇವೆ ಸಲ್ಲಿಸ ಬಹುದಿತ್ತು.

ಇವರ  ಸಂಗೀತ ಸಾಧನೆಗೆ ಒತ್ತಾಸೆ  ತಾಯಿ ತಂದೆ ,ಅತ್ತೆ ,ಮಾವ ಮತ್ತು  ಗಂಡ ಗುರುಪ್ರಸಾದ್ .ಎಲ್ಲರು 

ವಿನಯ  ಶೀಲರೆ. ಇವರ ದುಖದಲ್ಲಿ ನಾವೂ ಭಾಗಿ  .

ನನಗೆ ಕಂಡಂತೆ  ರಂಜನಿಯ ಸ್ವರದಲ್ಲಿ  ಆರ್ಧ್ರತೆ ಮತ್ತು ಭಕ್ತಿಭಾವ ಇತ್ತು . ದಾಸರ ಪದಗಳು ಮತ್ತು ವಚನ ಗಳನ್ನ

ಮನ ಮುಟ್ಟುವಂತೆ ಹಾಡುತಿದ್ದರು .ಅವರ ತಮಿಳು ಮತ್ತು ತೆಲುಗು ಉಚ್ಚಾರವೂ ಶುದ್ಧವಾಗಿರುತಿತ್ತು.ಇವು 

ಆಕೆಯ ಅಧ್ಯಯನ ಶೀಲತೆಗೆ ಸ್ಹಾಕ್ಷಿ.